ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲಮ್ಸ್ ಪರಭಾಷೆಯಲ್ಲೂ ಸದ್ದು ಮಾಡುತ್ತಿದೆ. ಇದೀಗ ಹೊಂಬಾಳೆ ಸಂಸ್ಥೆ ಹೊಸ ಸಿನಿಮಾ ಘೋಷಣೆ ಮಾಡಿದ್ದು ಇಂದು ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಈ ಪೋಸ್ಟರ್ ಚಿತ್ರದ ಕುರಿತು ಸಾಕಷ್ಟು ಕುತೂಹಲ ಮೂಡಿಸಿದೆ. ಸದ್ಯ ಬಿಡುಗಡೆ ಮಾಡಲಾಗಿರುವ ಪೋಸ್ಟರ್ನಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ, ಆದರೆ ಪೋಸ್ಟರ್ ನೋಡಿದವರಿಗೆ ಇದು ಪೌರಾಣಿಕ ಸಿನಿಮಾ ಇರಬಹುದು ಎಂಬ ಅನುಮಾನ ಮೂಡಿದೆ. ಜೊತೆಗೆ ಇದು ಅನಿಮೇಷನ್ ಸಿನಿಮಾ ಆಗಿರಬಹುದೆಂಬ ಅನುಮಾನವೂ ಇದೆ. ಹೊಂಬಾಳೆ ಸದ್ಯ ಹಂಚಿಕೊಂಡಿರುವ ಪೋಸ್ಟರ್ನಲ್ಲಿ ರಕ್ತ ಮೆತ್ತಿದ ಕೈ ಮಾತ್ರವೇ ಕಾಣುತ್ತಿದ್ದು, ಪೌರಾಣಿಕ ಕತೆಯಾದ ನರಸಿಂಹನ ಕೈ ರೀತಿ ಕಾಣುತ್ತಿದೆ. ಚೂಪಾದ ಉಗುರುಗಳು ಜೊತೆಗೆ ಕೈಗೆ ಧರಿಸಿರುವ ಕೆಲವು ಆಭರಣಗಳು ಗಮನ ಸೆಳೆಯುತ್ತಿವೆ. ಪೋಸ್ಟರ್ ಬಿಡುಗಡೆ ಮಾಡಿರುವ ಹೊಂಬಾಳೆ, ‘ನಂಬಿಕೆಗೆ ಸವಾಲು ಬಂದಾಗ ಅವನು ಬರುತ್ತಾನೆ’ ಎಂಬ ಅಡಿಬರಹವನ್ನು ನೀಡಿದೆ. ಸಿನಿಮಾದ ಇತರೆ ಮಾಹಿತಿಯನ್ನು ನಾಳೆ ಅಂದರೆ ನವೆಂಬರ್ 16 ಮಧ್ಯಾಹ್ನ…
Author: Prajatv Kannada
ಇಂದು ವ್ಯಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಗೆಲುವಿನ ನಗಾರಿ ಬಾರಿಸಲು ಸಜ್ಜಾಗಿದೆ. ರಿಂಕು ಸಿಂಗ್ ಬ್ಯಾಟಿಂಗ್ ಕ್ರಮಾಂಕ ಹಾಗೂ ಅವರ ಪಾತ್ರದ ಬಗ್ಗೆ ಹೆಚ್ಚು ಸ್ಪಷ್ಟನೆ ಸಿಗಬೇಕಿದೆ. ಭಾರತ ಟಿ20 ತಂಡದಲ್ಲಿ ಬಹುಕಾಲ ಉಳಿಯಬಲ್ಲ ಆಟಗಾರ ಎಂದು ಗುರುತಿಸಿಕೊಂಡಿರುವ ರಿಂಕು, ಮೊದಲೆರಡು ಪಂದ್ಯಗಳಲ್ಲಿ 6ನೇ ಹಾಗೂ ಕಳೆದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ್ದರು. 3 ಇನ್ನಿಂಗ್ಸ್‌ಗಳಿಂದ ಕೇವಲ 28 ರನ್ ಗಳಿಸಲು ರಿಂಕು, 34 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಅಂಶ ತಂಡದ ಆಡಳಿತವನ್ನು ಗೊಂದಲಕ್ಕೆ ಸಿಲುಕಿಸಬಹುದು. ಜೊತೆಗೆ ರಿಂಕುರ ಮನದಲ್ಲೂ ಆತಂಕ ಮೂಡಿಸಿರಬಹುದು. ಈ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ಸ್ಫೋಟಕ ಇನ್ನಿಂಗ್ಸ್ ಮೂಡಿಬರಬಹುದೇ ಎನ್ನುವ ಕುತೂಹಲವಿದೆ. ಮತ್ತೊಂದೆಡೆ, ಬೌಲರ್‌ಗಳು ಸುಧಾರಿತ ಪ್ರದರ್ಶನ ತೋರಿದರೆ ಸರಣಿ ಗೆಲುವಿನ ಹಾದಿ ಸುಗಮಗೊಳ್ಳಬಹುದು. ಅರ್ಶದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಇನ್ನು, ಅವಕಾಶಕ್ಕಾಗಿ ಕಾಯುತ್ತಿರುವ ವೇಗಿಗಳಾದ ವೈಶಾಖ್ ವಿಜಯ್ ಕುಮಾರ್ ಹಾಗೂ ಯಶ್ ದಯಾಳ್‌ಗೆ…
ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈಗಾಗಲೇ ಕರೆ ಮಾಡಿದ ಕೆಲವರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ಖ್ಯಾತ ಭೋಜ್‌ಪುರಿ ನಟಿ, ಬಿಗ್ ಬಾಸ್ ಒಟಿಟಿ ಖ್ಯಾತಿಯ ಅಕ್ಷರಾ ಸಿಂಗ್‌ಗೆ ಕೊಲೆ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದವರು ಆಕೆಯಿಂದ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿ ಈ ಬಗ್ಗೆ ಡಣಾಪುರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಎರಡು ವಿಭಿನ್ನ ಸಂಖ್ಯೆಗಳಿಂದ ಅಕ್ಷರಾ ಸಿಂಗ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಹಣ ನೀಡುವಂತೆ ಜೀವಬೆದರಿಕೆ ಹಾಕಿರುವುದಾಗಿ ಲಿಖಿತ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ದಾನಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪ್ರಶಾಂತ್ ಭಾರದ್ವಾಜ್ ಅವರು ಪಿಟಿಐಗೆ ದೂರು ನೀಡಿದ್ದಾರೆ. ನಟಿಯ ತಂದೆ ಬಿಪಿನ್ ಸಿಂಗ್ ಈ ಬಗ್ಗೆ ಆಕೆಗೆ ಎರಡು ಅಪರಿಚಿತ ಸಂಖ್ಯೆಗಳಿಂದ…
ಹಾವೇರಿ: ಪ್ರತಿಯೊಂದು ಇಲಾಖೆಯಲ್ಲಿ ಕಲೆಕ್ಷನ್ ಸೆಂಟರ್ʼಗಳು ಆಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬ ರಾಜಕಾರಣಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. https://youtu.be/nMWvbEIa-ww?si=ms5PFOXml0RqAwYy ಆಪಾದನೆಯ ದಿಕ್ಕನ್ನ ಬೇರೆ ಕಡೆ ತಿರುಗಿಸಲು ಹೀಗೆ ಹೇಳುತ್ತಿದ್ದಾರೆ. ಅವರು ಬಹಳ ಗೊಂದಲದಿಂದ ಹತಾಶೆರಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಮೂರುವರೆ ವರ್ಷ ನಾನೇ ಸಿ.ಎಂ ಅಂತಾರೆ. ಮತ್ತೊಂದು ಕಡೆ ನನಗೆ ಶಕ್ತಿ ಕೊಡಿ ಐದು ವರ್ಷ ಅಧಿಕಾರ ಪೂರ್ಣ ಮಾಡಬೇಕು ಅಂತಾರೆ. ಮಳೆ ಹಾನಿಗೆ ಸಾಕಷ್ಟು ಬೆಳೆಗಳು ಹಾನಿಯಾಗಿದೆ. ಒಂದೇ ಒಂದು ಪರಿಹಾರ ಬರುತ್ತಿಲ್ಲ, ಸರ್ಕಾರ ಗೊಂದಲದಲ್ಲಿದೆ. ಮುಸ್ಲಿಂ ಗುತ್ತಿಗೆದಾರರಿಗೆ ನಾಲ್ಕು ರಿಯಾಯಿತಿ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದಲ್ಲಿ ಕೂಡ ಸೈಟ್ ತೆಗೆದುಕೊಂಡಿಲ್ಲ ಎಂದು ಹೇಳಿ ವಾಪಸ್ ಕೊಡುತ್ತೇವೆ ಎನ್ನುತ್ತಾರೆ ಇದು ಯೂಟರ್ನ್ ಸರ್ಕಾರ ಎಂದು ಗುಡುಗಿದರು. ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಅಧಿಕಾರಿ…
ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣದ ಸಂಬಂಧ ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಹೆಬ್ಬಗೋಡಿ ಇನ್ಸ್ಪೆಕ್ಟರ್ ಐಯನ್ ರೆಡ್ಡಿಯನ್ನು ಬಂಧಿಸಿರುವ ತನಿಖಾ ತಂಡ, ತೀವ್ರ ವಿಚಾರಣೆ ನಡೆಸುತ್ತಿದೆ. https://youtu.be/BvMlOdAKMcc?si=ER6drD_yE7ieDiwL ಐಯನ್ ರೆಡ್ಡಿ ಈ ಹಿಂದೆ ಮುನಿರತ್ನ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಎಸ್ ಐಟಿ ತಂಡ ಸಂತ್ರಸ್ತೆ ಹಾಗೂ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ವಿಚಾರಣೆ ನಡೆಸಿತ್ತು. ಈ ವೇಳೆ ಮಾಜಿ ಕಾಪೋರೇಟರ್ ವೇಲು ಇನ್ಸ್ಪೆಕ್ಟರ್ ವಿರುದ್ದ ಮಾಹಿತಿ ನೀಡಿದ್ದರು. ಇದೇ ಮಾಹಿತಿ ಆಧರಿಸಿ ಐಯನ್ ರೆಡ್ಡಿಯನ್ನು ವಶಕ್ಕೆ ಪಡೆದಿರುವ ಎಸ್ ಐಟಿ ಸಿಐಡಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ. ಮುನಿರತ್ನ ನಡೆಸುತ್ತಿದ್ದ ಹನಿಟ್ರ್ಯಾಪ್ ದಂಧೆಗೆ ಇನ್ಸ್ಪೆಕ್ಟರ್ ನೆರವು ನೀಡಿದ್ದಾರೆ. ಅಲ್ಲದೇ ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು ಗೊತ್ತಿದ್ದರೂ ಮಾಹಿತಿ ಬಚ್ಚಿಟ್ಟಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ಹೆಬ್ಬಗೋಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಐಯನ್ ರೆಡ್ಡಿಯನ್ನು ವಶಕ್ಕೆ…
ಗದಗ:- ಇಲ್ಲಿನ ಬಿಂಕದಕಟ್ಟಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಕಾಣಿಸಿಕೊಂಡ ನಂತರ ಸ್ಥಳೀಯ ಜನತೆ ಆತಂಕಕ್ಕೀಡಾದ ಘಟನೆ ಜರುಗಿದೆ https://youtu.be/BvMlOdAKMcc?si=bLnTlCTus3BRXX-O ಗದಗ ತಾಲೂಕಿನ ಬಿಂಕದಕಟ್ಟಿ, ನಾಗಾವಿ, ಅಸುಂಡಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮನೆಯೊಂದರ ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿದೆ. ಚಿರತೆ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಾವು ಸೇವಿಸುವ ಆಹಾರಗಳಲ್ಲಿ ಬಳಸಲ್ಪಡುವ ಹಲವಾರು ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿಗೆ ಅಗ್ರಸ್ಥಾನ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಸುವಾಸನೆಯುಕ್ತ ಮತ್ತು ರುಚಿಯಲ್ಲಿ ಸ್ವಲ್ಪ ಸಿಹಿಯಾಗಿರುವ ಏಲಕ್ಕಿಯನ್ನು ಜನ ಮಿಂಟ್ ಗೆ ಹೋಲಿಸುತ್ತಾರೆ. ಭಾರತೀಯ ಮೂಲದ ಏಲಕ್ಕಿ ಈಗ ವಿಶ್ವದಾದ್ಯಂತ ಸಿಹಿ ಮತ್ತು ಖಾರದ ಅಡುಗೆ ಪದಾರ್ಥಗಳಲ್ಲಿ ಹೇರಳವಾಗಿ ಉಪಯೋಗಿಸಲ್ಪಡುವ ಮಸಾಲೆ ಪದಾರ್ಥ. ಇದು ಹಲವಾರು ಔಷಧೀಯ ಗುಣಗಳನ್ನೂ ಹೊಂದಿದ್ದು ಸಾಂಪ್ರದಾಯಿಕ ಔಷಧಿ ತಯಾರಿಕೆಯಲ್ಲೂ ಏಲಕ್ಕಿಯನ್ನು ಬಳಸಲಾಗಿದೆ. ಇನ್ನೂ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಲು ಬಯಸುತ್ತಾರೆ. ಆದರೆ ಮಾಹಿತಿ ಕೊರತೆಯಿಂದ ಬಹುತೇಕ ರೈತರು ಗೊಂದಲದಲ್ಲಿದ್ದಾರೆ. ನೀವೂ ಕೂಡ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬೇಕೆಂದಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಅಂತಹ ಕೃಷಿಯ ಬಗ್ಗೆ ಹೇಳುತ್ತೇವೆ. ಈ ಕೃಷಿ ಮಾಡುವುದರಿಂದ ನೀವು ಲಕ್ಷಗಟ್ಟಲೆ ಲಾಭ ಗಳಿಸಬಹುದು. ಏಲಕ್ಕಿ ಕೃಷಿ. ನಾವು ಏಲಕ್ಕಿ ಬಗ್ಗೆ ಮಾತನಾಡುತ್ತಿದ್ದೇವೆ. ಏಲಕ್ಕಿಯು ಅಡುಗೆ ಪದಾರ್ಥವಾಗಿದ್ದು, ಇದು ಪ್ರತಿ ಮನೆಯ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿದೆ.…
ದೆಹಲಿ:- ವಿಪರೀತ ವಾಯುಮಾಲಿನ್ಯದ ಹಿನ್ನೆಲೆ ದೆಹಲಿಯಲ್ಲಿ ಟಫ್ ರೂಲ್ಸ್ ಸಹ ಜಾರಿಗೆ ಬರಲಿವೆ. ಚಳಿಗಾಲ ಆರಂಭವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಉಸಿರಾಡೋಕು ದೆಹಲಿ ಜನತೆ ಹಿಂದೆ ಮುಂದೆ ನೋಡಬೇಕಾದಂತ ಶೋಚನೀಯ ಸ್ಥಿತಿ ಬಂದೊದಗಿದೆ. https://youtu.be/chSs9kRj9Jk?si=oQqaIFO-OxyT7C3o ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ವಾಯುಮಾಲಿನ್ಯ ದುಷ್ಪರಿಣಾಮ ಬಿರುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಕೋವಿಡ್ ಸಮಯದ ಆನ್ಲೈನ್ ಕ್ಲಾಸ್ ಅಸ್ತ್ರವನ್ನ ಮತ್ತೆ ಪ್ರಯೋಗಿಸಿದೆ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಹಿನ್ನೆಲೆ ಮಕ್ಕಳು ಹಾಗೂ ವೃದ್ಧರನ್ನ ಸೇಫ್ ಮಾಡೋದೆ ಸವಾಲಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಗಾಳಿ ಗುಣಮಟ್ಟವು 418 AQIನೊಂದಿಗೆ ಅತ್ಯಂತ ಕಳಪೆ ಗುಣಮಟ್ಟ ದಾಖಲಾದ ಹಿನ್ನೆಲೆ ಸರ್ಕಾರ ಮಕ್ಕಳಿಗಾಗಿ ಅನ್ಲೈನ್ ಕ್ಲಾಸ್ ಮೊರೆ ಹೋಗಿದೆ. ಈ ಕುರಿತು ದೆಹಲಿ ಸಿಎಂ ಅತಿಶಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆ ಆಗಿದ್ದು, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ದೆಹಲಿ…
ವೈವಾಹಿಕ ಜೀವನದಲ್ಲಿ ಸೆಕ್ಸ್ ಅನ್ನೋದು ತುಂಬಾನೆ ಮುಖ್ಯ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ನೋವು ಉಂಟಾಗುವುದು ಸಾಮಾನ್ಯ, ಆದರೆ ಈ ನೋವು ನಿಮ್ಮ ಲೈಂಗಿಕ ಸಂತೋಷದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ಅದು ಸಾಮಾನ್ಯವಲ್ಲ. ಲೈಂಗಿಕ ಕ್ರಿಯೆ ವೇಳೆ ನೋವು ಇದ್ದರೆ ಆಗ ಇದನ್ನು ಹಾಗೆ ಅನುಭವಿಸಬೇಕಾಗಿಲ್ಲ. ಈ ಸ್ಥಿತಿಗೆ ಹಲವಾರು ಆರೋಗ್ಯ ಪರಿಸ್ಥಿತಿಗಳು ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಅವುಗಳ ಬಗ್ಗೆ ಗಮನ ಹರಿಸುವುದು ಮುಖ್ಯ, ಇದರಿಂದ ಪರಿಸ್ಥಿತಿ ಹೆಚ್ಚು ಗಂಭೀರವಾಗುವುದಿಲ್ಲ. ಮುಂದೊಗಲಿನ ಸಮಸ್ಯೆ ಸುನ್ನತಿ ಆಗದೆ ಇರುವಂತಹ ಪುರುಷರಲ್ಲಿ ಹೆಚ್ಚಾಗಿ ಮುಂದೊಗಲು ಬಿಗಿಯಾಗಿರುವ ಸಮಸ್ಯೆಯು ಕಂಡುಬರುವುದು. ಮುಂದೊಗಲು ಬಿಗಿಯಾಗಿರುವ ವೇಳೆ ಅದನ್ನು ಹಿಂದಕ್ಕೆ ಎಳೆದಾಗ ಅದಕ್ಕೆ ಗಾಯವಾಗಬಹುದು, ರಕ್ತಬರಬಹುದು ಮತ್ತು ಅದರಿಂದ ನೋವು ಉಂಟಾಗಬಹುದು. ಇದಕ್ಕೆ ಕೆಲವೊಂದು ಮಲಾಮ್ ಹಚ್ಚಿಕೊಂಡು ಸರಿಪಡಿಸಬಹುದು. ಅಗತ್ಯವೆನಿಸಿದರೆ ಆಗ ನೀವು ವೈದ್ಯರ ನೆರವು ಪಡೆಯಿರಿ. ಶಿಶ್ನದ ಗಾಯ ಲೈಂಗಿಕವಾಗಿ ಹರಡಿದ ರೋಗದ ಹೊರತಾಗಿ ಶಿಶ್ನದಲ್ಲಿ ಬೆಳೆಯುವಂತಹ ಕೆಲವೊಂದು ರೀತಿಯ ಗಡ್ಡೆಗಳು ಶಿಶ್ನದ…
ಬೆಂಗಳೂರು: ನ.24ರಂದು ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆ ಈ ಹಿಂದೆ ನಿಗದಿಪಡಿಸಿದ ಹಾಗೆ ನಡೆಯಲಿದೆ. ಹಾಗೂ ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಕೂಡ ಅದೇ ಇನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ತಿಳಿಸಿದ್ದಾರೆ. https://youtu.be/QXMVSKkpPaQ?si=txVkxtdZdmScR6qC ಈ ಎರಡೂ ಪರೀಕೆಗಳಿಗೆ ಸಂಬಂಧಿಸಿದಂತೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದು, ಕೆಇಎ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬಾರಿಯೂ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಅಭ್ಯಾಸ ಮಾಡಿಕೊಳ್ಳಲಿ ಎನ್ನುವ ಕಾರಣಕ್ಕೆ ಮಾದರಿ ಓಎಂಆರ್ ಶೀಟ್ ಬಿಡುಗಡೆ ಮಾಡಲಾಗಿದೆ. ಅದನ್ನು ಒಮ್ಮೆ ಬಬಲ್ ಮಾಡಿ ಅಭ್ಯಾಸ ಮಾಡಿಕೊಂಡರೆ ಓಎಂಆರ್ ಶೀಟ್‌ನಲ್ಲಿ ಆಗುವ ತಪ್ಪುಗಳನ್ನು ತಪ್ಪಿಸಬಹುದು. ಬಳಿಕ ಈ ಶೀಟ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ತಿಳಿಸಿದ್ದಾರೆ. ಈ ಎರಡೂ ಪರೀಕ್ಷೆಗಳಿಗೆ ಪತ್ರಿಕೆ 1 ಮತ್ತು 2 ಇದೆ. ಹಾಗೆಯೇ ಪ್ರತ್ಯೇಕ ಓಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆ ಇದ್ದು ಪರೀಕ್ಷೆ ಆರಂಭದಲ್ಲಿ ಒಟ್ಟಿಗೆ…