ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕು ಮಹಾರಾಜ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಡಕಾಯಿತನ ಗೆಟಪ್‌ನಲ್ಲಿ ಬಾಲಯ್ಯ ಖಡಕ್ ಎಂಟ್ರಿ ಕೊಟ್ಟಿದ್ದು ಟೀಸರ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಇದು ರಾಜ್ಯವೇ ಇಲ್ಲದೇ ಯುದ್ಧ ಮಾಡಿದ ರಾಜನ ಕಥೆ. ಸಾವಿಗೆ ನಡುಕ ಹುಟ್ಟಿಸಿದ ಮಹಾರಾಜನ ಕಥೆಯಿದು ಎಂದು ಬಾಲಯ್ಯ ಅವರ ಪಾತ್ರಕ್ಕೆ ಇಂಟ್ರೊಡಕ್ಷನ್ ನೀಡಲಾಗಿದೆ. ಕಪ್ಪು ಬಣ್ಣದ ಧಿರಿಸಿನಲ್ಲಿ ಡಕಾಯಿತನ ಗೆಟಪ್‌ನಲ್ಲಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಾಬಿ ಡಿಯೋಲ್ ಅವರು ವಿಲನ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ‘ಡಾಕು ಮಹಾರಾಜ್’ ಸಿನಿಮಾಗೆ ಬಾಬಿ ಕೊಲ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ನ ಕೊನೆಯಲ್ಲಿ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆಯೂ ಅಪ್ಡೇಟ್ ನೀಡಲಾಗಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ (ಜನವರಿ 12) ‘ಡಾಕು ಮಹಾರಾಜ್’ ಸಿನಿಮಾ ತೆರೆಕಾಣಲಿದೆ. ನಂದಮೂರಿ ಬಾಲಕೃಷ್ಣ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ‘ಡಾಕು ಮಹಾರಾಜ್’ ಸಿನಿಮಾದಲ್ಲಿ…
Author: Prajatv Kannada
ಬಾಲಿವುಡ್ ಖ್ಯಾತ ನಟಿ ಅಮೀಷಾ ಪಟೇಲ್ ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. 2023ರಲ್ಲಿ ತೆರೆಕಂಡ ಗದರ್ 2 ಸಿನಿಮಾದ ಬಳಿಕ ಅಮೀಷಾ ಸಿನಿಮಾಗಳಿಂದ ದೂರು ಉಳಿದಿದ್ದು ವೈಯಕ್ತಿಕ ವಿಚಾರವಾಗಿಯೇ ಹೆಚ್ಚು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ತನಗಿಂತ 19 ವರ್ಷ ಕಿರಿಯ ಉದ್ಯಮಿ ಜೊತೆ ಅಮೀಷಾ ಪಟೇಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಫೋಟೋವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಇತ್ತೀಚೆಗೆ ಉದ್ಯಮಿ ನಿರ್ವಾಣ್ ಬಿರ್ಲಾ ಅವರೊಂದಿಗಿನ ಖಾಸಗಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋವನ್ನು ಪೋಸ್ಟ್ ಮಾಡಿದ ನಟಿ, ‘ನನ್ನ ಡಾರ್ಲಿಂಗ್ ಜೊತೆ ಒಂದೊಳ್ಳೆಯ ಸಂಜೆ…’ ಎಂದು ಶೀರ್ಷಿಕೆ ನೀಡಿದ್ದಾರೆ. ನಟಿಯ ಫೋಟೋ ದುಬೈನಲ್ಲಿ ತೆಗೆಸಿಕೊಂಡಿರುವುದಾಗಿದೆ. ಫೋಟೋದಲ್ಲಿ ಅಮಿಷಾ ಮತ್ತು ನಿರ್ವಾಣ್ ಇಬ್ಬರೂ ಸಂತೋಷದಿಂದ ಇದ್ದಾರೆ. ಫೋಟೋದಲ್ಲಿ ಇಬ್ಬರೂ ಕಪ್ಪು ಬಟ್ಟೆ ಧರಿಸಿದ್ದಾರೆ. ಸದ್ಯ ಅಮಿಷಾ ಅವರ ಖಾಸಗಿ ಬದುಕಿನ ಬಗ್ಗೆ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇವರಿಬ್ಬರ ಫೋಟೋಗೆ ಅಭಿಮಾನಿಗಳು…
ಬಿಗ್ ಬಾಸ್ ನೀಡಿದ್ದ ಜೋಡಿ ಟಾಸ್ಕ್ ಮುಗಿದ ಬಳಿಕ ಬಾತ್ ರೂಮ್ ಏರಿಯಾದಲ್ಲಿ ಒಬ್ಬರೇ ಇದ್ದಾಗ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಕೂಡಲೇ ಚೈತ್ರಾ ನೆರವಿಗಾಗಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಅವರನ್ನು ಕಳಿಸಿದ್ದಾರೆ. ಅವರಿಬ್ಬರು ಓಡಿ ಬಂದು ನೋಡಿದಾಗ ಚೈತ್ರಾ ಕುಂದಾಪುರ ಅವರು ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ಕೂಡ ಬಂದರು. ಎಷ್ಟು ಪ್ರಯತ್ನಿಸಿದರೂ ಕೂಡ ಚೈತ್ರಾ ಅವರಿಗೆ ಪ್ರಜ್ಞೆ ಬಂದಿಲ್ಲ. ಇದರಿಂದ ಮನೆಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಚೈತ್ರಾ ಕುಂದಾಪುರ ಅವರ ಮುಖದ ಮೇಲೆ ನೀರು ಚಿಮುಕಿಸಲಾಯಿತು. ಆದರೂ ಸಹ ಅವರ ಎಚ್ಚರಗೊಳ್ಳಲಿಲ್ಲ. ಕೂಡಲೇ ಅವರನ್ನು ಕನ್ಫೆಷನ್ ರೂಮಿಗೆ ಕರೆದುಕೊಂಡು ಬರುವಂತೆ ಬಿಗ್ ಬಾಸ್ ಆದೇಶಿಸಿದರು. ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್ ರೂಮ್ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಚೈತ್ರಾ ಪರಿಸ್ಥಿತಿ ಗಂಭೀರವಾಗಿದ್ದಂತೆ ಕಾಣಿಸಿದೆ.…
ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಲಂಕಾದ ಅನುರ ಕುಮಾರ ಡಿಸ್ಸಾನಾಯಕೆ ಅವರ ನೇತೃತ್ವದ ಮೈತ್ರಿಕೂಟವು ಭರ್ಜರಿ ಜಯಗಳಿಸಿದೆ. ದಶಕಗಳಿಂದ ಕುಟುಂಬ ಪಕ್ಷಗಳ ಪ್ರಾಬಲ್ಯವಿರುವ ಶ್ರೀಲಂಕಾದಲ್ಲಿ ಡಿಸ್ಸಾನಾಯಕೆ ಅವರು ಸೆಪ್ಟೆಂಬರ್‌ನಲ್ಲಿ ನಡೆದ ದ್ವೀಪದ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಲಭವಾಗಿ ಗೆದ್ದಿದ್ದರು. ಆದರೆ ಅವರ ಮಾರ್ಕ್ಸ್‌ವಾದಿ ಪರ ಮೈತ್ರಿಕೂಟ ನ್ಯಾಷನಲ್ ಪೀಪಲ್ಸ್ ಪವರ್ (NPP), ಗುರುವಾರ ನಡೆದ ಚುನಾವಣೆಗೂ ಮೊದಲು ಸಂಸತ್ತಿನ 225 ಸ್ಥಾನಗಳಲ್ಲಿ ಕೇವಲ ಮೂರು ಸ್ಥಾನಗಳನ್ನು ಹೊಂದಿತ್ತು. ಹಾಗಾಗಿ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ಎದುರಿಸಲಾಗಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ NPP 107 ಸ್ಥಾನಗಳನ್ನು ಗೆದ್ದುಕೊಂಡಿದೆ. ಸುಮಾರು 62% ಮತಗಳನ್ನು ಪಡೆದು ಸಂಸತ್ತಿನಲ್ಲಿ ಬಹುಮತದ ಗಳಿಸಿದೆ ಎಂದು ಶ್ರೀಲಂಕಾದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಫಲಿತಾಂಶಗಳು ಖಚಿತಪಡಿಸಿದೆ. ಆ ಮೂಲಕ ಮೈತ್ರಿಕೂಟಕ್ಕೆ ಸರಳ ಬಹುಮತ ದೊರೆತಿದೆ. ಅನುಪಾತ ಪ್ರಾತಿನಿಧ್ಯ ವ್ಯವಸ್ಥೆಯಡಿಯಲ್ಲಿ 22 ಕ್ಷೇತ್ರಗಳಿಂದ 196 ಸದಸ್ಯರನ್ನು ಮತದಾರರು ನೇರವಾಗಿ ಸಂಸತ್ತಿಗೆ ಆಯ್ಕೆ ಮಾಡುತ್ತಾರೆ. ಉಳಿದ 29 ಸ್ಥಾನಗಳನ್ನು ಪ್ರತಿ ಪಕ್ಷವು ಪಡೆದ ದ್ವೀಪದ ಅನುಪಾತದ ಮತದ ಪ್ರಕಾರ…
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಜಾನವಿ ಪಾತ್ರದಲ್ಲಿ ಮಿಂಚುತ್ತಿರುವ ಚಂದನಾ ಅನಂತಕೃಷ್ಣ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ. ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್ ಇದೇ ನವೆಂಬರ್ 28ರಂದು ಮದುವೆ ಆಗುತ್ತಿದ್ದಾರೆ. ಚಂದನ ಭಾವಿ ಪತಿ ಪ್ರತ್ಯಕ್ಷ್ ಜೊತೆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ ಮತ್ತು ನಟಿ ಲಲಿತಾಂಜಲಿ ದಂಪತಿಯ ಪುತ್ರ ಪ್ರತ್ಯಕ್ಷ್ ನನ್ನು ಚಂದನಾ ಮದುವೆಯಾಗುತ್ತಿದ್ದಾರೆ. ಅಗ್ನಿಪರ್ವ, ಶುಭ ವಿಲನ, ಜಯಭೇರಿ, ಉದ್ಭವ, ಅಮೃತ ಬಿಂದು, ಶಿವಯೋಗಿ ಅಕ್ಕಮಹಾದೇವಿ, ಉಂಡು ಹೋದ ಕೊಂಡು ಹೋದ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಉದಯ್ ನಟಿಸಿದ್ದರು. ನಟಿ ಲಲಿತಾಂಜಲಿ ಕಿನ್ನರಿ ಮತ್ತು ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ಸ್ನೇಹಿತರು, ಸಂಬಂಧಿಕರು ಹಾಗೂ ಕಲಾವಿದರು ನಟಿ ಚಂದನಾ ಅವರ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ. ಚಂದನಾ ಅನಂತಕೃಷ್ಣ ಅವರು ಬಿಕಾಂ ಓದಿದ್ದಾರೆ. ರಾಜಾ ರಾಣಿ, ಮುದ್ದು ಮಣಿಗಳು ಸೀರಿಯಲ್…
ಹುಬ್ಬಳ್ಳಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು. ಇಂದು ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಸಂಚಾರ ಮಾಡುತ್ತಿದ್ದಾರೆ. https://youtu.be/UGajL4OWx54?si=MKNCWOMDq6flfWQt ಶಕ್ತಿ ಯೋಜನೆಗಾಗಿ ಬಜೆಟ್‌ನಲ್ಲಿ ರೂ. 5,500 ಕೋಟಿ ಹಣವನ್ನು ಮೀಸಲಿಡಲಾಗಿದೆ. ಶಕ್ತಿ ಯೋಜನೆಯಡಿ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕೆಎಸ್‌ಆರ್‌ಟಿಸಿ ಮೊದಲು ಒಂದು ಸಂಸ್ಥೆಯಾಗಿತ್ತು. ನಂತರ ಬಿಎಂಟಿಸಿ, ಕಲ್ಯಾಣ ಕರ್ನಾಟಕ, ವಾಯವ್ಯ ಕರ್ನಾಟಕ ಮತ್ತು ಕೆಎಸ್‌ಆರ್‌ಟಿಸಿ ಎಂಬ 4 ಸಂಸ್ಥೆಗಳಾಗಿ ಇಬ್ಭಾಗವಾಯಿತು. 4 ಸಂಸ್ಥೆಗಳು ಸೇರಿ ಒಟ್ಟು 26 ಸಾವಿರಕ್ಕೂ ಅಧಿಕ ಬಸ್‌ಗಳಿವೆ. 1.04 ಲಕ್ಷ ನೌಕರರಿದ್ದು, 10 ಸಾವಿರ ಜನರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ದೇಶದಲ್ಲಿಯೇ ಅತಿಹೆಚ್ಚು ಬಸ್‌ಗಳನ್ನು ಹೊಂದಿದ ಸಂಸ್ಥೆಗಳು ನಮ್ಮದಾಗಿವೆ. ಮಹಾರಾಷ್ಟç ರಾಜ್ಯ 2ನೇ ಸ್ಥಾನದಲ್ಲಿದೆ. 6,500 ಬಸ್‌ಗಳಿಗೆ ಆದೇಶ ಕೊಡಲಾಗಿತ್ತು. ಅದರಲ್ಲಿ 5,400 ಬಸ್‌ಗಳು ಈಗಾಗಲೇ…
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಆರೋಪಿ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ದರ್ಶನ್ ಮಧ್ಯಂತರ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. https://youtu.be/UGajL4OWx54?si=bcGNcoSKw4vFUmEx ಹೈಕೋರ್ಟ್ ವೈದ್ಯಕೀಯ ಚಿಕಿತ್ಸೆಗಾಗಿ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಈಗಾಗಲೇ ಜಾಮೀನು ಸಿಕ್ಕು ಮೂರು ವಾರಗಳೇ ಕಳೆದಿವೆ. ಈಗ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಪೊಲೀಸರು ಮುಂದಾಗಿದ್ದು, ಸರ್ಕಾರ ಸಹ ಮೇಲ್ಮನವಿ ಸಲ್ಲಿಕೆಗೆ ಅನುಮತಿ ನೀಡಿದೆ. ಹೀಗಾಗಿ ಎಸ್ ಪಿಪಿ ಪ್ರಸನ್ನಕುಮಾರ್ ಮೇಲ್ಮನವಿ ಅರ್ಜಿ ಸಿದ್ದಪಡಿಸಿದ್ದು, ಪೊಲೀಸ್ ಇಲಾಖೆಗೆ ಅರ್ಜಿ ಪ್ರತಿಯನ್ನು ನೀಡಿದ್ದಾರೆ. ಮತ್ತೊಂದೆಡೆ ಪೋಲೀಸರಿಂದ ಕೆಲ ದಾಖಲೆಗಳ ಭಾಷಾಂತರ ಕಾರ್ಯ ನಡೆಯುತ್ತಿದ್ದು, ದಾಖಲೆಗಳ ಭಾಷಾಂತರ ಕೆಲಸ ಮುಗಿದ ಬಳಿಕ ಎಸ್‌ಎಲ್ಪಿ ಸಲ್ಲಿಕೆಗೆ ಸಿದ್ದತೆ ನಡೆಸಲಾಗುತ್ತಿದ್ದು, ಸೋಮವಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ಮೈಸೂರು: ನಾನು ಜಮೀರ್ ಅಹ್ಮದ್ರನ್ನು ಎಂದೂ ಕುಳ್ಳ ಎಂದು ಕರೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಜಮೀರ್ ಅಹ್ಮದ್ರನ್ನು ಎಂದೂ ಕುಳ್ಳ ಎಂದು ಕರೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. https://youtu.be/T7aTE_dL5bc?si=XUPI2UlcT7JVjZBu ತಾಯಿ ಚಾಮುಂಡೇಶ್ವರಿ ಮುಂದೆ ನಿಂತಿದ್ದೇನೆ ಸತ್ಯವನ್ನೇ ಹೇಳುತ್ತಿದ್ದೇನೆ ಎಂದರು. ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದವಿದೆ, ಉತ್ತಮವಾದ ರೀತಿಯಲ್ಲಿ ಗೆಲುವು ಸಾಧಿಸುತ್ತೇವೆ. ಜಮೀರ್ ಹೇಳಿಕೆಯಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ, ನಾವು ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಮತ್ತು ಜಮೀರ್ ಆತ್ಮೀಯತೆ ರಾಜಕೀಯವಾಗಿ ಮಾತ್ರ. ನಾನು ಅವರನ್ನು ಕುಳ್ಳ ಎಂದು ಕರೆದೇ ಇಲ್ಲ. ಅವರ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ. ಸಿಎಂ ಹಾಗೂ ಡಿಸಿಎಂ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಸರ್ಕಾರ ಅನಾಗರೀಕ ಸರ್ಕಾರ. ದುಡ್ಡಿನ ಮದದಿಂದ ಈ ರೀತಿ ಕೊಳ್ಳತ್ತಿದ್ದಾರೆ ಎಂದರು.
ರೇಣುಕಾ ಸ್ವಾಮಿ ಕೊಲೆಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಬೆನ್ನು ನೋವಿನ ಚಿಕಿತ್ಸೆಗೆ ಆರು ವಾರಗಳ ಕಾಲಾವಕಾಶವನ್ನು ಕೋರ್ಟ್ ನೀಡಿದೆ. ದರ್ಶನ್ಗೆ ಜಾಮೀನು ಸಿಕ್ಕಿ 15 ದಿನಗಳ ಮೇಲಾಗಿದ್ದು ಇದುವರೆಗೂ ಯಾವುದೇ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ದರ್ಶನ್ ಹೊರಗಿದ್ದಷ್ಟು ದಿನ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ದರ್ಶನ್ಗೆ ನೀಡಿದ್ದ ಜಾಮೀನನ್ನು ಪ್ರಶ್ನೆ ಮಾಡಲು ಪೊಲೀಸರು ಮುಂದಾಗಿದ್ದು, ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನ ಎ2 ಆರೋಪಿ ದರ್ಶನ್ ಬೆನ್ನು ನೋವಿನ ಕಾರಣ ಹೇಳಿ ಜಾಮೀನು ಪಡೆದಿದ್ದಾರೆ. ಇದನ್ನು ಸರ್ಕಾರಿ ಪರ ವಕೀಲರು ವಿರೋಧಿಸಿದ್ದರು. ಈಗ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಪೊಲೀಸರು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿರುವ ಕಡತವನ್ನು ಪೊಲೀಸರು ಗೃಹ ಇಲಾಖೆಗೆ ನೀಡಲಾಗಿದೆ. ಆದೇಶ ಪ್ರತಿಯನ್ನು ಗೃಹ ಇಲಾಖೆ ಪರಿಶೀಲಿಸಿದೆ. ಇದಕ್ಕೆ ಅನುಮತಿ ಕೂಡ ನೀಡಲಾಗಿದೆ. ಈಗ ಸರ್ಕಾರ ಒಪ್ಪಿಗೆ ಸೂಚಿಸಿದ್ದು,…
ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಎಚ್.ಡಿ.ಬಿ.ಆರ್.ಟಿ.ಎಸ್. ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. https://youtu.be/WFUSVpMJyZs?si=0yqI02Sb1npn6t_G ಈ ವೇಳೆ ನೂತನ ೧೨೭ ಬಸ್‌ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆ ಮಾಡಿದರು. ಈ ಬಸ್‌ಗಳು ಭಾರತ್ ಸ್ಟೇಜ್ 6 ಮಾದರಿ ಬಸ್ಗಳಾಗಿದ್ದು ಇದರಲ್ಲಿ ಸಿಸಿ ಕ್ಯಾಮರಾಗಳು, ಎಲ್‌ಇಡಿ ಸ್ಕ್ರೀನ್ಗಳು ಮತ್ತು ಸುರಕ್ಷತಾ ಬಟನ್‌ಗಳು ಒಳಗೊಂಡಿವೆ. ರಾಜ್ಯದ ಜನರಿಗೆ ಅತ್ಯುತ್ತಮ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ.ಅವಧಿ ಮೀರಿದ ಬಸ್‌ಗಳನ್ನು ಸ್ಥಗಿತಗೊಳಿಸಿ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತದೆ. ಈ ವರ್ಷವು ಹಳೇ ಬಸ್‌ಗಳನ್ನು ಸ್ಕ್ರಾಪ್ಗೆ ಹಾಕಿ, ಬೇಡಿಕೆ ಮತ್ತು ಸಂಚಾರ ದಟ್ಟಣೆಗೆ ಅನುಗುಣವಾಗಿ ಹೊಸ ಬಸ್‌ಗಳು ಸಂಚರಿಸಲಿವೆ. ಶಾಸಕ ಪ್ರಸಾದ ಅಬ್ಬಯ್ಯ, ಭರಮಗೌಡ ಕಾಗೆ, ಡಿಸಿ ದಿವ್ಯ ಪ್ರಭು ಜೆಆರ್ ಜೆ, ಇತರರು ಇದ್ದರು.