ಬೆಂಗಳೂರು ;- ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ವೇತನಾನುದಾನ ಸಮಸ್ಯೆ ಪರಿಹರಿಸಲು ಪ್ರಯತ್ನ ಪಡಲಾದುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕಿಸುವಲ್ಲಿ ವೇತನಾನುದಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯ ನಿಯಮ 4ಕ್ಕೆ ತಿದ್ದುಪಡಿ ತಂದಿರುವ ಪರಿಣಾಮ ಇಂದು 9 ಲಕ್ಷಕ್ಕೂ ಅಧಿಕ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಈ ಬಗ್ಗೆ ಅಂಕಿ-ಅಂಶ ತರಿಸಿಕೊಂಡು ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರದ ಕಾರ್ಯಕಾಲದಲ್ಲಿ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರ್ಟಿಇ ಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ಲಕ್ಷಾಂತರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕಂತೂ ಈ ಕಾಯ್ದೆ ವರದಾನವಾಗಿತ್ತು. ಈ…
Author: Prajatv Kannada
ಬೆಂಗಳೂರು ;- ರಾಜ್ಯದಲ್ಲಿ ಶಕ್ತಿ ಯೋಜನೆ ಸಕ್ಸಸ್ ಆಗಿದ್ದು, ತಿಂಗಳಲ್ಲೇ 16.73 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವರೆಗೂ 16.73 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 401.94 ಕೋಟಿಯಾಗಿದೆ ಎಂಬ ಮಾಹಿತಿ ಹಂಚಿಕೊಂಡ ಸಚಿವರು ಯೋಜನೆ ಯಶಸ್ವಿಗೆ ಸಹಕರಿಸಿದ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಜೂನ್ 11 ರಂದು ಚಾಲನೆಗೊಂಡ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ “ಶಕ್ತಿ” ಯೋಜನೆಯು ಇಂದಿಗೆ ಒಂದು ತಿಂಗಳು ಪೂರೈಸಿದ್ದು, ಸಾರಿಗೆ ಸಂಸ್ಥೆಗಳಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗಿ, ಮಹಿಳಾ ಪ್ರಯಾಣಿಕರಿಂದ ಅಭೂತಪೂರ್ವ ಯಶಸ್ಸನ್ನುಗಳಿಸಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕರಿಸಿದ ನಾಲ್ಕು ಸಾರಿಗೆ ಸಂಸ್ಥೆಗಳ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಾರ್ವಜನಿಕ ಪ್ರಯಾಣಿಕರು, ಅದರಲ್ಲಿಯೂ ಮಹಿಳಾ ಪುಯಾಣಿಕರು ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರತಿದಿನ ಪ್ರಯಾಣಿಸಿ ‘ಸಾರಿಗೆ ಬಸ್ಗಳು ಜನರ ಜೀವನಾಡಿಯೂ ಹೌದು ಹಾಗೂ ಮಹಿಳೆಯರ…
ಸೂರ್ಯೋದಯ: 06.00 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ದಶಮಿ 05:59 PM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಭರಣಿ 07:43 PM ತನಕ ನಂತರ ಕೃತ್ತಿಕ ಯೋಗ: ಇವತ್ತು ಧೃತಿ09:40 AM ತನಕ ನಂತರ ಶೂಲ ಕರಣ: ಇವತ್ತು ವಣಿಜ 05:57 AM ತನಕ ನಂತರ ವಿಷ್ಟಿ 05:59 PM ತನಕ ನಂತರ ಬವ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ:07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 02.48 PM to 04.26 PM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ, ವಕೀಲರಿಗೆ…
ಬೆಂಗಳೂರು ;- ಅಮೂಲ್ ಜೊತೆ ನಂದಿನಿ ಯಾವುದೇ ಕಾರಣಕ್ಕೂ ವಿಲೀನ ಇಲ್ಲ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ. ಆದರೆ, ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಉಳಿಸುವ ಕಾರಣಕ್ಕೆ ಅನಿವಾರ್ಯವಾಗಿ ಹಾಲಿನ ದರ ಪರಿಷ್ಕರಣೆ ಮಾಡಲೇಬೇಕಿದೆ, ಸಿಎಂ ಜೊತೆ ಚರ್ಚಿಸಿ ಎಷ್ಟು ಹೆಚ್ಚಳ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು. ರೈತರಿಗೂ ಕಷ್ಟ ಇದೆ, ಒಕ್ಕೂಟವೂ ಕಷ್ಟದಲ್ಲಿದೆ ಹಾಗಾಗಿ ಬೇರೆಯವರ ಜೊತೆ ಸ್ಪರ್ಧೆ ಕಷ್ಟವಾಗುತ್ತಿದೆ. ಖಾಸಗಿಯವರು ಹೆಚ್ಚು ಹಣ ಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ರೈತರ ಹಾಲು ಹೋಗುತ್ತಿದೆ. ನಮ್ಮ ಒಕ್ಕೂಟ ನಷ್ಟದಲ್ಲಿವೆ. ಹಾಗಾಗಿ ಹಾಲಿನ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಿದ್ದೇವೆ. ಎಷ್ಟು ಹೆಚ್ಚಿಸಬೇಕು ಎಂದು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ದರ ಹೆಚ್ಚಳ ಅನಿವಾರ್ಯ ಎಂದು ಹಾಲಿನ ದರ ಹೆಚ್ಚಳದ ಸುಳಿವು ನೀಡಿದರು. ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ, ಅಂತಹ…
ಬೆಂಗಳೂರು ;- ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವ ಅಗತ್ಯ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಜೈನ ಮುನಿ ಕೊಲೆ ಅಮಾನುಷವಾದದ್ದು. ಯಾರೇ ಕೊಲೆ ಮಾಡಿದರೂ ಶಿಕ್ಷೆ ಆಗಬೇಕು. ಎಫ್ಐಆರ್ನಲ್ಲಿಯೂ ಇಬ್ಬರ ಹೆಸರನ್ನು ಹಾಕಲಾಗಿದೆ. ಹಾಗಾಗಿ ಎರಡನೇ ಆರೋಪಿಯನ್ನು ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದರಲ್ಲಿ ಪೊಲೀಸರ ತಪ್ಪು ಎಲ್ಲಿದೆ? ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಜೈನ ಮುನಿ ಕೊಲೆ ಮಾಡಿರುವುದು ದಿಗ್ಬ್ರಮೆ ಮೂಡಿಸುವ ಕೊಲೆಯಾಗಿದೆ. ಇಂತಹದ್ದು ಮರುಕಳಿಸಬಾರದು. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಯಾರಿಗೂ ರಕ್ಷಣೆ ಕೊಡುವ ಪ್ರಶ್ನೆನೇ ಇಲ್ಲ. ಇಲ್ಲಿ ಎಷ್ಟೇ ದೊಡ್ಡವರು ಇದ್ದರೂ ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಾರೇ ತಪ್ಪಿತಸ್ಥರು ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಟಿ ನರಸೀಪುರ, ಜೇವರ್ಗಿ ಪ್ರಕರಣ ಆಗಲಿ ಯಾವ ಪ್ರಭಾವಕ್ಕೂ, ಒತ್ತಡಕ್ಕೂ ಮಣಿಯಲ್ಲ. ಈಗ ಸಿಬಿಐಗೆ ಕೊಡುವ ಅಗತ್ಯ ಇಲ್ಲ. ಪೊಲೀಸರ ಕೈಯಲ್ಲೇ…
ಬೆಂಗಳೂರು ;– ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಿರಂತರ ಹತ್ಯೆಗಳು, ಗೂಂಡಾಗಿರಿ ರಾಜಕಾರಣ, ದರೋಡೆ ನಡೆಯುತ್ತಿತ್ತು. ಹಿಂದಿನ ಅವರ ಸರ್ಕಾರದ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೊ ಆಗ ಇಂತಹ ಪ್ರಕರಣ ವೈಭವಿಕರೀಸುತ್ತವೆ ಮತ್ತು ರಾರಾಜಿಸುತ್ತವೆ. ಇಂತಹ ಕೊಲೆಗಡುಕರು, ದಂಗೆಕೋರರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ. ತನಿಖೆ ಪಾರದರ್ಶಕವಾಗಿ ನಡೆಯಬೇಕು. ಹತ್ಯೆಯ ಹಿಂದೆ ಯಾರ್‍ಯಾರ ಕೈವಾಡ ಇದೆ ಎಂದು ಬಯಲಾಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು. ಸತ್ಯಶೋಧನಾ ಸಮಿತಿ ಮಾಡಿಕೊಂಡು ಸ್ಥಳಕ್ಕೆ ಭೇಟಿ ಕೊಡುತ್ತಿದ್ದೇವೆ. ಕ್ಷೇತ್ರಕ್ಕೆ ಹೋಗಿ ಪರಿಶೀಲಿಸಿ, ಜನರ ಅಭಿಪ್ರಾಯ ಕೇಳಿ ತನಿಖಾ ವರದಿ ಪಡೆದುಕೊಳ್ಳುತ್ತೇವೆ. ಸರ್ಕಾರ ಏನು ಹೇಳುತ್ತೆ, ಪೊಲೀಸರು ಏನು…
ಬೆಂಗಳೂರು ;- ನಗರದಲ್ಲಿ ಹಾಡಹಗಲೇ ಏರೋನಿಕ್ಸ್ ಕಂಪನಿ CEO, MD ಬರ್ಬರ ಹತ್ಯೆ ನಡೆದಿದೆ. ಕಂಪನಿಯ MD ಫಣೀಂದ್ರ ಹಾಗೂ CEO ವಿನಯ್ ಕುಮಾರ್ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಕಂಪನಿ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡಿದ ಫೆಲಿಕ್ಸ್ ಈ ಕೃತ್ಯ ಎಸಗಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಆಯುರ್ವೇದ ಬ್ರಾಂಡ್ (amrith noni ) ಅಮೃತ್ ನೋನಿಗೆ ಭಾರತದ ಖ್ಯಾತ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು (amrith noni ) ಅಮೃತ್ ನೋನಿ ಪೇನ್ ರಿಲೀಫ್ ಸ್ಪ್ರೇ (pain relief ) ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಆಯುರ್ವೇದ ಬ್ರಾಂಡ್ ಅಮೃತ್ ನೋನಿ ಮತ್ತೊಂದು ಉಪಯುಕ್ತ ಮತ್ತು ಜನಸ್ನೇಹಿ ಉತ್ಪನ್ನವಾದ ನೋವು ನೀವಾರಕ (pain relief ) ಸ್ಪ್ರೇ ಮಾರುಕಟ್ಟೆಗೆ ತಂದಿದೆ. ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮತ್ತು ICC ವಿಶ್ವ ನಂ.1 T20 ಬ್ಯಾಟರ್, ಸೂರ್ಯಕುಮಾರ್ ಯಾದವ್ ಈ ಹೊಸ ನೋವು ನಿವಾರಕ ಸ್ಪ್ರೇ ಉತ್ಪನ್ನದ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಈ ಜನಸ್ನೇಹಿ ಉತ್ಪನ್ನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿರುವುದು ವಿಶೇಷವಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಸಾಮಾನ್ಯವಾಗಿ 360 ಡಿಗ್ರಿ…
ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಹಾಗೂ ಅತಿ ನಿರ್ಬಂಧಿತ ಕಟ್ಟಡ ಎನಿಸಿರುವ ವಿಧಾನಸೌಧದ ಭದ್ರತೆ ಹೊಣೆಗಾರಿಕೆಯನ್ನು ಸರ್ಕಾರ ಹೇಗೆ ನಿರ್ವಹಿಸಿದೆ ಗೊತ್ತಾ.. ಇತ್ತೀಚಿಗೆ ಭದ್ರತಾ ಲೋಪ ಭಾರಿ ಚರ್ಚೆಗೆ ಕಾರಣವಾಗಿತ್ತು. ಅನಾಮಧೇಯ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಕಲಾಪದ ನಡುವೆ ಕಾಣಿಸಿಕೊಂಡಿದ್ದು ಭದ್ರತಾ ಲೋಪವನ್ನು ಎತ್ತಿ ಹಿಡಿದಿತ್ತು. ಈ ರೀತಿಯ ಭದ್ರತಾ ಲೋಪದಿಂದ ಭಾರೀ ಮುಜುಗರಕ್ಕೀಡಾದ ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದ್ದು, ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಭಾರಿ ಭದ್ರತೆ ಕೈಗೊಳ್ಳಲು ಮುಂದಾಗಿದೆ. ಹೊಸ ಭದ್ರತಾ ಕ್ರಮದ ಮುಖಾಂತರ ಪಾರ್ಲಿಮೆಂಟ್ನ ತಂತ್ರಜ್ಞಾನವನ್ನೂ ಬಳಸಲು ಸರ್ಕಾರ ಮುಂದಾಗಿದ್ದು, ಮೂರು ಹಂತಗಳ ಭದ್ರತಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮೂಲಕ ಹೈ ಟೈಕ್ನಾಲಜಿ ಆಧರಿತ ಟೈಟ್ ಬಂದೋಬಸ್ತ್ ಮಾಡಲು ಮುಂದಾಗಿದ್ದು, ಅಪರಿಚಿತರು ಅಥವ ಶಂಕಿತರು ಯಾವುದೇ ರೀತಿ ಎಂಟ್ರಿ ಕೊಡದಂತೆ ತಡೆಯಲು ತಯಾರಿ ನಡೆಸಿದೆ. ವಿಧಾನಸೌಧ ಹಾಗೂ ವಿಕಾಸಸೌಧ ಒಳ ಪ್ರವೇಶಕ್ಕೆ ಮೂರು ಸುತ್ತಿನ ಭದ್ರತೆ ಕೈಗೊಳ್ಳಲಾಗುತ್ತಿದೆ. ಬರುವವರಿಗೆ ಲೇಸರ್ ಐಡೆಂಟಿಟಿ ಸೆನ್ಸಿಟಿವ್ ಐಡಿ ಕಾರ್ಡ್ ನೀಡಲಾಗುತ್ತೀದೆ. ಈ ಮೂಲಕ ಅನುಮತಿ ಇದ್ದವರಿಗೆ ಐಡಿ…
ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡಿದೆ. ನುಡಿದಂತೆ ನಡೆಯಲಿಲ್ಲ, ಇದು ವಚನಭ್ರಷ್ಟ ಸರ್ಕಾರ ರಾಜಮಾರ್ಗ ಹಿಡಿದ್ದು ನಮ್ಮ ಬಿಜೆಪಿ ಪಕ್ಷ ಸೋತಿತು, ಅದರೆ ವಾಮಮಾರ್ಗದ ಮೂಲಕ ಅಧಿಕಾರ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿತ್ತು ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ನಮ್ಮ ಹಿರಿಯರು ಒಬ್ಬರ ಜೀವನದ ಉದ್ಧಾರಕ್ಕಾಗಿ ಸಾವಿರ ಸುಳ್ಳಿ ಹೇಳಿ ಒಂದು ಮದುವೆ ಮಾಡಿದರೆ ತಪ್ಪಿಲ್ಲ ಎಂದಿದ್ದಾರೆ. ಸಾವಿರ ಸುಳ್ಳು ಹೇಳಿ ಒಂದು ಸರ್ಕಾರ ತನ್ನಿ ಎಂದು ಎಲ್ಲೂ ಹೇಳಿಲ್ಲ ಎಂದು ಕಲಾಪದಲ್ಲಿ ಕಿಡಿಕಾರಿದ್ದಾರೆ. ಸಾವಿರ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಇಂತಹ ಸರ್ಕಾರಕ್ಕೆ ಅಭಿನಂದನೆ ಹೇಳಬೇಕಿಲ್ಲ ಎಂದು ಕುಟುಕಿದರು. ಅಧಿಕಾರಕ್ಕೆ ಬರಲು ರಾಜ ಮಾರ್ಗವಿದೆ, ನ್ಯಾಯಮಾರ್ಗ, ನೀತಿಮಾರ್ಗ, ಧರ್ಮ ಮಾರ್ಗ ಎನ್ನುವ ಮಾರ್ಗಗಳಿವೆ. ನಾವು ರಾಜಮಾರ್ಗ ಹಿಡಿದೆವು ಎಂದರು.