ಬೆಂಗಳೂರು ;- ಬರೋಬ್ಬರಿ 7 ವರ್ಷ ಕಳೆದರೂ ನಾಡಪ್ರಭು ಕೆಂಪೇಗೌಡ ಬಡಾವಣೆ ಸಮಗ್ರ ಅಭಿವೃದ್ಧಿ ಕಂಡಿಲ್ಲ ಯಾಕೆ ಎಂದು ವಿಧಾನಪರಿಷತ್ ಸದಸ್ಯ ಟಿಎ ಶರವಣ ಪ್ರಶ್ನಿಸಿದ್ದಾರೆ. ಸದನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎ ಶರವಣ ಅವರು, ಬಿಡಿಎಯಿಂದ 4040 ಎಕರೆ ವಿಸ್ತೀರ್ಣದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಲು ಪ್ರಾರಂಭವಾಗಿ ಬರೋಬ್ಬರಿ 7 ವರ್ಷ ಕಳೆದರೂ ಕೂಡ, ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ. 2700 ಎಕರೆ ಜಮೀನು ಅಭಿಯಂತರರ ವಿಭಾಗಕ್ಕೆ ಹಸ್ತಾಂತರ ಆಗಿದೆ. ಉಳಿದ ಜಮೀನು ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಹಾಗೂ ಸಮಸ್ಯೆಗಳು ಇರುವುದರಿಂದ ಭೂಸ್ವಾಧೀನ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದರು ಪರಿಹಾರ ಕಂಡುಕೊಂಡಿಲ್ಲ. ಇನ್ನೂ ಕೆಂಪೇಗೌಡ ಲೇಔಟ್ ಗೆ ಸಂಬಂಧಿಸಿದಂತೆ RERA ದಲ್ಲಿ ಕೇಸು ದಾಖಲಾಗಿ ವಿಚಾರಣೆ ಮಾಡಲಾಗಿದೆ. 2021-22 ರ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದ್ದು, ಆದರೆ ಅದನ್ನು ಪೂರ್ಣಗೊಳಿಸುವಲ್ಲಿ ಬಿಡಿಎ ಸಂಪೂರ್ಣ ವಿಫಲವಾಗಿದೆ. ಸ್ಪಷ್ಟ ಪರಿಹಾರ ಕೋರಿ ಭೂಮಿ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ ಎಂದು…
Author: Prajatv Kannada
ಬೆಂಗಳೂರು ;- ಕಾಮಗಾರಿಗಳಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ ಎಂದು ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈಗಾಗಲೇ ಮಂಜೂರಾಗಿದ್ದ ಕೆಲಸಗಳು ಸ್ಥಗಿತಗೊಳ್ಳುತ್ತಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಡಬೇಕು. ಶಾಸಕರ ಪ್ರವೇಶಾಭಿವೃದ್ಧಿ ನಿಧಿಯಡಿ ನೀಡಲಾಗುತ್ತಿರುವ 2 ಕೋಟಿ ರೂ.ಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿ ಅನುದಾನವಿಲ್ಲ. ಯಾಕೆ ಚುನಾವಣೆ ಮಾಡುತ್ತೀರಿ, ರದ್ದು ಮಾಡಿ ಎಂದು ಗರಂ ಆದರು
ಬೆಂಗಳೂರು : ಈ ಸರ್ಕಾರ ಬಂದ ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಕುಟುಕಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರೇವಣ್ಣ, ಹಾಸನ ಆರ್ಟ್ಸ್ ಕಾಲೇಜಿನಲ್ಲಿ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಮುಸ್ಲಿಂ ವ್ಯಕ್ತಿಗೆ ಸೀನಿಯಾರಿಟಿ ಇದ್ದರೂ ಅವರಿಗೆ ಹುದ್ದೆ ಕೊಟ್ಟಿಲ್ಲ. ಬದಲಾಗಿ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ. ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ ಎಂದು ಹೇಳಿದರು. ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ. ಈಗಲಾದರೂ ಸಾಬ್ರಿಗೆ ರಕ್ಷಣೆ ಕೊಡಿ. ಸಾಬ್ರು ಇಷ್ಟೆಲ್ಲ ನಿಮಗೆ ವೋಟು ಹಾಕಿದ್ದಾರೆ. ಸಚಿವರಿಗೆ ಸೂಚನೆ ನೀಡಬೇಕು. ಅದನ್ನು ಸರಿಪಡಿಸಿ ಎಂದು ಹೆಚ್.ಡಿ ರೇವಣ್ಣ ಆಗ್ರಹಿಸಿದರು.
ಬೆಂಗಳೂರು: ಚೀನಾ ಆ್ಯಪ್ ಮೂಲಕ ಆನ್ ಲೈನ್ ಮೂಲಕ ಲೋನ್ ಪಡೆಯುವ ಮುನ್ನ ಯಾರೇ ಆಗಲಿ ಸ್ವಲ್ಪ ಯೋಚಿಸಬೇಕು ಇಲ್ಲದಿದ್ದರೆ ಜೀವನವೇ ನರಕಯಾತನೇ ಅನುಭವಿಸಬೇಕಾಗುತ್ತದೆ. ಅವರ ಕೊಡುವ ಕಾಟಕ್ಕೆ ಮನನೊಂದು ಎಷ್ಟೋ ಜನ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ, ಅದೇ ರೀತಿ ಬೆಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಚೀನಾ ಆ್ಯಪ್ ಮೂಲಕ ಲೋನ್ ಪಡೆದಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಹೆಚ್ಎಂಟಿ ಕ್ವಾರ್ಟರ್ಸ್ನಲ್ಲಿ ನಡೆದಿದೆ. ತೇಜಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸ್ನೇಹಿತ ಮಹೇಶ್ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ಕೊಟ್ಟವರು ಟಾರ್ಚರ್ ನೀಡುತ್ತಿದ್ದರಂತೆ. ಹಾಗಾಗಿ ಡೆತ್ ನೋಟ್ ಬರೆದಿಟ್ಟು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ತಾಯಿಯ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‘ಅಪ್ಪ ಅಮ್ಮ ನನ್ನನ್ನ ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ’ ‘ಮಾಡಿರುವ…
ಲಕ್ನೋ: ಬೆಲೆಬಾಳುವ ವಸ್ತುಗಳು ಕಳ್ಳತನವಾದಾಗ ಪೊಲೀಸರಿಗೆ ದೂರು ಕೊಟ್ಟಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಚಪ್ಪಲಿ ಕಳ್ಳತನವಾಗಿದೆ (Slipper Theft) ಎಂದು ಪೊಲೀಸರ ಮೊರೆ ಹೋಗಿ ಇದೀಗ ಎಫ್‍ಐಆರ್ ದಾಖಲಾದ ಪ್ರಸಂಗವೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ. ಹೌದು. ವಿಚಿತ್ರವಾದರೂ ಸತ್ಯವಾದ ಈ ಘಟನೆ ನಡೆದಿದ್ದು ಕಾನ್ಪುರ ನಗರದಲ್ಲಿರುವ ಸಿವಿಲ್ ಲೈನ್ ನ ಭೈರವ ಬಾಬಾ ದೇವಸ್ಥಾನದಲ್ಲಿ. ದಬೌಲಿ ನಿವಾಸಿ ಕಾಂತಿಲಾಲ್ ನಿಗಮ್ ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾರೆ. ಚಪ್ಪಲಿಯನ್ನು ದೇವಸ್ಥಾನದ ಹೊರಗೆ ಬಿಟ್ಟು, ಹತ್ತಿರದಲ್ಲೇ ಇದ್ದ ಅಂಗಡಿಯೊಂದರಿಂದ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗಿದ್ದಾರೆ. ಅಂತೆಯೇ ದೇವರ ದರ್ಶನ ಪಡೆದು, ಪೂಜೆ ಮುಗಿಸಿಕೊಂಡು ವಾಪಸ್ ಅಂಗಡಿಗೆ ಬಂದಾಗ ಚಪ್ಪಲಿ ಕಾಣದಾಗಿದೆ. ತಾನು ಇಟ್ಟ ಸ್ಥಳದಲ್ಲಿ ಎಷ್ಟು ಹುಡುಕಾಡಿದರೂ ಚಪ್ಪಲಿ ಕಾಣಿಸಲಿಲ್ಲ. ಹೀಗಾಗಿ ಕಾಂತಿಲಾಲ್ ಪೊಲೀಸರ ಮೊರೆ ಹೋಗಿದ್ದಾರೆ. ನನ್ನ ಚಪ್ಪಲಿ ಕಾಣೆಯಾಗಿದೆ ಎಂದು ಇ-ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ದೂರು ಸ್ವೀಕರಿಸಿ ಎಫ್‍ಆರ್ ದಾಖಲಿಸಿಕೊಂಡಿದ್ದಾರೆ. ಕಾಂತಿಲಾಲ್ ದೂರಿನಲ್ಲೇನಿತ್ತು..?: ದೇಗುಲದ ಹೊರಗೆ…
ಬೆಳಗಾವಿ: ರಾಜ್ಯದಲ್ಲಿ ಡಿಸಿ, ಸಿಇಓ ಹಾಗೂ ಕಮಿಷನರ್ʼಗಳಿಗೆ ರೇಟ್ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ (Belagavi Police Commissioner) ನೇಮಕವಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಗಳಿಗೆ, ಸಿಇಓಗಳಿಗೆ, ಕಮಿಷನರ್ ಗಳಿಗೆ ರೇಟ್ ಫಿಕ್ಸ್ ಆಗಿದೆ. ರೇಟ್ ಕುದುರುವವರೆಗೂ ಯಾರು ನೇಮಕ ಆಗಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಸರ್ಕಾರಕ್ಕೆ ನಾಚಿಕೆ ಆಗಬೇಕು. ಇಂತಹ ಪ್ರದೇಶದಲ್ಲಿ ಕಮಿಷನರ್ ನೇಮಕ ಆಗದೇ ಇರೋದು ನಾಚಿಕ ವಿಷಯವಾಗಿದೆ. ಹೀಗಾದ್ರೆ ಕಾನೂನು ಸುವ್ಯವಸ್ಥೆ ಏನಾಗಬಹುದು. ಕಾನೂನು ಸುವ್ಯವಸ್ಥೆ ಕಾಪಾಡೊದು ಹೇಗೆ?. ರಾಜ್ಯದ ಅಭಿವೃದ್ಧಿ, ಶಾಂತಿ ಚಿಂತನೆ ಮಾಡುವುದುದು ಬಿಟ್ಟು ಇಂತಹ ವ್ಯವಹಾರದಲ್ಲಿ ಕುಳಿತಿದೆ. ಜನರ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಲೋಕಸಭೆ ಚುನಾವಣೆ ಈ ರೀತಿ ಮಾಡ್ತಿದ್ದಾರೆ. 5 ವರ್ಷ ಸರ್ಕಾರ ನಡೆಸುತ್ತೇವೆ ಅಂತಾ ವಿಶ್ವಾಸವಿಲ್ಲ, ಈಗಲೇ ತುಂಬಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು. ಇಲಾಖೆಗಳಲ್ಲಿನ ಅಧಿಕಾರಿಗಳ ವರ್ಗಾವಣೆ…
ಬೆಂಗಳೂರು ;– ಶಿವಮೊಗ್ಗ ಏರ್‌ಪೋರ್ಟ್ ವೆಚ್ಚದಲ್ಲಿ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಹಾಗೂ ರನ್ ವೇ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ಹೆಚ್ಚಿಸುವಲ್ಲಿ ಅವ್ಯವಹಾರವಾಗಿದ್ದಲ್ಲಿ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ನಿಲ್ದಾಣದ ಆರಂಭಿಕ ಅಂದಾಜು ಮೊತ್ತ 220 ಕೋಟಿ ರು.ಗಳಾಗಿದ್ದು, ಎರಡು ಬಾರಿ ಅಂದಾಜು ಮೊತ್ತ ಪರಿಷ್ಕರಿಸಲಾಗಿದೆ. ಪ್ರಸ್ತುತ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 449.22 ಕೋಟಿ ರು.ಗಳಾಗಿದೆ ಎಂದರು. ಮೊದಲು ರನ್ ವೇ ನಿರ್ಮಾಣ ಕಾಮಗಾರಿಯನ್ನು ಎಟಿಆರ್-72 ಮಾದರಿ ವಿಮಾನಗಳ ಹಾರಾಟಕ್ಕೆ ಅನುವಾಗುವ ರೀತಿಯಲ್ಲಿ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ಈ ಕಾಮಗಾರಿ ಪ್ರಗತಿಯಲ್ಲಿರುವಾಗ ಎಟಿಆರ್-72 ಬದಲಾಗಿ ಏರ್‌ಬಸ್-320 ಮಾದರಿ ಅನುವಾಗುವಂತೆ ನಿರ್ಮಿಸಲು ನಿರ್ಧರಿಸಿದ ಕಾರಣ ಅಂದಾಜು ವೆಚ್ಚ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ: ವಿಶ್ವಕಪ್ (World Cup) ಸೆಮಿಫೈನಲ್‍ಗೆ ಹೋಗಲು ಅವಕಾಶವಿರುವ ಐದು ತಂಡಗಳನ್ನು ಮಾಜಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ (Sourav Ganguly) ಹೆಸರಿಸಿದ್ದಾರೆ. ಇದು ಹೇಳಲು ತುಂಬಾ ಕಷ್ಟ ಎಂದು ಅವರು ಪ್ರತಿಕ್ರಿಸಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ (Team India) ಸೆಮಿಫೈನಲ್‍ಗೆ ತೆರಳುವ ವಿಶ್ವಾಸವಿದೆ. ನ್ಯೂಜಿಲೆಂಡ್ ತಂಡವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಪಾಕಿಸ್ತಾನವನ್ನೂ ಈ ಸಾಲಿಗೆ ಸೇರಿಸುತ್ತೇನೆ. ಪಾಕಿಸ್ತಾನ ಅರ್ಹತೆ ಪಡೆದರೆ ಭಾರತ-ಪಾಕಿಸ್ತಾನ ಸೆಮಿಫೈನಲ್‍ನಲ್ಲಿ ಸೆಣಸಬಹುದು ಎಂದಿದ್ದಾರೆ. ಈ ವರ್ಷ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್‍ಗೆ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ ತಂಡಗಳು ಅರ್ಹತೆ ಪಡೆದಿವೆ. ಈಗಾಗಲೇ ಅಂತಿಮ 10 ತಂಡಗಳ ಪಟ್ಟಿ ತಯಾರಾಗಿದೆ. ಇದೇ ಮೊದಲ ಬಾರಿಗೆ ಭಾರತ ಸಂಪೂರ್ಣವಾಗಿ ವಿಶ್ವಕಪ್ ಕ್ರಿಕೆಟ್ ಅತಿಥ್ಯ ವಹಿಸಿಕೊಂಡಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದೇ ವೇಳೆ ಮುಂಬೈ ಮತ್ತು ಕೋಲ್ಕತ್ತಾ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಭಾರತ ಅಕ್ಟೋಬರ್ 15…
ಕಳೆದ ಎಂಟತ್ತು ದಿನಗಳಿಂದ ಸ್ಯಾಂಡಲ್ ವುಡ್ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾಕ್ ಸಮರ ಮುಂದುವರೆಯುತ್ತಲೆ ಇದೆ. ಸುದೀಪ್ ತಮ್ಮಿಂದ ಅಡ್ವಾನ್ಸ್ ಹಣ ಪಡೆದು ಸಿನಿಮಾ ಮಾಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ಇದೀಗ ಇಂಥದ್ದೇ ಆರೋಪ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ತಲಾ ಅಜಿತ್ ಮೇಲೆ ಕೇಳಿ ಬಂದಿದೆ. ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ತಮಗೆ ಮೋಸ ಮಾಡಿದ್ದಾರೆ ಎಂದು ನಿರ್ಮಾಪಕ ಮಾಣಿಕಂ ನಾರಾಯಣನ್ ಆರೋಪ ಮಾಡಿದ್ದಾರೆ. ಅಜಿತ್ ತಮ್ಮಿಂದ ಹಣ ಪಡೆದು, ಸಿನಿಮಾ ಮಾಡದೇ ಸತಾಯಿಸಿದ್ದಾರೆ ಎಂದು ನಾರಾಯಣನ್ ಆರೋಪಿಸಿದ್ದು ಸದ್ಯ ಈ ಹೇಳಿಕೆ ತಮಿಳು ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಾರಾಯಣ್, ನಟ ಅಜಿತ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಅಜಿತ್ ಅವರು ಬಹಳ ವರ್ಷಗಳ ಹಿಂದೆ ತಂದೆ-ತಾಯಿಯನ್ನು ಮಲೇಷಿಯಾಗೆ ಕಳಿಸಲು ನನ್ನಿಂದ ಹಣ ಪಡೆದಿದ್ದರು. ಮುಂದಿನ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡೋಣ, ಈ ಹಣವನ್ನು ಸಂಭಾವನೆಗೆ ಸರಿ ಮಾಡಿಕೊಳ್ಳೋಣ ಎಂದಿದ್ದರು.…
ಸಿಗರೇಟ್ ಸೇದೋದ್ರಿಂದ ಗಂಟಲಿನ ಕ್ಯಾನ್ಸರ್ ಬರುತ್ತೆ, ಶ್ವಾಸಕೋಶಕ್ಕೆ ತೊಂದ್ರೆ ಅನ್ನೋದು ಗೊತ್ತೇ ಇದೆ. ‘ಸಿಗರೇಟ್ ಆರೋಗ್ಯಕ್ಕೆ ಹಾನಿಕರ’ ಅಂತ ಗೊತ್ತಿದ್ರೂ ಜನ ಸಿಗರೇಟ್ ಸೇದೋದು ಬಿಡಲ್ಲ! ಈಗೀಗ ಗಂಡುಮಕ್ಕಳಿಗಿಂತ ಹೆಣ್ಣು ಮಕ್ಕಳು ಸಿಗರೇಟ್ ಸೇದೋದು ಜಾಸ್ತಿಯಾಗಿದೆ. ನಿಮ್ಗೆ ಗೊತ್ತಾ ಸಿಗರೇಟ್ ಸೇದೋದ್ರಿಂದ ಹುಡುಗರಿಗಿಂತ ಹುಡುಗಿಯರಿಗೇ ತೊಂದ್ರೆ ಹೆಚ್ಚು. ದಂ ಹೊಡೆಯೋ ಹೆಣ್ಣು ಮಕ್ಕಳು ಪೀರಿಯಡ್ ಟೈಮ್ನಲ್ಲಿ ತುಂಬಾನೇ ನೋವು ಅನುಭವಿಸಬೇಕಾಗುತ್ತೆ. ಪೀರಿಯಡ್ ಸರಿಯಾಗಿ ಆಗಲ್ಲ. ಇನ್ನೊಂದು ಇಂಪಾರ್ಟೆಂಟ್ ವಿಷ್ಯ ಅಂದ್ರೆ, ಸಿಗರೇಟ್ ಸೇದೋ ಹುಡ್ಗೀರು ಗಳಿಗೆಗೆ ಒಂದೊಂದು ರೀತಿ ಬದಲಾಗ್ತಾ ಇರ್ತಾರೆ. ಕ್ಷಣ ಕ್ಷಣಕ್ಕೂ ಅವರ ಮೂಡ್ ಚೇಂಜ್ ಆಗ್ತಾ ಇರುತ್ತೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಗರ್ಭಕೋಶದ ಸಮಸ್ಯೆ ಎದುರಾಗೋ ಸಾಧ್ಯತೆ ಕೂಡ ಇದೆ. ಇಷ್ಟೇ ಅಲ್ದೆ ಮಕ್ಕಳಾಗೋದು ಕೂಡ ಕಷ್ಟ! ಹೀಗಾಗಿ ಸಿಗರೇಟ್ ಸೇದೋ ಹುಡ್ಗೀರೇ ಹುಷಾರ್..!