Author: Prajatv Kannada

ಆನೇಕಲ್ : ರೈತನ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೈಪುರದೊಡ್ಡಿಯಲ್ಲಿ ನಡೆದಿದೆ. ಎನ್ಎ ಶೆಟ್ಟಿಯವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ 15 ವರ್ಷಗಳಿಂದ ವಿವಿಧ ಬಗ್ಗೆ ಹಣ್ಣು ಮರಗಳನ್ನು ಬೆಳಸಲಾಗಿತ್ತು ಆದರೆ ತಡರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ 15 ವರ್ಷಗಳಿಂದ ಬೆಳೆದಿದ್ದ ವಿವಿಧ ಬಗೆಯ ಹಣ್ಣುಗಳ ಮರಗಳಾದ ಮಾವಿನ ಮರ ತೆಂಗಿನ ಮರ ನೋನಿ ಹಣ್ಣು ಬಟರ್ ಫ್ರೂಟ್ ಬಾಳೆಹಣ್ಣು ಇನ್ನೂ 10 ಹಲವಾರು ಬಗ್ಗೆ ಸಸ್ಯಗಳನ್ನು  ಒಳಗೊಂಡಂತೆ ಸಾವಿರಾರು ರೂಪಾಯಿ ಬೆಳೆಗಳನ್ನ ಕಾಡಾನೆಗಳು ತಿಂದು ನಾಶಮಾಡಿದೆ. ಇನ್ನು 15 ವರ್ಷಗಳಿಂದ ಕಷ್ಟಪಟ್ಟು ಹಣ್ಣಿನ ಮರಗಳನ್ನು ಬೆಳೆಸಿದ್ದ ರೈತ ಈಗ ಕಂಗಲಾಗಿದ್ದಾನೆ ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾನೆ . ಇನ್ನು ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ರು ಸಹ ಯಾರು ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ರೈತರು ತಮ್ಮ ಅಳಲನ್ನ…

Read More

ಬೆಂಗಳೂರು: ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿ ಯುವಜನರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಸಬಲಗೊಳಿಸಲು ಒತ್ತು ನೀಡಲಾಗುತ್ತದೆ. ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಾಂಶಗಳನ್ನು ಒಳಗೊಂಡ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‍ಇಪಿ (NEP) ರದ್ದುಗೊಳಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನಿಡಿದ್ದಾರೆ. ರಾಜ್ಯ ಶಿಕ್ಷಣ ನೀತಿಯನ್ನ ಜಾರಿಗೆ ತರಲು 8 ತಿಂಗಳುಗಳ ಕಾಲಾವಕಾಶ ಇದೆ. ಸಣ್ಣ ತಂಡ ಮಾಡಿ ಪಠ್ಯ ಬದಲಾವಣೆ ಮಾಡಿದ ರೀತಿಯಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಕುಟುಕಿದ್ದಾರೆ. ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ದೊಡ್ಡ ತಂಡವನ್ನು ರಚಿಸಲಾಗಿದೆ. ಭಾಷೆಗಳಿಗೆ ಪ್ರಯೋಗಿಕ ತರಗತಿಗಳನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಈ ನೀತಿಯಲ್ಲಿ ರಾಜ್ಯ ಸಿಲೆಬಸ್, ನ್ಯಾಷನಲ್ ಸಿಲೆಬಸ್ ಎನ್ನುವ ವ್ಯತ್ಯಾಸ ಇರುವುದಿಲ್ಲ…

Read More

ಬೆಂಗಳೂರು: ಸರ್ಕಾರದ ವಿರುದ್ಧ ಮಾಜಿ ಸಿದ್ದರಾಮಯ್ಯ ಹೆಚ್​​ಡಿ ಕುಮಾರಸ್ವಾಮಿಯವರು ಪೆನ್​ಡ್ರೈವ್ ಅರೋಪ ವಿಚಾರವಾಗಿ ಹೆಚ್​ಡಿ ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿಗಳಾಗಿದ್ದರು. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಪೆನ್​​ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಮೈಸೂರಿನಲ್ಲಿ ಹೆಚ್​.ವಿಶ್ವನಾಥ್​ ಹೇಳಿದರು. ಸಚಿವ ಸಂಪುಟದ ಬಗ್ಗೆ ಎಲ್ಲರೂ ಮಾತನಾಡುವುದು ಸರಿಯಲ್ಲ. ಮುಖ್ಯ ಮಂತ್ರಿಯಾಗಲಿ ಬೇರೆ ಯಾರೇ ಆಗಲಿ ಅದರ ಬಗ್ಗೆ ದಿನವಿಡೀ ಮಾತನಾಡುವುದು ಸರಿಯಲ್ಲ. ಹೈ ಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತೋ, ಅವಾಗ ಸಂಪುಟ ವಿಸ್ತರಣೆ ಆಗುತ್ತೆ. ಪ್ರತಿ ದಿನ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಬದಲು ಅಭಿವೃದ್ಧಿಯ ಕುರಿತು ಮಾತನಾಡುವುದು ಉತ್ತಮ. ಹಿರಿಯನಾಗಿ ನನ್ನ ಅನುಭವದ ಆಧಾರದ ಮೇಲೆ‌ ಈ ಮಾತು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ (ಜು.07) 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಇಂದು ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಇಂದಿನ ಬಹುತೇಕ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. 14ನೇ ಬಾರಿ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಐತಿಹಾಸಿಕ ದಾಖಲೆ ಬರೆದಿದ್ದಾರೆ. ಮುಖ್ಯಮಂತ್ರಿಯಾಗಿ 7ನೇ ಬಾರಿ ಬಜೆಟ್‌ ಮಂಡಿಸಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಜೊತೆಯಲ್ಲೇ ಅಭಿವೃದ್ಧಿ ಕಾರ್ಯಗಳಿಗೂ ಭರಪೂರ ಅನುದಾನ ನೀಡುವ ಕೆಲಸ ಮಾಡಿದ್ದಾರೆ. ತೆರಿಗೆ ಸೋರಿಕೆ ತಡೆಯುವ ಜೊತೆಯಲ್ಲೇ ಮದ್ಯದ ತೆರಿಗೆ ಏರಿಕೆ ಮಾಡುವ ಮೂಲಕ ತೆರಿಗೆ ಸಂಗ್ರಹ ಗುರಿಯನ್ನೂ ಹೆಚ್ಚಿಸಲಾಗಿದೆ

Read More

ಬೆಂಗಳೂರು: ಇಂದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ರಿಷಬ್ ಶೆಟ್ಟಿ ಇದೇ ಮೊದಲ ಭಾರಿಗೆ ಸಖತ್  ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನಂದಿಲಿಂಕ್ಸ್ ಗ್ರೌಂಡ್ ನಲ್ಲಿ ಸ್ನೇಹಿತರು, ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಇದೇ ಮೊದಲಬಾರಿಗೆ ಇಷ್ಟು ಗ್ರ್ಯಾಂಡ್ ಆಗಿ ಬರ್ತಡೇ ಅಚರಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿಗೆ ವಿಶ್ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ಶುಭ ಕೋರಿದ್ದಾರೆ. ಅಷ್ಟೇ ಅಲ್ಲ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಪಕ್ಕದ ರಾಜ್ಯಗಳಿಂದಲೂ ಫ್ಯಾನ್ಸ್ ಆಗಮಿಸಿದ್ದಾರೆ. ರಿಷಬ್ ಶೆಟ್ಟಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಂದಿಲಿಂಕ್ಸ್ ಗ್ರೌಂಡ್ ನಲ್ಲಿ ಬೃಹತ್ ವೇದಿಕೆ ಹಾಕಿ ಎಲ್ ಇಡಿ ಸ್ಕ್ರೀನ್ ಮತ್ತು ಲೈಟಿಂಗ್ ಅರೇಂಜ್ ಮೆಂಟ್ ಮಾಡಲಾಗಿದೆ. ಎಂಟು‌ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದ್ದು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ, ಸೆಲ್ಪಿ ಕ್ಲಿಕ್ಕಿಸಿಕೊಂಡು ರಿಷಬ್ ಸಂಭ್ರಮಿಸಿದ್ದಾರೆ. ಜೊತೆಗೆ ಅಭಿಮಾನಿಗಳ ಜೊತೆ ಊಟ…

Read More

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸಹ ಸುಳ್ಳು ಭರವಸೆ ನೀಡಿದ್ದಾರೆ. ಘೋಷಣೆ ವೇಳೆ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕಿರಲಿಲ್ಲ. ಈಗ ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಿದ್ದಾರೆ. ಬಿಜೆಪಿ ಸರ್ಕಾರದ 20ಕ್ಕೂ ಹೆಚ್ಚು ಯೋಜನೆ ಕೈಬಿಟ್ಟಿದ್ದಾರೆ. ಬಿಜೆಪಿ ಸರ್ಕಾರದ ಯೋಜನೆ ಕೈಬಿಟ್ಟಿದ್ದು ಜನರಿಗೆ ಮಾಡಿದ ಮೋಸ. ಒಂದು ಸಮುದಾಯದ ಓಲೈಕೆಯ ಬಜೆಟ್ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಮುರುಗೇಶ್​ ನಿರಾಣಿ ಹೇಳಿದ್ದಾರೆ. ಸಿದ್ದರಾಮಯ್ಯ ಬಜೆಟ್ ಮಂಡನೆಗಿಂತ ಬಿಜೆಪಿಗೆ ಬೈಯ್ದಿದ್ದೇ ಹೆಚ್ಚು. ದೇಶದಲ್ಲಿ ಕೊವಿಡ್ ವ್ಯಾಕ್ಸಿನ್ ತಯಾರಿಸಿ ಎಲ್ಲರಿಗೂ ನೀಡಿದ್ದೇವೆ. ವಿದೇಶಗಳಿಗೂ ಕೊಟ್ಟಿದ್ದನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ. ಸಿದ್ದರಾಮಯ್ಯ ಭಾರತ ದ್ವೇಷಿ ರಾಹುಲ್ ಗಾಂಧಿ ರೀತಿ ಮಾತನಾಡುತ್ತಿದ್ದಾರೆ. ಆಸ್ತಿ ದರ ಏರಿಕೆ ಮಾಡಿದ್ದಾರೆ, ಅಬಕಾರಿ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.

Read More

ಹುಬ್ಬಳ್ಳಿ: ಸಮಾಜದಲ್ಲಿ ಶಾಂತಿಮಂತ್ರದ ಮೂಲಕ ಅಹಿಂಸಾ ಸಿದ್ಧಾಂತವನ್ನು ಪ್ರತಿಪಾದಿಸುವ ಜೈನ ಮುನಿಯನ್ನು ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ. ಹಣದ ವಿಷಯಕ್ಕೆ ಕೊಲೆ ಮಾಡಿರುವುದು ವಿಷಾದಕರ ಸಂಗತಿಯಾಗಿದ್ದು, ಜೈನ ಮುನಿಗಳಿಗೆ ರಕ್ಷಣೆಯೇ ಇಲ್ಲವಾಗಿದ್ದು, ನ್ಯಾಯ ಸಿಗುವವರೆಗೂ ಊಟ, ಉಪಹಾರ ಬಿಟ್ಟು ಅಮರಣ ಉಪವಾಸ ಮಾಡುವುದಾಗಿ ಅಚಾರ್ಯ ಗುಣಧರನಂದಿ ಮಹರಾಜರು ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣ ನಿಜಕ್ಕೂ ಜೈನ ಸಮಾಜಕ್ಕೆ ಹಾಗೂ ಜೈನ್ ಮುನಿಗಳಿಗೆ ಆತಂಕವನ್ನುಂಟು ಮಾಡಿದೆ ಎಂದರು. ಶಾಂತಿಪ್ರಿಯ ಸಮಾಜದ ಸ್ವಾಮೀಜಿಯ ಬರ್ಬರ ಹತ್ಯೆ ತೀವ್ರ ನೋವು ತಂದಿದೆ. ಸಿಎಮ್ ಇದುವರೆಗೂ ಸಂತಾಪ ಸೂಚಿಸದಿರುವುದು ಆಘಾತವಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು‌. ಸರ್ಕಾರಕ್ಕೆ ನಮ್ಮಂತ ಅಲ್ಪಸಂಖ್ಯಾತರು ಬೇಡವಾಗಿದೆ. ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು ಎಂದು ಗಳಗಳನೆ ಕಣ್ಣೀರು ಸುರಿಸಿದ ಜೈನಮುನಿ ಗುಣಧರನಂದಿ ಮಹಾರಾಜರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಲಿಖಿತ ಭರವಸೆ ಕೊಡುವವರೆಗೆ ಅನ್ನಾಹಾರ ತ್ಯಾಗ ಮಾಡುತ್ತೇನೆ.…

Read More

ಅಕ್ಟೋಬರ್‌ 5ರಿಂದ ನವೆಂಬರ್‌ 19ರವರೆಗೆ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ಸ್‌ ಇಂಗ್ಲೆಂಡ್‌ ಮತ್ತು ರನ್ನರ್ಸ್‌ಅಪ್‌ ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಲಿವೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯಕ್ಕೂ ಇದೇ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಟೂರ್ನಿಯ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಕ್ರಿಕೆಟ್‌ ಪ್ರಿಯರು ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಸಲುವಾಗಿ ಅಂತರ್ಜಾಲವನ್ನು ಜಾಲಾಡಲು ಶುರು ಮಾಡಿದ್ದಾರೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಅಕ್ಟೋಬರ್‌ 15ರಂದು ನಡೆಯಲಿರುವ ಪಂದ್ಯದ ಟಿಕೆಟ್‌ಗೆ ಭಾರಿ ಬೇಡಿಕೆ ಇದೆ. ಜಗತ್ತಿನ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎಂದೇ ಖ್ಯಾತಿ ಹೊಂದಿರುವ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ. ಬರೋಬ್ಬರಿ ಒಂದು ಲಕ್ಷ, 10 ಸಾವಿರ ಮಂದಿಗೆ ಆಸನ ಒದಗಿಸುವ ಸಾಮರ್ಥ್ಯ ಹೊಂದಿದೆ. ಭಾರತ-ಪಾಕ್‌ ಪಂದ್ಯಕ್ಕೆ ಈ ಕ್ರೀಡಾಂಗಣದ ಸಂಪೂರ್ಣ ಭರ್ತಿಯಾಗುವುದಂತೂ ನಿಶ್ಚಿತ. ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿನ ಒಟ್ಟು 48 ಪಂದ್ಯಗಳನ್ನು ಭಾರತದ 12…

Read More

ಇಸ್ಲಾಮಾಬಾದ್:‌ ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್‌ (ICC World Cup 2023) ಟೂರ್ನಿಯಲ್ಲಿ ಭಾರತದ ಯಾವುದೇ ಮೈದಾನದಲ್ಲಿ ಯಾವ ತಂಡವನ್ನ ಬೇಕಾದ್ರೂ ಎದುರಿಸಲು ಪಾಕಿಸ್ತಾನ ತಂಡ ಸಿದ್ಧವಾಗಿದೆ ಎಂದು ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಹೇಳಿದ್ದಾರೆ. ಈ ಮೂಲಕ ಪಾಕ್‌ ತಂಡ ಭಾರತಕ್ಕೆ ಎಂಟ್ರಿ ಕೊಡುವುದನ್ನ ಖಚಿತಪಡಿಸಿದ್ದಾರೆ. ಹೌದು. ಟೀಂ ಇಂಡಿಯಾ (Team India) ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಈಗಾಗಲೇ ನಿಗದಿಯಾಗಿದ್ದು, ಅಕ್ಟೋಬರ್‌ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಪಾಕ್‌ ತಂಡವನ್ನ ಎದುರಿಸಲಿದೆ. 1.32 ಲಕ್ಷ ಪ್ರೇಕ್ಷಕರನ್ನ ಒಳಗೊಳ್ಳುವ ಸಾಮರ್ಥ್ಯ ಹೊಂದಿರುವ ಮೋದಿ ಕ್ರೀಡಾಂಗಣದಲ್ಲಿ ಬದ್ಧವೈರಿಗಳ ಹೈವೋಲ್ಟೇಜ್‌ ಕದನ ನಡೆಯಲಿದೆ ಕಳೆದ ವರ್ಷ T20 ಏಷ್ಯಾಕಪ್‌ (Asia Cup )ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್‌ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್‌ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಪ್ರಧಾನಿ ಶೆಹಬಾಜ್ ಷರೀಫ್,…

Read More

ದೆಹಲಿ: 5 ಬಾರಿ ಟ್ರೋಫಿ ಜಯಿಸಿರುವ ಆಸ್ಟ್ರೇಲಿಯಾ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಗಳ ಪೈಕಿ 2 ತಂಡಗಳು ಪ್ರಬಲ ಪೈಪೋಟಿ ನಡೆಸಲಿವೆ ಎಂದು 1983ರ ವಿಶ್ವಕಪ್ ವಿಜೇತ ಆಟಗಾರ ಕೃಷ್ಣಾಮಚಾರಿ ಶ್ರೀಕಾಂತ್ ಭವಿಷ್ಯ ನುಡಿದಿದ್ದಾರೆ. 2019ರ ಆಂಗ್ಲರ ನಾಡಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯವು ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ರೋಚಕತೆ ಮೂಡಿಸಿದ್ದು, ಪಂದ್ಯ ಸೂಪರ್ ಓವರ್ ನಲ್ಲೂ ಟೈ ಆದ ಪರಿಣಾಮ ಬೌಂಡರಿ ಹಾಗೂ ಸಿಕ್ಸರ್ ಗಳ ಆಧಾರದ ಮೇಲೆ ಐಯಾನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲ್ಯಾಂಡ್ ರನ್ನರ್ಸ್ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತ್ತು. ಅಕ್ಟೋಬರ್- ನವೆಂಬರ್ ಅವಧಿಯಲ್ಲಿ ಆಯೋಜನೆಗೊಂಡಿರುವ ಹನ್ನೆರಡನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ 99 ದಿನಗಳು ಬಾಕಿ ಉಳಿದಿದ್ದು, 1983ರ ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಫೈನಲ್ ಸುತ್ತು ಪ್ರವೇಶಿಸುವ ತಂಡಗಳನ್ನು ಹೆಸರಿಸಿದ್ದಾರೆ. ಇಂಡಿಯಾ ಟುಡೇ ಜತೆ ಮಾತನಾಡಿರುವ ಟೀಮ್…

Read More