ಸಮುದ್ರದತ್ತ ಉತ್ತರ ಕೊರಿಯಾವು ಅಲ್ಪ-ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ. ಯುದ್ಧ ಸಿದ್ಧತೆಗಾಗಿ ಪರಮಾಣು ಬಲವನ್ನು ಸಂಪೂರ್ಣವಾಗಿ ಸಜ್ಜುಗೊಳಿಸುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಖಂಡಾಂತರ ಕ್ಷಿಪಣಿಗಳು ಕೊರಿಯನ್ ಪೆನಿನ್ಸುಲಾ ಹಾಗೂ ಜಪಾನ್ ಮಧ್ಯದ ಸಮುದ್ರ ಪ್ರದೇಶದಲ್ಲಿ ಅಪ್ಪಳಿಸಿದ್ದು ಅವುಗಳನ್ನು ಪತ್ತೆಹಚ್ಚಿರುವುದಾಗಿ ದಕ್ಷಿಣ ಕೊರಿಯಾದ ಚೀಫ್ ಆಫ್ ಸ್ಟಾಫ್ ಜಂಟಿ ಮುಖ್ಯಸ್ಥರು ಹೇಳಿದ್ದಾರೆ. ಯಾವುದೇ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿ ಲಭ್ಯವಾಗಿಲ್ಲ. ಆದರೆ ಹಡಗು ಹಾಗೂ ಯುದ್ಧ ವಿಮಾನಗಳು ಸಜ್ಜಾಗಿರುವಂತೆ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೂಚನೆ ನೀಡಿದ್ದಾರೆ. ಸುಮಾರು 360 ಕಿ.ಮೀ. ಹಾರಿ ಬಂದ ಕ್ಷಿಪಣಿ ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಲು ಯೋಜಿಸಲಾಗಿದೆ. ಕೊರಿಯನ್ ಪೆನಿನ್ಸುಲಾದಲ್ಲಿ ಶಾಂತಿಯ ವಾತಾವರಣಕ್ಕೆ ಬೆದರಿಕೆ ಉಂಟು ಮಾಡಲು ಮತ್ತು ಪ್ರಚೋದನೆಯನ್ನು ದಕ್ಷಿಣ ಕೊರಿಯಾ ತೀವ್ರವಾಗಿ ಖಂಡಿಸಿದೆ. ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ಮಧ್ಯೆ…
Author: Prajatv Kannada
ಮೀಸಲಾತಿ ಕುರಿತು ಹೇಳಿಕೆ ನೀಡುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಅಮೆರಿಕದಲ್ಲಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ನಾಯಕರು ಮಾತ್ರವಲ್ಲದೆ ಬಿಎಸ್ಪಿ ಮತ್ತು ಇತರ ಸಣ್ಣ ಪಕ್ಷಗಳು ಕೂಡ ಮೀಸಲಾತಿ ಮತ್ತು ಇತರ ವಿಷಯಗಳ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ರಾಹುಲ್ ಗಾಂಧಿ ಮೀಸಲಾತಿ ಕುರಿತ ನನ್ನು ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ, ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗುವವರೆಗೆ ಕಾಂಗ್ರೆಸ್ ಮೀಸಲಾತಿಯನ್ನು ಕೊನೆಗೊಳಿಸುವುದಿಲ್ಲ. ದೇಶದಲ್ಲಿ ಮೀಸಲಾತಿಯನ್ನು ಕೊನೆಗೊಳಿಸಲು ಇದು ಸರಿಯಾದ ಸಮಯವಲ್ಲ. ಸಮಯ ಬಂದಾಗ ಕಾಂಗ್ರೆಸ್ ಈ ಬಗ್ಗೆ ಯೋಚಿಸಲಿದೆ ಎಂದಿದ್ದರು. ಮೀಸಲಾತಿ ವಿಚಾರವಾಗಿ ತಮ್ಮ ಹೇಳಿಕೆ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಇದಕ್ಕೆ ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ, ಮೀಸಲಾತಿ ಕುರಿತು ತಮ್ಮ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಲಾಗಿದೆ. ಮೀಸಲಾತಿಗೆ ತಾನು ವಿರೋಧಿಯಲ್ಲ…
ಬೆಳಗಾವಿ:- ಸಿದ್ದರಾಮಯ್ಯ ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ಅವರೇ ಮುಖ್ಯಮಂತ್ರಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹಾದಿ, ಬೀದಿಯಲ್ಲಿ ಚರ್ಚೆ ಮಾಡುವಂತಹದಲ್ಲ. ಧೀಮಂತ ಮತ್ತು ಗಟ್ಟಿ ನಾಯಕತ್ವ ಸಿದ್ದರಾಮಯ್ಯನವರಿಗೆ ಇದೆ. ಹಾಗಾಗಿ, ಅವರು ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎನ್ನುತ್ತಾರೋ, ಅಲ್ಲಿಯವರೆಗೆ ನಮ್ಮ ಶಾಸಕರ ಬೆಂಬಲ ಇರುತ್ತದೆ ಎಂದರು. ಮುಡಾ ಹಗರಣದಲ್ಲಿ ಬಿಜೆಪಿಯವರು ಸುಳ್ಳು ದಾಖಲೆ ಹುಟ್ಟಿಸಿ ಏನೋ ಮಾಡುತ್ತಿದ್ದಾರೆ. ಇಂಥ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, 135 ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತ ಸಂದರ್ಭದಲ್ಲಿ, ಇದೆಲ್ಲಾ ಬಾಲಿಷ. ಈ ವಿಚಾರದಲ್ಲಿ ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾವೂ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ‘ಕೈ’ ನಾಯಕರ ಹೇಳಿಕೆ ಬಗ್ಗೆ ಮಾತನಾಡಿ, ನಾನು ಓರ್ವ ಜವಾಬ್ದಾರಿಯುತ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೇಳುತ್ತಿದ್ದೇನೆ. ನಮ್ಮದು ಶಿಸ್ತಿನ ಪಕ್ಷ. ಪಕ್ಷದ ಹೈಕಮಾಂಡ್ ಮತ್ತು ಶಾಸಕರು ಇದನ್ನು ನಿರ್ಣಯಿಸುತ್ತಾರೆ. ಅಲ್ಲಿ, ಇಲ್ಲಿ, ಗಲ್ಲಿಯಲ್ಲಿ ಮಾತನಾಡುವ ವಿಷಯಗಳು ಇವಲ್ಲ…
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಇನ್ನೇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಗಿ ಅಧ್ಯಕ್ಷೀಯ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಪ್ರತಿಸ್ಪರ್ಧಿಗಳಾದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಕಮಲಾ ಹ್ಯಾರಿಸ್ ನಡುವೆ ಮುಖಾಮುಖೀ ಚರ್ಚೆ ನಡೆದಿದೆ. ರಷ್ಯಾ-ಉಕ್ರೇನ್, ಇಸ್ರೇಲ್-ಗಾಜಾ ಯುದ್ಧ, ಗರ್ಭಪಾತ ಕಾನೂನು, ವಲಸಿಗರು, ಗನ್ ನಿಯಂತ್ರಣ ಕಾನೂನು, ಸರ್ವರಿಗೂ ಆರೋಗ್ಯ ಸೇವೆ ಸೇರಿ ಹಲವು ವಿಚಾರಗಳ ಕುರಿತು ಉಭಯ ಸ್ಪರ್ಧಿಗಳು 90 ನಿಮಿಷಗಳ ಕಾಲ ವಾಗ್ವಾದ ನಡೆಸಿದರು. ನಾನು ಗೆದ್ದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುತ್ತೇನೆ ಎಂದು ಟ್ರಂಪ್ ಘೋಷಿಸಿದ್ದು, ನಾನು ಅಧ್ಯಕ್ಷನಾಗಿರುತ್ತಿದ್ದರೆ ಈ ಯುದ್ಧ ಆರಂಭವೇ ಆಗುತ್ತಿರಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಲಾ, “ನೀವು ಅಧ್ಯಕ್ಷರಾಗಿರುತ್ತಿದ್ದರೆ ಇಷ್ಟರಲ್ಲೇ ಪುಟಿನ್ ಉಕ್ರೇನ್‌ನಲ್ಲಿ ಕುಳಿತು, ಯುರೋಪ್ ಮೇಲೆ ದಾಳಿಗೆ ಪ್ಲ್ರಾನ್ ಮಾಡುತ್ತಿರುತ್ತಿದ್ದರು. ನಿಮಗೆ ಸರ್ವಾಧಿಕಾರಿಗಳೆಂದರೆ ಬಹಳ ಪ್ರೀತಿ. ಪುಟಿನ್ ಮಧ್ಯಾಹ್ನದ ಭೋಜನಕ್ಕೆ ನಿಮ್ಮನ್ನೇ ತಿಂದು ತೇಗುತ್ತಿದ್ದರು’ ಎಂದು ತಿರುಗೇಟು ನೀಡಿದರು.…
ಹುಬ್ಬಳ್ಳಿ:- ರಾಹುಲ್ ಗಾಂಧಿ ಭಾರತದ ಮಾನ ಹರಾಜು ಹಾಕ್ತಿದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ವಿದೇಶದಲ್ಲಿ ರಾಹುಲ್ ಗಾಂಧಿಯಿಂದ ಅಪ್ರಬುದ್ಧ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ರಾಹುಲ್ ಗಾಂಧಿ ಭಾರತದ ಮಾನ ಹರಾಜು ಹಾಕುತ್ತಿದಾರೆ. ಕಾಂಗ್ರೆಸ್ ಮೀಸಲಾತಿ, ಸಾಮಾಜಿಕ ನ್ಯಾಯದ ವಿರೋಧಿ. ನೆಹರು, ಇಂದಿರಾ, ರಾಜೀವ್ ಗಾಂಧಿ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ಸಾಮಾಜಿಕ ವಿರೋಧಿ ಅನ್ನೋದು ಸ್ಪಷ್ಟವಾಗುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ ಅಂಬೇಡ್ಕರ್ಗೆ ಅಪಮಾನ ಮಾಡಿದವರು ಕಾಂಗ್ರೆಸ್ನವರು. ಬಾಬು ಜಗಜೀವನ್ ರಾಮ್ಗೆ ಕಾಂಗ್ರೆಸ್ನಿಂದ ಅನ್ಯಾಯವಾಗಿದೆ. ದಲಿತರು, ಅಲ್ಪಸಂಖ್ಯಾತರನ್ನ ಮತಬ್ಯಾಂಕ್ ಮಾಡ್ಕೊಂಡಿದೆ. ರಾಹುಲ್ ಗಾಂಧಿ ಹೇಳಿಕೆಯನ್ನ ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯ ಟೀಕೆ ಭರದಲ್ಲಿ ಇಂಥ ಮಾತು ಸರಿಯಲ್ಲ. ದೇಶದ ಪ್ರತಿಷ್ಠೆಗೆ ರಾಹುಲ್ ಗಾಂಧಿ ಮಸಿ ಬಳಿಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಎಎಸ್ಐಗೆ ಗಾಯ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ದುರ್ದೈವದ ಘಟನೆ, ಈ ರೀತಿ ಆಗಬಾರದಿತ್ತು. ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿತ್ತು. ಈ ಕಾಮಗಾರಿಗೂ ಕೇಂದ್ರ…
ನೆಲಮಂಗಲ:- ಜಿಲ್ಲೆಯ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಜರುಗಿದೆ. ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಮಂಡ್ಯ:- ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಆಗಿ ಗಲಾಟೆ ಆಗಿರುವ ಘಟನೆಗೆ ಸಂಬಂಧಿಸಿದಂತೆ ಮಂಡ್ಯ ಸಂಸದ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಗಲಾಟೆಯ ಮಾಹಿತಿ ನನಗೆ ರಾತ್ರಿ 9 ಗಂಟೆ ಸುಮಾರಿಗೆ ಗೊತ್ತಾಯಿತು. ಆ ಕೂಡಲೇ ಮಂಡ್ಯ ಎಸ್‌ಪಿಗೆ ಫೋನ್ ಮಾಡಿ ಕೇಳಿದೆ ಎಂದರು. ಎರಡೂ ಗುಂಪುಗಳಿಂದ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನ ಹತೋಟಿಗೆ ತೆಗೆದುಕೊಳ್ಳಲು ಪೊಲೀಸರಿಗೆ ಸೂಚಿಸಿದೆ. ಘಟನಾ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡುತ್ತೇನೆಂದು ಹೇಳಿದ್ದಾರೆ. ಇಂಥ ವಾತಾವರಣಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ. ಮಂಡ್ಯದಲ್ಲಿ ಇಂತಹ ಘಟನೆಗೆ ಅವಕಾಶ ಇರಲಿಲ್ಲ. ಸ್ಥಳೀಯ ಜನತೆಗೆ ಯಾರೋ ಮಾಡಿದ್ದಕ್ಕೆ ನೀವು ಬಲಿಯಾಗಬೇಡಿ ಎಂದು ನನ್ನ ಕಳಕಳಿಯಿಂದ ಮನವಿ ಮಾಡುತ್ತೇನೆ. ಸೌಹಾರ್ದಯುತವಾಗಿ ಮೆರವಣಿಗೆ ನಡೆಯಬೇಕಾಗಿತ್ತು. ಇಂಥ ದಬ್ಬಾಳಿಕೆಯಿಂದ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆಗೆ ರಾಜ್ಯ ಸರ್ಕಾರದ…
ನಾಗಮಂಗಲ :- ನಾಗಮಂಗಲದಲ್ಲಿ 144 ಸೆಕ್ಷನ್ ಜಾರಿ ಆಗಿದ್ದು, ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ಸಂಭವಿಸಿದ ಹಿನ್ನೆಲೆಯಲ್ಲಿ ಶನಿವಾರದವರೆಗೆ ನಾಗಮಂಗಲ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬುಧವಾರ ರಾತ್ರಿಯಿಂದಲೇ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಇಂದು ಪಟ್ಟಣ ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ 46 ಮಂದಿಯನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ನಾಗಮಂಗಲ ಪಟ್ಟಣದ್ಯಾಂತ ಪೊಲೀಸರ ಸರ್ಪಗಾವಲು ಹಾಕಿದ್ದಾರೆ. ಅನ್ಯಕೋಮಿನ ಯುವಕರ ಕೃತ್ಯ ಖಂಡಿಸಿ ಇಂದು ನಾಗಮಂಗಲ ಬಂದ್‌ಗೆ ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಇತರೇ ಹಿಂದೂಪರ ಸಂಘಟನೆಗಳು ಕರೆ ನೀಡಿವೆ.
ಬೆಂಗಳೂರು:- ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯಾರು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೋ ಅವರು ತಮ್ಮ ಆಧಾರ್‌ಕಾರ್ಡನ್ನು ಇದುವರೆಗೆ ಅಪ್‌ಡೇಟ್ ಮಾಡಿಸಿಕೊಳ್ಳದೇ ಇದ್ದರೆ ಸೆಪ್ಟೆಂಬರ್ 14ರೊಳಗಾಗಿ ತಮ್ಮ ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದು ಘೋಷಣೆ ಮಾಡಿದೆ. ನೀವು ಈಗಿರುವ ವಿಳಾಸದ ಪ್ರೂಫ್ ಹಾಗೂ ಈಗಿನ ಐಡೆಂಟಿಟಿ ಪ್ರೂಫ್ ಗಳು, ಬದಲಾಗಿರುವ ಮೊಬೈಲ್ ಸಂಖ್ಯೆ, ಬಯೋಮೆಟ್ರಿಕ್ಸ್ ಮಾಹಿತಿ – ಮುಂತಾದವುಗಳನ್ನು ನೀವು ಅಪ್ಡೇಟ್ ಮಾಡಬಹುದು. ಇವುಗಳಿಗೆ ಸಂಬಂಧಿಸಿದ ದಾಖಲೆಗಳ ಜೊತೆಗೆ ಯಾವುದೇ ಆಧಾರ್ ಅಪ್ಡೇಟ್ ಕೇಂದ್ರಕ್ಕೆ ಹೋಗಿ ಅಲ್ಲಿ ಉಚಿತವಾಗಿ ಸೆ. 14ರೊಳಗೆ ಅಪ್ಡೇಟ್ ಮಾಡಿಸಬಹುದು. ಆದರೆ, ಸೆ. 14ರ ನಂತರ ಈ ಪ್ರತಿಯೊಂದು ಅಪ್ಡೇಟ್ ಗೂ ಮೇಲೆ ತಿಳಿಸಿದಂತೆ ತಲಾ 50 ರೂ. ಶುಲ್ಕ ವಿಧಿಸಲಾಗುತ್ತದೆ. ಗೂಗಲ್ ಟ್ರೆಂಡ್ಸ್ ನಲ್ಲಿ ಆಧಾರ್ ಕಾರ್ಡ್ ನ ಮಾಹಿತಿಯ ಉಚಿತ ಬದಲಾವಣೆಯ ಗಡುವು ವಿಚಾರ ಸೆ. 10ರಂದು ಭಾರೀ ಟ್ರೆಂಡ್ ನಲ್ಲಿತ್ತು. ತೆಲಂಗಾಣದಲ್ಲಿ ಶೇ. 100ರಷ್ಟು ಗೂಗಲ್ ಬಳಕೆದಾರರು ಇದಕ್ಕಾಗಿ ಹುಡುಕಾಟ ನಡೆಸಿದ್ದರು.…
ಬೆಂಗಳೂರು:- ಸೆಪ್ಟೆಂಬರ್ 15ರೊಳಗೆ ಹೆಚ್‌ಎಸ್‌ಆರ್‌ಪಿ ನಂಬರ್ ಅಳವಡಿಸಿಕೊಂಡಿಲ್ಲ ಅಂದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ. ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಸೆಪ್ಟೆಂಬರ್ 15 ಡೆಡ್ಲೈನ್ ಆಗಿದೆ. ಸೆಪ್ಟೆಂಬರ್ 15ರ ನಂತರ ನಿಮ್ಮ ವಾಹನಕ್ಕೆ ಹೆಚ್‌ಎಸ್‌ಆರ್‌ಪಿ ಇಲ್ಲದ್ರೆ ದಂಡ ಹಾಕಲಾಗುತ್ತದೆ. ವಾಹನಗಳಿಗೆ ಹೈಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಆಳವಡಿಕೆಗೆ 5 ದಿನವಷ್ಟೇ ಬಾಕಿ ಇದೆ. ಕೇಂದ್ರ ಸಾರಿಗೆ ಇಲಾಖೆಯಿಂದ ದೇಶದಾದ್ಯಂತ ಎಲ್ಲ ಮೋಟಾರು ವಾಹನಗಳಿಗೆ ಒಂದೇ ಮಾದರಿಯ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಸಂಬಂಧ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಅಳವಡಿಕೆ ಮಾಡಲು ಆದೇಶ ಹೊರಡಿಸಿದೆ. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿ ನಂತರ ದಂಡ ಪಾವತಸಿಕೊಳ್ಳಲು ಅನುಮತಿಯನ್ನೂ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದಕ್ಕೆ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿಕೊಂಡು ಬಂದಿದೆ. ಇದೀಗ ನಾಲ್ಕನೇ ಬಾರಿಯ ಗಡುವು ವಿಸ್ತರಣೆ ಅವಧಿಯು ಸೆ.15ಕ್ಕೆ ಮುಕ್ತಾಯಗೊಳ್ಳಲಿದೆ.…