ವಾಷಿಂಗ್ಟನ್: ಒಂಟಿ ಜೀವನ ಬೇಸರವಾಗಿದ್ದು, ಮದುವೆಯಾಗ್ಬೇಕು ಅಂತಾ ಅನ್ನಿಸಿದೆ, ಹುಡುಗನನ್ನ ಹುಡುಕಿ ಕೊಡಿ ಪ್ಲೀಸ್. ನನಗೆ ಬೇಕಾದಂತಹ ಹುಡುಗನನ್ನ ಹುಡುಕಿ ಕೊಟ್ರೆ 5 ಸಾವಿರ ಡಾಲರ್ (4.10 ಲಕ್ಷ ರೂ.) ಬಹುಮಾನ ಕೊಡ್ತೀನಿ ಎಂದು ಅಮೆರಿಕದ ಮಹಿಳೆಯೊಬ್ಬರ ಬಂಪರ್ ಆಫರ್ ನೀಡಿದ್ದಾರೆ. ಒಂಟಿ ಜೀವನದಿಂದ ಬೇಸರಗೊಂಡಿರುವ ಲಾಸ್ ಏಂಜಲೀಸ್‌ನ ಈವ್ ಟಿಲ್ಲಿ-ಕೊಲ್ಸನ್ (35) ಮಹಿಳೆ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾತುರರಾಗಿದ್ದಾರೆ. 10 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಕೋಲ್ಸನ್ ತನಗೆ ಹುಡುಗನನ್ನ ಹುಡುಕಿಕೊಡುವಂತೆ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮೂಲಕವೂ ಹುಡುಗನನ್ನ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಟಿಲ್ಲಿ-ಕೊಲ್ಸನ್ ಈ ಹಿಂದೆ ತಮ್ಮ ಸ್ನೇಹಿತರಲ್ಲೇ ಒಬ್ಬರನ್ನ ಅಥವಾ ತಾನು ಕೆಲಸ ಮಾಡುವ ಕಂಪನಿಯ ಬಾಸ್ ಅವರನ್ನೇ ಮದುವೆಯಾಗುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಸಾರ್ವಜನಿಕ ಜೀವನಕ್ಕೆ ತೆರೆದುಕೊಂಡಿದ್ದಾರೆ. ನನಗೆ ನನ್ನ ಗಂಡನಾಗುವನನ್ನ ಪರಿಚಯಿಸಿದ್ರೆ, ನಾನು ಅವನನ್ನು ಮದುವೆಯಾದ್ರೆ ಹುಡುಕಿ ಕೊಟ್ಟವರಿಗೆ 5 ಸಾವಿರ ಡಾಲರ್ ಕೊಡುತ್ತೇನೆ. ಆದ್ರೆ ನಾನು ಅವನೊಂದಿಗೆ ಹೆಚ್ಚುಕಾಲ ಇರುವುದು ಅನುಮಾನ. 20 ವರ್ಷಗಳಲ್ಲಿ ವಿಚ್ಛೇದನ ನೀಡಬಹುದು.…
Author: Prajatv Kannada
ಚಂಡೀಗಢ;- ರೈತರೊಬ್ಬರು ಬೆಕ್ಕಿನ ಮರಿಗಳೆಂದು ಭಾವಿಸಿ, ಚಿರತೆ ಮರಿಗಳನ್ನು ರಕ್ಷಿಸಿ ಗ್ರಾಮಕ್ಕೆ ತಂದು ಅವುಗಳಿಗೆ ಮೇಕೆ ಹಾಲನ್ನು ಕುಡಿಸಿರುವ ಘಟನೆ ಹರ್ಯಾಣದ ನುಹ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮೇಕೆಗಳನ್ನು ಮೇಯಿಸಲೆಂದು ಕಾಡಿಗೆ ತೆರಳಿದ್ದ ವೇಳೆ 2 ಚಿರತೆ ಮರಿಗಳು ಸಿಕ್ಕಿವೆ. ಎಳೆಯದಾಗಿದ್ದ ಕಾರಣ ಅವುಗಳು ಬೆಕ್ಕಿನ ಮರಿಗಳಿರಬಹುದೆಂದು ಭಾವಿಸಿ ಅವುಗಳನ್ನು ಮನೆಗೆ ತಂದು, ಮೇಕೆ ಹಾಲು ಕುಡಿಸಿದ್ದಾರೆ. ಕೊನೆಗೆ ಈ ವಿಚಾರ ಅರಣ್ಯಾಧಿಕಾರಿಗಳಿಗೆ ಗೊತ್ತಾಗಿ, ಅವರು ಸ್ಥಳಕ್ಕಾಗಮಿಸಿ ಚಿರತೆ ಮರಿಗಳನ್ನು ಕೊಂಡೊಯ್ದಿದ್ದು, ತಾಯಿಯ ಜತೆಗೆ ಒಗ್ಗೂಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಚಿರತೆ ಮರಿಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಕಾಡಿನಲ್ಲಿ ಈ ರೀತಿ ಮರಿಗಳನ್ನು ಕಂಡಾಗ ರಕ್ಷಿಸುವುದಕ್ಕಾಗಿ ಎತ್ತಿಕೊಳ್ಳಬೇಡಿ, ಸಾಧ್ಯವಾದರೆ ಅವುಗಳು ಇರುವ ಸ್ಥಳವನ್ನೇ ಸುರಕ್ಷಿತವಾಗಿಸಿ ಸಾಕು. ಇಲ್ಲದಿದ್ದರೆ ಮರಿಗಳನ್ನು ಹುಡುಕಿ ಬರುವ ತಾಯಿ, ದಿಕ್ಕು ತಪ್ಪುತ್ತದೆ. ಮರಿಗಳು ತಾಯಿಂದ ದೂರಾಗುತ್ತವೆ” ಎಂದಿದ್ದಾರೆ.
ಸೋಮವಾರ- ರಾಶಿ ಭವಿಷ್ಯ ಜುಲೈ-17,2023 ಅಮವಾಸೆ ಸೂರ್ಯೋದಯ: 06.02 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಪೂರ್ಣ ಅಮವಾಸ್ಯೆ ನಕ್ಷತ್ರ: ಇವತ್ತು ಆರ್ದ್ರಾ 02:39 AM ತನಕ ನಂತರ ಪುನರ್ವಸು ಯೋಗ: ಇವತ್ತು ವ್ಯಾಘಾತ08:58 AM ತನಕ ನಂತರ ಹರ್ಷಣ ಕರಣ: ಇವತ್ತು ಚತುಷ್ಪಾದ 11:02 AM ತನಕ ನಂತರ ನಾಗವ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: – ಇಲ್ಲ ಅಭಿಜಿತ್ ಮುಹುರ್ತ: ಬೆಳಗ್ಗೆ.11:56 ನಿಂದ ಮ.12:48 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403…
ಮಂಡ್ಯ: ಪ್ರಸ್ತುತ ಮಳೆ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ತಮಿಳುನಾಡು ತನ್ನ ಪಾಲಿನ ನೀರಿಗೆ ಬೇಡಿಕೆಯಿಟ್ಟಿದೆ. ರಾಜ್ಯದಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ? ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕಾವೇರಿ ನೀರಿಗಾಗಿ ತಮಿಳುನಾಡು ಒತ್ತಡ ಹೇರುತ್ತಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಶೇಖರಣೆಯಾದ ಬೆನ್ನಲ್ಲೇ ಕೇಂದ್ರದ ನೀರು ನಿರ್ವಹಣಾ ಸಮಿತಿ ಎದುರು ತಮಿಳುನಾಡು ನೀರಿಗಾಗಿ ಬೇಡಿಕೆ ಇಟ್ಟಿದೆ. ಈ ಕುರಿತು ಕಾವೇರಿ ನೀರಾವರಿ ಸಮಿತಿ ಸಭೆಯ ಬಳಿಕವಷ್ಟೆನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಉತ್ತರಿಸಿದರು. ಈ ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಮಳೆಯಾಗುವ ಎಣಿಕೆ ಇದೆ. ಅದಾದರೂ ಹೇಗೆ ಭರವಸೆ ಇಟ್ಟುಕೊಳ್ಳುವುದು? ತಮಿಳುನಾಡು ವಾಡಿಕೆ ಪ್ರಕಾರ ಬಿಡಬೇಕಾದ ನೀರನ್ನು ಕೇಳುತ್ತಿದೆ. ಈ ಬಗ್ಗೆ ಮೊದಲು ಸಭೆ ನಡೆಸಲಿದ್ದೇವೆ, ಅಲ್ಲದೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಜೊತೆಗೂ ಚರ್ಚಿಸಲಾಗುವುದು ಎಂದರು.
ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸೀಟು ಗೆದ್ದಿದ್ದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಹೊಟ್ಟೆಉರಿಯುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಳು ಹೆಚ್ಚಾಗಿವೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್, ನಾವು 136 ಸೀಟ್ ಗೆದ್ದ ಜೋಶ್‌ನಲ್ಲಿದ್ದೇವೆ. ಆದರೆ, ಅವರ ಪಕ್ಷ ಗೆದ್ದು ಅಧಿಕಾರಕ್ಕೆ ಬರಲಿಲ್ಲ. ಆದ್ದರಿಂದ ಅವರಿಗೆ ಹೊಟ್ಟೆಉರಿ ಇರಬಹುದು. ಅದಕ್ಕೆ ಆ ರೀತಿಯಲ್ಲಿ ಮಾತನಾಡುತ್ತಾರೆ ಎಂದರು. ಬೇಕಿದ್ದರೆ, ಅವರ ಸರ್ಕಾರ ಇದ್ದಾಗ ರಾಜ್ಯದಲ್ಲಿ ಎಷ್ಟುಕೊಲೆಗಳಾಗಿವೆ. ಎಷ್ಟುರೇಪ್ ಪ್ರಕರಣಗಳು ನಡೆದಿವೆ. ಎಷ್ಟು ಕ್ರಿಮಿನಲ್ ಕೇಸ್‌ಗಳು ಆಗಿವೆ ಎಂಬುದರ ಲೆಕ್ಕ ಕೊಡುತ್ತೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರೇ ಕೊಲೆ ಮಾಡಲಿ, ಕೂಡಲೇ ತಪ್ಪಿತಸ್ಥರನ್ನು ಹಿಡಿದು ಶಿಕ್ಷೆ ಕೊಡಿಸುತ್ತಿದ್ದೇವೆ. ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕೊಂದವರನ್ನು 6 ಗಂಟೆಯಲ್ಲಿ ಹಿಡಿದು ಕೋರ್ಚ್‌ಗೆ ಒಪ್ಪಿಸಿದ್ದೇವೆ. ಹತ್ಯೆ ಸಂಬಂಧ ತನಿಖೆ…
ಮೈಸೂರು;- ಸಿಎಂ ಸಿದ್ದರಾಮಯ್ಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ರಂಜನೀಶ್ ಬಂಧಿತ ಯುವಕ ಎಂದು ಗುರುತಿಸಲಾಗಿದೆ. ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ ಸಂಬಂಧ ಸಿದ್ರಾಮುಲ್ಲಾ ಖಾನ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ. ಈ ಸರ್ಕಾರ ಬಂದ ಮೇಲೆ ಹಿಂದೂಗಳ ಮೇಲೆ ಸಲೀಸಾಗಿ ಕೊಲೆಗಳು ಆಗುತ್ತಿವೆ ಎಂದು ಪೋಸ್ಟ್ ಮಾಡಿದ್ದ ರಂಜನೀಶ್. ಈ ಘಟನೆ ಸಂಬಂಧ ಸೈಬರ್ ಕ್ರೈಂಗೆ ದೂರು ನೀಡಿದ್ದ.ಮೆಲ್ಲಹಳ್ಳಿ ರವಿ. ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆ 504,505ನೇ (1)ಬಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಟಿ.ನರಸೀಪುರ ಪೋಲೀಸರು. ಯುವಕ ರಂಜನೀಶ್‌ರನ್ನ ಬಂಧಿಸಿ ಬಳಿಕ ಬೇಲ್ ಮೂಲಕ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು;- ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ ನಡೆಯಲಿದ್ದು, ನಗರದ ಹಲವೆಡೆ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ವಿಧಾನಸೌಧದಲ್ಲಿ ಅಧಿವೇಶನ ಹಾಗೂ ತಾಜ್ ವೆಸ್ಟೆಂಡ್ ಹೊಟೇಲ್ನಲ್ಲಿ ಲೋಕಸಭಾ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಈ ಹಿನ್ನೆಲೆ, ಬಿಆರ್ ಅಂಬೇಡ್ಕರ್ ರಸ್ತೆ, ಕಬ್ಬನ್ ರಸ್ತೆ, ಪ್ಯಾಲೆಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸದೆ ಪರ್ಯಾಯ ಮಾರ್ಗಗಳನ್ನ ಬಳಸುವಂತೆ ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ ಹಾಗೂ ರೇಸ್ ಕೋರ್ಸ್ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ಗೆ ನಿಷೇಧ ಹೇರಲಾಗಿದೆ.
ಬೆಂಗಳೂರು ;- ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಕಟ್ಟಿಹಾಕಲೇಬೇಕೆಂದು ದೇಶದ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ.ಇದಕ್ಕಾಗಿ ಇಂದು ಬೆಂಗಳೂರಿನಲ್ಲಿ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿವೆ. ಈ ಬಾರಿ ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಇಂದಿನ ಸಭೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಗರಾದಾದ್ಯಂತ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ವಿಪಕ್ಷಗಳ ಒಕ್ಕೂಟದ ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ನ ಹಾಲಿ ಸಿಎಂ ಹೇಮಂತ್ ಸೊರೇನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸಹ ಆಗಮಿಸಲಿದ್ದಾರೆ. ಅಷ್ಟೇ ಅಲ್ಲದೇ ಎನ್ಸಿಪಿಯ ಶರದ್ ಪವಾರ್, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಮಹಾರಾಷ್ಟ್ರ ಮಾಜಿ ಸಿಎಂ ಶಿವಸೇನೆಯ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ,…
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಈ ಹಿನ್ನೆಲೆಯಲ್ಲಿ ಬಿಸಿಯೂಟದ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯೂ ಮಹತ್ವದ ಮಾರ್ಗ ಸೂಚಿಗಳನ್ನು ಬಿಡುಗಡೆಗೊಳಿಸಿದ್ದು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ. ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯ ಅಡುಗೆ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು ಮಧ್ಯಾಹ್ನದ ಬಿಸಿಯೂಟದಲ್ಲಿ ನೈರ್ಮಲ್ಯ, ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏಪ್ರಾನ್, ತಲೆಗವಸು, ಕೈಗವಸು ಕಡ್ಡಾಯಗೊಳಿಸಿದೆ. ಇದಲ್ಲದೇ ಅಡುಗೆ ಕೋಣೆ ಸ್ವಚ್ಛ ಹಾಗೂ ಧೂಳು ರಹಿತವಾಗಿ ಇರುವಂತೆ ನೋಡಿಕೊಳ್ಳಬೇಕು, ಶುದ್ಧ ನೀರಿನಲ್ಲಿ ಪಾತ್ರೆ ಪರಿಕರಗಳನ್ನು ತೊಳೆಯಬೇಕು. ಗೋಡೆ, ಕಿಟಕಿಗಳು ಹಲ್ಲಿ, ಜೇಡ, ಜಿರಳೆ, ನೊಣಗಳಿಂದ ಮುಕ್ತವಾಗಿರಬೇಕು, ಆಹಾರ ಧಾನ್ಯಗಳಲ್ಲಿ ಕ್ರಿಮಿ, ಕೀಟಗಳು ಇಲ್ಲದಿರುವುದನ್ನು ನೋಡಿಕೊಂಡು ಅಡುಗೆಗೆ ಬಳಕೆ ಮಾಡುವಂತೆ ಸೂಚನೆ ನೀಡಿದೆ. ಇನ್ನೂ ಸಿದ್ಧಪಡಿಸಿದ ಆಹಾರದ ಪಾತ್ರೆಗಳನ್ನು ಸುರಕ್ಷಿತವಾಗಿ ಮುಚ್ಚಿಡಬೇಕು, ಹಸಿ ಸೊಪ್ಪು ತರಕಾರಿಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಸಾಂಬಾರ್ ಮಾಡಬೇಕು, ಸಿದ್ಧಪಡಿಸಿದ ಆಹಾರ ವಿತರಿಸೋ ಮುನ್ನ ಶುಚಿ-ರುಚಿ…
ಬಿಡಿಎನಲ್ಲಿ ಬಿಲಗಳನ್ನ ತೋಡಿಕೊಂಡು ಹೆಗ್ಗಣಗಳು ಸಿಕ್ಕಪಟ್ಟೆ ಮೆಯ್ದಿದಿವೆ.ಇದೀಗ ಭ್ರಷ್ಟ ಅಧಿಕಾರಿಗಳ ಭೇಟೆಗೆ ಸರ್ಕಾರ ಮುಂದಾಗಿದೆ.ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಾಂತರ ರೂ ಹಗರಣಗಳ ತನಿಖೆಗೆ ಸರ್ಕಾರ ಎಸ್ಐಟಿ ರಚನೆಗೆ ಮುಂದಾಗಿದೆ. ಇದರಿಂದ ಕೋಟಿ ಕೋಟಿ ನುಂಗಿದವರಿಗೆ ಚಳಿ ಜ್ವರ ಬರೋದಕ್ಕೆ ಶುರುವಾಗಿದ್ದು, ದೊಡ್ಡ ದೊಡ್ಡ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಳಿಗೆ ನಡುಕ ಹುಟ್ಟಿಸಿದೆ..ಹಾಗಾದ್ರೆ ಯಾವೆಲ್ಲಾ ಹಗರಣಗಳು ತನಿಖೆಯಾಗಲಿ ಅನ್ನೋದನ್ನ ತೋರಿಸುತ್ತೇವೆ ಈ ಕಂಪ್ಲೀಟ್ ರಿಪೋರ್ಟ್ ನಲ್ಲಿ. ಬಿಡಿಎ ಇದು ಭ್ರಷ್ಟರ ಸಾಮಾಜ್ರ್ಯ.ಇಲ್ಲಿ ನಡೆಯುವ ಅಕ್ರಮಗಳು ಒಂದಲ್ಲ ಎರಡೆರಡು ಅಲ್ಲ ಬಿಡಿ.ಸಾರ್ವಜನಿಕ ಸ್ವತ್ತನ್ನ ಗುಳಂ ಮಾಡೋದಕ್ಕೆ ಅಂತ ಇಲ್ಲಿಗೆ ಅಧಿಕಾರಿಗಳು ಬರುತ್ತಾರೆ.ಇದೀಗ ಇಲ್ಲಿ ನಡೆದಿರುವ ಹಗರಣಗಳನ್ನ ತನಿಖೆ ನಡೆಸಿ, ಭ್ರಷ್ಟರನ್ನ ಬೀದಿಗೆ ತರಲು ಸರ್ಕಾರ ಮುಂದಾಗಿದೆ.. ಕಳೆದ ಹತ್ತು ವರ್ಷಗಳಲ್ಲಿ ನಡೆಇದಿದೆ ಎನ್ನಲಾದ ಹಗರಣಗಳ ತನಿಖೆ ನಡೆಸಲು ವಿಶೇಷ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ. ಹೌದು ಕಳೆದ ಹಲವು ವರ್ಷಗಳದಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನ ಅಧಿಕಾರಿಗಳು ಏಜೆಂಟರ ಜತೆ ಶಾಮೀಲಾಗಿ ಪಟ್ಟಭ್ರದ್ರ ಹಿತಾಶಕ್ತಿಗಳಿಗೆ…