Author: Prajatv Kannada

ಬೆಂಗಳೂರು: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿರುವ ಅಂಗನವಾಡಿಗಳ ಕೇಂದ್ರಗಳ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆ ಎಷ್ಟಿದೆ ವೈ ಎ ನಾರಾಯಣಸ್ವಾಮಿ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 67570 ಅಂಗನವಾಡಿ ಕೇಂದ್ರಗಳು 2329 ಮಿನಿ ಅಂಗನವಾಡಿ ಕೇಂದ್ರಗಳು 6 ತಿಂಗಳಿಂದ 3 ವರ್ಷದ 22,12,653 ಮತ್ತು 3 ರಿಂದ 6 ವರ್ಷದ 17,37,526 ಮಕ್ಕಳು ಒಟ್ಟು ಜಿಲ್ಲಾವಾರು 39,50,179 ಮಕ್ಕಳು ದಾಖಲಾಗಿವೆ ಎಂದು ತಿಳಿಸಿದರು. ವಿಧಾನಸಭೆ ಅಧಿವೇಶನ ಆರಂಭವಾಗಿದ್ದು,ಸದನಕ್ಕೆ ಸ್ಪೀಕರ್ ಯುಟಿ ಖಾದರ್​ ಆಗಮಿಸುತ್ತಿದ್ದಂತೆ ಆ ಕಡೆಯೇ ಗಮನ ಹರಿಸುತ್ತಿದ್ದೀರಾ ಎಂದ ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸಿದರು. ಈ ವೇಳೆ ಸ್ಪೀಕರ್​ ಯುಟಿ ಖಾದರ್​ ನಾನು ವಿಪಕ್ಷಗಳ ಮಿತ್ರ ಎಂದಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ ಹೆಚ್ಚಾಗಿದ್ದು ಪೊಲೀಸರ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಇತ್ತೀಚಿಗೆ ವಿಲೀಂಗ್​ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರನ್ನು ಜೈಲಿಗಟ್ಟಿರುವ ಘಟನೆ ನಗರದ ವರ್ತೂರು ಬಳಿ ನಡೆದಿದೆ. ಇವರ ಪಾಡಿಗೆ ಇವರು ವ್ಹೀಲಿಂಗ್ ಮಾಡುತ್ತಾ ದಾರಿಗೆ ಅಡ್ಡಲಾಗಿ ನಿಂತಿದ್ದಕ್ಕೆ ಹಾರ್ನ್​ ಮಾಡಿ ದಾರಿ ಕೇಳಿದ್ರೆ ಏನ್ ಮಾಡಿದ್ರು ಗೊತ್ತಾ, ಕಾರು ಅಡ್ಡಗಟ್ಟಿ, ಚಾಲಕನ ಮೇಲೆ ದರ್ಪ ತೋರಿದ ಘಟನೆ ಗುರುವಾರ ಮಧ್ಯಾಹ್ನ 2.30ರ ವೇಳೆಯಲ್ಲಿ ನಡೆದಿದೆ. ಹೌದು ರಸ್ತೆಯಲ್ಲಿ 3-4 ಬೈಕ್​​ ಸವಾರರು ಸೇರಿ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದರು. ಈ ವೇಳೆ ಕಾರು ಚಾಲಕ ದಾರಿ ಬಿಡುವಂತೆ ಹಿಂಬದಿಯಿಂದ ಹಾರ್ನ್ ಮಾಡಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಪುಂಡರು ಬೈಕ್ ನಿಲ್ಲಿಸಿ ಬಂದು ಚಾಲಕನ ಜತೆ ಗಲಾಟೆ ಮಾಡಿದ್ದಾರೆ. ಇನ್ನು ಹಾರ್ನ್ ಮಾಡಿದ್ದಕ್ಕೆ ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿ ಓರ್ವ ಅಸಾಮಿ ಬಂದಿದ್ದಾನೆ. ಇದಾದ ಬಳಿಕ ಆತನ ಜೊತೆಗೆ ಮತ್ತೆ ಮೂವರು ಜಮಾಯಿಸಿ ಕಾರು ಚಾಲಕನ ಮುಂದೆ ದರ್ಪ ತೋರಿದ್ದಾರೆ. ಅಷ್ಟೇ ಅಲ್ಲದೇ…

Read More

ಬೆಂಗಳೂರು: 2014ರಲ್ಲಿ  ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧಾರ ಮಾಡಿತ್ತಂತೆ..ಸ್ವತಃ ಪ್ರಧಾನಿಗಳೇ,ಹೆಚ್ ಡಿ ಕುಮಾರಸ್ವಾಮಿಗೆ ಬಿಗ್ ಆಫರ್ ನೀಡಿದ್ದಾರಂತೆ.ಪ್ರಧಾನಿಗಳ ಆಫರ್ ಒಪ್ಪಿದಿದ್ರೆ ಕುಮಾರಸ್ವಾಮಿ ಐದು ವರ್ಷ ಸಿಎಂ‌ ಆಗುತ್ತಿದ್ರಂತೆ..ಹಾಗಾದ್ರೆ, HDK  ಇವತ್ತು ಬಿಚ್ಚಿಟ್ಟ ಮೋದಿ ಭೇಟಿ ಸೀಕ್ರೆಟ್ ನ,ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಭಾಷಣ ಮಾಡುತ್ತಿದ್ರು.ಈ ವೇಳೆ ಆಪರೇಷನ್ ಕಮಲ ಬಗ್ಗೆ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ರು.ಆಪರೇಷನ್ ಕಮಲ ಬಗ್ಗೆ ಕಾಂಗ್ರೆಸ್ – ಬಿಜೆಪಿ ನಡುವೆ ಮಾತಿನ ವಾಕ್ಸಮರವೇ ನಡೆಯುತ್ತಿತ್ತು.ಈ ಸಂದರ್ಭದಲ್ಲೇ ಎದ್ದು ನಿಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ,2018 ರ ಜೆಡಿಎಸ್- ಬಿಜೆಪಿ ಮೈತ್ರಿ ಪ್ರಸ್ತಾಪದ ಚರ್ಚೆಯನ್ನ ಇದೇ ಮೊದಲ ಬಾರಿಗೆ ಸದನದಲ್ಲಿ ರಿವೀಲ್ ಮಾಡಿದ್ದಾರೆ. 2018ರಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷದ ಮೈತ್ರಿ ಸರ್ಕಾರ ರಚನೆಯಾಗಿತ್ತು.ಕೇವಲ 14 ತಿಂಗಳಲ್ಲೇ ಮೈತ್ರಿ ಸರ್ಕಾರ ಬಿದ್ದು ಹೋಗಿತ್ತು.ಆದ್ರೆ ಅಂದು ನಡೆದ ವಿಶೇಷ ಘಟನೆಯನ್ನ ಹೆಚ್ಡಿಕೆ ಇಂದು ರಿವೀಲ್ ಮಾಡಿದ್ದಾರೆ.ಮೈತ್ರಿ ಸರ್ಕಾರದ…

Read More

ಬೆಂಗಳೂರು : ಹಾಲಿನ ದರ ಹೆಚ್ಚಳದಿಂದ ರಾಜ್ಯದ ಜನತೆಗೆ ಮತ್ತೊಂದು ಶಾಕ್​ ಎದುರಾಗುವ ಸಾಧ್ಯತೆ ಇದ್ದು, ಇಂದು ಸಂಜೆ 5.30 ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಸಭೆಯಲ್ಲಿ ಕೆಎಂಎಫ್​ ಅಧಿಕಾರಿಗಳು ಹಾಲಿನದರ ಹೆಚ್ಚಳದ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ಮುಂದಿಡಲಿದೆ. ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ವೆಂಕಟೇಶ್ ಅವರು, ಹಾಲಿನ ದರ ಏರಿಸುವಂತೆ ಸಾಕಷ್ಟು ಒತ್ತಾಯ ಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ. ಹಾಗೆ ಹಾಲಿನ ದರ ಏರಿಸುವಂತೆ ರೈತರು, ಒಕ್ಕೂಟದಿಂದ ಒತ್ತಾಯವಿದೆ. ಹಾಲಿನ ದರ 5 ರೂ.ಗೆ ಹೆಚ್ಚಿಸುವಂತೆ ರೈತರ ಬೇಡಿಕೆ ಇದೆ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು ಸಭೆಯ ಬಳಿಕ ಹಾಲಿನ ದರ ಏರಿಕೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ

Read More

ಬೆಂಗಳೂರು: ಟಿವಿ ಶೋಗಳಲ್ಲಿ ಮಕ್ಕಳಿಗೆ ಚಾನ್ಸ್‌ ಕೊಡಿಸುವುದಾಗಿ ನಟ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಈಗ ಸದಾಶಿವನಗರ ಪೊಲೀಸರ ಅತಿಥಿಯಾಗಿದ್ದಾಳೆ. ಮಾಡೆಲಿಂಗ್‌ ನಿಶಾ ನರಸಪ್ಪ ವಂಚನೆ ಮಾಡಿರುವ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ, ಮಕ್ಕಳಿಗೆ ಚಾನ್ಸ್ ಕೊಡಿಸುತ್ತೇನೆ ಎಂದು ಪೋಷಕರ ಬಳಿ ಲಕ್ಷ ಲಕ್ಷ ಪೀಕಿ ಈಗ ಉಂಡೆನಾಮ ಹಾಕಿದ್ದಾಳೆ. ಈ ಬಗ್ಗೆ ಪುಟಾಣಿ ವಂಶಿಕಾ ತಾಯಿ ಯಶಸ್ವಿನಿ ಆನಂದ್ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಯಶಸ್ವಿನಿ ಆನಂದ್ ನಿಶಾ ಹಿಂದೆ ಭಾರೀ ಪ್ರಭಾವಿ ವ್ಯಕ್ತಿಗಳಿದ್ದಾರೆಂದು ಬಾಂಬ್ ಸಿಡಿಸಿದ್ದಾರೆ. ಈಕೆ ಪೀಕಿದ್ದು ಸಾವಿರ ರೂ. ಅಲ್ಲ ಲಕ್ಷ ಲಕ್ಷ ಹಣ ತಿಂದಿದ್ದಾಳೆ ಹಾಗೆ ನನ್ನ ಮಗಳ ಹೆಸರು ಬಳಸಿಕೊಂಡು ಅಮಾಯಕ ಜನರಿಗೆ ಮೋಸ ಕೂಡ ಮಾಡಿದ್ದಾಳೆ. ಇವಳನ್ನ ಹೀಗೆ ಬಿಟ್ರೆ ಇನ್ನೂ ಎಷ್ಟೋ ಜನರಿಗೆ ಮೋಸ ಮಾಡಬಹುದು ಇವಳಿಗೆ ತಕ್ಕ ಪಾಠ ಕಳಿಸಬೇಕು ಎಂದು…

Read More

ಬೆಂಗಳೂರು : ಗೃಹಜ್ಯೋತಿ ಯೋಜನೆಯ ನೊಂದಣಿಗೆ ಇಂಧನ ಸಚಿವ ಕೆಜೆ ಜಾರ್ಜ್ ಅವರು ಗಡುವು ನೀಡಿದ್ದಾರೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕಡೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಅದರಂತೆ, ಜುಲೈ 27ರಂದು ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ” ಎಂದು ಹೇಳಿದರು. ಸರ್ಕಾರ ನೀಡಿದ ಗಡುವಿನೊಳಗೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಜನರು ಯಾವುದೇ ಆತಂಕ ಪಡಬೇಕಿಲ್ಲ. ಸಚಿವರು, “ಯೋಜನೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಯೋಜನೆಯೊಳಕ್ಕೆ ತರಲು ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ನಂತರ ಎರಡು ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸಲಾಗುವುದು” ತಿಳಿಸಿದ್ದಾರೆ.

Read More

ಬೆಂಗಳೂರು: ನಾಗರಿಕ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿದ್ದ ಅಕ್ಕಿಯನ್ನು ಅಷ್ಟೇ ನೀಡಲಾಗುತ್ತಿದೆ. ಆದರೆ, ಎಲ್ಲೆಲ್ಲಿ ಜನರು ತಮ್ಮ ಊಟದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸುತ್ತಾರೋ ಅವರಿಗೆ ಮೂರು ಕೆಜಿ ಅಕ್ಕಿ ಹಾಗೂ 2 ಕೆಜಿ ರಾಗಿಯನ್ನು ನೀಡಲಾಗುತ್ತಿದೆ ಎಂದು ರಾಜ್ಯ ಆಹಾರ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆಹಾರ ಭದ್ರತಾ ಕಾಯ್ದೆಯಡಿ, ಕೇಂದ್ರ ಸರ್ಕಾರದಿಂದ ನೀಡಲಾಗುವ 5 ಕೆಜಿ ಅಕ್ಕಿಯ ಪ್ರಮಾಣವನ್ನು ರಾಜ್ಯ ಸರ್ಕಾರ ಮೊಟಕು ಮಾಡಿದೆ. 5 ಕೆಜಿ ಅಕ್ಕಿಯ ಬದಲಿಗೆ 3 ಕೆಜಿ ಅಕ್ಕಿ ಹಾಗೂ 2 ಕೆಜಿ ರಾಗಿ ಅಥವಾ ಜೋಳವನ್ನು ನೀಡುತ್ತಿದೆ ಎಂಬ ವಿಚಾರ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗಳು ಸಾರ್ವಜನಿಕವಾಗಿ ಹೊಸ ಚರ್ಚೆಗೆ ನಾಂದಿ ಹಾಡಿದ್ದವು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸರ್ಕಾರದ ಈ ನಡೆಯನ್ನು ಟೀಕಿಸಿದ್ದರು. ರಾಗಿ, ಜೋಳ ಏಕೆ? ಅಧಿಕಾರಿಗಳ ವಿವರಣೆಯೇನು? ”ಪೂರ್ತಿಯಾಗಿ 5 ಕೆಜಿ ಅಕ್ಕಿಯನ್ನೇ ನೀಡಬಹುದಲ್ಲವೇ, ರಾಗಿ, ಜೋಳ ಏಕೆ” ಎಂದು ಕೇಳಲಾದ ಪ್ರಶ್ನೆಗೆ ಮತ್ತೊಂದು ಪ್ರಶ್ನೆಗೆ…

Read More

ಬೆಂಗಳೂರು ;– ರೌಡಿ ಶೀಟರ್ ಕಪೀಲ್ ಮರ್ಡರ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಲಭ್ಯವಾಗಲಿದೆ. ಮಡಿವಾಳ ಠಾಣೆಯ ರೌಡಿಶೀಟರ್ ಶೀಟರ್ ಆಗಿರುವ ಕಪಿಲ್ ಹತ್ಯೆಗೆ ಒಂದು ತಿಂಗಳ ಹಿಂದೆಯೇ ಹಂತಕ ಪಡೆ ಸಂಚು ರೂಪಿಸಿದ್ದರು. ಕಪೀಲ್ ಹಿಂದೆ ಹಂತಕರು ಬಿದ್ದಿರೋದು ಕಪೀಲ್ ಗೂ ಸಹ ಗೊತ್ತಾಗಿತ್ತು ಡಿಜೆಹಳ್ಳಿಯಲ್ಲಿ ಕಪೀಲ್ ಬರುವಾಗ ಕಾರಿನಲ್ಲಿ ಹಂತಕರು ಫಾಲೋ ಮಾಡಿದರು. ಇದನ್ನ ಗಮನಿಸಿದ ಕಪೀಲ್ ಜೊತೆಯಲ್ಲಿದ್ದ ಹುಡುಗನಿಗೆ ಕಾರ್ ಚೆಕ್ ಮಾಡಲು ಹೇಳಿದ್ದ. ಆದ್ರೆ ಹುಡುಗ ದುಶ್ಮನಗಳ ಕಾರು ಬದಲಿಗೆ ಬೇರೆ ಕಾರನ್ನ ಚೆಕ್ ಮಾಡಿದ್ದ. ಇದೇ ಸಮಯದಲ್ಲಿ ಕಪೀಲ್ ಮೇಲೆ ಏಳೆಂಟು ಜನರ ಗುಂಪು ಅಟ್ಯಾಕ್ ಮಾಡಿದೆ. ಫುಟ್ ಬಾತ್ ನಲ್ಲಿದ್ದ ನೇಮ್ ಬೋರ್ಡ್ ನಿಂದ ಎದುರಾಳಿಗಳ ಮೇಲೆ ಕಪೀಲ್ ಅಟ್ಯಾಕ್ ಮಾಡಿದ್ದು, ಈ ವೇಳೆ ಕಪೀಲ್ ನೆಲಕ್ಕೆ ಕೆಡವಿ ಮನಸೋಇಚ್ಚೆ ಕೊಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸದ್ಯ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read More

ಬೆಂಗಳೂರು ;– ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮದ್ಯ ಪ್ರಿಯರ ಕಿಕ್ ಇಳಿಸಿದ್ದು, ಅಕ್ಷರಶಃ ಸತ್ಯ. ಸಿಎಂ ಸಿದ್ದರಾಮಯ್ಯಾ ಅವರು ಮಂಡಿಸಿದ ೧೪ ನೇ ಬಜೆಟ್ ನಲ್ಲಿ, ರಾಜ್ಯದ ಆರ್ಥಿಕ ವ್ಯವಸ್ಥೆ ಬ್ಯಾಲೆನ್ಸ್ ಮಾಡಲು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ಉಚಿತ ಯೋಜನೆಗೆ ಹಣ ಹೊಂದಾಣಿಕೆ ಮಾಡಲು ಅಬಕಾರಿ ‌ಸುಂಕ‌ ಹೆಚ್ಚಳ ಮಾಡಲಾಗಿದೆ. ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸುಂಕ‌ ಹೆಚ್ಚಳ ಮಾಡಲಾಗಿದೆ. ಜುಲೈ 7 ನೇ ತಾರೀಖಿನಂದು ಮಂಡಿಸಿದ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು ಇಗಾಗ್ಲೇ ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆ ಪ್ರಪೋಸಲ್ ಸಲ್ಲಿಸಿದೆ. ಯಾವ ಯಾವ ಬ್ರಾಂಡ್ ಗೆ ಎಷ್ಟು ಸುಂಕ ಹೆಚ್ಚಳ ಮಾಡಬೇಕೆಂದು ಸಿದ್ದತೆ ನಡೆಸಿದ್ದು, ಜುಲೈ 17 Or 18 ರಂದು ಎಲ್ಲಾ ಪ್ರಪೋಸಲ್ ಫೈನಲ್ ಆಗಲಿದೆ. ಜುಲೈ 20 ರಿಂದ ಮದ್ಯ ಬೆಲೆ ಏರಿಕೆ ಕನ್ಫರ್ಮ್ ;- ವಿಸ್ಕಿ, ರಮ್, ಬ್ರಾಂಡಿ, ಜಿನ್ ಬಿಯರ್ ಸೇರಿದಂತೆ ಎಲ್ಲಾ ಬಗೆಯ ಮದ್ಯದ…

Read More

ಬೆಂಗಳೂರು ;- ಆಗಸ್ಟ್ 11ರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್​ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ಮುಂಚಿತವಾಗಿ ಜುಲೈ 20ರೊಳಗೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಮತ್ತು ಇತರೆ ಅಗತ್ಯ ವಾಹನಗಳನ್ನು ನಿಯೋಜಿಸುವ ಕೆಲಸ ಆಗಬೇಕಾಗಿದೆ. ಕಾಫಿ ಕೆಫೆ ಆರಂಭಿಸುವ ಸಂಬಂಧದ ಕೆಲಸವೂ ಆಗಬೇಕಿದೆ. ಜೊತೆಗೆ, ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಕ ನಡೆಯಬೇಕಿದೆ. ಇವೆಲ್ಲವನ್ನೂ ಜುಲೈ 20ರ ಹೊತ್ತಿಗೆ ಪೂರೈಸಿ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುವುದು. ಕೇಂದ್ರ ನಾಗರಿಕ ವಿಮಾನ ನಿರ್ದೇಶನಾಲಯವು ಇಲ್ಲಿನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸಿದೆ. ಇದರೊಂದಿಗೆ ಶಿವಮೊಗ್ಗ ನಿಲ್ದಾಣವು ರಾಜ್ಯ ಸರ್ಕಾರದ ಸಂಸ್ಥೆಯ ವತಿಯಿಂದ ನಡೆಯಲಿರುವ ಕರ್ನಾಟಕದ ಮೊದಲನೇ ವಿಮಾನ ನಿಲ್ದಾಣವಾಗಲಿದೆ…

Read More