ಅಲೋವೆರಾದಿಂದ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ಉದ್ದವಾದ ಕೂದಲನ್ನು ಪಡೆಯಲು ಒಂದು ಕೊ್ ಅಲೋವೆರಾ ಜೆಲ್ ಗೆ 2ಚಮಚ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ವಾಶ್ ಮಾಡಿ.ಇದನ್ನು ವಾರದಲ್ಲಿ ಒಮ್ಮೆ ಮಾಡಿ. ಕೂದಲಿನ ಹೊಳಪನ್ನ ಹೆಚ್ಚಿಸಲು ಅಲೋವೆರಾಗೆ ಆಯಿಲ್ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಪೇಸ್ಟ್ ತಯಾರಿಸಿ ನೆತ್ತಿಗೆ ಹಚ್ಚಿ 25 ನಿಮಿಷ ಬಿಟ್ಟು ಶಾಂಪು ಬಳಸಿ ವಾಶ್ ಮಾಡಿ.ಕೂದಲುದುರುವ ಮತ್ತು ತಲೆ ಹೊಟ್ಟು ಸಮಸ್ಯೆ ನಿವಾರಿಸಲು 1 ಕಪ್ ಮೆಂತ್ಯ ಕಾಳಿನ ಪೇಸ್ಟ್ ಗೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ವಾಶ ಮಾಡಿ.ಕೂದಲು ಉದ್ದವಾಗಿಯೂ ಬೆಳೆಯುತ್ತದೆ. ಕೂದಲಿಗೆ ನಿತ್ಯವೂ ಮಾಯಿಶ್ಚರೈಸ್ ಆರೈಕೆಯನ್ನು ನೀಡಬೇಕು ಎನ್ನುವ ಬಯಕೆ ನಿಮ್ಮದಾಗಿದ್ದರೆ ಈ ಕ್ರಮವನ್ನು ಅನುಸರಿಸಬಹುದು. ಬೇಕಾಗುವ ಸಾಮಾಗ್ರಿಗಳು *ಒಂದು ಕಪ್ ನೀರು *1/2 ಕಪ್ ಅಲೋವೆರಾ ರಸ *ಒಂದು ಸ್ಪ್ರೇ…
Author: Prajatv Kannada
ಇಸ್ಲಾಮಾಬಾದ್: ಪಬ್‌ಜಿ ಗೇಮ್ ಆಟದಲ್ಲಿ ಪರಿಚಯವಾದ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗಾಗಿ ಆಕೆಯ ಪತಿ ಮೊರೆ ಇಟ್ಟಿದ್ದಾರೆ. ಆದರೆ ಇದೀಗ ಸೀಮಾ ಹೈದರ್ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಂದ ಬಹಿಷ್ಕಾರಕ್ಕೊಳಗಾಗಿದ್ದಾಳೆ. ಸೀಮಾ ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರು ಅವಳು ಪಾಕಿಸ್ತಾನಕ್ಕೆ ವಾಪಸ್ ಬರೋದು ಬೇಡ, ಆಕೆ ಅಲ್ಲಿಯೇ ಇರಲಿ ಎನ್ನುತ್ತಿದ್ದಾರೆ. ನಾಲ್ಕು ಮಕ್ಕಳ ಅವಿದ್ಯಾವಂತ ತಾಯಿ ಸೀಮಾ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಹಾಗೂ ಸಂಪ್ರದಾಯವಾದಿ ಸಮಾಜ ಎಲ್ಲವನ್ನ ತ್ಯಜಿಸಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಈಗ ಅವಳು ಮುಸಲ್ಮಾನಳಲ್ಲ, ಬೇಕಿದ್ದರೆ ಅವಳು ತನ್ನ ನಾಲ್ಕು ಮಕ್ಕಳನ್ನ ಕಳುಹಿಸಬಹುದು. ಆದ್ರೆ ಸೀಮಾ ಮಾತ್ರ ಬರೋದು ಬೇಡ ಎಂದು ಕುಟುಂಬಸ್ಥರು ಹಾಗೂ ನೆರೆಹೊರೆಯವರು ಹೇಳುತ್ತಿದ್ದಾರೆ. ಗುಲಿಸ್ತಾನ್-ಎ-ಜೌಹರ್ ನಗರದ ಬಿತ್ತೈಯಾಬಾದ್‌ನಲ್ಲಿದ್ದ ಸೀಮಾ ಕಳೆದ ಮೂರು ವರ್ಷಗಳಿಂದ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಅವಳ ಸೋದರ ಮಾವ ನೂರ್ ಅಹ್ಮದ್ ಸ್ವಲ್ಪ ದೂರದಲ್ಲಿ ಮನೆ ಮಾಡಿಕೊಂಡಿದ್ದ. ಸೀಮಾ ಇದ್ದ ಜಾಗದಲ್ಲಿ ಹೆಚ್ಚು ಸೌಲಭ್ಯಗಳು ಇರಲಿಲ್ಲ. ಅಲ್ಲಿಯ…
ಶಿರಸಿ: ವೀರ ಸಾವರ್ಕರ್ ಸೇರಿದಂತೆ ದೇಶಭಕ್ತರ ಪಾಠವನ್ನು ಪಠ್ಯದಿಂದ ಹೊರಹಾಕಿರುವುದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Muthalik) ಹೇಳಿದರು. ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಸಾವರ್ಕರ್ ಒಬ್ಬ ಶ್ರೇಷ್ಠ ಹೋರಾಟಗಾರರಾಗಿದ್ದು, ಅಂಡಮಾನ್ ಜೈಲಿನಲ್ಲಿ 23 ವರ್ಷ ಇದ್ದರು. ಗಾಂಧೀಜಿ, ನೆಹರು ಅಥವಾ ಕಾಂಗ್ರೆಸ್ʼನ ಒಬ್ಬರೇ ಒಬ್ಬರು ಕೂಡ ಅಂಡಮಾನ್ ಜೈಲಿಗೆ ಹೋಗಿಲ್ಲ. ಜೈಲು ಎಂದರೆ ಕಾಂಗ್ರೆಸಿಗರಿಗೆ ರೆಸಾರ್ಟ್ ಆಗಿತ್ತು. ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದ ಸಾವರ್ಕರ್ ಬಗ್ಗೆ ಅವಹೇಳನಕಾರಿ, ಅಸಹ್ಯವಾಗಿ ಮಾತನಾಡುವುದನ್ನು ಬಿಟ್ಟು ನಾಲಿಗೆ ಬಿಗಿಹಿಡಿದು ಮಾತನಾಡಲಿ ಎಂದು ಎಚ್ಚರಿಸಿದರು. ಬಿಜೆಪಿ ಹಿಂದುತ್ವವನ್ನು ಕಡೆಗಣಿಸುತ್ತಿದೆ. ಕಾರ್ಯಕರ್ತರನ್ನು ಅಲಕ್ಷ್ಯ ಮಾಡುತ್ತಿದೆ. ತಮ್ಮ ಸ್ವಾರ್ಥ ಹಾಗೂ ಭ್ರಷ್ಟಾಚಾರ ತುಂಬಿ ತುಳುಕಿದ ವಾತಾವರಣ ಮತ್ತು ಹಿಂದುತ್ವ ಕಡೆಗಣಿಸಿದ ಪರಿಣಾಮದಿಂದ ಇವತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳಿಗೆ ಮತ್ತು ಬಿಜೆಪಿ ಪ್ರಮುಖರಲ್ಲಿ ವ್ಯತ್ಯಾಸ ಉಂಟಾಗಿದೆ. ಈ ವ್ಯತ್ಯಾಸ ಹೋಗಬೇಕಾದರೆ ತಮ್ಮ ತಪ್ಪನ್ನು ಒಪ್ಪಿಕೊಂಡು…
ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ತ್ವರಿತ ಸಾರಿಗೆ ಸೇವೆ ನೀಡಿರುವ ಸರ್ಕಾರ ಈಗ ಮತ್ತೊಂದು ವಿನೂತನ ಪ್ರಯೋಗದ ಮೂಲಕ ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಚಿಂತನೆ ನಡೆಸಿದೆ. ಹಾಗಿದ್ದರೇ ಏನಿದು ಯೋಜನೆ ಅಂತೀರಾ ತೋರಿಸ್ತಿವಿ ನೋಡಿ.. ಅವಳಿ ನಗರಗಳ ನಡುವೆ ಬಿ.ಆರ್.ಟಿ.ಎಸ್ ಬಸ್ಸಿನ ಜೊತೆಗೆ ಲಘು ರೈಲು(Light rail along with BRTS buses) ಸಾರಿಗೆಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಈ ಯೋಜನೆಯು ಕಾರ್ಯರೂಪಕ್ಕೆ ಬಂದರೆ, ದೇಶದಲ್ಲೇ ಮೊದಲ ಬಾರಿಗೆ ಲಘು ರೈಲು ಸಾರಿಗೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರಗಳು ಪಡೆಯಲಿವೆ. ಹೌದು.. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ನಗರ ಸಾರಿಗೆ ಮೇಲೆ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಜನರಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಒದಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿ ಖಾಸಗಿ ವಾಹನಗಳ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಹೆಚ್ಚು ಒತ್ತು ನೀಡುತ್ತಿದೆ. ಇನ್ನೂ ನಾಲ್ಕು ವಾರಗಳಲ್ಲಿ ಪ್ರಸ್ತಾವನೆ ಸಿದ್ಧವಾಗಲಿದೆ.…
SHARE ಆಳಂದ: ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತದ ಜೈನ ಮುನಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕಣವನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರು ಇಂದಿಲ್ಲಿ ತೀವ್ರವಾಗಿ ಖಂಡಿಸಿದರು.ಸುದ್ದಿಗಾರರೊಂದಿಗೆ ಹತ್ಯೆಯ ಘಟನೆಯನ್ನು ವಿಷಾಧಿಸಿ ಮಾತನಾಡಿದರು. ರಾಜ್ಯದಲ್ಲಿ ಜೈನ್ ಮುನಿಯ ಈ ಹತ್ಯೆ ಘೋರ ನಿಂಧನೆಯಾಗಿದೆ. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ. ಮುಖ್ಯ ಆರೋಪಿಗಳ ಬಚಾವೂ ಮಾಡಲು ಸರ್ಕಾರ ಯತ್ನಿಸುತ್ತಿದೆ. ಇಂಥ ಘಟನೆ ರಾಜ್ಯಕ್ಕೆ ಶೋಭೆಯಲ್ಲ. ಈ ಸರ್ಕಾರ ಬೇಗ ತೊಲಗಲಿ ಎಂದು ಜನ ಬಯಸುತ್ತಿದ್ದಾರೆ ಎಂದು ಅವರು ಹೇಳಿದರು. ಕೇಂದ್ರ ಪರಿಹಾರ ಯತ್ನ: ರಾಜ್ಯದಲ್ಲಿ ಮಳೆ ಬೆಳೆ ಕೊರತೆಯಾದ ಬಗ್ಗೆ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದರೆ ಕೇಂದ್ರದ ಎನ್‌ಡಿಆರ್ ತಂಡ ಕಳುಹಿಸಿಕೊಟ್ಟು ಪರಿಶೀಲಿಸಿ ಪರಿಹಾರದ ನೇರವಿಗೆ ಕೇಂದ್ರ ಬರಲಿದೆ. ರಾಜ್ಯ ಸರ್ಕಾರ ತನ್ನ ಕಾರ್ಯವನ್ನು ಮೊದಲು ಮಾಡಲಿ ಎಂದು ಸಚಿವರು ಹೇಳಿದರು. ಗ್ಯಾರಂಟಿ ಹೆಸರಿನಲ್ಲಿ ಲೂಟಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ವಾರದಲ್ಲೇ ಬೆಲೆ ಹೆಚ್ಚಿಸಿ ಜನತೆಗೆ…
ಮಂಗಳೂರು: ಮಂಗಳೂರಿನ ಸುರತ್ಕಲ್ ಬೀಚ್ನಲ್ಲಿ ಅಪರೂಪದ ಮೀನು(Mangalore) ಪತ್ತೆಯಾಗಿದೆ. ಸ್ಪಾಟೆಡ್ ಮೊರೈ ಈಲ್ಸ್ ಹೆಸರಿನ ಅಪರೂಪದ ಮೀನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಪ್ಪು ಚುಕ್ಕೆಗಳಿಂದ ಆಕರ್ಷಣೀಯವಾಗಿ ಕಾಣುವ ಈ ಮೀನು, ದ್ವೀಪದ ಬಳಿಯ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಪ್ರಕ್ಷುಬ್ಧವಾದ ಕಡಲಿನ ಅಬ್ಬರದಿಂದ ತೀರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಆರೋಳಿ ಎಂದು ಕರೆಯಲ್ಪಡುವ ಈ ಮೀನನ್ನು ಸ್ಥಳೀಯರು ತಿನ್ನಲ್ಲ ಎಂದು ಮೀನುಗಾರರು ಮಾಹಿತಿ ನೀಡಿದರು.
ಬೆಂಗಳೂರು: ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಗೆ IASಗಳ ನಿಯೋಜನೆ ವಿಚಾರಕ್ಕೆ ಸಂಬಂಧಿಸಿ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. IAS ಅಧಿಕಾರಿಗಳನ್ನು ಸ್ವಾಗತ ಕೋರಲು ಬಳಸಿಕೊಂಡಿದ್ದು ಸರಿಯಲ್ಲ. ಕಾಂಗ್ರೆಸ್ ಆರ್ಭಟ ನೋಡಿದ್ರೆ ಇಡೀ ದೇಶವನ್ನೇ ಗೆದ್ದ ರೀತಿ ಆಡ್ತಿದೆ. ಮುಂದಿನ ದಿನದಲ್ಲಿ ಬಿಜೆಪಿ ಇದಕ್ಕೆ ಉತ್ತರ ಕೊಡಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಐಎಎಸ್ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಅಧಿಕಾರಿಗಳು ಮಾತ್ರವಲ್ಲ ಜನರು ಕೂಡ ಅಸಹಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದ ಅಮಲಿನಲ್ಲಿ ಮುಳುಗಿ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು: ಕೇರಳದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕೇರಳ ಕಾಂಗ್ರೆಸ್ ನ ಹಿರಿಯ ನಾಯಕ ಉಮ್ಮನ್ ಚಾಂಡಿ (79) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಓಮನ್ ಚಾಂಡಿ ಚಿಕಿತ್ಸೆ ಫಲಕಾರಿಯಾಗದೆ ದೈವಾಧೀನರಾಗಿದ್ದಾರೆ. ಕೇರಳ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಓಮನ್ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಗಳಾಗಿ ಸಾಧನೆ ಮಾಡಿದವರಾಗಿದ್ದ ಇವರು 2004 ರಿಂದ 2006 ಮತ್ತು 2011 ರಿಂದ 2016 ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಪಾಲರಾಗಿ, ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನಿರಂತರವಾಗಿ ಸಂವಿಧಾನದ ಆಶಯಗಳ, ಮೌಲ್ಯಗಳ ರಕ್ಷಣೆಗೆ ಶ್ರಮಿಸಿ ಹೋರಾಟ ರಾಜಕಾರಣದ ಪರಂಪರೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದರು.
ಬೆಂಗಳೂರು : ಈ ಬಾರಿ ಪ್ರಧಾನಿ ನರೇಂದ್ರ ಮೋದಿಗೆ ಮೆಜಾರಿಟಿ ಸಿಗೋದಿಲ್ಲ. ಅವರು ಸೋಲ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಾಂತದ ಬಗ್ಗೆ ಅವರಿಗೆ ಈಗ ಅರಿವಾಯ್ತಾ? ಎಂದು ಕಿಡಿಕಾರಿದರು. ಮಹಾಘಟಬಂಧನ್ ಅಂತ ಬಂದು ನಂತರ ಏನಾಯ್ತು ನೋಡಿದ್ರಲ್ಲಾ ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ಅವರನ್ನೆಲ್ಲಾ ಕರೆದಿದ್ದವರು ಯಾರು? ಅದನ್ನು ಮುಂದುವರೆಸಿದ್ರಾ? ಅವರು ಬಂದು ಇನ್ವೈಟ್ ಮಾಡಿದ್ರು, ಅದನ್ನು ಮುಂದುವರೆಸಲಿಲ್ಲ. ಅಲ್ಲಿಗೆ ನಿಂತೋಯ್ತು. ಅವರೆಲ್ಲಾ ಬಂದಿದ್ರು, ಹೋದ್ರು ಎಂದು ಛೇಡಿಸಿದರು. ಜೆಡಿಎಸ್ ಪಕ್ಷಕ್ಕೆ ಸಿದ್ಧಾಂತವೇ ಇಲ್ಲ. ಬಿಜೆಪಿ ಜೊತೆಗೆ ಹೋದರೂ ಜಾತ್ಯಾತೀತನಾ? ನಿತೀಶ್ ಕುಮಾರ್ ಸಿದ್ದಾಂತ ವಿಚಾರ ಅವರಿಗೆ ಯಾಕೆ ಬೇಕು. ಅವರ ವಿಚಾರ ಬೇಡ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಯುತ್ತಿದೆ. ಸುಮಾರು 24 ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ವಿಪಕ್ಷ ನಾಯಕರು ಕೂಡ ಭಾಗಿಯಾಗುತ್ತಿದ್ದಾರೆ. ಇಂದು ಈ ಬಗ್ಗೆ ಚರ್ಚೆ ನಡೆಯಲಿದೆ. ಮುಂದಿನ…
ಬೆಂಗಳೂರು: 8ನೇ ತರಗತಿಯ ನಂತರ ಕನ್ನಡ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಾರದು ಎಂದು ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಪೋಷಕರು ಶಾಲಾ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ನಗರದ ಚಾಲುಕ್ಯ ವೃತ್ತದ ಬಳಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ 50 ಕ್ಕೂ ಹೆಚ್ಚು ಮಕ್ಕಳ ಪೋಷಕರು ಪಠ್ಯಕ್ರಮದಿಂದ ಕನ್ನಡ ಭಾಷೆ ಕೈಬಿಡುವಂತೆ ಶಾಲೆಯನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದಾರೆ. ಪಠ್ಯಕ್ರಮದಲ್ಲಿ ಕನ್ನಡದ ಬದಲು ಇಂಗ್ಲಿಷ್ ಸೇರಿಸಿದರೆ ಮಕ್ಕಳು ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದಾಗ ಅನುಕೂಲವಾಗುತ್ತದೆ ಎಂದು ಪೋಷಕರು ವಾದ ಮಾಡಿದ್ದಾರೆ. ಈ ಮಧ್ಯೆ, ಪಠ್ಯಕ್ರಮದಿಂದ ಕನ್ನಡ ಭಾಷೆಯನ್ನು ಕೈಬಿಡಬೇಕೆಂಬ ಪೋಷಕರ ಆಗ್ರಹದ ವಿರುದ್ಧ ಕನ್ನಡ ಪರ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ವಿರೋಧಿಸುತ್ತಿರುವ ಶಾಲೆ ಮತ್ತು ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.