ಬೀದರ್: ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ 2024-25ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಔರಾದ್(ಬಿ) ಹಾಗೂ ಕಮಲಗರ ತಾಲ್ಲೂಕು ಒಳಗೊಂಡು ಔರಾದ್(ಬಿ) ವಿಧಾನಸಭಾ ಕ್ಷೇತ್ರಕ್ಕೆ 3923 ಮನೆಗಳು ಮಂಜೂರಾಗಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ್ ತಿಳಿಸಿದ್ದಾರೆ. https://youtu.be/T6YGp3Pt4Bk?si=lubkq8DXQZ3krO2Z ಔರಾದ್(ಬಿ) ಹಾಗೂ ಕಮಲಗರ ತಾಲ್ಲೂಕಿನಲ್ಲಿ ವಸತಿ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ಮನೆಗಳನ್ನು ಕಟ್ಟಿಸಿಕೊಡುವಂತಾಗಲು ಮನೆಗಳನ್ನು ಮಂಜೂರು ಮಾಡಬೇಕೆಂದು ಈ ಹಿಂದೆ ಹಲವಾರು ಬಾರಿ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿ ಔರಾದ್ ಕ್ಷೇತ್ರಕ್ಕೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಷೇತ್ರದ ಮಹಾಜನತೆಯ ಪರವಾಗಿ ಶಾಸಕ ಪ್ರಭು ಚವ್ಹಾಣ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಪಿಎಂ ಆವಾಸ್ (ಗ್ರಾಮೀಣ) ಯೋಜನೆಯಡಿ 2024-25ನೇ ಸಾಲಿಗೆ ರಾಜ್ಯಕ್ಕೆ 2,26,175 ಮನೆಗಳನ್ನು ಮಂಜೂರು ಮಾಡಲಾಗಿದೆ. ಬೀದರ್ ಜಿಲ್ಲೆಗೆ 15,035 ಮನೆಗಳು ಮಂಜೂರಾಗಿದ್ದು, ಈ ಪೈಕಿ ಔರಾದ್(ಬಿ) ತಾಲ್ಲೂಕಿಗೆ 2286 ಹಾಗೂ ಕಮಲನಗರ ತಾಲ್ಲೂಕಿಗೆ 1,637 ಮನೆಗಳು ಸೇರಿ ಔರಾದ್(ಬಿ) ವಿಧಾನಸಭಾ…
Author: Prajatv Kannada
ಕಳೆದೆರಡು ವಾರಗಳಿಂದ ಏರಿಕೆಗಿಂತ ಇಳಿಕೆ ಹೆಚ್ಚಾಗಿ ಕಂಡಿದ್ದ ಚಿನ್ನದ ಬೆಲೆ ಗ್ರಾಮ್ಗೆ 200 ರೂ ಸಮೀಪದಷ್ಟು ಹೆಚ್ಚಳವಾಗಿದೆ. https://youtu.be/BXEPFdAYfs8?si=RoVneyXPlvixaf8c ಬೆಳ್ಳಿ ಬೆಲೆ 85 ರೂ ಇದ್ದದ್ದು 92 ರೂಗೆ ಏರಿದೆ. ಇವೆರಡು ಲೋಹಗಳಿಗೆ ಬೆಲೆ ಏರಿಕೆ ಆಗುತ್ತಿರುವುದು ನಿರೀಕ್ಷಿತವೇ ಆಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಇಳಿಕೆ ಮಾಡುವ ಸುಳಿವು ದಟ್ಟವಾಗಿರುವುದರಿಂದ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 68,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,200 ರುಪಾಯಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,870 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,800 ರುಪಾಯಿ…
2019ರಲ್ಲಿ ತೆರೆಗೆ ಬಂದ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. 3ಡಿ 2ಮೋಡಿಯಲ್ಲಿ ಈ ಪೌರಾಣಿಕ ಯುದ್ಧದ ಸಿನಿಮಾವನ್ನು ನಿರ್ಮಾಪಕ ಮುನಿರತ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ರೆ, ಚಿತ್ರದಲ್ಲಿ ನಟ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ದರು. ಅಚ್ಚರಿ ಅಂದ್ರೆ ಈ ಸಿನಿಮಾದ ಇಬ್ಬರು ಈಗ ಜೈಲು ಸೇರಿದ್ದಾರೆ. ಹೌದು. ಕುರುಕ್ಷೇತ್ರ ಸಿನಿಮಾಗೆ ಬಂಡವಾಳ ಹೂಡಿದ್ದ ಮುನಿರತ್ನ ಹಾಗೂ ದುರ್ಯೋಧನನಾಗಿ ಅಬ್ಬರಿಸಿದ ದರ್ಶನ್ ಇಬ್ಬರು ಈಗ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಬಳ್ಳಾರಿ ಜೈಲು ಸೇರಿದ್ರೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ನಲ್ಲಿ ಮುನಿರತ್ನರನ್ನು ಬಂಧಿಸಲಾಗಿದೆ. ಮುನಿರತ್ನ ರಾಜಕೀಯದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಉತ್ತಮ ನಂಟು ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮುನಿರತ್ನ ಪ್ರತಿಷ್ಠಿತ ನಿರ್ಮಾಪಕ ಆಗಿದ್ದವರು. ಅಷ್ಟೇ ಅಲ್ಲ ನಿರ್ಮಾಪಕರ ಸಂಘದ ಅಧ್ಯಕ್ಷ ಕೂಡ ಆಗಿದ್ರು. 2002ರಲ್ಲಿ ಕಂಬಾಲಪಲ್ಲಿ ಅನ್ನೋ ಸಿನಿಮಾ ನಿರ್ಮಿಸೋ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಮುನಿರತ್ನ ಸ್ಯಾಂಡಲ್ ವುಡ್ ನ ಅನೇಕ…
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ. ಪ್ರಕರಣದ 18 ಆರೋಪಿಗಳಲ್ಲಿ ಎಂಟು ಆರೋಪಿಗಳಿಗೆ ಜಾಮೀನು ದೊರೆತಿದೆ. ಈ ಹಿಂದೆ ನಾಲ್ವರು ಆರೋಪಿಗಳು ಜಾಮೀನು ಪಡೆದಿದ್ದರು. ಆರೋಪಿಗಳಿಗೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. https://youtu.be/lLQ5Jy8LSpM?si=HzW_XY53G4ZsVu3M ಆರೋಪಿಗಳಾದ ಹುಕ್ಕೇರಿಯ ಭರತ್ ಭರತ್ ಜಯವಂತ ಕುರಾನೆ (42), ಮಹಾರಾಷ್ಟ್ರದ ಶ್ರೀಕಾಂತ್ ಪಂಗರ್ಕರ್ (48), ಶಿಕಾರಿಪುರದ ಸುಜಿತ್ ಕುಮಾರ್ (42), ಮಹಾರಾಷ್ಟ್ರದ ಸತಾರದ ಸುಧನ್ವ ಗೊಂಧಲೇಕರ್ (43) ಜಾಮೀನು ಪಡೆದರು. ಆರೋಪಿಗಳ ವಿರುದ್ಧ 2017 ರಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು 2018 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಈ ಎಲ್ಲ ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲ ದಿನ ಆರೋಪಿಗಳು…
ನಟಿಯರು ಚಿತ್ರರಂಗದಲ್ಲಿ ತಮಗಾಗುತ್ತಿರುವ ದೌರ್ಜನ್ಯಗಳು ಕುರಿತು ಮೌನ ಮುರಿಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ತಾವು ಅನುಭವಿಸಿದ ನೋವುಗಳ ಬಗ್ಗೆ ಮಾತನಾಡಿದ್ದಾರೆ. ಇದೀಗ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಹಿಂದಿ ಚಿತ್ರರಂಗದ ಹೀರೋಗಳ ವಿರುದ್ಧ ಹರಿಹಾಯುತ್ತಾರೆ. ಚಿತ್ರರಂಗದಲ್ಲಿ ಅನೇಕರನ್ನು ಕಂಗನಾ ಎದುರು ಹಾಕಿಕೊಂಡಿದ್ದಾರೆ. ಇದೀಗ ನಟಿ ಬಾಲಿವುಡ್ ನಟರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್ ಹೀರೋಗಳೇ ನಟಿಯರಿಗೆ ಕಿರುಕುಳ ನೀಡುತ್ತಾರೆ ಎಂದಿದ್ದಾರೆ. ‘ಆ ಹೀರೋಗಳು ಮಹಿಳೆಯರಿಗೆ ಹೇಗೆ ಕಿರುಕುಳ ನೀಡುತ್ತಾರೆ ಗೊತ್ತಾ? ಅವರು ಊಟಕ್ಕೆ ಕರೆಯುತ್ತಾರೆ, ಮೆಸೇಜ್ ಮಾಡುತ್ತಾರೆ ನಂತರ ಮನೆಗೆ ಬರುವಂತೆ ಹೇಳುತ್ತಾರೆ’ ಎಂದಿದ್ದಾರೆ ಕಂಗನಾ ರಣಾವತ್. ಕಂಗನಾ ಅವರು ಈ ರೀತಿಯ ಅನೇಕ ಆರೋಪಗಳನ್ನು ಈ ಮೊದಲು ಕೂಡ ಮಾಡಿದ್ದರು. ‘ಕೋಲ್ಕತ್ತಾ ರೇಪ್ ಹಾಗೂ ಮರ್ಡರ್ ಕೇಸ್ ನೋಡಿ. ನನಗೆ ಬರುತ್ತಿರುವ ಅತ್ಯಾಚಾರ ಬೆದರಿಕೆಗಳನ್ನು ನೋಡಿ. ನಾವು ಮಹಿಳೆಯರಿಗೆ ಗೌರವ ಕೊಡಲ್ಲ ಅನ್ನೋದು ಗೊತ್ತು. ಸಿನಿಮಾ ರಂಗ ಬೇರೆ ರೀತಿ ಇಲ್ಲ. ಕಾಲೇಜು…
ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಬಳಿಕ ರಿಯಲ್ ಲೈಫ್ ನಲ್ಲೂ ಒಂದಾಗಿದ್ದರು. ಇದೀಗ ಈ ಜೋಡಿ ಮೊದಲ ಮಗುವಿನ ಆಗಮನದ ಖುಷಿಯಲ್ಲಿದೆ. ಚಂದನ್ ಕುಮಾರ್ ಮುದ್ದು ಮಡದಿ ಕವಿತಾ ಗೌಡಗೆ ಅದ್ದೂರಿಯಾಗಿ ಸೀಮಂತ ಶಸ್ತ್ರ ಮಾಡಿದ್ದಾರೆ. ಕವಿತಾ ಗೌಡ ಸೀಮಂತದಲ್ಲಿ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ನಟ ನಟಿಯರು ಕೂಡ ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದರು. ನಟಿ ಕವಿತಾ ಗೌಡ ಸೀಮಂತದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಸೀರೆಯುಟ್ಟು ಕವಿತಾ ಗೌಡ ಸಾಕಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದರು. ಮತ್ತೊಂದು ಪಿಂಕ್ ಕಲರ್ ಸೀರಿಯಲ್ಲಿ ಪತಿ ಚಂದನ್ ಜೊತೆ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕವಿತಾ ಶೇರ್ ಮಾಡಿರುವ ಫೋಟೋಗಳಿಗೆ ಲೈಕ್ ಗಳ ಸುರಿಮಳೆ ಆಗಿದೆ. ಅನೇಕರು ಚಂದನ್-ಕವಿತಾ ಜೋಡಿಗೆ ಶುಭಕೋರಿದ್ದಾರೆ. ಅನೇಕ ನಟ-ನಟಿಯರು ತುಂಬು ಗರ್ಭಿಣಿಯನ್ನು ಹಾರೈಸಿದ್ದಾರೆ. ನಟಿ ಕವಿತಾ ಗೌಡ ಅವರ ಸೀಮಂತ ಶಾಸ್ತ್ರದ ಚಿತ್ರರಂಗ ಅನೇಕರು ಭಾಗಿಯಾಗಿದ್ರು. ಸ್ಯಾಂಡಲ್ವುಡ್…
ಚಾಮರಾಜನಗರ:- ಜಿಲ್ಲೆಯ ಹನೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜಿನಕನಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ನಿಶಾಂತ್ ವಿರುದ್ದ ಸ್ಥಳೀಯ ಗ್ರಾಮಸ್ಥರು ಮತ್ತು ಕೆಲ ಬಿಜೆಪಿ ಕಾರ್ಯರ್ತರು ತಿರುಗಿದ್ದ ಬಿದ್ದ ಪ್ರಸಂಗ ಜರುಗಿದೆ. ಈ ಹಿಂದೆ ನೆಡೆದಂತಹ ಚುನಾವಣಾಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದೆ ಪ್ರಸ್ತುತ್ತ ಬಿಜೆಪಿ ಸಂಘಟನೆ ಮಾಡುತ್ತೇವೆ ಎಂದು ಗ್ರಾಮಕ್ಕೆ ಬಂದಿರುವುದು ಎಷ್ಟರಮಟ್ಟಿಗೆ ಸರಿ ಎಂದು ನಿಶಾಂತ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಪರ ಕೆಲಸ ಮಾಡಬೇಕಾದೆ ಅಭಿಯಾನದಲ್ಲಿ ಪಾಲ್ಗೊಂಡಿದ್ದೀಯಾ ನಡೀ ಊರಿಂದ ಆಚೆ ಎಂದು ಓಡಿಸಿದ್ದಾರೆ. ಸ್ಥಳೀಯ ಬಿಜೆಪಿಗರು ಹಾಗೂ ಮುಖಂಡರ ಗಲಾಟೆಗೆ ಹೆದರಿ ನಿಶಾಂತ ಅಲ್ಲಿಂದ ಜಾಗ ಮಾಡುವಂತಾಗಿದೆ. ಬಿಜೆಪಿ ಸದಸ್ಯ ಅಭಿಯಾನ ಇರಲಿ ಸದ್ಯಕ್ಕೆ ತಾನು ಬಚಾವಾದ್ರೆ ಸಾಕು ಅಂತ ನಿಶಾಂತ್ ಓಡಿಹೋದ ಘಟನೆ ನಡೆದಿದೆ.
ಕೋಲಾರ:- ಪ್ಯಾಲೆಸ್ಟೈನ್ ಬಾವುಟ ಹಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಅಂಜುಮನ್ ಸಂಸ್ಥೆ ಬಳಿ ಫ್ರೀ ಪ್ಯಾಲೆಸ್ಟೈನ್ ಧ್ವಜ ಹಾರಾಟ ಮತ್ತು ಕ್ಲಾಕ್ ಟವರ್ ಬಳಿ ಮೆರವಣಿಗೆ ಬಂದಾಗ ನಡೆದ ಗುಂಪು ಘರ್ಷಣೆ ವಿಚಾರವಾಗಿ ಪ್ರಕರಣ ದಾಖಲಾಗಿವೆ. ಗಲಾಟೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೋಲಾರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಇನ್ನೂ ಈದ್ ಮಿಲಾದ್ ಮೆರವಣಿಗೆ ವೇಳೆ ಫ್ರೀ ಪ್ಯಾಲೆಸ್ಟೈನ್ ಎನ್ನುವ ಧ್ವಜ ಹಾರಾಡಿತ್ತು. ಎಂ.ಜಿ ರಸ್ತೆಯಲ್ಲಿರುವ ಅಂಜುಮನ್ ಕಛೇರಿಯ ಬಳಿ ಧ್ವಜಾರೋಹಣ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಮೆರವಣಿಗೆಯಲ್ಲಿ ಫ್ರೀ ಪ್ಯಾಲೆಸ್ಟೈನ್ ಎಂದು ಧ್ವಜದ ಮೇಲೆ ಬರೆಯಲಾಗಿತ್ತು. ಬರಹ ಕಾಣಿಸಿದ್ದೇ ತಡ ಕೂಡಲೇ ಪೊಲೀಸರು ಆ ಬಾವುಟವನ್ನು ತೆಗೆಸಿದ್ದಾರೆ.
ಚಾಮರಾಜನಗರ:- ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಬಳಿ 60 ವರ್ಷದ ಕಾಡಾನೆ ಮೃತ ದೇಹ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹನೂರು ತಾಲೂಕಿನ ಬೈಲೂರು ವನ್ಯಜೀವಿ ವಲಯ, ಪಿ.ಜಿ.ಪಾಳ್ಯ ಶಾಖೆ, ಮಾವತ್ತೂರು ‘ಎ’ ಗಸ್ತಿನಲ್ಲಿ ಸಿಬ್ಬಂದಿಗಳಿಗೆ ಬಿದಿರು ಕೆರೆ ಅರಣ್ಯ ಪ್ರದೇಶದಲ್ಲಿ ಮೃತ ಆನೆ ಪತ್ತೆಯಾಗಿದೆ. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರು, ಮಾರ್ಗದರ್ಶನದ ಅನ್ವಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕೆ. ಸುರೇಶ್, ವಲಯ ಅರಣ್ಯ ಅಧಿಕಾರಿ ಪ್ರಮೋದ್ ಎ.,ರವರ ಸಮಕ್ಷಮ ಹಾಗೂ ಸಿಬ್ಬಂದಿಯವರು ಹಾಜರಾತಿಯಲ್ಲಿ ನಿಯಮಾನುಸಾರ ಇಲಾಖಾ ಪಶುವೈದ್ಯಾಧಿಕಾರಿ ಡಾ| ವಾಸಿಂ ಮಿರ್ಜಾ ರವರು ಮೃತ ಆನೆಯ ಮರಣೋತ್ತರ ಶವ ಪರೀಕ್ಷೆ ನಡೆಸಿದರು. ಒಂದೆರಡು ದಿನದ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿರುವುದೆಂದು ಖಚಿತಪಡಿಸಿಕೊಳ್ಳಲಾಯಿತು. ನಿಯಮಾನುಸಾರ ಅಂತ್ಯ ಕ್ರಿಯೆ ನಡೆಯಿತು. ಇತ್ತೀಚೆಗೆ ಬಂಡೀಪುರ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಚಿತ ಅರಣ್ಯ ಪ್ರದೇಶ ಹಾಗೂ ಮಲೆಮಹದೇಶ್ವರಬೆಟ್ಟ ಅರಣ್ಯಗಳಲ್ಲಿ ಆನೆಗಳು ಹಲವು…
ಮುಂದಿನ ತಿಂಗಳು ನಡೆಯಲಿರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಮಧ್ಯೆ ಸಾಕಷ್ಟು ಫೈಫೋಟಿ ನಡೆಯುತ್ತಿದೆ. ಈ ಮಧ್ಯೆ ಎರಡು ಭಾರಿ ಟ್ರಂಪ್ ಹತ್ಯೆಗೆ ವಿಪಲ ಯತ್ನ ನಡೆಸಲಾಗಿದೆ. ಇದೀಗ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಹೇಳಿಕೆಯೊಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಯಾರೂ ಹತ್ಯೆ ಮಾಡಲು ಪ್ರಯತ್ನಿಸುತ್ತಿಲ್ಲವೇಕೆ ಎಂದು ಪ್ರಶ್ನಿಸುವ ಮೂಲಕ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ವಿವಾದಕ್ಕೀಡಾಗಿದ್ದಾರೆ . ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಎರಡನೇ ಬಾರಿಗೆ ಹತ್ಯೆ ಯತ್ನ ನಡೆದ ನಂತರ ಮಸ್ಕ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದು ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಫ್ಲೋರಿಡಾದ ಗಾಲ್ಫ್ ಕೋರ್ಸ್ ಹೊರಗೆ ಟ್ರಂಪ್ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದ್ದು, ಇದು ಅವರ ಮೇಲೆ ನಡೆದ ಎರಡನೇ ಗುಂಡಿನ ದಾಳಿಯಾಗಿದೆ. ಟ್ರಂಪ್ ಅವರನ್ನು…