ಬೆಂಗಳೂರು ;- 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಆಫರ್ ಕುರಿತು ಸದನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. 2018ರಲ್ಲಿ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ಒಂದುವರೆ ಘಂಟೆಗಳ ಕಾಲ ಚರ್ಚಿಸಿದ ಬಗ್ಗೆ ಹೇಳಿದ್ದರು. ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಸ್ಪಷ್ಟನೆ ನೀಡಿದ ಎಚ್ಡಿಕೆ ಪ್ರಧಾನಿ ಮೋದಿ ಗುಟ್ಟಾಗಿ ಆಫರ್ ಕೊಟ್ಟಿದ್ದನ್ನು ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದಾರೆ. ನಮ್ಮ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾನು ಆ ದಿನ ಬಿಜೆಪಿಯೊಂದಿಗೆ ಸೇರಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದಾರೆ.
Author: Prajatv Kannada
ಬೆಂಗಳೂರು ;- ಹೆಚ್ಡಿಕೆ ಬಿಡುಗಡೆ ಮಾಡಿದ ರೇಟ್ ಕಾರ್ಡ್ ಅವರ ಅಧಿಕಾರಾವಧಿಯಲ್ಲಿ ಆಗಿತ್ತೇನೋ ಎಂದು ಹೇಳುವ ಮೂಲಕ ಸಚಿವ ಚೆಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಂಡು ಇರಲು ಆಗಲ್ಲ. ಅವರು ಹಿಂದಿನ ಸರ್ಕಾರದ ಅವಧಿಯ ಪಟ್ಟಿ ತಂದು ಬಿಡುಗಡೆ ಮಾಡಿರಬೇಕು. ಅವರ ಟಾರ್ಗೆಟ್ ಈ ಸರ್ಕಾರವೋ ಅಥವಾ, ಚೆಲುವರಾಯಸ್ವಾಮಿಯೋ ಅವರೇ ಹೇಳಬೇಕು. ಅವರು ಮಾಜಿ ಸಿಎಂ ಇದ್ದಾರೆ. ಈ ಬಗ್ಗೆ ಅವರೇ ಮಾತಾಡಲಿ. ನಾವೇನಾದರೂ ಅವರ ಬಗ್ಗೆ ಮಾತಾಡಿದ್ರೆ, ಅವರ ಫ್ಯಾಮಿಲಿಯನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಹೇಳ್ತಾರೆ ಎಂದು ಟೀಕಿಸಿದರು. ಎಲ್ಲೂ ಹೆಚ್ ಡಿ ದೇವೇಗೌಡ ಹಾಗೂ ಅವರ ಕುಟುಂಬದ ಬಗ್ಗೆ ನಾವು ಚರ್ಚೆ ಎತ್ತಿಲ್ಲ. ಇವರ ಬಗ್ಗೆ ಮಾತಾಡಿದ್ರೆ ಕುಟುಂಬದ ಬಗ್ಗೆ ಮಾತಾಡಿದ್ರು ಅಂತಾರೆ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಒಂದು ವ್ಯಕ್ತಿತ್ವ ಇದೆ. ಅವರು ಅದನ್ನು ಬಳಸಿದ್ರೆ ಸಾಕು. ತಾವೊಬ್ಬ ಈ ರಾಜ್ಯದ ಮಾಜಿ ಸಿಎಂ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅಥವಾ…
ಬೆಂಗಳೂರು ;- ಇಂದಿನ ಸದನದಲ್ಲಿ ಎಚ್.ಡಿ.ರೇವಣ್ಣ ಕೈಯಲ್ಲಿ ಕೊಬ್ಬರಿ ಬೆಂಬಲ ಬೆಲ ಹೆಚ್ಚಳದ ಬಗ್ಗೆ ಚರ್ಚಿಸಲು ಕೊಬ್ಬರಿಯನ್ನೇ ಹಿಡಿದುಕೊಂಡು ಬಂದಿದ್ದು ಶಾಸಕರ ಹಾಸ್ಯ ಚಟಾಕಿಗಳಿಗೆ ಕಾರಣವಾಯಿತು. ಸದನ ಪ್ರಾರಂಭವಾಗುತ್ತಿದ್ದಂತೆಯೇ ಎಚ್.ಡಿ.ರೇವಣ್ಣ ಕೈಯಲ್ಲಿ ಕೊಬ್ಬರಿಯನ್ನು ಪ್ರದರ್ಶಿಸುತ್ತಾ ಎದ್ದು ನಿಂತು ಇದಕ್ಕೇನಾದರೂ ಮಾಡಿ ಎಂದರು. ಮಾತನಾಡಲು ಎದ್ದು ನಿಂತಿದ್ದ ಸಿಎಂ ಸಿದ್ದರಾಮಯ್ಯ ಏ..ರೇವಣ್ಣ ಯಾವಗಲೂ ನಿಂಬೆಹಣ್ಣು ತರ್ತಾ ಇದ್ದೆ. ಇದೇನು ಕೊಬ್ಬರಿ ಹಿಡ್ಕೊಂಡು ಬಂದಿದ್ಯಾ? ರೇವಣ್ಣ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕೆಲವರು ನಿಂಬೆಹಣ್ಣಿನ ಬದಲಾಗಿ ಕೊಬ್ಬರಿ ತಂದಿದ್ದಾರೆ ಎಂದು ಗುಲ್ಲೆಬ್ಬಿಸಿದರು
ಬೆಂಗಳೂರು ;– ಗೃಹಜ್ಯೋತಿ ವಿಚಾರವಾಗಿ ಪ್ರತಿಪಕ್ಷಗಳಿಂದ ಅಪಪ್ರಚಾರ ನಡೆಯುತ್ತಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಗೃಹಜ್ಯೋತಿ ವಿಷಯವಾಗಿ ಪ್ರತಿಪಕ್ಷಗಳು ಅನಗತ್ಯವಾದ ಸುಳ್ಳು ಪ್ರಚಾರ ಮಾಡುತ್ತಿದೆ ಎಂದರು. ರಾಜ್ಯದಲ್ಲಿ 2.16 ಕೋಟಿ ಆರ್ ಆರ್ ಸಂಖ್ಯೆಗಳಿವೆ. ಅದರಲ್ಲಿ 2.14 ಕೋಟಿ ಸಂಪರ್ಕಗಳು ಗೃಹಜ್ಯೋತಿಗೆ ಅರ್ಹತೆ ಪಡೆದಿವೆ ಎಂದು ಸ್ಪಷ್ಟಪಡಿಸಿದರು. 200 ಯುನಿಟ್‍ವರೆಗೆ ಬಳಕೆಯಾಗುವ ವಿದ್ಯುತ್‍ಗೆ ವಾರ್ಷಿಕ ಸರಾಸರಿ ಪರಿಗಣಿಸಿ ಸೌಲಭ್ಯ ನೀಡಲಾಗುತ್ತಿದೆ. ಈವರೆಗೂ 1 ಕೋಟಿಗೂ ಹೆಚ್ಚು ಮಂದಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಯೋಜನೆಯಡಿ ಸುಮಾರು 40 ಲಕ್ಷ ಗ್ರಾಹಕರಿದ್ದಾರೆ. ಅವರನ್ನೂ ಗೃಹಜ್ಯೋತಿ ವ್ಯಾಪ್ತಿಗೆ ಒಳಪಡಿಸಿದರೆ ನೋಂದಣಿಯಾಗುವ ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.
ಬೆಂಗಳೂರು ;- ನಾಗವಾರ ಭೂ ಸ್ವಾದೀನ ಅಕ್ರಮ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೇ ನಂಬರ್ 135/1 ರಲ್ಲಿ ಬಿಡಿಎ ವಶಪಡಿಸಿಕೊಂಡಿರುವ 20 ಗುಂಟೆ ಜಾಗದಲ್ಲಿ ಮೆಟ್ರೋ ಮಾರ್ಗ ಹಾದು ಹೋಗುತ್ತಿದೆ. ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಆ ಜಾಗವನ್ನು ಬಿಎಂಆರ್ಸಿಎಲ್ ಸ್ವಾಧೀನಪಡಿಸಿಕೊಂಡಿದೆ. ಬಿಡಿಎಗೆ ಬಂದ ನಂತರ ಅದು ಸರ್ಕಾರದ ಜಾಗ ಆ ಸರ್ಕಾರಿ ಜಾಗಕ್ಕೆ ಪರಿಹಾರವಾಗಿ ಖಾಸಗಿ ವ್ಯಕ್ತಿಗೆ 24 ಕೋಟಿ ಹಣ ಪಾವತಿ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸಲಾಗುತ್ತದೆ. ಸರ್ಕಾರದ ಒಂದು ರೂಪಾಯಿಯನ್ನೂ ಬಿಡಲ್ಲ ಎಂದರು. ಬೊಮ್ಮನಹಳ್ಳಿಯಲ್ಲಿ ಸಾವಿರ ಕೋಟಿ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸದಸ್ಯರು ಮಾಡಿದ್ದಾರೆ. ಭೂ ಪರಿವರ್ತನೆಯಾಗಿ ನಿವೇಶನಗಳಾಗಿ ಹಂಚಿಕೆಯಾಗಿ 40 ವರ್ಷವಾದರೂ, ಮಾಲೀಕರ ಸ್ವಾಧೀನಕ್ಕೆ ಬಿಡುತ್ತಿಲ್ಲ. ಖಾಸಗಿಯವರು ರೌಡಿಗಳನ್ನಿಟ್ಟುಕೊಂಡು…
ಬೆಂಗಳೂರು ;- ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಗೇಟ್ ಅನ್ನು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿದ್ದಾರೆ. ರಾಜರಾಜೇಶ್ವರಿನಗರ ವಲಯ, ಕೆಂಗೇರಿ ಉಪವಿಭಾಗ ಹೆಮ್ಮಿಗೆಪುರ ವಾರ್ಡ್ ನಂ 198 ವ್ಯಾಪ್ತಿಯಲ್ಲಿ ಬರುವ ಕೊಡಿಪಾಳ್ಯ ಗ್ರಾಮದ ಚೂಡೇನಪುರ ಅಂಚೆ, ಕೆಂಗೇರಿ ಹೋಬಳಿ ಸರ್ವೆ ನಂ.12/1ಬಿ ಇಲ್ಲಿ2ನೇ ಅಡ್ಡರಸ್ತೆಯಲ್ಲಿ ಸಾರ್ವಜನಿಕರ ಓಡಾಟದ ರಸ್ತೆಗೆ ಅನಧಿಕೃತವಾಗಿ ಗೇಟ್ ನಿರ್ಮಿಸಲಾಗಿತ್ತು. ಇದೀಗ ಮಾನ್ಯ ವಲಯ ಆಯುಕ್ತರು ರಾಜರಾಜೇಶ್ವರಿನಗರ ವಲಯ ಹಾಗೂ ಜಂಟಿ ಆಯುಕ್ತರು, ಆರ್.ಆರ್.ನಗರ ವಲಯ ರವರ ಆದೇಶದಂತೆ ಸದರಿ ಅನಧಿಕೃತ ಗೇಟ್ ಅನ್ನು ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದೆ.
ಬೆಂಗಳೂರು: ಬಿಬಿಎಂಪಿ ಚುನಾವಣೆ ಹಿನ್ನೆಲೆ ಬೆಂಗಳೂರಿನ ಎಲ್ಲಾ ಪಧಾದಿಕಾರಿಗಳು,ಮಾಜಿ ಕಾರ್ಪೊರೇಟರ್ ಗಳ ಜೊತೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದ್ದು ಬಿಜೆಪಿ ಭದ್ರ ಕೋಟೆಯಲ್ಲಿ ಗೆಲ್ಲುವ ರಣತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ. ಬಿಜೆಪಿ ಭದ್ರ ಕೋಟೆಯಲ್ಲಿನ ಕಾರ್ಯಕರ್ತರು ಅಳಲು ತೋಡಿಕೊಂಡಿದ್ದು,ಎಷ್ಟೋ ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇವೆ ಸರ್ಕಾರ ನಮ್ಮದು ಇದ್ರು ನಮ್ಮ ಕ್ಷೇತ್ರಗಳಲ್ಲಿ ನಮ್ಮ ಕೆಲಸಗಳು ಆಗ್ತಾಯಿಲ್ಲ ಎಂದು ಆರ್ಥಿಕವಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಕಾರ್ಯಕರ್ತರ ಮನವಿಗೆ ರಾಮಲಿಂಗಾರೆಡ್ಡಿ ಸ್ಪಂದಿಸಿದ್ದು, ಹಲವು ಬಾರಿ ಸ್ಪರ್ಧಿಸಿದಂತ ಅಭ್ಯರ್ಥಿಗಳಿಗೆ ಈ ಭಾರಿ ಆರ್ಥಿಕವಾಗಿ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.ವಾರ್ಡ್ ವಿಂಗಡನೆಯಲ್ಲಿ ಬಿಜೆಪಿ ಕಾಂಗ್ರೆಸ್ ಮತಗಳನ್ನ ಬೇರೆ ಬೇರೆ ಕಡೆ ಹೋಗುವ ಹಾಗೆ ಮಾಡಿದ್ದಾರೆ.ಈ ಹಿನ್ನೆಲೆ ಬಿಜೆಪಿ ಭಧ್ರ ಕೋಟೆಯಲ್ಲಿ ವಾರ್ಡ್ ವಿಂಗಡನೆ ವೇಳೆ ಸರಿಯಾಗಿ ಆಟ ಆಡಬೇಕು ಎಂದು ಪ್ಲಾನ್ ಮಾಡಿದ್ದು,ಬಿಜೆಪಿ ಮತಗಳನ್ನ ವಿಭಜನೆ ಮಾಡುವಂತ ರಣತಂತ್ರ ರೂಪಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 754 ವಿದೇಶಿಗರು ವೀಸಾ ಮುಗಿದರೂ ಅಕ್ರಮವಾಗಿ ವಾಸವಾಗಿದ್ದಾರೆ. ವೀಸಾ ಅವಧಿ ಮುಗಿದವರನ್ನು ಶೀಘ್ರವಾಗಿ ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ ಹಾಗೆ ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಸ್ಥಳಾವಕಾಶದ ಕೊರತೆ ಇದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ವಿಧಾನ ಪರಿಷತ್ ಕಲಾಪದ (Session) ವೇಳೆ ಬಿಜೆಪಿಯ (BJP) ಪ್ರತಾಪ್ ಸಿಂಹ ನಾಯಕ್ ಕಾರಾಗೃಹಗಳ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು ಕಾರಾಗೃಹಗಳಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚು ಕೈದಿಗಳಿದ್ದಾರೆ. ರಾಜ್ಯದಲ್ಲಿ 54 ವಿವಿಧ ಮಾದರಿಯ ಕಾರಾಗೃಹಗಳಿವೆ. ಇದರಲ್ಲಿ 28 ಕಾರಾಗೃಹಗಳಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚು ಕೈದಿಗಳನ್ನು ಇರಿಸಲಾಗಿದೆ ಎಂದಿದ್ದಾರೆ ವಿದೇಶಿ ಪ್ರಜೆಗಳು ವಿದ್ಯಾಭ್ಯಾಸ, ಪ್ರವಾಸಕ್ಕೆ ಸೇರಿ ಹಲವು ವಿಚಾರಕ್ಕೆ ರಾಜ್ಯಕ್ಕೆ ಬರುತ್ತಾರೆ. ರಾಜ್ಯದಲ್ಲಿ ಸುಮಾರು 4,890 ವಿದೇಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಬಂದಿದ್ದಾರೆ. ಇದಲ್ಲದೆ ಒಟ್ಟಾರೆ ಬೆಂಗಳೂರು (Bengaluru) ನಗರ ಮತ್ತು ಉಳಿದ ಜಿಲ್ಲೆಯಲ್ಲಿ ಒಟ್ಟು 8,862 ವಿದೇಶಿಯರು ವಿದೇಶಿ ವೀಸಾದ ಮೇಲೆ ನೆಲೆಸಿದ್ದಾರೆ. ಇದರಲ್ಲಿ 754 ವಿದೇಶಿಯರು ವೀಸಾ ಮುಕ್ತಾಯವಾದರೂ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಮತ್ತು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆಲ್ಲ ಇವರು ಅವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ನಿಷೇಧಕ್ಕೆ ಒಳಗಾದ ಪಿಎಫ್ಐ ಸಂಘಟನೆಯ ಚಟುವಟಿಕೆ ಜಾಸ್ತಿಯಾಗುತ್ತಿದೆ. ಇವರೆಲ್ಲ ಟಿಪ್ಪು ಸಿದ್ಧಾಂತ ಇಟ್ಕೊಂಡು ಬಂದಿರೋರು.ಈ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು ಜುಲೈ 18 ರಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಅವರೆಲ್ಲ ಇಲ್ಲಿಗೆ ಆಗಮಿಸುತ್ತಿರುವುದು ಈ ಸರ್ಕಾರವನ್ನು ಎಟಿಎಂ ಮಾಡಿಕೊಳ್ಳಲು. ವರ್ಗಾವಣೆ ದಂಧೆ ಮಾಡೋದಿಕ್ಕೂ ಅವರು ಇಲ್ಲಿಗೆ ಬರುತ್ತಿದ್ದಾರೆ ಎಂದು ಆರೋಪಿಸಿದರು
ಬೆಂಗಳೂರು: ಭ್ರಷ್ಟಾಚಾರದ ವಿಷಯ ಬಂದಾಗ ಕೆಲವರಿಗೆ ಜಾತಿ ನೆನಪಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವರೊಬ್ಬರಿಗೆ ಕಟುವಾಗಿ ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು; ಬುಧವಾರ ಸದನದಲ್ಲಿ ಒಂದು ನಿರ್ದಿಷ್ಟ ಇಲಾಖೆಯಲ್ಲಿ ವರ್ಗಾವರ್ಗಿಗಾಗಿ ಸಿದ್ಧಪಡಿಸಲಾಗುವ ರೇಟ್ ಕಾರ್ಡ್ ಬಗ್ಗೆ ಹೇಳಿದ್ದೆ. ಆ ಇಲಾಖೆಗೆ ಸಂಬಂಧಿಸಿದ ಸಚಿವರು ರೇಟ್ ಕಾರ್ಡ್ ಬಗ್ಗೆ ಉತ್ತರ ಕೊಡುವುದು ಬಿಟ್ಟು ತಮ್ಮ ಜಾತಿಯನ್ನು ಎಳೆದು ತಂದಿದ್ದಾರೆ. ಭ್ರಷ್ಟಾಚಾರಕ್ಕೆ ಜಾತಿ ವ್ಯವಸ್ಥೆ ಇದೆಯಾ? ಭ್ರಷ್ಟಾಚಾರದ ಬಗ್ಗೆ ಹೇಳಿದರೆ ಅದಕ್ಕೆ ಜಾತಿ ಬಣ್ಣ ಕಟ್ಟುತ್ತಾರೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು. ನಾವು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ. ಅಧಿಕಾರಿಗಳು ಪೋಸ್ಟಿಂಗ್ ಪಡೆಯಲು ಹಣ ಕೊಡ್ತಿದ್ದಾರೆ. ಅಂತಿಮವಾಗಿ ಅವರು ಜನರ ಜೇಬಿಗೆ ಕೈ ಹಾಕುತ್ತಿದ್ದಾರೆ. ನನಗೆ ಯಾರ ಮೇಲೂ ದ್ವೇಷ, ಅಸಮಾಧಾನ ಇಲ್ಲ. ಅವರು ನಮ್ಮನ್ನು ಬಿಟ್ಟು ಹೋದ…