ಇಸ್ಲಾಮಾಬಾದ್: ಯುವತಿಯೊರ್ವಳು ತನ್ನ ತಂದೆಯನ್ನೇ ಮದುವೆಯಾಗಿರುವ ವಿಚಿತ್ರ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ. ಈಕೆ ತನ್ನ ತಂದೆಗೆ ನಾಲ್ಕನೇ ಪತ್ನಿಯಾಗಿದ್ದಾಳೆ. ತಂದೆಯೊಂದಿಗೆ ಮದುವೆಯಾಗಿರುವ ಸತ್ಯವನ್ನು ಮಗಳು ಒಪ್ಪಿಕೊಂಡಿದ್ದು, ಮದುವೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಮದುವೆಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಈ ವೀಡಿಯೋದ ನಿಖರವಾದ ಸ್ಥಳ ಮತ್ತು ರೆಕಾರ್ಡಿಂಗ್ ದಿನಾಂಕವನ್ನು ದೃಢೀಕರಿಸಲಾಗಿಲ್ಲ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೆಲವು ನೆಟ್ಟಿಗರು ಈ ರೀತಿಯ ಮದುವೆಯನ್ನು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ, ತಂದೆಯನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಯುವತಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ. ವೀಡಿಯೋದ ಸತ್ಯಾಸತ್ಯತೆ ಮತ್ತು ವಿವರಗಳನ್ನು ಪರಿಶೀಲಿಸಲಾಗಿಲ್ಲ. ಇದು ಊಹಾಪೋಹ ಇರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಮತ್ತೊಂದು ಕಡೆ ಈ ವಿವಾಹವು ವಿವಾದದ ಅಲೆಯನ್ನು ಹುಟ್ಟುಹಾಕಿದೆ. ಹುಡುಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾಳೆ ಮತ್ತು ತನ್ನ ಹೆಸರಿನಿಂದಾಗಿ ತನ್ನ ತಂದೆಯನ್ನು ಮದುವೆಯಾದಳು ಎಂದು ಹೇಳಿಕೊಳ್ಳುತ್ತಾಳೆ. ‘ರಾಬಿಯಾ ಎಂಬ ಹೆಸರಿನಿಂದಾಗಿ…
Author: Prajatv Kannada
ನವದೆಹಲಿ;- ನನ್ನ ಭದ್ರತಾ ಸಿಬ್ಬಂದಿಗಳ ಅನುಮತಿ ಇಲ್ಲದ ಹಿನ್ನೆಲೆ ಕೆಟಿಎಂ ಬೈಕ್ ಬಳಸಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ಬಳಿ ಕೆಟಿಎಂ390 ಬೈಕ್ ಇದೆ. ಆದರೆ ಅದನ್ನು ಓಡಿಸಲು ನನಗೆ ನನ್ನ ಭದ್ರತಾ ಸಿಬ್ಬಂದಿಗಳು ಅನುಮತಿಸದ ಕಾರಣ ಅದು ಬಳಕೆಯಾಗದೇ ನಿಂತಿದೆ ಎಂದರು. ಇದೇ ವೇಳೆ ‘ಯಾವಾಗ ಮದುವೆಯಾಗುತ್ತೀರಾ’ ಎಂಬ ಪ್ರಶ್ನೆಗೆ ‘ನೋಡೋಣ’ ಎಂದು ಉತ್ತರಿಸಿದ ಅವರು ತಮ್ಮ ಮದುವೆbಬಗ್ಗೆ ಯಾವುದೇ ಹೆಚ್ಚಿನ ಮಾತುಗಳನ್ನಾಡಿಲ್ಲ. ಇತ್ತೀಚೆಗೆ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಕೂಡ ‘ಇನ್ನೂ ಸಮಯವಿದೆ ಮದುವೆಯಾಗಿ’ ಎಂದು ರಾಹುಲ್‌ಗೆ ಸಲಹೆ ನೀಡಿದ್ದರು.
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ರೀಲ್ಸ್ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್ (Dance) ಮಾಡಿ ರೀಲ್ಸ್ ಕ್ರಿಯೇಟ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಂತಹ ಸ್ಥಳಗಳ ಪೈಕಿ ದೆಹಲಿ ಮೆಟ್ರೋ (Delhi Metro) ತಾಣವೂ ಒಂದಾಗಿದೆ. ಹೌದು. ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇವೆ. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಬಿಕಿನಿ ತೊಟ್ಟು ಓಡಾಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ನಂತರ ಮೆಟ್ರೋ ಪ್ಲಾಫ್‌ಫಾರ್ಮ್‌ನಲ್ಲೇ ಪ್ರೇಮಿಗಳಿಬ್ಬರು ಲಿಪ್ ಲಾಕ್ ಮಾಡಿದ್ದ ದೃಶ್ಯ ವೈರಲ್ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಟ್ರಾನ್ಸ್ಪರೆಂಟ್ ಹಾಟ್ ಉಡುಗೆ ತೊಟ್ಟು ಡಾನ್ಸ್ ಮಾಡಿ ಪೇಚಿಗೆ ಸಿಲುಕಿದ್ದಳು. ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. https://twitter.com/HasnaZarooriHai/status/1676871173769142272?ref_src=twsrc%5Etfw%7Ctwcamp%5Etweetembed%7Ctwterm%5E1676871173769142272%7Ctwgr%5E9d43d31ce0ae54bd32b3a0b11fe4d21745e2e0a8%7Ctwcon%5Es1_&ref_url=https%3A%2F%2Fpublictv.in%2Ftwo-women-pole-dancing-inside-delhi-metro-video-viral%2F ನೋಡುಗರ ಕಣ್ಣುಕುಕ್ಕುವಂತೆ ಹಾಟ್ ಉಡುಗೆ ತೊಟ್ಟು ಯುವತಿಯರಿಬ್ಬರು ಬಾಲಿವುಡ್ ಸಾಂಗ್‌ಗೆ…
ಮುಂಬೈ: ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆಯ (Bridge Missing) ಕಳ್ಳತನವಾಗಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಹೌದು. ಅಚ್ಚರಿಯಾದರೂ ಸತ್ಯ ಘಟನೆಯಾಗಿದ್ದು, ಇದು ಮುಂಬೈನ ಮಲಾಡ್‍ನಲ್ಲಿ ನಡೆದಿದೆ. ಸೇತುವೆ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 2 ಲಕ್ಷ ಮೌಲ್ಯದ ಸುಮಾರು 90 ಅಡಿ ಉದ್ದವಿರುವ ಈ ಸೇತುವೆಯನ್ನು ಮುಂಬೈನ ಮಲಾಡ್ ಪ್ರದೇಶದಲ್ಲಿ ಸಣ್ಣ ತೊರೆಯನ್ನು ದಾಟಲು ಬಳಸಲಾಗುತ್ತಿತ್ತು. ಇದೀಗ ಈ ಸೇತುವೆ ನಾಪತ್ತೆಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದು ಕಳ್ಳತನವಾಗಿರುವುದು ಬಯಲಾಗಿದೆ. ಕಬ್ಬಿಣದ ಸೇತುವೆಯನ್ನು ಕಳ್ಳರ ಗುಂಪೊಂದು ಕೆಡವಿ ಅದನ್ನು ಟ್ರಕ್‍ಗಳಲ್ಲಿ ಸಾಗಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಅದಾನಿ ಎಲೆಕ್ಟ್ರಿಸಿಟಿ (Adani Electricity) ಸಂಸ್ಥೆಯ ಬೃಹತ್ ವಿದ್ಯುತ್ ಕೇಬಲ್‍ಗಳನ್ನು ಸಾಗಿಸುವ ಸಲುವಾಗಿ ಈ ಕಬ್ಬಿಣದ ಸೇತುವೆಯನ್ನು ಚರಂಡಿಯ ಮೇಲೆ ಇರಿಸಲಾಗಿತ್ತು. ಅದಾದ ಬಳಿಕ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಶಾಶ್ವತ ಸೇತುವೆ ಬಂದ ನಂತರ ಅದನ್ನು ಸ್ಥಳಾಂತರಿಸಲಾಯಿತು. ಇತ್ತ ಸ್ಥಳೀಯರ…
ಕೊಪ್ಪಳ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಪ್ಪಳ ನಗರದಲ್ಲಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ(Silent protest) ನಡೆಯುತ್ತಿದೆ. ಕೊಪ್ಪಳದ ಅಶೋಕ ವೃತ್ತದಲ್ಲಿ(Ashoka circle of Koppal) ಸಮುದಾಯದ ಜನರು, ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಪ್ಪು ಪಟ್ಟಿ ಧರಿಸಿ ಡಿಸಿ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು: ರಾಜ್ಯದ ಕರಾವಳಿ (Coastal Karnataka) ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗುವ (Heay Rain) ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಭಾರತೀಯ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ ಜಾರಿ ಮಾಡಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವವಿದೆ. ಉಡುಪಿಯಲ್ಲಿ ಸುರಿದ ಭಾರೀ ಮಳೆಯಿಂದ ಕಾಪು ತಾಲೂಕು ಇನ್ನಂಜೆ -ಕಲ್ಯಾ ನಡುವೆ ಸಂಪರ್ಕ ಕಡಿತಗೊಂಡಿದೆ. ಮಾರ್ಕೊಡಿ ಹೊಳೆಯ ನೀರಿನಿಂದ ಎರಡು ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ನೂರಾರು ಎಕರೆ ಭತ್ತದ ಬೇಸಾಯ ನೀರು ಪಾಲಾಗಿದೆ.
ಬೆಂಗಳೂರು: ಕಲಾಪ (Karnataka Assembly Session)ಆರಂಭವಾಗುತ್ತಿದ್ದಂತಯೇ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್ಗೆ ಸ್ಪೀಕರ್ ಯುಟಿ ಖಾದರ್ ಕ್ಲಾಸ್(Speaker UT Khader) ತೆಗೆದುಕೊಂಡಿದ್ದಾರೆ. ಭಿತ್ತಿ ಪತ್ರ ತೆಗೆದುಕೊಂಡು ಸದನದಲ್ಲಿ ಹಾಜರಾಗಿದ್ದ ಶರಣಗೌಡ ಕಂದಕೂರ್ ಅವರನ್ನು ನೋಡುತ್ತಿದ್ದಂತೆ, ಮತ ಪಡೆಯುವ ಲೆಕ್ಕಾಚಾರ, ಬಿಟ್ಟಿ ಪ್ರಚಾರ ಪಡೆಯುವ ಲೆಕ್ಕಾಚಾರ ಹಾಕಿಕೊಂಡು ಈ ರೀತಿ ಭಿತ್ತಿಪತ್ರ ಸದನದಲ್ಲಿ ತೋರಿಸುವ ಅವಶ್ಯಕತೆ ಇಲ್ಲ, ನಾನು ಕೂಡಾ ಶಾಸಕ ಆಗಿ ಬಂದವನು ಎಂದು ಸ್ಪೀಕರ್ ಕ್ಲಾಸ್ ತೆಗೆದುಕೊಂಡರು. ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್ ಮಾತಿಗೆ ಲಘು ಆಕ್ಷೇಪ ವ್ಯಕ್ತಪಡಿಸಿದರು.
ಹುಬ್ಬಳ್ಳಿ ;– ಜೈನ ಮುನಿಗಳ ದೇಹ ಕತ್ತರಿಸಿ ಬೋರ್ವೆಲ್ಗೆ ಹಾಕಿದ್ರು, ಮುಂದೆ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ತೀವಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಕೊಲೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ತೀವಿ ಎಂದು ಭರವಸೆ ಕೊಟ್ಟಿದ್ದಾರೆ. ಅಪರಾಧಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಇದು ಸ್ವಾಭಾವಿಕ ಪದ್ದತಿ, ಇದರಲ್ಲಿ ತಾರತಮ್ಯ ಪ್ರಶ್ನೆ ಇಲ್ಲ. ಘಟನೆ ಆದ ಮೇಲೆ ಅರೆಸ್ಟ್ ಮಾಡಿದ್ದಾರೆ. ದೇಹ ಕತ್ತರಿಸಿ ಬೋರ್ವೆಲ್ಗೆ ಹಾಕಿದ್ರು. ನಾನು ನಮ್ಮ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕೂತಿದ್ದಾರೆ. ಅವರ ಬೇಡಿಕೆ ಕೇಳುತ್ತೇನೆ. ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ತೀವಿ. ನಮ್ಮ ಇಲಾಖೆ ಸಮರ್ಥವಾಗಿದೆ. ಅರೆಸ್ಟ್…
ನೆಲಮಂಗಲ: ಹಿರಿಯ ನಟಿ ಲೀಲಾವತಿಯವರ(Actress leelavathi )ಆರೋಗ್ಯವನ್ನು ವಿಚಾರಿಸಿಕೊಳ್ಳುವ ಸಲುವಾಗಿ ನಟಿ ಉಮಾಶ್ರೀ(Umashree) ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸೊಲದೇವನಹಳ್ಳಿಯಲ್ಲಿ ವಾಸವಾಗಿರುವ ಅಮ್ಮ ಮತ್ತು ಮಗ ನಟ ವಿನೋದ್ ರಾಜ್ ರವರ ತೋಟದ ಮನೆಗೆ ಬೇಟಿ ನೀಡಿದರು. ಇನ್ನು ಲೀಲಾವತಿಯವರು ಕೆಲಕಾಲ ಉಮಾಶ್ರೀ ಹಾಗು ನಟಿ ಪದ್ಮವಾಸಂತಿ ಯವರ ಜೋತೆಗೆ ಹಿಂದಿನ ಚಿತ್ರರಂಗ ಹೆಗಿತ್ತು, ಮತ್ತು ಆಗಿನ ಊಟ ಉಪಚಾರಗಳು ಎಷ್ಟು ದೇಹಕ್ಕೆ ಚೈತನ್ಯ ನೀಡುತ್ತಿದ್ದವು ಹಾಗು ಇನ್ನೂ ಹಲವು ಹಳೆಯ ವಿಚಾರಗಳನ್ನು ನಟಿಯರು ಮೆಲುಕು ಹಾಕಿದರು ನಂತರ ನಟಿಯರು ಹಿರಿಯ ನಟಿ ಜೋತೆ ಆಟವಾಡಿ ಸಂತೋಷ ವ್ಯಕ್ತಪಡಿಸಿದರು.
ಹುಬ್ಬಳ್ಳಿ ;- ಜೈನಮುನಿಗಳ ಕೊಲೆ ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೇವಲ ದುಡ್ಡಿಗೋಸ್ಕರ ಕೊಲೆ ಮಾಡಿದ್ದಾರೆಂದು ನನಗೇನು ಅನಿಸಲ್ಲ. ಈ ಕೊಲೆ ಪ್ರಕರಣದ ಹಿಂದೆ ಷಡ್ಯಂತ್ರ ಇದೆ, ಅದನ್ನು ಬೇಧಿಸಬೇಕು. ಕೊಲೆ ಆರೋಪಿಗಳ ಮನೆಗಳಿಗೂ ಬಹಿಷ್ಕಾರ ಹಾಕಬೇಕು. ಆ ಮನೆಯ ತಂದೆ, ತಾಯಿ, ಅಣ್ಣ, ತಮ್ಮ ಎಲ್ಲರಿಗೂ ಗೊತ್ತಾಗಬೇಕು. ನನ್ನ ಮನೆಯವರು ಹೀಗೆ ಮಾಡಿದ್ರೆ ನಮಗೂ ಶಿಕ್ಷೆ ಆಗುತ್ತೆ ಅಂತಾ ಆ ಮನೆಯವರಿಗೂ ಗೊತ್ತಾಗಬೇಕು. ತಂದೆ, ತಾಯಿ ಮಗನಿಗೆ ಇದೇ ರೀತಿ ಶಿಕ್ಷಣ ಕೊಟ್ಟಿದ್ದೀರಾ? ಸಾಲ ಎಲ್ಲರೂ ಕೊಡ್ತಾರೆ, ವಾಪಸ್ ಕೇಳುವಂತದ್ದು ಧರ್ಮ ಎಲ್ಲರೂ ಕೇಳ್ತಾರೆ. ಪೂಜ್ಯ ಸಂತರಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡಲು ಬಂದಿದ್ದೇವೆ. ಇದೊಂದು ಅತ್ಯಂತ ದುರದೃಷ್ಟಕರವಾದಂತಹ ಘಟನೆ. ಮಾನವೀಯತೆ, ಮನುಷ್ಯತ್ವ ಎಲ್ಲಿವರೆಗೆ ತಲುಪಿದೆ. ಯಾರನ್ನು ಹೊಡೀತಿದ್ದಾರೆ, ನಡೆಯಬೇಕಾದರೆ ಇರುವೆ ತುಳಿಯಲಾರದಂತ ಸಂತ. ಜೈನಮುನಿ ಅಹಿಂಸಾ ಪರಮೋ ಧರ್ಮ ಅಂತಾ ಹೇಳಿದವರು. ಅವರನ್ನೇ ಪ್ರಾಣಿಗಳನ್ನು ಕತ್ತರಿಸುವ ಮಾದರಿಯಲ್ಲಿ ಸಂತನ…