ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಬಂಧನವಾಗಿ ಮೂರು ತಿಂಗಳಾಗಿವೆ. ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾಗಿದೆ. ಕೆಲ ಆರೋಪಿಗಳು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಲು ತಯಾರಾಗಿದ್ದಾರೆ. https://youtu.be/Jumh-Nk_S18?si=d7neK4xc1DxqrvjP ಇನ್ನೂ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಮಾಧ್ಯಮಗಳ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿ ಅಸಹ್ಯಕರ ಸಂಜ್ಞೆ ಮಾಡಿದ್ದರು ಎಂಬ ದೃಶ್ಯ ವೈರಲ್ ಬೆನ್ನೆಲ್ಲೆ ನಟದ ಫ್ಯಾನ್‌ಗಳ ಅಧಿಕೃತ ಪುಟ ಡಿ ಕಂಪನಿ ಸ್ಪಷ್ಟನೆ ನೀಡಿದೆ. ಡಿ ಬಾಸ್ ಮಾಡಿದ್ದ ವಿಘ್ನ ಹರ ಮುದ್ರೆ ಹೊರತು ಅಸಹ್ಯಕರ ಸಂಜ್ಞೆಯಲ್ಲ ಎಂದು ಹೇಳಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಕುಟುಂಬಸ್ಥರನ್ನು ಭೇಟಿ ಮಾಡಲು ಸೆಲ್‌ನಿಂದ ಹೊರ ಬರುವ ವೇಳೆ ಕ್ಯಾಮರಾಗಳಿಗೆ ಕೈನ ಮಧ್ಯದ ಬೆರಳನ್ನು ಮುಂದೆ ಮಾಡಿ ಉಳಿದ ಬೆರಳುಗಳನ್ನು ಮಡಿಚಿಟ್ಟುಕೊಂಡಿದ್ದರು. ಇದು ಅಸಹ್ಯಕರ ಸಂಜ್ಞೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಉಂಟು ಮಾಡಿತ್ತು. ದರ್ಶನ್ ನಡುವಳಿಕೆ ಸುಧಾರಿಸಿಲ್ಲ ಮಾಧ್ಯಮಗಳು ತನ್ನ ವಿರುದ್ಧ ಸುದ್ದಿ ಬಿತ್ತರ ಮಾಡುತ್ತಿರುವುದಕ್ಕೆ ಈ ರೀತಿ ಅಸಹನೆ…
Author: Prajatv Kannada
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಡಿ BJP ಶಾಸಕ ಮುನಿರತ್ನ ವಿರುದ್ಧ ಎರಡು FIR ದಾಖಲಾಗಿದೆ. https://youtu.be/SIs6zDF-MgU?si=FUlXgmawlvwwEq6r ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ. ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಎ1 ಶಾಸಕ ಮುನಿರತ್ನ ಆಗಿದ್ದಾರೆ. ಎ1 ಶಾಸಕ ಮುನಿರತ್ನ, ಎ2 ಆಪ್ತ ಸಹಾಯಕ ವಿಜಯ್ ಕುಮರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ. ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದರು. ಜೊತೆಗೆ ತನಗೆ ರಕ್ಷಣ ನೀಡುವಂತೆ ಮನವಿ ಮಾಡಿದ್ದರು.ಶಾಸಕ ಮುನಿರತ್ನ ಅವರು ಸೆಪ್ಟೆಂಬರ್ 9 ರಂದು 20 ಲಕ್ಷ ಹಣ ಕೇಳಿದ್ದರು. ಹಣ ನೀಡಿದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಮುನಿರತ್ನ ಅವರಿಗೆ ನೋಟಿಸ್ ನೀಡಲು…
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಬಂಧನವಾಗಿ ಮೂರು ತಿಂಗಳಾಗಿವೆ. ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾಗಿದೆ. ಕೆಲ ಆರೋಪಿಗಳು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಲು ತಯಾರಾಗಿದ್ದಾರೆ. ಇನ್ನೂ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಮಾಧ್ಯಮಗಳ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿ ಅಸಹ್ಯಕರ ಸಂಜ್ಞೆ ಮಾಡಿದ್ದರು ಎಂಬ ದೃಶ್ಯ ವೈರಲ್ ಬೆನ್ನೆಲ್ಲೆ ನಟದ ಫ್ಯಾನ್‌ಗಳ ಅಧಿಕೃತ ಪುಟ ಡಿ ಕಂಪನಿ ಸ್ಪಷ್ಟನೆ ನೀಡಿದೆ. ಡಿ ಬಾಸ್ ಮಾಡಿದ್ದ ವಿಘ್ನ ಹರ ಮುದ್ರೆ ಹೊರತು ಅಸಹ್ಯಕರ ಸಂಜ್ಞೆಯಲ್ಲ ಎಂದು ಹೇಳಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಕುಟುಂಬಸ್ಥರನ್ನು ಭೇಟಿ ಮಾಡಲು ಸೆಲ್‌ನಿಂದ ಹೊರ ಬರುವ ವೇಳೆ ಕ್ಯಾಮರಾಗಳಿಗೆ ಕೈನ ಮಧ್ಯದ ಬೆರಳನ್ನು ಮುಂದೆ ಮಾಡಿ ಉಳಿದ ಬೆರಳುಗಳನ್ನು ಮಡಿಚಿಟ್ಟುಕೊಂಡಿದ್ದರು. ಇದು ಅಸಹ್ಯಕರ ಸಂಜ್ಞೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಉಂಟು ಮಾಡಿತ್ತು. ದರ್ಶನ್ ನಡುವಳಿಕೆ ಸುಧಾರಿಸಿಲ್ಲ ಮಾಧ್ಯಮಗಳು ತನ್ನ ವಿರುದ್ಧ ಸುದ್ದಿ ಬಿತ್ತರ ಮಾಡುತ್ತಿರುವುದಕ್ಕೆ ಈ ರೀತಿ ಅಸಹನೆ ತೋರಿದ್ದಾರೆ…
ಬೆಂಗಳೂರು:- ಮಗಳಿಂದಲೇ ತಾಯಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಈ ಸಂಬಂಧ ಮಾತನಾಡಿದ ಅವರು, ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ದಾಖಲಿಸ್ತೀವಿ. ಕೊಲೆಯಾಗಿರೋ ಮಹಿಳೆ 46 ವರ್ಷದ ಮಹಿಳೆ ಜಯಲಕ್ಷ್ಮೀ. ಒಬ್ಬ ಮಹಿಳೆ ಮತ್ತು ಪುರುಷನನ್ನು ಬಂಧನ ಮಾಡಿದ್ದೀವಿ. ಆರಂಭದಲ್ಲಿ ಕೊಲೆಯಾಗಿರೋ ಶಂಕೆಯಿತ್ತು. ನಂತರ ಪೋಸ್ಟ್ ಮಾರ್ಟಮ್ ಮೂಲಕ ಕೊಲೆ ಆಗಿರೋದು ಕನ್ಫರ್ಮ್ ಆಗಿದೆ. ಆರಂಭದಲ್ಲಿ ಮಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದರು. ತಾಯಿಕೆ ಆರೋಗ್ಯ ಸರಿ ಇರಲಿಲ್ಲ ಅನಂತರ ಬಿದ್ದು ಸಾವಾಗಿದ್ದಾರೆ ಎಂದಿದ್ದರು. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರು:- ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿ ಎಸ್ಐಟಿ 1691 ಪುಟಗಳ ಚಾರ್ಜ್ಶೀಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಎಸ್ಐಟಿ ಚಾರ್ಜ್ಶೀಟ್ನಲ್ಲಿ ಪ್ರಜ್ವಲ್ ರೇವಣ್ಣ ಕಾಮಕಾಂಡ ಬಯಲಾಗಿದೆ. ಪತಿಯನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿ ಜೆಡಿಎಸ್ ಪಕ್ಷದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಪ್ರಜ್ವಲ್ ರೇವಣ ಅತ್ಯಾಚಾರ ಎಸಗಿರುವುದು ಎಸ್ಐಟಿ ತನಿಖೆಯಲ್ಲಿ ಸಾಬೀತಾಗಿದೆ.
ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು ಹಾಗೂ ಕ್ರಮಾಂಕ ಬದಲಿಸಿಕೊಳ್ಳಲು ಇದುವರೆಗೂ ನೀಡಿದ್ದ ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಕೊನೆಗೊಳಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾತನಾಡಿ, ಈ ಸಲುವಾಗಿ ತೆರೆದಿದ್ದ ಕೆಇಎ (KEA) ಪೋರ್ಟಲ್ ಅನ್ನು ಸ್ಥಗಿತಗೊಳಿಸಿದ್ದು, ಯಾವ ಬದಲಾವಣೆಗೂ ಅವಕಾಶ ಇರುವುದಿಲ್ಲ. ಈ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಪೂರ್ವ ತಯಾರಿ ಆರಂಭಿಸಿದಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಡಿ BJP ಶಾಸಕ ಮುನಿರತ್ನ ವಿರುದ್ಧ ಎರಡು FIR ದಾಖಲಾಗಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ. ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಎ1 ಶಾಸಕ ಮುನಿರತ್ನ ಆಗಿದ್ದಾರೆ. ಎ1 ಶಾಸಕ ಮುನಿರತ್ನ, ಎ2 ಆಪ್ತ ಸಹಾಯಕ ವಿಜಯ್ ಕುಮರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ. ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದರು. ಜೊತೆಗೆ ತನಗೆ ರಕ್ಷಣ ನೀಡುವಂತೆ ಮನವಿ ಮಾಡಿದ್ದರು. ಶಾಸಕ ಮುನಿರತ್ನ ಅವರು ಸೆಪ್ಟೆಂಬರ್ 9 ರಂದು 20 ಲಕ್ಷ ಹಣ ಕೇಳಿದ್ದರು. ಹಣ ನೀಡಿದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಮುನಿರತ್ನ ಅವರಿಗೆ ನೋಟಿಸ್ ನೀಡಲು…
ಕೆಲವು ಪುರುಷರು ಕೆಲವು ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಅದರಲ್ಲೂ ಹೆಚ್ಚಾಗಿ ವಯಸ್ಸಾಗಿರುವ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಹಾಗಂತ ಎಲ್ಲಾ ಪುರುಷರು ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುವುದಿಲ್ಲ. ಈ ಗುಣಗಳಿದ್ದರೆ ಮಾತ್ರ ವಯಸ್ಸಿನ ಭೇದವಿಲ್ಲದೆ ತಮಗಿಂತ ಹೆಚ್ಚು ವಯಸ್ಸಾಗಿರುವ ಮಹಿಳೆಯರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಮೆಚ್ಯೂರಿಟಿ ಮೆನ್: ಮೆಚ್ಯೂರಿಟಿ ಎಂದರೆ ವಯಸ್ಸಾದ ಮಹಿಳೆಯರನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಹೆಚ್ಚು ಪ್ರಬುದ್ಧರಾಗಿರುವವರು ವಯಸ್ಸಾದ ಮಹಿಳೆಯರಿಗೆ ಆದ್ಯತೆ ನೀಡುತ್ತಾರೆ. ಇವರು ತಮ್ಮ ಆಲೋಚನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಮತ್ತು ಮುಕ್ತ ಸಂಭಾಷಣೆಗಳನ್ನು ಹೊಂದುವಲ್ಲಿ ಪ್ರವೀಣರಾಗಿರುತ್ತಾರೆ ಆತ್ಮವಿಶ್ವಾಸ: ತಮ್ಮಲ್ಲಿ ಮತ್ತು ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುವ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುವುದನ್ನು ಸಮಸ್ಯೆಯಾಗಿ ಪರಿಗಣಿಸುವುದಿಲ್ಲ. ಆತ್ಮವಿಶ್ವಾಸವುಳ್ಳವರು ಸಾಮಾನ್ಯವಾಗಿ ವಯಸ್ಸಾದ ಮಹಿಳೆಯರತ್ತ ಬೇಗ ಆಕರ್ಷಕರಾಗುತ್ತಾರೆ. ಅವರು ಏನೇ ಆಗಿರಲಿ, ಅವರು ತುಂಬಾ ಆರಾಮದಾಯಕವಾಗುತ್ತಾರೆ, ಇತರರಿಗಾಗಿ ಬದಲಾಗಬೇಕು ಎಂಬ ಟೆನ್ಷನ್ ಇರುವುದಿಲ್ಲ ಮತ್ತು ಆ ವಿಶ್ವಾಸವನ್ನು ಅವರು ಇತರರಿಗೆ ರವಾನಿಸುತ್ತಾರೆ. ಸ್ವತಂತ್ರವಾಗಿರುವುದು: ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ಅವರು ಇಷ್ಟಪಟ್ಟವರೊಂದಿಗೆ ಮುಕ್ತವಾಗಿರಲು…
ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಅಂತಹ ರೋಗಿಗಳ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯು ಹೆಚ್ಚು ಅಥವಾ ಕಡಿಮೆ ಇರುತ್ತದೆ. ಇನ್ಸುಲಿನ್ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇನ್ಸುಲಿನ್ ಅಸಮತೋಲನದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಸಮತೋಲನಗೊಳ್ಳುತ್ತದೆ. ಮಧುಮೇಹದಿಂದ ಬಳಲುತ್ತಿರುವ ಪ್ರಮುಖ ಕಾರಣವೆಂದರೆ ತಪ್ಪು ಜೀವನಶೈಲಿ. ಒಬ್ಬ ವ್ಯಕ್ತಿಗೆ ಒಮ್ಮೆ ಮಧುಮೇಹ ಬಂದರೆ, ತನ್ನ ಜೀವನದುದ್ದಕ್ಕೂ ಅದರ ಹೊರೆ ಹೊರಬೇಕಾಗುತ್ತದೆ. ಈ ಅಪಾಯಕಾರಿ ರೋಗವನ್ನು ತಪ್ಪಿಸಲು, ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪ್ರಸ್ತುತ, ಮಧುಮೇಹದ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಟೈಪ್ 2 ಮಧುಮೇಹಕ್ಕೆ ಕರಿಮೆಣಸು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಟೈಪ್ 2 ಮಧುಮೇಹದಲ್ಲಿ, ಇನ್ಸುಲಿನ್ ಉತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣಗಳೆಂದು ಪರಿಗಣಿಸಲಾಗಿದೆ. ಕರಿಮೆಣಸಿನ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಕರಿಮೆಣಸು ಮಾತ್ರವಲ್ಲ, ಮಧುಮೇಹವನ್ನು ನಿಯಂತ್ರಣದಲ್ಲಿಡಲು ಹಲವಾರು ಮಸಾಲೆಗಳಿವೆ. ಕರಿಮೆಣಸಿನ ಸಹಾಯದಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯಬಹುದು. ಇದನ್ನು…
ಚೆನ್ನೈ: ಫೋರ್ಡ್ ಮೋಟಾರ್ ಕಂಪೆನಿಯು ತಮಿಳುನಾಡಿನಲ್ಲಿ ರಫ್ತು ಮಾಡಲು ಉತ್ಪಾದನಾ ಘಟಕವನ್ನು ಮರುಪ್ರಾರಂಭಿಸಲು ಯೋಜಿಸಿದೆ ಎಂದು ತಿಳಿಸಿದೆ. ಮುಂಬರುವ ಎರಡು ವರ್ಷದಲ್ಲಿ ಘಟಕ ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಮೂರು ವರ್ಷಗಳ ಹಿಂದೆ ನಿರ್ಗಮಿಸಿದ ಮಾರುಕಟ್ಟೆಯನ್ನು ಮರುಪ್ರವೇಶಿಸುವ ಸಾಧ್ಯತೆಯಿದೆ. ಫೋರ್ಡ್ 2021ರಲ್ಲಿ ದೇಶೀಯ ಮಾರಾಟಕ್ಕಾಗಿ ಭಾರತದಲ್ಲಿ ಕಾರುಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಭಾರತಕ್ಕೆ ಮರಳಿದೆ. ರಾಜ್ಯದಲ್ಲಿ ರಫ್ತಿಗಾಗಿ ಉತ್ಪಾದನೆಯನ್ನು ಪುನರಾರಂಭಿಸಲು ಕಂಪನಿ ಹಾಗೂ ತಮಿಳುನಾಡು ಸರ್ಕಾರ ಈ ಕುರಿತು ನಿರ್ಧರಿಸಿದೆ. ಇದಾದ ಬಳಿಕ ಕಂಪನಿಯು ರಾಜ್ಯ ಸರ್ಕಾರಕ್ಕೆ ಉದ್ದೇಶ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದೆ. ಈ ಕ್ರಮವು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲು ಉತ್ಪಾದನೆಯ ಮೇಲೆ ಕೇಂದ್ರೀಕರಿಸಲು ಸೌಲಭ್ಯವನ್ನು ಮರು ನಿಯೋಜಿಸಲಾಗುತ್ತದೆ ಎಂದಿದೆ. ಇದಾದ ಬಳಿಕ ಕಾರುಗಳು ಮತ್ತು ಇತರ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಕಂಪನಿ ತಿಳಿಸಿದೆ.