Author: Prajatv Kannada

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿ ಹೆದ್ದಾರಿ ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. https://youtu.be/Z0POM7Cm8xE?si=ZSRfCFkpc_bLTquG ನಿನ್ನೆ ರಾತ್ರಿ ೮.೩೦ ಸುಮಾರಿಗೆ ಹಳಗಳಿಂದ ಮದರಖಂಡಿಗೆ ಹೋಗುವ ಸಮಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತ ಶ್ರೀನಿವಾಸ್ ಕೃಷ್ಣಪ್ಪ ಹಟ್ಟಿ ವಯಸ್ಸು (25) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಬೈಕ್ ಮೇಲೆ ಹಿಂಬದಿ ಕೂತಿದ್ದ ಜೀವಸಾಬ ದೊಡ್ಡಜೀವಸಾಬ ಹಬಾಜಿ ನಾಯಕ ವಯಸ್ಸು (38) ಗಂಭೀರ ಸ್ಥಿತಿ ಇದೆ ಬಿಜಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ತೇರದಾಳ ಪೊಲೀಸ್ ಠಾಣೆಯ ಗುನ್ನೇ ನಂಬರ 134/ 2024 ಕಲಂ 281 125/ಎ 125/ಬಿ 125/೧ ಬಿ ಎಂ ಎಸ್ 2023ರಂತೆ ಪ್ರಕರಣ ದಾಖಲಾಗಿದೆ. ಘಟನಾಸ್ಥಳಕ್ಕೆ ಜಮಖಂಡಿ ಡಿವೈಎಸ್ಪಿ ಶಾಂತವೀರ. ರಬಕವಿ ಬನಹಟ್ಟಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಂಜು ಬಳಗಾರ. ತೇರದಾಳ ಪೊಲೀಸ್ ಠಾಣೆ ಪಿಎಸ್‌ಐ ಅಪ್ಪು ಐಗಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಕೊಪ್ಪಳ: ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಗೆ ಇನ್ನೆನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನದ ಆಡಳಿತ ಮಂಡಿ ವಿಶೇಷ ಅತಿಥಿಯನ್ನು ಜಾತ್ರೆಗೆ ಆಹ್ವಾನಿಸುತ್ತಿದೆ. ಅಂತೆಯೇ ಈ ಭಾರಿ ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಅವರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿ ಅಮಿತಾಭ್​ ಗೆ ಆಹ್ವಾನ ಪತ್ರ ನೀಡಿದೆ. ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿಯವರು ಇತ್ತೀಚೆಗೆ ಅಮಿತಾಭ್​ ಬಚ್ಚನ್ ಅವರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಪ್ರೀತಿಯಿಂದ ಆಮಂತ್ರಣ ಪತ್ರಿಕೆ ಸ್ವೀಕರಿಸಿ ಈ ಅಮಿತಾಭ್ ಬಚ್ಚನ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಅವರು ಈ ಜಾತ್ರೆಗೆ ಬರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗವಿಸಿದ್ದೇಶ್ವರ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭ ಮೇಳ ಎಂದೆ ಖ್ಯಾತಿ ಪಡೆದಿದೆ. ಜನವರಿ 15ರಂದು ಈ ಜಾತ್ರೆ ನಡೆಯಲಿದೆ. ಒಂದೊಮ್ಮೆ ಅಮಿತಾಭ್ ಬಚ್ಚನ್ ಜಾತ್ರೆಗೆ ಆಗಮಿಸಿದರೆ ಇದರ ಮೆರಗು ಮತ್ತಷ್ಟು ಹೆಚ್ಚಲಿದೆ. ಪ್ರತಿ ವರ್ಷವೂ…

Read More

ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯಾ ದಾಳಿಯ ಡ್ರೋನ್‌ ಗಳನ್ನು ಉತ್ಪಾದಿಸುವಂತೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆದೇಶಿಸಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಕೆಸಿಎನ್‍ಎ ವರದಿಯಲ್ಲಿ ಉಲ್ಲೇಖಿಸಿದೆ. ನೆಲದ ಮೇಲಿನ ಹಾಗೂ ಸಮುದ್ರದ ಮೇಲಿನ ಗುರಿಗೆ ಪ್ರಹಾರ ನೀಡಲು ವಿನ್ಯಾಸಗೊಳಿಸಿರುವ ನೂತನ ಡ್ರೋನ್‌ ಗಳ ಪ್ರಯೋಗಾರ್ಥ ಪರೀಕ್ಷೆಯನ್ನು ವೀಕ್ಷಿಸಿದ ಬಳಿಕ ಅಧ್ಯಕ್ಷ ಕಿಮ್ ಜಾಂಗ್ ಉನ್ ` ಇಂತಹ ಡ್ರೋನ್‌ ಗಳನ್ನು ಸಾಧ್ಯವಾದಷ್ಟು ಬೇಗ ದೊಡ್ಡ ಮಟ್ಟದಲ್ಲಿ ಉತ್ಪಾದಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆತ್ಮಹತ್ಯಾ ಡ್ರೋನ್‌ ಗಳು ಸ್ಫೋಟಕ ಸಾಗಿಸುವ ಮಾನವ ರಹಿತ ಡ್ರೋನ್‌ ಗಳಾಗಿದ್ದು ಉದ್ದೇಶಪೂರ್ವಕವಾಗಿ ಶತ್ರು ಗುರಿಗಳಿಗೆ ಅಪ್ಪಳಿಸಲು ವಿನ್ಯಾಸಗೊಳಿಸಲಾಗಿದೆ. ಇವು ಮಾರ್ಗದರ್ಶಿ ಕ್ಷಿಪಣಿಗಳಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಡ್ರೋನ್‌ ಗಳನ್ನು ಉತ್ತರ ಕೊರಿಯಾ ಮೊದಲ ಬಾರಿಗೆ ಆಗಸ್ಟ್ ನಲ್ಲಿ ಅನಾವರಣಗೊಳಿಸಿದ್ದು ಇದರ ತಂತ್ರಜ್ಞಾನವನ್ನು ರಶ್ಯ ಒದಗಿಸಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಆತ್ಮಹತ್ಯಾ ದಾಳಿಯ ಡ್ರೋನ್‌ ಗಳು ವಿಭಿನ್ನ…

Read More

ಬೆಂಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗಿಳಿದಿದ್ದಾರೆ. ಇಂದಿರಾ ಕ್ಯಾಂಟೀನ್ ಬಳಿಕ ಇದೀಗ ಪಿಜಿಗಳ ಮೇಲೆ ಮೆಗಾ ರೇಡ್‌ ನಡೆಸಿದ್ದಾರೆ. ಪಿಜಿಗಳಲ್ಲಿ ಸ್ವಚ್ಛತೆ ಕುರಿತು ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇರುವ ಪಿಜಿಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವು ಪಿಜಿಗಳಲ್ಲಿ ಲೈಸೆನ್ಸ್ ಇಲ್ಲದೇ ಇರುವುದು ಪತ್ತೆಯಾಗಿದೆ. ಲೈಸೆನ್ಸ್ ರಿನಿವಲ್ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಈಗಾಗಲೇ ಹಲವು ಪಿಜಿಗಳಿಗೆ ನೋಟೀಸ್ ನೀಡಿದ್ದಾರೆ. ಅಲ್ಲದೇ ಕೆಲವೊಂದು ಪಿಜಿಗಳಿಗೆ 10-50 ಸಾವಿರದವರೆಗೆ ದಂಡ ಕೂಡ ವಿಧಿಸಿದ್ದಾರೆ. ರಾಜ್ಯಾದ್ಯಂತ 150ಕ್ಕೂ ಹೆಚ್ಚು ಪಿಜಿಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Read More

ದಾಳಿಂಬೆ ಹಣ್ಣಿನಲ್ಲಿ ಮನುಷ್ಯನಿಗೆ ಶಕ್ತಿ ಒದಗಿಸುವ ಗುಣಲಕ್ಷಣಗಳು ಮತ್ತು ಆರೋಗ್ಯಕರವಾಗಿ ಜೀವನ ಮಾಡುವಂತೆ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸಿಕೊಡುವ ಸಾಕಷ್ಟು ಲಕ್ಷಣಗಳು ಕಂಡುಬರುತ್ತವೆ. ನಮ್ಮ ದೇಶದಲ್ಲಿ ಸದಾ ಬೇಡಿಕೆಯಲ್ಲಿರುವ ದಾಳಿಂಬೆಯನ್ನು ಮನೆಯಲ್ಲಿಯೇ ಬೆಳಿಯೋದು ಹೇಗೆ..? ಇಲ್ಲಿದೆ ನೋಡಿ ಮಾಹಿತಿ https://youtu.be/XhnXu1wZscw?si=bz60G6Ho_Mw8eHOd ದಾಳಿಂಬೆ ಬೀಜಗಳನ್ನು ನೆಡಲು ಉತ್ತಮ ಸಮಯವೆಂದರೆ ವಸಂತಕಾಲದಿಂದ ಬೇಸಿಗೆಯ ಮಧ್ಯದವರೆಗೆ. ಬಿಸಿ ಪ್ರದೇಶಗಳಲ್ಲಿ, ನೀವು ಇದನ್ನು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳ ನಡುವೆ ಹೊಂದಾಣಿಸಬಹುದು. ನೀವು ಅದರ ಕೊಂಬೆಗಳಿಂದಲೂ ದಾಳಿಂಬೆ ಗಿಡವನ್ನು ಬೆಳೆಯಬಹುದು. ನೀರು ದಾಳಿಂಬೆ ಮರಗಳಿಗೆ ಕಡಿಮೆ ನೀರು ಬೇಕಾಗುತ್ತದೆ. ಇದನ್ನು ಒಣ ಸ್ಥಳಗಳಲ್ಲಿಯೂ ಬೆಳೆಯಬಹುದು, ಆದರೆ ಆರಂಭಿಕ 2 ರಿಂದ 4 ವಾರಗಳಲ್ಲಿ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಸ್ಯದ ಮೇಲೆ ಹೂವುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಅದಕ್ಕೆ ಸಾಕಷ್ಟು ನೀರು ಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನೀರಿನ ಕೊರತೆಯು ಮರದ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ತಾಪಮಾನ 25 ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನವು ದಾಳಿಂಬೆ…

Read More

ಬೆಂಗಳೂರು:- ವಸತಿ ಸಚಿವ ಜಮೀರ್ ಅಹಮ್ಮದ್ ಗೆ ಸಂಕಷ್ಟ ಎದುರಾಗಿದ್ದು, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. https://youtu.be/D-ObigY2jCk?si=9YjiwSPXAPOzCib3 ಡಿಸೆಂಬರ್ 3 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಡಿವೈಎಸ್‌ಪಿ ನೋಟಿಸ್‌ ನೀಡಿದ್ದಾರೆ. ಇ.ಡಿ ದಾಳಿಯ ಬಳಿಕ ಜಮೀರ್‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿತ್ತು. ಅಕ್ರಮ ಗಳಿಕೆ ಸಂಬಂಧ ತನಿಖೆಗೆ ಇ.ಡಿ ಸೂಚಿಸಿತ್ತು. ಕಳೆದೆರಡು ವರ್ಷದಿಂದ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಈ ಹಿಂದೆ ದಾಖಲೆ ಸಲ್ಲಿಸಲು ನೋಟಿಸ್ ನೀಡಲಾಗಿತ್ತು. ಈಗ ಹಾಜರಾಗಿ ಹೇಳಿಕೆ ದಾಖಲಿಸಲು ನೋಟಿಸ್ ನೀಡಲಾಗಿದೆ.

Read More

ಕಲಬುರಗಿ: ಕೇಂದ್ರ‌ ಕಾರಾಗೃಹದಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪನವರು ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ದಾರೆ https://youtu.be/3qzcX_gdKWA?si=iUJyLrAE1v1bD6ZN ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಉಪಲೋಕಾಯುಕ್ತರು ಜೈಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.. ಅಷ್ಟೇಅಲ್ಲ ಕೈದಿಗಳಿಂದ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದಾರೆ.. ಇದೇವೇಳೆ ಕೈದಿಗಳ ಜೊತೆಯೂ ಮಾತನಾಡಿ ಆಹಾರದ ಗುಣಮಟ್ಟವನ್ನ ಪರಿಶೀಲನೆ ನಡೆಸಿದ್ರು..

Read More

ಮಾಂಸಾಹಾರ ಪ್ರಿಯರಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಮಾಂಸಾಹಾರ ಪ್ರಿಯರಿಗೆ ದಿನವೆಲ್ಲ ಚಿಕನ್ ನೀಡಿದರು ಅದನ್ನು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ಇಷ್ಟಪಡುವವರು ಚಿಕನ್ ನೊಂದಿಗೆ ಪ್ರಯತ್ನಿಸಬಹುದಾದ ಎಲ್ಲಾ ರೀತಿಯ ಪಾಕವಿಧಾನವನ್ನು ಮಾಡಿರುತ್ತಾರೆ. ಚಿಕನ್ ಸಾಮಾನ್ಯವಾಗಿ ಆರೋಗ್ಯಕರ ವಸ್ತುವಾಗಿದ್ದು, ಪ್ರೋಟೀನ್ ನಿಂದ ತುಂಬಿರುತ್ತದೆ. ಇದನ್ನು ಸೇವಿಸುವುದರಿಂದ ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಮಾರುಕಟ್ಟೆಯಲ್ಲಿ ಶೇ 90ರಷ್ಟು ಬಾಯ್ಲರ್ ಕೋಳಿ ಮಾಂಸವೇ ಲಭ್ಯವಿರುತ್ತದೆ. ಬಾಯ್ಲರ್ ಕೋಳಿಗಳ ಬೆಲೆಯೂ ಅಗ್ಗ. ಇದು ಎಲ್ಲಾ ವರ್ಗದವರಿಗೂ ಸಲ್ಲುವ ಕಾರಣ ಇದರ ಮಾರಾಟವೇ ಹೆಚ್ಚಿದೆ. ಕೋಳಿ ಫಾರಂಗಳಲ್ಲೂ ಬಾಯ್ಲರ್ ಕೋಳಿಗಳನ್ನೇ ಹೆಚ್ಚು ಸಾಕುತ್ತಾರೆ. ಆದರೆ ಬಾಯ್ಲರ್‌ ಕೋಳಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಬೆಳೆಸುವಾಗ ಕೆಲವು ಚುಚ್ಚುಮದ್ದು ಹಾಗೂ ಔಷಧಗಳನ್ನು ನೀಡಲಾಗುತ್ತದೆ. ಆ ಕಾರಣಕ್ಕೆ ಬಾಯ್ಲರ್‌ ಕೋಳಿ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಕಳೆದ ಒಂದಿಷ್ಟು ವರ್ಷಗಳಿಂದ ಈ ಮಾತು ಕೇಳಿ ಬರುತ್ತಿದ್ದರೂ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದರೆ ಈ…

Read More

ಪಪ್ಪಾಯಿ ಹಣ್ಣು ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದ್ದು, ಇದು ಹೃದಯ, ಕಣ್ಣಿನ ಮತ್ತು ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳುವುದನ್ನು ನಾವೆಲ್ಲಾ ಚಿಕ್ಕವರಾಗಿದ್ದಾಗಿನಿಂದಲೂ ಅನೇಕ ಬಾರಿ ಕೇಳುತ್ತಲೇ ಬೆಳೆದಿದ್ದೇವೆ. ಪ್ರತಿಯೊಬ್ಬರೂ ಪಪ್ಪಾಯಿ ಹಣ್ಣುಗಳನ್ನು ತಿನ್ನುವಾಗ ಅದರ ಬೀಜಗಳನ್ನು ಬಿಸಾಡುತ್ತೇವೆ. ಆದರೆ ನಿಮಗೆ ಗೊತ್ತಾ ಪಪ್ಪಾಯಿ ಹಣ್ಣಿನ ಬೀಜಗಳಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅವು ಪಪೈನ್‌ನಂತಹ ಶಕ್ತಿಯುತ ಕಿಣ್ವಗಳಿಂದ ತುಂಬಿರುತ್ತವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಪಪ್ಪಾಯಿ ಬೀಜಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಪಪ್ಪಾಯಿಯಲ್ಲಿ ಬಿ ಪ್ರೋಟೀನ್, ವಿಟಮಿನ್, ಸತು, ರಂಜಕ ಸಮೃದ್ಧವಾಗಿದೆ.ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ವಿಶೇಷವಾಗಿ ಮಲಬದ್ಧತೆಯಿಂದ ಬಳಲುತ್ತಿರುವವರು ಈ ಬೀಜವನ್ನು ಬೆಳಿಗ್ಗೆ ಸೇವಿಸಬೇಕು. ಇದು ಮಲಬದ್ಧತೆಗೆ ಮಾತ್ರವಲ್ಲದೆ ಕೆಟ್ಟ ಕೊಲೆಸ್ಟ್ರಾಲ್‌ಗೂ ಸಹಾಯ ಮಾಡುತ್ತದೆ. ಪಪ್ಪಾಯಿ ಬೀಜಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು: ಮಲಬದ್ಧತೆ ಗುಣವಾಗುತ್ತದೆ: ಇಂದಿನ ಕಾಲಮಾನದಲ್ಲಿ ಬಹುತೇಕ ಜನರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತಿದೆ.ಅದರಲ್ಲಿ ಪ್ರಮುಖವಾಗಿ ಅನಾರೋಗ್ಯಕರ ಜೀವನಶೈಲಿ,…

Read More

ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯಾ ದಾಳಿಯ ಡ್ರೋನ್‌ ಗಳನ್ನು ಉತ್ಪಾದಿಸುವಂತೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆದೇಶಿಸಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಕೆಸಿಎನ್‍ಎ ವರದಿಯಲ್ಲಿ ಉಲ್ಲೇಖಿಸಿದೆ. ನೆಲದ ಮೇಲಿನ ಹಾಗೂ ಸಮುದ್ರದ ಮೇಲಿನ ಗುರಿಗೆ ಪ್ರಹಾರ ನೀಡಲು ವಿನ್ಯಾಸಗೊಳಿಸಿರುವ ನೂತನ ಡ್ರೋನ್‌ ಗಳ ಪ್ರಯೋಗಾರ್ಥ ಪರೀಕ್ಷೆಯನ್ನು ವೀಕ್ಷಿಸಿದ ಬಳಿಕ ಅಧ್ಯಕ್ಷ ಕಿಮ್ ಜಾಂಗ್ ಉನ್ ` ಇಂತಹ ಡ್ರೋನ್‌ ಗಳನ್ನು ಸಾಧ್ಯವಾದಷ್ಟು ಬೇಗ ದೊಡ್ಡ ಮಟ್ಟದಲ್ಲಿ ಉತ್ಪಾದಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆತ್ಮಹತ್ಯಾ ಡ್ರೋನ್‌ ಗಳು ಸ್ಫೋಟಕ ಸಾಗಿಸುವ ಮಾನವ ರಹಿತ ಡ್ರೋನ್‌ ಗಳಾಗಿದ್ದು ಉದ್ದೇಶಪೂರ್ವಕವಾಗಿ ಶತ್ರು ಗುರಿಗಳಿಗೆ ಅಪ್ಪಳಿಸಲು ವಿನ್ಯಾಸಗೊಳಿಸಲಾಗಿದೆ. ಇವು ಮಾರ್ಗದರ್ಶಿ ಕ್ಷಿಪಣಿಗಳಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಡ್ರೋನ್‌ ಗಳನ್ನು ಉತ್ತರ ಕೊರಿಯಾ ಮೊದಲ ಬಾರಿಗೆ ಆಗಸ್ಟ್ ನಲ್ಲಿ ಅನಾವರಣಗೊಳಿಸಿದ್ದು ಇದರ ತಂತ್ರಜ್ಞಾನವನ್ನು ರಶ್ಯ ಒದಗಿಸಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಆತ್ಮಹತ್ಯಾ ದಾಳಿಯ ಡ್ರೋನ್‌ ಗಳು ವಿಭಿನ್ನ…

Read More