Author: Prajatv Kannada

ತಮಿಳು ನಟ ಜೀವ ಹಾಗೂ ಅವರ ಪತ್ನಿ ಸುಪ್ರಿಯಾ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಸೇಲಂನಿಂದ ಚೆನ್ನೈಗೆ ತೆರಳುವಾಗ ಕಲ್ಲಕುರಿಚಿಯಲ್ಲಿ ಈ ಅಪಘಾತ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಇದರಲ್ಲಿ ಹೀರೋ ಜೀವ ಸಿಟ್ಟಾದ ವಿಡಿಯೋ ಕೂಡ ಇದೆ. ಅಷ್ಟಕ್ಕೂ ಆ ಸ್ಥಳದಲ್ಲಿ ನಡೆದಿದ್ದು ಏನು ಗೊತ್ತಾ.. ಜೀವ ಅವರು ಕಾರು ಹೈವೇಲಿ ಸಾಗುತ್ತಿತ್ತು. ಈ ವೇಳೆ ಬೈಕ್ ಅಡ್ಡ ಬಂದಿದೆ. ನಂತರ ಕಾರು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಭಿಮಾನಿಯೋರ್ವ ಜೀವ ಅವರನ್ನು ಟಚ್ ಮಾಡಲು ಬಂದಿದ್ದಾರೆ. ಇದರಿಂದ ಜೀವ ಅವರು ಸಿಟ್ಟಾಗಿದ್ದಾರೆ. ‘ನನಗೆ ಅಪಘಾತ ಆಗಿದೆ. ನೀವೇನು ಮಾಡುತ್ತಿದ್ದೀರಾ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅದೃಷ್ಟವಶಾತ್ ಜೀವ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಂತರ ಅವರು ಬೇರೆ ಕಾರಿನಲ್ಲಿ ಚೆನ್ನೈ ತೆರಳಿದ್ದಾರೆ. ಅವರು ಆಸ್ಪತ್ರೆಗೆ ತೆರಳಿ…

Read More

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್​ ಬಂಧನವಾಗಿ 90 ದಿನವಾಗಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್​​ಗೆ ಸಂಬಂಧ ಇಂದು ದರ್ಶನ್​​ರನ್ನು ಕೋರ್ಟ್​ ವಿಚಾರಣೆ ನಡೆಸಲಿದೆ. ಮಧ್ಯಾಹ್ನ ​ವಿಚಾರಣೆ ನಡೆಯಲಿದ್ದು, ಪ್ರಕರಣ ಸಂಬಂಧ ದರ್ಶನ್ ಹಾಜರಿರಲಿದ್ದಾರೆ. https://youtu.be/eBEJVeQy14s?si=MLGHDaSO4XHVxxaX ಬಳ್ಳಾರಿ ಜೈಲಿನಿಂದ ದರ್ಶನ್ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಲಿದ್ದಾರೆ.ಸೆಂಟ್ರಲ್ ಜೈಲ್‌ನ ಹೈ-ಸೆಕ್ಯುರಿಟಿ ಸೆಲ್​ನಿಂದ ದರ್ಶನ್ ಹಾಜರಾಗಲಿದ್ದಾರೆ. ದರ್ಶನ್​​ಗಾಗಿ ಜೈಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಕೈಯಲ್ಲಿ ಎರಡು ಬ್ಯಾಗ್ ಹಿಡಿದು ಹೈ ಸೆಕ್ಯೂರಿಟಿ ಸೆಲ್ ನಿಂದ ಸಂದರ್ಶಕರ ಕೋಣೆಗೆ ದರ್ಶನ್‌ ಬಂದಿದ್ದಾರೆ. ವೈಟ್ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ನಟ ದರ್ಶನ್‌ ಬಂದಿದ್ದಾರೆ.

Read More

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಪೂರ್ಣಗೊಳ್ಳಲಿದೆ. ಇದರ ಬೆನ್ನಲ್ಲೇ ನಟ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ. https://youtu.be/_EfF8GGYBOs?si=yuJVx5UlrW_-XJ7J ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು‌ ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ಡ್ರೈ ಫ್ರೂಟ್ಸ್‌, ಬಿಸ್ಕೆಟ್ ಹಾಗೂ ದೇವರ ಪ್ರಸಾದೊಂದಿಗೆ ಆಗಮಿಸಿದ್ದಾರೆ. ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್‌ರನ್ನು ಬಂಧಿಸಿದ್ದರು.

Read More

ಧಾರವಾಡ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ, ಗಲಭೆ ಇದೀಗ ರಾಜ್ಯ ಮಟ್ಟದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ, ಗಲಭೆ ಕುರಿತ ಒಂದೊಂದೇ ಮಾಹಿತಿ ಹೊರಬೀಳುತ್ತಿವೆ. ಇನ್ನೂ ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. https://youtu.be/CZKVOexNFIk?si=Jn3E2l3N2osmCIUr ಮುಸ್ಲಿಂ ಸಮಾಜದವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಮಸೀದಿ ಒಳಗಡೆ ಕಲ್ಲು ಹೇಗೆ ಬಂತು? ಮಸೀದಿ ಸೀಜ್ ಮಾಡಿ ಬುಲ್ಡೋಜರ್ ಹಚ್ಚಬೇಕು ಎಂದು ಕಿಡಿಕಾರಿದ್ದಾರೆ. ಈ ಪ್ರಕರಣದಲ್ಲಿ ಹಿಂದೂಗಳ ತಪ್ಪಿಲ್ಲ. ಇದು ಮುಸ್ಲಿಂರೇ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಸ್ವಲ್ಪ ಜನ ಹಿಂದೂಗಳನ್ನ ಬಂಧಿಸೋದು ಸ್ವಲ್ಪ ಜನ ಮುಸ್ಲಿಂ ಯುವಕರನ್ನ ಬಂಧಿಸೋದು ಮೊದಲು ಬಿಡಬೇಕು. ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ. ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿರುವ ಇಂತಹ ಹೇಯ ಕೃತ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವ ನಾರಾಯಣಸ್ವಾಮಿ ಕಾರಣ ಎಂದು ಆರೋಪಿಸಿದ್ದಾರೆ.

Read More

ಮಂಡ್ಯ: ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ರಾತ್ರಿ ಮೂರ್ತಿಯ ನಿಮಜ್ಜನಾ ಮೆರವಣಿಗೆ ಅನ್ಯಕೋಮಿನ ಪ್ರಾರ್ಥನಾ ಮಂದಿರದ ಬಳಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಕೆಲವು ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.. https://youtu.be/FtEu6gnMkW0?si=7-jIUKDmPpeKJbGG ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಲಭೆ ಸಂಬಂಧ 150 ಜನರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಹೌದು, ಕರ್ತವ್ಯ ನಿರತ ಪಿಎಸ್‌ಐ B.J.ರವಿ ಅವರ ದೂರು ಆಧರಿಸಿ ಕೇಸ್ ದಾಖಲಾಗಿದೆ. 150 ಮಂದಿಯ ಮೇಲೆ ಎಫ್​ಐಆರ್ ಗಣಪತಿ ಮೂರ್ತಿ ಮೆರವಣಿಗೆ ವೇಳೆ ಗಲಾಟೆ ನಡೆಸಿದ ಸಂಬಂಧ ಪೊಲೀಸರು 150 ಮಂದಿಯ ಮೇಲೆ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪೈಕಿ‌ 53 ಮಂದಿ ಆರೋಪಿಗಳ ಹೆಸರು ಮತ್ತು ವಿಳಾಸವನ್ನು ಪತ್ತೆ ಮಾಡಿದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ 109, 115,118, 121, 132, 189, 190 ಸೇರಿದಂತೆ 16 ಸೆಕ್ಷನ್​ಗಳಡಿ ಎಫ್​ಐಆರ್ ದಾಖಲಾಗಿದೆ. 100-150 ಜನರಿಂದ ಅಲ್ಲಾಹು…

Read More

ಬೆಂಗಳೂರು: ನಾಗಮಂಗಲದಲ್ಲಿ ಅನ್ಯಕೋಮಿನ ಯುವಕರಿಂದ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಕಲ್ಲು ತೂರಾಟ  ಪೂರ್ವ ನಿಯೋಜಿತ ಎಂಬುದಕ್ಕೆ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಆರೋಪಿಸಿದ್ದಾರೆ. https://youtu.be/CZKVOexNFIk?si=AWrPFzeaAn66UzO2 ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲ್ಲೆಸೆತ, ಪೆಟ್ರೋಲ್ ಬಾಂಬ್ ಎಸೆತ ಮಾಡಿದ್ದು ಉದ್ದೇಶಪೂರ್ವಕವಾದ ಘಟನೆಯೇ ಹೊರತು ಆಕಸ್ಮಿಕವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಗೃಹಸಚಿವ ಪರಮೇಶ್ವರ್  ಅವರು ನಿಷ್ಪಕ್ಷಪಾತವಾಗಿ ಮಾತನಾಡುವ ಬದಲಾಗಿ `ಆಕಸ್ಮಿಕ’ ಎಂಬ ಪದ ಬಳಕೆ ಮಾಡಿ ಅನ್ಯ ಕೋಮಿನವರಿಗೆ ನಿಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. ಒಂದು ವೇಳೆ ನಿಮ್ಮ ತರ್ಕವೇ ಸರಿಯಿದ್ದರೆ ಪೆಟ್ರೋಲ್ ಬಾಂಬ್ ಹೇಗೆ ಎಸೆದರು? ಇದನ್ನು ತಯಾರು ಮಾಡಲು ಸಮಯ ಬೇಡವೇ? ಗಣಪತಿ ಮೆರವಣಿಗೆ ಹೋಗುವವರು ಯಾರ ಮೇಲೆ ಕಲ್ಲೆಸೆದರು? ಶಾಂತಿಯುತವಾಗಿ ಹೋಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಚಪ್ಪಲಿ ಬಿಸಾಡುವುದು, ಕಲ್ಲೆಸೆಯುವುದು, ಪೆಟ್ರೋಲ್ ಬಾಂಬ್ ಹಾಕುವುದು ಆಕಸ್ಮಿಕವೇ? ನಿಮ್ಮ ಕಾಗಕ್ಕ-ಗುಬ್ಬಕ್ಕ ಕಥೆ ನಂಬುವುದಕ್ಕೆ ಆಗುತ್ತಾ? ಎಂದು ಅವರು…

Read More

ಬೆಂಗಳೂರು :  ಇಂದು ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ  ಬಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನ‌ಬಸ್ ಗಳು ಸೇರಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. https://youtu.be/DtXVzR8dOn0?si=k_QmD_2Co35y8u6T ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಬಳಿ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ನೂತನ  ಬಸ್ ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ‌ಬಸ್ ಗಳನ್ನು BMTC ಗೆ ಸೇರ್ಪಡೆಗೊಳಿಸುವ ಜೊತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದಲ್ಲದೆ ನೂತನವಾಗಿ ಇನ್ನಷ್ಟು ಕ್ಯಾಂಟೀನ್ ಗಳನ್ನು ಆರಂಭಿಸುತ್ತಿದ್ದೇವೆ. ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದರು. ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ…

Read More

ಬೆಂಗಳೂರು :- ಮಂಡ್ಯದಲ್ಲಿ ಹಿಂದೂ ಮುಸ್ಲಿಂ ನಡುವೆ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಗಲಾಟೆ ಕೇಸ್ ಗೆ ಸಂಭವಿಸಿದಂತೆ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ. ಇದು ಸಣ್ಣ ಘಟನೆಯಾಗಿದ್ದು ಕೋಮು ಗಲಭೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು. ನಾಗಮಂಗಲದಲ್ಲಿ ನಿನ್ನೆ ಘಟನೆ ನಡೆಯಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಆಗಿ ಮುಗಿದಿದ್ದು, ಯಾರೂ ಗಾಯಗೊಂಡಿಲ್ಲ. ಆಕಸ್ಮಿಕವಾಗಿ ಅಲ್ಲಿ ಹೋಗುವಾಗ ಕಲ್ಲು ಹಾಕಿದ್ದಾರೆ. ಇವರು ಕಲ್ಲು ಹಾಕಿದ್ದಾರೆ. ಈ ಪ್ರಕರಣಕ್ಕೆ ಜಾಸ್ತಿ ಪ್ರಚಾರ ನೀಡುವುದು ಬೇಡ ಎಂದು ಹೇಳಿದರು.

Read More

ನವದೆಹಲಿ: ರಾಷ್ಟ್ರೀಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಅಡಿಯಲ್ಲಿ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರಿಗೂ ಆರೋಗ್ಯ ರಕ್ಷಣೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. https://youtu.be/__ED2T-aVG0?si=-iJ1Y037JOmnf7i3 ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಆರು ಕೋಟಿ ಹಿರಿಯ ನಾಗರಿಕರನ್ನು ಹೊಂದಿರುವ 4.5 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಉಚಿತ ಸೌಲಭ್ಯ 5 ಲಕ್ಷ ರೂ ಮೌಲ್ಯದ್ದಾಗಿದೆ. ಈ ಅನುಮೋದನೆಯೊಂದಿಗೆ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ AB PM-JAY ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಹಿರಿಯ ನಾಗರಿಕರಿಗೆ AB PM- ಅಡಿಯಲ್ಲಿ ಹೊಸ ವಿಭಿನ್ನ ಕಾರ್ಡ್ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಯಡಿಯಲ್ಲಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಿರಿಯ…

Read More

ಬೆಂಗಳೂರು:- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ತಾನು ಅಧಿಕಾರಕ್ಕೆ ಬರೋ ಮುನ್ನ ಘೋಷಿಸಿದ 5 ಗ್ಯಾರಂಟಿ ಗಳನ್ನು ಕೊಟ್ಟ ಮಾತಿನಂತೆ ಜಾರಿ ಮಾಡಿ ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡಿದೆ. https://youtu.be/XhzZ3infm_w?si=BJt4zzJGBJXo3SYT ಇನ್ನೂ ಜಾರಿಯಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ಹೀಗಾಗಿ ಪಂಚಖಾತ್ರಿ ಯೋಜನೆ ಗಳನ್ನು ಜಾರಿಗೊಳಿಸಿ, ಬೊಕ್ಕಸವನ್ನು ಬರಿದು ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಆದಾಯ ಮೂಲಗಳನ್ನು ಹುಡುಕಲು ಮುಂದಾಗಿದ್ದು, ಆಸ್ತಿ ನಗದೀಕರಣ ಮೂಲಕ ಸಂಪನೂಲ ಕ್ರೂಢೀಕರಣಕ್ಕೆ ಮುಂದಾಗಿದೆ. ತೆರಿಗೆಯೇತರ ಆದಾಯ ಸಂಪನೂಲಗಳನ್ನು ಹೆಚ್ಚಿಸಲು, ಸರ್ಕಾರದ ಆಸ್ತಿಗಳ ಸಮರ್ಪಕ ಬಳಕೆ, ನಿರ್ವಹಣೆ ಮತ್ತು ತನೂಲಕ ಖಾಸಗಿ ಬಂಡವಾಳವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಅಕರ್ಷಿಸಲು ಸಲಹೆಗಳನ್ನು ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 2024- 25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ತೆರಿಗೆಯೇತರ ರಾಜಸ್ವ ಸಂಗ್ರಹ ಸಾಮರ್ಥ್ಯ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಆಸ್ತಿ ನಗದೀಕ ರಣದ ಅವಕಾಶವನ್ನು ಗುರುತಿಸಲು ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ.ಪಿ.…

Read More