ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಅಂತಹ ರೋಗಿಗಳ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯು ಹೆಚ್ಚು ಅಥವಾ ಕಡಿಮೆ ಇರುತ್ತದೆ. ಇನ್ಸುಲಿನ್ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇನ್ಸುಲಿನ್ ಅಸಮತೋಲನದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಸಮತೋಲನಗೊಳ್ಳುತ್ತದೆ. ಮಧುಮೇಹದಿಂದ ಬಳಲುತ್ತಿರುವ ಪ್ರಮುಖ ಕಾರಣವೆಂದರೆ ತಪ್ಪು ಜೀವನಶೈಲಿ. ಒಬ್ಬ ವ್ಯಕ್ತಿಗೆ ಒಮ್ಮೆ ಮಧುಮೇಹ ಬಂದರೆ, ತನ್ನ ಜೀವನದುದ್ದಕ್ಕೂ ಅದರ ಹೊರೆ ಹೊರಬೇಕಾಗುತ್ತದೆ. ಈ ಅಪಾಯಕಾರಿ ರೋಗವನ್ನು ತಪ್ಪಿಸಲು, ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪ್ರಸ್ತುತ, ಮಧುಮೇಹದ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಟೈಪ್ 2 ಮಧುಮೇಹಕ್ಕೆ ಕರಿಮೆಣಸು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಟೈಪ್ 2 ಮಧುಮೇಹದಲ್ಲಿ, ಇನ್ಸುಲಿನ್ ಉತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣಗಳೆಂದು ಪರಿಗಣಿಸಲಾಗಿದೆ. ಕರಿಮೆಣಸಿನ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಕರಿಮೆಣಸು ಮಾತ್ರವಲ್ಲ, ಮಧುಮೇಹವನ್ನು ನಿಯಂತ್ರಣದಲ್ಲಿಡಲು ಹಲವಾರು ಮಸಾಲೆಗಳಿವೆ. ಕರಿಮೆಣಸಿನ ಸಹಾಯದಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯಬಹುದು. ಇದನ್ನು…
Author: Prajatv Kannada
ಚೆನ್ನೈ: ಫೋರ್ಡ್ ಮೋಟಾರ್ ಕಂಪೆನಿಯು ತಮಿಳುನಾಡಿನಲ್ಲಿ ರಫ್ತು ಮಾಡಲು ಉತ್ಪಾದನಾ ಘಟಕವನ್ನು ಮರುಪ್ರಾರಂಭಿಸಲು ಯೋಜಿಸಿದೆ ಎಂದು ತಿಳಿಸಿದೆ. ಮುಂಬರುವ ಎರಡು ವರ್ಷದಲ್ಲಿ ಘಟಕ ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಮೂರು ವರ್ಷಗಳ ಹಿಂದೆ ನಿರ್ಗಮಿಸಿದ ಮಾರುಕಟ್ಟೆಯನ್ನು ಮರುಪ್ರವೇಶಿಸುವ ಸಾಧ್ಯತೆಯಿದೆ. ಫೋರ್ಡ್ 2021ರಲ್ಲಿ ದೇಶೀಯ ಮಾರಾಟಕ್ಕಾಗಿ ಭಾರತದಲ್ಲಿ ಕಾರುಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಭಾರತಕ್ಕೆ ಮರಳಿದೆ. ರಾಜ್ಯದಲ್ಲಿ ರಫ್ತಿಗಾಗಿ ಉತ್ಪಾದನೆಯನ್ನು ಪುನರಾರಂಭಿಸಲು ಕಂಪನಿ ಹಾಗೂ ತಮಿಳುನಾಡು ಸರ್ಕಾರ ಈ ಕುರಿತು ನಿರ್ಧರಿಸಿದೆ. ಇದಾದ ಬಳಿಕ ಕಂಪನಿಯು ರಾಜ್ಯ ಸರ್ಕಾರಕ್ಕೆ ಉದ್ದೇಶ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದೆ. ಈ ಕ್ರಮವು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲು ಉತ್ಪಾದನೆಯ ಮೇಲೆ ಕೇಂದ್ರೀಕರಿಸಲು ಸೌಲಭ್ಯವನ್ನು ಮರು ನಿಯೋಜಿಸಲಾಗುತ್ತದೆ ಎಂದಿದೆ. ಇದಾದ ಬಳಿಕ ಕಾರುಗಳು ಮತ್ತು ಇತರ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ನವದೆಹಲಿ: ಆಗ್ರಾ ನಗರವನ್ನು ʻವಿಶ್ವ ಪರಂಪರೆಯ ತಾಣʼ ಎಂದು ಘೋಷಿಸಲು ನಿರ್ದೆಶನ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಯಾವುದೇ ಸ್ಥಳವನ್ನು ಪಾರಂಪರಿಕ ತಾಣವೆಂದು ಘೋಷಿಸಲು ನ್ಯಾಯಾಲಯ ಯಾವುದೇ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಆಗ್ರಾವನ್ನು ಯುನೆಸ್ಕೋಗೆ ʻವಿಶ್ವ ಪರಂಪರೆಯ ತಾಣʼ ಸ್ಥಾನಮಾನಕ್ಕಾಗಿ ನಾಮನಿರ್ದೇಶನವನ್ನು ಮಾಡಬೇಕಾಗಿದೆ. ಇಂತಹ ಘೋಷಣೆಯು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ನ್ಯಾಯಾಲಯ ಇಂತಹ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆಗ್ರಾವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸುವುದರಿಂದ ನಗರಕ್ಕೆ ಯಾವುದೇ ವಿಶೇಷ ಪ್ರಯೋಜನವಿದೆ ಎಂದು ತೋರಿಸಲು ಯಾವ ದಾಖಲೆಯನ್ನೂ ಇರಿಸಲಾಗಿಲ್ಲ ಎಂದು ಹೇಳಿತು. ಬಳಿಕ ಅರ್ಜಿಯನ್ನು ವಜಾಗೊಳಿಸಿತು.
ಪರಿವರ್ತಿನೀ ಏಕಾದಶಿ ಸೂರ್ಯೋದಯ: 06:07, ಸೂರ್ಯಾಸ್ತ : 06:15 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಎಕಾದಶಿ ನಕ್ಷತ್ರ: ಉತ್ತರಾಷಾಢ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00ನಿಂದ 07:30 ತನಕ ಅಮೃತಕಾಲ: ಮ.2:25 ನಿಂದ ಮ.3:57 ತನಕ ಅಭಿಜಿತ್ ಮುಹುರ್ತ: ಬೆ.11:47 ನಿಂದ ಮ.12:35 ತನಕ ಜಾತಕ ಆಧಾರದ ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ ವಿದೇಶಿ ಧನ ವಿನಿಮಯ ಮಾಡುವವರಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ,ಸ್ತ್ರೀಯರಿಗೆ ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರುಕುಳ ,ಲೇವಾದೇವಿಯಂತ ಹಣಕಾಸಿನ ವ್ಯವಹಾರ ಮಾಡುವುದು ಅಷ್ಟು ಶ್ರೇಯಸ್ಕರವಲ್ಲ,ಕಾಲು ಮತ್ತು…
ಗದಗ:- ಮೀಸಲಾತಿ ರದ್ದು ಮಾಡ್ತೇವೆ ಅನ್ನೋ ರಾಹುಲ್ ಗಾಂಧಿ ಹೇಳಿಕೆ ವಿಚಾರ ಖಂಡಿಸಿ ಬಿಜೆಪಿ ಎಸ್ ಸಿ ಮೋರ್ಚಾದಿಂದ ಪ್ರತಿಭಟನೆ ಜರುಗಿದೆ. ಗದಗ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುಧ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಗದಗ ಹುಬ್ಬಳ್ಳಿ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಕಿಡಿಕಾರಿದ್ದು, ಕೆಲಲಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ರಾಹುಲ್ ಸಂಸತ್ ಸದಸ್ಯತ್ವ ರದ್ದುಹೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಲಾಗಿದ್ದು, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿಜೆಪಿ ಯುವ ಮುಖಂಡ ಮುಖಂಡ ಉಮೇಶಗೌಡ ಪಾಟೀಲ ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.
ಗದಗ:- ನಗರದ ಕೆ ಸಿ ರಾಣಿ ರಸ್ತೆಯ ಮಸಾರಿ ಏರಿಯಾದ ಯುವಕರೆಲ್ಲಾ ಸೇರಿ 30 ವರ್ಷಗಳ ಹಿಂದೆ ಸಮಾಜಕ್ಕೆ ಎಲ್ಲರೂ ಆದರ್ಶವಾಗಿದ್ದು ಆದರ್ಶ ಏರಿಯಾವನ್ನ ಮಾಡೋ ಇಚ್ಛೆಯೊಂದಿಗೆ ಆದರ್ಶ ಗಜಾನನ ಸಮಿತಿಯನ್ನ ಮಾಡಿ ಗಣಪತಿ ಕೂರಿಸೋ ಸಂಕಲ್ಪ ಮಾಡಿದ್ರು. ಅದರಂತೆ ಪ್ರತಿವರ್ಷ ಆಯಾ ವರ್ಷಗಳಲ್ಲಿ ನಡೆದ ಘಟನಾವಳಿಗಳನ್ನ ಆಧರಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತಾ ಬಂದಿದ್ದಾರೆ. ಇದೀಗ ಅಯೋಧ್ಯೆ ಬಾಲರಾಮನ ಹೋಲುವ ಥೇಟ್ ಬಾಲ ಗಣಪನ ಗಣೇಶ ಪ್ರತಿಷ್ಠಾಪಿಸಿದ್ದು ಈ ಬಾರಿ 31 ನೇ ವರ್ಷದ ಗಣಪತಿ ಕೂರಿಸೋ ಮೂಲಕ ತಮ್ಮ ಗೆಳೆಯರ ಬಳಗದ ಪರಂಪರೆ ಮುಂದುವರೆಸುತ್ತಿದ್ದಾರೆ. ಗಣೇಶ ಮೂರ್ತಿಯನ್ನ ಇವರು ಕೊಂಡುಕೊಳ್ಳದೇ ಇರೋದು ವಿಶೇಷ. ಆದರ್ಶ ಗಜಾನನ ಸಮಿತಿಯವರೇ ಆದ ವಿಜಯ್ ಸೋಮನಕಟ್ಟಿ ಅವರು 28 ವರ್ಷಗಳ ಕಾಲ ಸೇವೆಯ ರೂಪದಲ್ಲಿ ಗಣೇಶ ವಿಗ್ರಹ ಮಾಡುತ್ತಾ ಬಂದಿದ್ರು, ಇದೀಗ ವಿರೇಶ ಹೊಸಮಠ 3 ವರ್ಷಗಳಿಂದ ಗಣೇಶ ವಿಗ್ರಹ ಮಾಡುತ್ತಿದ್ದಾರೆ. ಆದರ್ಶ ಗಣೇಶ ಬಿಟ್ಟು ಬೇರೆ ಯಾವುದೇ ಗಣೇಶನ ವಿಗ್ರಹ ಇವರು ಮಾಡೋದಿಲ್ಲ…
ನಾಗಮಂಗಲ ಗಲಭೆ ಕೇಸ್‌ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿರೋ ಕೇಸ್ ಸರ್ಕಾರ ಕೈ ಬಿಡಬೇಕು. ಇಲ್ಲದೆ ಹೋದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಯುವ ಮೋರ್ಚಾ ಹೋರಾಟ ಮಾಡುತ್ತದೆ ಎಂದು ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. https://youtu.be/1Xm429WV1aI?si=AYuRrF7717o9DMph ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಕೋಮುಗಲಭೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ರಾಜ್ಯದಲ್ಲಿ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತೆ. ಎಲ್ಲಿಲ್ಲದವರು ಹೊರಗೆ ಬರ್ತಾರೆ. ಗೃಹ ಸಚಿವರು ಇದೊಂದು ಸಣ್ಣ ಘಟನೆ ಎಂದು ಹೇಳಿದ್ದಾರೆ. ಪರಮೇಶ್ವರ್ ಅವರಿಗೆ ಕೇಳುತ್ತೇನೆ ನಿಮ್ಮ ಮನೆ ರಸ್ತೆಯಲ್ಲಿ ಯಾರಾದರು ಗಣೇಶ ಕೂರಿಸಿ ಅಲ್ಲಿ ಕಲ್ಲು ಹೊಡೆದರೆ, ಬೆಂಕಿ ಹಚ್ಚಿದರೆ, ನಿಮ್ಮ ಮನೆಗೆ ಕಲ್ಲು ತೂರಾಟ ಮಾಡಿದರೆ. ಅದನ್ನ ಸಣ್ಣ ಘಟನೆ ಅಂತೀರಾ ಎಂದು ಪ್ರಶ್ನಿಸಿದರು. ನಿಮ್ಮ ಮನೆಗೆ ಬೆಂಕಿ ಬೀಳೋವರೆಗೂ ಘಟನೆ ಬಗ್ಗೆ ಗೊತ್ತಾಗಲ್ಲ ಎಂದು ಕಿಡಿಕಾರಿದರು. ಸಂಪೂರ್ಣ ಘಟನೆಯಲ್ಲಿ ಹಿಂದೂ…
ನ್ಯಾಯಾಲಯದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಆರೋಪದಡಿ ಜಡ್ಜ್ ಸಹಿಯನ್ನೇ ನಕಲು ಮಾಡ್ತಿದ್ದವನ ವಿರುದ್ಧ FIR ದಾಖಲು ಮಾಡಲಾಗಿದೆ ಸಿದ್ದಲಿಂಗಯ್ಯ ಹಿರೇಮಠ ಎಂಬವನ ವಿರುದ್ಧ ವಂಚನೆ ಆರೋಪ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರೋಸೆಸ್ ಸರ್ವರ್, ಜವಾನ ಹುದ್ದೆ ಖಾಲಿ ಇದೆ ಎಂದು ಜನರಿಗೆ ನಂಬಿಸುತ್ತಿದ್ದ. ಅಲ್ಲದೇ ಉದ್ಯೋಗ ಕೊಡಿಸುತ್ತೇನೆ ಎಂದು ಪ್ರತಿಯೊಬ್ಬರ ಬಳಿ 7 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಹಣ ಪಡೆದವರಿಗೆ ನಕಲಿ ನೇಮಕಾತಿ ಪತ್ರ ಕೊಟ್ಟಿದ್ದಾನೆ. ಅಲ್ಲದೇ ನೇಮಕಾತಿ ಪತ್ರದಲ್ಲಿ ನ್ಯಾಯಮೂರ್ತಿಗಳ ಸಹಿಯನ್ನು ನಕಲಿ ಮಾಡಿದ್ದಾನೆ. ರಾಜ್ಯದ ಹಲವೆಡೆ ಇಂತಹ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡ ಪಿಗ್ಗಿ ಪತಿ ಹಾಗೂ ಮಗಳ ಜೊತೆ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಪತಿ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಜೊತೆ ಪ್ರಿಯಾಂಕ ವಿದೇಶ ಪ್ರವಾಸ ಕೈಗೊಂಡಿದ್ದು ಅಲ್ಲಿನ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ನಟಿಯ ಸೌಂದರ್ಯ ನೋಡಿದ ಪ್ರತಿಯೊಬ್ಬರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಸದ್ಯ ಜಾಲಿ ಮೂಡ್‌ನಲ್ಲಿಯೇ ಇದ್ದಾರೆ. ಮನಸಿಗೆ ಹೇಗೆ ಬೇಕೋ ಹಾಗೆ ಬಿಂದಾಸ್ ಆಗಿಯೆ ಕಾಣಿಸಿಕೊಂಡಿದ್ದಾರೆ. ಕ್ರೂಸ್‌ನಲ್ಲಿ ಬಿಕಿನಿ ತೊಟ್ಟು ಸಖತ್ ಪೋಸ್ ನೀಡಿದ್ದಾರೆ. ಪತ್ನಿ ಜೊತೆ ನಿಕ್ ಕೂಡ ಫೋಟೋಗೆ ಫೋಸ್ ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಹೆಚ್ಚಾಗಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಾರೆ. ತಮ್ಮ ತಮ್ಮ ಕೆಲಸದ ಮಧ್ಯೆನೂ ಇದೀಗ ಕ್ರೂಸ್‌ನಲ್ಲಿ ಬಿಂದಾಸ್ ಟೈಮ್ ಸ್ಪೆಂಡ್ ಮಾಡಿದ್ದಾರೆ.…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ರಾಜಾತಿಥ್ಯದಿಂದ ಬಳ್ಳಾರಿ ಜೈಲು ಸೇರಿದ್ದಾರೆ. ಬಳ್ಳಾರಿ ಜೈಲಿನಲ್ಲಿ ನಿತ್ಯ ನರಕ ಅನುಭವಿಸ್ತಿದ್ದರು ದರ್ಶನ್ ಕೊಬ್ಬು ಮಾತ್ರ ಕೊಂಚವು ಕಮ್ಮಿಯಾಗಿಲ್ಲ. ಜೈಲು ಸಿಬ್ಬಂದಿ ಜೊತೆ ಟಿವಿ ಗಾಗಿ ಗಲಾಟೆ, ಮಾಧ್ಯಮಗಳನ್ನು ನೋಡಿ ಅಸಭ್ಯವಾಗಿ ಕೈ ಸನ್ನೆ ಮಾಡಿದ್ದ ದರ್ಶನ್ ಗೆ ಇದೀಗ ಜೈಲರ್ ವಾರ್ನಿಂಗ್ ಮಾಡಿದ್ದಾರೆ. ಅಹಂಕಾರ, ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ಮಾಡುತ್ತಿರುವ ದರ್ಶನ್‌ಗೆ ಜೈಲಾಧಿಕಾರಿಗಳು ಖಡಕ್ ವಾರ್ನಿಂಗ್ ಮಾಡಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಜೈಲಿನಲ್ಲಿ ಇರುವಷ್ಟು ದಿನ ಜೈಲು ನಿಯಮಗಳನ್ನು ಪಾಲನೆ ಮಾಡಬೇಕು. ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗುತ್ತದೆ ಎಂದು ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ಆದರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ದರ್ಶನ್ ನಡೆಯನ್ನು ಜೈಲರ್ ಖಂಡಿಸಿದ್ದಾರೆ. ಪದೇ ಪದೇ ಸೌಲಭ್ಯಗಳಿಗಾಗಿ ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದೀರಿ. ನಾವು ಕಾನೂನು ಪ್ರಕಾರ ಏನು ಸಾಧ್ಯ ಅಷ್ಟು ಮಾತ್ರ ಕೊಡುತ್ತೇವೆ. ಹೆಚ್ಚಿನದು ಬೇಕು ಅಂದರೆ…