Author: Prajatv Kannada

ಬೆಂಗಳೂರು: ರಾಜ್ಯ ಸರ್ಕಾರ ಬಹುನಿರೀಕ್ಷಿತ 2023-2024 ನೇ ಸಾಲಿನ ಬಜೆಟ್ ಮಂಡಿಸಿದೆ. ಈ ಬಾರಿಯ ಬಜೆಟ್ ರಾಜ್ಯದ ರೈತರಿಗೆ ನಿರಾಶೆ ತಂದಿದೆ ಹಾಗೆ ವ್ಯಾಪಾರಸ್ಥರು ರೈತರಿಂದ ಕೃಷಿ ಉತ್ಪನ್ನ ಖರೀದಿಸಿ ಹಣ ನೀಡದೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡಿದ್ದಾರೆ ಅವರಿಗೆ ನಾಯ ಕೊಡಿಸಿ ಎಂದು ವಿಧಾನಪರಿಷತ್ ಶಾಸಕರಾದ ಡಾ. ಟಿ. ಎ. ಶರವಣ ಅವರು ಕೃಷಿ ಸಚಿವರನ್ನು ಆಗ್ರಹಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಕೃಷಿಗೆ ಸಂಬಂಧಪಟ್ಟ ಬಜೆಟ್ ಮಂಡನೆಯ ಕುರಿತಂತೆ ಪ್ರಶ್ನಿಸಿದ ಅವರುದೊಡ್ಡ ದೊಡ್ಡ ಕೃಷಿ ಉತ್ಪನ್ನ ಕಂಪನಿಗಳು ವ್ಯಾಪಾರಸ್ಥರು ರೈತರಿಂದ ಕೃಷಿ ಉತ್ಪನ್ನ ಖರೀದಿಸಿ ಹಣ ನೀಡದೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡಿದ್ದಾರೆ ಇದಕ್ಕೆ ಪರಿಹಾರವೇನು ಮಾಡುತ್ತೀರಾ? ಅಂದ ಹಾಗೆ ದಾವಣಗೆರೆ, ರಾಯಚೂರು,ಬೆಳಗಾವಿ ಕಡೆಯ ನೂರಾರು ರೈತರು ತಮ್ಮ ಉತ್ಪನ್ನಗಳನ್ನು ಮಾರಿ ಹಣ ಇಲ್ಲದೆ ಕಂಗಾಲಾಗಿದ್ದಾರೆ. ಹೀಗೆ ಅನ್ಯಾಯವಾದ ರೈತರಿಗೆ ನ್ಯಾಯ ದೊರಕಿಸಲು ವರ್ತಕರಿಂದ ಮತ್ತು ಕಂಪನಿಗಳಿಂದ ಹಣ ಕೊಡಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವರನ್ನು ಪ್ರಶ್ನೆ ಮಾಡಿದರು.

Read More

ಬೆಂಗಳೂರು: ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯ ಹಿಂದೆ ಸಚಿವ ಎಚ್.ಸಿ.ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಕೈವಾಡವಿದೆಯೆಂದು ಚಕ್ರವರ್ತಿ ಸೂಲಿಬೆಲೆ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆತನೊಬ್ಬ ದಲಿತ ಕಾರ್ಯಕರ್ತನಾಗಿದ್ದು, ಆತನ ಸಾಮರ್ಥ್ಯದಿಂದ ತುಂಬಾ ಹೆಸರು ಮಾಡಿದ್ದ. ಆತ ಬೆಳೆದ ಎಂಬ ಕಾರಣಕ್ಕೆ ಮಹದೇವಪ್ಪ ಮಗ ಸುನೀಲ್‍ಬೋಸ್ ತನ್ನ ಸಹಚರರಿಂದ ಈ ಕೆಲಸ ಮಾಡಿಸಿದ್ದಾರೆ ಎಂದು ವೇಣುಗೋಪಾಲ್ ಮನೆಯವರು, ಸ್ನೇಹಿತರು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದರು ಹಾಗೆ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಫೋಟೋವೊಂದು ಈ ಕೊಲೆಗೆ ಕಾರಣನೇ ಅಲ್ಲ ಎಂದು ಅವರು ಹೇಳಿದ್ದಾರೆ. ವೇಣುಗೋಪಾಲ್‌ ಮೃತದೇಹವನ್ನು ನೋಡಲು ತೆರಳಿದ ಮೊದಲ ದಿನವೇ ಟಿ ನರಸಿಪುರದ ಸ್ನೇಹಿತರು ಈ ಕೃತ್ಯವನ್ನು ಸುನಿಲ್‌ ಬೋಸ್‌ ಕಡೆಯವರು ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಅಧಿಕೃತ ದಾಖಲೆಗಳು ಇಲ್ಲದೇ ಹೇಳುವುದು ಸರಿಯಲ್ಲ ಎಂದು ನಾನು ಹೇಳಲಿಲ್ಲ. ಆದರೆ ಈಗ ಸುನಿಲ್‌ ಬೋಸ್‌ ಜೊತೆಗೆ ಆರೋಪಿಗಳ ಇರುವ ಸಂಬಂಧ, ಫೋಟೋಗಳು ಎಲ್ಲವನ್ನು ನೋಡಿದಾಗ ಇದು ದೃಢವಾಗುತ್ತದೆ.…

Read More

ನಾಗಮಂಗಲ: ಆಸ್ಪತ್ರೆಯ ಒಳರೋಗಿಗಳಿಗೆ ಕೊಡುವ ಒಂದು ಮುದ್ದೆ ಸಾಂಬರ್ ಊಟಕ್ಕೆ 92 ರೂಪಾಯಿ ದುಬಾರಿ ವೆಚ್ಚ ತಿಳಿದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಶಾಕ್ ಆಗಿದ್ದಾರೆ. ನಾಗಮಂಗಲ ಪಟ್ಟಣದ ಜನರಲ್ ಆಸ್ಪತ್ರೆಗೆ ದಿಡೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು ಆಸ್ಪತ್ರೆಯ ವಾರ್ಡ್ ಗಳನ್ನ ಪರಿಶೀಲಿಸಿದರು ಈ ವೇಳೆ ಆಸ್ಪತ್ರೆ ಆಡಳಿತದ ಖರ್ಚು ವೆಚ್ಚದ ಕಡತ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಒಳ ರೋಗಿಗಳ ಊಟಕ್ಕೆ ದುಬಾರಿ ವೆಚ್ಚದ ಬಿಲ್ ಕಂಡು ಶಾಕ್ ಆಗಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ 10 ರೂಗೆ ಅನ್ನ ಸಾಂಬಾರ್ ಇದೆ. ನೀವ್ಯಾಕೆ 92 ರೂ ಕೊಡುತ್ತಿದ್ದೀರಿ, ನಾನು ಕೂಡ ಮುದ್ದೆ ತಿನ್ನುತ್ತೇನೆ ಒಂದು ಮುದ್ದೆಗೆ ರಾಗಿ ಮಿಲ್ ಮಾಡಿಸಿ ಹಿಟ್ಟು ತಂದು ಮುದ್ದೆ ಮಾಡಿದರೆ 15 ರೂ ಖರ್ಚಾಗುತ್ತದೆ ಆದರೆ ಇಲ್ಲಿ 92 ರೂ ನಿಗದಿ ಯಾಕೆ ಯಾರು ಈ ಟೆಂಡರ್ ಅನುಮೋದಿಸಿದ್ದು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಒಂದು ಬಾಳೆ ಹಣ್ಣು ಎಂಟು ರೂ! ನಾವು ಅಂಗನವಾಡಿಗೆ 6 ರೂಪಾಯಿ ಮೌಲ್ಯದಲ್ಲಿ…

Read More

ಗದಗ;- ಶಿವಮೊಗ್ಗ ಜಲಾಶಯದಲ್ಲಿ ಹೊರಹರಿವು ಹೆಚ್ಚಳವಾದ ಹಿನ್ನೆಲೆ ಗದಗನ ಹಮ್ಮಿಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಅನ್ನು ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಇದೀಗ 3.14 TMC ಸಾಮರ್ಥ್ಯ ಹೊಂದಿದೆ. 16,350 ಕ್ಯೂಸೆಕ್ಸ್ ಒಳಹರಿವು ಹೆಚ್ಚಳವಾದ ಹಿನ್ನೆಲೆ, ಬ್ಯಾರೇಜ್ ನಿಂದ 16350 ಹೊರಹರಿವು ಬಿಡಲಾಗಿದೆ. ಡ್ಯಾಂನ 26 ಗೇಟ್ ಗಳಲ್ಲಿ ಸದ್ಯ 06 ಗೇಟ್ ಗಳನ್ನ ಓಪನ್ ಮಾಡಲಾಗಿದ್ದು, ತುಂಗಭದ್ರಾ ನದಿಯ ಬ್ಯಾರೇಜ್ ತುಂಬಿ ಹರಿಯುತ್ತಿದೆ.

Read More

ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ. ಒ​ಕ್ಕ​ಲಿ​ಗ​ರನ್ನು ಅ​ವರು ದೂರ ಇ​ಡುತ್ತಾ ಬಂದಿ​ದ್ದಾರೆ. ಮತ್ತೆ ನಾನು ಎಂದೂ ಗೆ​ಲ್ಲಲ್ಲ ಎಂದು ಅಂದು​ಕೊಂಡಿ​ದ್ದರು. ಮಂಡ್ಯದ ಜನ ನನ್ನನ್ನು ಪಾ​ಪದ ಹು​ಡುಗ ಎಂದು ಗೆ​ಲ್ಲಿ​ಸಿ​ಬಿ​ಟ್ಟಿ​ದ್ದಾರೆ. ನಾನು ಈಗ ಮಂತ್ರಿ ಆ​ಗಿ​ದ್ದೇನೆ. ಅ​ದನ್ನು ಸ​ಹಿ​ಸಿಕೊಳ್ಳಲು ಕುಮಾರಸ್ವಾಮಿಗೆ ಕಷ್ಟಆ​ಗುತ್ತಿದೆ ಎಂದು ಕೃಷಿ ಸ​ಚಿವ ಎನ್‌.ಚ​ಲು​ವ​ರಾ​ಯ​ಸ್ವಾಮಿ ಆರೋಪಿಸಿದರು. ನಗರದಲ್ಲಿ ಸು​ದ್ದಿಗಾ​ರ​ರೊಂದಿಗೆ ಮಾ​ತ​ನಾ​ಡಿ, ನ​ಮ​ಗೇನೂ ಅ​ವ​ರ ಮೇಲೆ ದ್ವೇಷ ಇಲ್ಲ. ಆದರೆ, ಅ​ವ​ರಿಗೆ ನ​ಮ್ಮನ್ನು ಕಂಡರೆ ಆ​ಗು​ವು​ದಿಲ್ಲ. ಇ​ದನ್ನು ಹಳೇ ಮೈ​ಸೂರು ಭಾ​ಗದ ಜ​ನತೆ ಅರ್ಥ ಮಾ​ಡಿ​ಕೊ​ಳ್ಳು​ತ್ತಿ​ದ್ದಾರೆ. ನಾನು ಒ​ಕ್ಕ​ಲಿಗ ನಾ​ಯಕ ಎಂಬ ಕಾ​ರ​ಣಕ್ಕೆ ನನ್ನ ಮೇಲೆ ದ್ವೇಷ ಕಾ​ರು​ತ್ತಿ​ದ್ದಾರೆ ಎಂದು ಬೇ​ಸರ ವ್ಯ​ಕ್ತ​ಪ​ಡಿ​ಸಿದರು. ಮಾಜಿ ಪ್ರಧಾನಿ ದೇ​ವೇ​ಗೌ​ಡರು ಪ್ರ​ಧಾನಿಯಾ​ಗಿ​ದ್ದ​ವರು. ನಾ​ವೆಲ್ಲಾ ಅ​ವ​ರನ್ನು ಪ್ರೀತಿ ಮಾ​ಡು​ತ್ತೇವೆ. ಕು​ಮಾ​ರ​ಸ್ವಾಮಿ ದೇ​ವೇ​ಗೌ​ಡರ ಹೆ​ಸ​ರನ್ನು ತ​ರದೆ ರಾ​ಜ​ಕೀಯ ಮಾ​ಡು​ವು​ದಕ್ಕೆ ಆ​ಗು​ವುದಿಲ್ಲ. ಅ​ದ​ಕ್ಕಾಗಿ ನಿತ್ಯ ದೇ​ವೇ​ಗೌ​ಡ​ರ ಹೆ​ಸರೆತ್ತುತ್ತಾರೆ ಎಂದು ಪ್ರ​ಶ್ನೆಯೊಂದಕ್ಕೆ ಉ​ತ್ತ​ರಿ​ಸಿ​ದರು. ಸ​ದ​ನ​ದಲ್ಲಿ ನಾವು ದೇ​ವೇ​ಗೌ​ಡರ ಹೆ​ಸ​ರು ಬ​ಳ​ಸಿಲ್ಲ. ದೇ​ವೇ​ಗೌ​ಡರ ಹೆ​ಸ​ರು ಬ​ಳ​ಸು​ವ​ವರೇ…

Read More

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಲಕ್ಷ್ಮಿ’ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಇನ್ನೂ 4-5 ದಿನ ಕಾರಣಾಂತರಗಳಿಂದ ಯೋಜನೆ ಜಾರಿ ವಿಳಂಬ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ 3 ಯೋಜನೆ ಜಾರಿಗೊಳಿಸಿದ್ದೇವೆ. ನವೆಂಬರ್- ಡಿಸೆಂಬರ್​​ನಿಂದ ಯುವ ನಿಧಿ ಯೋಜನೆ ಜಾರಿಗೊಳಿಸುತ್ತೇವೆ ಎಂದರು.ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಲ್ಪ ಸಮಯ ಬೇಕಿದೆ. ಮನೆ ಕುಟುಂಬದ ಯಜಮಾನಿಗೆ 2 ಸಾವಿರ ರೂಪಾಯಿ ಹಾಕಬೇಕಿರುವುದರಿಂದ ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಯಾವಕಾಶ ಬೇಕಾಗಿದೆ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಆಗಸ್ಟ್ 16ರಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಅರ್ಜಿ ಸಲ್ಲಿಕೆ ವೇಳೆ ಎದುರಾಗುವ ನೂಕುನುಗ್ಗಲು ಎದುರಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು. ಕೆಲವು ಸಚಿವರು ಮತ್ತು ಅಧಿಕಾರಿಗಳು ಗ್ರಾಮ ಪಂಚಾಯಿತಿ ಮತ್ತು ನಾಡಕಚೇರಿ ಕೇಂದ್ರಗಳಲ್ಲಿನ ಬಾಪೂಜಿ ಸೇವಾ ಕೇಂದ್ರವನ್ನು ಕೂಡ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಯೋಜನೆಯನ್ನು ಹೆಚ್ಚು ಜನಸ್ನೇಹಿಯನ್ನಾಗಿ ಮಾಡಲು ಅರ್ಜಿ ಪ್ರಕ್ರಿಯೆಯು 4-5 ದಿನಗಳಿಂದ ವಿಳಂಬವಾಗಲಿದೆ ಎಂದರು.

Read More

ಬೆಂಗಳೂರು: ಕಲಾಪಕ್ಕೆ ನಗುತ್ತಾ ಸ್ಪೀಕರ್ ಯುಟಿ ಖಾದರ್​ ಸದನಕ್ಕೆ ಬಂದರು. ಸದನಕ್ಕೆ ಬಂದ ಕೂಡಲೇ ಏನು ಖುಷಿಯಾಗಿದ್ದೀರಿ ಎಂದು ವಿಪಕ್ಷ ಬಿಜೆಪಿ ಸದಸ್ಯರು ಕೇಳಿದರು. ಇದಕ್ಕೆ ಸ್ಪೀಕರ್​ ನಾನು ನಗುತ್ತಾ ಇದ್ದರೆ ನೀವು ನಗುತ್ತಾ ಇರುತ್ತೀರಿ. ನಾನು ಟೆನ್ಷನ್​ನಲ್ಲಿ ಇದ್ದರೇ ನೀವೂ ಟೆನ್ಷನ್​ನಲ್ಲಿ ಇರುತ್ತೀರಿ. ಅದಕ್ಕೆ ನಾನು ನಗುತ್ತಾ ಇರುತ್ತೇನೆ ಎಂದರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಮತ್ತು ಮೈಸೂರು ಜಿಲ್ಲೆ ಟಿ. ನರಸೀಪುರದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್​ ಕೊಲೆ ಪ್ರಕರಣವನ್ನು ಅಸ್ತ್ರವಾಗಿ ಬಳಸಲು ಹೊರಟಿರುವ ಬಿಜೆಪಿ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್​​ನಲ್ಲಿ ಧರಣಿ ನಡೆಸಲಿದೆ. ಬಿಜೆಪಿ ಹೀಗಾಗಿ ಈ ಎರಡೂ ಕೊಲೆಗಳನ್ನು ಖಂಡಿಸಿ ಇಂದು ವಿಪಕ್ಷ ಬಿಜೆಪಿ ಸದಸ್ಯರು ಉಭಯ ಸದನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Read More

ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಮತ್ತು ಮೈಸೂರು ಜಿಲ್ಲೆ ಟಿ. ನರಸೀಪುರದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್​ ಕೊಲೆ ಪ್ರಕರಣವನ್ನು ಅಸ್ತ್ರವಾಗಿ ಬಳಸಲು ಹೊರಟಿರುವ ಬಿಜೆಪಿ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್​​ನಲ್ಲಿ ಧರಣಿ ನಡೆಸಲಿದೆ. ಬಿಜೆಪಿ ಹೀಗಾಗಿ ಈ ಎರಡೂ ಕೊಲೆಗಳನ್ನು ಖಂಡಿಸಿ ಇಂದು ವಿಪಕ್ಷ ಬಿಜೆಪಿ ಸದಸ್ಯರು ಉಭಯ ಸದನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗಿದೆ. ರಾಜ್ಯಪಾರ ಭಾಷಣದ ಮೇಲೆ ಚರ್ಚೆ ಆರಂಭವಾಗಿದೆ. ನಿನ್ನೆ (ಜು.10) ಅಧಿವೇಶನ ಆರಂಭವಾಗುತ್ತಿದ್ದಂತೆ ಚಿಕ್ಕೋಡಿಯ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಮತ್ತು ಮೈಸೂರಿನ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣ ಸಾಕಷ್ಟು ಚರ್ಚೆಯಾಯಿತು. ವಿಪಕ್ಷ ಬಿಜೆಪಿ ನಾಯಕರು ಜೈನಮುನಿಯವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿದರು. ಅಲ್ಲದೇ ಪೊಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದರು.

Read More

ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸತ್ಯಾಸತ್ಯತೆ ಅರಿಯಲು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ನೇತೃತ್ವದ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಲಿದೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮ ಹಾಗೂ ರಾಯಬಾಗ ತಾಲೂಕಿನ ಕಟಕಬಾವಿಯ ಕಬ್ಬಿನ ಗದ್ದೆಗೆ  ಮಧ್ಯಾಹ್ನ 12 ಗಂಟೆಗೆ ನೀಡಲಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಮತ್ತು ಮೈಸೂರು ಜಿಲ್ಲೆ ಟಿ. ನರಸೀಪುರದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್​ ಕೊಲೆ ಪ್ರಕರಣವನ್ನು ಅಸ್ತ್ರವಾಗಿ ಬಳಸಲು ಹೊರಟಿರುವ ಬಿಜೆಪಿ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್​​ನಲ್ಲಿ ಧರಣಿ ನಡೆಸಲಿದೆ. ಬಿಜೆಪಿ ಹೀಗಾಗಿ ಈ ಎರಡೂ ಕೊಲೆಗಳನ್ನು ಖಂಡಿಸಿ ಇಂದು ವಿಪಕ್ಷ ಬಿಜೆಪಿ ಸದಸ್ಯರು ಉಭಯ ಸದನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Read More

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಸುಲಿಗೆಗೆ ಇಳಿಯುತ್ತಿದ್ದ ಮಂಗಳಮುಖಿಯರನ್ನ ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರ ಸುಲಿಗೆ ನೋಡಿದ್ರೆ ಜನರೇ ಶಾಕ್ ಆಗ್ಬೇಕು ಹೇಗೆ ಮಾಡ್ತಿದ್ರು ಅಂತೀರಾ ಹೇಳ್ತೀವಿ ಕೇಳಿ… ಬೆಳ್ಳಂಬೆಳಗ್ಗೆ 5 ಗಂಟೆಗೆ ಆಟೋ ಹತ್ತಿದ್ರೆ ಸಾಕು ಸಿಟಿ ತುಂಬಾ ರೌಂಡ್ಸ್ ಹಾಕಿಕೊಂಡು ಎಲ್ಲಂದರಲ್ಲಿ ಜನಗಳ ಹತ್ತಿರ ವಸೂಲಿ ಮಾಡುತ್ತಿದ್ದರು. ಸಿಗ್ನಲ್ ಗಳಲ್ಲಿ ನಿಲ್ಲೋಲ್ಲ, ಬಸ್ ಸ್ಟಾಪ್, ರಸ್ತೆ ಬದಿ ನಡೆಯೋರನ್ನ ಬಿಡ್ತಿರಲಿಲ್ಲ ದುಡ್ಡು ಕೊಡಿ ಕೊಡಿ ಎಂದು ಜನಗಳನ್ನ ಪೀಡಿಸುತ್ತಾ ಅವರು ಕೊಡುವ ತನಕ ಹಿಂಸೆ ಮಾಡುತ್ತಾ ಹಾಗೆ ಅವರ ಬಳಿ ಇದ್ದ ಚಿನ್ನ ಒಡವೆಗಳನ್ನು ಸಹ  ವಸೂಲಿ ಮಾಡಿಕೊಂಡು ಬೇರೆ ಕಡೆ ಸಾಗುತ್ತಿದ್ದರು. ಇತ್ತೀಚೆಗೆ ಕೊಡಿಗೆಹಳ್ಳಿ ಠಾಣ಻ ವ್ಯಾಪ್ತಿಯಲ್ಲಿ ಇವರ ಸುಲಿಗೆ ಹೆಚ್ಚಾಗಿದ್ದು ಜನರು ಬೇಸತ್ತು ಹೋಗಿದ್ದು ಈ ಹಿನ್ನೆಲೆಯಲ್ಲಿ ಠಾಣೆಗೆ ದೂರು ನೀಡಿದ್ದ ಜನ ಇದನ್ನ ಪರೀಕ್ಷಿಸಲು ಪೊಲೀಸರ ಗ್ಯಾಂಗೊಂದು ಮಫ್ತಿಯಲ್ಲಿ ತೊಡಗಿದ್ದರು ಈ ವೇಳೆ ಇಂದು ಬೆಳಗ್ಗೆ ಅವರ ವರ್ತನೆಯನ್ನು ಕಂಡು ರೆಡ್ ಹ್ಯಾಂಡ್ ಆಗಿ ಅರೆಸ್ಟ್…

Read More