ಬೆಂಗಳೂರು: ನಿರ್ಮಾಪಕ ಎಂಎನ್ ಕುಮಾರ್ ಹಾಗೂ ಸುದೀಪ್ ಮಧ್ಯೆ ಮನಸ್ತಾಪ ಉಂಟಾಗಿದೆ. ಸುದೀಪ್ ಚಿತ್ರಗಳನ್ನು ಕುಮಾರ್ ನಿರ್ಮಾಣ ಮಾಡಿದ್ದರು. ಇಬ್ಬರ ಮಧ್ಯೆ ಗೆಳೆತನ ಇತ್ತು. ಆದರೆ, ಈಗ ಈ ಗೆಳೆತನ ಹಾಳಾಗಿದೆ. ಎಂಎನ್ ಕುಮಾರ್ ಫಿಲ್ಮ್ ಚೇಂಬರ್ ಮೊರೆ ಹೋದರೆ, ಸುದೀಪ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇವರ ಮಧ್ಯೆ ಮೂಡಿರುವ ಮನಸ್ತಾಪವನ್ನು ಪರಿಹರಿಸಲು ರವಿಚಂದ್ರನ್ ಮುಂದಾಗಿದ್ದಾರೆ. ‘ನಾನು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೆ ಎಲ್ಲರೂ ಶಾಂತರಾಗಿರಿ. ನನ್ನ-ಸುದೀಪ್ ಮಧ್ಯೆ ತಂದಿಡಬೇಡಿ’ ಎಂದು ರವಿಚಂದ್ರನ್ ಕೋರಿದ್ದಾರೆ. ಸುದೀಪ್ (Sudeep) ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ನಿರ್ಮಾಪಕರ ಸಂಘದ ಪದಾಧಿಕಾರಿಗಳು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದರು. ಇಂದು ಸ್ವತಃ ನಿರ್ಮಾಪಕ ಕುಮಾರ್ (N. Kumar) ಅವರೇ ರವಿಚಂದ್ರನ್ (Ravichandran) ಅವರನ್ನು ಭೇಟಿ ಮಾಡಿ, ಸುದೀಪ್ ಮತ್ತು ತಮ್ಮ ನಡುವಿನ ಸಂಗತಿಯನ್ನು ತಿಳಿಸಿದ್ದಾರೆ. ತಮಗೆ ನ್ಯಾಯ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Author: Prajatv Kannada
ಬೆಂಗಳೂರು: ವಿಧಾನಸಭೆ ಕಲಾಪದ ಸಂದರ್ಭ ಸದನದಲ್ಲಿ ಅಗೌರವ ತೋರಿದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಡಾ.ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ. ಇದಕ್ಕೂ ಮುನ್ನ ಬಿಜೆಪಿ ಶಾಸಕರು ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆದಿದ್ದರು. ಈ ವಿಚಾರವಾಗಿ ಸದನದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿತ್ತು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್ಗೆ ದೂರು ನೀಡಿದ್ದರು. ಸಣ್ಣ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷರ ಮೇಲೆ ಪೇಪರ್ ಎಸೆಯುತ್ತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಆಗ್ರಹಿಸಿದ್ದರು.
ಬೆಂಗಳೂರು: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಟ್ರೋಫಿಗಳನ್ನು ಸಂಗ್ರಹಿಸುವುದರಲ್ಲಿ ನಿಸ್ಸೀಮರು. ಇನ್ನು ಪಂದ್ಯ ಗೆದ್ದ ಬಳಿಕ ಸ್ಟಂಪ್‌ಗಳನ್ನು ಹೊತ್ತೊಯ್ದು ಅದನ್ನು ಸಂಗ್ರಹಿಸಿಡುವುದು ಧೋನಿಯ ಹವ್ಯಾಸ ಎಂಬುದು ಕ್ರಿಕೆಟ್ ಪ್ರಿಯರಿಗೆ ತಿಳಿದೇ ಇದೆ. ಅಂದಹಾಗೆ ಕ್ರಿಕೆಟ್‌ನಿಂದ ಆಚೆಗೂ ಧೋನಿ ವಿಶೇಷ ಹವ್ಯಾಸ ಒಂದನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಕಾರುಗಳು ಮತ್ತು ಬೈಕ್‌ಗಳು ಎಂದರೆ ಬಲು ಪ್ರೀತಿ. ಇದೇ ಪ್ರೀತಿಯಿಂದ ಸಂಗ್ರಹಿಸಿದ ನೂರಾರು ಬಗೆಬಗೆಯ ಬೈಕ್‌ಗಳು ಮತ್ತು ಕಾರುಗಳ ಸಲುವಾಗಿ ವಿಶೇಷ ಸಂಗ್ರಹಾಲಯವನ್ನೇ ನಿರ್ಮಿಸಿದ್ದಾರೆ. ಧೋನಿ ತಮ್ಮ ಹುಟ್ಟೂರು ರಾಂಚಿಯಲ್ಲಿ ಕಟ್ಟಿರುವ ಫಾರ್ಮ್ ಹೌಸ್ (ತೋಟದ ಮನೆ)ನಲ್ಲಿ ನಿರ್ಮಿಸಿರುವ ಕಾರ್ ಮತ್ತು ಬೈಕ್‌ಗಳ ಸಂಗ್ರಹಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಹುಚ್ಚು ಹವ್ಯಾಸ ಒಂದರ ಪರಮಾವಧಿ ಕಂಡು ಅಕ್ಷರಶಃ ಬೆರಗಾಗಿದ್ದಾರೆ. ಕಾರು ಮತ್ತು ಬೈಕ್‌ಗಳ ಬಗ್ಗೆ ಇಷ್ಟು ಹುಚ್ಚು ಹೊಂದಿರುವವರಿಂದ ಮಾತ್ರವೇ ಇಂಥದ್ದೊಂದು ಸಂಗ್ರಹಾಲಯ ಕಟ್ಟಲು ಸಾಧ್ಯ ಎಂದು ಹೇಳಿಕೊಂಡಿರುವ ವೆಂಕಿ, ತಮ್ಮ ಸೋಷಿಯಲ್…
ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎನ್ ಕುಮಾರ್ ನಡುವಿನ ಆರೋಪ, ಪ್ರತ್ಯಾರೋಪದ ವಿಚಾರಕ್ಕೆ ಕೊನೆಗೂ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಕೊಟ್ಟಿದ್ದಾರೆ. ಕೆಲ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಇದೀಗ ರವಿಚಂದ್ರನ್ ಎಂಟ್ರಿಕೊಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಟ ರವಿಚಂದ್ರನ್, ‘ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್ ಗೆ ನೋವಾಗಿರೋದು ನಿಜ. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್ ನಲ್ಲಿದ್ದೆ ಹಾಗಾಗಿ ಪಿಕ್ ಮಾಡೋಕೆ ಆಗ್ಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದರು. ಈ ಕುರಿತು ಸುದೀಪ್ ಹತ್ತಿರ ಮಾತಾಡ್ಬೇಕಾ ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ ಹೆಂಡ್ತಿ ಜಗಳ…
2011ರಲ್ಲಿ ತೆರೆಗೆ ಬಂದ ಸಂಜು ವೆಡ್ಸ್ ಗೀತಾ ಸಿನಿಮಾದ ಮುಂದುವರೆದ ಭಾಗ ಮಾಡಲು ನಿರ್ದೇಶಕ ನಾಗಶೇಖರ್ ಮುಂದಾಗಿದ್ದಾರೆ. ಈಗಾಗಲೇ ಸಿನಿಮಾದ ಹಿಂದೆ ಬಿದ್ದಿರುವ ನಾಗಶೇಖರ್ ಸದ್ಯದಲ್ಲೇ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಇದುವರೆಗೂ ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ನಟಿ ರಮ್ಯಾ ಇರುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಇದೀಗ ರಮ್ಯಾ ಜಾಗಕ್ಕೆ ನಟಿ ರಚಿತಾ ರಾಮ್ ಎಂಟ್ರಿಕೊಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ನಾಗಶೇಖರ್ ಆಪ್ತ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ರಮ್ಯಾ ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಇಲ್ಲವಂತೆ. ಈಗಾಗ್ಲೆ ರಮ್ಯಾ ಕೆಲ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿರು ಕಾರಣದಿಂದಾಗಿ ರಮ್ಯಾ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ರಚಿತಾ ರಾಮ್ ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಚಿತಾ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಆಗಿದ್ದು ಆಕೆಯ ಕಡೆಯಿಂದಲೂ ಆಲ್ ಮೋಸ್ಟ್ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗುತ್ತಿದೆ. ಶ್ರೀನಗರ ಕಿಟ್ಟಿ ಹುಟ್ಟು ಹಬ್ಬದ ದಿನದಂದು ‘ಸಂಜು ವೆಡ್ಸ್…
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎನ್ ಕುಮಾರ್ ನಡುವಿನ ಆರೋಪ, ಪ್ರತ್ಯಾರೋಪ ಇಂದಿಗೂ ಮುಂದುವರೆದಿದೆ. ಪ್ರರಕಣದ ಕುರಿತು ಈಗಾಗಲೇ ನಟ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ಇದಕ್ಕೆಲ್ಲಾ ನೇರಾ ಕಾರಣ ಸ್ವತಃ ಸೂರಪ್ಪ ಬಾಬು ಎಂದು ಸುದೀಪ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಆರೋಪ ಮಾಡಿದ್ದಾರೆ. ಸೂರಪ್ಪ ಬಾಬು ಅವರನ್ನು ಶಿಖಂಡಿ ಎಂದು ಸಂಭೋಧಿಸಿರುವ ಚಕ್ರವರ್ತಿ ಚಂದ್ರಚೂಡ್, ”ಹಲವು ಸಂಪಾದಕರಿಗೆ, ಪತ್ರಕರ್ತರಿಗೆ ಕರೆ ಮಾಡಿ ಹಣದ ಆಮಿಷ ನೀಡಿ ಸುದೀಪ್ ವಿರುದ್ಧ ಸುದ್ದಿ ಮಾಡುವಂತೆ ಸೂರಪ್ಪ ಬಾಬು ಒತ್ತಾಯ ಮಾಡಿದ್ದಾರೆ. ಅಲ್ಲದೆ ಕ್ಲಬ್ ಒಂದರಲ್ಲಿ ಸೂರಪ್ಪ ಬಾಬು ಹಾಗೂ ಎಂಎನ್ ಕುಮಾರ್ ಒಟ್ಟಿಗಿದ್ದಿದ್ದನ್ನು ಸ್ವತಃ ನಾನೇ ನೋಡಿದ್ದೇನೆ. ಸುದೀಪ್ ವಿರುದ್ಧ ತೆರೆಮರೆಯಲ್ಲಿ ಸೂರಪ್ಪ ಬಾಬು ಕೆಲಸ ಮಾಡುತ್ತಲೇ ಬಂದಿದ್ದರು. ಅವರಿಗೆ ಸುದೀಪ್ ಸಾಕಷ್ಟು ಸಹಾಯ ಮಾಡಿದ್ದರೂ ಸಹ ಸೂರಪ್ಪ ಬಾಬು, ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ”ಕೋಟಿಗೊಬ್ಬ 2′…
ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಸದ್ಯ ಹಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆ. ಆಲಿಯಾ ನಟಿಸಿರೋ ಮೊದಲ ಸಿನಿಮಾ ಹಾರ್ಟ್ ಆಫ್ ಸ್ಟೋನ್ ರಿಲೀಸ್ಗೆ ರೆಡಿಯಿದೆ. ಸದ್ಯ ಸಿನಿಮಾದ ಆಲಿಯಾ ಲುಕ್ ರಿಲೀಸ್ ಆಗಿದ್ದು ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದೆ. ಸಿನಿಮಾ ರಂಗದ ಉತ್ತುಂಗದಲ್ಲಿರುವಾಗ್ಲೆ ರಣ್ಬೀರ್ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ ಭಟ್ ಮಗುವಾದ ಬಳಿಕವೂ ಸಖತ್ ಡಿಮ್ಯಾಂಡ್ ಕಾಯ್ದುಕೊಂಡಿದ್ದಾರೆ. ಆಲಿಯಾ ಪ್ರೆಗ್ನೆಂಟ್ ಇರುವಾಗ್ಲೂ ಹಾಲಿವುಡ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿ ಸುದ್ದಿಯಾಗಿದ್ದರು. ಹಾಲಿವುಡ್ ಖ್ಯಾತ ನಟಿ ಗಾಲ್ ಗಡೋಟ್ ಮುಂದೆ ಆಲಿಯಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ. ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾದಲ್ಲಿ ಆಲಿಯಾ ಭಟ್ ಅವರು ಕಿಯಾ ಧವನ್ ಎಂಬ ಪಾತ್ರ ಮಾಡಿದ್ದಾರೆ. ಸದ್ಯ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದ್ದು ಆಲಿಯಾ, ತಲೆ ಕೂದಲು ಯಾವುದು? ಧರಿಸಿದ ಕೋಟ್ ಯಾವುದು ಎಂಬ ವ್ಯತ್ಯಾಸವೇ ತಿಳಿಯದ ರೀತಿಯಲ್ಲಿ ಅವರ ಗೆಟಪ್ ಪೋಸ್ಟರ್ನಲ್ಲಿದೆ. ಆಲಿಯಾ ಭಟ್…
ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಹೆಚ್ಚಿನವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ.ಅದೇ ಖುಷಿ ಅನ್ನುತ್ತಾರೆ ಎಷ್ಟೋ ಜನ. ಯಾವುದೇ ಪಾರ್ಟಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಕುಟುಂಬ ಸ್ನೇಹಿತರೊದಿಗೆ ಸೇರಿ ಹೆಚ್ಚಿನ ಜನರು ಮೋಜಿಗಾಗಿ ಮದ್ಯಪಾನ ಮಾಡುತ್ತಾರೆ. ಹಾಗೂ ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು ಇರಲೇಬೇಕು. ಉಪ್ಪಿನಕಾಯಿ, ಕುರುಕುಲು ತಿಂಡಿಗಳು, ಎಣ್ಣೆಯಲ್ಲಿ ಕರಿದ ಆಹಾರಗಳು ಹೀಗೆ ಆಲ್ಕೋಹಾಲ್ ಸೇವಿಸುವಾಗ ಈ ತಿನಿಸುಗಳನ್ನು ಕೂಡಾ ಜೊತೆಗೆ ತಿನ್ನುತ್ತಾರೆ. ಮದ್ಯಪಾನ ಹೇಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಂಸ್ಕರಿಸಿದ ಮತ್ತು ಕರಿದ ಆಹಾರಗಳು ಹೆಚ್ಚಿನವರಿಗೆ ಆಲ್ಕೋಹಾಲ್ ಸೇವಿಸುವಾಗ ಕುರುಕುಲು ತಿಂಡಿ ಅಥವಾ ಮಸಾಲೆಯುಕ್ತ ಕರಿದ ಆಹಾರಗಳು ಇರಲೇಬೇಕು. ಆದರೆ ನಿಮಗೆ ಗೊತ್ತಾ, ಈ ಆಹಾರಗಳು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು, ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು. ಸಕ್ಕರೆಯುಕ್ತ ಪಾನೀಯಗಳು ಕೆಲವರು ತಾವು ಸೇವಿಸುವ ಮದ್ಯಕ್ಕೆ ಸೋಡಾ ಅಥವಾ ಕೊಕಕೋಲಾ ಹಾಗೂ ಇನ್ನಿತರ ಸಿಹಿಕಾರಕ…
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಸಿಲಿಂಡರ್ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಇದು ಪೋಲಾರ್ ಸ್ಯಾಟ್ಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ರಾಕೆಟ್‌ನ ಭಾಗವೇ ಎಂಬುದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋದ ಹಿರಿಯ ವಿಜ್ಞಾನಿಯೋರ್ವರು, “ನಾವು ಈ ಬೃಹತ್ ವಸ್ತುವನ್ನು ಖುದ್ದಾಗಿ ನೋಡದೆ ಅಥವಾ ಪರಿಶೀಲನೆ ಮಾಡದೇ ಇದರ ಬಗ್ಗೆ ಏನನ್ನೂ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ”. ಮೊದಲು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ವಸ್ತುವಿನ ವಿಡಿಯೋವನ್ನು ನಮಗೆ ಕಳುಹಿಸಬೇಕು. ಅದರ ಮೇಲೆ ಯಾವುದಾದರೂ ಗುರುತುಗಳಿವೆಯೇ ಎಂಬುದನ್ನು ನಾವು ಪರಿಶೀಲಿಸಬೇಕು. ಇದಕ್ಕೂ ಮೊದಲು ಈ ವಸ್ತುವನ್ನು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಬೇರೆಡೆಗೆ ಸ್ಥಳಾಂತರಿಸಬೇಕು. ಇನ್ನೂ ಅಗತ್ಯವಿದ್ದರೆ, ಅದು ಭಾರತೀಯ ರಾಕೆಟ್‌ಗೆ ಸಂಬಂಧಿಸಿದ ವಸ್ತುವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಬಹುದು” ಎಂದು ಅವರು ಹೇಳಿದರು. ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಈ ಬೃಹತ್ ಲೋಹೀಯ ವಸ್ತುವನ್ನು ಕಂಡು…
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಅವರ ತಾಯಿ ಸೋನಿಯಾ ಗಾಂಧಿ (Sonia Gandhi) ಮಂಗಳವಾರ ಸಂಜೆ ಬೆಂಗಳೂರಿನಿಂದ (Bengaluru) ದೆಹಲಿಗೆ ತೆರಳುತ್ತಿದ್ದ ವಿಮಾನ (Flight) ಭೋಪಾಲ್‌ನಲ್ಲಿ (Bhopal) ತುರ್ತು ಭೂಸ್ಪರ್ಶ (Emergency Landing) ಮಾಡಿದೆ. ಬೆಂಗಳೂರಿನಲ್ಲಿ 26 ಪಕ್ಷಗಳೊಂದಿಗೆ ನಡೆಸಿದ 2 ದಿನಗಳ ಚಿಂತನ ಮಂಥನ ಅಧಿವೇಶನದ ಬಳಿಕ ರಾಹುಲ್ ಹಾಗೂ ಸೋನಿಯಾ ಗಾಂಧಿ ದೆಹಲಿಗೆ ವಾಪಸಾಗುತ್ತಿದ್ದ ವೇಳೆ ಹವಾಮಾನ ವೈಪರಿತ್ಯದ ಹಿನ್ನೆಲೆ ವಿಮಾನವನ್ನು ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಘಟನೆ ರಾತ್ರಿ 7:45ರ ವೇಳೆಗೆ ನಡೆದಿದೆ. ವಿಚಾರ ತಿಳಿಯುತ್ತಲೇ ಮಾಜಿ ಸಚಿವ ಪಿಸಿ ಶರ್ಮಾ, ಶಾಸಕ ಕುನಾಲ್ ಚೌಧರಿ ಸೇರಿದಂತೆ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. 2024ರ ಲೋಕಸಭೆಯ ಪ್ರಚಾರಕ್ಕಾಗಿ ವಿರೋಧ ಪಕ್ಷಗಳು ಒಟ್ಟಾಗಿ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲಯನ್ಸ್ ಅಥವಾ ‘ಇಂಡಿಯಾ’ವನ್ನು ರಚನೆ ಮಾಡಿ ಸಭೆಯನ್ನು ಮುಕ್ತಾಯಗೊಳಿಸಿದ್ದಾರೆ. ಇದು 2024 ರಲ್ಲಿ ಎನ್‌ಡಿಎ ಮತ್ತು ಇಂಡಿಯಾ ನಡುವಿನ ಯುದ್ಧ…