ಬೆಂಗಳೂರು: ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ಘಟನೆ ನಡೆಯುವ ಮುನ್ನವೇ ಪೊಲೀಸರು ಶಂಕಿತ ಉಗ್ರರನ್ನ ಹಿಡಿದು ಹೆಡೆಮುರಿ ಕಟ್ಟಿದ್ದಾರೆ ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ತನ್ನೆಲ್ಲ ಭಯಾನಕ ಕೃತ್ಯಗಳನ್ನ ಎಸೆಯುತ್ತಿದ್ದ ಇದಕ್ಕೆ ಜೈಲಾಧಿಕಾರಿಗಳ ಕುಮ್ಮಕ್ಕು ಸಹ ಇದೇಯಾ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು ಅದಕ್ಕೆ ಇದೇ ಸಾಕ್ಷಿಯಾಗಿದೆ ನೋಡಿ.. ಬೆಂಗಳೂರಿನ ಸೆಂಟ್ರಲ್ ಜೈಲೋ ಅಥವಾ ಹಣ ಮಾಡುವ ಅಡ್ಡೆಯೋ? ಇಂಥಹದೊಂದು ಪ್ರಶ್ನೆ ಪರಪ್ಪನ ಅಗ್ರಹಾರ ಜೈಲಿನ ಪರಿಸ್ಥಿತಿ ನೋಡಿದಾಗ ನಮ್ಮಲ್ಲೆ ಹುಟ್ಟುವ ಪ್ರಶ್ನೆಯಾಗಿದೆ. ಪರಪ್ಪನ ಅಗ್ರಹಾರ ಜೈಲನ್ನೆ ಎಲ್ ಇ ಟಿ ಉಗ್ರ ಟಿ ನಾಜಿರ್ ನ ಬಿಸಿನೆಸ್ ಅಡ್ಡೆ ಮಾಡಿಕೊಂಡಿದ್ದಾನಂತೆ. ಜೈಲಲ್ಲಿ ಕುಳಿತುಕೊಂಡೇ ಉಗ್ರ ಟಿ ನಾಜಿರ್ ದಿನಕ್ಕೆ ನಾಲ್ಕೈದು ಸಾವಿರ ಸಂಪಾದನೆ ಮಾಡ್ತಿದ್ದಾನೆ. ಜೈಲಲ್ಲಿ ಬಟ್ಟೆ, ಡ್ರೈ ಫ್ರೂಟ್ಸ್ , ಸ್ವೀಟ್ಸ್ ಮಾರಾಟ ಮಾಡ್ತಿರೊ ಟಿ ನಾಜಿರ್ ಉಗ್ರರಿಗೆ ನಿಗಧಿಯಾಗಿರೊ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಬೇರೆ ಕಡೆ ಸಹ ಓಡಾಟ ನಡೆಸ್ತಿದ್ದಾನಂತೆ. ವಿಚಾರಣಾಧೀನ ಕೈದಿಗಳನ್ನ ತನ್ನ ರೂಂ ಗೆ ಹಾಕಿಸಿಕೊಳ್ಳೋ…
Author: Prajatv Kannada
ಬೆಂಗಳೂರು: ಸದನದ ಕಿಚ್ಚುನ್ನು ಬಿಜೆಪಿ ನಾಯಕರು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ರು. ಶಕ್ತಿಸೌಧದ ಗಾಂಧಿ ಪ್ರತಿಮೆಯ ಬಳಿ ಕುಳಿತು ಕಾಂಗ್ರೆಸ್ ಹಾಗೂ ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿದ್ರು. ಪಾದಯಾತ್ರೆ ಮೂಲಕ ರಾಜಭವನಕ್ಕೆ ಹೋದ ಕೇಸರಿ ನಾಯಕರು ಖಾದರ್ ಏಕಪಕ್ಷೀಯ ನಡೆ, ಅಧಿಕಾರಿಗಳ ದುರ್ಬಳಕೆ ವಿಚಾರವಾಗಿ ದೂರು ನೀಡಿದ್ರು, ಬಿಜೆಪಿಯ ಹೋರಾಟಕ್ಕೆ ದಳಪತಿಗಳು ಕೈಜೋಡಿಸಿದ್ದು ನಾಳೆ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದವಾಗಿದೆ…. ಕಾಂಗ್ರೆಸ್ ಪಕ್ಷದ ಏಜೆಂಟ್ ಖಾದರ್ ಗೆ ಧಿಕ್ಕಾರ, ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ, ಪ್ರಜಾಪ್ರಭುತ್ವ ಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ. ಅನ್ಯಾಯ, ಅನ್ಯಾಯ ಸ್ಪೀಕರ್ ಇಂದ ಅನ್ಯಾಯ ಇಂತಹ ಆಕ್ರೋಶದ ಘೋಷಣೆಗಳು ಕೇಳಿಬಂದಿದ್ದು ವಿಧಾನಸೌಧ – ವಿಕಾಸಸೌಧದ ಮಧ್ಯದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಶಿಷ್ಟಾಚಾರ ಸಮರದ ಕಿಚ್ಚು ಜೋರಾಗ್ತಿದೆ10 ಶಾಸಕರ ಅಮಾನತು ಖಂಡಿಸಿ ಬಿಜೆಪಿ ನಾಯಕರು ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶಾಸಕರು, ಪರಿಷತ್…
ಬೆಂಗಳೂರು: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರ ನಿರ್ಲಕ್ಷತನದ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಿ ತೊಲಗಬೇಕೆಂದು ಆಗ್ರಹಿಸಿದರು. ಸುಮಾರು 77 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಗಲಭೆ ನಡೆಯುತ್ತಿರುವ ಮಣಿಪುರಕ್ಕೆ ಭೇಟಿ ನೀಡಿ ಶಾಂತ ರೀತಿಯ ವಾತಾವರಣ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ರವರು ವಿಫಲವಾಗಿದ್ದಾರೆ. ಮಹಿಳೆಯರನ್ನ ಬೆತ್ತಲೆ ಗೊಳಿಸುವ ಹೀನಾಯ ಕೃತ್ಯಗಳು ನಡೆಯುತ್ತಿದ್ದರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವುದು ದೇಶದ ದುರಂತ. ಮಹಿಳೆಯರ ಹೆಸರಿನಲ್ಲಿ ರಾಜಕೀಯ ಲಾಭ ಪಡೆದ ನರೇಂದ್ರ ಮೋದಿ ಭೇಟಿ ಬಚಾವೋ ಭೇಟಿ ಪಡವೋ ಎಂಬುವ ಘೋಷಣೆ ಕೂಗಿ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡರೂ ಕಾಣದ ರೀತಿ ವರ್ತಿಸುತ್ತಿದ್ದಾರೆ ಇಂತಹ ಹೀನಾಯ ಸ್ಥಿತಿಗೆ…
ಬೆಂಗಳೂರು: ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಸಂಪರ್ಕದಲ್ಲಿದ್ದ ಹಲವರ ವಿಚಾರಣೆ ನಡೆಸುತ್ತಿದ್ದು, ಶಂಕಿತ ಉಗ್ರರು ಜುನೈದ್, ಟಿ.ನಾಸೀರ್ ಮಾತ್ರವಲ್ಲದೆ ಹಲವರ ಸಹಾಯ ಪಡೆದಿದ್ದಾರೆ. ಇನ್ನು ಸಿಸಿಬಿ ತನಿಖೆ ನಡೆಸುತ್ತಿರುವ ಪ್ರಕರಣವನ್ನೇ ಎನ್ಐಎ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. 2024ರಲ್ಲಿ ರಾಜ್ಯದಲ್ಲಿ ಉಗ್ರರ ಟಾರ್ಗೆಟ್ ಆಗಿದ್ದ ಪ್ಲಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯಿಂದ ಸಿಸಿಬಿ ನಡೆಸಿರೋ ಕಾರ್ಯಚರಣೆಗೆ ಇಡೀ ರಾಜ್ಯವೇ ನಿಟ್ಟಿಸುರು ಬಿಟ್ಟಿದೆ. ರಾಜ್ಯದಲ್ಲಿ ಸದ್ದಿಲ್ಲದೆ ಶೇಖರಣೆ ಆಗ್ತಿದ್ದ ಗ್ರೆನೇಡ್, ಗನ್ ಮತ್ತು ಗುಂಡುಗಳನ್ನ ಕಂಡು ಪೊಲೀಸ್ರೆ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಉಗ್ರರಿಗೆ ಟಾರ್ಗೆಟ್ ಇದ್ದಿದ್ದು ಜನನಿಬಿಡ ಪ್ರದೇಶ. ಆದ್ರೆ ಅದಕ್ಕೆ ಆವ್ರೂ ಆಯ್ಕೆ ಮಾಡಿಕೊಂಡಿದ್ದ ಬಸ್ ಸ್ಟಾಂಡೋ ರೈಲ್ವೇ ಸ್ಟೇಷನ್ನೋ ಅಲ್ಲ ಬದಲಿಗೆ. ಚುನಾವಣಾ ರ್ಯಾಲಿಯನ್ನ. ಎಸ್ ಒಂದೇ ಏಟಿಗೆ ಎರಡು ಕಲ್ಲು ಹೊಡೆಯೋ ಪ್ಲಾನ್ ಮಾಡಿದ್ದ ಉಗ್ರರು ಮುಂಬರೋ ಲೋಕಾಸಭಾ ಚುನಾವಣೆಯ ಬಿಜೆಪಿ ಪಾರ್ಟಿ ರ್ಯಾಲಿಯನ್ನ…
ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರೇ ಅವರನ್ನು ಬ್ರದರ್ಸ್ ಅಂತಾ ಅಪ್ಪಿಕೊಳ್ಳಲು ಹೋಗಬೇಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಾಲೆಳೆದರು. ಈಗಲಾದರೂ ಡಿಕೆ ಶಿವಕುಮಾರ್ ಅವರೇ ವಿವೇಚನೆ ಇಲ್ಲದೇ, ಮತ ಬ್ಯಾಂಕ್‌ಗಾಗಿ ಅವರನ್ನು ಬ್ರದರ್ಸ್ ಎನ್ನಬೇಡಿ. ಅವರನ್ನು ಅಪ್ಪಿಕೊಳ್ಳಲು ಹೋದರೆ ಬೆಂಗಳೂರು, ಕರ್ನಾಟಕ ಸಂಕಷ್ಟಕ್ಕೆ ಹೋಗಬಹುದು ಎಂದು ಹೇಳಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಅವರು ಅಮಾಯಕರು ಎಂದು ಬಿಂಬಿಸಿದರು. ಬಿಜೆಪಿ ದುರುದ್ದೇಶಪೂರ್ವಕವಾಗಿ ಬಂಧಿಸುತ್ತಿದೆ ಎಂದು ಹೇಳಿದರು. ಇವತ್ತು ಕಾಂಗ್ರೆಸ್ ಸರ್ಕಾರ ಬಂದಿದೆ. ಆದರೆ, ದೇಶದಲ್ಲಿ ಉಗ್ರರು ಉಗ್ರಗಾಮಿ ಚಟುವಟಿಕೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವರನ್ನು ನೀವು ಅಪ್ಪಿಕೊಳ್ಳಲು ಹೋದರೆ ಬೆಂಗಳೂರು ಕರ್ನಾಟಕ ಸಂಕಷ್ಟಕ್ಕೆ ಹೋಗಬಹುದು ಎಂದರು. ಪೊಲೀಸರಿಗೆ ಮುಕ್ತ ತನಿಖೆ ನಡೆಸಲು ಅವಕಾಶ ಕೊಡಬೇಕು. ಬ್ರದರ್ಸ್ ಅಂತ ಹೇಳಿಕೆ ನೀಡಿ, ಯಾರಾದರೂ ಮಾತು ಕೇಳಿ ಅವರನ್ನು ಬಿಡಿಸುವ ಕೆಟ್ಟ ಕೆಲಸ ಮಾಡಬೇಡಿ. ಬೆಂಗಳೂರಲ್ಲಿ ಹಲವು ಕಡೆ ಬಾಂಬ್ ಬ್ಲಾಸ್ಟ್ ಮಾಡುವಂತಹ ಸಂಚು ಮಾಡಿದ್ದಾರೆ…
ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿದ್ದು ಶಾಸಕರಾದ ರವಿಕುಮಾರ್ ಗೌಡ ಗಣಿಗ ಮತ್ತು ಪ್ರದೀಪ್ ಈಶ್ವರ್ ಹಾಗೂ ಮಾಧ್ಯಮ ಸಂಯೋಜಕರಾಗಿರುವ ವೃತ್ತಿ ಬಾಂಧವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಗೌರವಿಸಲಾಯಿತು. ಸುದ್ದಿಮನೆಯಿಂದ ವಿಧಾನಸೌದದ ವರೆಗೆ ಕಾರ್ಯಕ್ರಮದಡಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಸುದ್ದಿಮನೆಯಲ್ಲಿ ಕೆಲಸ ಮಾಡಿ ಸದ್ಯ ಮಾಧ್ಯಮ ಸಂಯೋಜಕರಾಗಿ ಮತ್ತು ನಾನಾ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಒಂದೇ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ಗೌರವಿಸುತ್ತಿದೆ ಎಂದರು. ನಾನೂ ಪತ್ರಕರ್ತನಾಗಿದ್ದೆ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಒಬ್ಬ ಪತ್ರಕರ್ತನಿಗೆ ಏನೆಲ್ಲ ಸವಾಲು ಇದೆ ಎನ್ನುವುದು ನಾನು ವೃತ್ತಿ ಮಾಡುವಾಗ ಅನುಭವಕ್ಕೆ ಬಂತು. ಚಿಕ್ಕಬಳ್ಳಾಪುರದಲ್ಲಿ ಲೋಕಲ್ ಟಿವಿ ಮಾಡಿದಾಗ ಅನುಭವಕ್ಕೆ ಬಂತು. ನಾನೆ ಸುದ್ದಿ ಸಂಪಾದಿಸಿ ನಾನೇ ಎಡೆಟಿಂಗ್ ಮಾಡಿ ನಾನೇ ಸುದ್ದಿ ವಾಚನ ಮಾಡಬೇಕಾಗಿತ್ತು ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡರು. ವ್ಯಕ್ತಿಗೆ ಬದ್ದತೆ ಇದ್ದರೆ ಮತ್ತು ಪರಿಶ್ರಮ ಹಾಕಿದರೆ ಯಾವ…
ಬೆಂಗಳೂರು: ರಾಜ್ಯ ವಿಧಾನಸಭಾ ಅಧಿವೇಶನದ 30 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ಮುಗಿಸುವ ಮೂಲಕ ಇತಿಹಾಸ ಪುಟ ಸೇರಿದ ರಾಜ್ಯ ವಿಧಾನಸಭೆ ಹಾಗೆ ಇದೊಂದು ಬಿಜೆಪಿ ಪಕ್ಷಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತದೆ. ವಿಧಾನಸಭೆ ಅಧಿವೇಶನ ಆರಂಭವಾದಾಗಿನಿಂದಲೂ ರಾಜ್ಯ ಬಿಜೆಪಿಯಲ್ಲಿ ಗೊಂದಲವೋ ಗೊಂದಲ, ವಿರೋಧ ಪಕ್ಷದ ನಾಯಕನಿಲ್ಲದೇ ಬಜೆಟ್ ಮೇಲಿನ ಚರ್ಚೆಯ ವೇಳೆ ನಾಮ್‌ಕೇವಾಸ್ತೆ ವಿಪಕ್ಷದ ಸಾರಥ್ಯವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಹಿಸಿಕೊಂಡಿದ್ದರು. ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿದೆ, ಇದರೊಂದಿಗೆ ಅಧಿವೇಶನದಲ್ಲಿ ಕೇಸರಿ ಪಡೆ ನಾಯಕರು ತೀವ್ರ ಮುಜುಗರಕ್ಕೆ ಈಡಾಗಿದ್ದರು, ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗೇ ಉಳಿದಿದ್ದರು ಬಿಜೆಪಿ ವರಿಷ್ಠರು ತಲೆಕೆಡಿಸಿಕೊಂಡಿಲ್ಲ. ರಾಜ್ಯ ವಿಧಾನಸಭಾ ಅಧಿವೇಶನದ ಆರಂಭವಾದಾಗಿನಿಂದ ಗಲಾಟೆ,ಗದ್ದಲ, ಪ್ರತಿಭಟನೆಗಳಿಂದಲೇ ಮುಗಿದಿದ್ದು ಒಟ್ಟಾರೆ ಅಧಿವೇಶನವು ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯೇ ನಡೆಯದೇ ಇಂದು ಮುಕ್ತಾಯವಾಗಲಿದೆ.
ಬೆಂಗಳೂರು: ಎನ್‌ಡಿಎ ಮತ್ತು ಯುಪಿಎ ಎರಡರ ಜೊತೆಗೂ ಜೆಡಿಎಸ್ ಸೇರೋದು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಹೆಚ್ಡಿಕೆಗೆ ತಿಳಿಸಿದ್ದಾರೆ. ಎನ್‌ಡಿಎ ಜೊತೆ ಮೈತ್ರಿಯ ಬಗ್ಗೆ ಕುಮಾರಸ್ವಾಮಿ ಒಲವುತೋರಿಸಿದ್ದರು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾತ್ರ ಬಿಜೆಪಿ-ಕಾಂಗ್ರೆಸ್ ಯಾವುದರ ಜೊತೆ ಸೇರೋದು ಬೇಡ ಏಕಾಂಗಿಯಾಗಿ ಸ್ಪರ್ಧೆ ಮಾಡೋಣ ಎಂದಿದ್ದಾರೆ. ಈ ಬಗ್ಗೆ ನಿನ್ನೆಯ ಜೆಡಿಎಲ್‌ಪಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಎನ್‌ಡಿಎ ಜೊತೆ ದೋಸ್ತಿಯಿಂದ ಜೆಡಿಎಸ್‌ಗೆ ಲಾಭವಾಗುವುದರಿಂದ ಎನ್‌ಡಿಎ ಗೆ ಬೆಂಬಲ ನೀಡುಬೇಕು ಎನ್ನುವ ಕುಮಾರಸ್ವಾಮಿ ಪ್ರಸ್ತಾಪವನ್ನು ಹೆಚ್.ಡಿ ದೇವೇಗೌಡ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಏಕಾಂಗಿ ಸ್ಪರ್ಧೆಯಿಂದ ಎಷ್ಟು ಸ್ಥಾನ ಗೆಲ್ಲುತ್ತೇವೆ ಅದನ್ನ ಜನ ನಿರ್ಧರಿಸಲಿ ಎಂದಿರುವ ಮಾಜಿ ಪ್ರಧಾನಿ ದೇವೇಗೌಡರ ಅಭಿಪ್ರಾಯದಂತೆ ದೂರ ಇರಲು ನಿರ್ಧಾರಿಸಿದ್ದಾರೆ. ಹಾಗಾದರೇ ಜೆಡಿಎಸ್ ಮುಂದಿನ ನಡೆ ಏನು ಅನ್ನೋದೇ ನಿಗೂಢವಾಗಿದೆ.
ಬೆಂಗಳೂರು ;- ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಿಜೆಪಿ ಯಾವಾಗಲೂ ವಿಪಕ್ಷವಾಗಿಯೇ ಇರಬೇಕು. ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಅವಲಂಬಿತರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಜನಪ್ರಿಯತೆ ದಿನೇ ದಿನೇ ಮಸುಕಾಗುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ಮೋದಿ 28 ಬಾರಿ ಬಂದಿದ್ದಾರೆ. ಒಂದು ಅಸೆಂಬ್ಲಿ ಚುನಾವಣೆಗೆ ಯಾವ ಪ್ರಧಾನಿ ಕೂಡ ಇಷ್ಟು ಬಾರಿ ಚುನಾವಣೆ ಪ್ರಚಾರ ಮಾಡಿಲ್ಲ. ಮೈಸೂರು, ಬಾದಾಮಿ, ಬೆಂಗಳೂರು ಸೇರಿ ಹಲವೆಡೆ ಪ್ರಚಾರ ಮಾಡಿದ್ದು, ಮೋದಿ ಪ್ರಚಾರ ಮಾಡಿದ ಎಲ್ಲಾ ಕಡೆಯೂ ನಾವು ಗೆದ್ದಿದ್ದೇವೆ. ಇವರು ಯಾವುದೇ ಚುನಾವಣೆಗಳಲ್ಲೂ ಹೆಚ್ಚು ಮತ ಪಡೆದಿಲ್ಲ. ನಮ್ಮ ಮತಗಳ ಶೇಕಡಾವಾರು ಜಾಸ್ತಿಯಾಗುತ್ತಲೇ ಹೋಗುತ್ತಿದೆ ಎಂದು ಹೇಳಿದರು. ಡೆಪ್ಯುಟಿ ಸ್ಪೀಕರ್ ಮೇಲೆ ಬಿಜೆಪಿ ಶಾಸಕರು ಕಾಗದ ಹರಿದು ಎಸೆದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು. ಸದನದಲ್ಲಿ ನಿನ್ನೆ ಬಿಜೆಪಿಯವರ ನಡವಳಿಕೆ ಬಗ್ಗೆ ಏನಂತ ಕರೆಯಬೇಕು? ಬಿಜೆಪಿಯವರನ್ನು ಅನಾಗರಿಕರು…
ಬೆಂಗಳೂರು ;- ಸಭಾಪತಿ ಸ್ಥಾನದಲ್ಲಿರುವವರು ಅದರ ಘನತೆ ಕಾಪಾಡಬೇಕು, ಧ್ವನಿ ಹತ್ತಿಕ್ಕುವ ಕೆಲಸ ಈ ಸರ್ಕಾರ ಮಾಡ್ತಿದೆ, ಮುಂದಿನ ದಿನಗಳಲ್ಲಿ ಜನರೇ ಇವರಿಗೆ ಬುದ್ದಿ ಕಲಿಸ್ತಾರೆ ಎಂದು ಪರಿಷತ್ ಸದಸ್ಯ ಟಿಎ ಶರವಣ ಅವರು ಕಿಡಿಕಾರಿದರು. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಗೆ IAS ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಜೆಡಿಎಸ್ ಮುಖಂಡರು ಸದನದಲ್ಲಿ ಪ್ರತಿಭಟನೆ ಮಾಡಿದರು. ಹೀಗಾಗಿ ಪ್ರಶ್ನಿಸಿದವರನ್ನು ಸ್ಪೀಕರ್ ಅಮಾನತು ಮಾಡಿ ಆದೇಶ ಹೊರಡಿಸಿದರು. ಇದನ್ನು ಖಂಡಿಸಿ, ಜೆಡಿಎಸ್ ಮತ್ತು ಬಿಜೆಪಿ ಶಾಸಕರುಗಳು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ದೂರು ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಟಿಎ ಶರವಣ ಅವರು, ಬೆಂಗಳೂರಿನ ನಡೆದ ವಿಪಕ್ಷಗಳ ಸಭೆಗೆ ಆಗಮಿಸಿದ್ದ ಗಣ್ಯರಿಗೆ ಆತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ದುರ್ಬಳಕೆ ಮಾಡಿಕೊಂಡಿರುವುದು ಅಪರಾಧ. ಈ ವಿಚಾರದಲ್ಲಿ ಸರ್ಕಾರ ಕ್ಷಮೆ ಕೇಳಬೇಕು. ಕಾಂಗ್ರೆಸ್ನ ಸರ್ವಾಧಿಕಾರ ಮಾಡುತ್ತಿದೆ. ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಪ್ರಶ್ನಿಸುವ ಹಕ್ಕಿದೆ, ಪ್ರಶ್ನಿಸಿದವರ ಮೇಲೆ…