Author: Prajatv Kannada

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾಥಿತ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ನಾಗನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್‌ ಆದೇಶ ಹೊರಡಿಸಿದೆ. ವಿಲ್ಸನ್‌ ಗಾರ್ಡನ್‌ ನಾಗ ಸೇರಿ ಕೋಕಾ ಕೇಸ್ ಅಲ್ಲಿ ಬಂಧನ ಆಗಿದ್ದ 20 ಜನರೂ ಕೂಡ ಬೇರೆ ಬೇರೆ ಜೈಲಿಗೆ ವರ್ಗವಣೆ ಮಾಡುವಂತೆ ಆದೇಶ ಹೊರಡಿಸಿದ್ದು ಅದರಂತೆ 20 ಜನರನ್ನು ಬೇರೆ ಬೇರೆ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾಥಿತ್ಯ ಕೊಟ್ಟಿದ್ದ ಆರೋಪ ವಿಲ್ಸನ್‌ ಗಾರ್ಡನ್‌ ನಾಗನ ಮೇಲಿತ್ತು. ನಾಗನ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಹಾಗೂ ಬೆಂಗಳೂರು ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಸಿದ್ದಪುರ ಮಹೇಶ್‌ನನ್ನ ನಾಗ ತಂಡ ಕೊಚ್ಚಿ ಕೊಲೆ ಮಾಡಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದ ಕೇವಲ ಇನ್ನೂರು ಮೀಟರ್ ಅಂತರದಲ್ಲೇ ಸಿದ್ದಪುರ…

Read More

ಕಳಸಾಬಂಡೂರಿ, ಮಹದಾಯಿ ನದಿ ಜೋಡಣೆ ಹಾಗೂ ಕಪ್ಪತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಆಗ್ರಹಿಸಿ ಕರವೇ ಪ್ರವೀಣ ಶೆಟ್ಟಿ ಬಣದಿಂದ ಗದಗನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. https://youtu.be/jyDtdkJeTNQ?si=gYwioyMlL6QKtxtv ಇದೇ ಸಂದರ್ಭದಲ್ಲಿ ಮಾತನಾಡಿದ ಕರವೇ ಪ್ರವೀಣಶೆಟ್ಟಿ ಬಣ ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾಬಂಡೂರಿ ಮಹದಾಯಿ ನದಿ ಜೋಡಣೆ ಯೋಜನೆಯನ್ನು ತುರ್ತಾಗಿ ಆರಂಭಿಸುವಂತೆ ಹಾಗೂ ಕಪ್ಪತ್ತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ಪಟ್ಟಣದಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 48 ಕಿ. ಮೀ. ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದ್ರು.ಸೆ.19 ರಂದು ನರಗುಂದ ಪಟ್ಟಣದಿಂದ ಹೊರಟು ಶಲವಡಿ ಮಾರ್ಗವಾಗಿ ಸೆ. 20 ರಂದು ಗದಗ ನಗರವನ್ನು ಪ್ರವೇಶಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಈ ಪಾದಯಾತ್ರೆಗೆ ಡಾ. ತೋಂಟದ ಸಿಧ್ಧರಾಮ‌ ಶ್ರೀಗಳು ಬೆಂಬಲಿಸಿ ಸಾಂಕೇತಿಕವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸದಸ್ಯರಾದ ದಾವಲಸಾಬ ಮುಳಗುಂದ, ಶ್ರೀನಿವಾಸ ಭಂಡಾರಿ, ತಿಮ್ಮಣ್ಣ ಡೋಣಿ, ಸಹದೇವ…

Read More

ಕಲಘಟಗಿ: ಧಾರವಾಡ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸಂಬಂಧಿಸಿದಂತೆ ಕಲಘಟಗಿ, ಹುಬ್ಬಳ್ಳಿ ನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ಯ ಅಧ್ಯಕ್ಷರ ನಾಮನಿರ್ದೆಶನ ಮಾಡಿ ಅನುಮೋದಿಸಲಾಗಿದ್ದು, ಕಲಘಟಗಿ ತಾಲೂಕು ಕಸಾಪ ಘಟಕದ ಅಧ್ಯಕ್ಷರಾಗಿ ಮುಕ್ಕಲ್ಲ ಗ್ರಾಮದ ನಿವಾಸಿ, ನ್ಯಾಯವಾದಿ, ಪತ್ರಕರ್ತ ರಮೇಶ ಸೋಲಾರಗೊಪ್ಪ ಅವರನ್ನು ನೇಮಕ ಮಾಡಲಾಗಿದೆ. https://youtu.be/iQJwpjds54Q?si=VlpPlgmJQyjeG_kv ಈ ಹಿಂದಿನ ಅಧ್ಯಕ್ಷರಾಗಿದ್ದ ಈಶ್ವರ ಜವಳಿ ಅವರು ರಾಜೀನಾಮೆ ನೀಡಿದ ಹಿನ್ನೆಲೆ ತೆರವಾದ ಅಧ್ಯಕ್ಷ ಸ್ಥಾನಕ್ಕೆ ರಮೇಶ ಸೋಲಾರಗೊಪ್ಪ ಅವರನ್ನು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ ಸೋಲಾರಗೊಪ್ಪ ಅವರಿಗೆ ಸಾಹಿತಿಗಳು, ಕನ್ನಡ ಪರ ಸಂಘಟನೆಗಳು ಅಭಿನಂದಿಸಿವೆ.

Read More

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ಮಿತಿ‌ಮೀರಿದೆ. ಸರ್ಕಾರದ ತುಷ್ಟಿಕರಣ ನೀತಿಯಿಂದಾಗಿ ರಾಜ್ಯದಲ್ಲಿ ಹೆಚ್ಚು ಗಲಭೆ ಗಲಾಟೆಗಳು ನಡೆಯುತ್ತಿವೆ ಎಂದು ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ಕಿಡಿ ಕಾರಿದರು. https://youtu.be/zIUXG77dkew?si=AM9BNrX7orAEI1kM ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ತುಷ್ಟೀಕರದ ನೀತಿಯಿಂದ ಸರ್ಕಾರವೇ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ಗಲಭೆಗಳು ನಡೆಯುತ್ತವೆ ಎಂದರು. ಮಂಗಳೂರಿನಲ್ಲಿ ಮುಸ್ಲಿಂ ಸಮುದಾಯದಿಂದ ಈದ್ ಮಿಲಾದ್ ಮೆರವಣಿಗೆ ವಿಷಯಕ್ಕೆ ಸವಾಲ್ ಹಾಕಿದ್ದು ತಪ್ಪು. ಹೀಗೆ ಸವಾಲು ಹಾಕಿದರೇ ಎದುರಿನವರನ್ನು ರೊಚ್ಚಿಗೆಳಿಸುತ್ತದೇ. ಇದು ಗಲಭೆ, ಗಲಾಟೆಗಳಿಗೆ ಕಾರಣವಾಗುತ್ತವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೇ ಇಂತಹ ಘಟನೆ ನಡೆಯೋದಿಲ್ಲ. ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣ ನಿಲ್ಲಿಸಬೇಕು ಎಂದು ಅವರು ಸೂಚನೆ ನೀಡಿದರು. ರಾಜ್ಯದಲ್ಲಿ ಸಾಲು ಸಾಲು ಗಲಭೆ ಗಲಾಟೆ ನಡೆಯುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಪೊಲೀಸರ ಮೇಲೆ ವಿನಾಕಾರಣ ದಬ್ಬಾಳಿಕೆ, ಒತ್ತಡ ಹಾಕಬಾರದು. ಪೊಲೀಸರಿಗೆ ಸ್ವತಂತ್ರ ಅಧಿಕಾರ ಕೊಡಬೇಕು. ಗಲಭೆಕೋರರು ಹಾಗೂ ಗಲಭೆ ಸೃಷ್ಟಿ ಕರ್ತರ…

Read More

ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿ ನಿರ್ಲಕ್ಷ್ಯದಿಂದ ಎಎಸ್ ಐ ನಾಭಿರಾಜ ಮೃತಪಟ್ಟ ಹಿನ್ನೆಲೆಯಲ್ಲಿ ಝಾಂಡು ಕನ್ಸಸ್ಟ್ರಕ್ಷನ್ ಕಂಪನಿಯ ೧೧ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಎ.ಎಸ್.ಐ ನಾಭಿರಾಜ ಜಯಪಾಲ ದಯಣ್ಣವರ ಕರ್ತವ್ಯದ ನಿಮಿತ್ತ ತಮ್ಮ ಮೋಟಾರ್ ಸೈಕಲದಲ್ಲಿ, https://youtu.be/z6JOU9Kusko?si=bH7SDCamJUaEWzTz ಹುಬ್ಬಳ್ಳಿ ಹಳೇ ಕೋರ್ಟ್ ಸರ್ಕಲದಲ್ಲಿ ಹೋಗುತ್ತಿದ್ದಾಗ ನಿರ್ಮಾಣ ಹಂತದಲ್ಲಿರುವ ಮೇಲ ಸೇತುವೆ (ಪ್ರೈಓವರ್‌ನ್ನು) ಕಾಮಗಾರಿಯನ್ನು ಮಾಡುತ್ತಿರುವ ಜಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದುದರಿಂದ ಸೇತುವೆ ಮೇಲಿನಿಂದ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ,ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುತ್ತಿಗೆ ಕಂಪನಿಯ ನೌಕರರಾದ ಹರ್ಷಾ ಹೊಸಗಾಣಿಗೇರ, ಜಿತೇಂದ್ರಪಾಲ ಶರ್ಮಾ, ಭೂಪೇಂದರ್ ಪಾಲ್, ಮೊಹಮ್ಮದ ಇಮಾದರೂ ಮಿಯಾ, ಅಸ್ಲಂ ಅಲಿ ಜಲೀಲಮಿಯಾ, ಮೊಹಮ್ಮದ ಮಸೂದರ ರೆಹಮಾನ್ ಹಾಜಿ, ಸಬೀಬ ಶೇಖ ಮನ್ಸೂರಾಲಿ, ರಿಜಾವುಲ್ ಹಕ್ ಮಂಜೂರಾಲಿ, ಶಮೀಮ ಶೇಖ ತಂದೆ ಪಿಂಟು ಶೇಖ್, ಮೊಹಮ್ಮದ ಆರೀಫ, ಮೊಹಮ್ಮದ ರಬಿವುಲ್ ಹಕ್ ಎಂಬುವರನ್ನು…

Read More

ಬೆಂಗಳೂರು: ನಾಗಮಂಗಲದ ಕೋಮುಗಲಭೆ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಘಟನೆ ಹಾಗೂ ಮಂಗಳೂರಿನ ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. https://youtu.be/OHINy_7QrNo?si=CPfMGchlIgWVtGFA ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಷ್ಟು ಮುಸ್ಲಿಮರು ಪೆಟ್ರೋಲ್ ಬಾಂಬ್ ಎಲ್ಲಿಂದ ತಂದಿದ್ದಾರೆ? ಅದು ಮಸೀದಿಗಳಿಂದ ಬಂದಿದೆಯೇ ಎಂಬುದೂ ಸೇರಿದಂತೆ ಎಲ್ಲಾ ಸಂಗತಿಗಳನ್ನು ತನಿಖೆ ಮಾಡಬೇಕಿದೆ. ಇದಕ್ಕಾಗಿ ಈ ಎಲ್ಲಾ ಪ್ರಕರಣಗಳನ್ನು ಎನ್‌ಐಎಗೆ ವಹಿಸಬೇಕು. ನಾಗಮಂಗಲದ ಕೋಮುಗಲಭೆ ಪ್ರಕರಣದಲ್ಲಿ ಮೊದಲು ಹಿಂದೂಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿ. ಇದೇ ರೀತಿ ಮಂಗಳೂರಿನಲ್ಲೂ ಆಗಿದೆ. ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಓಡಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಸಂಘಟನೆಗಳಿಗೆ ಹಾಗೂ ಭಯೋತ್ಪಾದಕರಿಗೆ ಯಾವುದೇ ಭಯವಿಲ್ಲ. ನಮ್ಮನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂಬ ಧೈರ್ಯದಿಂದ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Read More

ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಾಂತರಗೊಳ್ಳುವಂತೆ ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಆದೇಶಿಸುವ ಕರಪತ್ರಗಳನ್ನು ಲೆಬನಾನ್ ಗಡಿಭಾಗದ ಗ್ರಾಮದಲ್ಲಿ ಇಸ್ರೇಲ್ ಡ್ರೋನ್ ಗಳ ಮೂಲಕ ಬೀಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕರಪತ್ರಗಳನ್ನು ಸೇನೆಯ ತುಕಡಿಯೊಂದು ಅನುಮತಿ ಪಡೆಯದೆ ಉದುರಿಸಿದೆ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ. ಗಾಝಾದಲ್ಲಿ 11 ತಿಂಗಳಿಂದ ಮುಂದುವರಿದಿರುವ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಲೆಬನಾನ್ನಿ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಇಸ್ರೇಲ್ ಆದೇಶಿಸಿದೆ. `ಇಸ್ರೇಲಿ ಶತ್ರುಗಳು ವಝಾನಿ ನಗರದಲ್ಲಿ ಕರಪತ್ರಗಳನ್ನು ಉದುರಿಸಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದವರು ತಕ್ಷಣ ಸ್ಥಳಾಂತರಗೊಳ್ಳಲು ಸೂಚಿಸಿದ್ದಾರೆ. ಕರಪತ್ರದಲ್ಲಿ ಪ್ರದೇಶದ ನಕ್ಷೆ ಹಾಗೂ ಸ್ಥಳಾಂತರಗೊಳ್ಳಬೇಕಾದ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Read More