ತಮ್ಮ ಅನುಮತಿ ಇಲ್ಲದೇ ತಮ್ಮ ಫೋಟೋ ಮತ್ತು ವಿಡಿಯೋವನ್ನು ಹಾಸ್ಟೇಲ್ ಹುಡುಗರು ಬೇಕಾಗಿದ್ದರೆ ಸಿನಿಮಾ ತಂಡ ಬಳಸಿಕೊಂಡಿದೆ ಎಂದು ಚಿತ್ರತಂಡದ ವಿರುದ್ಧ ನಟಿ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಅನುಮತಿ ಇಲ್ಲದೇ ಫೋಟೋ ಮತ್ತು ವಿಡಿಯೋ ಬಳಸಿಕೊಂಡಿದ್ದಕ್ಕೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕು ಎಂದು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಆದರೆ ಇದೀಗ ಈ ವಿಷಯದಲ್ಲಿ ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದೆ. ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಹಾಸ್ಟೆಲ್ ಹುಡುಗರ ಪರ ಆದೇಶ ಹೊರ ಬಂದಿದ್ದು, ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಆಗಲಿದೆ. ಹಾಸ್ಟೆಲ್ ಹುಡುಗರ ಪರ ವಕೀಲ ವೇಲನ್ ಅವರು ವಾದ ಮಾಡಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು, ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿ, ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ರಮ್ಯಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ…
Author: Prajatv Kannada
ತಮ್ಮ ಅತ್ಯದ್ಭುತ ನಟನೆಯ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವವರು ಖ್ಯಾತ ಹಾಸ್ಯ ನಟ ದಿ. ಟಿ.ಆರ್ ನರಸಿಂಹರಾಜು. ಜುಲೈ 24 ನರಸಿಂಹರಾಜು ಅವರ ನೂರನೇ ವರ್ಷದ ಹುಟ್ಟುಹಬ್ಬ. ಈ ಸಂಭ್ರಮವನ್ನು ನರಸಿಂಹರಾಜು ಜನ್ಮ ಶತಮಾನೋತ್ಸವ ಎಂಬ ಹೆಸರಿನಿಂದ ವರ್ಷವಿಡೀ ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲು ನರಸಿಂಹರಾಜು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮಗಳ ಪೈಕಿ ಮೊದಲನೆಯದಾಗಿ ನರಸಿಂಹರಾಜು ಅವರನ್ನು ಈಗಿನ ಯುವಜನತೆಗೆ ತಲುಪಿಸುವ ಪ್ರಯತ್ನ. ಹಾಗಾಗಿ ಹನ್ನೆರಡು ಜನರ ತಂಡ ಎರಡು ಟ್ರಕ್ ಗಳ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಿದೆ. ಆ ಟ್ರಕ್ ನಲ್ಲಿ ಎಲ್ ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕೇಳಲಾಗುತ್ತದೆ. ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ(ಹಾಸ್ಯದ ಕುರಿತು) ಆಯೋಜಿಸಲಾಗುವುದು. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ದೊಡ್ಡಮಟ್ಟದ ಸಮಾರಂಭ ಆಯೋಜಿಸಿ, ಆ ಕಾರ್ಯಕ್ರಮದಲ್ಲಿ ಪ್ಯಾನ್…
ಕೇವಲ ಮುಖದ ಕಾಂತಿಯನ್ನು ಹೆಚ್ಚಿಸಿಕೊಂಡರೆ ಸಾಲದು. ತುಟಿಯ ಬಗ್ಗೆಯೂ ಗಮನವಿರಬೇಕು. ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ತುಟಿಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಗಮನಹರಿಸದೆ ಹೋದರೆ ತುಟಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ತುಟಿ ಕಪ್ಪಾದರೆ ಮುಖದ ಸೌಂದರ್ಯ ಕಡಿಮೆಯಾಗುತ್ತದೆ. ಹುಡುಗಿಯರಿಗೆ ಲಿಪ್ಸ್ಟಿಕ್ ಅಂದರೆ ತುಂಬಾ ಇಷ್ಟ. ಆದರೆ ಕಡಿಮೆ ದರದ ಲಿಪ್ಸ್ಟಿಕ್ ಬಳಸಿದಾಗ ತುಟಿ ಕಪ್ಪಾಗುತ್ತದೆ.ನೈಸರ್ಗಿಕ ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಮನೆಮದ್ದು ಇಲ್ಲಿದೆ ನೋಡಿ – ಒಂದು ತುಂಡು ಬೀಟ್ರೂಟ್ ಅನ್ನು ತುರಿದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ಒಂದು ದಿನವಿಡೀ ಫ್ರಿಜ್ಜಿನಲ್ಲಿಟ್ಟು ಗಟ್ಟಿಯಾಗುವಂತೆ ಮಾಡಿ. ಬಳಿಕ ಇದರಲ್ಲಿ ಒಂದು ಚಿಕ್ಕ ಚಮಚದಷ್ಟು ಪ್ರಮಾಣವನ್ನು 1/3 ಚಿಕ್ಕ ಚಮಚದಷ್ಟು ಗ್ಲಿಸರಿನ್ ದ್ರವದಲ್ಲಿ ಮಿಶ್ರಣ ಮಾಡಿ ತುಟಿಗಳಿಗೆ ಲೇಪಿಸಿಕೊಳ್ಳಿ. ಇದರ ಬಣ್ಣ ನಿಮ್ಮ ನಿತ್ಯದ ಲಿಪ್ ಸ್ಟಿಕ್ಗೆ ಸರಿಸಮನಾಗಿರುವ ಕಾರಣ ನಿತ್ಯದ ಲಿಪ್ ಸ್ಟಿಕ್ ಬದಲಿಗೆ ಹಚ್ಚಿಕೊಂಡು ಹೊರಹೋಗಬಹುದು. ಕೆಲವೇ ದಿನಗಳಲ್ಲಿ ಮೃದು ಹಾಗೂ ಗುಲಾಬಿ ವರ್ಣದ ತುಟಿಗಳು ನಿಮ್ಮದಾಗುತ್ತವೆ. –…
ಬೀಜಿಂಗ್: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಬೀಜಿಂಗ್‍ನಲ್ಲಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ. 1971ರಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿದ್ದ ಹೆನ್ರಿ ಕಿಸಿಂಜರ್ ಅಮೆರಿಕ- ಚೀನಾದ ನಡುವೆ ದ್ವಿಪಕ್ಷೀಯ ಸಂಬಂಧ ಸ್ಥಾಪನೆಯ ಉದ್ದೇಶದಿಂದ ಚೀನಾಕ್ಕೆ ಭೇಟಿ ನೀಡಿದ್ದರು. ಈ ಭೇಟಿಯು ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಐತಿಹಾಸಿಕ ಚೀನಾ ಭೇಟಿಗೆ ವೇದಿಕೆ ಸಿದ್ಧಪಡಿಸಿತ್ತು. ಶೀತಲ ಯುದ್ಧದ ಯುಗವನ್ನು ಸಮಾಪ್ತಿಗೊಳಿಸುವುದು ಹಾಗೂ ವಿಯೆಟ್ನಾಮ್‍ನಲ್ಲಿ ಅಮೆರಿಕದ ಯುದ್ಧ ಅಂತ್ಯಗೊಳಿಸಲು ಚೀನಾದ ನೆರವು ಪಡೆಯುವುದು ನಿಕ್ಸನ್ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ನಿಕ್ಸನ್ ಭೇಟಿಯು ಜಾಗತಿಕ ಮಟ್ಟದಲ್ಲಿ ಪ್ರಮುಖ ಉತ್ಪಾದನಾ ಶಕ್ತಿಕೇಂದ್ರವಾಗಿ ಚೀನಾ ರೂಪುಗೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸಂದರ್ಭ ಕಿಸಿಂಜರ್ ಅಮೆರಿಕ-ಚೀನಾ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಆದ್ಯತೆ ನೀಡಿದ್ದರು. 1971ರಿಂದ 100ಕ್ಕೂ ಅಧಿಕ ಬಾರಿ ಕಿಸಿಂಜರ್ ಚೀನಾಕ್ಕೆ ಭೇಟಿ ನೀಡಿದ್ದಾರೆ. ಕಿಸಿಂಜರ್ ಅನ್ನು ಸ್ವಾಗತಿಸಿದ ಕ್ಸಿಜಿಂಪಿಂಗ್…
ಇಂಫಾಲ್ ;- ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಮೊದಲ ಫೋಟೋ ರಿಲೀಸ್ ಮಾಡಲಾಗಿದೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಮಣಿಪುರದಲ್ಲಿ ನಡೆದಿತ್ತು. ಮಹಿಳೆಯರಿಬ್ಬರನ್ನು ಬೆತ್ತಲುಗೊಳಿಸಿ, ಮೆರವಣಿಗೆ ಮಾಡಿದ್ದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎರಡು ತಿಂಗಳ ಹಿಂದೆ ನಡೆದಿದೆ ಎನ್ನಲಾದ ಈ ಘಟನೆಯ ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ವಿಡಿಯೋದಲ್ಲಿ ಕಂಡುಬಂದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ಹಿಡಿದುಕೊಂಡು ಬಂದಿದ್ದ ಗುಂಪಿನಲ್ಲಿ ಒಬ್ಬಾತ ಮಹಿಳೆಯನ್ನು ಹಿಡಿದುಕೊಂಡಿದ್ದ. ಈತನನ್ನು 32 ವರ್ಷದ ಹುಯಿರೆಮ್ ಹೆರೋಡಾಸ್ ಮೈತೇಯಿ ಎಂದು ಗುರುತಿಸಲಾಗಿದ್ದು, ಈಗಾಗಲೇ ಬಂಧಿಸಲಾಗಿದೆ. ತೌಬಲ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಶಾಮೀಲಾದ ಎಲ್ಲರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪರ್ಸನಲ್ ಡೈರಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾಗಿ ಮೂಲಗಳು ಖಚಿತ ಪಡಿಸಿವೆ. ಜೈನಮುನಿಗಳ (Jain Monk) ಡೈರಿಯನ್ನು ಸುಟ್ಟು ಹಾಕಿದ್ದಾಗಿ ಬಂಧಿತ ಆರೋಪಿಗಳು ಕಥೆ ಕಟ್ಟಿದ್ದರು. ಆದರೆ ಇದೀಗ ಪೊಲೀಸರ ಕೈಗೆ ಜೈನಮುನಿಗಳ ಡೈರಿ ಲಭ್ಯವಾಗಿದೆ. ಡೈರಿಯಲ್ಲಿ ಉಲ್ಲೇಖವಿರುವವರನ್ನು ಠಾಣೆಗೆ ಕರೆಸಿ ತನಿಖೆ ಮಾಡಲಾಗುತ್ತಿದೆ. ಇದರಿಂದಾಗಿ ಸ್ವಾಮೀಜಿ ಬಳಿ ಹಣ ಪಡೆದಿದ್ದವರಲ್ಲಿ ಆತಂಕ ಶುರುವಾಗಿದೆ ಪೊಲೀಸರ (Police) ದಿಕ್ಕು ತಪ್ಪಿಸುತ್ತಿದ್ದ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನ್ ಸಾಬ್ ದಲಾಯತ್, ತಮ್ಮ ರಕ್ತಸಿಕ್ತ ಬಟ್ಟೆ ಜೊತೆ ಜೈನಮುನಿಗಳ ಪರ್ಸನಲ್ ಡೈರಿಯನ್ನು ಸುಟ್ಟು ಹಾಕಿದ್ದಾಗಿ ಹೇಳಿದ್ದರು. ಅಲ್ಲದೇ ಪೊಲೀಸರಿಗೆ ಬೂದಿಯನ್ನು ಸಹ ತೋರಿಸಿದ್ದರು. ಬಳಿಕ ಪೊಲೀಸರು ಎಫ್‍ಎಸ್‍ಎಲ್‍ಗೆ ಬೂದಿಯನ್ನು ರವಾನಿಸಿದ್ದರು. ಈಗ ಡೈರಿಯ ಬೂದಿ ಅಲ್ಲ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಡೈರಿ ಪತ್ತೆಯಾಗುತ್ತಿದ್ದಂತೆ ತನಿಖೆ ಚುರುಕುಗೊಂಡಿದೆ.
ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಇನ್ಮುಂದೆ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಊಟ-ತಿಂಡಿಗೆ ಪರದಾಡಬೇಕಿಲ್ಲ. ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯೇ ಜನರಲ್ ಕೋಚ್ ಎದುರು ‘ಎಕಾನಮಿ ಮೀಲ್ಸ್’ ಸ್ಟಾಲ್ ಸ್ಥಾಪಿಸಲಾಗುವುದು ಎಂದು ಭಾರತೀಯ ರೈಲ್ವೇ ತಿಳಿಸಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಮತ್ತು ಪಾನೀಯ ಇಲ್ಲಿ ದೊರಕಲಿದೆ. ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ರೈಲಿನಲ್ಲಿ ಊಟ ನೀಡುವ ಅಂಗಡಿಗಳನ್ನು ಜನರಲ್ ಬೋಗಿಗಳು ನಿಲ್ಲುವ ಪ್ಲಾಟ್ ಫಾರಂ ನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬಗೆಯಲ್ಲಿ ಈ ಊಟವನ್ನು ವಿಧಿಸಲಾಗಿದ್ದು, 7 ಪೂರಿಗಳು, ಡ್ರೈ ಆಲೂ ಮತ್ತು ಉಪ್ಪಿನಕಾಯಿ ಹೊಂದಿರುವ ಪ್ಯಾಕೆಟ್ ಗೆ 20 ರೂಪಾಯಿ ಹಾಗು 2 ಬಗೆಯ ಊಟ ಹೊಂದಿರುವ ಪ್ಯಾಕೆಟ್ ಗೆ 50 ರೂಪಾಯಿ ಬೆಲೆ ಇರಲಿದೆ. ಅಲ್ಲದೆ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಬಟೂರೆ, ಪಾವ್ ಬಾಜಿಗಳು ಇಲ್ಲಿ ದೊರೆಯಲಿವೆ ಎಂದು ರೈಲ್ವೆ ತಿಳಿಸಿದೆ. ಇದರೊಂದಿಗೆ ಪ್ರಯಾಣಿಕರಿಗೆ 200 ಮಿಲಿ ಲೀಟರ್ ನೀರು 3…
ಉತ್ತರಾಖಂಡ: ಜುಲೈ 15 ರಂದು ಉತ್ತರಾಖಂಡದ ಹಲ್ದ್‌ವಾನಿ ಪಟ್ಟಣದಲ್ಲಿ ಒಂದು ವಿಚಿತ್ರ ಪ್ರಕರಣ ಬಯಲಾಗಿತ್ತು. ಉದ್ಯಮಿಯೊಬ್ಬನ ಶವ ಕಾರ್‌ನಲ್ಲಿ ಕುಳಿತ ರೀತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಎಂಜಿನ್ ಆನ್ ಇತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಉದ್ಯಮಿಯ ಕಾಲಿನಲ್ಲಿ ಹಾವು ಕಡಿದಿರುವ ಗುರುತು ಪತ್ತೆಯಾಗಿತ್ತು. ಹೀಗಾಗಿ, ಉದ್ಯಮಿ ಅಂಕಿತ್ ಚೌಹಾಣ್ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ ಎಂದು ಮೇಲ್ನೋಟಕ್ಕೆ ಪೊಲೀಸರು ಭಾವಿಸಿದ್ದರು. ಆದರೆ, ಈ ಪ್ರಕರಣದ ತನಿಖೆ ನಡೆಸಿದ ಸಂದರ್ಭದಲ್ಲಿ ದೊಡ್ಡ ಷಡ್ಯಂತ್ರವೊಂದು ಬಯಲಾಯ್ತು! ಸಿನಿಮೀಯ ರೀತಿಯಲ್ಲಿ ಹಾವನ್ನು ಬಳಸಿ ಕೊಲೆ! 30 ವರ್ಷ ವಯಸ್ಸಿನ ಉದ್ಯಮಿ ಅಂಕಿತ್ ಚೌಹಾಣ್ ಶವದ ಮರಣೋತ್ತರ ಪರೀಕ್ಷೆ ವೇಳೆ ಮೃತನ ಕಾಲಿಗೆ ಎರಡು ಬಾರಿ ಹಾವು ಕಡಿದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾವಿನ ವಿಷದಿಂದಲೇ ಉದ್ಯಮಿಯ ಹತ್ಯೆಯಾಗಿದೆ ಎಂದೂ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಕ್ಕಿತ್ತು. ಆರಂಭದಲ್ಲಿ ಇದು ಆಕಸ್ಮಿಕ ಸಾವು ಎಂದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡು ಬಂತು. ಆದರೆ, ಮೃತ ಚೌಹಾಣ್‌ನ ಮೊಬೈಲ್ ಕರೆಗಳ ಮಾಹಿತಿ ತಪಾಸಣೆ ವೇಳೆ ಆತನಿಗೆ ಮಹಿ…
ಬೆಳಗಾವಿ: ಅಮವಾಸ್ಯೆ ಹಿನ್ನೆಲೆ ಗಂಡನೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಪತ್ನಿ (Wife) ಎದುರೇ ಗಂಡನ (Husband) ಕೊಲೆ ಮಾಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಐನಾತಿ ಹೆಂಡತಿ ಪ್ರಿಯಾಂಕಾ ಜಗಮತ್ತಿಯನ್ನ ಮೂಡಲಗಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸೋಮವಾರ ಭೀಮನ ಅಮವಾಸ್ಯೆಯಾಗಿದ್ದರಿಂದ ಶಂಕರ್ ಜಗಮತ್ತಿ ಮತ್ತು ಪ್ರಿಯಾಂಕಾ ಜಗಮತ್ತಿ ದಂಪತಿ ಮೂಡಲಗಿ (Mudalagi) ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ (Banasiddeshwara Temple) ಬಂದಿದ್ದರು. ಈ ವೇಳೆ ಪತ್ನಿಯ ಕಣ್ಣೆದುರೇ ದುಷ್ಕರ್ಮಿಗಳು ಪತಿಯ ಹತ್ಯೆ ಮಾಡಿದ್ದು, ಸ್ಥಳದಲ್ಲೇ ಶಂಕರ್ ಜಗಮತ್ತಿ ಸಾವನ್ನಪ್ಪಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪ್ರಿಯಾಂಕಾಳ ಪ್ರಿಯಕರ ಶ್ರೀಧರ್ ತಳವಾರ(21), ಶಂಕರ್ ಪತ್ನಿ ಪ್ರಿಯಾಂಕ ಜಗಮತ್ತಿಯನ್ನು (21) ಬಂಧಿಸಲಾಗಿದೆ. ಮೊದಲೇ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಪ್ರಿಯಾಂಕಾ ಮನೆ ಬಿಡುವ ವೇಳೆ ಪ್ರಿಯಕರ ಶ್ರೀಧರ್‌ಗೆ ಕರೆ ಮಾಡಿ ದೇವಸ್ಥಾನಕ್ಕೆ ಬಂದಿದ್ದಳು. ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಬರುತ್ತಿದ್ದಂತೆ ಆರೋಪಿ ಶ್ರೀಧರ್ ಪ್ರಿಯಾಂಕಾ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಇತ್ತ ಏನು…
ಉಡುಪಿ : ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪೆಚ್ಚು ಮೋರೆ ಹಾಕಿ ಎದ್ದು ಹೊರನಡೆದ ಪ್ರಸಂಗ ನಡೆದಿದೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದ ವಿರೋಧ ಪಕ್ಷಗಳ ಸಭೆ ಕುರಿತು ಮಾತನಾಡಿ, ಸಭೆಯನ್ನು ಟೀಕಿಸಿದ್ದರು. ಬಳಿಕ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಕುರಿತೂ ವ್ಯಂಗ್ಯವಾಡಿದರು. ಕಾಂಗ್ರೆಸ್ ಕುರಿತ ಪ್ರಶ್ನೆಗಳಿಗೆ ಸಾವಧಾನವಾಗಿಯೇ ಉತ್ತರಿಸಿದ್ದ ಕೇಂದ್ರ ಸಚಿವರಿಗೆ ವರದಿಗಾರರು, ನಿಮ್ಮ ವಿರೋಧ ಪಕ್ಷದ ನಾಯಕನ ಆಯ್ಕೆ ಯಾಕೆ ಕಗ್ಗಂಟಾಗಿ ಉಳಿದಿದೆ ಎಂದು ಕೇಳಿದರು. ಆಗ ಶೋಭಾ ಅವರು ಪೆಚ್ಚು ಮೋರೆ ಹಾಕಿ ಕೊಠಡಿಯಿಂದ ಹೊರ ಹೋಗಿದ್ದಾರೆ. ರಾಷ್ಟ್ರಮಟ್ಟದಲ್ಲಿ I.N.D.I.A ಎಂಬ ವಿರೋಧ ಪಕ್ಷಗಳ ಹೊಸ ಒಕ್ಕೂಟ ರಚನೆಯು ಈಸ್ಟ್ ಇಂಡಿಯಾ ಕಂಪನಿಯ ಹೊಸ ಆವೃತ್ತಿಯಾಗಿದೆ. 60 ವರ್ಷಗಳಿಂದ ದೇಶವನ್ನು ಲೂಟಿ ಮಾಡಿದವರು ಈಗ ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಇದೀಗ India vs Bharat ಆಗಿದೆ ಎಂದು ವಾಗ್ದಾಳಿ…