Author: Prajatv Kannada

ಉಡುಪಿ: ದೇಶವನ್ನು 60 ವರ್ಷಗಳ ಕಾಲ ಲೂಟಿ ಹೊಡೆದವರು ಒಂದು ಕಡೆ ಸೇರಿದ್ದರು. ಅವರು ತಮ್ಮ ಒಕ್ಕೂಟಕ್ಕೆ INDIA ಎಂದು ಹೆಸರು ಇಟ್ಟಿದ್ದಾರೆ. ಅವರದ್ದು ಇಂಡಿಯಾ ಅಲ್ಲ, ಲೂಟಿಕೋರ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ (Shobha Karandlaje) ಲೇವಡಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ನಾಯಕರ ಸಭೆಯ ಬಗ್ಗೆ ತೀವ್ರ ಟೀಕಾಪ್ರಹಾರ ಮಾಡಿದರು. ಸಭೆಯಲ್ಲಿ ಸೇರಿದ ಎಲ್ಲರೂ ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ಕೂಡ ಅವರು ಒಕ್ಕೂಟವನ್ನು ರಚಿಸಿ ವೈಫಲ್ಯ ಕಂಡಿದ್ದರು. ಈಗ ಹೊಸ ಹೆಸರಿನೊಂದಿಗೆ ಬಂದಿದ್ದಾರೆ. ಅವರಲ್ಲಿರುವ ಬಹುಪಾಲು ಜನರು ಲೂಟಿಕೋರರಾಗಿದ್ದಾರೆ. ಅವರು INDIA ಎಂಬ ಹೆಸರು ಇಟ್ಟದ್ದೇ ಕಾನೂನುಬಾಹಿರವಾಗಿದೆ ಎಂದು ಸಚಿವರು ಹೇಳಿದರು. ”ದೇಶವನ್ನು 60 ವರ್ಷ ಲೂಟಿ ಹೊಡೆದವರು ಒಂದಾಗಿ ರಚಿಸಿದ ಒಕ್ಕೂಟಕ್ಕೆ ‘ಇಂಡಿಯಾ’ ಹೆಸರಿಟ್ಟಿದ್ದು, ಅವರದ್ದು ಇಂಡಿಯಾ ಅಲ್ಲ, ‘ಲೂಟಿಕೋರ ಈಸ್ಟ್‌ ಇಂಡಿಯಾ ಕಂಪನಿ’. ”ಬೆಂಗಳೂರಿನಲ್ಲಿ ಮಂಗಳವಾರ ಸಭೆಯಲ್ಲಿದ್ದ 26…

Read More

ಬೆಂಗಳೂರು ;- ವಿಧಾನಸಭೆಯಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಂಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾವು ಹಾಗೂ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆಗಲೂ ನಾವು ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೆವು. ಆಗಲೂ ಡ್ಯಾನಿಶ್ ಅಲಿ ಸಮೇತ ಬಹುತೇಕ ಇದೇ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ್ದರು. ಆಗ ನಾವು ಡ್ಯಾನಿಶ್ ಅಲಿಯನ್ನು ಪುಡಿಪುಕ್ಕ ಎಂದು ಕರೆಯಲು ಸಾಧ್ಯವೇ? ಈ ಬಾರಿ ಇವರೆಲ್ಲ ನಾಯಕರು ದೇಶವನ್ನು ಉಳಿಸಲು, ಭಾರತದ ಭವಿಷ್ಯ ಉಳಿಸಲು ಅವರದೇ ಆದ ಸಿದ್ಧಾಂತ ಇಟ್ಟುಕೊಂಡು ಆಗಮಿಸಿದ್ದಾರೆ. ರಾಜಕಾರಣದಲ್ಲಿ ಅವರಿಗೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅನಂತಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಇತ್ತು. ಆಗಲೂ ಶಿಷ್ಟಾಚಾರ ಪಾಲನೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರು ಕೇಳಿದಾಗಲೂ ಶಿಷ್ಟಾಚಾರ ಪಾಲನೆ ಮಾಡಿದ್ದೇವೆ. ಬಿಜೆಪಿಯವರು ಕೇಳಿದಾಗಲೂ ನಾವು ಶಿಷ್ಟಾಚಾರ…

Read More

ಬೆಂಗಳೂರು: ರಾಜ್ಮಾಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ನಡೆಯುತ್ತಿದ್ದು  ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಪುತ್ರ ಮತ್ತು ಬಿಜೆಪಿ ಶಾಸಕ  ಬಿ. ವೈ. ವಿಜಯೇಂದ್ರ ನವರ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿತ್ತು. ಅವರು ನಿನ್ನೆ ನವದೆಹಲಿಯಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ಬುಧವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿಯಾಗಿದ್ದ ಸಿಎಂ ಪುತ್ರ ವಿಜಯೇಂದ್ರ ಇಂದು (ಗುರುವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ ರಾಜ್ಯ ಬಿಜೆಪಿ ವಲಯದಲ್ಲಿ ಮತ್ತೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಅರ್ಧಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದು, ಈ ವೇಳೆ ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನ ನಡ್ಡಾ ಅವರ ಗಮನಕ್ಕೆ ತಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಬಿಜೆಪಿಯ ಕೆಲವು ನಾಯಕರು ಸರ್ಕಾರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಬಗ್ಗೆ ನಡ್ಡಾ ಅವರಿಗೆ ದೂರು ನೀಡಿದ್ದಾರೆ…

Read More

ಬೆಂಗಳೂರು ;- ರಾಜಧಾನಿ ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮತ್ತೊಂದು ಮಾಹಿತಿ ಲಭ್ಯವಾಗುತ್ತಿದೆ. ಸೆರೆ ಸಿಕ್ಕ ಶಂಕಿತ ಉಗ್ರರು ಹಿಂದೂಗಳ ಹತ್ಯೆಗೆ ಸಂಚು ರೂಪಿಸಿದರು ಎಂಬ ಮಾಹಿತಿ ಲಭ್ಯವಾಗುತ್ತಿದೆ. ಜತೆಗೆ, ಪೊಲೀಸರಿಗೆ ಮಾತ್ರ ಲಭ್ಯವಾಗುವ ವೀಶೇಷ ಗುಂಡುಗಳೂ ಕೂಡ ಇವರ ಬಳಿ ಕಂಡುಬಂದಿವೆ. ಈಗಾಗಲೇ ಮೊದಲ ಹಂತದಲ್ಲಿ ಐವರೂ ಶಂಕಿತರನ್ನು ಸಿಸಿಬಿ ತೀವ್ರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಮುಂದಿನ ಹಂತದಲ್ಲಿ ಶಂಕಿತರ ಬಳಿ ಪತ್ತೆಯಾದ ವೆಪನ್ಸ್ ಬಗ್ಗೆ ಪರಿಶೀಲನೆ ನಡೆಯಲಿದೆ. ಶಸ್ತ್ರಾಸ್ತ್ರಗಳ ಬಗ್ಗೆ ಕೂಲಂಕಷ ತನಿಖೆ ಆಗಬೇಕಿದೆ. ಶಂಕಿತರ ಬಳಿ ವಿಶೇಷ ಗುಂಡುಗಳು ಪತ್ತೆಯಾಗಿದ್ದು, ಸದ್ಯ ಇದು ಸಿಸಿಬಿ ಪೊಲೀಸರ ನಿದ್ದೆ ಕೆಡಿಸಿದೆ. ಇವರ ಬಳಿ ಹದಿನೈದು ವಿಶೇಷ ಗುಂಡುಗಳು ಪತ್ತೆಯಾಗಿದ್ದು, ಇವುಗಳನ್ನು ಪೊಲೀಸ್ ಆಫೀಸರ್‌ಗಳು ಮತ್ತು ಡಿಫೆನ್ಸ್ ಅಧಿಕಾರಿಗಳಿಗೆ ಮಾತ್ರ ಬಳಸಲು ಪ್ರಾವಿಷನ್ ಇರುತ್ತದೆ. ಸಾಮಾನ್ಯರಿಗೆ ಈ ಗುಂಡುಗಳು ಸಿಕ್ಕುವುದಿಲ್ಲ. ಹಾಗಾದರೆ ಶಂಕಿತರ ಕೈಗೆ ಸ್ಪೆಷಲ್ ಗುಂಡುಗಳು ಹೇಗೆ ಬಂದವು,…

Read More

ಬೆಂಗಳೂರು:  ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha Election) ಎಲ್ಲರೂ ಒಗ್ಗೂಡಿ ಬಿಜೆಪಿಯನ್ನು ಎದುರಿಸುವ ಸಂಬಂಧ ವಿಪಕ್ಷಗಳು ಐಎನ್‍ಡಿಐಎ ಹೆಸರಿನ ನಾಮಕರಣ ಮಾಡಿ ಹೊಸ ಮುನ್ನುಡಿಗೆ ನಾಂದಿ ಹಾಡಿವೆ. ಯುಪಿಎ (UPA) ಹೊಸ ರೂಪದಲ್ಲಿ, ಹೊಸ ಹೆಸರಿನೊಂದಿಗೆ ಕಾಣಿಸಿಕೊಂಡಿದೆ. ಈ ಕೂಟಕ್ಕೆ ಇಂಡಿಯಾ ಎಂದು ಮರುನಾಮಕರಣ ಮಾಡಲಾಗಿದೆ. ಐಎನ್‍ಡಿಐಎ ಎಂದರೇ ಭಾರತ ರಾಷ್ಟ್ರೀಯ ಅಭಿವೃದ್ಧಿ ಸಮ್ಮಿಳಿತ ಕೂಟ (Indian National Developmental Inclusive Alliance) ಎಂದರ್ಥ. ಲೋಕಸಮರದಲ್ಲಿ ಒಟ್ಟಾಗಿ ಸ್ಪರ್ಧೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಉಪಸಮಿತಿ ರಚನೆ ಮಾಡಲಾಗಿದೆ. ಇಂಡಿಯಾ ಅಧ್ಯಕ್ಷರು ಮತ್ತು ಸಂಚಾಲಕರ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ. ಸೀಟು ಹಂಚಿಕೆಗೆ ಸಂಬಂಧಿಸಿ ರಾಜ್ಯವಾರು ಸಮಿತಿ ರಚನೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ. ದೇಶದಲ್ಲಿ ಜಾತಿಗಣತಿಗೆ 26 ರಾಜಕೀಯ ಪಕ್ಷಗಳ ಒಲವು ವ್ಯಕ್ತಪಡಿಸಿದ್ದು, ದ್ವೇಷ ರಾಜಕಾರಣದ ವಿರುದ್ದ ಸಾಮೂಹಿಕ ಹೋರಾಟ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಣಿಪುರದ ಗಲಭೆ ಸಂಬಂಧ…

Read More

ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ನಡೆದ ಘಟನೆ ನಾವೆಲ್ಲ ತಲೆ ತಗ್ಗಿಸುವಂತಹ ಘಟನೆ ಆಗಿದೆ ಎಂದು ಪರಿಷತ್‌ ಸದಸ್ಯ ಟಿ.ಎ. ಶರವಣ ಕಳವಳ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ (Vidhana Soudha) ಮಾತನಾಡಿದ ಅವರು,  ನಿನ್ನೆ ನಡೆದ ಘಟನೆ ನಾವೆಲ್ಲ ತಲೆ ತಗ್ಗಿಸುವ ಘಟನೆ ಆಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಹೋರಾಟ ಮಾಡುವುದಕ್ಕೆ ಸ್ವತಂತ್ರರಾಗಿದ್ದಾರೆ. ಆದರೆ ಇವರು ಮಾರ್ಷಲ್‌ ಗಳ ಕೈಲಿ ಶಾಸಕರನ್ನ ಹೊರಹಾಕಿಸಿದ್ದು ಅತ್ಯಂತ ಖಂಡನೀಯ ಎಂದು ಹೇಳಿದರು. ಹಾಗೆ ಸಭಾಪತಿ ಸ್ಥಾನದಲ್ಲಿರುವವರು ಅದರ ಘನತೆಯನ್ನು ಕಾಪಾಡಬೇಕು, ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಆದರೆ ಈ ಸರ್ಕಾರ ಅದನ್ನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನರೇ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

Read More

ಬೆಂಗಳೂರು ;– ಬಿಜೆಪಿಯೊಂದಿಗೆ ಯಾವುದೇ ಕಾರಣಕ್ಕೂ ಜೆಡಿಎಸ್ ವಿಲೀನವಾಗುವುದಿಲ್ಲ ಎಂದು ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆ ಸಮಯದಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ್ ಕಾಮತ್ ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಪದೇ ಪದೇ ಅಡ್ಡಿಪಡಿಸುತ್ತಿದ್ದುದನ್ನು ಕಂಡು ಎದ್ದು ನಿಂತ ರೇವಣ್ಣ, ಕಾಮತ್ ಪರವಾಗಿ ಮಾತನಾಡಿದರು. ಇದಕ್ಕೆ ಕಾಂಗ್ರೆಸ್ಸಿಗರು, ನೀವು ಬಿಜೆಪಿಯೊಂದಿಗೆ ವಿಲೀನವಾಗಿದ್ದೀರಿ ಎಂದು ಕಾಲೆಳೆದರು. ಯಾವುದೇ ಪಕ್ಷದ ಜೊತೆ ಜೆಡಿಎಸ್ ವಿಲೀನವಿಲ್ಲ. ವಿಲೀನವಾಗಿ ಕೆಲವರು ವನವಾಸ ಅನುಭವಿಸುತ್ತಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಕಾಂಗ್ರೆಸ್‌ಗೆ ಬೆಂಬಲ ನೀಡಿದರೂ ಜೈಲುವಾಸ ಅನುಭವಿಸಬೇಕಾಯಿತು ಎಂದು ರೇವಣ್ಣ ವ್ಯಂಗ್ಯವಾಡಿದರು.

Read More

ಬೆಂಗಳೂರು ;- ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ -ಜೆಡಿಎಸ್ ಒಟ್ಟಿಗೆ ಹೋರಾಟ ಮಾಡಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರಣಿ ನಿರತರಿಗೆ ಶಿಕ್ಷೆ ಕೊಡಲು ಭೋಜನ ವಿರಾಮಕ್ಕೆ ಬಿಡದೇ ಡೆಪ್ಯುಟಿ ಸ್ಪೀಕರ್ ಕಲಾಪ ನಡೆಸಿದರು. ಮುಖ್ಯಮಂತ್ರಿ ಸೂಚನೆ ಮೇರೆಗೆ ಡೆಪ್ಯುಟಿ ಸ್ಪೀಕರ್ ಕಲಾಪ ಮುಂದುವರೆಸಿದ್ದರು. ಹಸಿವಿನಿಂದ ಆಕ್ರೋಶಗೊಂಡು ಕೆಲವರು ಕಾಗದ ಪತ್ರ ಹರಿದಿದ್ದಾರೆ ಎಂದರು. ಸ್ಪೀಕರ್ ಪೀಠದಲ್ಲಿ ಕುಳಿತ ಮೇಲೆ ಯಾವುದೇ ಸಮುದಾಯಕ್ಕೆ ಸೇರಲ್ಲ. ಸ್ಪೀಕರ್ ಪೀಠದಲ್ಲಿ ಕುಳಿತವರು 224 ಶಾಸಕರಿಗೆ ರಕ್ಷಣೆ ಕೊಡಬೇಕು. ದಲಿತ ಶಾಸಕರಿಗೆ ಅವಮಾನ ಮಾಡಿದ್ದಾರೆ ಎಂದು ಅನುಕಂಪ ಗಿಟ್ಟಿಸಲು ಯತ್ನ ನಡೆಸಲಾಗಿದೆ. ಇಂತಹ ರಾಜಕೀಯ ಗಿಮಿಕ್ ಹೆಚ್ಚು ದಿನ ನಡೆಯುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕೆ. ಹೇಳಿದ್ದಾರೆ

Read More

ಬೆಂಗಳೂರು ;- 10 ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದನ್ನು ವಿರೋಧಿಸಿ ವಿಧಾನಸೌಧದ ಬಳಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದು, ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಾಥ್ ನೀಡಿದ್ದಾರೆ. ಸರ್ಕಾರದ ವಿರುದ್ಧದ ಬಿಜೆಪಿ ಹೋರಾಟದಲ್ಲಿ ಕುಮಾರಸ್ವಾಮಿ ಜೊತೆಯಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹೋರಾಟ ನಡೆಸುತ್ತಿದ್ದ ಬಿಜೆಪಿ ಶಾಸಕರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ಆರ್. ಅಶೋಕ್, ಸುನಿಲ್ ಕುಮಾರ್, ಅಶ್ವತ್ಥ್ ನಾರಾಯಣ ಸೇರಿದಂತೆ ಹಲವು ಬಿಜೆಪಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಈ ಹಿನ್ನೆಲೆಯಲ್ಲಿ 5 ಜನ ಶಂಕಿತ ಉಗ್ರರನ್ನು ಕೋರ್ಟ್ ಗೆ ಕರೆ ತಂದ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೆ 7 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಟಾರ್ಗೆಟ್ ಬೆಂಗಳೂರು: ಶಂಕಿತ ಉಗ್ರರು ಬೆಂಗಳೂರು ಸಿಟಿಯನ್ನೇ ಟಾರ್ಗೆಟ್ ಮಾಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ಅರೆಸ್ಟ್ ಆದ ಎಲ್ಲಾ ಶಂಕಿತರು ಬೆಂಗಳೂರು ಸ್ಥಳೀಯ ನಿವಾಸಿಗಳೇ ಆಗಿದ್ದಾರೆ. ಉಗ್ರರ ಜೊತೆ ಕಾಂಟ್ಯಾಕ್ಟ್ ಆಗಿ ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು? ಏನು ಅನ್ನೋದರ ಬಗ್ಗೆಯೂ ಟ್ರೈನಿಂಗ್ ಪಡೆದಿದ್ದರು. ಶಂಕಿತರ ಟೀಂ ಎಲ್ಲಾ ಕಡೆಯೂ ಆಕ್ಟೀವ್ ಆಗಿತ್ತು. ಬೆಂಗಳೂರಿನ ಸುಮಾರು ಹತ್ತು ಕಡೆ ಬ್ಲಾಸ್ಟಿಂಗ್ ಗೆ ಪ್ಲಾನ್ ಮಾಡಿದ್ದ ಮಾಹಿತಿ ಸಿಕ್ಕಿದೆ. ಎಲ್ಲಾ ಪ್ಲಾನ್ ಮಾಡಿಕೊಂಡು ಎಕ್ಸಿಕ್ಯೂಟ್‍ಗೆ ಕಾಯುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ರೌಡಿಗಳಾಗಿದ್ದ ಶಂಕಿತರು: ಬೆಂಗಳೂರಿನಲ್ಲಿ ಸದ್ದಿಲ್ಲದೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಶಂಕಿತರು ಅಸಲಿಗೆ ರೌಡಿಗಳಾಗಿದ್ದರು.…

Read More