Author: Prajatv Kannada

ಮಾಜಿ ಮಿಸ್​ ಸ್ವಿಟ್ಜರ್​ಲ್ಯಾಂಡ್ ಫೈನಲಿಸ್ಟ್ ನ ಭೀಕರವಾಗಿ ಹತ್ಯೆ ಮಾಡಲಾಗಿದೆ. 38 ವರ್ಷದ ಕ್ರಿಸ್ಟೀನಾ ಜೋಕ್ಸಿಮೊವಿಕ್​ರನ್ನ ಅವರ ಪತಿಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ರಿಸ್ಟೀನಾ ಅವರ ಮೃತದೇಹ ಅವರ ಮನೆಯ ಲಾಂಡ್ರಿಯಲ್ಲಿ ಫೆಬ್ರವರಿ 13 ರಂದು ಸಿಕ್ಕಿತ್ತು. ಪ್ರಕರಣವನ್ನು ತನಿಖೆ ಮಾಡಿದ ಸ್ಥಳೀಯ ಪೊಲೀಸರು ಕ್ರಿಸ್ಟೀನಾರ 41 ವರ್ಷದ ಪತಿಯು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಕ್ರಿಸ್ಟೀನಾ ಪತಿ ಥಾಮಸ್​ರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು. ವಿಚಾರಣೆಯಲ್ಲಿ ತನ್ನ ಪತ್ನಿಯನ್ನು ನಾನೇ ಹತ್ಯೆ ಮಾಡಿರುವುದಾಗಿ ಥಾಪಸ್ ಒಪ್ಪಿಕೊಂಡಿದ್ದಾನೆI. ಜೊತೆಗೆ ಅಲ್ಲಿನ ಫೆಡರಲ್ ಕೋರ್ಟ್ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಕ್ರಿಸ್ಟಿನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ವೇಳೆ ಆಕೆಯನ್ನು ಕತ್ತುಹಿಸುಕಿ ಕೊಲೆ ಮಾಡಲಾಗಿದೆ ಎಂದು ಬಯಲಾಗಿತ್ತು. ಕ್ರಿಸ್ಟೀನಾ ಮೃತದೇಹ ಸಿಕ್ಕ ಲಾಂಡ್ರಿ ರೂಮ್​ನಲ್ಲಿ ಚಿಕ್ಕ ಗರಗಸ, ಚಾಕೂ ಹಾಗೂ ದೊಡ್ಡದೊಂದು ಕತ್ತರಿ ಕೂಡ ಸಿಕ್ಕಿತ್ತು. ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಆಕೆಯ…

Read More

ಮುಂದಿನ 2025ರಿಂದ ಚೀನಾ ಸರ್ಕಾರ ನಿವೃತ್ತಿಯ ವಯಸ್ಸನ್ನು ಇನ್ನೂ 3 ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆದರೆ ಈ ಪಸ್ತಾವನೆಗೆ ಯುವ ಉದ್ಯೋಗಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಪುರುಷ ಕಾರ್ಮಿಕರ ಶಾಸನಬದ್ಧ ನಿವೃತ್ತಿ ವಯಸ್ಸನ್ನು 60 ರಿಂದ 63 ಕ್ಕೆ ಏರಿಸಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಮಹಿಳಾ ಕಾರ್ಮಿಕರಿಗೆ ಇದು 50 ಅಥವಾ 55 ವರ್ಷದಿಂದ 55 ಮತ್ತು 58 ವರ್ಷಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ನಿವೃತ್ತಿ ವಯಸ್ಸನ್ನು ಜನವರಿ 1, 2025 ರಿಂದ 15 ವರ್ಷಗಳಲ್ಲಿ ಕ್ರಮೇಣ ಹೆಚ್ಚಿಸಲಾಗುವುದು ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಚೀನಾದ ಯುವ ನಿರುದ್ಯೋಗವು ಜುಲೈನಲ್ಲಿ 17.1 ಪ್ರತಿಶತದಷ್ಟಿತ್ತು. ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಬಗ್ಗೆಯೂ ಕ್ಸಿನ್ ಜಿ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ನಿವೃತ್ತಿಯ ವಯಸ್ಸಿನ ವಿಸ್ತರಣೆ ಮಕ್ಕಳನ್ನು ಹೊಂದುವ ಬಗ್ಗೆ ಜನರು ಮರುಪರಿಶೀಲಿಸುವಂತೆ ಮಾಡುತ್ತದೆ, ಚೀನಾದ ವಯಸ್ಸಾದ ಜನಸಂಖ್ಯೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದು ಸಾಕಷ್ಟು ಮಂದಿ ಆಕ್ರೋಶ ಹೊರ ಹಾಕಿದ್ದಾರೆ. ಚೀನಾ ವೇಗವಾಗಿ…

Read More

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅರಾಮಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನ ವಾಸ ನಿತ್ಯ ನರಕವಾಗಿದೆ. ಸರಿಯಾಗಿ ಊಟ ತಿಂಡಿ ಸೇರದೆ, ನಿದ್ದೆ ಬರದೆ ದರ್ಶನ್ ಪರಿತಪಿಸುತ್ತಿದ್ದಾರೆ. ಇದರಿಂದ ಫುಲ್ ಟೆನ್ಷನ್ ಆದ ದಾಸ ಬಳ್ಳಾರಿ ಸೆಲ್​ನಲ್ಲಿ ಜೈಲು ಸಿಬ್ಬಂದಿ ವಿರುದ್ಧವೇ ಗರಂ ಆಗಿದ್ದಾರೆ. ದರ್ಶನ್ ರನ್ನು ಫುಲ್ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಇಡಲಾಗಿದ್ದು ಅಕ್ಕ ಪಕ್ಕದ ಸೆಲ್ ಗಳು ಖಾಲಿಯಾಗಿವೆ. ಇದರಿಂದಾಗಿ ದರ್ಶನ್ ಯಾರ ಜೊತೆಯೂ ಬೆರೆಯಲೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ದರ್ಶನ್ ಟಿ.ವಿಗಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ಆದರೆ ಜೈಲು ಸಿಬ್ಬಂದಿ ತಂದುಕೊಟ್ಟ ಟಿ.ವಿ ಕೂಡ ಸರಿಯಾಗಿ ವರ್ಕ್​ ಆಗ್ತಿಲ್ಲ. ಹೀಗಾಗಿ ಫುಲ್​ ಟೆನ್ಷನ್​ ಆಗಿರೋ ದರ್ಶನ್​, ಟಿ.ವಿ ವಿಚಾರಕ್ಕೆ ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡ್ಕೊಂಡಿದ್ದಾರೆ ಎನ್ನಲಾಗುತ್ತಿದೆ. ನಾನು ಆರೋಪಿ, ಅಪರಾಧಿಯಲ್ಲ ಎಂದಿರುವ ದರ್ಶನ್ ಅವರು ವಿಚಾರಣಾಧೀನ ಕೈದಿಗಳಿಗೆ ಟಿ.ವಿ ಕೊಡುವಂತೆ ಜೈಲು ನಿಯಮವೇ ಇದೆ. ಆದ್ರೂ ಕೊಡ್ತಿಲ್ಲ ಯಾಕೆ. ಅದಕ್ಕೂ ಕೋರ್ಟ್‌ಗೆ ಅಪ್ಲಿಕೇಷನ್ ಹಾಕ್ಬೇಕಾ ಅಂತ ದರ್ಶನ್​…

Read More

ಸ್ಟಾರ್ಸ್ ಗಳ ಹೊಸ ಸಿನಿಮಾ ಘೋಷಣೆ ಆದಾಗ ಅಭೀಮಾನಿಗಳ ಸಡಗರ ಮುಗಿಲು ಮುಟ್ಟುತ್ತದೆ. ಸಿನಿಮಾದ ಕುರಿತು ಹೊಸ ಹೊಸ ಅಪ್ ಡೇಟ್ ಗಳಿಗಾಗಿ ಕಾಯ್ತಿರ್ತಾರೆ. ಆದ್ರೆ ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರ ಹೊಸ ಸಿನಿಮಾ ಘೋಷಣೆ ಆಗ್ತಿದ್ದಂಗೆ ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ವಿಜಯ್  ನಟನೆಯ 69ನೇ ಸಿನಿಮಾವನ್ನು ಘೋಷಣೆ ಆಗಿದ್ದು ಈ ಸಿನಿಮಾವನ್ನು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಸಿನಿಮಾ ಘೋಷಣೆಯನ್ನು ವಿಜಯ್​ರ ಇತರೆ ಸಿನಿಮಾಗಳ ವಿಡಿಯೋ ತುಣುಕುಗಳನ್ನು ಬಳಸಿ ಮಾಡಲಾಗಿದೆ. ವಿಜಯ್ ನಟನೆಯ 69ನೇ ಚಿತ್ರವನ್ನು ಎಚ್ ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿಜಯ್ ಗೆ ಜೋಡಿಯಾಗಿ ಸಿಮ್ರಾಣ್ ಕಾಣಿಸಿಕೊಳ್ತಿದ್ದಾರೆ. ಸುಮಾರು 20 ವರ್ಷಗಳ ಬಳಿಕ ನಟಿ ಸಿಮ್ರನ್ ಜೊತೆ ವಿಜಯ್ ನಟಿಸುತ್ತಿದ್ದಾರೆ.

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ನಿತ್ಯ ನರಕವಾಗಿದೆ. ಬಳ್ಳಾರಿ ಜೈಲಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಚಾರ್ಜ್​ಶೀಟ್​ ಸಲ್ಲಿಕೆ ಆದ ಬಳಿಕ ದರ್ಶನ್ ಸ್ಥಿತಿ ಮತ್ತಷ್ಟು ಕಷ್ಟ ಆಗಿದೆ. ಜಾಮೀನು ಪಡೆಯುವ ಪ್ರಯತ್ನವೂ ಕೈಗೂಡುತ್ತಿಲ್ಲ. ಇದು ಕೊಲೆ ಆರೋಪ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುವುದಿಲ್ಲ. ಅಲ್ಲದೇ, ಈಗ ಅವರು ನ್ಯಾಯಾಂಗ ಬಂಧನದ ಅವಧಿ ಕೂಡ ವಿಸ್ತರಣೆ ಆಗಿರುವುದರಿಂದ ಬಳ್ಳಾರಿ ಜೈಲಿನಲ್ಲಿ ಮಾಂಸದೂಟ ನೀಡಿದರು ಸೇವಿಸದೆ ದರ್ಶನ್ ಮಂಕಾಗಿದ್ದಾರೆ. ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಮಾಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ಕೋರ್ಟ್​ಗೆ ಹಾಜರಾಗಿದ್ದು, ಸೆಪ್ಟೆಂಬರ್​ 17ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಆದ ಹಿನ್ನೆಲೆಯನ್ನು ದರ್ಶನ್​ ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ. ಜೈಲಿನ ಮೆನು ಪ್ರಕಾರ ಇಂದು ದರ್ಶನ್​ಗೆ ಮಟನ್ ಊಟ ನೀಡಲಾಯಿತು. ಜಾಮೀನು ಸಿಗದೇ ಟೆನ್ಷನ್​ ಆಗಿರುವ ದರ್ಶನ್​ ಮಟನ್​ ಊಟ…

Read More

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕವಲಗಿ ಗ್ರಾಮದ ಬಳಿ, ರೈತ ತೋಟದಲ್ಲಿದ್ದ ಒಣ ಮೇವನ್ನ ಜೋಡೆತ್ತಿನ ಬಂಡಿಯಲ್ಲಿ ಮನೆಗೆ ತರುವ ಸಂದರ್ಭದಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಬೆದರಿದ ಎತ್ತುಗಳು ಬಂಡಿ ಸಮೇತ ಪಕ್ಕದ ಬಾವಿಗೆ ಬಿದ್ದು ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.ತನ್ನ ಕೃಷಿ ಕಾರ್ಯಕ್ಕೆ ಬೆನ್ನಲುಬಾದ ಜೋಡೆತ್ತುಗಳನ್ನ ಕಳೆದುಕೊಂಡ ರೈತ ರಾಮಣ್ಣ ದಳವಾಯಿ ಕಣ್ಣಿರು ಹಾಕುವಂತಾಗಿದೆ. ರೈತನಿಗೆ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಸಹಾಯ ಹಸ್ತ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಲ್ಹಾರ ತಹಶೀಲ್ದಾರ ಹಾಗೂ ಪಿಎಸ್‌ಐ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read More

ಇಂದಿನ ದಿನದಲ್ಲಿ ಇಂಟರ್ನೆಟ್ ಪ್ರತಿ ಮನೆಯನ್ನು ತಲುಪಿದೆ. ಈ ಎಲ್ಲಾ ಅಗತ್ಯತೆಗಳು ಮತ್ತು ಅನುಕೂಲಗಳ ಕಾರಣದಿಂದಾಗಿ, ಜನರು ದಿನದ 24 ಗಂಟೆಗಳ ಕಾಲ Wi-Fi ರೂಟರ್ ಅನ್ನು ಆನ್​​ನಲ್ಲೇ ಇಡುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ರೂಟರ್ ಬಳಸುವಾಗ ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ ಎನ್ನುತ್ತಾರೆ ತಜ್ಞರು. https://youtu.be/4PnPEed7mWA?si=dawAT0UtG2wkJXC8 ಅಂತಹ ಒಂದು ವಿಷಯವೆಂದರೆ ರೂಟರ್ ಅನ್ನು ರಾತ್ರಿಯಿಡೀ ಆನ್ ಮಾಡುವುದು. ಇದನ್ನು ಬಹುತೇಕ ಎಲ್ಲರೂ ಮಾಡುತ್ತಾರೆ. ಇದರಲ್ಲಿ ತಪ್ಪೇನು? ಆದರೆ ರಾತ್ರಿ ಮಲಗುವವರೆಗೂ ಸ್ಮಾರ್ಟ್‌ಫೋನ್‌ನೊಂದಿಗೆ ಕಳೆಯುವವರು ವೈಫೈ ರೂಟರ್ ಅನ್ನು ಆಫ್ ಮಾಡದೆಯೇ ಬಿಡುತ್ತಾರೆ. ಇದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. ವೈಫೈ ಆನ್ ಆಗಿದ್ದರೆ ಆಗುವ ನಷ್ಟಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ. * ವೈ-ಫೈ ರೂಟರ್ ಅನ್ನು ರಾತ್ರಿಯಿಡೀ ಆನ್ ಮಾಡಿದರೆ, ಅದರಿಂದ ವಿದ್ಯುತ್ಕಾಂತೀಯ ವಿಕಿರಣವು ನಿರಂತರವಾಗಿ ಹೊರಸೂಸುತ್ತದೆ. ಇದರಿಂದ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು ಎನ್ನುತ್ತಾರೆ ತಜ್ಞರು. * ಮಲಗುವ ಜಾಗದ ಬಳಿ…

Read More

ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರು ಮಂದಿ ಬ್ರಿಟಿಷ್ ರಾಜತಾಂತ್ರಿಕರನ್ನು ರಷ್ಯಾ ಹೊರ ಹಾಕಿದೆ. ರಾಜತಾಂತ್ರಿಕರು ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೇಶದ ಗುಪ್ತಚರ ಸಂಸ್ಥೆ ಎಫ್ಎಸ್​ಬಿ ಆರೋಪಿಸಿದೆ. ಇದು ಈ ಮೂಲಕ ಮೊದಲೇ ಹದಗೆಟ್ಟಿರುವ ಮಾಸ್ಕೊ- ಯುಕೆ ಸಂಬಂಧಗಳು ಮತ್ತಷ್ಟು ಹಳಸಲು ಕಾರಣವಾಗಲಿದೆ. ರಷ್ಯಾಗೆ ಕಾರ್ಯತಂತ್ರದ ಸೋಲನ್ನು ಉಂಟುಮಾಡುವ ಪ್ರಯತ್ನವಾಗಿ ಯುಕೆ ರಷ್ಯಾದಲ್ಲಿ ವಿಧ್ವಂಸಕ ನೀತಿಗಳನ್ನು ಬೆಂಬಲಿಸಿದೆ ಮತ್ತು ಈ ಪ್ರಯತ್ನಗಳಿಗೆ ವಿದೇಶಾಂಗ ಮತ್ತು ಕಾಮನ್ವೆಲ್ತ್ ಕಚೇರಿಯ ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾ ನಿರ್ದೇಶನಾಲಯ (ಇಇಸಿಎಡಿ)ವು ನೇತೃತ್ವ ವಹಿಸಿದೆ ಎಂದು ಸಂಸ್ಥೆ ಹೇಳಿದೆ. ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಇಇಸಿಎಡಿ ಮೂಲಭೂತವಾಗಿ ಮಾಸ್ಕೋ ವಿರುದ್ಧ ಕೆಲಸ ಮಾಡುವ ವಿಶೇಷ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಅದರ ಉದ್ಯೋಗಿಗಳು ರಷ್ಯಾದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ಎಫ್​ಎಸ್​ಬಿ ಆರೋಪಿಸಿದೆ. ಈ ವಿಚಾರ ಮತ್ತು ಯುಕೆಯ ಇತರ ಪ್ರತಿಕೂಲ ಕೃತ್ಯಗಳ ಕಾರಣಕ್ಕಾಗಿ ರಷ್ಯಾದ ವಿದೇಶಾಂಗ…

Read More

ಬಿಗ್ ಬಾಸ್ ಮೂಲಕ ಖ್ಯಾತಿ ಘಳಿಸಿದ ನಟಿ ತನಿಷಾ ಕುಪ್ಪಂಡ ಸದ್ಯ ಉದ್ಯಮದ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ತನಿಷಾ ಖಾಸಗಿ ಯೂಟ್ಯೂಬ್ ಚಾಲನ್ ನಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ತನಿಷಾ ಇಷ್ಟಪಟ್ಟು ತೆಗೆದುಕೊಂಡ ಕಾರಿನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ನಾನು ಒಂದು  ಕಾರು ತೆಗೆದುಕೊಳ್ಳಲು 11 ವರ್ಷ ದುಡಿದಿದ್ದೇನೆ. ಅದು ಯಾರಪ್ಪನ ದುಡ್ಡು ಅಲ್ಲ. ಅದರ ಹೊರತಾಗಿಯೂ ಕಾರಿನ ಖರೀದಿ ಬಗ್ಗೆ ತುಂಬಾ ದೊಡ್ಡ ಕಥೆಯೇ ನಡೆದೋಯ್ತು ಎಂದಿದ್ದಾರೆ. ಸ್ನೇಹಿತ ಎಂದು ಹೇಳಿಕೊಂಡವನು ತಮಗೆ ಮಾಡಿದ ಅನ್ಯಾಯದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಕಾರು ತೆಗೆದುಕೊಳ್ಳುವ ಯೋಚನೆ ಮಾಡಿದೆ ಎಂಬುದು ನನ್ನ ಸೋ ಕಾಲ್ಡ್​ ಸ್ನೇಹಿತನಿಗೆ ಗೊತ್ತಾಯ್ತು. ಹಣವನ್ನು ಆಮೇಲೆ ಇಎಂಐ ಮೂಲಕ ಕೊಡು, ಈಗ ನಾನು ದುಡ್ಡು ಕೊಟ್ಟಿರುತ್ತೇನೆ ಎಂದ. ನಾನೂ ಒಪ್ಪಿದೆ. ಸಾಮಾನ್ಯವಾಗಿ ಆಭರಣಗಳನ್ನು ಇದೇ ರೀತಿ ತೆಗೆದುಕೊಳ್ಳುವುದು. ಅದಕ್ಕಾಗಿಯೇ ಇದನ್ನು ಒಪ್ಪಿಕೊಂಡುಬಿಟ್ಟೆ. ಆದರೆ ಆಮೇಲೆ ಆದದ್ದೇ ಬೇರೆ. ಅವನು ಮೊದಲು ನನ್ನ…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರ ನ್ಯಾಯಾಂಗ ಬಂಧನ ಅವಧಿ ಸೆ.17ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. https://youtu.be/9TR4EWi6IjI?si=JuTf99NUDvbg6_It ಇಂದು ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಪವಿತ್ರಾ ಗೌಡ, ದರ್ಶರ್ನ್‌ ಸೇರಿದಂತೆ ಎಲ್ಲಾ ಆರೋಪಿಗಳ ಹೆಸರನ್ನು ನ್ಯಾಯಾಧೀಶರು ಕರೆದಾಗ ಆರೋಪಿಗಳು ಎಸ್‌ ಸರ್‌ ಎಂದು ಹೇಳಿ ವಿಚಾರಣೆಗೆ ಹಾಜರಾಗಿರುವುದನ್ನು ದೃಢೀಕರಿಸಿದರು. ಈ ವೇಳೆ ಸಂಪೂರ್ಣ ಚಾರ್ಜ್‌ಶೀಟ್‌ ನೀಡಬೇಕು. ಎಲೆಕ್ಟ್ರಾನಿಕ್ಸ್‌ ಸಾಕ್ಷ್ಯಗಳನ್ನು ಒಂದು ವಾರದಲ್ಲಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಆದರೆ ಇನ್ನೂ ನೀಡಿಲ್ಲ ಎಂದು ಆರೋಪಿಗಳ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ CrPC ಸೆಕ್ಷನ್ 164 ಹೇಳಿಕೆಯನ್ನು ಸರ್ಟಿಫೈ ಕಾಪಿ ಕೊಡುವಂತೆ ದರ್ಶನ್‌, ಪವಿತ್ರಾ ಗೌಡ ಸಹಾಯಕ ಈ ಪ್ರಕರಣದಲ್ಲಿ ಎ9 ಆರೋಪಿಯಾಗಿರುವ ರಾಜನ ಪರ ವಕೀಲರು ಕೋರ್ಟ್‌ನಲ್ಲಿ ಮನವಿ ಮಾಡಿದರು. ಇದಕ್ಕೆ…

Read More