ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ಬೀದಿ ನಾಯಿಗಳ ಗಣತಿ ನಡೆಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಸಂತಾನ ಹರಣ ಚಿಕಿತ್ಸೆ ಆಗದೇ ಇದ್ದರೇ, ಸಮೀಕ್ಷೆ ಮೂಲಕ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 2019 ನೇ ಸಾಲಿನಲ್ಲಿ ಬಿಬಿಎಂಪಿಯಿಂದ ನಡೆದ ಸಮೀಕ್ಷೆಯಲ್ಲಿ ಸುಮಾರು 3.10 ಲಕ್ಷ ಬೀದಿ ನಾಯಿಗಳಿವೆ. ರೇಬಿಸ್ ರೋಗ ತಡೆಗಟ್ಟಲು ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲು ಪಾಲಿಕೆ ಮುಂದದಾಗಿದ್ದು, ಇಂದಿನಿಂದ ಗಣತಿದಾರರು ಬೈಕ್ ಮೇಲೇರಿ ನಗರದ ಬೀದಿ ಬೀದಿ ಸುತ್ತಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ 70 ಸಿಬ್ಬಂದಿ ಮತ್ತು ಬಿಬಿಎಂಪಿಯ 30 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿ ನಿಯೋಜಿಸಲಾಗಿದೆ. ಬಿಬಿಎಂಪಿ WVS ಸರ್ವೆ 2023 ಮೊಬೈಲ್ ಆ್ಯಪ್ ಮೂಲಕ ಬೀದಿ ನಾಯಿ ಸಮೀಕ್ಷೆ ನಡೆಸಲಾಗುತ್ತದೆ. ಮೊಬೈಲ್ ಆ್ಯಪ್‌ನಲ್ಲಿ ಬೀದಿ ನಾಯಿ ಫೋಟೋ ತಗೆದು ಫೋಟೋ ಅಪ್ಲೋಡ್ ಮಾಡಲಾಗುತ್ತದೆ. ಇನ್ನೂ ಬೀದಿ…
Author: Prajatv Kannada
ಬೆಂಗಳೂರು: ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿಲ್ಲ, ಉತ್ತಮ ಹಾಸ್ಟೆಲ್ ವ್ಯವಸ್ಥೆ ಇಲ್ಲ, ಗುಣಮಟ್ಟದ ಶೌಚಾಲಯ ಸೇರಿದಂತೆ ಅನೇಕ ಸೌಕರ್ಯಗಳಿಲ್ಲ ಎಂದು ಆರೋಪಿಸಿ.ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು ಎಂದು ತಿಳಿಯುವುದಾದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗಿದೆ ಎಂಬ ಉತ್ತರ ಸಿಗುತ್ತದೆ.ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಇದನ್ನು ಕೂಡ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಗರಂ ಆಗಿದ್ದಾರೆ.ಈ ಹಿನ್ನೆಲೆ ವಿವಿ ಆಡಳಿತ ಮಂಡಳಿ ವಿರುದ್ಧ ಹೋರಾಟಕ್ಕಿಳಿದ ವಿದ್ಯಾರ್ಥಿಗಳು
ಬೆಂಗಳೂರು: ವಿಧಾನಸಭೆಯಲ್ಲಿ ನಮಾಜ್ಗೆ ಅವಕಾಶ ಕೊಡೋ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿ ವಿಧಾನಸೌಧ ಏನ ಮೆಕ್ಕಾ ಮದೀನಾ ? ಇದನ್ನೆನು ಮೆಕ್ಕಾ ಮದೀನಾ ಅಂತಾ ತಿಳಿದುಕೊಂಡಿದ್ದೀರಾ ? ಇದು ಡೆಂಜರಸ್ ಮಾನಸಿಕತೆ. ವಿಧಾನಸೌಧ ಪವಿತ್ರ ದೇಗುಲ ಅಲ್ಲಿ ನಮಾಜ್ ಮಾಡ್ತೀರಾ ನೀವು. ಕಡತದಿಂದ ವಾಪಸ್ ಆ ಮಾತು ತಗಿಬೇಕು. ಅವರಿಗೆ ಶಿಕ್ಷೆಯಾಗಬೇಕು. ಇದೇ ಕೋಮುವಾದ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ವಿಧಾನಸೌಧದಲ್ಲಿ ನಮಾಜ್ ಗೆ ನಮಗೆ ವ್ಯವಸ್ಥೆ ಮಾಡಿಕೊಡಿ. ಒಂದು ಕೊಠಡಿ ಮೀಸಲಿಡಿ ಎಂದು ವಿಧಾನ ಪರಿಷತ್ ಸಭಾಪತಿಗಳಿಗೆ ಮನವಿ ಮಾಡಿದ್ದಾರೆ. ಈ ವೇಳೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸಭಾಧ್ಯಕ್ಷರ ಕೊಠಡಿಯಲ್ಲಿ ಸಭೆ ಕರೆದು ನಾಯಕರ ಮಾತುಗಳನ್ನು ಕೇಳಿ ಅಧ್ಯಕ್ಷರ ಅಪೇಕ್ಷೆಯಂತೆ ನಿರ್ಣಯ ಮಾಡಲು ಸರ್ಕಾರ ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಪೆನ್ಡ್ರೈವ್ನಲ್ಲಿ ಏನೂ ಇಲ್ಲ ಎಂದು ಬೆಂಗಳೂರು ನಗರದ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಅವರು ಖಾಲಿ ಪೆನ್ಡ್ರೈವ್ ತೋರಿಸಿ ಯಾಮಾರಿಸುತ್ತಿದ್ದಾರೆ. ಪೆನ್ಡ್ರೈವ್ ತೆಗೆದು ತೋರಿಸಿ ಮತ್ತೆ ಜೇಬಿಗೆ ಹಾಕಿಕೊಳ್ಳುತ್ತಾರೆ. ಒಂದು ವಾರದಿಂದ ಹೆಚ್.ಡಿ.ಕುಮಾರಸ್ವಾಮಿ ಇದನ್ನೇ ಮಾಡುತ್ತಿದ್ದಾರೆ. ಪೆನ್ಡ್ರೈವ್ನಲ್ಲಿ ಏನಾದರೂ ಇದ್ದರೆ ಇಷ್ಟೊತ್ತಿಗೆ ತೋರಿಸುತ್ತಿದ್ದರು ಎಂದರು. ಕಾಂಗ್ರೆಸ್ ನಾಯಕರು ದಮ್ಮು, ತಾಕತ್ ಇದ್ರೆ ಈಗಲೇ ಪೆನ್ ಡ್ರೈವ್ನಲ್ಲಿ ಏನಿದೆ ತೋರಿಸಲಿ ವಿಳಂಬ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು. ಪೆನ್ ಡ್ರೈವ್ ಇಟ್ಕೊಂಡು ಅವ್ರೇನಾದ್ರೂ ದಂಧೆ ಮಾಡ್ತಾ ಇದ್ದಾರಾ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಗಿರಾಕಿ ಅಂತ ಕಾಂಗ್ರೇಸ್ ನಾಯಕರು ವ್ಯಂಗ್ಯವಾಡ್ತಿದ್ದಾರೆ. ಸದನದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಯಾರ ವಿರುದ್ದ ಪೆನ್ ಡ್ರೈವ್ ಬಿಡುಗಡೆ ಮಾಡ್ತಾರೆ. ಯಾವ ಶಾಸಕ ಸಚಿವರ ರಾಜೀನಾಮೆ ಒತ್ತಾಯಿಸ್ತಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿದ್ರೆ. ಕಾಂಗ್ರೆಸ್ ನಾಯಕರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನಿಖೆ ಮಾಡಿಸ್ತೇವೆ ಅಂತ ತಿರುಗೇಟು ಕೊಡ್ತಿದ್ದಾರೆ ಎಲ್ಲದಕ್ಕು…
ವಿಧಾನಸಭೆ: ಶೂನ್ಯವೇಳೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಟ್ಟಿಗೆದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಉಚ್ಛಾಟನೆ ಮಾಡುತ್ತೇನೆ ಅಂತಾ ಹೇಳೋಕೆ ಇವರು ಯಾರು? ನಮ್ಮ ಪಕ್ಷದವರಲ್ಲ. ನಾನೇನು ಅವರ ಪಕ್ಷದಲ್ಲಿದ್ದೀನಾ? ಎಂದರು. ಗದ್ದಲದ ಮಧ್ಯೆ ಬೊಮ್ಮಾಯಿಯವರನ್ನು ಪದೇ ಪದೇ ಪ್ರತಿಪಕ್ಷ ನಾಯಕರೇ ಎಂದು ಕರೆದ ಸ್ಪೀಕರ್ ಖಾದರ್, ಕೊನೆಗೆ ಪ್ರತಿಪಕ್ಷ ನಾಯಕರಾಗಿಲ್ಲ ಎಂದ ಹೇಳಿದರು. ವಿಜಯಪುರ ಮಹಾನಗರ ಪಾಲಿಗೆ ಆಯುಕ್ತರ ವರ್ಗಾವಣೆ ವಿಚಾರವಾಗಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಎತ್ತಿದ ಆಕ್ಷೇಪ ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಸಚಿವ ಬೈರತಿ ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದರು. ನೀವು ವ್ಯಾಪಾರ ಮಾಡಿದ್ದೀರಿ, ನಾವು ಮಾಡಿಲ್ಲ ಎಂದರೆ ಹೇಗೆ? ನೀವು ಮಾತ್ರ ಸತ್ಯ ಹರಿಶ್ಚಂದ್ರರು ಅಂತಾನಾ? ಸುಮ್ಮನೆ ಏನೋ ಹೇಳ್ತಿರಲ್ವಾ? ಎಂದು ತಿರುಗೇಟು ನೀಡಿದರು.
ಧಾರವಾಡ: ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೇ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಇರುವ ಸೈಬನಕೊಪ್ಪ ಗ್ರಾಮದಲ್ಲಿ ನಡೆದಿದೆ. ಉಪ್ಪಿನ ಬೆಟಗೇರಿ ಗ್ರಾಮದ ಕಲ್ಲಪ್ಪ ಕುರಗುಂದ (55) ರೈತನೇ ಆತ್ಮಹತ್ಯೆ ಶರಣಾದ ರೈತನಾಗಿದ್ದಾನೆ. ಕೃಷಿ ಚಟುವಟಿಕೆಗಾಗಿ ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದ. ಅಲ್ಲದೇ ತನಗಿದ್ದ ಜಮೀನನ್ನು 7 ಲಕ್ಷ ರೂಪಾಯಿಗೆ ಲೀಸ್‌ನಲ್ಲಿ ಹಾಕಿಕೊಂಡಿದ್ದ. ಮಳೆಯಾಗದ ಕಾರಣ ಕೃಷಿ ಸಾಲ ತೀರಿಸಲಾಗದೇ ಹಾಗೂ ಲೀಸ್‌ನಲ್ಲಿದ್ದ ಹೊಲವನ್ನು ಬಿಡಿಸಿಕೊಳ್ಳಲಾಗದೇ ಕಲ್ಲಪ್ಪ ನೇಣಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಚಿಕ್ಕಮಗಳೂರು: ಜೈನ ಮುನಿ ಹತ್ಯೆ ವಿಚಾರವಾಗಿ ಬಿಜೆಪಿ ನಾಯಕರ ಬಳಿ ಮಾಹಿತಿ ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಆಗ್ರಹಿಸಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದರು. ಐಸಿಸ್ ನಿಂದ ಹತ್ಯೆಯಾಗಿದೆ ಅಂತಾ ಸಿದ್ದು ಸವದಿ ಹೇಳಿದ್ದಾರೆ. ನಿಮ್ಮ ಬಳಿ ಮಾಹಿತಿ ಇದ್ದರೆ ತನಿಖಾ ಏಜೆನ್ಸಿ ಗಳಿಗೆ ಕೊಡಿ ಎಂದು ಒತ್ತಾಯಿಸಿದರು. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಗೃಹ ಇಲಾಖೆ ಪಾರದರ್ಶಕ ತನಿಖೆ ನಡೆಸುತ್ತಿದೆ. ತನಿಖೆ ನಡೆಯುವಾಗ ಎಲ್ಲವನ್ನೂ ತೆರೆದಿಡಲು ಆಗಲ್ಲ, ಆದರೆ ಪ್ರಾಥಮಿಕ ತನಿಖೆಯಲ್ಲಿ ವೈಯಕ್ತಿಕ ಕಾರಣ ಎಂದು ತಿಳಿದುಬಂದಿದೆ ಎಂದರು. ಬಜೆಟ್ ಮಂಡನೆಯಾಗಿದೆ, ಸದನ ನಡೀತಿದೆ. ಆದ್ರೆ ನಿಮ್ಮ ವಿರೋಧ ಪಕ್ಷದ ನಾಯಕ ಎಲ್ಲಿದ್ದಾರೆ? ಇದು ಸದನಕ್ಕೆ ಕಪ್ಪುಚುಕ್ಕೆ ಎಂದರು. ಜೈನ ಮುನಿ ಹತ್ಯೆ ಸಿಬಿಐಗೆ ವಹಿಸುವ ವಿಚಾರವಾಗಿ ಮಾತನಾಡಿ, ತಮ್ಮ ತನಿಖಾ ಸಂಸ್ಥೆಗಳಿಗೆ ತನಿಖಾ ಸಾಮರ್ಥ್ಯ ಇಲ್ಲ ಅಂದು ಕೊಂಡಿದ್ದೀರಾ.? ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ. ರಾಜಕೀಯ…
ಬೆಂಗಳೂರು: ಶಾಲೆಗಳಲ್ಲಿ ವಾರಕ್ಕೆ 2 ಮೊಟ್ಟೆ ನೀಡಲು ನಿರ್ಧರಿಸಲಾಗಿದೆ. ವಾರಕ್ಕೆ 2 ಮೊಟ್ಟೆ ಕೊಡುವ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೆ. ಸಿಎಂ ಒಪ್ಪಿಗೆ ನೀಡಿ ವಾರಕ್ಕೆ 2 ಮೊಟ್ಟೆ ನೀಡಲು ಅನುಮೋದಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಿಂದಿನ ಸರ್ಕಾರ ವಾರದಲ್ಲಿ ಒಂದೇ ಮೊಟ್ಟೆ ಕೊಡ್ತಿತ್ತು. ಮೊಟ್ಟೆ, ಚಿಕ್ಕಿ ಬಾಳೆ ಹಣ್ಣು ಕೊಡೊವುದರಿಂದ ಮಾರ್ಜಿನಲ್ ಹೆಲ್ಪ್ ಆಗಿದೆ ಅಷ್ಟೇ. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಸಮಸ್ಯೆ ಮಾನ್ಯ ಮುಖ್ಯಮಂತ್ರಿಗಳಿಗೆ ಗೊತ್ತು. ಹೀಗಾಗಿ ನಾನು ಅವರ ಬಳಿ ಮನವಿ ಮಾಡಿದೆ ಎಂದರು.ನಾನು ಅಧಿಕಾರಕ್ಕೆ ಬಂದಾಗ ನನ್ನ ಕ್ಷೇತ್ರದಲ್ಲಿ 52 ಶಾಲೆಯಲ್ಲಿ ಶಿಕ್ಷಕರೇ ಇರಲಿಲ್ಲ. ಎಷ್ಟೋ ಪೋಷಕರು ಖಾಸಗಿ ಶಾಲೆಗೆ ಮಕ್ಕಳನ್ನ ಸೇರಿಸುತ್ತಾರೆ. ನಾವು ಮುಂದಿನ ಎಂಟು ತಿಂಗಳ ಒಳಗೆ ಕೆಲವೊಂದಿಷ್ಟು ಪ್ಲಾನ್ ಮಾಡಿಕೊಂಡಿದ್ದೇವೆ. ಈ ವ್ಯವಸ್ಥೆ ಯಾವ ತರ ನಡೆಯುತ್ತೆ ಅನ್ನೋದನ್ನ ನಾನು ಕೂಡ ಈಗ ತಿಳಿದು ಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಬೆಂಗಳೂರು: ನಟ ಸುದೀಪ್ ಮೇಲಾಗ್ತಿರೋ ನಿರಂತರ ಆರೋಪಗಳಿಂದ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ರೊಚ್ಚಿಗೆದ್ದಿದೆ. ಕೆಲ ನಿರ್ಮಾಪಕರು ಸುದೀಪ್ ಹೆಸರನ್ನ ಕೆಡಿಸೋ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ಸುದೀಪ್ ವಿಚಾರದಲ್ಲಿ ದೊಡ್ಡ ಪಿತೂರಿ ನಡಿತಿದೆ. ಇದನ್ನ ನಿಲ್ಲಿಸದೇ ಹೋದರೆ, ಅವರೆಲ್ಲರ ಮನೆಗಳ ಮುಂದೆಯೇ ಉಗ್ರ ಹೋರಾಟ ಮಾಡ್ತೀವಿ, ಧರಣಿ ಕೂರ್ತೀವಿ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಇದನ್ನ ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ ಸ್ವೀಕರಿಸಿದ್ರು. ಸುಖಾಸುಮ್ಮನೆ ತಮ್ಮ ನೆಚ್ಚಿನ ನಟ ಸುದೀಪ್ (Sudeep) ಅವರ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಸಿಡಿದೆದ್ದಿರುವ ಕಿಚ್ಚನ ಅಭಿಮಾನಿಗಳು ರಾಜ್ಯಾದ್ಯಂತ ಅಲ್ಲಲ್ಲಿ ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ಕೆಲ ಅಭಿಮಾನಿಗಳು ಜಮಾಯಿಸಿ, ನಿರ್ಮಾಪಕರಾದ ಕುಮಾರ್ ಮತ್ತು ರೆಹಮಾನ್ ವಿರುದ್ಧ ಘೋಷಣೆ ಕೂಗಿದರು. ಕುಮಾರ್ ಅವರ ಭಾವಚಿತ್ರಕ್ಕೆ ಚೆಪ್ಪಲಿ ಸೇವೆ ಮಾಡಿದ್ದಾರೆ.
ಬೆಂಗಳೂರು: ಟಿ. ನರಸೀಪುರದಲ್ಲಿ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಹತ್ಯೆ ಪ್ರಕರಣವನ್ನು ವಿಧಾನ ಪರಿಷತ್ನ ಶೂನ್ಯವೇಳೆಯಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಪ್ರಸ್ತಾಪಿಸಿದರು. ಉನ್ನತ ಮಟ್ಟದ ತನಿಖೆ ಹಾಗೂ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು. ಗೃಹ ಸಚಿವರು ಖುದ್ದು ಉತ್ತರ ನೀಡುವಂತೆ ಕೋಟ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದರು. ಗೃಹ ಸಚಿವರ ಸದನದಲ್ಲಿ ಇಲ್ಲದ ಕಾರಣ ಉತ್ತರ ಕೊಡಿಸುವುದಾಗಿ ಸಚಿವ ಕೆಎನ್ ರಾಜಣ್ಣ ತಿಳಿಸಿದರು. ಈ ವೇಳೆ ಸದನದಲ್ಲಿ ಗದ್ದಲವಾಯಿತು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು. ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಹಿಂದೆ ಯಾರ ಯಾರ ಕೈವಾಡ ಇದೆ ಅನ್ನೋದು ಬಯಲಾಗಬೇಕು. ಸಮಗ್ರ ತನಿಖೆ ಆಗಲಿ ಅಂತಾ ಸತ್ಯಶೋಧನಾ ಸಮಿತಿ ರಚಿಸಿದ್ದೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆಯಾಗಿದೆ. ಕಳೆದ ಒಂದು ತಿಂಗಳಿನಲ್ಲಿ 10-11 ಹತ್ಯೆಗಳಾಗಿವೆ ಎಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ…