ಬೆಂಗಳೂರು ;- ಅಕ್ರಮ ಆಸ್ತಿ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ 26ಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠದ ಮುಂದೆ ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟಾ, ಸಿಬಿಐ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ವಹಿಸಿರುವುದು ಅನುಮಾನಾಸ್ಪದವಾಗಿದೆ. ತಮ್ಮ ಕುಟುಂಬದ ಸದಸ್ಯರ ಆದಾಯವನ್ನು ತಮ್ಮ ವೈಯಕ್ತಿಕ ಆದಾಯದ ಭಾಗವಾಗಿ ಸೇರಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು. ಎಫ್‌ಐಆರ್‌ನಲ್ಲಿ ಅವರ ಕುಟುಂಬದ ಸದಸ್ಯರನ್ನು ಹೆಸರಿಸಿಲ್ಲ. ಅವರ ವೆಚ್ಚಗಳು ಅಥವಾ ಅವಲಂಬಿತರನ್ನು ಉಲ್ಲೇಖಿಸಿಲ್ಲ. ಎಫ್‌ಐಆರ್‌ನಲ್ಲಿ ತನಿಖೆಯ ಅವಧಿಯನ್ನೂ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಹೀಗಾಗಿ ಸಿಬಿಐ ತನಿಖೆಯೇ ಪ್ರಶ್ನಾರ್ಹವಾಗಿದೆ ಎಂದು ವಾದಿಸಿದರು. ಮೇಲಾಗಿ ಇಲ್ಲಿ ತನಿಖೆಯನ್ನು ಪೊಲೀಸ್ ಅಧೀಕ್ಷಕರು ನಡೆಸಬೇಕು. ಆದರೆ ಉಪ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ವಹಿಸಿದ್ದಾರೆ. ಆದ್ದರಿಂದ ತನಿಖೆಯು ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆಗ ಅವರ ವಾದವನ್ನು ಸಿಬಿಐ ಪರ ವಕೀಲ ಎಸ್‌ಪಿ ಪ್ರಸನ್ನ ಕುಮಾರ್ ಆಕ್ಷೇಪಿಸಿ,…
Author: Prajatv Kannada
ಬೆಂಗಳೂರು ;- ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಹೊಸ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಸದನದಲ್ಲಿ ರಾಜ್ಯದಲ್ಲಿ ಹೊಸ ಪಡಿತರ ಚೀಟಿ ನೀಡುವ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದಾಗ ಸಚಿವರು ಉತ್ತರ ನೀಡಿದ್ದಾರೆ. ಹೊಸ ಬಿಪಿಎಲ್ ಪಡಿತರ ಕಾರ್ಡ್ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಬೇರೆ ಬೇರೆ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ಕೇಳುತ್ತಿದ್ದು, ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಶೇಕಡ 60ರಷ್ಟು ಮೀರಿ ರಾಜ್ಯದಲ್ಲಿ ಶೇಕಡ 80 ರಷ್ಟು ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಕೆಲವು ನಿರ್ದಿಷ್ಟ ಸೂಚನೆ ಮೀರಲಾಗಿದೆ. ಆರೋಗ್ಯ ವಿಚಾರಕ್ಕೆ ಬಂದಾಗ ಎಲ್ಲರಿಂದಲೂ ಬಿಪಿಎಲ್ ಕಾರ್ಡ್ ಗೆ ಬೇಡಿಕೆ ಇದೆ. ಹೀಗಾಗಿ ಬಿಪಿಎಲ್ ಕಾರ್ಡ್ ನೀಡುವ…
ಬೆಂಗಳೂರು ;- NEP ಅಡಿ 2024ರ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳ ಮಾಧ್ಯಮಗಳಲ್ಲೂ ಸಿಬಿಎಸ್ ಇ ಶಿಕ್ಷಣ ನೀಡಬಹುದಾಗಿದೆ ಎಂದು ಕೇಂದ್ರೀಯ ಪಠ್ಯಕ್ರಮದ ಅಧೀನದ ಶಾಲೆಗಳಿಗೆ ಸೂಚಿಸಿದೆ. ಸಿಬಿಎಸ್ ಇ ಶಾಲೆಗಳಲ್ಲಿ ಈವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ ಪಠ್ಯಕ್ರಮಗಳು ಇದ್ದವು, ಇದೀಗ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಿಬಿಎಸ್ ಇ ಮಾಧ್ಯಮದಲ್ಲಿ ಪಠ್ಯಕ್ರಮ ಬೋಧಿಸಬಹುದು. ಈ ಬಗ್ಗೆ ಸಿಬಿಎಸ್ ಇ ಶಾಲೆಗಳಿಗೆ ಪತ್ರ ಬರೆದಿದ್ದು, ಶಾಲೆಗಳು ತಮ್ಮಲ್ಲಿನ ಲಭ್ಯ ಸಂಪನ್ಮೂಲ ಬಳಸಿಕೊಂಡು ತಜ್ಞರ ಸಂಪರ್ಕಿಸಿ ಪ್ರಾದೇಶಿಕ ಭಾಷೆಗಳಲ್ಲಿ ಸಿಬಿಎಸ್ ಇ ಶಿಕ್ಷಣ ನೀಡಬಹುದು ಎಂದು ಹೇಳಿದೆ.
ಬೆಂಗಳೂರು ;- ಬಜೆಟ್‌ನಲ್ಲಿ ಘೋಷಿಸಿದ್ದಂತೆ ಅಬಕಾರಿ ಸುಂಕವನ್ನು ಶೇ.20ರವರೆಗೆ ಹೆಚ್ಚಿಸಿರುವ ಕಾರಣದಿಂದ ಮದ್ಯದ ದರ ಹೆಚ್ಚಾಗಿದೆ. ನಿರೀಕ್ಷೆಯಂತೆ ಶುಕ್ರವಾರದಿಂದಲೆ ಹೊಸ ದರ ಜಾರಿಗೆ ಬಂದಿದೆ. ಪಂಚತಾರಾ ಹೊಟೆಲ್‌ಗಳು ಸೇರಿ ಇತರೆಡೆ ಸವೀರ್‍ಸ್ ಚಾಜ್‌ರ್, ಸೈಡ್‌್ಸ ಸೇರಿಸಿದರೆ ಹೊಸ ದರಕ್ಕೆ ಮತ್ತಷ್ಟುಮೊತ್ತ ಸೇರ್ಪಡೆಯಾಗಲಿದೆ. ಹೀಗಾಗಿ ಟೇಬಲ್ ಎದುರು ಕುಳಿತುಕೊಳ್ಳುವ ಮುನ್ನ ಕಿಸೆಗೆ ಕತ್ತರಿ ಬೀಳುವ ಕುರಿತು ಯೋಚಿಸುವಂತಾಗಿದೆ ಎಂದು ಮದ್ಯಪ್ರಿಯರು ಹೇಳಿದ್ದಾರೆ ಕಿಂಗ್‌ಫಿಷರ್ ಬಿಯರ್ 5 ರಿಂದ 10 ರುಪಾಯಿ ಹೆಚ್ಚಳವಾಗಿದೆ. ಬಕಾರ್ಡಿ ಲೆಮನ್ ಸಿಟ್ರಸ್ 750 ಎಎಲ್‌ಗೆ .2189, ಬ್ಲ್ಯಾಕ್‌ಡಾಗ್ .4043 ದರ ತಲುಪಿವೆ. ಒಟಿ ವಿಸ್ಕಿ 180 ಎಂಎಲ್‌ಗೆ .87ರಿಂದ .100 ಆಗಿದೆ. ಸ್ಮಿರ್ನಾಫ್ ಆಯಪಲ್/ಆರೆಂಜ್ 750 ಎಂಎಲ್‌ಗೆ .1839ರಿಂದ .2164ಕ್ಕೆ ಏರಿದೆ ಎಂದು ಮದ್ಯ ವರ್ತಕರು ತಿಳಿಸಿದ್ದಾರೆ. ಮೊದಲ ದಿನ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಆದರೆ, ಇನ್ನೊಂದು ವಾರ, ಹದಿನೈದು ದಿನಗಳು ಕಳೆದರೆ ಗ್ರಾಹಕರಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದು ತಿಳಿಯಲಿದೆ ಎಂದು ಬೆಂಗಳೂರು ಮದ್ಯ ವರ್ತಕರ…
ಬೆಂಗಳೂರು ;– ರಾಜ್ಯದಾದ್ಯಂತ ಭಾರೀ ಸದ್ದು ಮಾಡಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ ಸರ್ಕಾರ ಆದೇಶಿಸಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಸದ್ದು ಮಾಡಿದ್ದ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಆಯೋಗವನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. 545 ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು 3 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಭಾರೀ ಸದ್ದು ಮಾಡಿತ್ತು. ಕಾಂಗ್ರೆಸ್ ಇದೇ ವಿಚಾರವಾಗಿ ಬಿಜೆಪಿ ಸರ್ಕಾರ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹೋರಾಟವನ್ನೇ ನಡೆಸಿತ್ತು. ಈ ಅಕ್ರಮವನ್ನು ತನಿಖೆ ನಡೆಸುವುದಾಗಿ ಕಾಂಗ್ರೆಸ್ ಹೇಳುತ್ತಿತ್ತು. ಇದೀಗ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ರಮವನ್ನು ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ
ಬೆಂಗಳೂರು ;- ಹೆತ್ತವರನ್ನ ಕೊಲೆ ಮಾಡಿ ಪರಾರಿಯಾಗಿದ್ದ ಮಗನನ್ನು ಅರೆಸ್ಟ್ ಮಾಡುವಲ್ಲಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 25 ವರ್ಷದ ಶರತ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬ್ಯಾಟರಾಯನಪುರ ನಿವಾಸಿಗಳಾದ ಭಾಸ್ಕರ್ ಹಾಗೂ ಶಾಂತಾ ದಂಪತಿಯನ್ನು ಸೋಮವಾರ ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ನಾಲ್ಕು ದಿನದ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ನಂತರ ಕೊಲೆಗೆ ನಿಖರ ಕಾರಣವೇನು? ಎಂಬುದು ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ;- ಧೈರ್ಯ ಇದ್ದಿದ್ದರೆ ಸದನದ ಚರ್ಚೆಯಲ್ಲಿ ಬಿಜೆಪಿ ಅವರು ಭಾಗವಹಿಸುತ್ತಿದ್ದರು, ಆದರೆ ಅವರಿಗೆ ಧೈರ್ಯ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿರುವುದನ್ನು ಕಂಡು ಬಿಜೆಪಿ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಹೀಗಾಗಿ ಅನಗತ್ಯ ವಿಚಾರವಾಗಿ ಗದ್ದಲ ಮಾಡಿದ್ದಾರೆ. ಅವರಿಗೆ ಪ್ರತಿಪಕ್ಷದ ನಾಯಕತ್ವದ ಮಹತ್ವ ಗೊತ್ತಿಲ್ಲ. ಇದು ಸಾಂವಿಧಾನಿಕ ಹುದ್ದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಅಧಿವೇಶನ ಹಾಗೂ ರಾಜ್ಯಪಾಲರ ಭಾಷಣ ವಿರೋಧ ಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ ನಡೆದಿದೆ. ರಾಜಕೀಯವಾಗಿ ತಮ್ಮ ಅಸ್ತಿತ್ವ ತೋರಿಸಲು ಧರಣಿಗಳನ್ನು ಮಾಡುತ್ತಿದ್ದಾರೆ ಎಂದರು. ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರ ಜಂಟಿ ಸುದ್ದಿಗೋಷ್ಠಿ ಹಾಗೂ ಆ ಬಗ್ಗೆ ಅವರದೇ ಪಕ್ಷದ ನಾಯಕರ ಅಸಮಾಧಾನದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ‘ಅದು ಅವರಿಗೆ ಬಿಟ್ಟ ವಿಚಾರ. ಆ ಬಗ್ಗೆ ನಾವು ಮಾತನಾಡುವುದಿಲ್ಲ. ಜಾತ್ಯತೀತತೆ ವಿಚಾರವಾಗಿ ದೇವೇಗೌಡರು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ದೇವೇಗೌಡರೇನು ತಮ್ಮ ಸಿದ್ಧಾಂತ ಬದಲಿಸಿದ್ದಾರಾ? ಪಕ್ಷದ ಸಿದ್ಧಾಂತ,…
ಬೆಂಗಳೂರು ;– ಮಾರಕಾಸ್ತ್ರಗಳಿಂದ ಗ್ಯಾಂಗ್ವೊಂದು ಬೊಮ್ಮಸಂದ್ರ ಪುರಸಭೆಯ ಉಪಾಧ್ಯಕ್ಷ ವಸಂತ್ರ ಮಗ ಗೌತಮ್ ಕೊಲೆಗೆ ದಾಳಿ ಮಾಡಿದೆ. ಬೆಂಗಳೂರಿನ ಚಂದಾಪುರದ ಬಳಿ ಘಟನೆ ನಡೆದಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಿತನ ಜನ್ಮದಿನಕ್ಕೆ ಕಾರಿನಲ್ಲಿ ಗೆಳೆಯರ ಜೊತೆಗೂಡಿ ಗೌತಮ್ ತೆರಳಿದ್ದ. ಹಳೆ ಚಂದಾಪುರದ ಬಳಿ ಟೀ ಕುಡಿಯಲು ಕಾರು ಅನ್ನು ನಿಲ್ಲಿಸಿದ್ದ ಗೌತಮ್. ಈ ವೇಳೆ, ಮೂರು ಕಾರಿನಲ್ಲಿ ಬಂದ ಹತ್ತಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ಗೌತಮ್ ಮೇಲೆ ಲಾಂಗ್ ಬೀಸಿದಾಗ ಕೈಗಳಿಂದ ಅಡ್ಡಗಟ್ಟಿದ್ದಾನೆ. ಗೌತಮ್ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಿಂದ ಓಡಿ ಹೋಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಪ್ರಮೋದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆ ಕುರಿತು ಸೂರ್ಯಸಿಟಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೂರ್ಯೋದಯ: 06.03 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಅದಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ತದಿಗೆ 06:58 AM ತನಕ ನಂತರ ಚೌತಿ ನಕ್ಷತ್ರ: ಇವತ್ತು ಮಖ 01:58 PM ತನಕ ನಂತರ ಪುಬ್ಬಾ ಯೋಗ: ಇವತ್ತು ವ್ಯತೀಪಾತ 12:24 PM ತನಕ ನಂತರ ವರಿಯಾನ್ ಕರಣ: ಇವತ್ತು ಗರಜ 06:58 AM ತನಕ ನಂತರ ವಣಿಜ 08:12 PM ತನಕ ನಂತರ ವಿಷ್ಟಿ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 11.16 AM to 01.04 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:56 ನಿಂದ ಮ.12:48 ವರೆಗೂ ಮೇಷ: ವಾಹನ ಬಿಡಿಭಾಗ ತಯಾರಿಕರಿಗೆ ಹಾಗೂ ಮಾರಾಟಗಾರರಿಗೆ ಧನ ಲಾಭ, ಪಾರ್ಶ್ವ ವಾಯು ರೋಗಿಗಳಿಗೆ ನಿಧಾನ ಚೇತರಿಕೆ, ಅದಿರು…
ವಿರಾಟ್ ಕೊಹ್ಲಿ ಒಬ್ಬ ಫಿಟ್ನೆಸ್ ಫ್ರೀಕ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಜಿಮ್ ವರ್ಕೌಟ್, ಡಯಟ್ ವಿಷ್ಯದಲ್ಲಿ ಕಾಂಪ್ರಮೈಸ್ ಆಗೋ ಮಾತೆಯಿಲ್ಲ. ಹಾಗಾದ್ರೆ, ಕೊಹ್ಲಿಯ ವರ್ಕೌಟ್ ಹೇಗಿರುತ್ತೆ, ಡಯಟ್ ಪ್ಲಾನ್ಸ್ ಏನು, ಅವರು ತಿನ್ನುವ ಆಹಾರ ಏನೇನು..? ಹಾರ್ಡ್ವರ್ಕ್ ಈ ಪದಕ್ಕೆ ಇನ್ನೊಂದು ಹೆಸರು ಕಿಂಗ್ ಕೊಹ್ಲಿ. ಆಟದ ವಿಚಾರದಲ್ಲಿ ಕಾಂಪ್ರಮೈಸೇ ಆಗದ ವಿರಾಟ್, ಫಿಟ್ನೆಸ್ ವಿಚಾರದಲ್ಲೂ ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಕಾಂಪ್ರಮೈಸ್ ಆಗೋ ಮಾತೇ ಇಲ್ಲ. ಸದ್ಯ ಕೆರಿಬಿಯನ್ ನಾಡಲ್ಲಿ ಬೀಡು ಬಿಟ್ಟಿರೋ ಕಿಂಗ್, ಸರಣಿ ಆರಂಭಕ್ಕೂ ಮುನ್ನ high intensity ವರ್ಕೌಟ್ ನಡೆಸ್ತಿದ್ದಾರೆ. ವರ್ಕೌಟ್ನಲ್ಲಿ ವಿರಾಟ್ ಕೊಹ್ಲಿ ನೋ ಕಾಂಪ್ರಮೈಸ್..! ಪ್ರತಿ ಕ್ರೀಡಾಳುವಿನ ಲಾಂಗ್ ಟೈಮ್ ಸಕ್ಸಸ್ ಸಿಕ್ರೇಟ್ ಫಿಟ್ನೆಸ್. ಮಾನಸಿಕವಾಗಿ, ದೈಹಿಕವಾಗಿ ಸೃದೃಢವಾಗಿದ್ದಲ್ಲಿ ಮಾತ್ರವೇ ಓರ್ವ ಆಟಗಾರ ಸಕ್ಸಸ್ ಕಾಣೋದಲ್ಲದೇ, ಕನ್ಸಿಸ್ಟೆಂಟ್ ಆಗಿ ಆ ಯಶಸ್ಸಿನ ಹಾದಿಯಲ್ಲಿ ಮುಂದುವರೆಸೋಕೆ ಸಾಧ್ಯ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ವಿರಾಟ್ ಕೊಹ್ಲಿ. ಕಟ್ಟು ನಿಟ್ಟಾದ ದಿನಚರಿಯನ್ನ ರೂಪಿಸಿಕೊಂಡಿರೋ ಕಿಂಗ್ ಕೊಹ್ಲಿ, ವಾರದ 5…