Author: Prajatv Kannada

ಬೆಂಗಳೂರು: ರಾಹುಲ್ ಗಾಂಧಿ(Rahul Gandhi)​ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ವಿಚಾರಕ್ಕೆ ಸಂಬಂಧಿಸಿ ಬುಧವಾರ ಬೆಳಗ್ಗೆ 10ಕ್ಕೆ ಕಾಂಗ್ರೆಸ್ ನಾಯಕರು (Silent protest) ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್​​ ನಾಯಕರು (Congress leaders) ದೇಶಾದ್ಯಂತ ಮೌನ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ‘ಕೈ’ ನಾಯಕರಿಂದ (From the leader of ‘Kai’)ಮೌನ ಪ್ರತಿಭಟನೆ (Silent protest) ನಡೆಯಲಿದೆ. ಗಾಂಧಿ ಪ್ರತಿಮೆ ಅಥವಾ ಸ್ವಾತಂತ್ರ್ಯ ಹೋರಾಟಗಾರ (freedom fighter)ಪ್ರತಿಮೆ ಬಳಿ ಧರಣಿ ನಡೆಸಲಿದ್ದಾರೆ.

Read More

ಬೆಂಗಳೂರು: ಜೈನ ಮುನಿಗಳ (Jain Monk) ಹತ್ಯೆ ಪ್ರಕರಣದ ಹಿಂದೆ ಐಸಿಸ್‌ (ISIS) ಚಿತಾವಣೆ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ(Siddu Savadi) ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಚಿತ್ರಹಿಂಸೆ ನೀಡಿ ಕರೆಂಟ್ ಶಾಕ್ ಕೊಟ್ಟು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ ಎಂದು ಹೇಳಿದರು. ಇನ್ನು ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಈ ಕೃತ್ಯದ ಹಿಂದೆ ಹಿಂದೆ ಐಸಿಸ್ ಉಗ್ರರ ಚಿತಾವಣೆ ಇದೆ. ಆದರೆ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ. ಸರ್ವ ಸಂಗತ್ಯಾಗ ಮಾಡಿದ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು. ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿಡುವ ಯತ್ನ ಮಾಡುತ್ತಿದೆ ಎಂದು ದೂರಿದರು.

Read More

ಬೆಂಗಳೂರು ;- ಟೊಮೆಟೊ ತುಂಬಿದ್ದ ಬೊಲೆರೋ ವಾಹನ ಕಳವಾಗಿದ್ದು, ರೈತ ಕಂಗಾಲಾಗಿದ್ದಾರೆ. ಟೊಮೆಟೊ ಪ್ರತಿ ಕೇಜಿಗೆ 110 ರೂ. ಆಗಿದೆ. ಈ ಹಿನ್ನೆಲೆ ಜನರು ಟೊಮೆಟೊ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಟೊಮೆಟೊ ಬೆಲೆ ಶತಕ ದಾಟಿದ ಹಿನ್ನೆಲೆ ಫುಲ್​​ ಡಿಮ್ಯಾಂಡ್​​ ಆಗಿದ್ದು ಕಳವು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಟೊಮೆಟೊ ಬೆಳೆಗಾರರು ಜಮೀನುಗಳಿಗೆ ಕಾವಲು ಕಾಯುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸುಮಾರು 2 ಸಾವಿರ ಕೆಜಿಗೂ ಹೆಚ್ಚು ಟೊಮೆಟೊ ಇದ್ದ ಬೊಲೆರೋ ವಾಹನವನ್ನೇ ಖದೀಮರು ಕದ್ದಿದ್ದಾರೆ. ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಬೆಳಿಗ್ಗೆ ರೈತ ಹಿರಿಯೂರಿನಿಂದ ಕೋಲಾರಕ್ಕೆ ಟೊಮ್ಯಾಟೊ ಸಾಗಿಸುತ್ತಿದ್ದರು. ಇದನ್ನು ಕಂಡ ಮೂವರು ಕಾರಿನಲ್ಲಿ ಟೊಮೆಟೊ ತುಂಬಿದ್ದ ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ನಂತರ ಆರ್​​ಎಮ್​​ಸಿಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೋ ವಾಹನವನ್ನು ಅಡ್ಡಗಟ್ಟಿದ್ದಾರೆ. ನಂತರ ಕಾರಿಗೆ ಪೀಣ್ಯಾ ಬಳಿ ನಿಮ್ಮ ಬೊಲೆರೋ ವಾಹನದಿಂದ ಟಚ್ ಮಾಡಿದ್ದೀರಿ ಅಂತ ನಾಟಕವಾಡಿ ಡ್ರೈವರ್​ ಮತ್ತು…

Read More

ಬೆಂಗಳೂರು: ಇಂದಿನಿಂದ ಬಜೆಟ್ ಮೇಲಿನ ಚರ್ಚೆಯೂ ಆರಂಭವಾಗ್ತಿದೆ ಆದ್ರೆ ವಿಪಕ್ಷ ನಾಯಕ ಆಯ್ಕೆ ಮಾತ್ರ ಆಗ್ತಿಲ್ಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಮಧ್ಯೆ ವಿಪಕ್ಷ ನಾಯಕನ ಸ್ಥಾನಕ್ಕೆ ಟಫ್ ಫೈಟ್ ನಡೆಯುತ್ತಿದ್ದು. ಕಳೆದ 4 ದಿನಗಳ ಹಿಂದೆ ನಡೆದ ವೀಕ್ಷಕರ ಅಭಿಪ್ರಾಯ ಸಂಗ್ರಹದಲ್ಲು ಮೂವರ ಪರ- ವಿರೋಧ ಮತಗಳು ಚಲಾವಣೆಯಾಗಿವೆ. ಮಾಜಿ ಸಿಎಂ ಬೊಮ್ಮಾಯಿಯನ್ನ ‌ಆಯ್ಕೆ ಮಾಡಲು ಬಿಲ್  ಸಂತೋಷ್ ಒಪ್ತಿಲ್ಲ, ಯತ್ನಾಳ್ ಆಯ್ಕೆಗೆ ಯಡಿಯೂರಪ್ಪ ಒಪ್ತಿಲ್ಲ. ಸುನೀಲ್ ಕುಮಾರ್ ಆಯ್ಕೆ ಮಾಡಲು ಬಿಎಸ್ವೈ, ಸಂತೋಷ್ ಇಬ್ಬರಿಗೂ ಒಪ್ತಿಲ್ಲ ಎನ್ನುವಂತಾಗಿದೆ ಬಿಜೆಪಿ ಪರಿಸ್ಥಿತಿ. ಸದ್ಯ ವಿಪಕ್ಷ ನಾಯಕನ ಆಯ್ಕೆ ಚೆಂಡು ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದ್ದು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಆಸಕ್ತಿಯನ್ನೇ ತೋರ್ತಿಲ್ಲ. ರಾಜ್ಯದ ಬಣ ರಾಜಕೀಯದಿಂದ ಬೇಸತ್ತ ಕೇಸರಿ ಹೈಕಮಾಂಡ್ ಸದ್ಯಕ್ಕೆ ರಿಸ್ಕ್ ಬೇಡವೇ ಬೇಡ ಅನ್ನುತ್ತಿದ್ಯಂತೆ. ವಿಪಕ್ಷ ನಾಯಕನ‌ ಆಯ್ಕೆ ವಿಚಾರವಾಗಿ ಮಾತನಾಡಿದ ಬಿಜೆಪಿ MLC ರವಿಕುಮಾರ್…

Read More

ಬೆಂಗಳೂರು : ಡ್ರಗ್ಸ್‌ ಮಾಫಿಯಾವನ್ನು ಕರ್ನಾಟಕದಲ್ಲಿ ನಿರ್ಮೂಲನೆ ಮಾಡಲು ದೃಢ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್‌ ಇಲಾಖೆ ಈ ಮಾಫಿಯಾವನ್ನು ಮಟ್ಟಹಾಕಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್(Dr. G. Parameshwar)‌ ತಿಳಿಸಿದರು. ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘ, ಬೆಂಗಳೂರಿನ ಸಪ್ತಗಿರಿ, ಪ್ರಕ್ರಿಯ, ಸ್ಪರ್ಶ ಆಸ್ಪತ್ರೆರವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಮಲ್ಟಿಸ್ಪೆಷಲ್‌ ಮೆಡಿಕಲ್‌ ಕ್ಯಾಂಪ್‌ನ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತದಲ್ಲಿ ಡ್ರಗ್‌ ಮಾಫಿಯಾ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹೆಚ್ಚಿನದಾಗಿ ನಗರ ಪ್ರದೇಶದ ಯುವಕರು ಯುವಕಿಯರು ಈ ಮಾಫಿಯಾಗೆ ಬಲಿಯಾಗುತ್ತಿದ್ದು ಅವರ ನರಗಳ ಮೇಲೆ ಪರಿಣಾಮ ಬೀರುವುದರಿಂದ ಬೇಗ ದುರ್ಬಲರಾಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಈ ಡ್ರಗ್ಸ್‌ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಪೊಲೀಸ್‌ ಇಲಾಖೆ ತೀರ್ಮಾನಿಸಿದ್ದು, ಕಾರ್ಯ ರೂಪಕ್ಕೂ ತರುತ್ತಿದ್ದೇವೆ. ಕಳೆದ ಒಂದುವರೆ ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 150 ಕೋಟಿಯಿಂದ 200 ಕೋಟಿ ರು. ಗಳ ಮೌಲ್ಯದ ಡ್ರಗ್ಸ್‌ಗಳನ್ನು ಸುಟ್ಟು ಹಾಕಿ ನಾಶ ಮಾಡಲಾಗಿದೆ. ನಮ್ಮ ಪೊಲೀಸ್‌ ಇಲಾಖೆ ಬಹಳ ಶಕ್ತಿಯುತವಾಗಿ ಬೆಳೆಯುತ್ತಿದೆ. ವಿದ್ಯಾವಂತ ಮತ್ತು ಸದೃಢ ಯುವಕರು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತಷ್ಟುಯುವಕರಿಗೆ ಇಲಾಖೆಯಲ್ಲಿ ಆದ್ಯತೆ ನೀಡಲಾಗುವುದು ಎಂದರು.

Read More

ಇಸ್ಲಾಮಾಬಾದ್:‌ ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್‌ (ICC World Cup 2023) ಟೂರ್ನಿಯಲ್ಲಿ ಭಾರತದ ಯಾವುದೇ ಮೈದಾನದಲ್ಲಿ ಯಾವ ತಂಡವನ್ನ ಬೇಕಾದ್ರೂ ಎದುರಿಸಲು ಪಾಕಿಸ್ತಾನ ತಂಡ ಸಿದ್ಧವಾಗಿದೆ ಎಂದು ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಹೇಳಿದ್ದಾರೆ. ಈ ಮೂಲಕ ಪಾಕ್‌ ತಂಡ ಭಾರತಕ್ಕೆ ಎಂಟ್ರಿ ಕೊಡುವುದನ್ನ ಖಚಿತಪಡಿಸಿದ್ದಾರೆ. ಹೌದು. ಟೀಂ ಇಂಡಿಯಾ (Team India) ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಈಗಾಗಲೇ ನಿಗದಿಯಾಗಿದ್ದು, ಅಕ್ಟೋಬರ್‌ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಪಾಕ್‌ ತಂಡವನ್ನ ಎದುರಿಸಲಿದೆ. 1.32 ಲಕ್ಷ ಪ್ರೇಕ್ಷಕರನ್ನ ಒಳಗೊಳ್ಳುವ ಸಾಮರ್ಥ್ಯ ಹೊಂದಿರುವ ಮೋದಿ ಕ್ರೀಡಾಂಗಣದಲ್ಲಿ ಬದ್ಧವೈರಿಗಳ ಹೈವೋಲ್ಟೇಜ್‌ ಕದನ ನಡೆಯಲಿದೆ ಕಳೆದ ವರ್ಷ T20 ಏಷ್ಯಾಕಪ್‌ (Asia Cup )ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್‌ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್‌ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಪ್ರಧಾನಿ ಶೆಹಬಾಜ್ ಷರೀಫ್,…

Read More

ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಿರೂಪಕ ಕರಣ್ ಜೋಹರ್ ಇತ್ತೀಚೆಗೆ ಕೊಂಚ ಮಟ್ಟಿಗೆ ಸೈಲೆಂಟ್ ಆಗಿದ್ದಾರೆ. ಬಾಲಿವುಡ್ ಚಿತ್ರರಂಗಕ್ಕೆ ಸಾಕಷ್ಟು ಸ್ಟಾರ್ ಕಿಡ್ ಗಳನ್ನ ಕರೆತಂದು ಸ್ಟಾರ್ ನಟ, ನಟಿಯರನ್ನಾಗಿ ಮಾಡಿರುವ ಕರಣ್ ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ಚಿತ್ರಗಳ ನಿರ್ಮಾಣ ಹಾಗೂ ನಿರೂಪಣೆಯಲ್ಲೇ ಬ್ಯುಸಿಯಾಗಿದ್ದಾರೆ. ಕರಣ್ ಜೋಹರ್ ವೈಯಕ್ತಿಕ ಜೀವನದಲ್ಲಿ ಕುರಿತು ಸಾಕಷ್ಟು ಊಹಾಪೋಹಗಳಿವೆ. ಆತ ಮದುವೆ ಮಾಡಿಕೊಂಡಿಲ್ಲ. ಸರೋಗಸಿ ವಿಧಾನದ ಮೂಲಕ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾರೆ. ಮಗನ ಹೆಸರು ಯಶ್, ಮಗಳ ಹೆಸರು ರೂಹಿ. ಈ ಮಕ್ಕಳ ತಾಯಿ ಯಾರು ಎಂಬುದು ತಿಳಿದಿಲ್ಲ. ಕರಣ್ ಜೋಹರ್ ಯಾಕೆ ಮದುವೆ ಮಾಡಿಕೊಳ್ಳಲಿಲ್ಲ? ಎನ್ನುವುದರ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಸದ್ಯ ಫೇಸ್ಬುಕ್, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ಕೂ ನಂತರ ಥ್ರೆಡ್ಸ್ ಸೋಶಿಯಲ್ ಮೀಡಿಯಾ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಕೆಲ ಸೆಲೆಬ್ರೆಟಿಗಳು ಥ್ರೆಡ್ಸ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಅದೇ ರೀತಿ ಕರಣ್ ಜೋಹರ್ ಕೂಡ ಅದಕ್ಕೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳ ಜೊತೆ…

Read More

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಖತ್ ಆಕ್ಟೀವ್ ಆಗಿರುವ ನಟ ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಲ್ಲಿ ಮಾತ್ರವಲ್ಲ, ರಿಯಲ್ ಲೈಫ್ ನಲ್ಲೂ ಹಿರೋ ಅನ್ನೋದನ್ನ ಫ್ರೂವ್ ಮಾಡಿದ್ದಾರೆ. ಕಷ್ಟ ಎಂದು ಬಂದ ಅದೆಷ್ಟೋ ಜನರಿಗೆ ಚಿರಂಜೀವಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ಸಾರ್ವಜನಿಕರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆ  ಆರಂಭಿಸಿದ್ದಾರೆ. ಚಿರಂಜೀವಿ ಆರಂಭಿಸಿರುವ ಸಾರ್ವಜನಿಕರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರದ ಮೊದಲ ಶಿಬಿರ ಭಾನುವಾರ ಹೈದರಾಬಾದ್​ನಲ್ಲಿ (ಜುಲೈ 9) ನಡೆದಿದೆ. ಈ ವೇಳೆ ಎರಡು ಸಾವಿರಕ್ಕೂ ಅಧಿಕ ಮಂದಿ ತಪಾಸಣೆಗೆ ಒಳಗಾಗಿದ್ದು, ಚಿರು ಕೆಲಸಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ ಕ್ಯಾನ್ಸರ್​ ಸೆಂಟರ್​ ಉದ್ಘಾಟನೆ ಮಾಡಿದ್ದ ಚಿರಂಜೀವಿ ಕ್ಯಾನ್ಸರ್ ಬಗ್ಗೆ​ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಕ್ಯಾನ್ಸರ್ ತಡೆಗಟ್ಟುವುದು ಹೇಗೆ ಎಂಬುದನ್ನು ವಿವರಿಸಿದ್ದರು. ಚಿರಂಜೀವಿ ಅವರಿಗೆ ಈ ಮೊದಲು ಕ್ಯಾನ್ಸರಸ್​ ಅಲ್ಲದ ಊತ ಕಾಣಿಸಿತ್ತು. ವೈದ್ಯರ ಬಳಿ ಇದನ್ನು ತಪಾಸಣೆ ಮಾಡಿಸಲಾಯಿತು. ಒಂದೊಮ್ಮೆ ಅದನ್ನು ತೆಗೆಯದೇ ಇದ್ದಿದ್ದರೆ ಅದು ಕ್ಯಾನ್ಸರ್​ ಆಗಿ ಬದಲಾಗುವ ಸಾಧ್ಯತೆ…

Read More

ಕೆಜಿಎಫ್ 2 ಸಿನಿಮಾದ ಬಳಿಕ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಶುರುವಾಗಿದೆ. ಇದೀಗ ಯಶ್ ತಮ್ಮ ಮುಂದಿನ ಸಿನಿಮಾದ ಕುರಿತು ಅಪ್ ಡೇಟ್ ನೀಡಿದ್ದಾರೆ. ಮಲೇಷ್ಯಾಕ್ಕೆ ತೆರಳಿರುವ ಯಶ್ ತಮ್ಮ ಹೊಸ ಸಿನಿಮಾದ ಕುರಿತು ಮಾತನಾಡಿದ್ದು, ‘ದೊಡ್ಡ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳುತ್ತಿಲ್ಲ, ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದೊಂದು ಮಾಸ್ ಸಿನಿಮಾವಾಗಿರಲಿದೆ. ಸದ್ಯದಲ್ಲೇ ಮಾಹಿತಿ ನೀಡುತ್ತೇನೆ’ ಎಂದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮಲೇಷ್ಯಾದಲ್ಲಿ ಚಿನ್ನದ ಅಂಗಡಿಯೊಂದರ ಉದ್ಘಾಟನೆಗಾಗಿ ಯಶ್ ವಿಶೇಷ ವಿಮಾನದಲ್ಲಿ ನಾಲ್ಕೈದು ಗೆಳೆಯರ ಜೊತೆ ಮಲೇಷ್ಯಾಗೆ ಪ್ರಯಾಣಿಸಿದ್ದಾರೆ. ಅಲ್ಲದೇ, ಮಲೇಷ್ಯಾದಲ್ಲಿ ವಾಸವಿರುವ ಅವರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಅವರಿಗೆ ನೀಡಲಾದ ಗಿಫ್ಟ್ ಸಾಕಷ್ಟು ವೈರಲ್ ಕೂಡ ಆಗಿದ್ದು ಇದೀಗ ಯಶ್ ಮುಂದಿನ ಸಿನಿಮಾದ ಅಪ್ ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Read More

ಟಾಲಿವುಡ್ ನಟ ನಾಗ ಶೌರ್ಯ ನಟನೆಯ ರಂಗಬಲಿ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ಹಿಟ್ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಆದರೆ ನಟ ನಾಗ ಶೌರ್ಯ ಸಕ್ಸಸ್ ಮೀಟ್ ನಿಂದ ಹಿಂದೆ ಸರಿದಿದ್ದು ರಂಗಬಲಿ ಚಿತ್ರತಂಡದಲ್ಲಿ ಎಲ್ಲವೂ ಸರಿಯಾಗಿಲ್ಲವ ಎಂಬ ಪ್ರಶ್ನೆ ಹುಟ್ಟುಹಾಕಿದೆ. ನಾಗ ಶೌರ್ಯ, ಯುಕ್ತಿ ನಟನೆಯ ‘ರಂಗಬಲಿ’ ಸಿನಿಮಾ ಜುಲೈ 7ರಂದು ರಿಲೀಸ್ ಆಗಿದ್ದು, ಸಿನಿಮಾ ಟೀಸರ್, ಟ್ರೈಲರ್ ಮೂಲಕ ಗಮನ ಸೆಳೆದಿತ್ತು. ಈಗ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಸಂಭ್ರಮ ಏರ್ಪಡಿಸಿತ್ತು. ಹಾಗೆಯೇ ವಾಹಿನಿಯ ಸಿನಿಮಾ ಪತ್ರಕರ್ತರಿಗೂ ಆಹ್ವಾನ ನೀಡಿತ್ತು. ಸಿನಿಮಾ ವಿಶ್ಲೇಷಕರೊಬ್ಬರು, ಪ್ರಶ್ನೆ ಕೇಳುವ ಸಂದರ್ಭ ಬಂದಾಗ ಸಿನಿಮಾದಲ್ಲಿದ್ದ ಸಮಸ್ಯೆಯೊಂದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಾರ್ಯಕ್ರಮವನ್ನ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಕಥೆ ನಡೆಯುವ ಕಾಲವನ್ನು ಸಿನಿಮಾದಲ್ಲಿ ತಪ್ಪಾಗಿ ತೋರಿಸಿರುವ ಬಗ್ಗೆ ಸಿನಿಮಾ ವಿಶ್ಲೇಷಕರು ಪ್ರಶ್ನೆ ಮಾಡಿದರು. ಅವರ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕ ಪವನ್ ಬಸಮಸೆಟ್ಟಿ…

Read More