Author: Prajatv Kannada

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ 10 ಸಂಸದರಿಗೆ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶನಿವಾರ ಇಸ್ಲಮಾಬಾದ್ ನಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ(ಪಿಟಿಐ) ನಡೆಸಿದ್ದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಪಕ್ಷದ 10 ಸಂಸದರ ಸಹಿತ ಪಕ್ಷದ ಕನಿಷ್ಠ 30 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಸಂಸದರ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದ ಹೊಸ ಕಾನೂನು ಹಾಗೂ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆ ನಡೆಯುವುದಕ್ಕೆ ಎರಡು ದಿನ ಮೊದಲು ಅನುಮೋದಿಸಲಾಗಿದ್ದ `ಶಾಂತಿಯುತ ಸಭೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆ’ಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಟೀಕಿಸಿವೆ.

Read More

ಬ್ಯಾಡರಹಳ್ಳಿ ಪೊಲೀಸರ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಬಂಧೀಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹ್ಮದ್, ವಿಶ್ವನಾಥ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 9 ದ್ವಿಚಕ್ರ ವಾಹನ ಒಂದು ಆಟೋ ವಶಕ್ಕೆ ಪಡೆದಿದ್ದಾರೆ.ಆರೋಪಿಗಳು ಬ್ಯಾಡರಹಳ್ಳಿ, ಜ್ಞಾನ ಭಾರತಿ, ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಬಂಧಿತರಿಂದ ಏಳು ಲಕ್ಷ ಮೌಲ್ಯದ ಹತ್ತು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದ್ದು, ಈ ಘಟನೆ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಮುದ್ದು ಕಂದನ ಆಗಮನವಾಗಲಿದೆ. ಸದ್ಯದಲ್ಲೇ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ತಂದೆ ತಾಯಿಯಾಗಲಿದ್ದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಸುಮಲತಾ ಮನೆಯಲ್ಲಿ ಸದ್ಯದಲ್ಲೇ ಪುಟ್ಟ ಕಂದನ ಆಗಮನವಾಗಲಿದೆ. ಸೊಸೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ನಟಿ ಸುಮಲತಾ ಅಂಬರೀಶ್ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವಿವಾ ಬಿದ್ದಪ್ಪರಿಗೆ ಸೀಮಂತ ಶಾಸ್ತ್ರ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಅಂಬಿ ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು. ಸುಮಲತಾ ನಿವಾಸದಲ್ಲಿಯೇ ಅವಿವಾ ಸೀಮಂತ ಶಾಸ್ತ್ರ ಮಾಡಲಾಗಿದೆ. ಕೆಲವೇ ಕೆಲವು ಅತಿಥಿಗಳು ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಸದ್ಯ ಕೆಲವು ಫೋಟೋಗಳು ವೈರಲ್ ಆಗಿವೆ. ಅಕ್ಟೋಬರ್ ವೇಳೆಗೆ ಅಭಿ ಹಾಗೂ ಅವಿವಾ ಬಾಳಿನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಲಿದ್ದು. ಅಂಬಿ ನಿವಾಸದಲ್ಲಿ ಪುಟ್ಟ ಮಗುವಿನ ನಗು ಕೇಳಿಸಲಿದೆ. ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರು…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ಪರಪ್ಪನ ಅಗ್ರಹಾರ ಹೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿಯಲ್ಲಿ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ನಟ ದರ್ಶನ್ ಅವರನ್ನು ಇರಿಸಲಾಗಿದ್ದು, ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲು ಸೇರಿ 19 ದಿನಗಳೇ ಕಳೆದು ಹೋಗಿದೆ. ಈ ಮಧ್ಯೆ ದರ್ಶನ್ ಮನ ಅಮ್ಮನನ್ನು ಕಾಣಲು ಹಂಬಲಿಸುತ್ತಿದೆ. ದರ್ಶನ್ ಬಳ್ಳಾರಿ ಜೈಲು ಸೇರಿ ಇಷ್ಟು ದಿನ ಕಳೆದಿದ್ರು ಒಮ್ಮೆಯೂ ಮಗನನ್ನು ನೋಡಲು ದರ್ಶನ್ ತಾಯಿ ಮೀನಾ ತೂಗುದೀಪ ಬಂದಿಲ್ಲ. ಬಳ್ಳಾರಿ ಜೈಲು ಸೇರಿ 19 ದಿನ ಆದ್ರೂ ನಟ ದರ್ಶನ್ ತಾಯಿ ಮೀನಾ ತೂಗುದೀಪ ಮಗನನ್ನು ನೋಡಲು ಈ ಜೈಲಿಗೆ ಬಂದಿಲ್ಲ. ಅಮ್ಮನನ್ನು ನೋಡಬೇಕು ಎಂದು ದರ್ಶನ ಹಂಬಲಿಸುತ್ತಿದ್ದಾರಂತೆ. ಅಮ್ಮನ ಕನವರಿಕೆಯಲ್ಲೇ ದಿನದೂಡುತ್ತಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ 3 ಬಾರಿ ಬಳ್ಳಾರಿ ಜೈಲಿಗೆ ಬಂದು ದರ್ಶನ್ ಭೇಟಿಯಾದ್ರು. ಸಹೋದರ ದಿನಕರ್ ತೂಗುದೀಪ್ ಕೂಡ…

Read More

ಬೆಂಗಳೂರು:- ನಮ್ಮ ಪಾರ್ಟಿ, ನಮ್ಮ ಲೀಡರ್, ನನ್ನಿಷ್ಟ ಎಂದು ಹೇಳುವ ಮೂಲಕ ವಿದೇಶದಲ್ಲಿ ರಾಹುಲ್ ಗಾಂಧಿ ಭೇಟಿ ಬಗ್ಗೆ ಡಿಸಿಎಂ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://youtu.be/59YIUs3G3eA?si=GQe9CAVJrcidHtLd ವಿದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ವೇಳೆ ನಾನು ಯಾರ ಬಳಿ ಮಾತಾಡಬೇಕು? ಏನು ಮಾಡಬೇಕು? ಎಲ್ಲವನ್ನೂ ನಿಮ್ಮ ಬಳಿ ಹೇಳ್ಕೋಬೇಕಾ? ನನ್ನ ತಮ್ಮ, ತಂಗಿ, ಕುಟುಂಬದ ಜೊತೆ ಏನು ಮಾತಾಡ್ತೇನೆ ಎಲ್ಲಾ ಹೇಳಬೇಕಾ ಎಂದು ಪ್ರಶ್ನಿಸಿದ್ದಾರೆ. ಶಾಸಕ ಮುನಿರತ್ನ ಅವರ ಬಂಧನದ ವಿಚಾರವಾಗಿ, ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಈ ಬಗ್ಗೆ ಬಿಜೆಪಿಯ ಆರ್.ಆಶೋಕ್, ವಿಜಯೇಂದ್ರ, ಇನ್ನೂ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಅಲ್ಲದೇ ಆ ಸಮುದಾಯದ ಮುಖ್ಯಸ್ಥರು, ಸ್ವಾಮಿಗಳು ಅವರೆಲ್ಲ ಮಾತಾಡಬೇಕು. ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು ಎಂದು ಹೇಳಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿನಲ್ಲೂ ದರ್ಶನ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಗೆ ಪತ್ರ ಬರೆದ ದರ್ಶನ್ ಪರ ವಕೀಲರು ಕಿವಿ ಮಾತು ಹೇಳಿದ್ದಾರೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಈ ಮೊದಲು ಟಿವಿಗಾಗಿ ಕಿರಿಕ್ ಮಾಡಿಕೊಂಡಿದ್ದರು. ಕೊಟ್ಟ ಟಿವಿ ಸರಿ ಇಲ್ಲ, ನನಗೆ ಸರಿಯಾದ ಟಿವಿ ಬೇಕು ಎಂದಿದ್ದರು. ಆ ಬಳಿಕ ಮಾಧ್ಯಮಗಳಿಗೆ ಅಸಭ್ಯ ಸನ್ನೆ ಮಾಡಿ ವಿವಾದ ಸೃಷ್ಟಿಸಿದ್ದರು. ಈ ಎಲ್ಲವು ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಸಮಯದಲ್ಲಿ ಸಮಸ್ಯೆಗಳು ತಂದೊಡ್ಡುತವೆ ಎಂಬ ಕಾರಣಕ್ಕೆ ವಕೀಲರು ಪತ್ರ ಬರೆದಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಆಗಿದೆ. ಈ ಚಾರ್ಜ್​ಶೀಟ್​ನಲ್ಲಿ ಹಲವು ವಿಚಾರಗಳು ಉಲ್ಲೇಖ ಆಗಿವೆ. ಈವರೆಗೆ ದರ್ಶನ್ ಪರ ವಕೀಲರು ಜಾಮೀನು ಸಲ್ಲಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಜಾಮೀನು ಅರ್ಜಿ ಸಲ್ಲಿಕೆ…

Read More

ಬೆಂಗಳೂರು:- ಕೊಂಕಣ ರೈಲ್ವೆ ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆ ಜೊತೆ ವಿಲೀನವಾಗಲಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ. https://youtu.be/OHINy_7QrNo?si=LqDWQbU8m-oUUn9E ಕೊಂಕಣ ರೈಲ್ವೆ ಜಾಲವು ಕೇರಳದಿಂದ ಮಹಾರಾಷ್ಟ್ರದವರೆಗೆ ವ್ಯಾಪಿಸಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಒಟ್ಟು 742 ಕಿ.ಮೀ. ಕ್ರಮಿಸುತ್ತದೆ ಎಂದು ಸೋಮಣ್ಣ ತಿಳಿಸಿದರು. ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಹೀಗಾಗಿ ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು ವಿಲೀನ ವಿಚಾರವಾಗಿ ನಾವು ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ, ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರದ ಶೇ 50ರಷ್ಟು ಕೊಡುಗೆಯೊಂದಿಗೆ ರಾಜ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ದೊರೆಯುವುದಿಲ್ಲ. ಈ ಕಾರಣಕ್ಕೆ ಎಲ್ಲಾ ವೆಚ್ಚವನ್ನು ಕೇಂದ್ರವೇ ಭರಿಸಲು ನಿರ್ಧರಿಸಿದೆ ಎಂದು ಸೋಮಣ್ಣ ತಿಳಿಸಿದರು. ರಾಜ್ಯದ ಹಲವು ಬಾಕಿ ಇರುವ ಯೋಜನೆಗಳನ್ನು ಶೀಘ್ರ…

Read More

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಸದ್ಯ ಬಳ್ಲಾರಿ ಜೈಲಿನಲ್ಲಿರುವ ದರ್ಶನ್ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಆದರೆ ಸದ್ಯದ ಮಟ್ಟಿಗಂತು ದರ್ಶನ್ ಗೆ ಬಿಡುಗಡೆ ಭಾಗ್ಯವಿಲ್ಲವಾಗಿದೆ. ಇಂದು ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಅವಧಿ  ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ಮತ್ತೊಮ್ಮೆ ಕುರ್ಚಿಗಾಗಿ ಮನವಿ ಮಾಡಿದ್ದಾರೆ. ‘ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕು ಜೈಲಾಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಆ ವ್ಯವಸ್ಥೆ ಇದೆ.  ಆದರೆ, ದರ್ಶನ್​ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದರು. ‘ಕೈದಿಗಳಿಗೆ ಏನು ವ್ಯವಸ್ಥೆ ನೀಡಬೇಕು ಎಂದು ಜೈಲಿನ ನಿಯಮ ಪಟ್ಟಿಯಲ್ಲಿ ಇದೆ. ಅದು ಕೊಡಬೇಕು ಎಂದು ಆದೇಶ ಮಾಡುತ್ತೇನೆ’ ಎಂದು ಜಡ್ಜ್ ಹೇಳಿದರು. ಇಂದು…

Read More

ಉಡುಪಿ:-ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ಯಕೃತ್ ದಾನ ಮಾಡಲು ಹೋಗಿ ಮಹಿಳೆ ದುರ್ಮರಣ ಹೊಂದಿರುವ ಘಟನೆ ಜರುಗಿದೆ. https://youtu.be/XfZvRybbJT4?si=U8vGiocxYs-FU2he 34 ವರ್ಷದ ಅರ್ಚನಾ ಕಾಮತ್ ಮೃತಪಟ್ಟ ಮಹಿಳೆ ಎನ್ನಲಾಗಿದೆ. ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಬಯಸಿದ್ದ 34 ವರ್ಷದ ಅರ್ಚನಾ ಕಾಮತ್ ಅವರು ಯಕೃತ್ ದಾನ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದ ಅರ್ಚನಾ ಕಾಮತ್ ಅವರು ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ತಮ್ಮ ಯಕೃತ್‌ನ ಒಂದು ಭಾಗವನ್ನು ಪತಿಯ ಸಂಬಂಧಿಗೆ ದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ. ಅಕಾಲಿಕ ನಿಧನದಿಂದ ಅರ್ಚನಾ ಅವರ ಸಂಬಂಧಿಕರು, ಆತ್ಮೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.

Read More

ಕೊಪ್ಪಳ:- ವಕ್ಫ್​​ ತಂಟೆಗೆ ಬಂದರೆ ನಿಮ್ಮನ್ನು ಮುಸ್ಲಿಂ ಸಮಾಜ ಮುಗಿಸುತ್ತೆ ಅಂತ ಪ್ರಚೋದನಕಾರಿ ಹೇಳಿಕೆ ನೀಡಿದ್ದ SDPI ಮುಖಂಡನ ವಿರುದ್ಧ ಎಫ್​ಐಆರ್​ ದಾಖಲಾಗಿದೆ https://youtu.be/TVprnGO5t1o?si=fT12i8h4JcDs6Bw1 ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ವಕ್ಫ್​ ಬಿಲ್​-2024 ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೆಪ್ಟೆಂಬರ್​ 13ರಂದು ಕಾರಟಗಿ ಪಟ್ಟಣದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಎಸ್​ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ಎಂಬಾತ ಪ್ರಚೋದನಕಾರಿ ಮಾತುಗಳನ್ನು ಆಡಿದ್ದರು. ವಕ್ಫ್​​ ತಂಟೆಗೆ ಬಂದರೆ ನಿಮ್ಮನ್ನು ಮುಸ್ಲಿಂ ಸಮಾಜ ಮುಗಿಸುತ್ತೆ. ನೀವು ಯಾವ ಸಂತತಿಯಿಂದ ಬಂದಿದ್ದಿರೋ, ಯಾವ ದೇಶದಿಂದ ಬಂದಿದ್ದೀರೋ ಗೊತ್ತಿಲ್ಲ. ಆದರೆ, ನಿಮ್ಮ ಸಂತತಿಯನ್ನು ಮುಗಿಸಲಿಕ್ಕೆ ಮುಸ್ಲಿಂ ಸಮಾಜ ಇರುವುದು ಎನ್ನುವ ಸಂದೇಶ ಬಿಜೆಪಿಯವರಿಗೆ ನೀಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಸಾವರ್ಕರ ಸಂತತಿಯವರು ಬಂದರೂ ಕೂಡ ಮುಸ್ಲಿಮರ ಆಸ್ತಿಯನ್ನು ಮುಟ್ಟಲಿಕ್ಕೆ ಆಗಲ್ಲ. ನೀವು ಯಾವ ಸಂತತಿಯಿಂದ ಬಂದಿದ್ದೀರೋ ಆ ಸಂತತಿಗಳನ್ನು ಮುಗಿಸಲಿಕ್ಕೆ ಈ ಮುಸ್ಲಿಂ ಸಮುದಾಯ ಇರುವುದು. ಈ ಸ್ಪಷ್ಟ ಸಂದೇಶವನ್ನು ಬಿಜೆಪಿ ಮತ್ತು…

Read More