Author: Prajatv Kannada
ಹುಬ್ಬಳ್ಳಿ :ಅವನ ಎಲ್ಲಾ ತಾಕತ್ತು ನಾನು ನೋಡಿದ್ದಿನಿ ಎಂದು ಕರ್ನಾಟಕ ರಾಜ್ಯ ಒಳಚರಂಡಿ ಅಧ್ಯಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ಬಯ್ಯಾ ಪ್ರಸಾದ್ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೇಲೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಸುದ್ದಿಗಾರರ ಅವರು ಮಾತನಾಡಿದರು,ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿನ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಹಿನ್ನಲೆಯಲ್ಲಿ ಹಿಂದೂ ಸ್ಮಶಾನದಲ್ಲಿ ಕ್ಯಾಂಟೀನ್ ಕಟ್ಟೋದಲ್ಲಾ ಅಬ್ಬಯ್ಯಗೆ ತಾಕತ್ತು ಇದ್ದ್ರೆ ಕಬರಸ್ತಾನದಲ್ಲಿ ಕ್ಯಾಂಟೀನ್ ಕಟ್ಟಲಿ ಅಂತ ಸವಾಲು ಹಾಕಿದ್ದರು ಪ್ರಮೋದ್ ಮುತಾಲಿಕ್ ಈ ಕುರಿತು ಪ್ರತಿಕ್ರಿಯೆ ನೀಡುವಾಗ ಮುತಾಲಿಕ್ ಮೇಲೆ ವಾಗ್ದಾಳಿ ನಡೆಸಿದ ಅಬ್ಬಯ್ಯ ಅವರುಅವನಿಗೆ ಬೆಂಕಿ ಹಚ್ಚೊದು ಬಿಟ್ಟಿರೆ ಬೇರೆನು ಗೊತ್ತಿಲ್ಲ ಪ್ರಮೋದ್ ಮುತಾಲಿಕ್ ನನಗೆ ಲೀಸ್ಟ್ ಬಾದರ್.. ಅವನ್ನಾ ನಾನು ಕೇರ್ ಮಾಡಲ್ಲಾ ಅವನ್ನಾ ನಾನು ತಲೆಗೆ ತೆಗೆದುಕೊಳ್ಳೊದಿಲ್ಲ. ಪ್ರಮೋದ್ ಮುತಾಲಿಕ್ ದೊಡ್ಡಇಂಟರ್ ನ್ಯಾಷನಲ್ ಲೀಡರ್ ಅಲ್ಲಾಅವನು ಹೇಳಿದ ತಕ್ಷಣ ನಾನು ತಾಕತ್ತು ತೋರಿಸೋದು ಬೇಕಿಲ್ಲಾನನಗೆ ನನ್ನ ಜನ ಬೇಕು..…
ಬೆಳಗಾವಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರ ಮೇಲೆ ದಾಳಿ ಮಾಡಿ ಚಾಕು ಇರಿದ ಘಟನೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಗಾಯಾಳುಗಳನ್ನು ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್ ಗುಂಡ್ಯಾಗೋಳ್, ದರ್ಶನ್ ಪಾಟೀಲ್ ಮತ್ತು ಸತೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ. ಪ್ರವೀಣ್ ಗುಂಡ್ಯಾಗೋಳ್ ಎಂಬವರ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಇಬ್ಬರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದ್ದು, ಡ್ಯಾನ್ಸ್ ಮಾಡುವಾಗ ಕಾಲು ತಾಕಿದ್ದಕ್ಕೆ ಹುಡುಗರು ಕಿರಿಕ್ ಮಾಡಿಕೊಂಡಿದ್ದರು. ಬಳಿಕ ಮೆರವಣಿಗೆಯಿಂದ ಹೊರಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಯುವಕರ ಗ್ಯಾಂಗ್‌ವೊಂದು ಮೂವರು ಹಾಸ್ಟೆಲ್ ವಿದ್ಯಾರ್ಥಿಗಳ ಹೊಟ್ಟೆ, ಬೆನ್ನು, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು, ಸ್ಥಳದಿಂದ ಪಾರಾಗಿದ್ದಾರೆ ಬೈಕ್‌ನಲ್ಲಿ ಪಾರಾಗುತ್ತಿದ್ದ ಯುವಕರನ್ನು ಸಿಪಿಐ ವಿಶ್ವನಾಥ್ ಕಬ್ಬೂರ ಮತ್ತು ಇತರ ಸಿಬ್ಬಂದಿ…
ಕೋಲಾರ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದೆ. https://youtu.be/KCaRPFPVlZ4?si=aSi2ZKh-YQJ9DxnZ ಕಾರು ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಲೂರು ಬೆಂಗಳೂರು ರಸ್ತೆಯಲ್ಲಿರುವ ವಂಶೋದಯ ಆಸ್ಪತ್ರೆ ಎದುರು ನಡೆದಿರುವ ಘಟನೆ. ಸ್ಕೋಡಾ ಕಾರ್ ಡಿವೈಡರ್ ಗೆ ಡಿಕ್ಕಿಯಾಗಿ ಮೂರು ಪಲ್ಟಿಯಾಗಿದೆಅದೃಷ್ಟವಶಾತ್ ಕಾರ್ ನಲ್ಲಿದ್ದ ಯಾರಿಗೂ ಸಹ ಏನೂ ತೊಂದರೆ ಆಗಿಲ್ಲ ಕಾರ್ ನಲ್ಲಿದ್ದ ಸದಾನಂದ್ ಹಾಗೂ ಅವರ ಪತ್ನಿ ಇಬ್ಬರು ಮಕ್ಕಳಿದ್ದರು ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ . ರಸ್ತೆಯಲ್ಲಿ ಇದ್ದಂತಹ ಗುಂಡಿಯನ್ನು ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದು ಜುಲೈ ತಿಂಗಳಲ್ಲಿ ನಡೆದಿರುವ ಘಟನೆಯಾಗಿದೆ.
ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ಇಂದಿಗೆ ಬರೋಬ್ಬರಿ 100 ದಿನ ತುಂಬಿದೆ. ಇನ್ನೂ ಜೈಲಿನಲ್ಲಿ ಪದೇ ಪದೇ ದುರ್ನಡತೆ ತೋರುತ್ತಿದ್ದ ದಾಸನಿಗೆ ಪತ್ರ ಬರೆಯುವ ಮೂಲಕ ವಕೀಲರು ಪಾಠ ಕಲಿಸಿದ್ದು, ಇದೀಗ ದರ್ಶನ್ ಎಚ್ಚೆತ್ತುಕೊಂಡಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಪದೇ ಪದೇ ದುರ್ನಡತೆ ತೋರುತ್ತಿದ್ದ ಕಾರಣ ವರ್ತನೆ ಬದಲಾಯಿಸುವ ಕುರಿತು ವಕೀಲರು ಪತ್ರ ಬರೆದಿದ್ದರು. ಇದೀಗ ಆರೋಪಿ ದರ್ಶನ್ ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ ಎಂದು ಮೂಲಗಳು ತಿಳಿಸಿವೆ. ವಕೀಲರು ದರ್ಶನ್‌ಗೆ ಬರೆದ ಪತ್ರದಲ್ಲಿ ಅನಗತ್ಯ ಕಿರಿಕ್ ಮಾಡಿಕೊಳ್ಳಬೇಡಿ. ಮಾಧ್ಯಮಗಳ ಮೇಲೆ ದುರ್ನಡತೆ ತೋರುವ ಕುರಿತು, ಜೈಲಿನಲ್ಲಿ ಕಿರಿ ಕಿರಿ ಮಾಡಬೇಡಿ. ವರ್ತನೆ ಬದಲಿಸಿಕೊಳ್ಳದಿದ್ದರೇ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತದೆ ಎಂದು ಉಲ್ಲೇಖಿಸಿದ್ದರು. ಇದೇ ಕಾರಣಕ್ಕೆ ನಿನ್ನೆ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಜೈಲಿಗೆ ಭೇಟಿ ನೀಡಿದ್ದರು. ಅವರ ಭೇಟಿಗೆ ಆರೋಪಿ ದರ್ಶನ್ ನಗು ನಗುತ್ತಾ ಸೆಲ್‌ನಿಂದ ಹೊರ…
ಕೆಲವು ಹಣ್ಣುಗಳನ್ನು ತಪ್ಪಾಗಿಯೂ ಕೂಡ ಫ್ರಿಡ್ಜ್‌ನಲ್ಲಿ ಇಡಬಾರದು. ಏಕೆಂದರೆ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ರುಚಿ ಹಾಳಾಗುತ್ತದೆ. ಪೋಷಕಾಂಶಗಳು ಸಹ ಕಡಿಮೆಯಾಗುತ್ತವೆ. ಈಗ ಯಾವ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು ಎಂದು ತಿಳಿಯೋಣ. ಬಾಳೆಹಣ್ಣುಗಳು: ಬಾಳೆಹಣ್ಣುಗಳು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿವೆ. ಅವುಗಳ ಬೆಲೆಯೂ ಹೆಚ್ಚಿಲ್ಲ. ಆದರೆ ಈ ಹಣ್ಣುಗಳು ರುಚಿಗೆ ಚೆನ್ನಾಗಿರುತ್ತವೆ. ಅದಕ್ಕಾಗಿಯೇ ಎಲ್ಲರೂ ಈ ಹಣ್ಣುಗಳನ್ನು ತಿನ್ನುತ್ತಾರೆ. ಆದಾಗ್ಯೂ, ಅನೇಕ ಜನರು ಒಂದು ವಾರದವರೆಗೆ ಸಾಕಷ್ಟು ಹಣ್ಣುಗಳನ್ನು ಖರೀದಿಸುತ್ತಾರೆ ಮತ್ತು ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದರಿಂದ ಹಣ್ಣುಗಳು ಬೇಗನೆ ಹಾಳಾಗುವುದಿಲ್ಲ. ಆದರೆ ಫ್ರಿಡ್ಜ್‌ನಲ್ಲಿರುವ ತಂಪಾದ ತಾಪಮಾನವು ಬಾಳೆಹಣ್ಣುಗಳನ್ನು ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಅಲ್ಲದೆ ಹಣ್ಣಿನ ರುಚಿ ಬದಲಾಗುತ್ತದೆ. ಇದರರ್ಥ ಇದು ಹಣ್ಣಿನ ಹಣ್ಣಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಅವುಗಳನ್ನು ಮೃದುವಾಗಿಸುತ್ತದೆ. ಇದು ಅವುಗಳ ಪೋಷಕಾಂಶಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಬಾಳೆಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿಡಲು, ಅವುಗಳನ್ನು ಯಾವಾಗಲೂ ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಇದನ್ನು ಕೋಣೆಯ ಉಷ್ಣಾಂಶದಲ್ಲಿಯೂ ಸಂಗ್ರಹಿಸಬೇಕು. ಟೊಮೆಟೋ: ಹಲವರು ಟೊಮೆಟೊಗಳನ್ನು…
ಬಾದಾಮಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಿಸುತ್ತದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯಿರಿ. ರಕ್ತದೊತ್ತಡ ಮತ್ತು ಹೃದ್ರೋಗದ ಹೊರತಾಗಿ ಬಾದಾಮಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಅನೇಕ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹೆಸರಿನಲ್ಲಿ ಬಹಳಷ್ಟು ಬಾದಾಮಿ ತಿನ್ನುತ್ತಾರೆ, ಇದು ತಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ತಿಳಿಯದೆ. ತಜ್ಞರ ಪ್ರಕಾರ ಈ ಬಾದಾಮಿ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ವಾಸ್ತವವಾಗಿ ಇವು ನಿಮ್ಮ ಮೂತ್ರದ ಟ್ರ್ಯಾಕ್‌ನಲ್ಲಿರುವ ಖನಿಜಗಳು ಮತ್ತು ಇತರ ವಸ್ತುಗಳಿಂದ ರೂಪುಗೊಳ್ಳುತ್ತವೆ. ನಿಮ್ಮ ಮೂತ್ರದೊಂದಿಗೆ ಹೆಚ್ಚಿನ ಕಲ್ಲುಗಳು ನಿಮ್ಮ ದೇಹದಿಂದ ಹೊರಬಂದರೂ, ಅವು ಹೊರಹೋಗುವಾಗ ಅವು ತುಂಬಾ ನೋವಿನಿಂದ ಕೂಡಿರುತ್ತವೆ. ಅವುಗಳು ತಾವಾಗಿಯೇ ಹಾದುಹೋಗಲು ಸಾಧ್ಯವಾಗದಿದ್ದರೆ ಅಥವಾ ಅಡಚಣೆಯನ್ನು ಉಂಟುಮಾಡಬಹುದು ಎಂದು ತಜ್ಞರು ಒಪ್ಪುತ್ತಾರೆ. ಅದನ್ನು ತೆಗೆದುಹಾಕಲು ನೀವು ವೈದ್ಯರ ಸಹಾಯವನ್ನು ಪಡೆಯಬೇಕಾಗಬಹುದು. ಬಾದಾಮಿಯು ಆಕ್ಸಲೇಟ್‌ಗಳಲ್ಲಿ ಸಮೃದ್ಧವಾಗಿದೆ ಎಂದು ವೈದ್ಯರು ಹೇಳುತ್ತಾರೆ. ನೈಸರ್ಗಿಕವಾಗಿ…
ಪಿತೃಪಕ್ಷ ಆರಂಭ ಚಂದ್ರ ಗ್ರಹಣ ಆಂಶಿಕ ಸೂರ್ಯೋದಯ: 06:08, ಸೂರ್ಯಾಸ್ತ : 06:12 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಹುಣ್ಣಿಮೆ, ನಕ್ಷತ್ರ :ಪೂರ್ವ ಭಾದ್ರಾಪದ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ:07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ರಾ .3:51 ನಿಂದ ಬೆ.5:15 ತನಕ ಅಭಿಜಿತ್ ಮುಹುರ್ತ:ಇಲ್ಲ ಮೇಷ: ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ, ಹೋಟೆಲ್ ಮಾಲಕರಿಗೆ ಸಿಹಿ ಸುದ್ದಿ, ಸಾರಿಗೆ ಮಾಲಕರಿಗೆ ನಷ್ಟ, ಪತ್ರಿಕೋದ್ಯಮಿಗಳಿಗೆ ಶುಭಕಾಲ, ಮಹಿಳೆಯರ ಬಟ್ಟೆ ಮತ್ತು ಸೌಂದರ್ಯವರ್ಧಕ ಸಾಧನಗಳ ವ್ಯಾಪಾರದಲ್ಲಿ ಧನ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಕಿರುಕುಳ ಸ್ವಯಂ ನಿವೃತ್ತಿಯ ಬಗ್ಗೆ ಚಿಂತನೆ, ಜೂಜಾಟದಲ್ಲಿ ಹಣ ಹೂಡುವ ಮುನ್ನ ಒಮ್ಮೆ ಯೋಚಿಸಿ, ಮರುವಿವಾಹ ಆಕಾಂಕ್ಷೆಗಳಿಗೆ ವಿವಾಹಯೋಗವಿದೆ, ಶೇರು ಮಾರುಕಟ್ಟೆಯಲ್ಲಿ ಹಣ…
ನವದೆಹಲಿ: ದೇಶದಲ್ಲಿ ಅಕ್ಟೋಬರ್ 1 ರ ವರೆಗೆ ಬುಲ್ಡೋಜರ್ ಕಾರ್ಯಾಚರಣೆಗೆ (ಬುಲ್ಡೋಜರ್ ನ್ಯಾಯ) ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಂದಿನ ವಾದಗಳನ್ನು ಆಲಿಸುವ ವರೆಗೆ ದೇಶದ ಯಾವುದೇ ಸ್ಥಳದಲ್ಲಿ ಖಾಸಗಿ ಆಸ್ತಿಯ ವಿರುದ್ಧ ಅನಧಿಕೃತ ಬುಲ್ಡೋಜರ್ ಕ್ರಮ ಬೇಡ ಎಂದು ಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ‘ಬುಲ್ಡೋಜರ್ ಕಾರ್ಯಾಚರಣೆ’ಯು ಸರಿಯಾದ ಪ್ರಕ್ರಿಯೆಗಳ ನಂತರ ನೆಲಸಮಕ್ಕೆ ಮಂಜೂರು ಮಾಡುವಂತಹ ಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ವಿಚಾರಣೆಯ ತನಕ ನಿಮ್ಮ ಕೈಗಳನ್ನು ನಿಯಂತ್ರಿಸಿ. ಇದರಿಂದ ಸ್ವರ್ಗವೇ ಧರೆಗೆ ಬೀಳುವುದಿಲ್ಲ ಎಂದು ನ್ಯಾಯಾಲಯ ಚಾಟಿ ಬೀಸಿದೆ. ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.ಬುಲ್ಡೋಜರ್ ಕಾರ್ಯಾಚರಣೆ ಕ್ರಮವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಕ್ರಮ ಅದ್ಭುತ ಎಂದು ವೈಭವೀಕರಿಸುವವರ ವಿರುದ್ಧ ಕೋರ್ಟ್ ಎಚ್ಚರಿಕೆ ಸಂದೇಶ ರವಾನಿಸಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ಮುಂದಿನ ದಿನಾಂಕದ ವರೆಗೆ ಯಾವುದೇ ಕಾರ್ಯಾಚರಣೆ ನಡೆಸದಂತೆ ಸೂಚಿಸಿದೆ. ಇದೇ ವೇಳೆ, ಕ್ರಿಮಿನಲ್…