Author: Prajatv Kannada
ಬೆಂಗಳೂರು:- ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಆಗುವ ಪ್ರತಿಯೊಂದು ವಿಮಾನದಲ್ಲಿ ಕನ್ನಡದಲ್ಲೇ ಮೊದಲ ಅನೌನ್ಸ್ಮೆಂಟ್ ಮಾಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು BIAL ಗೆ ಒತ್ತಾಯ ಮಾಡಿದ್ದಾರೆ. https://youtu.be/Ce4z2zTX6p4?si=TqM4qk7nF-onz_8R ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಆಗುವ ಪ್ರತಿಯೊಂದು ವಿಮಾನದಲ್ಲಿ ಕನ್ನಡದಲ್ಲೇ ಮೊದಲ ಅನೌನ್ಸ್ಮೆಂಟ್ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಮಹೇಶ್ ಜೋಶಿ ಅವರು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಲು ಮುಂದಾಗಿದ್ದಾರೆ. ಜೋಶಿ ಅವರು ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಅವರನ್ನು ಭೇಟಿ ಮಾಡಿ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಉತ್ತೇಜಿಸುವ ಹಾಗೂ ವಿಮಾನ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಸಮಯದಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಚರ್ಚಿಸಿದರು. ಚರ್ಚೆ ಬಳಿಕ ಮಾತನಾಡಿದ ಜೋಶಿ, ಕನ್ನಡ ರಾಜ್ಯೋತ್ಸವ ದಿನದಿಂದ ವಿಮಾನಗಳಲ್ಲಿ ಕನ್ನಡದಲ್ಲೇ ಅನೌನ್ಸ್ಮೆಂಟ್ ಮಾಡುವುದನ್ನು ಪ್ರಾರಂಭಿಸಲು ನಾನು ಅವರನ್ನು ಕೇಳಿದ್ದೇನೆ. ಏಕೆಂದರೆ ಈ ವ್ಯವಸ್ಥೆಯನ್ನು ವಿಮಾನಗಳಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ…
ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ನಗರದ ಜ್ಞಾನಭಾರತಿಯ ಉಲ್ಲಾಳದ ಬಳಿ ನಡೆದಿದೆ. https://youtu.be/lLQ5Jy8LSpM?si=BAa9K9ml0HyPNSoR ಇತ್ತೀಚಿಗಷ್ಟೇ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಕಾಲಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡೇಟು ನೀಡಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಕಡುಬು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ, ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಕಡುಬು ಮೇಲೆ ವಾರಂಟ್ ಇದ್ದರೂ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ನಡುವೆ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದ. ಬಳಿಕ ಆತನ ವಿಡಿಯೋ ಹರಿಬಿಟ್ಟಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಉಲ್ಲಾಳದ ಹಿಲ್‌ರಾಕ್ ಸ್ಕೂಲ್ ಬಳಿ ಬಂಧನಕ್ಕೆ ತೆರಳಿದ್ದರು ಬಂಧನಕ್ಕೆ ತೆರಳಿದ್ದ ವೇಳೆ ಕಡುಬು ಹೆಡ್ ಕಾನ್‌ಸ್ಟೇಬಲ್ ವೆಂಕಟೇಶ್ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ರೌಡಿಯ ಬಲಗಾಲಿಗೆ ಗೋವಿಂದರಾಜ ನಗರದ ಇನ್ಸ್ಪೆಕ್ಟರ್ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹೊಡೆದಿದ್ದಾರೆ. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಕಡುಬುನನ್ನು…
ನವದೆಹಲಿ: ದೆಹಲಿ ನೂತನ ಸಿಎಂ ಸ್ಥಾನಕ್ಕೆ ಸಚಿವೆ ಅತಿಶಿ ಅವರ ಹೆಸರನ್ನು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಅತಿಶಿ ಅವರು ದೆಹಲಿ ಎಎಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾದ ನಂತರ ಅರವಿಂದ್ ಕೇಜ್ರಿವಾಲ್ ಅವರು ಉನ್ನತ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ದೆಹಲಿ ಸಚಿವ ಅತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ನಡೆದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದಿನ ಎಎಪಿ ಸಭೆಯಲ್ಲಿ, ಪಕ್ಷದ ನಾಯಕ ದಿಲೀಪ್ ಪಾಂಡೆ ಅವರು, ಸಿಎಂ ಯಾರೆಂದು ಕೇಜ್ರಿವಾಲ್ ನಿರ್ಧರಿಸಬೇಕೆಂದು ಪ್ರಸ್ತಾಪಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕರು ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಎಲ್ಲಾ ಎಎಪಿ ಶಾಸಕರು ಎದ್ದುನಿಂತು ಅದನ್ನು ಒಪ್ಪಿಕೊಂಡರು. ಎಂಎಸ್ ಅತಿಶಿ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂದು ಮೂಲಗಳು ಹೇಳಿವೆ. ಅತಿಶಿ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು PWD…
ಸಾಮಾನ್ಯವಾಗಿ ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಸವಿಯುವ ಅಭ್ಯಾಸ. ಅದರಲ್ಲಿಯೂ ಮುಖ್ಯವಾಗಿ ಕೆಲವರು ಶುಂಠಿ ಚಹಾವನ್ನು ಹೆಚ್ಚು ಇಷ್ಟಪಡುತ್ತಾರೆ. ಅಡುಗೆಯಲ್ಲಿ ರುಚಿ ಹೆಚ್ಚುಸುವ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿರುವ ಶುಂಠಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ. ಶುಂಠಿ ಟೀ ಶೀತ ಕೆಮ್ಮಿನಿಂದ ಹಿಡಿದು, ಮುಟ್ಟಿನ ನೋವಿನವರೆಗೆ ಅನೇಕ ಕಾಯಿಲೆಗಳಿಗೆ ಬೆಸ್ಟ್ ಮನೆ ಮದ್ದು ವಾಕರಿಕೆ ನಿವಾರಿಸಲು ಜಿಂಜರ್ ಟೀ ತುಂಬಾ ಪರಿಣಾಮಕಾರಿ. ದೂರದೂರಿಗೆ ಪಯಣಿಸುವಾಗ ಮೋಷನ್ ಸಿಕ್ನೆಸ್‌ನಿಂದ ಆಗುವ ವಾಂತಿಯನ್ನು ಕೇವಲ ಒಂದು ಕಪ್ ಚಹಾ ತಡೆಯಬಲ್ಲದು.. ಜೀರ್ಣಕ್ರಿಯೆ ಮತ್ತು ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಶುಂಠಿ ಚಹಾ ಇದಕ್ಕೆ ರೆಮಿಡಿ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆಹಾರದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಬೆಸ್ಟ್. ಪ್ರತಿ ಊಟದ ನಂತರದ ಹೊಟ್ಟೆ ಉಬ್ಬರಿಸುವಿಕೆಯನ್ನು ಒಂದು ಕಪ್ ಶುಂಠಿ ಚಹಾ ನಿವಾರಿಸುತ್ತದೆ. ದೀರ್ಘಕಾಲದವರೆಗೆ ಕೀಲು ನೋವಿಂದ ಬಳಲುತ್ತಿರುವವರಿಗೆ ಶುಂಠಿ ಚಹಾದಿಂದ ಹೆಲ್ಪ್ ಆಗುತ್ತದೆ. ಚಹಾ ಚರಟವನ್ನು ನೋವಿನ ಜಾಗಗಳಿಗೆ ಸಹ ಹಚ್ಚಬಹುದು. ಉಸಿರಾಟದ ಸಮಸ್ಯೆಗೆ ಪರಿಹಾರ. ನೆಗಡಿಯಿಂದ…
ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿಯನ್ನು ಲಕ್ಷ್ಮಿ ದೇವಿಯ ಇನ್ನೊಂದು ರೂಪವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿಯನ್ನ ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿನ ಕಷ್ಟಗಳು ನಿವಾರಣೆ ಆಗುತ್ತದೆ. ಆದರೆ ತುಳಸಿ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನ ಪಾಲಿಸಬೇಕಾಗುತ್ತದೆ. ನಾವು ಈ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಬಾರದು. ಆ ನಿಯಮಗಳೇನು ಎಂಬುದು ಇಲ್ಲಿದೆ. ತುಳಸಿ ಗಿಡವು ಪ್ರತಿ ಹಿಂದೂ ಧರ್ಮೀಯರ ಮನೆಯ ಅಂಗಳವನ್ನು ಅಲಂಕರಿಸುತ್ತದೆ. ಮನೆಯಲ್ಲಿ ತುಳಸಿ ಮರ ಇರುವುದು ಯಾವಾಗಲೂ ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ಹೇಳಲಾಗುತ್ತದೆ. ಹಿಂದೂ ನಂಬಿಕೆಗಳಲ್ಲಿ, ತುಳಸಿ ಸಸ್ಯವನ್ನು ಪ್ರಾಚೀನ ಕಾಲದಿಂದಲೂ ವಿಷ್ಣು ಪ್ರಿಯಾ ಎಂದು ಪೂಜಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಡುವುದರಿಂದ ಧನಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಇದು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಉತ್ತಮ ಆರೋಗ್ಯ ನೀಡುತ್ತದೆ. ಹಾಗಾಗಿ ಈ ಗಿಡ ಬಹಳ ಮುಖ್ಯ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ವಿಷ್ಣುವಿಗೆ…
ಶ್ರೀನಗರ:- ಮೋದಿ ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಐಸ್ ಕ್ರೀಮ್ ತಿಂದಿದ್ದಾರೆ ಮತ್ತು ಬೈಕ್ ಓಡಿಸಿದ್ದಾರೆ. ನಾವು ಕಾಶ್ಮೀರವನ್ನು ಸುರಕ್ಷಿತಗೊಳಿಸಿದ್ದೇವೆ. ರಾಹುಲ್ ಬಾಬಾ ಕಾಶ್ಮೀರದಲ್ಲಿ ಬೈಕ್ ಓಡಿಸಿದ್ದಾರೆ ಮತ್ತು ಲಾಲ್ ಚೌಕ್‌ನಲ್ಲಿ ಐಸ್‌ಕ್ರೀಂ ತಿನ್ನುತ್ತಿದ್ದಾಗ ಮೋದಿಜಿಯನ್ನು ನಿಂದಿಸಿದ್ದಾರೆ. ನೀವು ಮೋದಿ ಅವರನ್ನು ನೀವು ನಿಂದಿಸಬಹುದು. ಆದರೆ ನಿಮ್ಮ ಸರ್ಕಾರದಲ್ಲಿ ಇಲ್ಲಿ ಶಾಂತಿ ಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ. ಮೋದಿಯವರು ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ ಎಂದರು. ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಅಂಗಡಿಯಲ್ಲಿ ಐಸ್ ಕ್ರೀಮ್ ತಿಂದಿದ್ದರು. ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ಲಡಾಖ್‌ನಲ್ಲಿ ಬೈಕ್ ಓಡಿಸಿದ್ದರು. ಈ ವಿಚಾರವನ್ನು ಪ್ರಸ್ತಾಪ ಮಾಡಿ ಅಮಿತ್ ಶಾ ವ್ಯಂಗ್ಯವಾಡಿದರು.
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಾಯಕನ ಜನ್ಮದಿನವನ್ನು ವಿಭಿನ್ನವಾಗಿ ಆಚ ರಿಸಲು ಬಿಜೆಪಿ ಒಂದೆಡೆ ಭರ್ಜರಿ ಸಿದ್ಧತೆ ಮಾಡಿ ಕೊಂಡಿದ್ದರೆ, ಮತ್ತೊಂದೆಡೆಮೋದಿ ಅಭಿಮಾನಿಗಳು ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಜೈರ್ ಪರೀಫ್ ದರ್ಗಾವು 4 ಸಾವಿರ ಕೆಜಿಯಸಸ್ಯಾಹಾರಿಲಂಗೇರ್ ಆಹಾರ ವಿತರಿಸಲು ಮುಂದಾಗಿದೆ. ಚೆನ್ನೈ ಮೂಲದ 13 ವರ್ಷದ ಬಾಲಕಿ ಮೋದಿ ಚಿತ್ರವನ್ನು 800 ಕೆ.ಜಿ ಸಿರಿಧಾನ್ಯ ಬಳಸಿ ತಯಾರಿಸಿದ್ದಾಳೆ. ತವರುರಾಜ್ಯ ಗುಜರಾತಿನ ಸೂರತ್‌ನಲ್ಲಿ ಪ್ರಧಾನಿ ಜನ್ಮದಿನದಂದು ವ್ಯಾಪಾರಿಗಳು ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಗಾಂಧಿನಗರದಲ್ಲಿ 4ನೇ ಆವೃತ್ತಿಯ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಹಾಗೂ ಎಕ್ಸ್ ಪೋದಲ್ಲಿ ಸೋಮವಾರ ಪ್ರಧಾನಿ ಮೋದಿಗೆ ಸಚಿವ ಪ್ರಹ್ಲಾದ ಜೋಶಿ ಅವರಿಂದ ಸನ್ಮಾನ. ಮತ್ತೊಂದೆಡೆ ದೇಶದಲ್ಲಿ ಎನ್‌ಡಿಎ ಸರ್ಕಾರ ಸೆ.15ಕ್ಕೆ ಅಧಿಕಾರಕ್ಕೆ ಬಂದು 100 ದಿನಗಳು ಸಂದಿದೆ. ಹೀಗಾಗಿ ಮೋದಿ ಹುಟ್ಟುಹಬ್ಬದ ದಿನ ಬಿಜೆಪಿ ನಾಯಕರು 100…
ಸೂರ್ಯೋದಯ: 06:08, ಸೂರ್ಯಾಸ್ತ : 06:12 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ನಕ್ಷತ್ರ: ಶತಭಿಶಾ ರಾಹು ಕಾಲ: 03:00ನಿಂದ04:30 ತನಕ ಯಮಗಂಡ: 09:00ನಿಂದ 10:30ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.7:29 ನಿಂದ ಬೆ.8:54 ತನಕ ಅಭಿಜಿತ್ ಮುಹುರ್ತ: ಬೆ.11:46 ನಿಂದ ಮ.12:34 ತನಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ:ಕುಟುಂಬ ಕಲಹ ನ್ಯಾಯಾಲಕ್ಕೆ ಹೋಗುವುದು ಬೇಡ,ಸಮಾಧಾನವಾಗಿರಿ ಸಮಸ್ಯೆ ಪರಿಹಾರ,ಉದ್ಯೋಗ ಸಂದರ್ಶನ, ಸರಕಾರಿ ಉದ್ಯೋಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ ಹತ್ತಿರಕ್ಕೆ ಬಂದು ನಿರಾಶೆ ಮೂಡಲಿದೆ, ನಿಮ್ಮ ತಾಳ್ಮೆ ಮತ್ತು ಧೈರ್ಯ ಪರೀಕ್ಷೆ ನಡೆಯುತ್ತಿದೆ.…
ಬೆಂಗಳೂರು: ದಶಕದ ಬಳಿಕ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿಯಲ್ಲಿ ಇಂದು ಮಂಗಳವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಇಂದೇ ಕಲಬುರಗಿ ತಲುಪಿದ್ದಾರೆ https://youtu.be/BXEPFdAYfs8?si=5MPXb0MCNZZQz_C4 ಇಂದು ಸರ್ಧಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿರುವ ಸಿಎಂ ಸಿದ್ದರಾಮಯ್ಯ, 9 ಗಂಟೆಗೆ ಡಿಎಆರ್ ಪೊಲೀಸ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಸಂಪುಟ ಸಭೆಯ ಸಿದ್ಧತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಪರಿಶೀಲನೆ ನಡೆಸಿದರು. ನಾಳಿನ ಸಚಿವ ಸಂಪುಟ ಸಭೆಗೆ ಬಿಜೆಪಿ ವ್ಯಂಗ್ಯವಾಡಿದೆ. ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಕಾಂಗ್ರೆಸ್ (Congress) ಪಕ್ಷ ಅಂದರೆ ನಾಟಕ ಕಂಪನಿಯಿದ್ದಂತೆ. ಹೀಗಾಗಿ ನಾಳೆ 2 ಗಂಟೆಗಳ ಕ್ಯಾಬಿನೆಟ್ ಡ್ರಾಮಾ ನಡೆಯಲಿದೆ. ಬರೀ ಸಚಿವರು ಓಡಾಡುವ ರಸ್ತೆ ಮಾತ್ರ ಧೂಳು ತೆಗೆದು ಗುಂಡಿ ಮುಚ್ಚುತ್ತಿದ್ದಾರೆ. ಕಲಬುರಗಿಗೆ ಪ್ರವಾಸಿಗರ ರೀತಿ ಸಚಿವರು ಬರಬಾರದು. ಜನರ ಸಮಸ್ಯೆ ಕೇಳಲು…