Author: Prajatv Kannada

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ನಡೆದಿತ್ತು. ಅನ್ಯಕೋಮಿನವರು ಮೆರವಣಿಗೆ ವೇಳೆ ಕಲ್ಲುತೂರಿದ್ದರು. ಅಲ್ಲದೇ, ಕೆಲ ಅಂಗಡಿಗಳಿಗೂ ಬೆಂಕಿ ಹಾಕಲಾಗಿತ್ತು. ಇದರ ಬೆನ್ನಲ್ಲೇ ಕೋಮುಗಲಭೆ ನಡೆದ ಸ್ಥಳಕ್ಕೆ ಇಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾರೆ. https://youtu.be/x6D2vVsH6yg?si=JZVYDAX3yFXJ6UuP ಬೆಂಕಿ ಬಿದಿದ್ದ ಬೈಕ್​ ಶೋರೂಂ, ಅಂಗಡಿಗಳಿಗೆ ಹೆಚ್​ಡಿ ಕುಮಾರಸ್ವಾಮಿ ಅವರು ಭೇಟಿ, ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದರು.ಭೇಟಿ ವೇಳೆ ಗಲಭೆಯಿಂದ ಹಾನಿಗೊಳಗಾದ ಅಂಗಡಿಗಳ ಮಾಲೀಕರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಅವರ ಅಳಲು ಆಲಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಗೆ ಮಾಜಿ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಸಾಥ್ ನೀಡಿದರು.

Read More

ಬೆಂಗಳೂರು:– ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ವಿಚಾರವಾಗಿ ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ವಿರುದ್ಧ FIR ದಾಖಲಾಗಿದೆ. https://youtu.be/4HkbnA4VopM?si=6ZazdH-HGSCnWQxQ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಆರೋಪದಲ್ಲಿ ಬೆಂಗಳೂರಿನಲ್ಲಿ ಬಾಂಗ್ಲಾದೇಶ ಪ್ರಜೆ ಸಲಾಲುದ್ದೀನ್ ಸುಹೇಬ್ ಚೌಧರಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಸಲಾಲುದ್ದೀನ್ ಸುಹೇಬ್, ಪಾಕಿಸ್ತಾನಿ ಐಎಸ್​ ಏಜೆಂಟ್ ರೀತಿ ಬಿಂಬಿಸಿ ಪೋಸ್ಟ್ ಹಾಕಿದ್ದ. ಹೀಗಾಗಿ ಕೋಮು ಸೌಹಾರ್ದತೆಗೆ ಧಕ್ಕೆ, ಶಾಂತಿ ಕದಡುವ ಪ್ರಯತ್ನಿಸಿದ ಆರೋಪದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಿಸಲಾಗಿದೆ. ಇನ್ನೂ ಸೋನಿಯಾಗಾಂಧಿ ಅಂತರ್ ಧರ್ಮ ವಿವಾಹವಾಗಿದ್ದಾರೆ. ಅವರು ಕ್ರಿಶ್ಚಿಯನ್ ಧರ್ಮವನ್ನೇ ಪಾಲನೆ ಮಾಡುತ್ತಿದ್ದಾರೆ. ಅಂತರ್ ಧರ್ಮದಲ್ಲಿ‌ ಮದುವೆಯಾಗಿ ಭಾರತದ ಪೌರತ್ವ ಪಡೆದಿದ್ದಾರೆ’’ ಎಂದು ಸಲಾಲುದ್ದೀನ್ ಸುಹೇಬ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ. ಇಷ್ಟೇ ಅಲ್ಲದೆ, ‘‘ರಾಹುಲ್ ಗಾಂಧಿ ವಿದೇಶಿ ಸ್ನೇಹಿತರ ಜೊತೆ ಸೇರಿಕೊಂಡು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ’’ ಎಂದು ಪೋಸ್ಟ್…

Read More

ಕೆಲ ಸಮಯದ ಹಿಂದೆ ಶಾಂತವಾಗಿದ್ದ ವಿಯೆಟ್ನಾ ಹಠಾತ್ ಪ್ರವಾಹಕ್ಕೆ ನಲುಗಿ ಹೋಗಿದೆ. ಮಳೆ ಗಾಳಿ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ಥವಾಗಿದ್ದು 226ಜನ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ 134ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗಂಟೆಗೆ 149 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು 1,40,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಚಂಡಮಾರುತ ಉತ್ತರ ವಿಯೆಟ್ನಾಂವನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಇದು ಈ ವರ್ಷ ಏಷ್ಯಾದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಎಂದು ಹೇಳಲಾಗುತ್ತಿದೆ. ಉತ್ತರ ವಿಯೆಟ್ನಾಂ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿದ್ದು ಜನ ಮನೆ, ಮಠ, ಪ್ರಾಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ನಿಂತಲ್ಲೆ ನೆಲ ಕುಸಿಯುತ್ತಿದ್ದು ಸೇನಾ ಸಿಬ್ಬಂದಿ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದು ರಕ್ಷಣೆಗೆ ಹರಸಾಹಸ ಪಡುತ್ತಿದೆ. ವಿಯೇಟ್ನಾಂ ರಾಜಧಾನಿ ಹನೋಯಿ ನಗರದಲ್ಲಿ ಎಲ್ಲಿ ನೋಡಿದರು ಮಳೆ ನೀರು. ಅಬ್ಬರಿಸಿದ ಮಳೆಯಿಂದಾಗಿ ಅಕ್ಷರಶಃ ನರಕ ಸದೃಶ್ಯವೇ ಸೃಷ್ಟಿಸ್ತಿದೆ. ಬೀದಿಗಳು ನದಿಗಳಾಗಿ ರೂಪಾಂತರಗೊಂಡಿವೆ. ಅದೇ ರಸ್ತೆ ಮೇಲೆ ದೋಣಿಗಳ ಮೂಲಕ ಸಂಚರಿಸುವ ಸ್ಥಿತಿ ನಿರ್ಮಾಣ…

Read More

ಸಾಮಾನ್ಯವಾಗಿ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಬೆಳ್ಳುಳ್ಳಿ ಇಲ್ಲದಿದ್ರೆ ಅಡುಗೆ ಸಂಪೂರ್ಣವಾಗೋದೆ ಇಲ್ಲ ಅನ್ನೋ ಅಷ್ಟರ ಮಟ್ಟಿಗೆ ಬೆಳ್ಳುಳ್ಳಿ ಅಡುಗೆ ಮನೆಯನ್ನ ಆಕ್ರಮಿಸಿಕೊಂಡಿದೆ. ಆದರೆ ಅದೇ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಮಾರಕವಾಗಿದೆ. ಅಂದ ಹಾಗೆ ಈ ಬೆಳ್ಳುಳ್ಳೀ ಭಾರತಕ್ಕೆ ಬರ್ತಿರೋದು ಚೀನಾದಿಂದ. ಬೆಳ್ಳುಳ್ಳಿಯನ್ನು ಮಾಂತ್ರಿಕ ಮಸಾಲೆ ಎಂದು ಅಂತಲೇ ಕರೆಯುತ್ತಾರೆ. ಆಹಾರದ ಪರಿಮಳ ಹೆಚ್ಚಿಸುತ್ತದೆ. ಅಲ್ಲದೇ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಅನ್ನೋದು ಸಾಕಷ್ಟು ವೈದ್ಯರು ದೃಡಪಡಿಸಿದ್ದಾರೆ. ಆದರೆ ಚೀನಾ ಬೆಳ್ಳುಳ್ಳಿ ಆರೋಗ್ಯಕ್ಕೆ ಮಾರಕವಾಗಿದೆ. ಚೀನಾವು ವಿಶ್ವದ ಅತಿದೊಡ್ಡ ಬೆಳ್ಳುಳ್ಳಿ ಉತ್ಪಾದಕಯನ್ನು ಹೊಂದಿದೆ. ಜಾಗತಿಕ ಪೂರೈಕೆಯ 80% ಅನ್ನು ಉತ್ಪಾದಿಸುತ್ತದೆ. ಚೀನಾದ ಹೆಚ್ಚಿನ ಬೆಳ್ಳುಳ್ಳಿಯನ್ನು ಬೀಜಿಂಗ್‌ನ ಆಗ್ನೇಯ ಭಾಗದಲ್ಲಿರುವ ಪೂರ್ವ ಕರಾವಳಿ ಪ್ರಾಂತ್ಯವಾದ ಶಾಂಡೊಂಗ್‌ನಲ್ಲಿ ಉತ್ಪಾದಿಸಲಾಗುತ್ತದೆ. ನಿರ್ದಿಷ್ಟವಾಗಿ, ಜಿಂಕ್ಯಾಂಗ್ ಅನ್ನು “ವಿಶ್ವದ ಬೆಳ್ಳುಳ್ಳಿ ರಾಜಧಾನಿ” ಎಂದು ಕರೆಯಲಾಗುತ್ತದೆ. 2014ರಿಂದಲೇ ಭಾರತದಲ್ಲಿ ಚೀನಾ ಬೆಳ್ಳುಳ್ಳಿಯನ್ನು ನಿಷೇಧಿಸಲಾಗಿದೆ. ಆದರೂ ಚೀನಾ ಬೆಳ್ಳುಳ್ಳಿ ಕಳ್ಳದಾರಿಯಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದೆ. ಚೈನೀಸ್ ಬೆಳ್ಳುಳ್ಳಿ ತಿಳಿ ಬಿಳಿ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ‌ ಠಾಣೆ ವ್ಯಾಪ್ತಿಯಲ್ಲಿ ದೇವರ ಮೂರ್ತಿಯನ್ನೇ ಕಳ್ಳರು ಕದ್ದು ಪರಾರಿಯಾದ ಘಟನೆ ಜರುಗಿದೆ. https://youtu.be/m21UijqGE5E?si=k7cCyHwl3fFeoptz ಗಣೇಶನ ಮೂರ್ತಿಯನ್ನೇ ಕಳ್ಳರು ಎಗರಿಸಿದ್ದಾರೆ. ಬೈಕ್​ನಲ್ಲಿ ಮಧ್ಯರಾತ್ರಿ‌ ಬಂದ ಕಳ್ಳರು ಗಣೇಶ ‌ಮೂರ್ತಿಯನ್ನು‌ ಕದ್ದು ಹೊತ್ತೊಯ್ದಿದ್ದಾರೆ. ಆ ಮೂಲಕ ಹಬ್ಬದ ಸೀಸನ್​​ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಂಗಡಿಯ ಮಾಲೀಕರು ಗಣೇಶನ ಮೂರ್ತಿಯನ್ನು ಯಾರು ಕಳ್ಳತನ ಮಾಡುತ್ತಾರೆ ಎಂದು ಅಂಗಡಿಯ ಹೊರ ಭಾಗದಲ್ಲಿ ಇಟ್ಟಿದ್ದರು. ಇದನ್ನು ಗಮನಿಸಿದ ಕಳ್ಳರು ಒಂದು ಗಂಟೆ ರಾತ್ರಿ ವೇಳೆ ಗಣೇಶ ಮೂರ್ತಿ ಕದ್ದು ಎಸ್ಕೇಪ್ ಆಗಿದ್ದಾರೆ. ಮೂರ್ತಿ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಸದ್ಯ ಗಣೇಶ ಮೂರ್ತಿ‌ ಕಳ್ಳತನ ಮಾಡಿರುವ ಬಗ್ಗೆ ಬ್ಯಾಡರಹಳ್ಳಿ‌ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಬಾಲಿವುಡ್ ನಟಿ ಕಂ ಮಾಡೆಲ್ ಮಲೈಕಾ ಅರೋರಾ ಕುಟುಂಬದ ದುಃಖದಲ್ಲಿದೆ. ಮಲೈಕಾ ತಂದೆ ಅನಿಲ್ ಮೆಹ್ತಾ ಎರಡು ದಿನಗಳ ಹಿಂದೆ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಸೆಪ್ಟೆಂಬರ್ 11ರಂದು ಅವರು ತಮ್ಮ ಮನೆಯ ಆಯೇಷಾ ಮ್ಯಾನರ್‌ನ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಿಲ್  ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಅಥವಾ ಕೊಲೆಯೋ ಎಂದು ಪೊಲೀಸರು ವಿಚಾರಣೆ ನಡೆಸಿದ್ದರು. ಪ್ರಾಥಮಿಕ ತನಿಖೆಯ ನಂತರ ಇದನ್ನು ಆತ್ಮಹತ್ಯೆ ಎಂದು ಹೇಳಲಾಗಿದೆ. ಸಾಂತಾಕ್ರೂಜ್‌ನಲ್ಲಿರುವ ಹಿಂದೂ ಸ್ಮಶಾನದಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ಅನಿಲ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಮಲೈಕಾ ಅರೋರಾ ಅವರ ತಂದೆ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 62 ವರ್ಷದ ಅನಿಲ್ ಮೆಹ್ತಾ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ ಕಾರಣ ಏನು? ಎಂಬ ಬಗ್ಗೆ ಸಾಕಷ್ಟು ಪ್ರಶ್ನೆ ಹುಟ್ಟಿಕೊಂಡಿದೆ.  ಅಂದ ಹಾಗೆ ಅನಿಲ್ ಸಾವಿಗೆ ಅವರ ಅನಾರೋಗ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಭಾರವಾದ ಹೃದಯದಿಂದ ತನ್ನ ತಂದೆಯ ಹೆಸರಿನಲ್ಲಿ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೂರು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿಗೆ ಶಿಫ್ಟ್ ಆದ 15 ದಿನಕ್ಕೆ ದರ್ಶನ್ ಸಂಪೂರ್ಣವಾಗಿ ಸೊರಗಿ ಹೋಗಿದ್ದಾರೆ. ಹೊರಗಿದ್ದ ವೇಳೆ ನಿತ್ಯ ಪಾರ್ಟಿ, ಪಬ್ಬು, ನಾನ್ ವೆಜ್ ಎಂದು ತಿಂದು ತೇಗುತ್ತಿದ್ದ ದರ್ಶನ್ ಗೆ ಜೈಲು ವಾಸ ನುಂಗಲಾರದ ಬಿಸಿ ತುಪ್ಪವಾಗಿದೆ. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಪಡೆದ ದರ್ಶನ್, ಬಳ್ಳಾರಿ ಜೈಲೂಟಕ್ಕೆ ಸಂಪೂರ್ಣ ಸೊರಗಿ ಹೋಗಿದ್ದಾರೆ. ಜೈಲು ಸೇರಿದ ಹದಿನೈದೇ ದಿನಕ್ಕೆ ದರ್ಶನ್ ಸಂಪೂರ್ಣವಾಗಿ ಸಣ್ಣಗಾಗಿದ್ದಾರೆ. ಕಟ್ಟು ಮಸ್ತಾದ ದೇಹ ಹೊಂದಿದ್ದ ದರ್ಶನ್ ಇದೀಗ ಸಣಕಲು ಕಡ್ಡಿಯಂತೆ ಕಾಣುತ್ತಿದ್ದಾರೆ. ಅಂದ ಹಾಗೆ ಸಾಕಷ್ಟು ಮಂದಿ ಸಣ್ಣಗಾಗಲು ಹರ ಸಾಹಸ ಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಔಷದಿಗಳ ಮೊರೆ ಹೋಗುತ್ತಾರೆ. ಆದರೆ ದಿಡೀರ್ ಸಣ್ಣಗಾಗುವುದು ತಪ್ಪು. ಇದರಿಂದ ದೇಹಕ್ಕೆ ಅಪಾಯ ಎಂದು ಸಾಕಷ್ಟು ಭಾರಿ ವೈದ್ಯರು ಹೇಳಿರುತ್ತಾರೆ. ದಿಡೀರ್ ಸಣ್ಣಗಾಗಲು ಹೋಗಿ ಸಾಕಷ್ಟು…

Read More

ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸೊರಗಿ ಹೋಗಿದ್ದಾರೆ. ಅಲ್ಲಿನ ವಾತವಾರಣ, ಆಹಾರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ದರ್ಶನ್ ಕಂಗಲಾಗಿದ್ದಾರೆ. ಈ ಮಧ್ಯೆ ದರ್ಶನ್ ರನ್ನು ಭೇಟಿಯಾಗಲು ಬಳ್ಳಾರಿ ಜೈಲಿಗೆ ಅವರ ಕುಟುಂಬಸ್ಥರು, ವಕೀಲರು ಆಗಮಿಸಿದ್ದರು. ಈ ವೇಳೆ ದಾಸ ಗಡ್ಡ ಬಿಟ್ಟು ಸೆಲ್‌ನಿಂದ ಹೊರಗೆ ಬಂದಿದ್ದು ಪತ್ನಿ ಹಾಗೂ ಸಹೋದರನನ್ನು ನೋಡಿ ದರ್ಶನ್ ಮುಖದಲ್ಲಿ ಮತ್ತೆ ಕಳೆ ಕಾಣಿಸಿಕೊಂಡಿದೆ. ಜೈಲಿನಲ್ಲಿರುವ ದರ್ಶನ್ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ತೆರಳಿದ್ದರು. ಈ ವೇಳೆ ಸಂದರ್ಶಕರ ಕೊಠಡಿಗೆ ತೆರಳಲು ದರ್ಶನ್ ಅವರನ್ನು ಸೆಲ್‌ನಿಂದ ಹೊರಗೆ ಕರೆ ತರಲಾಯಿತು. ಹೈಸೆಕ್ಯೂರಿಟಿ ಸೆಲ್‌ನಿಂದ ಹೊರ ಬಂದ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆ ತರಲಾಯಿತು. ಸುಮಾರು 24 ನಿಮಿಷಗಳ ಕಾಲ ವಿಜಯಲಕ್ಷ್ಮಿ, ದಿನಕರ್ ಹಾಗೂ ವಕೀಲರ ಜೊತೆಗೆ ದರ್ಶನ್ ಚರ್ಚೆ ಮಾಡಿ ವಾಪಸ್ ಸೆಲ್‌ಗೆ ತೆರಳಿದರು. ಕುಟುಂಬಸ್ಥರು ಹಾಗೂ ವಕೀಲರನ್ನು ಭೇಟಿಯಾಗಿ ಹೋಗುವಾಗ ದರ್ಶನ್ ಮುಖದಲ್ಲಿ ಕೊಂಚ ರಿಲ್ಯಾಕ್ಸ್ ಕಾಣಿಸಿಕೊಂಡಿತ್ತು. ದರ್ಶನ್…

Read More

ಕಳೆದ ಒಂದೆರಡು ದಿನಗಳಿಂದ ಕನ್ನಡ ಕಿರುತೆರೆ ನಟ ವರುಣ್ ಆರಾಧ್ಯ ಹಾಗೂ ಆತನ ಮಾಜಿ ಪ್ರೇಯಸಿ ಬ್ಯಾಕ್ ಟು ಬ್ಯಾಕ್ ಸುದ್ದಿಯಾಗ್ತಿದ್ದಾರೆ. ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದು, ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಈಗ ವರುಣ್​ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್​ ಮಾಡಿ ಇದೆಲ್ಲಾ ಸುಳ್ಳು ಸುದ್ದಿ ಅಂತ ಡ್ರಾಮಾ ಮಾಡ್ತಾ ಇದ್ದಾರೆ. ಮಾಧ್ಯಮದಲ್ಲಿ ನೋಡುತ್ತಿರುವುದು ಸುಳ್ಳು ಮಾಹಿತಿ. ಫೇಕ್ ಸುದ್ದಿ ಹರಡುವುದನ್ನ ನಿಲ್ಲಿಸಿ ಅಂತ ವರುಣ್​ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಮನವಿ ಮಾಡಿದ್ದಾರೆ. ಇನ್ನು, ಇದೇ ವಿಚಾರವಾಗಿ ವರುಣ್ ಆರಾಧ್ಯ ಯುಟ್ಯೂಬ್ ಚಾನೆಲ್​ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ತುಂಬಾ ಜನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೈಲಲ್ಲಿ ಇದ್ದಾರೆ ಅಂತ ಯಾಕೆ ಹೇಳುತ್ತಿದ್ದೀರಾ? ನಾನು ಆರಾಮ ಆಗಿ ನಮ್ಮ ಮನೆಯಲ್ಲಿ ಇದ್ದೇನೆ. ಯಾಕೆ ತಪ್ಪು ತಪ್ಪಾಗಿ ಇನ್ಫಾಮೇಶನ್…

Read More

ರೀಲ್ಸ್ ಗಳ ಮೂಲಕ ಖ್ಯಾತಿ ಘಳಿಸಿ ಬಳಿಕ ಬೃಂಧಾವನ ಧಾರವಾಹಿ ಮೂಲಕ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟಿದ್ದ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದರು. ವರುಣ್ ತನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದರು. ಆದರೆ ಇದೀಗ ವರುಣ್​ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್​ ಮಾಡಿ ಇದೇಲ್ಲಾ ಸುಳ್ಳು ಸುದ್ದಿ ಅಂತ ಹೇಳುತ್ತಿದ್ದಾರೆ. ಇದೀಗ ವರುಣ್​ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಪೊಲೀಸ್​ ಅಧಿಕಾರಿಗೆ ದೂರು ಸಲ್ಲಿಸಿದ FIRನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ವರುಣ್ ಆರಾಧ್ಯ ತನ್ನನ್ನ ಪ್ರೀತಿಸಿ ವಂಚಿಸಿದ್ದಾನೆ. ನಾನು ವರುಣ್ ಫೋನ್​ನಲ್ಲಿ ಆತ ಬೇರೆ ಯುವತಿ ಜೊತೆಗಿರೋ ಖಾಸಗಿ ‌ಫೋಟೋ ನೋಡಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್‌ ಬ್ರೇಕಪ್ ಆಗಿತ್ತು. ಲವ್‌ ಬ್ರೇಕಪ್‌ ಆಗುತ್ತಿದ್ದಂತೆ ವರುಣ್ ನನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ.…

Read More