ಬೆಂಗಳೂರು: ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದೇ ಬಿಜೆಪಿಯವರು ಎಂದು ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಮೋದಿ ಪ್ರಧಾನಿಯಾದ ಮೇಲೆ ಬೆಲೆ ಏರಿಕೆ, ಆರ್ಥಿಕತೆ ಹಾಳಾಗಿದೆ. ಜನರು ಬದುಕಲು ಸಾಧ್ಯವಾಗದ ರೀತಿಯಾಗಿದೆ ಎಂದರು. ಬಿಜೆಪಿ ಮುಗಿಸಲು ವಿಪಕ್ಷಗಳು ಒಂದಾಗಿವೆ ಅನ್ನೋ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲಿಲ್ವಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 28 ಕಡೆ ಪ್ರಧಾನಮಂತ್ರಿ ಮೋದಿ ಪ್ರಚಾರ ಮಾಡಿದ್ದರು. ಪ್ರಧಾನಿ ಮೋದಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ನಾವು ಗೆದ್ದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ & ಮಿತ್ರಪಕ್ಷಗಳು ಸೋಲಲಿವೆ ಎಂದರು.
Author: Prajatv Kannada
ಬೆಂಗಳೂರು : ಪರಪ್ಪನ ಅಗ್ರಹಾರ ಬಳಿಯ ಎಟಿಎಂನಿಂದ 24 ಲಕ್ಷ ರೂ. ಎಗರಿಸಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಮಹೇಶ್, ಅರುಳ್ ಕುಮಾರ್, ನದೀಂ ಹಾಗೂ ಶ್ರೀರಾಮ್ ಬಂಧಿತ ಅರೋಪಿಗಳು. ಇನ್ನು, ಮುಖ್ಯವಾಗಿ ಎಟಿಎಂಗೆ ಹಣ ಹಾಕಿದ ತಂಡದ ಸದಸ್ಯನಿಂದಲೇ ಎಟಿಎಂ ದರೋಡೆಯಾಗಿದೆ. ಜುಲೈ 5ನೇ ತಾರೀಖು ಎಟಿಎಂಗೆ ಹಣ ತುಂಬಿಸಿದ್ದ ಸಿಎಂಎಸ್ ಕಂಪನಿಯ ಕಸ್ಟೋಡಿಯನ್ ಅರುಳ್ ಕುಮಾರ್ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ. ಎಟಿಎಂಗೆ ಹಣ ತುಂಬಿದ ಕೆಲವೇ ನಿಮಿಷಗಳಲ್ಲಿ ತನ್ನ ಆಪ್ತರಿಗೆ ಮಾಹಿತಿ ನೀಡಿದ್ದ. ನಂತರ ಹೆಲ್ಮೆಟ್ ಹಾಕಿಕೊಂಡು ಬಂದ ಅರುಳ್ ಕುಮಾರ್ ಹಾಗೂ ಆತನ ತಂಡದವರು 25 ಲಕ್ಷ ಹಣವನ್ನು ಎಗರಿಸಿ ಎಸ್ಕೇಪ್ ಆಗಿದ್ದರು. ಪೊಲೀಸರು ಕಾರ್ಯಾಚರಣೆಗಿಳಿದು ಕಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾಘಟಬಂಧನ್ ಕಾರ್ಯಕ್ರಮಕ್ಕೆ ಮಾಜಿ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು. ಇದು ಫೋಟೋಶೂಟ್ ಅಷ್ಟೇ. ಎಲ್ಲರೂ ಕೈ ಎತ್ತಿ ಫೋಟೋಶೂಟ್ ಮಾಡ್ತಾರೆ, ಹೋಗ್ತಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಕಿಡಿಕಾರಿದರು. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುವವರು ಹೇಗೆ ಅಧಿಕಾರ ದುರುಪಯೋಗ ಮಾಡ್ತಾರೆ ಅನ್ನೋದು ನೋಡ್ತಿದ್ದೀನಿ. ಇದೊಂದು ಫೋಟೋಶೂಟ್ ಅಷ್ಟೆ ಎಂದು ಕುಟುಕಿದರು. ದಾರಿಯುದಕ್ಕೂ ಫ್ಲೆಕ್ಸ್ಗಳನ್ನು ಹಾಕಿದ್ದಾರೆ, ನೋಡಿದ್ದೇನೆ. ಯುಪಿಎ ಲೀಡರ್ಸ್ ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಸಿದ್ಧಾಂತಗಳಿಲ್ಲ. ಆ ರಾಜ್ಯಗಳಲ್ಲಿ ಒಬ್ಬೊರಿಗೊಬ್ಬರು ಕಚ್ಚಾಡುತ್ತಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕೇರಳದಲ್ಲಿ ಒಬ್ಬೊರಿಗೊಬ್ಬರು ಜಗಳ ಆಡ್ತಾರೆ. ಅವರಿಗೆ ಟಾರ್ಗೆಟ್ ಇಲ್ಲ, ಅದೊಂದೆ ಅಜೆಂಡಾ ಇರೋದು ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ವಿರುದ್ಧ ನಾವಿದ್ದೇವೆ ಅನ್ನೊದು ಅಷ್ಟೇ ಅವರಿಗೆ. ದೇಶದ ಬಡವರಿಗೆ ಮೋದಿ ಏನು ಅಂತ ಗೊತ್ತಿದೆ. ಮೋದಿ ಅವರಿಂದ ವಿಶ್ವಮಟ್ಟದಲಿ ಭಾರತಕ್ಕೆ ಹೆಸರು ಬಂದಿದೆ. ಚಂದ್ರಯಾನ 3 ಯಶಸ್ವಿಯಾಗಿದೆ. ಫೋಟೋಶೂಟ್ ಅಷ್ಟೆ ಸಭೆಯಿಂದ…
ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾಘಟಬಂಧನ್ ಯಾಕೆ ಆಹ್ವಾನ ಕೊಟ್ಟಿಲ್ಲ ಅಂತ ಗೊತ್ತಿಲ್ಲ ಹಾಗೆ ಎನ್ಡಿಎ ಮೈತ್ರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನನಗೆ ಯಾರೂ ಕರೆ ಕೂಡ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಘಟಬಂಧನ್ ಸಭೆಗೆ ಕಾಂಗ್ರೆಸ್ ಹಲವು ಪಕ್ಷಗಳ ನಾಯಕರಿಗೆ ಆಹ್ವಾನಿಸಿದ್ದಾರೆ. 123 ಸ್ಥಾನ ಬರದಿದ್ದರೆ ಜೆಡಿಎಸ್ ವಿಸರ್ಜನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದರು. ನಾನು ಸದನದಲ್ಲಿ ವರ್ಗಾವಣೆ ದಾಖಲೆ ಬಿಡುಗಡೆ ಮಾಡಿದರೆ ನನ್ನ ಕಾಲದಲ್ಲಿ ವರ್ಗಾವಣೆಯಲ್ಲಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಅಂತ ನನ್ನ ಮೇಲೆ ದಾಖಲೆ ಬಿಡುಗಡೆ ಮಾಡುತ್ತಿರಾ. ನನ್ನ ಕಾಲದಲ್ಲಿ ವರ್ಗಾವಣೆಗೆ ಲಂಚ ಪಡೆದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಹಾಗೆ ಜೆಡಿಎಸ್ನಿಂದ ಅವಕಾಶವಾದಿ ರಾಜಕಾರಣ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…
ಟಾಲಿವುಡ್ ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು ಮನೆಯಲ್ಲಿ ಆಸ್ತಿಗಾಗಿ ಮಕ್ಕಳ ಮಧ್ಯೆ ಕಿತ್ತಾಟ ಶುರುವಾಗಿದೆ. ಈಗಾಗ್ಲೆ ಸಾಕಷ್ಟು ಸಮಯದಿಂದ ಆಸ್ತಿಗಾಗಿ ಮಕ್ಕಳ ಮಧ್ಯೆ ಜಟಾಪಟಿ ಶುರುವಾಗಿದ್ದು ಇದೀಗ ಮಕ್ಕಳ ಕಿತ್ತಾಟಕ್ಕೆ ಬ್ರೇಕ್ ಹಾಕಲು ನಟ ಮೋಹನ್ ಬಾಬು ಮುಂದಾಗಿದ್ದಾರೆ. ತಮ್ಮ ಕೋಟಿ ಕೋಟಿ ಆಸ್ತಿಯನ್ನು ಮಕ್ಕಳಿಗೆ ಸಮನಾಗಿ ಪಾಲು ಮಾಡಲು ನಟ ನಿರ್ಧರಿಸಿದ್ದಾರೆ. ಮೋಹನ್ ಬಾಬು ಅವರ ಮೂವರು ಮಕ್ಕಳ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಎದೆಎತ್ತರಕ್ಕೆ ಬೆಳೆದ ಮಕ್ಕಳು ಕಿತ್ತಾಡ್ಕೊಂಡು ಮೂರು ದಿಕ್ಕಲ್ಲಿ ದಾರಿ ಕಂಡುಕೊಂಡಿದ್ದಾರೆ. ಈ ಕಡೆ ತಂದೆ ಇನ್ನೊಂದು ದಾರಿ ಹಿಡಿದು ಹೊರಟಿದ್ದಾರೆ. ಟಾಲಿವುಡ್ ಚಿತ್ರರಂಗದ ಶ್ರೀಮಂತ ನಟರಲ್ಲಿ ನಟ ಮೋಹನ್ ಬಾಬು ಕೂಡ ಒಬ್ಬರು. ತಮ್ಮದೇ ಆದ ಡಿಫರೆಂಟ್ ಸ್ಟೈಲ್‌ನಿಂದ ಟಾಲಿವುಡ್‌ನಲ್ಲಿ ಭದ್ರನೆಲೆಕಂಡುಕೊಂಡ ಮೋಹನ್‌ಬಾಬುಗೆ ಮೂವರು ಮಕ್ಕಳು. ವಿಷ್ಣು ಮಂಚು, ಮನೋಜ್ ಮಂಚು ಹಾಗೂ ಲಕ್ಷ್ಮಿ ಮಂಚು. ಮೂರೂ ಮಕ್ಕಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ವಿಷ್ಣು ಹಾಗೂ ಮನೋಜ್ ಮಂಚುವಿನ ಪರಸ್ಪರ ಕಿತ್ತಾಟ…
ಚೀನಾದ ಆತಿಥ್ಯದಲ್ಲಿ ನಡೆಯಲಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ ಟೀಮ್ ಇಂಡಿಯಾವನ್ನು ಸಿಎಸ್‌ಕೆಯ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದು, ಮಹಾ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದು ಕೊಡುವುದೇ ನನ್ನ ಮಹತ್ತರ ಕನಸಾಗಿದೆ ಎಂದು ತಮ್ಮ ಹೆಬ್ಬಯಕೆ ವ್ಯಕ್ತಪಡಿಸಿದ್ದಾರೆ. ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ಪಡೆ 5ನೇ ಬಾರಿ ಟ್ರೋಫಿ ಗೆಲ್ಲಲು ನೆರವಾಗಿದ್ದ ಋತುರಾಜ್ ಗಾಯಕ್ವಾಡ್ 590 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಅನುಭವಿ ಆಟಗಾರರಿಗೆ ಏಷ್ಯನ್ ಗೇಮ್ಸ್ ನಿಂದ ವಿಶ್ರಾಂತಿ ನೀಡಿದ್ದು, ರೋಹಿತ್ ಶರ್ಮಾ ಬದಲಿಗೆ ಋತುರಾಜ್ ಗಾಯಕ್ವಾಡ್‌ಗೆ ನಾಯಕನ ಜವಾಬ್ದಾರಿಯನ್ನು ಬಿಸಿಸಿಐ ಸೆಲೆಕ್ಟರ್ಸ್ ವಹಿಸಿದ್ದಾರೆ. ಚೀನಾದ ಹಾಂಗ್‌ಝೌನಲ್ಲಿ ಸೆಪ್ಟಂಬರ್ 28 ರಿಂದ ಅಕ್ಟೋಬರ್ 8ರವರೆಗೆ ನಡೆಯಲಿರುವ ಏಷ್ಯಾ ಕ್ರೀಡಾಕೂಟದ ಬಗ್ಗೆ ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಋತುರಾಜ್ ಗಾಯಕ್ವಾಡ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಚಿನ್ನದ ಪದಕ ಗೆಲ್ಲುವುದೇ ಗುರಿ “ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ…
ಡೊಮಿನಿಕಾ: ಕೆರಿಬಿಯನ್ ನಾಡಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 141 ರನ್ ಗೆಲುವು ಸಾಧಿಸಿದ್ದು, ನಾಯಕ ರೋಹಿತ್ ಶರ್ಮಾ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ನಾಯಕತ್ವದ ದೀರ್ಘಕಾಲದ ದಾಖಲೆ ಮುರಿದು ಗಮನ ಸೆಳೆದಿದ್ದಾರೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟ್ ಮಾಡಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (60 ಕ್ಕೆ 5) ಬೌಲಿಂಗ್ ದಾಳಿಗೆ ಸಿಲುಕಿ 150 ರನ್ ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ತಮ್ಮ ಮೊದಲ ಇನಿಂಗ್ಸ್ ನಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ (171 ರನ್), ನಾಯಕ ರೋಹಿತ್ ಶರ್ಮಾ (103ರನ್) ಮನಮೋಹಕ ಶತಕ ಹಾಗೂ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ (76 ರನ್) ಅರ್ಧಶತಕ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 421 ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ಡ್ ಘೋಷಿಸಿತು. ದ್ವಿತೀಯ…
ಬಹುಭಾಷಾ ನಟಿ ನಿತ್ಯಾ ಮೆನನ್ ಕುಟುಂಬದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ನಿತ್ಯಾ ಅವರ ಪ್ರೀತಿಯ ಅಜ್ಜಿ ಇತ್ತೀಚಿಗೆ ಇಹಲೋಕ ತ್ಯಜಿಸಿದ್ದಾರೆ. ಅಜ್ಜಿಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ನಟಿ ನಿತ್ಯಾ ಮೆನನ್ ಭಾವುಕರಾಗಿದ್ದಾರೆ. ಈ ಮೊದಲು ಅಜ್ಜನನ್ನು ಕಳೆದುಕೊಂಡಿದ್ದ ನಿತ್ಯಾ ಮೆನನ್ ಇದೀಗ ತುಂಬಾ ಪ್ರೀತಿಸುತ್ತಿದ್ದ ಅಜ್ಜಿಯನ್ನು ಕಳೆದುಕೊಂಡಿದ್ದಾರೆ. ಈಗ ಇವರಿಬ್ಬರು ಜೊತೆಗಿಲ್ಲ ಎನ್ನುವುದನ್ನು ನಿತ್ಯಾ ಮೆನನ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನೋವಿನಿಂದಾಗಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಜ್ಜಿ ಮತ್ತು ಅಜ್ಜನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಯುಗವೊಂದು ಕೊನೆಗೊಂಡಿದೆ. ಗುಡ್ ಬೈ ಅಜ್ಜಿ ಮತ್ತು ನನ್ನ ಚೆರ್ರಿಮನ್. ನಾನು ನಿಮ್ಮನ್ನು ಬೇರೊಂದು ಜಗತ್ತಿನಲ್ಲಿ ಭೇಟಿಯಾಗುತ್ತೇನೆ ಎಂದು ನಟಿ ಪೋಸ್ಟ್ ಮಾಡಿದ್ದಾರೆ. ತಮ್ಮ ಅಜ್ಜ, ಅಜ್ಜಿಯ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಖ್ಯಾತ ನಟ ಮಾಧವನ್ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಖಾಸಗಿ ವಿಚಾರದಲ್ಲೇ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಫ್ರೆಂಚ್ ಪ್ರೆಸಿಡೆಂಟ್ ಇಮ್ಯಾನುಯೆಲ್-ಮ್ಯಾಕ್ರಾನ್ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಅವರ ಜೊತೆ ಕಳೆದಂತಹ ಸುಂದರ ಕ್ಷಣಗಳನ್ನ ನಟ ಮ್ಯಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟ ಮಾಧವನ್ ಫ್ರೆಂಚ್ ಪ್ರೆಸಿಡೆಂಟ್ ಇಮ್ಯಾನುಯೆಲ್-ಮ್ಯಾಕ್ರಾನ್ ಅವರು ಆಯೋಜಿಸಿದ ಡಿನ್ನರ್‌ನಲ್ಲಿ ಭಾಗಿಯಾದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಾರ್ಥವಾಗಿ ಲೌರೆ ಮ್ಯೂಸಿಯಂನಲ್ಲಿ ಆಯೋಜಿಸಿದ್ದ ಡಿನ್ನರ್‌ನಲ್ಲಿ ಮೋದಿ ಜೊತೆ ಮಾಧವನ್ ಕೂಡಾ ಭಾಗಿಯಾಗಿದ್ದು, ಮೋದಿ ಅವರು ಮಾಧವನ್ ಅವರ ಕೈ ಹಿಡಿದು ಆಪ್ತತೆಯಿಂದ ಮಾತನಾಡುತ್ತಿರುವುದು ಫೋಟೋದಲ್ಲಿ ಕಾಣ ಬಹುದಾಗಿದೆ. ಈ ಪೋಸ್ಟ್‌ಗೆ ಶಿಲ್ಪಾ ಶೆಟ್ಟಿ, ಅನುಪಮ್ ಖೇರ್ ಸೇರಿದಂತೆ ಹಲವು ಮೆಚ್ಚುಗೆ ಸೂಚಿಸಿದ್ದಾರೆ. ತಮಿಳು, ಬಾಲಿವುಡ್ ರಂಗದಲ್ಲಿ ಗುರುತಿಸಿಕೊಂಡಿರುವ ಹೆಸರಾಂತ ನಟ ಮಾಧವನ್ ಅವರು 1998ರಲ್ಲಿ ಕನ್ನಡದ ʼಶಾಂತಿ ಶಾಂತಿ ಶಾಂತಿʼ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಹಿಂದಿ,…
ಜೀವನ ಶೈಲಿ, ವ್ಯಾಯಾಮದ ಕೊರತೆ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಜನರು ಅಸಿಡಿಟಿ ಸಮಸ್ಯೆಗೆ ಒಳಗಾಗ್ತಿದ್ದಾರೆ.ಈ ಅಸಿಡಿಟಿಯಿಂದ ಹೊಟ್ಟೆ ಉರಿ, ವಾಕರಿಕೆ, ವಾಂತಿ, ತಲೆನೋವು, ಮೈಕೈನೋವು ಸೇರಿದಂತೆ ಅನೇಕ ಸಮಸ್ಯೆ ಶುರುವಾಗುತ್ತದೆ.ಸಿಡಿಟಿ ಸಮಸ್ಯೆಯಿಂದ ಹೊರಗೆ ಬರಬೇಕು ಎನ್ನುವವರು ಪುದೀನಾ ಎಲೆಗಳನ್ನು ಬಳಸಬಹುದು. ಪುದೀನಾ ಎಲೆ ನಿಮ್ಮ ಅಸಿಡಿಟಿ ಸಮಸ್ಯೆಗೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಪುದೀನಾ ಎಲೆಯಲ್ಲಿರುವ ಪೋಷಕಾಂಶಗಳು ಪುದೀನಾದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಿಣ್ವಗಳಂತಹ ಪೋಷಕಾಂಶಗಳು ಕಂಡುಬರುತ್ತವೆ. ಅಸಿಡಿಟಿ ಸಮಸ್ಯೆಯಿರುವವರು ಪುದೀನಾವನ್ನು ಹೇಗೆ ಸೇವನೆ ಮಾಡಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆ ತಿನ್ನಿ ಪುದೀನಾ ಮತ್ತು ಓಂಕಾಳಿನ ಚಟ್ನಿ ಸೇವನೆ ಮಾಡಬೇಕು ಪುದೀನಾ ಟೀ ಪುದೀನಾ ಮಜ್ಜಿಗೆ