Author: Prajatv Kannada

ಖ್ಯಾತ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌ ಅವರು ಪರಮಾಣು ಸಂಶೋಧನೆ ಒತ್ತು ನೀಡುವಂತೆ ಅಮೆರಿಕ ಅಧ್ಯಕ್ಷರಿಗೆ ಬರೆದಿದ್ದ ಪತ್ರ ದುಬಾರಿ ಬೆಲೆಗೆ ಮಾರಾಟವಾಗಿದೆ. ಐನ್ ಸ್ಟೈನ್ 1939ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರೂಸ್‌‍ವೆಲ್ಟ್ ಅವರಿಗೆ ಪತ್ರ ಬರೆದು ಪರಮಾಣು ಸಂಶೋಧನೆಗೆ ಆಧ್ಯತೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಆ ಪತ್ರ 3.9 ಮಿಲಿಯನ್‌ ಡಾಲರ್‌ಗೆ ಮಾರಾಟವಾಗಿದೆ. ಈಗ ನ್ಯೂಯಾರ್ಕ್‌ನಲ್ಲಿರುವ ಫ್ರಾಂಕ್ಲಿನ್‌ ಡಿ. ರೂಸ್‌‍ವೆಲ್ಟ್‌‍ ಲೈಬ್ರರಿಯ ಸಂಗ್ರಹದ ಭಾಗವಾಗಿರುವ ಮೂಲ ಪತ್ರವು ಜರ್ಮನಿಯು ಪರಮಾಣು ಶಸಾತ್ರಸ್ತ್ರಗಳನ್ನು ಅಭಿವದ್ಧಿಪಡಿಸುತ್ತಿದೆ ಎಂದು ಅಧ್ಯಕ್ಷ ರೂಸ್‌‍ವೆಲ್ಟ್ ಗೆ ಎಚ್ಚರಿಕೆ ನೀಡಲು ಐನ್‌ಸ್ಟೈನ್‌ ಮಾಡಿದ ಪ್ರಯತ್ನವಾಗಿದೆ. ಪತ್ರದಲ್ಲಿ, ಐನ್‌ಸ್ಟೈನ್‌ ಪರಮಾಣು ಭೌತಶಾಸ್ತ್ರದಲ್ಲಿನ ಇತ್ತೀಚಿನ ಪ್ರಗತಿಗಳನ್ನು ಚರ್ಚಿಸಿದರು, ಯುರೇನಿಯಂ ಶಕ್ತಿಯ ಹೊಸ ಮತ್ತು ಪ್ರಮುಖ ಮೂಲ ಆಗಬಹುದು ಮತ್ತು ಈ ಶಕ್ತಿಯನ್ನು ಅತ್ಯಂತ ಶಕ್ತಿಯುತ ಬಾಂಬ್‌ಗಳನ್ನು ರಚಿಸಲು ಬಳಸಿಕೊಳ್ಳಬಹುದು ಎಂದಿದ್ದರು. ಅಡಾಲ್ಫ್‌‍ ಹಿಟ್ಲರನ ಉದಯದಿಂದಾಗಿ ಐನ್‌ಸ್ಟೈನ್‌ ಸಹ ಭೌತವಿಜ್ಞಾನಿ ಲಿಯೋ ಸಿಲಾರ್ಡ್‌ ಜೊತೆಗೆ ಯುರೋಪ್‌ನಿಂದ ಪಲಾಯನ ಮಾಡಿದ್ದರು. ತುರ್ತು ಪ್ರಜ್ಞೆಯನ್ನು ಅನುಭವಿಸಿದ…

Read More

ನೈಜೀರಿಯಾದ ಝಂಫರಾ ನದಿಯಲ್ಲಿ ಭೀಕರ ದುರಂತ ಸಂಭವಿಸಿದೆ. ದೋಣಿ ಮುಳುಗಿ ಕನಿಷ್ಠ 64 ರೈತರು ಸಾವನ್ನಪ್ಪಿದ್ದಾರೆ. ರೈತರು ಹೊಲಗಳಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ವಾಯವ್ಯ ನೈಜೀರಿಯಾದ ಝಂಫರಾ ರಾಜ್ಯದ ಗುಮ್ಮಿ ಪಟ್ಟಣದ ಬಳಿ ಶನಿವಾರ ಬೆಳಗ್ಗೆ 70 ರೈತರನ್ನು ತಮ್ಮ ಹೊಲಗಳಿಗೆ ಸಾಗಿಸುತ್ತಿದ್ದ ಮರದ ದೋಣಿಯೊಂದು ಹಠಾತ್ ಪಲ್ಟಿಯಾಗಿದೆ. ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೂರು ಗಂಟೆಗಳ ನಂತರ, ಆರು ಮಂದಿಯಲ್ಲಿ ರಕ್ಷಣೆ ಮಾಡಲಾಗಿದೆ. ಗುಮ್ಮಿ ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿ ಇದು ಎರಡನೇ ಘಟನೆಯಾಗಿದೆ ಎಂದು ಪರಿಹಾರ ಕಾರ್ಯಗಳ ನೇತೃತ್ವ ವಹಿಸಿದ್ದ ಸ್ಥಳೀಯ ಆಡಳಿತಾಧಿಕಾರಿ ಅಮಿನು ನುಹು ಫಲಾಲೆ ವಿವರಿಸಿದರು. 900ಕ್ಕೂ ಹೆಚ್ಚು ರೈತರು ನಿತ್ಯ ನದಿ ದಾಟಿ ತಮ್ಮ ಹೊಲಗಳಿಗೆ ಹೋಗುತ್ತಾರೆ. ಆದರೆ ಎರಡು ದೋಣಿಗಳು ಮಾತ್ರ ಲಭ್ಯವಿವೆ. ಇದರಿಂದ ಆಗಾಗ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಮರದ ದೋಣಿಗಳೂ ಆಗಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ವಿವರಿಸುತ್ತಾರೆ. ಖನಿಜ ಸಂಪನ್ಮೂಲಗಳ…

Read More

ಕೆಲವು ಕೆಲವು ದಿನಗಳಿಂದ ಅಭಿಶೇಕ್ ಅಂಬರೀಶ್ ತಂದೆಯಾಗುತ್ತಿದ್ದಾರೆ, ರೆಬೆಲ್ ಸ್ಟಾರ್ ಕುಟುಂಬಕ್ಕೆ ಮುದ್ದು ಕಂದನ ಆಗಮನವಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ. ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಅವಿವಾ ಬಿದ್ದಪ್ಪ ಹೊಸ ಫೋಟೋ ಹಂಚಿಕೊಂಡಿದ್ದು ಫೋಟೋದಲ್ಲಿ ಅವಿವಾ ಸಖತ್ ಗ್ಲೋ ಆಗಿ ಕಾಣಿಸುತ್ತಿದ್ದಾರೆ. ಇತ್ತೀಚೆಗೆ ಅವಿವಾ-ಅಭಿಷೇಕ್ ವಿದೇಶದಲ್ಲಿ ಟ್ರಿಪ್ ಹೋಗಿದ್ದ ವೀಡಿಯೋವನ್ನ ಶೇರ್ ಮಾಡಿದ್ದರು. ಆ ವೀಡಿಯೋದಲ್ಲೂ ಅವಿವಾ ಸೆಲ್ಫಿ ಹೊರತಾಗಿ ಹೊಟ್ಟೆ ಭಾಗವನ್ನ ಕಾಣಿಸಿರಲಿಲ್ಲ. ಹೀಗಾಗಿ ಅವಿವಾ ಗರ್ಭಿಣಿ ಅನ್ನೋ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಆದರೆ ಇದೀಗ ಅಭಿಷೇಕ್ ಪತ್ನಿ ಅವಿವಾ ಬಿದಪ್ಪ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಅವಿವಾ ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ಫೋಟೋಗೆ ಸಾಕಷ್ಟು ಮಂದಿ ಕಾಮೆಂಟ್ಸ್​ ಹಾಕಿದ್ದಾರೆ. ನೋಡಿ ಆ ಗ್ಲೋ ಹೇಗಿದೆ. ಕ್ಯೂಟ್​ ಬ್ಯೂಟಿ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೆ ದರ್ಶನ್ ಜೈಲಿನಿಂದ ಹೊರ ಬರುಲು ಹವಣಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ ಬದಲಾಗಿಲ್ಲ,ಜೈಲಿನಲ್ಲಿ ಕಿರಿಕ್ ಮಾಡಿಕೊಳ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಇದೀಗ ಅಪರಿಚಿತ ವ್ಯಕ್ತಿಯೋರ್ವ ದರ್ಶನ್ ಮನ ಪರಿವರ್ತನೆಗಾಗಿ ಜೈಲಿಗೆ ಹನುಮಾನ ಚಾಲಿಸ್ ಪುಸ್ತಕವೊಂದು ಕಳುಹಿಸಿದ್ದಾನೆ. ವ್ಯಕ್ತಿಯೋರ್ವ ದರ್ಶನ್​​ಗೆ ಪಾರ್ಸೆಲ್ ಮೂಲಕ ಹನುಮಾನ್ ಚಾಲಿಸ್ ಪುಸ್ತಕ ಕಳುಹಿಸಿದ್ದಾನೆ. ದರ್ಶನ್ ಜೈಲಿನಲ್ಲಾದ್ರು ಈ ಪುಸ್ತಕ ಓದಿ ಮನಪರಿವರ್ತನೆಯಾಗಲಿ ಅಂತ ಪುಸ್ತಕ ಕಳುಹಿಸಿದ್ದಾನೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದಿನ ಕಳೆಯುತ್ತಿರುವ ದರ್ಶನ್​ಗೆ ಅಪರಿಚಿತ ವ್ಯಕ್ತಿ ಹನುಮಾನ್ ಚಾಲಿಸ್ ಪುಸ್ತಕ ಕಳುಹಿಸಿದ್ದಾನೆ. ಪಾರ್ಸಲ್ ಮೂಲಕ ಬಂದ ಪುಸ್ತಕವನ್ನ ಪರಿಶೀಲನೆ ಮಾಡಿದ ಸಿಬ್ಬಂದಿ ದರ್ಶನ್‌ಗೆ ತಲುಪಿಸಿದ್ದಾರೆ. ಹನುಮನ ಆರ್ಶೀವಾದ ನಿಮ್ಮ ಮೇಲಿರಲು ಪುಸ್ತಕ ಓದಿರಿ ಒಳ್ಳೆದಾಗುತ್ತೆ ಅಂತಾ ಬರೆದು ಕಳುಹಿಸಲಾಗಿದೆ. ಸದ್ಯ ದರ್ಶನ್​​ ಬಳ್ಳಾರಿ ಜೈಲಿಗೆ ಬಂದು 17 ದಿನಗಳನ್ನು ಕಳೆದಿದ್ದಾರೆ. ಒಂದರ ಮೇಲೊಂದರಂತೆ ಬೇಡಿಕೆ ಇಡುತ್ತಿದ್ದಾರೆ.…

Read More

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ದರ್ಶನ್ ಅಲ್ಲಿನ ರಾಜಾತಿಥ್ಯದಿಂದ ಬಳ್ಳಾರಿ ಜೈಲು ಸೇರಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಶಿಸ್ತಿನ ನಿಯಮಗಳನ್ನು ಪಾಲಿಸಬೇಕಿದ್ದು. ಕೆಲವು ಸಮಸ್ಯೆಗಳು ದರ್ಶನ್​ಗೆ ಕಾಡುತ್ತಿವೆ. ಕೆಲವು ಸೌಲಭ್ಯಗಳಿಗಾಗಿ ದರ್ಶನ್ ಜೈಲಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದಾರೆ. ಈ ಹಿಂದೆ ಟಿವಿ ಬೇಕು, ವೆಸ್ಟರ್ನ್ ಟಾಯ್ಲೆಟ್ ಬೇಕು ಎಂದಿದ್ದ ದರ್ಶನ್ ಇದೀಗ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾಗ ಮನೆ ಆಹಾರ, ಬೆಡ್​ ಮತ್ತು ಬೆಡ್​ಶೀಟ್​, ಪುಸ್ತಕಗಳಿಗಾಗಿ ದರ್ಶನ್ ಬೇಡಿಕೆ ಇಟ್ಟಿದ್ದರು, ಹೈಕೋರ್ಟ್ ಮೆಟ್ಟಿಲು ಸಹ ಏರಿದರು. ಆದರೆ ಅಲ್ಲಿ ಆ ಸೌಲಭ್ಯಗಳ್ಯಾವುವೂ ಸಿಕ್ಕಿರಲಿಲ್ಲ. ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್​ಗೆ ಯಾವ ಸೌಲಭ್ಯವೂ ಇಲ್ಲದಾಗಿದೆ. ಇಲ್ಲಿ ತೀರ ಇತ್ತೀಚೆಗಷ್ಟೆ ಹಳೆಯ ಟಿವಿ ಒಂದನ್ನು ನೀಡಲಾಗಿದೆ. ಇದೀಗ ದರ್ಶನ್ ಮತ್ತೊಂದು ಸೌಲಭ್ಯಕ್ಕೆ ಮನವಿ ಮಾಡಿದ್ದಾರೆ, ಆದರೆ ಜೈಲು ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ. ದರ್ಶನ್​ ಜೈಲು ಸೇರಿದಾಗಿನಿಂದಲೂ ಅವರಿಗೆ ನಿದ್ದೆ ಸಮಸ್ಯೆ ಕಾಡುತ್ತಿದೆ. ಪರಪ್ಪನ ಅಗ್ರಹಾರ…

Read More

ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಆಚರಿಸುತ್ತಾರೆ. ಅದೇ ರೀತಿ ಕೇರಳದಲ್ಲಿ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಸಂದರ್ಭದಲ್ಲಿ ಓಣಂ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಆಚರಣೆಗೆ ಒಂದು ಇತಿಹಾಸವಿದ್ದು, ಈ ಕುರಿತು ಇಲ್ಲಿದೆ ಮಾಹಿತಿ. ಇಂದಿನಿಂದ ಕೇರಳದಲ್ಲಿ 10 ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಕೇರಳದ ಎಲ್ಲರಿಗೂ ಇದು ಬಹಳ ದೊಡ್ಡ ಹಬ್ಬ. ಈ ಹಬ್ಬಕ್ಕೆ ಒಂದು ಇತಿಹಾಸವಿದೆ. ರಾಜ ಮಹಾಬಲಿ ಓಣಂ ಹಬ್ಬದಂದು ಪಾತಾಳ ಲೋಕದಿಂದ ಭೂಮಿಗೆ ವಾಪಾಸ್ ಬರುತ್ತಾನೆ ಎಂದು ಮಲೆಯಾಳಿಗರು ನಂಬುತ್ತಾರೆ. ಓಣಂ ಹಬ್ಬದ ಸಂಪೂರ್ಣ ಇತಿಹಾಸ ಇಲ್ಲಿದೆ. ​2024 ರಲ್ಲಿ ಓಣಂ ಹಬ್ಬ ಯಾವಾಗ.?​ 2024 ರ ಓಣಂ ಹಬ್ಬವು ಸೆಪ್ಟೆಂಬರ್ 6 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 15 ರಂದು ಕೊನೆಗೊಳ್ಳುತ್ತದೆ. ಮುಖ್ಯ ದಿನವಾದ ತಿರುವೋಣಂ ಸಹ ಸೆಪ್ಟೆಂಬರ್ 15 ರಂದು ಇರುತ್ತದೆ. ಓಣಂ ಹಬ್ಬವು ಆಟಂನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಚಿತಿರಾದೊಂದಿಗೆ ಮುಕ್ತಾಯವಾಗುತ್ತದೆ. ಇತರ ದಿನಗಳಲ್ಲಿ ಚೋಡಿ, ವಿಶಾಕಂ, ಅನಿಜಂ, ತ್ರಿಕೇತ, ಮೂಲಂ,…

Read More

ಹಿಂದೆ ನಡೆದ ಐರ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಿಂದ ಸ್ಟಾರ್ ಸ್ಪಿನ್ನರ್‌ ರಶೀದ್‌ ಖಾನ್‌ ವಿಶ್ರಾಂತಿ ತೆಗೆದುಕೊಂಡಿದ್ದರು. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಸೇರಿಕೊಂಡಿರವುದು ಅಫಘಾನಿಸ್ತಾನದ ಪಡೆಯ ಬಲ ಹೆಚ್ಚಿಸಿದೆ. ಮೊಹಮ್ಮದ್ ನಬಿ ಮತ್ತು ಫಝಲ್ಹಕ್‌ ಫಾರೂಕಿ ಜೊತೆಗೂಡಿ ತಂಡದ ಬೌಲಿಂಗ್‌ ದಾಳಿಯನ್ನು ರಶೀದ್ ಖಾನ್‌ ಮುನ್ನಡೆಸಲಿದ್ದಾರೆ. ಹೌದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಆತಿಥ್ಯದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಸಲುವಾಗಿ ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ (ಎಸಿಬಿ) ತನ್ನ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಸರಣಿ ಆರಂಭಕ್ಕೂ ಮುನ್ನ ಗಾಯದ ಸಮಸ್ಯೆಗಳ ಕಾರಣ ಕೆಲ ಪ್ರಮುಖ ಆಟಗಾರರ ಸೇವೆಯನ್ನು ಅಫಘಾನಿಸ್ತಾನ ತಂಡ ಕಳೆದುಕೊಂಡಿದೆಯಾದರೂ, ಸ್ಟಾರ್ ಸ್ಪಿನ್ನರ್‌ ರಶೀದ್‌ ಖಾನ್‌ ಕಮ್‌ಬ್ಯಾಕ್‌ ಮಾಡಿರುವುದು ತಂಡದ ಬಲ ಹೆಚ್ಚುವಂತೆ ಮಾಡಿದೆ. ಸ್ಟಾರ್‌ ಬ್ಯಾಟರ್‌ ಹಷ್ಮತ್‌ಉಲ್ಲಾ ಶಾಹಿದಿ ಅಫಘಾನಿಸ್ತಾನ ಒಡಿಐ ತಂಡವನ್ನು ಮುನ್ನಡೆಸಲಿದ್ದಾರೆ, ರೆಹಮತ್‌ ಶಾ ಅವರಿಗೆ ವೈಸ್‌ ಕ್ಯಾಪ್ಟನ್‌ ಜವಾಬ್ದಾರಿ…

Read More

ಡೈಮಂಡ್ ಲೀಗ್​ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್​ನಲ್ಲಿ ನೀರಜ್ ಚೋಪ್ರಾ ಕಣಕ್ಕಿಳಿಯಲಿದ್ದಾರೆ. ಭಾನುವಾರ ನಡೆಯಲಿರುವ ಸ್ವಿಟ್ಜರ್ಲೆಂಡ್‌ನ ಲೂಝನ್​ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತದ ಚಿನ್ನದ ಹುಡುಗ ಇತರೆ 6 ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಆಗಸ್ಟ್ 24 ರಂದು ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಸೀಸನ್ ಬೆಸ್ಟ್ ಥ್ರೋ ಎಸೆದಿದ್ದರು. 89.49 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಭಾರತೀಯ ತಾರೆ ದ್ವಿತೀಯ ಸ್ಥಾನವನ್ನು ಪಡೆದಿದ್ದರು. ಅಂದರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ಎಸೆದಿದ್ದ ನೀರಜ್ ಡೈಮಂಡ್ ಲೀಗ್​ನಲ್ಲಿ 89.49 ಮೀಟರ್ ದೂರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ 26ರ ಹರೆಯದ ಗ್ರೆನಡಾದ ಅಯಂಡರ್ಸನ್ ಪೀಟರ್ಸ್ ಅವರು 90.81 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದರು. ಹಾಗೆಯೇ ಜರ್ಮನಿಯ ಜೂಲಿಯನ್ ವೆಬರ್ 87.08 ಮೀಟರ್ ಎಸೆದು ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ಅದರಂತೆ ಇದೀಗ ಅರ್ಹತಾ ಸುತ್ತಿನಲ್ಲಿ ಮೊದಲ 7…

Read More

ನವದೆಹಲಿ:- ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ. ಕುರುಕ್ಷೇತ್ರದಲ್ಲಿ ನಡೆದ ರ್ಯಾಲಿಯ ವೇಳೆ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಗಣಪತಿಯನ್ನು ಕೂಡ ಕಂಬಿ ಹಿಂದೆ ಹಾಕಲಾಗಿದೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಎಂದು ಕಾಂಗ್ರೆಸ್​ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಮೀಸಲಾತಿ ವಿರೋಧಿಯಾಗಿದೆ. ಕಾಂಗ್ರೆಸ್ ದಿನಕ್ಕೊಂದು ಹೊಸ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳಲು ಕಾಂಗ್ರೆಸ್‌ಗೆ ನಾಚಿಕೆ ಆಗುವುದಿಲ್ಲವೇ? ದೇಶದ ಏಕತೆ ಮೇಲೆ ಕಾಂಗ್ರೆಸ್​ನಿಂದ ನಿರಂತರ ದಾಳಿ ನಡೆಯುತ್ತಿದೆ. ಕೇವಲ ಬಿಜೆಪಿಗೆ ಮಾನಹಾನಿ ಮಾಡುವ ಉದ್ದೇಶದಿಂದ ದೇಶದ ಮಾನಹಾನಿ ಮಾಡಲು ನಾಚಿಕೆಯಾಗುವುದಿಲ್ವಾ? ಇದು ಹಳೆಯ ಕಾಂಗ್ರೆಸ್ ಅಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಈಗ ಮೊದಲಿನ ಕಾಂಗ್ರೆಸ್ ಆಗಿ ಉಳಿದಿಲ್ಲ. ಇಂದಿನ ಕಾಂಗ್ರೆಸ್ ನಗರ ನಕ್ಸಲ್​​ನ ಹೊಸ ರೂಪವಾಗಿದೆ ಎಂದು ಕಾಂಗ್ರೆಸ್​ ವಿರುದ್ಧ ಪ್ರಧಾನಿ ನರೇಂದ್ರ…

Read More

ಜೈಪುರ್: ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಮುಂಜಾನೆ ಕಾರು ಮತ್ತು ಅಪರಿಚಿತ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಪುರ ರಾಷ್ಟ್ರೀಯ ಹೆದ್ದಾರಿಯ ಹಿಂದೋಲಿ ಬಳಿ ಮುಂಜಾನೆ 4:30ರ ವೇಳೆಗೆ ಈ ಅಪಘಾತ ನಡೆದಿದೆ. ಯಾತ್ರಿಕರು ಉತ್ತರ ಪ್ರದೇಶದ ದೇವಾಸ್ ನಿವಾಸಿಗಳು ಎಂದು ತಿಳಿದು ಬಂದಿದೆ. ಅವರೆಲ್ಲ ಸಿಕಾರ್ ಜಿಲ್ಲೆಯ ಖತು ಶ್ಯಾಮ್ ದೇವಸ್ಥಾನಕ್ಕೆ ತೆರಳುತ್ತಿದ್ದರು. ಮಾರುತಿ ಸುಜುಕಿ ಇಕೋ ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿಗೆ ಡಿಕ್ಕಿಯಾದ ಅಪರಿಚಿತ ವಾಹನದ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದೇವೆ ಎಂದು ಬುಂಡಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಶರ್ಮಾ ತಿಳಿಸಿದ್ದಾರೆ. ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತದೇಹಗಳ ಗುರುತು ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More