ಬೆಂಗಳೂರು:- ಕೊಂಕಣ ರೈಲ್ವೆ ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆ ಜೊತೆ ವಿಲೀನವಾಗಲಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.ಕೊಂಕಣ ರೈಲ್ವೆ ಜಾಲವು ಕೇರಳದಿಂದ ಮಹಾರಾಷ್ಟ್ರದವರೆಗೆ ವ್ಯಾಪಿಸಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಒಟ್ಟು 742 ಕಿ.ಮೀ. ಕ್ರಮಿಸುತ್ತದೆ ಎಂದು ಸೋಮಣ್ಣ ತಿಳಿಸಿದರು. ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಹೀಗಾಗಿ ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು ವಿಲೀನ ವಿಚಾರವಾಗಿ ನಾವು ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ, ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರದ ಶೇ 50ರಷ್ಟು ಕೊಡುಗೆಯೊಂದಿಗೆ ರಾಜ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ದೊರೆಯುವುದಿಲ್ಲ. ಈ ಕಾರಣಕ್ಕೆ ಎಲ್ಲಾ ವೆಚ್ಚವನ್ನು ಕೇಂದ್ರವೇ ಭರಿಸಲು ನಿರ್ಧರಿಸಿದೆ ಎಂದು ಸೋಮಣ್ಣ ತಿಳಿಸಿದರು. ರಾಜ್ಯದ ಹಲವು ಬಾಕಿ ಇರುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು.…
Author: Prajatv Kannada
ಅಫ್ಘಾನಿಸ್ಥಾನದಲ್ಲಿ ಪೋಲಿಯೋ ಲಸಿಕೆ ಅಭಿಯಾನ ನಡೆಸದಂತೆ ತಾಲಿಬಾನ್ ನಿಷೇಧ ಹೇರಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಪೋಲಿಯೋ ಕಾರಣದಿಂದ ಉಂಟಾಗಬಹುದಾದ ಪಾರ್ಶ್ವವಾಯು ಅಫ್ಘಾನಿಸ್ಥಾನದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಇದಕ್ಕೆ ಅಂತ್ಯ ಹಾಡಲು ಅಘ್ಘಾನಿಸ್ತಾನ ಸಮ್ಮತಿ ಸೂಚಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಪೋಲಿಯೋ ಕಾರಣದಿಂದ ಉಂಟಾಗಬಹುದಾದ ಪಾರ್ಶ್ವವಾಯುವಿಗೆ ಅಫ್ಘಾನಿಸ್ಥಾನದಲ್ಲಿ ಅಂತ್ಯ ಹಾಡಲು ವಿಶ್ವಸಂಸ್ಥೇ ನಿರ್ಧರಿಸಿತ್ತು. ಆದರೆ ಅದಕ್ಕೂ ಮೊದಲೇ ತಾಲಿಬಾನ್ ಈ ಘೋಷಣೆ ಮಾಡಿದೆ. ಈ ನಿಷೇಧಕ್ಕೆ ತಾಲಿಬಾನ್ ಯಾವುದೇ ಕಾರಣ ನೀಡಿಲ್ಲ ಹಾಗೂ ಪ್ರತಿಕ್ರಿಯೆಗೂ ಲಭ್ಯವಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಅಫ್ಘಾನಿಸ್ಥಾನ ದಲ್ಲೂ ಪೋಲಿಯೋದಿಂದ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಲ್ಲಿಯೂ ಈ ಅಭಿಯಾನಕ್ಕೆ ಹಿಂಸಾ ಚಾರಗಳು ತಡೆಯೊಡ್ಡುತ್ತಲೇ ಇರುತ್ತವೆ.
ಹೇಮಾ ಸಮಿತಿಯ ವರದಿ ಹೊರ ಬಿದ್ದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಆಗಿದೆ. ಈಗಾಗಲೇ ಸಾಕಷ್ಟು ಹಿರಿಯ ತಲೆಗಳ ತಲೆದಂಡವಾಗಿದೆ. ಈ ಮಧ್ಯೆ ಸ್ಯಾಂಡಲ್‌ವುಡ್‌ನಲ್ಲಿಯೂ ಹೇಮಾ ರೀತಿಯಲ್ಲಿ ಸಮಿತಿ ರಚನೆ ಆಗಬೇಕು ಎಂದ ಫಿಲ್ಮ್ ಚೇಂಬರ್ ಸಭೆ ಆಯೋಜಿಸಿದೆ. ಈ ಮೀಟಿಂಗ್‌ನಲ್ಲಿ ಭಾಗಿಯಾದ ಭಾವನಾ ರಾಮಣ್ಣ ಫೈರ್ ಸಂಸ್ಥೆ ವಿರುದ್ಧ ಗರಂ ಆಗಿದ್ದಾರೆ. ಹೇಮಾ ಸಮಿತಿ ರೀತಿ ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಡ, ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಎಂದಿದ್ದಾರೆ. ಮಹಿಳಾ ಆಯೋಗದ ಹಾಗೂ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಮಾನ ಮನಸ್ಕರು ಗ್ರೂಪ್ ಮಾಡ್ಕೊಂಡು, ಅದಕ್ಕೆ `ಫೈರ್’ ಎಂದು ಹೆಸರಿಟ್ಟು ಸಂಸ್ಥೆ ಎಂದು ಬಿಂಬಿಸಿದ್ದಾರೆ. ಕಾಸ್ಟಿಂಗ್ ಕೌಚ್‌ನ ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ. ಹೆಣ್ಣು ಅಂದಾಗ ಸಮಸ್ಯೆಗಳು ಬರೋದು ಸಹಜನೇ, ಸಿನಿಮಾರಂಗ ಅಂದ್ಮೇಲೆ ಅದು ಇದ್ದೇ ಇರುತ್ತೆ. ಇನ್ನೂ 100 ಮದುವೆಯಲ್ಲಿ 10 ಮದುವೆ ಉಳಿದರೆ ಹೆಚ್ಚಾಗಿದೆ. ಬೇರೇ ರೀತಿಯ…
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿಯಾದ ಬಳಿಕ ಬೇರೆ ಬೇರೆ ಇಂಡಸ್ಟ್ರಿಯಲ್ಲೂ ಈ ರೀತಿಯ ಸಮಿತಿ ರಚನೆಯಾಗಬೇಕು ಎಂಬ ಕೂಗು ಕೇಳಿ ಬರ್ತಿದೆ. ಈ ಮೂಲಕ ಸಾಕಷ್ಟು ನಟಿಯರು ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದಿಂದ ಮುಕ್ತಿ ಭಯಸುತ್ತಿದ್ದಾರೆ. ಅದೇ ರೀತಿ ಕನ್ನಡದಲ್ಲೂ ಒಂದು ಸಮಿತಿ ಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಸಾಕಷ್ಟು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಭಾಗಿಯಾದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ‘ಚಿತ್ರರಂಗಕ್ಕೆ ಹೆಣ್ಣು ಮಕ್ಕಳು ಬರುತ್ತಾರೆ ಎಂದರೆ ತಂದೆ-ತಾಯಿ ಸುಲಭದಲ್ಲಿ ಕಳುಹಿಸಬೇಕು. ಆ ರೀತಿ ಚಿತ್ರರಂಗ ಆಗಬೇಕು. ಎಲ್ಲರೂ ಡಾಕ್ಟರ್ ಆಗಿ, ಇಂಜಿನಿಯರ್ ಆಗಿ ಎನ್ನುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ನಟನೆಗೆ ಹೋಗಿ ಎಂದು ಹೇಳುತ್ತಾರೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರ್ತಾರಾ ಎಂಬ ಪ್ರಶ್ನೆ ಮೂಡುವಂತೆ ಆಗಿದೆ’ ಎಂದಿದ್ದಾರೆ ನಾಗಲಕ್ಷ್ಮಿ. ‘ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತಿದೆ.…
ರಾಷ್ಟ್ರ ಪ್ರಶಸ್ತಿ ವಿಜೇತ ಡ್ಯಾನ್ಸ್ ಕೊರಿಯೋಗ್ರಾಫರ್ ಶೇಖ್ ಜಾನಿ ಬಾಷಾ ಜಾನಿ ಮಾಸ್ಟರ್ ಎಂದೇ ಖ್ಯಾತಿ ಘಳಿಸಿದ್ದಾರೆ. ತಮ್ಮ ಡ್ಯಾನ್ಸ್ ಗಳ ಮೂಲಕವೇ ಸಾಕಷ್ಟು ಖ್ಯಾತಿ ಘಳಿಸಿದ್ದ ಜಾನಿ ಮಾಸ್ಟರ್ ವಿರುದ್ಧ ಇದೀಗ ಅತ್ಯಾಚಾರ ಆರೋಪ ಕೇಳಿ ಬಂದಿದ್ದು ದೂರು ದಾಖಲಾಗಿದೆ. ಜಾನಿ ಮಾಸ್ಟರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ಅನೇಕ ಸಿನಿಮಾಗಳಿಗೆ ಡ್ಯಾನ್ಸ್ ಕೊರಯೋಗ್ರಾಫ್ ಮಾಡಿದ್ದಾರೆ. ಅವರು ಕೊರಿಯೋಗ್ರಾಫಿ ಮಾಡಿದ ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’, ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ..’ ಸೇರಿ ಅನೇಕ ಹಾಡುಗಳು ಹಿಟ್ ಆಗಿವೆ. ಇದೀಗ ಜಾನಿ ಮಾಸ್ಟರ್ ಹೆಸರು ಲೈಂಗಿಕ ಕಿರುಕುಳದಲ್ಲಿ ಕೇಳಿ ಬಂದಿದೆ. ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿರುವ 21 ವರ್ಷದ ಯುವತಿ ಈ ಆರೋಪ ಮಾಡಿದ್ದಾರೆ. ಹಲವು ವರ್ಷಗಳಿಂದ ಅವರು ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿದ್ದಾರೆ. ಅವರು ದೇಶದ ನಾನಾ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಕ್ಕಾಗಿ ತೆರಳಿದಾಗ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ.…
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಸಲ್ಲಿಸಿದ ಬಳಿಕ ಸಾಕಷ್ಟು ನಟಿಯರು ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ. ಮಲಯಾಳಂ ಜೊತೆಗೆ ಪರಭಾಷೆಯ ನಟಿಯರು ತಮಗಾದ ಕೆಟ್ಟ ಅನುಭವಗಳ ಕುರಿತು ದೂರು ನೀಡುತ್ತಿದ್ದಾರೆ. ಇದೀಗ ಮುಂಬೈ ಮೂಲದ ಕಾದಂಬರಿ ಜೆತ್ವಾನಿ ಅವರು ಆಂಧ್ರ ಪ್ರದೇಶದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ಆ ಮೂವರನ್ನು ಅಮಾನತು ಮಾಡಲಾಗಿದೆ. ಕಾದಂಬರಿ ಅವರು ಕನ್ನಡದಲ್ಲಿ ‘ಊಜಾ’ ಹೆಸರಿನ ಸಿನಿಮಾ ಮಾಡಿದ್ದಾರೆ. ತೆಲುಗಿನಲ್ಲಿ ‘ಆಟ’, ಮಲಯಾಳಂನಲ್ಲಿ ‘ಐ ಲವ್ ಯೂ’ ಹೆಸರಿನ ಸಿನಿಮಾ ಮಾಡಿದ್ದಾರೆ. ಇದರ ಜೊತೆಗೆ ತೆಲುಗು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಇದೀಗ ನಟಿ ತಮಗಾಧ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ತಮನ್ನು ಕಾನೂನು ಬಾಹೀರವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಅಮಾನತುಗೊಂಡ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಪರಾಧವನ್ನು ದಾಖಲಿಸುವ ಮೊದಲೇ ನಟಿಯನ್ನು ಬಂಧಿಸಲು ಆದೇಶ ನೀಡಿದ್ದರು. ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸದೆ ಈ ಮೌಖಿಕ…
ರಾಜಧಾನಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ https://youtu.be/qi-S1m3ZteQ?si=SdrNfD_sagEwq_31 ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ 220/66/11 ಕೆ.ವಿ ಹೆಬ್ಬಾಳ ಸ್ವೀಕರಣಾ ಕೇಂದ್ರದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವೀಕರಣಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಮಂಗಳವಾರ ಜಯಮಹಲ್ ವಿಸ್ತರಣೆ, ನಂದಿ ದುರ್ಗಾ, ದೂರದರ್ಶನ, ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಜೆ.ಸಿ.ನಗರ, ಮಾರಪ್ಪ ಗಾರ್ಡನ್, ಚಿನಪ್ಪ ಗಾರ್ಡನ್, ಎನ್.ಡಿ.ರಸ್ತೆ ಏರ್‌ಟೆಲ್ ಸಮೀಪದ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂ ವಿದ್ಯುತ್ ಸ್ಟೇಷನ್ ಕಾಮಗಾರಿ ಹಿನ್ನೆಲೆ ನಾಳೆ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಕವಿಪ್ರನಿನಿ ಬೃಹತ್ ಕಾಮಗಾರಿ ವಿಭಾಗದವರು ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1 ರವರೆಗೆ ಚಿಂತಾಮಣಿ-ತಳಗವಾರ ಮಾರ್ಗದಲ್ಲಿನಾನಾ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಆದುದರಿಂದ 66 / 11 ಕೆವಿ 66 / 11 ಕೆವಿ ಚೀಮಂಗಲ, ವೇಮಗಲ್, ಕ್ಯಾಲನೂರು, ತಲಗುಂದ ಮತ್ತು ತಳಗವಾರ…
ಹಾಸನ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ ಓಡಾಡಿದರೆ, ಇನ್ನೊಂದು ಕಡೆ ಗ್ರಾಮದೊಳಗೆಲ್ಲಾ ಕಾಡಾನೆಗಳ ಹಿಂಡು ಓಡಾಡುತ್ತಿರುವ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ. https://youtu.be/YE7Of7pElEo?si=TQmVLhGghEFbixvM ಬೇಲೂರು ತಾಲೂಕಿನಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ, ಸಂಜೆಯಾದರೆ ಸಾಕು ಗಜಪಡೆ ಗ್ರಾಮದೊಳಗೆ ಬರುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಇದರಿಂದ ಜಮೀನು, ಕಾಫಿ ತೋಟಕ್ಕೆ ತೆರಳಲು ರೈತರು ಹಾಗೂ ಕಾಫಿ ಬೆಳೆಗಾರರು ಭಯಪಡುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಗ್ರಾಮಕ್ಕೆ ಬರುತ್ತಿರುವುದು ಅಪಾಯ ಉಂಟು ಮಾಡುತ್ತಿದ್ದು, ಭತ್ತ, ಅಡಿಕೆ, ಬಾಳೆ, ಕಾಫಿ ಬೆಳೆಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿಗಳು ಸ್ಥಳಕ್ಕೆ ಮೊಕ್ಕಾಂ ಹೂಡಿದ್ದಾರೆ. ಮೈಕ್ ಮೂಲಕ ಪ್ರಕಟಣೆ ನೀಡುತ್ತಾ ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡುತ್ತಿದ್ದಾರೆ.