ಬೆಂಗಳೂರು: ನನ್ನ ಕ್ಷೇತ್ರದಲ್ಲಿ ಅಧಿಕಾರಿಗಳು ನಾನು ಶಾಸಕಿ ಆಗಿದ್ದರೂ ಶಿಷ್ಟಾಚಾರಕ್ಕಾದರೂ ಗೌರವ ಕೊಡುತ್ತಿಲ್ಲ. ನನ್ನ ಮಾತನ್ನು ಕೇಳುತ್ತಿಲ್ಲ. ನನಗೆ ಜನ ಸೇವೆ ಮಾಡಲು ಅವಕಾಶ ಕೊಡಬೇಕು ಎಂದು ವಿಧಾನಸಭೆಯಲ್ಲಿ ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ್ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ದೇವದುರ್ಗದಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದೆ. ಅದನ್ನು ಬಂದ್ ಮಾಡಿಸುವ ಪ್ರಯತ್ನ ಮಾಡಿದೆ. ಕೆಲವರು ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತ ಮಾತಾಡ್ತಾರೆ ಅಂತಾ ಗಂಭೀರವಾದ ವಿಷಯವನ್ನು ಪ್ರಸ್ತಾಪ ಮಾಡಿದ್ರು. ಮಾಜಿ ಶಾಸಕರ ಬೆಂಬಲಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಅಧಿಕಾರಿಗಳು ನಾನೊಬ್ಬ ಶಾಸಕಿ ಅನ್ನೋದನ್ನೇ ಪರಿಗಣಿಸದೇ ಪ್ರತಿಷ್ಠೆ ತೋರಿಸುತ್ತಿದ್ದಾರೆ. ಮಟ್ಕಾ ದಂಧೆ ಬಂದ್ ಮಾಡಿಸಿದರೂ ಪೊಲೀಸರು ಸಹಕಾರ ನೀಡ್ತಿಲ್ಲ. ಶಿಷ್ಟಾಚಾರಕ್ಕೂ ಪೊಲೀಸರು ಶಾಸಕಿ ಅಂತ ನನಗೆ ಗೌರವ ನೀಡ್ತಿಲ್ಲ ಅಂತಾ ಅಸಹಾಯಕತೆ ವ್ಯಕ್ತಪಡಿಸಿದ್ರು.
Author: Prajatv Kannada
ಬೆಂಗಳೂರು: ಪೆನ್‍ಡ್ರೈವ್ ಖಾಲಿ ಇಲ್ಲ, ಈ ಪೆನ್‍ಡ್ರೈವ್ ಬೇರೆಯದ್ದು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ದಾಖಲೆ ಕೊಡಿ ಅಂದರೆ ದುಡ್ಡು ಕೊಡಲು ಸಾಧ್ಯವಾ? ಈ ಪೆನ್‍ಡ್ರೈವ್ ಆಪರೇಷನ್ ಮಾಡಿದ ಸಿಡಿ ರೀತಿ ಅಲ್ಲ. ಅದು ಸಾಮಾನ್ಯ ಪೆನ್‍ಡ್ರೈವ್ ಅಲ್ಲ. ಈ ಪೆನ್‍ಡ್ರೈವ್ ರಿಲೀಸ್‍ಗೆ ನನಗೆ ಆತುರ ಇಲ್ಲ. ಪೆನ್‍ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್‌ನವರೇ ತಡೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಪೆನ್‍ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ನವರಿಗೆ ಯಾಕೆ ಇಷ್ಟು ಆತುರ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದೇನೆ, ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಲಿ ಎಂದರು. ಕಾಂಗ್ರೆಸ್ಸಿಗರು ಇನ್ನೂ ಕೆಲ ವಿಕೆಟ್ ಬೀಳಲಿ ಅಂತಾ ಹೇಳುತ್ತಿದ್ದಾರೆ. ನಾನು ಪ್ರಚೋದನೆಗೆ ಒಳಗಾಗಲ್ಲ ಎಂದರು. ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ. ಈ ದರಪಟ್ಟಿ (Transfer Rate Card) ಅವರೇ ಕೊಟ್ಟಿದ್ದ ಜಾಹೀರಾತಿನ ಮುಂದುವರೆದ ಭಾಗ ಇರಬಹುದು. ವಾಸ್ತವಾಂಶವನ್ನು ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸುವ ಧೈರ್ಯವಿದ್ದರೆ ಕ್ರಮ ಕೈಗೊಳ್ಳಲಿ.…
ಬೆಂಗಳೂರು: ಕಾರು ಕಳ್ಳತನ ಮಾಡೋದು ಮೊಬೈಲ್ ಕದಿಯೋದನ್ನು ನೋಡಿಯೇ ಇರ್ತಿರಾ, ಆದ್ರೆ ಇಲ್ಲೋಬ್ಬ ಆಸಾಮಿ ನಿಂತಿದ್ದ ಲಾರಿಗಳನ್ನೆ ಕದ್ದು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗ್ತಾಯಿದ ರಾಜ್ಯದಿಂದ ರಾಜ್ಯಕ್ಕೆ ಹೋಗಿ ಕದ್ದ ಲಾರಿಗಳನ್ನು ಮಾರಾಟ ಮಾಡ್ತಾಯಿದ್ದವನಿಗೆ ಬೆಂಗಳೂರು ವಿ ವಿ ಪುರ ಪೊಲೀಸರ ಜೈಲಿನ ದಾರಿ ತೋರಿಸಿದ್ದಾರೆ.. ಒಂದು ಲಾರಿ ಖರೀದಿ ಮಾಡಬೇಕು ಅಂದ್ರೆ ಅದು ಸುಮ್ಮನೆ ಮಾತಲ್ಲ ಬಿಡಿ.. ಲೋನ್ ಮಾಡಬೇಕು, ಸಾಲ ಮಾಡಬೇಕು, ಅದಾದ ನಂತರ ಅದನ್ನು ಮೇಂಟೇನ್ ಮಾಡಬೇಕು ಹೀಗೆ ಸಾಕಷ್ಟು ಶ್ರಮ ಇರತ್ತೆ.. ಆದ್ರೆ ಅದೇ ಲಾರಿಯನ್ನು ಖದಿಯೋದಕ್ಕೆ ಮಾತ್ರ ಯಾವ ಶ್ರಮವು ಬೇಡ..ಹೌದು.. ಈ ಫೋಟೋದಲ್ಲಿರುವ ಆಸಾಮಿಯ ಹೆಸರು ಮುತ್ತು.. ಮೂಲತಃ ತಮಿಳುನಾಡಿನವನು.. ವೃತ್ತಿಯಲ್ಲಿ ಲಾರಿ ಡ್ರೈವರ್ ಆಗಿದ್ದ ಈತನಿಗೆ ಲಾರಿಗಳ ಬಗ್ಗೆ ಸಾಕಷ್ಟು ವಿಚಾರಗಳು ಸಹ ತಿಳಿದಿದ್ದು, ಹೆಚ್ಚಿನ ತಿಳುವಳಿಕೆಯು ಸಹ ಇತ್ತು.. ಆದನ್ನೆ ಅಡ್ವಾಂಟೇಜ್ ತಗೊಂಡ ಈತ ಡ್ರೈವಿಂಗ್ ಕೆಲಸ ಮಾಡುದ್ರೆ ಏನು ಲಾಭಾ ಇಲ್ಲಾ ಅಂತ ಲಾರಿಗಳನ್ನೆ ಹೈಜಾಕ್ ಮಾಡೋದಕ್ಕೆ ಶುರುಮಾಡಿದ್ದ.. ತನ್ನ ಕಣ್ಣಿಗೆ…
ಬೆಂಗಳೂರು : ಸಿಲಿಕಾನ್ ಸಿಟಿಯನ್ನೇ ನಡುಗಿಸಿದ ಅಮೃತಹಳ್ಳಿ ಪಂಪಾನಗರದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಹಂತಕ ಜಿ-ನೆಟ್ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಕುಮಾರ್ ನನ್ನ ಅಮೃತಹಳ್ಳಿ ಪೊಲೀಸರು ಜು.12ರ ರಾತ್ರಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಅರುಣ್ ಕುಮಾರ್, ಜಿ-ನೆಟ್ ಕಂಪನಿ ಮಾಲೀಕನಾಗಿದ್ದ. ಅಷ್ಟೆ ಅಲ್ಲದೆ ಎಎಪಿ ಪಕ್ಷದ ಮುಖಂಡನೂ ಆಗಿದ್ದ. ಅದೇ ಕಂಪನಿಯಲ್ಲಿ ಹೆಚ್ ಆರ್ ಆಗಿ ಫಣೀಂದ್ರ ಕೆಲಸ ಮಾಡುತ್ತಿದ್ದ. ಜಿ-ನೆಟ್ ನಲ್ಲಿ ಸಿಇಓ ಆಗಿ ವಿನು ಕುಮಾರ್ ಕೆಲಸ ಮಾಡುತ್ತಿದ್ದ. ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಮಾಡಿ ಯಾವ ರೀತಿ ಎಸ್ಕೇಪ್ ಆಗ ಬೇಕು ಎಂಬ ಬಗ್ಗೆಯೂ ಹಂತಕರು ಪ್ಲಾನ್ ಮಾಡಿಕೊಂಡಿದ್ದರು. ಬೈಕ್ ನಲ್ಲಿ ಬಂದಿದ್ದ ಹಂತಕರು ಎಸ್ಕೇಪ್ ಆಗಿದ್ದು ಬರಿಗಾಲಲ್ಲಿ. ಕೊಲೆ ನಂತರ ಎಸ್ಕೇಪ್ ಆಗೋದು ಹೇಗೆ ಅನ್ನೊದನ್ನ ಫಿಲೆಕ್ಸ್ ಮೊದಲೆ ಪ್ಲಾನ್ ಮಾಡಿದ್ದ. ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದಿದ್ದ ಫಿಲೆಕ್ಸ್, ಎಸ್ಕೇಪ್ ಆಗೋ ರೂಟ್ ಗಳನ್ನ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ಆರೋಪ ಮಾಡುತ್ತಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೃಷಿ ಇಲಾಖೆ ಅಧಿಕಾರಿಗಳ ವರ್ಗಾವಣೆ ಮತ್ತು ವಿವಿಧ ಯೋಜನೆಗಳಿಗೆ ನಿಗದಿ ಪಡಿಸಲಾಗಿದ್ದ ಕಮಿಷನ್ ದರಪಟ್ಟಿಯನ್ನು ವಿಧಾನಸಭೆಗೆ ಸಲ್ಲಿಸಿದ್ದಾರೆ. ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ,ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ.ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ.ಇದು ಕಾಂಗ್ರೆಸ್ ಸರಕಾರದ 6ನೇ ಗ್ಯಾರಂಟಿ. ಒಂದು ಕಡೆ ಉಚಿತ ಕೊಡುಗೆಯಾದ್ರೆ ಇನ್ನೊಂದು ಕಡೆ ಖಚಿತ ಸುಲಿಗೆ ಎಂದು ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ. ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಟ್ಟ ಕಾಂಗ್ರೆಸ್ ಸರಕಾರ ಕೊಡುತ್ತಿರುವ ವರ್ಗಾವಣೆ ‘ ಸಂಕಷ್ಟಭಾಗ್ಯ ‘ಎಂದು ಟೀಕೆ ಮಾಡಿದೆ. ಕೊಡುಗೆ ಮತ್ತು ಸುಲಿಗೆ ಒಟ್ಟೊಟ್ಟಿಗೆ ಕೊಂಡೊಯ್ಯುವುದೇ ಅಭಿವೃದ್ದಿಯ ಹೊಸ ಭರವಸೆ, ಹೊಸ ಕನಸು ಎಂಬುದು ನನಗೆ ಈಗಷ್ಟೇ ಅರ್ಥವಾಗಿದೆ. ಕರ್ನಾಟಕ ಮಾದರಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್…
ಬೆಂಗಳೂರು: ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಅಕ್ಕಿ ಕೊಡುವುದರಲ್ಲೂ ನೀವು ರಾಜಕಾರಣ ಮಾಡುತ್ತಿದ್ದೀರಲ್ಲಾ? ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸ್ತಾರೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ K.M.ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್ ಏನು ಪ್ರಧಾನಿ ಕೇಳಿ ಉಚಿತ ಘೋಷಣೆ ಮಾಡಿದ್ರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರು ಕೊಟ್ರಾ? ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ನೆರವಿಗೆ ಬರಬೇಕು. ಕಳೆದ ಬಾರಿ ಕೇಂದ್ರದಿಂದ ನೆರೆ ಹಣ ಬಂತಾ? ಎಂದು ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಶಿವಲಿಂಗೇಗೌಡ ಮಾತಿಗೆ ಶಾಸಕ R.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ಗದ್ದಲ ಶುರುವಾಯಿತು.
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ಹಲವು ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದ್ವು..ಕುಮಾರಸ್ವಾಮಿ ಭಾಷಣದ ವೇಳೆ ಕಲಾಪ ಸದ್ದುಗದ್ದಲಕ್ಕೂ ಕಾರಣವಾಯ್ತು. ವರ್ಗಾವಣೆ ದಂಧೆಯ ಆರೋಪ ಸದನದಲ್ಲಿ ವಾಕ್ಸಮರಕ್ಕೆ ಕಾರಣವಾಯ್ತು..ಇನ್ನು ಜೈನಮುನಿ ಹಾಗೂ ವೇಣುಗೋಪಾಲ್ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಬಿಜೆಪಿಯವರು ರಾಜ್ಯಪಾಲರು ಮೊರೆ ಹೋಗಿದ್ರು. ಸರ್ಕಾರದ ಗ್ಯಾರೆಂಟಿಗಳ ಚರ್ಚೆ ವೇಳೆ ಅಶ್ವಥ್ ನಾರಾಯಣ್ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರೇ ನಡೆದುಹೋಯ್ತು..ಮಾಜಿ ಸಿಎಂ ಕುಮಾರಸ್ವಾಮಿ ಗ್ಯಾರೆಂಟಿಗಳ ಬಗ್ಗೆ ಮಾತನಾಡ್ತಿದ್ರು..ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಅಂತ ಕಾಂಗ್ರೆಸ್ ನವರು ಮಾತನಾಡ್ತಿದ್ರು..ಇಂತದ್ದಕ್ಕೆ ಇಷ್ಟು ರೇಟು ಅಂತ ಪೇಪರ್ ಗಳಲ್ಲಿ ಆ್ಯಡ್ ಕೊಟ್ಟಿದ್ರು..ಈಗ ನೋಡಿದ್ರೆ ಇವರ ಸರ್ಕಾರದಲ್ಲೇ ದಂಧೆ ಶುರುವಾಗಿದೆ ಅಂತ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು..ಈ ವೇಳೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಧ್ವನಿಗೂಡಿಸಿದ್ರು..ಇದಕ್ಕೆ ಪ್ರತಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗಿಬಿದ್ರು..ರೇಟನ್ನ ನಾವು ಹೇಳಿದ್ದಲ್ಲ,ನಿಮ್ಮ ಪಕ್ಕದಲ್ಲಿರುವ ಶಾಸಕರು ಅಂತ ಯತ್ನಾಳ್ ಕಡೆ ಕೈತೋರಿಸಿದ್ರು..ಈ ವೇಳೆ ಇಬ್ಬರ ನಡುವೆ ಜೋರು ಧ್ವನಿಯಲ್ಲಿ ಟಾಕ್ ವಾರ್ ಶುರುವಾಯ್ತು. ಇನ್ನು…
ಬೆಂಗಳೂರು: ಚಾಮರಾಜಪೇಟೆಯಲ್ಲಿ ನಿಲ್ಲಿಸಿದ್ದ 12 ಚಕ್ರದ ಲಾರಿ ಕಳ್ಳತನ ಮಾಡಿದ್ದ ಖದೀಮನನ್ನ 278 ಸಿಸಿ ಕ್ಯಾಮರಗಳ ಸಹಾಯದಿಂದ ತಮಿಳುನಾಡಿನಲ್ಲಿ ಪತ್ತೆ ಹಚ್ಚಿ ವಿವಿಪುರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮುತ್ತುರಾಜ್ ಬಂಧಿತ ಆರೋಪಿ. ಆರೋಪಿಯಿಂದ 1.50 ಕೋಟಿ ರೂ. ಮೌಲ್ಯದ ಮೂರು ಲಾರಿ ಜಪ್ತಿ ಮಾಡಲಾಗಿದೆ. ಆರೋಪಿ ಮುತ್ತುರಾಜ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ನಡುವೆ ಐಷರಾಮಿ ಜೀವನ ನಡೆಸಲು ಲಾರಿ ಕಳ್ಳತನಕ್ಕೆ ಇಳಿದಿದ್ದ. ಬಳಿಕ ತಮಿಳುನಾಡಿನಲ್ಲಿರುವ ತನ್ನ ಸಹಚರರಿಗೆ ಮಾರಾಟ ಮಾಡುತ್ತಿದ್ದ. ಒಬ್ಬ ಸಹಚರ ಕದ್ದ ಲಾರಿಯ ಇಂಜಿನ್ ನಂಬರ್ ಮತ್ತು ಚಾಸಿಸ್ ನಂಬರ್ ಬದಲಾಯಿಸಿದರೆ, ಮತ್ತೊಬ್ಬ ಸಹಚರ ದಾಖಲಾತಿ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದ. ಬಂದ ದುಡ್ಡನ್ನು ಮೂವರೂ ಹಂಚಿಕೊಳ್ಳುತ್ತಿದ್ದರು. ಇದೇ ರೀತಿ ತಮಿಳುನಾಡಿನಲ್ಲಿ 2 ಲಾರಿಗಳನ್ನು ಕದ್ದು ಮಾರಾಟ ಮಾಡಿದ್ದರು. ಕಳ್ಳನ ಸುಳಿವು ಕೊಟ್ಟ 278 ಸಿಸಿ ಕ್ಯಾಮರಾಗಳು ಹರಿಪಾಲ ಎಂಬುವವರು ತಮ್ಮ ಲಾರಿಯನ್ನು ಜ.14ರಂದು ರಾತ್ರಿ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿದ್ದರು. ಇತ್ತ ತಮಿಳುನಾಡಿನಿಂದ ಲಾರಿ ಕದಿಯಲೆಂದು…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೊಂದು ಇಂಚು ಭೂಮಿಗೆ ಬಂಗಾರ ಬೆಲೆ ಇದೆ. ಹೀಗಾಗಿ ಭೂಗಳ್ಳರ ಹಾವಳಿ ಜಾಸ್ತಿಯಾಗ್ತಿದೆ. ಸರ್ಕಾರಿ ಪುಟ್ ಪಾತ್ ಸ್ವತ್ತಿಗೂ ಕಂಡ ಕಂಡಲ್ಲಿ ಬೆಲಿ ಹಾಕ್ತಿದ್ದಾರೆ. ಅಂತಹವರಿಗೆ ಇವತ್ತು ಮಹಾದೇವಪುರ ಬಿಬಿಎಂಪಿ ಜೆಸಿ ಮೇಡಮ್ ಚಳಿ ಬಿಡಿಸುವ ಕೆಲಸ ಮಾಡಿದರು. ಫುಟ್ ಪಾತ್ ಜಾಗವೆಲ್ಲ ನುಂಗಿದವರ ಮೇಲೆ ವಲಯದ ಎಲ್ಲೆಡೆ ಫುಟ್ ಪಾತ್ ಒತ್ತುವರಿ ಆಪರೇಷನ್ ಮಾಡಿದರು. ಹಾಗಾದ್ರೆ ಮಹಾದೇವಪುರ ವಲಯದಲ್ಲಿ ಫುಟ್ ಪಾತ್ ಆಪರೇಷನ್ ತೆರವು ಇವತ್ತು ಹೇಗಿತ್ತು ಬನ್ನಿ ತೋರಿಸ್ತೀವಿ ಬೆಂಗಳೂರು ಬೆಳೆದಂತೆ ಒಂದೊಂದು ಇಂಚು ಜಾಗಕ್ಕೂ ಕೋಟಿ ಕೋಟಿ ಬೆಲೆ ಇದೆ.ಇದನ್ನೆ ಬಂಡವಾಳ ಮಾಡಿರೋ ಜನ ಸಿಕ್ಕ ಸಿಕ್ಕ ಜಾಗಕ್ಕೂ ನಮ್ದು ಅಂತ ಬೇಲಿ ಹಾಕಿಕೊಳ್ಳಿದ್ದಾರೆ. ಇದರಿಂದ ನಿತ್ಯ ರಸ್ತೆಗಳಲ್ಲಿ ಓಡಾಟ ನಡೆಸುವ ಜನರಿಗೆ ತೊಂದರೆ ಆಗ್ತಿದೆ.ಆದ್ರೆ ಇದನ್ನ ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಿದೆ. ಒಂದು ಕಡೆ ಮಹಾದೇಪುರ ವಲಯದಲ್ಲಿ ರಾಜಕಾಲುವೆ ಒತ್ತುವರಿ ವಿರುದ್ದ ಘರ್ಜನೆ ಮಾಡ್ತಿರೋ ಪಾಲಿಕೆ ಇದೀಗ ಫುಟ್…
ಬೆಂಗಳೂರು: ಈ ಡಿಜಿಟಲ್ ಆಪ್ ಗಳ ಮೂಲಕ ಸಾಲ ನೀಡುವ ಅಕ್ರಮ ಕಂಪನಿಗಳು ಜನರಿಗೆ ಕಿರುಕುಳ ನೀಡಿವೆ. ಈ ಕಂಪನಿಗಳು ಸಾಲ ನೀಡಿ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿವೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯಂತಹ ಹೆಜ್ಜೆ ಇಡಲು ಯತ್ನಿಸಿದಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ರಾಜಧಾನಿಯಲ್ಲಿ 2023ರಲ್ಲಿ ಲೋನ್ ಆ್ಯಪ್ ಕಂಪೆನಿಗಳ ಕಿರುಕುಳದ ಸಂಬಂಧ 900 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಒಂದೇ ಪ್ರಕರಣದಲ್ಲಿ 15 ಲೋನ್ ಆ್ಯಪ್‌ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಪೊಲೀಸರು ದೂರು ದಾಖಲಿಸಿದ್ದಾರೆ. 15 ಆ್ಯಪ್ ಯಾವುವು ಈಸಿ ಮನಿ ಲೋನ್ ಆ್ಯಪ್, ಸ್ಯಾಲರಿ ಪ್ಲೀಸ್, ಈಸಿ ಲೋನ್, ಕ್ಯಾಸ್ ಮೀ, ಪ್ಯಾಕೆಟ್ ಮೀ, ಗೆಟ್ ರುಪಿ, ಇಸ್ ಕ್ಯಾಸ್, ಮನಿ, ರೈನ್ ಬೌ ಮನಿ, ಮ್ಯಾಜಿಕ್ ಲೋನ್, ಹೋಮ್ ಕೇಸ್ ಡೆಲ್ಲಿಕ್ರೆಡಿಟ್, ಶೈನಿ ಲೋನ್, ಗೋಮನಿ, ಕೂಲ್ ರುಪಿ ಲಟ್ರ, ನಾನ್ ರುಪಿ ಲೋನ್ ಆ್ಯಪ್‌ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…