ಬೆಂಗಳೂರು: ಇಂದಿರಾ ಕ್ಯಾಂಟಿನ್ನ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ 100 ಕೋಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ ಇಲ್ಲಿ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಬಿಬಿಎಂಪಿ ಮುಂದಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಭೇಟಿ ವೇಳೆ ಇಂದಿರಾ ಕ್ಯಾಂಟೀನ್ನಲ್ಲಿ ಹಚ್ಚಿನ ಹಣ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ಈಗ ಪ್ರತಿ ಇಂದಿರಾ ಕ್ಯಾಂಟೀನ್ಗೆ ಪಾಲಿಕೆ ಅಧಿಕಾರಿ ನೇಮಕ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.ಹಾಗೆ ಇಂದಿರಾ ಕ್ಯಾಂಟೀನ್ ಸಿಗಲಿದೆ ಹೈಟೆಕ್ ಸ್ಪರ್ಶ ಏನಂತೀರಾ ಇಲ್ಲಿದೆ ನೋಡಿ. ಆಗಸ್ಟ್ 1ರಿಂದ ಬದಲಾದ ರೂಪದಲ್ಲಿ ಇಂದಿರಾ ಕ್ಯಾಂಟೀನ್ಗಳು..! – ಹೊಸ ಟೆಂಡರ್, ಹೊಸ ಮೆನುವಿನೊಂದಿಗೆ ಕಾರ್ಯನಿರ್ವಹಿಸಲಿವೆ ಇಂದಿರಾ ಕ್ಯಾಂಟೀನ್ಗಳು – ಇಂದಿರಾ ಕ್ಯಾಂಟೀನ್ ಟೆಂಡರ್ಗೆ ಸರ್ಕಾರದಿಂದ ನಡಾವಳಿ ಸಿದ್ದ – ನಡಾವಳಿ ಸಿದ್ಧಪಡಿಸಿ ಬಿಬಿಎಂಪಿಗೆ ರವಾನೆ ಮಾಡಿರುವ ನಗರಾಭಿವೃದ್ಧಿ ಇಲಾಖೆ – ಸರ್ಕಾರದ ನಡಾವಳಿಯಂತೆ ಟೆಂಡರ್ ಡಾಕ್ಯುಮೆಂಟ್ಸ್ ತಯಾರಿಸ್ತಿರುವ ಬಿಬಿಎಂಪಿ – ವಲಯವಾರು ಟೆಂಡರ್…
Author: Prajatv Kannada
ಬೆಂಗಳೂರು: ಅನ್ನಭಾಗ್ಯ 2.0 ಯೋಜನೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗ್ತಿದೆ. ಇಂದು ಮೈಸೂರು, ಕೋಲಾರ ಫಲಾನುಭವಿಗಳ ಖಾಗೆತೆ ಹಣ ಜಮೆ ಮಾಡಲಾಯ್ತು.. 15 ದಿನದಲ್ಲಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ. ಯೆಸ್.. ಅನ್ನಭಾಗ್ಯ ಯೋಜನೆಗೆ ಸರ್ಕಾರ ಅಧಿಕೃತ ಚಾಲನೆ ಕೊಟ್ಟಿದೆ. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಹಾಗೂ ಡಿಸಿಎಂ ಇಬ್ಬರೂ ಡಿಬಿಟಿ, ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ನೀಡಿದ್ರು.. ಸಾಂಕೇತಿಕವಾಗಿ ಐದು ಬಿಪಿಎಲ್ ಕುಟುಂಬಸ್ಥರಿಗೆ ಹಣ ಬಿಡುಗಡೆ ಮಾಡಲಾಯ್ತು. ಮೊದಲ ದಿನ ಮೈಸೂರು ಹಾಗೂ ಕೋಲಾರದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಯ್ತು. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇರುವ ಕುಟುಂಬದ ಯುಜಮಾನನ ಖಾತೆಗೆ ಹಣ ವರ್ಗಾವಣೆಯಾಗಲಿದೆ. ನಾಳೆ ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ. ಹಂತ ಹಂತವಾಗಿ ಹದಿನೈದು ದಿನದೊಳಗೆ ಎಲ್ಲಾರ ಖಾತೆಗಳಿಗೆ ಹಣ ಹೋಗಲಿದೆ. ಐದು ಕೆಜಿ…
ಬೆಂಗಳೂರು: ವಿಧಾನಸಭೆಯಲ್ಲಿಂದು ಜೈನಮುನಿ ಹತ್ಯೆ ಪ್ರಕರಣ ದೊಡ್ಡದಾಗಿಯೇ ಸದ್ದುಮಾಡ್ತು.. ಹತ್ಯೆಯ ಹಿಂದೆ ದೊಡ್ಡವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸ್ತು.. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ರೂ ಓರ್ವ ಆರೋಪಿಯ ಬಗ್ಗೆ ಗುಟ್ಟು ಬಿಟ್ಟುಕೊಡ್ತಿಲ್ಲ.. ಇದು ಜನರ ಅನುಮಾನಕ್ಕೆ ಕಾರಣವಾಗಿದ್ದು, ಸಿಬಿಯು ತನಿಖೆಗೆ ಕೊಡುವಂತೆ ಪಟ್ಟು ಹಿಡಿಯಿತು.. ಇದ್ರಿಂದ ಸದನಲ್ಲಿ ದೊಡ್ಡ ಸದ್ದುಗದ್ದಲವೂ ಆಯ್ತು.. ವಿಧಾನಸಭೆಯಲ್ಲಿಂದು ಹಿರೆಕೊಡುಗೆಯ ಜೈನಮುನಿಯ ಹತ್ಯೆ ಪ್ರಕರಣ ದೊಡ್ಡ ಸದ್ದುಮಾಡ್ತು.. ಪ್ರಶ್ನೋತ್ತರದ ನಂತರ ಶೂನ್ಯವೇಳೆಯಲ್ಲಿ ಶಾಸಕ ಅಭಯ್ ಪಾಟೀಲ್ ವಿಷಯ ಪ್ರಸ್ತಾಪಿಸಿದ್ರು.. ದಿಗಂಬರ ಮುನಿಯ ಹತ್ಯೆ ಹಣಕಾಸಿನ ವಿಚಾರವಾಗಿ ಆಗಿದೆ ಅಂತ ಹೇಳಲಾಗ್ತಿದೆ.. ಬಂಧಿಸಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬರ ಹೆಸರನ್ನ ಮಾತ್ರ ಹೇಳ್ತಿದ್ದಾರೆ.. ಮತ್ತೊಬ್ಬ ಆರೋಪಿಯ ಹೆಸರನ್ನೇ ಹೇಳ್ತಿಲ್ಲ.. ತನಿಖೆ ಹಳ್ಳಹಿಡಿದಿದ್ದು, ಸತ್ಯಾಂಶ ಹೊರಬರುವುದಿಲ್ಲ ಅಂತ ಆಕ್ರೋಶ ಹೊರಹಾಕಿದ್ರು.. ಪ್ರಕರಣದ ಸತ್ಯಾಂಶ ಹೊರಬಾರಬೇಕಾದ್ರೆ ಸಿಬಿಐ ತನಿಖೆಗೆ ನೀಡಬೇಉ.. ಆಗ ಸತ್ಯಾಂಶ ಹೊರ ಬರಲಿದೆ ಹೀಗಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದ್ರು.. ಇದಕ್ಕೆ ಪೂರಕವಾಗಿ ಮಾಜಿ ಗೃಹ ಸಚಿವ ಅರಗ ಜ್ಙಾನೇಂದ್ರ,ಶಶಿಕಲಾ…
ಬೆಂಗಳೂರು: ಬೆಂಗಳೂರು ನಗರದ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದ್ದು, ರಾಬರಿಯಲ್ಲಿ ನಿಪುಣ ಖತರ್ನಾಕ್ ಆಸಾಮಿಯೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಸುಲ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿರುವ ಖತರ್ನಾಕ್ ಆಸಾಮಿ ಯಾಸರ್, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಾಬರಿ ಮಾಡ್ತಿದ್ದರು. ಸುಮಾರು ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಅಪ್ರಾಪ್ತನಾಗಿದ್ದನಿಂದಲೇ ಸುಲಿಗೆ ರಾಬರಿಯಲ್ಲಿ ನಿಪುಣನಾಗಿದ್ದ. ಇಂದು ಬೆಳಗ್ಗೆ ಆರೋಪಿಯನ್ನ ಹಿಡಿಯಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದ. ಪ್ಯಾಲೇಸ್ ರೋಡ್ ಬಳಿ ಪರಾರಿಗೆ ಯತ್ನಿಸಿದ್ದು, ಹಿಡಿಯಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಿಡಿದು ಅಟ್ಯಾಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಶೇಷಾದ್ರಿಪುರಂ ಇನ್ಸ್ ಪೆಕ್ಟರ್ ಅರೆಸ್ಟ್ ಮಾಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ;– ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ 4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ;- ವಿವಿಗೆ ನ್ಯಾಕ್ ಎ ಡಬಲ್ ಪ್ಲಸ್ ಬಂದಿದ್ದರೂ ವಿದ್ಯಾರ್ಥಿಗಳಿಗೆ ಕೊಡಬೇಕಿದ್ದ ಮೂಲ ಸೌಕರ್ಯ ಕೊಡದೇ ವಿವಿ ಸತಾಯಿಸುತ್ತಿದೆ ಅಂತ ವಿದ್ಯಾರ್ಥಿಗಳು ಆರೋಪಿಸಿದ್ದು, ವಿಶ್ವವಿದ್ಯಾಲಯದ ಸುಮಾರು 52 ವಿಭಾಗದ 3 ಸಾವಿರ ವಿದ್ಯಾರ್ಥಿಗಳು ಇಂದು ಸ್ವಯಂ ಪ್ರೇರಿತರಾಗಿ ತರಗತಿಗೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ. ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಸುಸ್ತಾಗಿದೆ ಎಂದು ವಿವಿ ವಿರುದ್ಧ ವಿದ್ಯಾರ್ಥಿಗಳ ಕಿಡಿ ಕಾರಿದ್ದಾರೆ. ಕೊಡಬೇಕಿರುವ ಮೂಲ ಸೌಕರ್ಯಗಳನ್ನ ಕೊಡದೇ ಬೆಂಗಳೂರು ವಿಶ್ವವಿದ್ಯಾಲಯದ ಸತಾತಿಯಿಸುತ್ತಿದೆ. ಯಾವುದೇ ಕಾರಣಕ್ಕೂ ಇವತ್ತು ತರಗತಿಗೆ ಹಾಜರಾಗುವುದಿಲ್ಲ, ವಿವಿ ವಿರುದ್ಧ ಪ್ರತಿಭಟನೆ ಮಾಡ್ತೀವಿ ಅಂತ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿಯೂ ಇಂದು ವಿದ್ಯಾರ್ಥಿಗಳು ಹಾಜರಾಗಲ್ಲ. ವಿಶ್ವವಿದ್ಯಾಲಯದ ವಿರುದ್ಧ ಸುಮಾರು 3 ಸಾವಿರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು;- ಲವರ್ ಬೇರೆ ಮದಯವೆಯಾಗುತ್ತಿದ್ದಾಳೆ ಎಂದು ತಿಳಿದ ಪಾಗಲ್ ಪ್ರೇಮಿ ಹುಡುಗಿ ಚಿಕ್ಕಪ್ಪನ ಬೈಕ್ ಗೆ ಬೆಂಕಿ ಹಚ್ಚಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಹರೀಶ್ ಎಂಬಾತನೇ ಮದುವೆ ಆಗ್ತಿದ್ದ ಹುಡುಗಿ ಚಿಕ್ಕಪ್ಪನ ಬೈಕ್ ಗೆ ಬೆಂಕಿ ಹಚ್ಚಿರುವ ಲವರ್ ಬಾಯ್ ಎಂದು ಗುರುತಿಸಲಾಗಿದೆ. ಹರೀಶನಿಗೆ ಕೀರ್ತಿ,ಸುಬ್ರಮಣಿ ಎಂಬ ಸ್ನೇಹಿತರು ಸಾಥ್ ಕೊಟ್ಟಿದ್ದರು. ಯಶವಂತಪುರ ಕ್ಷೇತ್ರದ ಕನ್ನಳ್ಳಿ ವೀರಭದ್ರಸ್ವಾಮಿ ದೇವಸ್ಥಾನದ ಬಳಿ ಮದುವೆ ವೇಳೆಯೇ ಎಂಟ್ರಿ ಕೊಟ್ಟ ಪಾಗಲ್ ಪ್ರೇಮಿ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಹುಡುಗಿ ಚಿಕ್ಕಪ್ಪನ ಬೈಕ್ ಸೇರಿ ದೇವಾಸ್ಥಾನದ ಪೂಜಾರಿ ಬೈಕ್ ಗೂ ಬೆಂಕಿ ಬಿದ್ದಿದೆ. ಘಟನೆಯಲ್ಲಿ 5 ಬೈಕ್ಗಳು ಬೆಂಕಿಗಾಹುತಿಯಾಗಿದೆ. ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಸಂಬಂಧ ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಪಾಗಲ್ ಪ್ರೇಮಿ ಹರೀಶ ಸೇರಿ ,ಕೀರ್ತಿ, ಸುಬ್ರಮಣಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ;- ಜನಸಾಮನ್ಯರಿಗೆ ಬಿಗ್ ಶಾಕ್ ಎದುರಾಗಿದ್ದು, ಸದ್ಯಕ್ಕೆ ಟೊಮೆಟೊ ಕಡಿಮೆ ಆಗಲ್ಲ. ರಾಜ್ಯ ಸೇರಿ ದೇಶಾದ್ಯಂತ ಟೊಮೆಟೊ ಬೆಲೆ 100 ರೂ. ಗಡಿ ದಾಟಿದ್ದು, ಇನ್ನೂ ಒಂದರಿಂದ ಎರಡು ತಿಂಗಳ ಕಾಲ ಟೊಮೆಟೊ ಬೆಲೆ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಹೊಸ ಬೆಳೆ ಬಂದ ಮೇಲೆ ಮಾತ್ರ ಬೆಲೆ ಕಡಿಮೆಯಾಗುವ ಸಂಭವವಿದ್ದು, ಈ ಹೊಸ ಬೆಳೆ ಬರಬೇಕಾದ್ರೆ ಒಂದರಿಂದ ಎರಡು ತಿಂಗಳು ಬೇಕು. ಹೀಗಾಗಿ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮಳೆ ಕೊರತೆಯಿಂದಾಗಿ ಟೊಮೆಟೊ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದ್ದು, ಉತ್ತರ ಪ್ರದೇಶ, ಚತ್ತೀಸ್ ಘಡ ರಾಜ್ಯಗಳಲ್ಲಿ ಟೊಮೆಟೊ ಬೆಳೆ ಈ ವರ್ಷ ಕಡಿಮೆಯಾಗಿದೆ. ಹೀಗಾಗಿ ಈ ಭಾಗಗಳಿಂದ ಕರ್ನಾಟಕಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಕರ್ನಾಟಕದಿಂದ ಈ ಭಾಗಗಳಿಗೆ ಟೊಮೆಟೊ ರಪ್ತು ಮಾಡುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ.
ಬೆಂಗಳೂರು ;– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಖಾಕಿ ಗುಂಡು ಸದ್ದು ಮಾಡಿದೆ. ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೇಸ್ ಬಳಿ ಖತರ್ನಾಕ್ ರಾಬರ್ ಯಾಸರ್ ಎಂಬಾತನ ಕಾಲಿಗೆ ಶೇಷಾದ್ರಿಪುರಂ ಪೊಲೀಸರಿಂದ ಗುಂಡು ಹಾರಿಸಲಾಗಿದೆ. ಸುಲ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿರುವ ಖತರ್ನಾಕ್ ಆಸಾಮಿ ಯಾಸರ್, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಾಬರಿ ಮಾಡ್ತಿದ್ದರು. ಸುಮಾರು ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಅಪ್ರಾಪ್ತನಾಗಿದ್ದನಿಂದಲೇ ಸುಲಿಗೆ ರಾಬರಿಯಲ್ಲಿ ನಿಪುಣನಾಗಿದ್ದ. ಇಂದು ಬೆಳಗ್ಗೆ ಆರೋಪಿಯನ್ನ ಹಿಡಿಯಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದ. ಪ್ಯಾಲೇಸ್ ರೋಡ್ ಬಳಿ ಪರಾರಿಗೆ ಯತ್ನಿಸಿದ್ದು, ಹಿಡಿಯಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಿಡಿದು ಅಟ್ಯಾಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಶೇಷಾದ್ರಿಪುರಂ ಇನ್ಸ್ ಪೆಕ್ಟರ್ ಅರೆಸ್ಟ್ ಮಾಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ;– ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬಿಳಗಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬೆಸ್ಕಾಂ ಕಚೇರಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ವ್ಯಾಪ್ತಿಯಲ್ಲಿಯೇ ಸುಮಾರು 40ಲಕ್ಷ ಜನ ಗ್ರಹಜ್ಯೋತಿ ಗೆ ನೋಂದಣಿ ಮಾಡಿದ್ದಾರೆ. ಎಲ್ಲಾ ಎಸ್ಕಾಂ ಗಳಿಂದ 1ಕೋಟಿ 3ಲಕ್ಷಕ್ಕೂ ಹೆಚ್ಚು ನೋಂದಣಿ ಆಗಿದೆ. ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರು , ಗ್ರಹಜ್ಯೋತಿ ಯೋಜನಗೆ ನೋಂದಣಿ ಕಡಿಮೆ ಯಾಗಿದೆ. ಮುಂದಿನ ದಿನಗಳಲ್ಲಿ ಸಚಿವರ ಗಮನಕ್ಕೆ ಈವಿಚಾರವನ್ನ ತರಲಾಗುವುದು. ಗ್ರಹಜ್ಯೋತಿ ನೋಂದಣಿ ಶಿಭಿರಗಳನ್ನ ಗ್ರಾಮಿಣ ಭಾಗದಲ್ಲಿ ಮಾಡಲು ಚಿಂತನೆ ನಡೆದಿದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬಿಳಗಿ ಮಾಹಿತಿ ನೀಡಿದ್ದಾರೆ.