ಟೊಮ್ಯಾಟೊ ಅಂದ್ರೆ ಸಾಕು ಜನ ಕಣ್ ಕಣ್ ಬಿಟ್ಕೊಂಡು ನೋಡೊಹಾಗಾಗಿದೆ.ಯಾಕಂದ್ರೆ ಬೆಲೆ ಗಗನಕ್ಕೇರಿದೆ.ಆದ್ರೆ ಅದೇ ಟೊಮ್ಯಾಟೊ ತುಂಬಿದ ಬೊಲೆರೊ ವಾಹನವನ್ನೇ ಖದೀಮರು ಹೈಜಾಕ್ ಮಾಡಿದ್ದಾರೆ.ಲಕ್ಷಾಂತರ ಮೌಲ್ಯದ ಟೊಮ್ಯಾಟೊ ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ.ಅದೇ ಕೇಸ್ ನ ಹಿಂದೆ ಪೊಲೀಸರು ಬಿದ್ದಿದ್ದು,ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಹತ್ತಲ್ಲ..ಇಪ್ಪತ್ತಲ್ಲ..ಟೊಮ್ಯಾಟೊ ಬೆಲೆ ನೂರರ ಗಡಿ ದಾಟಿದೆ.ಬಡವರು ಹೇಗಪ್ಪ ಟೊಮ್ಯಾಟೊ ಖರೀದಿಸೋದು ಅನ್ನೋ ಚಿಂತೆಯಲ್ಲಿದ್ದಾರೆ.ಇದು ಗ್ರಾಹಕರ ಕಥೆಯಾದ್ರೆ ಲಕ್ಷ ಲಕ್ಷ ಬೆಲೆ ಟೊಮ್ಯಾಟೊ ಮಾಲನ್ನು ಹೇಗಪ್ಪಾ ಮಾರುಕಟ್ಟೆಗೆ ತಲುಪಿಸೋದು ಅನ್ನೋ ಚಿಂತೆ ವ್ಯಾಪಾರಸ್ಥನ್ನ ಕಾಡ್ತಿದೆ. ಯಾಕಂದ್ರೆ ಲಕ್ಷ ಲಕ್ಷ ಬೆಲೆ ಬಾಳೊ ಟೊಮ್ಯಾಟೊ ತುಂಬಿದ್ದ ವಾಹನವನ್ನೇ ಖದೀಮರು ಹೈಜಾಕ್ ಮಾಡಿದ್ದಾರೆ. ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮೊಟೊ ತುಂಬಿದ್ದ ಬೊಲೋರೊ ವಾಹನವನ್ನ ಹೈಜಾಕ್ ಮಾಡಿದ್ದಾರೆ.ಜುಲೈ 9 ರಂದು ಈ ಘಟನೆ ನಡೆದಿದ್ದು ಈ ಸಂಬಂಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ̤ ಹಿರಿಯೂರಿನ ರೈತ ಮಲ್ಲೇಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ…
Author: Prajatv Kannada
ಬೆಂಗಳೂರು ;– ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂಪಾಯಿ ನೆರವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ 5 ಯೋಜನೆಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ರಾಜಕೀಯ ಕೂಡ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ನೀಡಿ ಕೇಂದ್ರ ಸರ್ಕಾರ ತನ್ನ ಹೃದಯ ಶ್ರೀಮಂತಿಕೆ ಮೆರೆಯಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ ಎಂದು ಟೀಕಿಸಿದರು. ಆಹಾರ ಭದ್ರತೆ ಕಾಯ್ದೆ ತಂದವರು ಯಾರು?. ಏಕೆ ತಂದರು ಎಂದು ಅರಿಯಬೇಕು. ದೇಶವನ್ನು ಹಸಿವುಮುಕ್ತ ಮಾಡುವ ಉದ್ದೇಶದಿಂದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ಬಡ ಜನರಿಗೆ ಆಹಾರ ಧಾನ್ಯ ನೀಡುವುದನ್ನು ಸಂವಿಧಾನದ ಹಕ್ಕಾಗಿ ತಂದಿದ್ದನ್ನು ನೆನಪಿಸಿಕೊಳ್ಳಬೇಕು. ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷೆಯಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಜಾರಿಗೆ ತರಲಾಗಿತ್ತು. ಆದರೆ, ಬಿಜೆಪಿಯ ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಯೋಜನೆ ಜಾರಿ ಮಾಡಿದೆ ಎಂದು…
ಬೆಂಗಳೂರು ;– 9 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಯುಷ್ಯ ಇಲಾಖೆಯ ಆಯುಕ್ತರಾಗಿದ್ದ ಮಂಜುನಾಥ್ ಅವರನ್ನು ಸರ್ವೇ ಇತ್ಯರ್ಥ ಮತ್ತು ಭೂಮಿ ದಾಖಲೆಗಳ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀಮತಿ ಸತ್ಯಭಾಮ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದ ಶ್ರೀಮತಿ ಶಿಲ್ಪ ನಾಗ ಅವರನ್ನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಲಾಗಿದೆ. ಬಾಗಲಕೋಟೆಯ ಜಿಲ್ಲಾ ಪಂಚಾಯತಿ ಸಿಇಓ ಆಗಿದ್ದ ಭೂಬಲನ್ ಅವರನ್ನು ವಿಜಯಪುರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ. ತುಮಕೂರಿನ ನಗರಸಭೆಯ ಆಯುಕ್ತರಾಗಿದ್ದ ದರ್ಶನ ಹೆಚ್ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದ ಅನುರಾಧ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಓ ಆಗಿ ವರ್ಗಾವಣೆ ಮಾಡಲಾಗಿದೆ. ರಾಜ್ಯದ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀಮತಿ ಪದ್ಮ ಬಸವಂತಪ್ಪ…
ವೀಕೆಂಡ್ ನಲ್ಲಿ ಮೋಜು ಮಸ್ತಿ ಮಾಮೂಲಿ.ಆದ್ರೆ ನಶೆಯಲ್ಲಿ ಕಾರ್ ಹತ್ತಿ ಬಂದ್ರೆ ಮುಗೀತು.ಹೇಗೆ ಹೋಗ್ತೊದ್ದಿವಿ ಅನ್ನೋ ಪರಿವೇ ಇರೋದಿಲ್ಲ.ಹೀಗೆ ಕುಡಿದ ಮತ್ತಲ್ಲಿ ಕಾರು ಹತ್ತಿ ಬಂದವರು ಅವಾಂತರ ಮಾಡಿಕೊಂಡಿದ್ದಾರೆ.ಒಂದು ಕಡೆ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದ್ರೆ..ಮತ್ತೊಂದೆಡೆ ಮರಕ್ಕೆ ಗುದ್ದಿದೆ.ಅಪಘಾತದ ದೃಶ್ಯ ಭಯಾನಕವಾಗಿದೆ. ಮಧ್ಯ ರಾತ್ರಿಯ ಸಮಯ..ಡಿವೈಡರ್ ಡಿಕ್ಕಿ ಹೊಡೆದ ಕಾರು..ಕುಡಿದ ಮತ್ತಲ್ಲಿ ಯುವತಿಯ ರಂಪಾಟ..ಪೊಲೀಸರ ಜೊತೆಗೆ ವಾಗ್ವಾದ..ಇದು ಒಂದು ಕಡೆಯ ದೃಶ್ಯವಾದ್ರೆ ಮತ್ತೊಂದು ಕಡೆಯ ವಿಡಿಯೋ ಭಯಾನಕವಾಗಿದೆ..ಕುಡಿದ ಮತ್ತಲ್ಲಿ ಕಾರು ಹತ್ತಿ ಬಂದವರು ಸೀದಾ ಸೀದಾ ಬಂದು ಮರಕ್ಕೆ ಡಿಕ್ಕಿ ಹೊಡೆದಿದ್ದು.. ಡಿಕ್ಕಿ ರಭಸಕ್ಕೆ ಮರ ಸಂಪೂರ್ಣ ನೆಲಕ್ಕುರುಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ. ಪಾರ್ಟಿ ಪಬ್ಬು ಅಂತಾ ಓಡಾಡೋರ ಸಂಖ್ಯೆಗೇನು ಕಮ್ಮಿ ಇರಲ್ಲ.ಕಂಠ ಪೂರ್ತಿ ಕುಡಿದು ವಾಲಾಡೋರಿಗೇನು ಬರವಿರಲ್ಲ..ಆದ್ರೆ ಕುಡಿದ ಮತ್ತಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದವರು ಅವಾಂತರ ಮಾಡಿಕೊಂಡಿದ್ದಾರೆ.ಆಗಿದ್ದೇನಂದ್ರೆ ನಿನ್ನೆ ಮಧ್ಯ ರಾತ್ರಿಯ ಸಮಯ..ಪಶ್ಚಿಮ ಬಂಗಾಳದ ಇಬ್ಬರು ಯುವತಿಯರು ಹಾಗೂ ಓರ್ವ ಯುವಕ..ಕುಡಿದು ಕಾರಲ್ಲಿ ಹೋಗ್ತಿದ್ರು..ಆಡುಗೋಡಿ ಪಾಸ್…
ಸೂರ್ಯೋದಯ: 06.00 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ನವಮಿ 06:04 PM ತನಕ ನಂತರ ದಶಮಿ ನಕ್ಷತ್ರ: ಇವತ್ತು ಅಶ್ವಿನಿ 07:04 PM ತನಕ ನಂತರ ಭರಣಿ ಯೋಗ: ಇವತ್ತು ಸುಕರ್ಮಾ10:53 AM ತನಕ ನಂತರ ಧೃತಿ ಕರಣ: ಇವತ್ತು ತೈತಲೆ 06:19 AM ತನಕ ನಂತರ ಗರಜ 06:04 PM ತನಕ ನಂತರ ವಣಿಜ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 11.51 AM to 01.27 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:55 ನಿಂದ ಮ.12:47 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ,…
ಆನೇಕಲ್ ;– ಹೃದಯಾಘಾತ ಹಿನ್ನೆಲೆ ಇಸ್ರೋ ಮಾಜಿ ಆಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರನ್ನು ಶ್ರೀಲಂಕಾದಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆತರಲಾಯಿತು. ಸದ್ಯ ಕಸ್ತೂರಿ ರಂಗನ್ ಅವರನ್ನು ಏರ್ಲಿಫ್ಟ್ ಮೂಲಕ ಕೊಲಂಬೊದಿಂದ ಬೆಂಗಳೂರಿಗೆ ಕರೆತರಲಾಗಿದ್ದು, ಸಂಜೆ 5.30ಕ್ಕೆ HAL ಏರ್ಪೋರ್ಟ್ ಗೆ ಆಗಮಿಸಿದ್ದರು. ಬಳಿಕ ಝೀರೋ ಟ್ರಾಫಿಕ್ ಮೂಲಕ ನಾರಾಯಣ ಹೃದಯಾಲಯಕ್ಕೆ ಆಗಮಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು;– ರಾಜಕೀಯವಾಗಿ ರಾಹುಲ್ ಗಾಂಧಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಹುಲ್ ಗಾಂಧಿ ಜನಪ್ರಿಯತೆಯನ್ನು ನೋಡಿ ಷಡ್ಯಂತ್ರ ನಡೆಯುತ್ತಿದೆ. ರಾಹುಲ್ ಪಾದಯಾತ್ರೆ ಮಾಡಿದ ಕ್ಷೇತ್ರಗಳಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದರು. ರಾಹುಲ್ ಗಾಂಧಿ ಬೆಂಬಲಿಸಿ ಬುಧವಾರ ಫ್ರೀಡಂಪಾರ್ಕ್ನಲ್ಲಿ ಮೌನ ಪ್ರತಿಭಟನೆ ಮಾಡಲಿದ್ದೇವೆ. ಸಿಎಂ ಸೇರಿ ಎಲ್ಲಾ ಶಾಸಕರು ಭಾಗಿಯಾಗಲಿದ್ದಾರೆ ಎಂದರು. ಎಲ್ಲ ವಿರೋಧ ಪಕ್ಷದವರು ರಾಹುಲ್ ಪರ ನಿಲ್ಲುತ್ತಿದ್ದೇವೆ ಎನ್ನುವ ಸಂದೇಶ ಕಳಿಸಬೇಕಿದೆ. ರಾಹುಲ್ ಕರ್ನಾಟಕದಲ್ಲಿ ಮಾಡಿದ್ದ ಭಾಷಣಕ್ಕೆ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುವುದಿಲ್ಲ. ಭಾರತ್ ಜೋಡೋ ಯಾತ್ರೆಯಲ್ಲಿ ಅವರು ನಡೆದ ಶಕ್ತಿಯಿಂದಾಗಿ ಕರ್ನಾಟಕಕ್ಕೂ ಶಕ್ತಿ ಬಂತು. ರಾಹುಲ್ ನಡೆದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಅವರು ಎಲ್ಲೆಲ್ಲಿ ಹೆಜ್ಜೆ ಹಾಕಿದ್ದರೋ ಅಲ್ಲೆಲ್ಲಾ ಗೆದ್ದು ಶಕ್ತಿ ಬಂದಿದೆ ಎಂದು ಹೇಳಿದರು.
ಬೆಂಗಳೂರು ;- ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಶಾಸಕರಾದ ಡಾ. ಟಿ. ಎ. ಶರವಣ ಅವರು ಒತ್ತಾಯಿಸಿದ್ದಾರೆ. ವಿಧಾನಮಂಡಲದ ಅಧಿವೇಶನದಲ್ಲಿ ಇಂದು ವಿಷಯ ಪ್ರಸ್ತಾಪಿಸಿ ಬೆಳಗಾವಿ ಜಿಲ್ಲೆಯ ಜೈನಮುನಿ ಕಾಮಕುಮಾರನಂದಿ ಮಹಾರಾಜ ಅವರ ಪಾರ್ಥಿವ ಶರೀರವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆಯಲಾಗಿತ್ತು. ಈ ಹೃದಯ ವಿದ್ರಾವಕ ಘಟನೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ವಿಧಾನಮಂಡಲದ ಅಧಿವೇಶನದಲ್ಲಿ ಸಚಿವರಾದ ಎಚ್.ಕೆ ಪಾಟೀಲ್ ಅವರಿಗೆ ಮನವಿ ಮಾಡಿದರು. ಇನ್ನೂ ಗೌರವಯುತ ಸ್ಥಾನದಲ್ಲಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪ್ರಕರಣದ ಬಗ್ಗೆ ನಿರ್ಲಕ್ಷದ ಹೇಳಿಕೆ ನೀಡಿ ಪ್ರಕರಣದ ದಿಕ್ಕು ತಪ್ಪಿಸಬಾರದು, ಈ ರೀತಿಯ ಹೇಳಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಕೈ ಕಟ್ಟಿದಂತಾಗುತ್ತದೆ ಎಂದು ತಿಳಿಸಿದರು. ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೆ ನಿಷ್ಪಕ್ಷಪಾತವಾದ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಈ ವೇಳೆ…
ಬಾಗಲಕೋಟೆ: ಶ್ರವಣಬೆಳಗೊಳದ ಗೊಮ್ಮಟೇಶ್ವರ (Gommateshwara) ದೇವಸ್ಥಾನದ 700 ಮೆಟ್ಟಿಲುಗಳನ್ನು ಹಾಗಿಯೇ ಹತ್ತುವುದು ಕಷ್ಟ. ಅಂತದರಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಸಾಗುವುದು ಎಂದರೆ ಇನ್ನು ಕಷ್ಟ. ಆದರೆ 41 ನಿಮಿಷದಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಬೆಟ್ಟದ ಹತ್ತುವ ಮೂಲಕ ವ್ಯಕ್ತಿ ಓರ್ವರು ಸಾಹಸ ಮೇರೆದಿದ್ದಾರೆ. ಜಿಲ್ಲೆಯ ಹುನ್ನೂರ ಗ್ರಾಮದ 43 ವರ್ಷದ ಹನಮಂತ ಪರಸಪ್ಪ ಸರಪಳಿ ಆ ಸಾಹಸಿಗ. ವೃತ್ತಿಯಲ್ಲಿ ಕೃಷಿಕರಾಗಿರುವ ಹನಮಂತನ ರಾಜ್ಯದ ಅತಿ ಎತ್ತರದ ಬೆಟ್ಟವನ್ನು ಜೋಳದ ಚೀಲ ಹೊತ್ತು ಸಾಗುವ ತಮ್ಮ ಆಶಯ ಈಡೇರಿಸಿಕೊಂಡಿದ್ದಾರೆ.
ಭಾರತದಲ್ಲಿ ಅಕ್ಟೋಬರ್–ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡ ಭಾಗವಹಿಸುವುದಿಲ್ಲವಾ? ಈ ಪ್ರಶ್ನೆಗೆ ಇದುವರೆಗೆ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಉತ್ತರ ನೀಡಿಲ್ಲ. ಇದರ ನಡುವೆ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಭಾಗವಹಿಸುವಿಕೆಯನ್ನು ಖಚಿತ ಪಡಿಸಲು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೇತೃತ್ವದ ಸಮಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ರಚಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧದಿಂದ ಹಿಡಿದು ಕ್ರೀಡೆಯನ್ನು ರಾಜಕೀಯದಿಂದ ದೂರವಿಡುವ ಮಹತ್ವದವರೆಗಿನ ಎಲ್ಲಾ ಅಂಶಗಳನ್ನು ಸಮಿತಿಯು ಚರ್ಚಿಸಲಿದೆ. ಹಾಗೆಯೇ ಈ ಸಮಿತಿಯ ಸದಸ್ಯರು ಭಾರತಕ್ಕೂ ಆಗಮಿಸಿ ಪರಿಶೀಲಿಸಲಿದೆ ಎಂದು ವರದಿಯಾಗಿದೆ. ಇದಾದ ಬಳಿಕ ಪಾಕ್ ಪ್ರಧಾನಿಗೆ ವರದಿ ಸಲ್ಲಿಸಲಿದ್ದು, ಆ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆದರೆ ಪಾಕ್ ತಂಡದ ಭಾಗವಹಿಸುವಿಕೆಯನ್ನು ಇನ್ನೂ ಕೂಡ ದೃಢಪಡಿಸಲಾಗಿಲ್ಲ. ಅಲ್ಲದೆ ಪಾಕಿಸ್ತಾನ್ ತಂಡದ ಪಾಲ್ಗೊಳ್ಳುವಿಕೆಗೆ ಸರ್ಕಾರದ ಅನುಮತಿಯ ಅಗತ್ಯವಿದೆ ಎಂದು ಪಿಸಿಬಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಇದೀಗ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕ್ರೀಡಾ ಸಚಿವ ಅಹ್ಸಾನ್ ಮಜಾರಿ, ಮರ್ಯಮ್ ಔರಂಗಜೇಬ್, ಅಸದ್ ಮಹಮೂದ್, ಅಮೀನ್ ಉಲ್ ಹಕ್, ಕಮರ್ ಜಮಾನ್ ಕೈರಾ ಮತ್ತು ಮಾಜಿ ರಾಜತಾಂತ್ರಿಕ ತಾರಿಕ್ ಫಾತ್ಮಿ ಒಳಗೊಂಡ ಸಮಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ರಚಿಸಿದ್ದಾರೆ. ಪಾಕ್ ತಂಡಕ್ಕೆ ನಿಗದಿಯಾಗಿರುವ ಸ್ಥಳಗಳನ್ನು ಪರಿಶೀಲಿಸಲು, ಭದ್ರತಾ ವ್ಯವಸ್ಥೆಗಳ ಮಾಹಿತಿ ಪಡೆಯಲು ನಿಯೋಗವೊಂದನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಇದಾದ ಬಳಿಕ ಅಂತಿಮ ವರದಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರೂ ಆಗಿರುವ ಪ್ರಧಾನಿಗೆ ಸಲ್ಲಿಸಲಿದ್ದಾರೆ. ಆ ಬಳಿಕ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇತ್ತ ಪಾಕಿಸ್ತಾನ್ ತಂಡದ ಪಂದ್ಯಗಳಿಗೆ ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದ ಮೈದಾನಗಳು ಆತಿಥ್ಯವಹಿಸಲಿದೆ. ಅಲ್ಲದೆ ಭಾರತ–ಪಾಕಿಸ್ತಾನ್ ನಡುವಣ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಾಗ್ಯೂ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭದ್ರತಾ ವ್ಯವಸ್ಥೆಯ ನೆಪಗಳನ್ನು ಹೇಳುತ್ತಿರುವುದು ವಿಪರ್ಯಾಸ.