ಸೂರ್ಯೋದಯ: 06:07, ಸೂರ್ಯಾಸ್ತ : 06:17 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ನವಮಿ ನಕ್ಷತ್ರ: ಮೂಲ ರಾಹು ಕಾಲ:01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಮ.3:25 ನಿಂದ ಸಂ.5:03 ತನಕ ಅಭಿಜಿತ್ ಮುಹುರ್ತ: ಬೆ.11:48 ನಿಂದ ಮ.12:36 ತನಕ ಜಾತಕ ಆಧಾರದ ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಸಂತೋಷದ ಕಾಲ ಬಂದಿತು, ಗುತ್ತಿಗೆದಾರರಿಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಬಹುದಿನದ ಪ್ರಯತ್ನ ಇಂದು ನೆರವೇರಲಿದೆ,ಬೆಟ್ಟಿಂಗ್ ದಂಧೆಯಲ್ಲಿ ಹಣಕಾಸಿನ ಚಿಂತನೆ,ಶೇರು ಮಾರುಕಟ್ಟೆಯಲ್ಲಿ ಆರ್ಥಿಕ ನಷ್ಟ,ವಿಶೇಷ ಆರ್ಥಿಕ ತಜ್ಞರು…
Author: Prajatv Kannada
ಅಲೋವೆರಾವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬಾ ಕಡಿಮೆ. ಯಾಕೆಂದರೆ ಅಲೋವೆರಾದಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳು ಬೇರೆ ಯಾವುದೇ ರೀತಿಯ ಸಾಮಗ್ರಿಗಳಲ್ಲೂ ನಿಮಗೆ ಸಿಗಲಾರದು. ಹೀಗಾಗಿ ಅಲೋವೆರಾವು ತುಂಬಾ ಪರಿಣಮಕಾರಿ ಆಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಕೆ ಮಾಡಲಾಗುತ್ತಾ ಇದೆ. ನೇರವಾಗಿ ಅಲೋವೆರಾ ಲೋಳೆಯನ್ನು ಮೈಗೆ ಹಚ್ಚಿಕೊಂಡರೂ ಅದರ ಲಾಭಗಳು ಸಿಗುವುದು. ಇದು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಜತೆಗೆ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು. ಬೇಸಗೆ ಕಾಲದಲ್ಲಿ ನೀವು ಮುಖಕ್ಕೆ ತುಂಬಾ ಜಿಡ್ಡಿನ ಕ್ರೀಮ್ ಬಳಸಿಕೊಂಡರೆ ಅದರಿಂದ ತುಂಬಾ ಸಮಸ್ಯೆ ಆಗಬಹುದು. ಯಾಕೆಂದರೆ ಉಷ್ಣತೆ ಹೆಚ್ಚಿರುವುದು ಮತ್ತು ಬೆವರುವುದು. ಹೀಗಾಗಿ ಮುಖಕ್ಕೆ ಈ ಸಮಯದಲ್ಲಿ ನೀವು ಜಿಡ್ಡಿನ ಕ್ರೀಮ್ ಬಳಸಬೇಡಿ. ರಾತ್ರಿ ಮಲಗಲು ಹೋಗುವ ಮೊದಲು ನೀವು ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಇದು ಚರ್ಮದಲ್ಲಿ ನಿಧಾನವಾಗಿ ಹೀರಿಕೊಳ್ಳುವುದು ಮತ್ತು ಚರ್ಮಕ್ಕೆ ಬೇಕಾಗುವಂತಹ ಮೊಶ್ಚಿರೈಸ್ ನ್ನು ಇದು ಒದಗಿಸುವುದು. ಈ…
ಅಜೀರ್ಣದ ಸಮಸ್ಯೆ ಇದ್ದರೆ ಆಗ ಯಾವುದೇ ಆಹಾರ ಸೇವಿಸಿದರೂ ಅದು ಜೀರ್ಣವಾಗದೆ ಹೊಟ್ಟೆಯಲ್ಲಿ ಅಸಿಡಿಟಿ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆ ಉಂಟು ಮಾಡುವುದು. ಇಂತಹ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇದರ ಪ್ರಯೋಜನ ಕಡಿಮೆ ಎನ್ನಬಹುದು. ಔಷಧಿಯು ತುಂಬಾ ರುಚಿಕರವೂ ಆಗಿದ್ದರೆ ಆಗ ಖಂಡಿತವಾಗಿಯೂ ಇದನ್ನು ಪ್ರತಿಯೊಬ್ಬರು ಸೇವಿಸುವರು. ಅದು ಔಷಧಿಯೆಂದು ಅನಿಸದು. ದೇಹದಲ್ಲಿ ಕಾಡುವಂತಹ ಅಜೀರ್ಣ ಮತ್ತು ಅತಿಸಾರದ ಸಮಸ್ಯೆ ನಿವಾರಣೆ ಮಾಡಲು ಕೆಲವು ಜ್ಯೂಸ್ ಗಳು ತುಂಬಾ ಪರಿಣಾಮಕಾರಿ ಎಂದು ಕಂಡುಕೊಳ್ಳಲಾಗಿದೆ ಇವುಗಳ ಸೇವನೆಯಿಂದ ಅಜೀರ್ಣ ಮತ್ತು ಅತಿಸಾರದ ಸಮಸ್ಯೆಯಿದ್ದರೆ ಅದು ನಿವಾರಣೆ ಮಾಡಬಹುದು. ನೀವು ಇದನ್ನು ಔಷಧಿ ಎಂದು ಪರಿಗಣಿಸದೆ ಕೇವಲ ಜ್ಯೂಸ್ ಎಂದು ಭಾವಿಸಿ ಕುಡಿದರೂ ಅದು ನಿಮ್ಮ ಸಮಸ್ಯೆ ನಿವಾರಣೆ ಮಾಡುವುದು. ಇಂತಹ ಕೆಲವು ತಾಜಾ ಜ್ಯೂಸ್ ಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ನೀವು ಇದನ್ನು ಬಳಸಿಕೊಂಡು ಇದರ ಲಾಭ ಪಡೆದುಕೊಳ್ಳಬಹುದು. ಸೇಬಿನಲ್ಲಿ ಸೊರ್ಬಿಟೊಲ್ ಎನ್ನುವ…
ಬೆಂಗಳೂರು: ಸ್ಯಾಟಲೈಟ್ (ಉಪಗ್ರಹ) ಆಧಾರಿತ ಎಲೆಕ್ಟ್ರಿಕ್ ಟೋಲ್ ವಸೂಲಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ, ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಬಂಧನೆ-2008ಕ್ಕೆ ತಿದ್ದುಪಡಿ ಮಾಡಿ ನೋಟಿಫಿಕೇಷನ್ ಜಾರಿ ಮಾಡಿದೆ. ಇದರ ಪ್ರಕಾರ, ಈಗಿರುವ ಟೋಲ್‌ಗಳಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ ಆಧಾರಿತ ಟೋಲ್ ಪದ್ದತಿ ಜಾರಿಗೆ ಬರಲಿದೆ. ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂನ ಆನ್ ಬೋರ್ಡ್ ಯೂನಿಟ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾವನ್ನು ಕ್ರಾಸ್ ಮಾಡಿದಾಗ, ಪಯಣಿಸಿದ ದೂರಕ್ಕೆ ಅನುಗುಣವಾಗಿ ಆಟೋಮೆಟಿಕ್ ಆಗಿ ಟೋಲ್ ಶುಲ್ಕ ಪಾವತಿ ಆಗಲಿದೆ. ಒಬಿಯು ಅಳವಡಿಸಿಕೊಂಡ ವಾಹನಗಳಿಗೆ ಪ್ರತ್ಯೇಕ ಲೇನ್ ತೆರೆಯಲಾಗುತ್ತದೆ. ಮೊದಲ 20 ಕಿಮೀ ವರೆಗೂ ಜೀರೋ ಟೋಲ್ ಕಾರಿಡಾರ್ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅಂದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊದಲ 20 ಕಿಲೋಮೀಟರ್‌ಗೆ ಟೋಲ್ ಪಾವತಿಸುವ ಅಗತ್ಯ ಇರುವುದಿಲ್ಲ. ನಂತರದ ಪಯಣಕ್ಕೆ ಅನುಗುಣವಾಗಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಮೊದಲಿಗೆ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳಲ್ಲಿ ಈ ವಿಧಾನ ಜಾರಿಗೆ ತಂದು, ನಂತರ ದೇಶಾದ್ಯಂತ ಇದನ್ನು ವಿಸ್ತರಿಸಲು…
ಇಲ್ಲೋರ್ವ ಮಹಿಳೆ ತನಗೆ ಸಿಗುವ ಗಂಡ ಎಷ್ಟೆಲ್ಲಾ ಕ್ವಾಲಿಟಿ ಹೊಂದಿರಬೇಕು ಎಂಬುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿವರಿಸಿದ್ದು, ಸಧ್ಯ ಇದು ಚರ್ಚೆಗೆ ಗ್ರಾಸವಾಗಿದೆ. ವಾರ್ಷಿಕವಾಗಿ 1.3 ಲಕ್ಷ ರೂಪಾಯಿ ಗಳಿಸುವ ಬಿಎಡ್ ಪದವಿ ಪಡೆದಿರುವ ವಿಚ್ಛೇದಿತ ಮಹಿಳೆ ಪೋಸ್ಟ್ ಮಾಡಿದ್ದು, ಭಾರತ, ಯುಎಸ್ ಅಥವಾ ಯುರೋಪ್‌ನಲ್ಲಿ ನೆಲೆಸಿರುವ ಸಂಗಾತಿ ಕನಿಷ್ಠ 30 ಲಕ್ಷ ರೂಪಾಯಿ ವಾರ್ಷಿಕ ವೇತನ ಹೊಂದಿರಬೇಕು ಎಂದು ಹುಡುಕುತ್ತಿದ್ದಾರೆ. ಇನ್ನು ತಂದೆ ತಾಯಿಯಂತೂ ಇರಲೇಬಾರದು, ವಾಸಿಸಲು 3 ಬಿಎಚ್ಕೆ ಸ್ವಂತ ಮನೆ ಇರಬೇಕು, ಮನೆಗೆಲಸವನ್ನು ತಾನು ಮಾಡುವುದಿಲ್ಲ, ಅದಕ್ಕೂ ಕೆಲಸದವರಿರಬೇಕು. ಅತ್ತೆ-ಮಾವ ಇದ್ದರೂ ಪ್ರತ್ಯೇಕವಾಗಿರಬೇಕು ಎಂದು ಹೇಳಿದ್ದಾರೆ. ಅವರು ಸಾಫ್ಟ್ವೇರ್ ಎಂಜಿನಿಯರ್, ಎಂಬಿಎ ಅಥವಾ ಎಂಎಸ್ ಓದಿರುವ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಇದು ಆನ್ಲೈನ್ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಆಕೆ ವಿಚ್ಛೇದಿತಳಾಗಿದ್ದರೂ, ಅವಿವಾಹಿತ ಯುವಕನನ್ನು ಹುಡುಕುತ್ತಿದ್ದಾಳೆ. ಆಕೆಯ ಪೋಷಕರು ಆಕೆಯೊಂದಿಗೆ ಇರುತ್ತಾರೆ, ಆದರೆ ಅತ್ತೆ-ಮಾವ ಅಲ್ಲ. ಆಕೆಯ ತಿಂಗಳ ವೇತನ 11000 ಮನೆಗೆಲಸದವರೂ ಈಕೆಗಿಂತ ಹೆಚ್ಚು ಹಣ ಗಳಿಸುತ್ತಾರೆ ಎಂದು ಬರೆದಿದ್ದಾರೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮತಾಂಧ ಶಕ್ತಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಜಿಹಾದಿ ಮುಳ್ಳುಗಳ ದುಸ್ಸಾಹಸ ಶಾಂತಿ ಕದಡುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. https://youtu.be/DzbvGXD-Eos?si=W-jJcAEZH-DYk_z4 ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಣ್ಮರೆಯಾಗಿರುವ ಕಾನೂನು ಸುವ್ಯವಸ್ಥೆಗೆ ಮತ್ತೂಂದು ನಿದರ್ಶನವಾಗಿದೆ. ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತಹುದೇ ಘಟನೆ ನಡೆದಿದ್ದರೂ ಈ ವರ್ಷ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಗೆ ಅಡ್ಡಿಪಡಿಸುವ ದುರುದ್ದೇಶದಿಂದ ಮುಸ್ಲಿಂ ಮತಾಂಧ ಪುಂಡರು ಪೂರ್ವನಿಯೋಜಿತವಾಗಿ ದಾಂಧಲೆ ಎಬ್ಬಿಸಿ ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು, ಚಪ್ಪಲಿ ಎಸೆಯುವುದು, ಪೆಟ್ರೋಲ್ ಬಾಂಬ್…
ಬೆಂಗಳೂರು: ಪಿಎಸ್‍ಐ ಪರೀಕ್ಷೆಯನ್ನು ಸೆ.22ರ ಬದಲು ಸೆ.28ರ ಶನಿವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. https://youtu.be/FtEu6gnMkW0?si=QkaNhES16eSNk6Xi ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎಸ್‍ಸಿ ಪರೀಕ್ಷೆ ಹಾಗೂ ಪಿಎಸ್‍ಐ ಪರೀಕ್ಷೆ ಒಂದೇ ದಿನ ನಿಗದಿಯಾಗಿತ್ತು. ಈ ವಿಚಾರವಾಗಿ ಐಪಿಎಸ್ ಪರೀಕ್ಷೆ ಮುಂದೂಡಿಕೆ ಮಾಡಲು ಮನವಿ ಮಾಡಲಾಗಿತ್ತು. ಅದರಂತೆ ಪಿಎಸ್‍ಐ ಪರೀಕ್ಷೆ ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳ ಒಟ್ಟು 164 ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯನ್ನು ಸೆ.22ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲು ನಿರ್ಧರಿಸಿತ್ತು. ಅದೇ ದಿನ ಯುಪಿಎಸ್‍ಸಿ ಪರೀಕ್ಷೆ ನಿಗದಿಯಾಗಿದ್ದರಿಂದ ಪರೀಕ್ಷೆ ಮುಂದೂಡುವಂತೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹಾಕಿದ್ದರು. ಇದರ ಬೆನ್ನಲ್ಲೇ ಪರೀಕ್ಷೆ ಮುಂದೂಡುವುದಿಲ್ಲ ಎಂದು ಪ್ರಾಧಿಕಾರ ಹೇಳಿತ್ತು. ಇದೀಗ ಗೃಹಸಚಿವರು ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 66,990 ಮಂದಿ…
ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಇಡೀ ಗ್ರಾಮದಲ್ಲಿ ಆತಂಕ ಆವರಿಸಿತ್ತು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಈಗ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲಾಗಿದೆ. ಇನ್ನೂ ಅವಘಡ ಸ್ಥಳಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮಂಡ್ಯ ಡಿಸಿ ಡಾ.ಕುಮಾರ್, ದಕ್ಷಿಣ ವಲಯ ಐಜಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ, ಬಾಲದಂಡಿ ಸೇರಿದಂತೆ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಘಟನೆಗೆ ನಿಖರ ಕಾರಣ ವೇನು, ಯಾಕೆ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಚರ್ಚೆ ಮಾಡಲಿದ್ದು, ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬೆಳಗಾವಿ: ಸಿದ್ದರಾಮಯ್ಯ ಸಾಹೇಬ್ರನ್ನು ಇಳಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಾಹೇಬ್ರನ್ನು ಇಳಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ನ್ಯಾಯಾಲಯ ಎನ್ನುವುದು ಒಂದು ವ್ಯವಸ್ಥೆ. ಅದು ತಾನಾಗಿಯೇ ನಡೆದುಕೊಂಡು ಹೋಗುತ್ತದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎನ್ನುವುದು ನಮ್ಮೆಲ್ಲರ ಆಸೆ. ಹಾಗಾಗಿ, ಅವರೇ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕೇಸ್ಗಳು ಕೋರ್ಟ್ನಲ್ಲಿವೆ. ಇವರಿಗೆ ಸಿದ್ದರಾಮಯ್ಯ ಅಷ್ಟೇ ಯಾಕೆ ಕಾಣಿಸುತ್ತಾರೆ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಇನ್ನು ನಮ್ಮ ತಂದೆಯವರು ಮುಖ್ಯಮಂತ್ರಿ ಆಗಿದ್ದಾಗ ಬೇಕಾದಷ್ಟು ಕೇಸ್ಗಳನ್ನು ನೋಡಿದ್ದೇವೆ. ಇದರ ಬಗ್ಗೆ ಈಗ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು
ಸ್ಯಾಂಡಲ್‌ವುಡ್ ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿಯೇ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಿರೋ ಶ್ರೀಲೀಲಾ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ತೆಲುಗಿನಲ್ಲೂ ಶ್ರೀಲೀಲಾಗೆ ಹೇಳಿಕೊಳ್ಳುವಂತೆ ಬ್ರೇಕ್ ಸಿಕ್ಕಿಲ್ಲ. ನಟಿಸಿದ ಯಾವುದೇ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿಲ್ಲ. ಭಗವಂತ್ ಕೇಸರಿ ಸೇರಿದಂತೆ ಮಹೇಶ್ ಬಾಬು ಜೊತೆಗಿನ ಸಿನಿಮಾ ಕೂಡ ಅಷ್ಟೇನು ಸದ್ದು ಮಾಡಲಿಲ್ಲ. ಹಾಗಾಗಿಯೇ ಶ್ರೀಲೀಲಾ ಬಗೆಗಿನ ಕ್ರೇಜ್ ಒಂಚೂರು ಕಡಿಮೆ ಆಗಿದೆ ಅಂತಲೂ ಅಂದಾಜು ಮಾಡೋರು ಇದ್ದಾರೆ. ಆದರೆ, ಶ್ರೀಲೀಲಾ ಯಾವುದಕ್ಕೂ ತಲೆನೇ ಕೆಡಿಸಿಕೊಳ್ಳದೇ ಮುನ್ನುಗುತ್ತಿದ್ದಾರೆ. ಸಿನಿಮಾಗಳು ಸೈಲೆಂಟ್ ಆದ್ರೂ ಶ್ರಿಲೀಲಾಗೆ ಬರ್ತಿರೋ ಆಫರ್ ಗಳು ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಸ್ಟಾರ್ ನಟರ ಸಿನಿಮಾಗಳಿಗೆ ಶ್ರೀಲೀಲಾಗೆ ಸಾಕಷ್ಟು ಆಫರ್ ಗಳ ಬರ್ತಿವೆ. ಸದ್ಯ ಶ್ರೀಲೀಲಾ ಕೈಯಲ್ಲಿ ಮೂರು ನಾಲ್ಕು ಸಿನಿಮಾಗಳಿದ್ದು ಎಲ್ಲವೂ ಚಿತ್ರೀಕರಣದ ಹಂತದಲ್ಲಿದೆ. ಈ ಮಧ್ಯೆ ಶ್ರೀಲೀಲಾ ಹೊಸ ಫೋಟೋ ಶೂಟ್ ಮಾಡಿಸಿದ್ದು ಅಪ್ಸರೆಯಂತೆ ಕಂಗೊಳಿಸಿದ್ದಾರೆ. ತಿಳಿ ಬಣ್ಣದ ಡ್ರೆಸ್ ಧರಿಸಿರುವ ಶ್ರೀಲೀಲಾ ವಿವಿಧ ಭಂಗಿಯಲ್ಲಿ…