ಬೆಂಗಳೂರು: ಚೀಫ್ ಸೆಲೆಕ್ಟರ್ ಹುದ್ದೆಗೆ ಅಜಿತ್ ಅಗರ್ಕರ್ ಆಯ್ಕೆ ಅತ್ಯಂತ ಮಹತ್ವದ ನಿರ್ಧಾರ ಆಗಿದೆ. ಏಕೆಂದರೆ, ಚೀಫ್ ಸೆಲೆಕ್ಟರ್ ಹುದ್ದೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಿದ ಅನುಭವ ಹೊಂದಿರುವ ಟೀಮ್ ಇಂಡಿಯಾ ಮಾಜಿ ಆಟಗಾರನ ಆಯ್ಕೆ ಆಗಿರುವುದು ಇದು ಎರಡನೇ ಬಾರಿ ಆಗಿದೆ. ಇನ್ನು ಅಜಿತ್ ಅಗರ್ಕರ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಆಡಿ ಐಪಿಎಲ್‌ನಲ್ಲೂ ತಮ್ಮ ಕರಾಮತ್ತು ಪ್ರದರ್ಶಿದ್ದ ಅಪ್ರತಿಮ ವೇಗದ ಬೌಲರ್ ಆಗಿದ್ದರು. ಟೀಮ್ ಇಂಡಿಯಾದ ಆಯ್ಕೆ ಸಮಿತಿಯಲ್ಲಿ ಈಗ ಶಿವಸುಂದರ್ ದಾಸ್, ಸುಬ್ರೊತೊ ಬ್ಯಾನರ್ಜಿ, ಸಲಿಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಇದ್ದು, ಐದನೇ ಸದಸ್ಯ ಹಾಗೂ ಸಮಿತಿ ಮುಖ್ಯಸ್ಥನಾಗಿ ಅಜಿತ್ ಅಗರ್ಕರ್ ಸೇರ್ಪಡೆ ಆಗಿದೆ. ಈ ಸಮಿತಿಯಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಅಜಿತ್ ಅಗರ್ಕರ್ ಅವರಿಗೆ ಇರುವ ಕಾರಣ ಅವರನ್ನು ಚೀಫ್ ಸೆಲೆಕ್ಟರ್ ಆಗಿ ನೇಮಕ ಮಾಡಲಾಗಿದೆ. ಅಜಿತ್ ಅಗರ್ಕರ್ ಬಗ್ಗೆ ನಿಮಗೆಷ್ಟು ಗೊತ್ತು? ತಮ್ಮ ವೃತ್ತಿಬದುಕಿನ ದಿನಗಳಲ್ಲಿ ಟೀಮ್…
Author: Prajatv Kannada
ಮುಂಬೈ: ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಬಳಿಕ ವಿಶ್ವಕಪ್ ಆಡುವ 10 ತಂಡಗಳನ್ನ ಫೈನಲ್ ಮಾಡಿದ್ದು, BCCI ಟೀಂ ಇಂಡಿಯಾದ ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಿದೆ. ವಿಶ್ವಕಪ್ ಟೂರ್ನಿಗೆ 8 ತಂಡಗಳು ನೇರ ಪ್ರವೇಶ ಪಡೆದುಕೊಂಡಿದ್ದರಿಂದ ಉಳಿದ ಎರಡು ತಂಡಗಳ ಆಯ್ಕೆಗೆ ಹಣಾಹಣಿ ನಡೆದಿತ್ತು. ಅದರಂತೆ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಬಳಿಕ ಶ್ರೀಲಂಕಾ (SriLanka) ಹಾಗೂ ನೆದರ್ಲೆಂಡ್ (Netherlands) ತಂಡಗಳು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿವೆ. ಹಾಗಾಗಿ ಬಿಸಿಸಿಐ (BCCI) ಪರಿಷ್ಕೃತ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಟೂರ್ನಿ ನಡೆಯಲಿದೆ. ದೇಶದ 10 ನಗರಗಳಲ್ಲಿ ಟೂರ್ನಿ ನಡೆಯಲಿದ್ದು, ಟೂರ್ನಿಯ ಉದ್ಘಾಟನಾ ಮ್ಯಾಚ್ ಹಾಗೂ ಫೈನಲ್ ಪಂದ್ಯವು ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆಯೋಜನೆಗೊಳ್ಳಲಿದೆ. ನವೆಂಬರ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥೇಯ ಭಾರತ, ಶ್ರೀಲಂಕಾ ತಂಡವನ್ನ ಎದುರಿಸಲಿದ್ದು, ನವೆಂಬರ್ 11 ರಂದು ಬೆಂಗಳೂರಿನ ನಡೆಯಲಿರುವ ಗ್ರೂಪ್ ಲೀಗ್ ಹಂತದ ಪಂದ್ಯದಲ್ಲಿ…
ಸ್ಯಾಂಡಲ್‌ವುಡ್ ನಟ ರಾಜ್ ಬಿ.ಶೆಟ್ಟಿ ಹಾಗೂ ನಟಿ ಚೈತ್ರಾ ಆಚಾರ್ ಒಟ್ಟಿಗೆ ಟೋಬಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಲುಕ್ ರಿಲೀಸ್ ಆಗಿದ್ದು ಇಬ್ಬರ ಲುಕ್ ಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಚಂದನವನದ ಯುವನಟಿ ಚೈತ್ರಾ ಆಚಾರ್ ನಟ ರಾಜ್ ಬಿ ಶೆಟ್ಟಿ ಕೆನ್ನೆಗೆ ಮುತ್ತಿದ್ದು, ಬಹಿರಂಗ ಸಭೆಯಲ್ಲಿ ಅಪ್ಪಿಕೊಂಡಿದ್ದು ಸುದ್ದಿಯಾಗಿದ್ದರು. ಇದಕ್ಕೆ ಶೆಟ್ಟರು ಉತ್ತರ ನೀಡುವ ಮೂಲಕ ಮುತ್ತಿನ ಪ್ರಕರಣಕ್ಕೆ ಮುಕ್ತಿ ನೀಡಿದ್ದಾರೆ. ಟೋಬಿ ರಾಜ್ ಬಿ.ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ. ಹದಿನೈದು ಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಬೆಚ್ಚಿ ಬೀಳಿಸುವ ಅವತಾರದಲ್ಲಿ ಶೆಟ್ಟರು ಕಾಣಿಸಿಕೊಂಡಿದ್ದಾರೆ. ಟಿ.ಕೆ.ದಯಾನಂದ್ ಬರೆದ ವಿಕ್ಷಿಪ್ತ ವ್ಯಕ್ತಿಯ ಕತೆಗೆ ಮಾಸ್ ಚಿತ್ರಕತೆ ಹೆಣೆದಿದ್ದಾರೆ. ಫಸ್ಟ್ ಲುಕ್ ಟೀಸರ್ ಅನಾವರಣ ಮಾಡುವಾಗ ಏಕಾಏಕಿ ನಾಯಕಿ ಚೈತ್ರಾ ಆಚಾರ್, ಶೆಟ್ಟರ ಕೆನ್ನೆಗೆ ಮುತ್ತಿಟ್ಟಿದ್ದರು. ಚೈತ್ರಾ ಮಗುವಿನ ಮನಸಿನ ಹುಡುಗಿ. ಆಕೆ ಮುಗ್ಧೆ. ಆಕೆ ಮುತ್ತಿಟ್ಟಿದ್ದರಲ್ಲಿ ಯಾವುದೇ ರೀತಿ ಕೆಟ್ಟ ಉದ್ದೇಶ ನನಗೆ ಕಾಣಿಸಲಿಲ್ಲ. ಗೆಳೆಯ ಗೆಳತಿ,…
ಮುದ್ದು ಮನಸ್ಸೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅರುಣ್ ರಾಮ್ ಗೌಡ ಬಳಿಕ 3 ಗಂಟೆ 30 ದಿನ 30 ಸೆಕೆಂಡ್, ಪತಿ ಬೇಕು.ಕಾಮ್ ಹಾಗೂ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ಚಿತ್ರರಂಗದಿಂದ ದೂರವಿದ್ದ ಅರು ಗೌಡ ಇದೀಗ ಸಾಕಷ್ಟು ವರ್ಷಗಳ ಬಳಿಕ ಏಕಾಏಕಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೆಲ ವರ್ಷಗಳ ಬಳಿಕ ಅರುಣ್ ರಾಮ್ ಗೌಡ ಪ್ಯಾನ್ ಇಂಡಿಯಾ ಚಿತ್ರವೊಂದರ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅರುಣ್ ರಾಮ್ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದಾರೆ. ಅರು ಗೌಡ ಹುಟ್ಟುಹಬ್ಬದಂದು ತಮ್ಮ ಚಿತ್ರದ ಮೊದಲ ಗ್ಲಿಂಪ್ಸನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಇದೊಂದು ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ ಎಂದು ತಿಳಿಸಿರುವ ಅರುಣ್ ರಾಮ್ ಗೌಡ, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ. ಈ ಚಿತ್ರದ ನಾಯಕಿ, ವಿಲನ್ ಸೇರಿದಂತೆ ಎಲ್ಲಾ ಕಲಾವಿದರು…
ಸಿದ್ದು.ಎಸ್ ನಿರ್ದೇಶಿಸಿ, ನಿರ್ಮಿಸಿರುವ ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವೇ ಸಂತೋಷ ಸಂಗೀತ. ಇತ್ತೀಚೆಗಷ್ಟೇ ಚಿತ್ರದ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದು ಚಿತ್ರದ ಕುರಿತಾಗಿ ಚಿತ್ರತಂಡ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದೆ. ‘ನಾನು ಮೂಲತಃ ಎಂ.ಸಿ.ಎ ಪದವಿಧರ. ಮಹಾ ಸಿನಿಮಾ ಪ್ರೇಮಿ. ವಾರಕ್ಕೊಂದು ಸಿನಿಮಾ ನೋಡುವವನು. ಚೆನ್ನಾಗಿರುವ ಸಿನಿಮಾ ನೋಡಿದರೆ, ನಾನು ಈ ರೀತಿ ಸಿನಿಮಾ ಮಾಡಬೇಕೆಂದು ಆಸೆ ಪಡುತ್ತಿದ್ದವನು. ಆ ಆಸೆ ಈಗ ಈಡೇರಿದೆ. ಲಾಕ್ ಡೌನ್ ಸಮಯದಲ್ಲಿ ಕಥೆ ಬರೆದಿದ್ದೆ. ಅದನ್ನು ಈಗ ಸಿನಿಮಾ ರೂಪದಲ್ಲಿ ತಂದಿದ್ದೀನಿ. ನಾನೇ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಈ ಚಿತ್ರದಲ್ಲಿ ಲವ್, ಕಾಮಿಡಿ, ವ್ಯಾಪಾರ ಹೀಗೆ ಎಲ್ಲಾ ತರಹದ ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿದೆ. ಇದನ್ನು ಕಮರ್ಷಿಯಲ್ ಲವ್ ಜಾನರ್ ನ ಸಿನಿಮಾ ಎನ್ನಬಹುದು. ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ಈ ಚಿತ್ರದ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ನಿಜ ಜೀವನದಲ್ಲೂ ಪತಿ -ಪತ್ನಿಯಾಗಿರುವ ಅರ್ನವ್ ಹಾಗೂ…
ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸಂಯುಕ್ತಾ ಹೆಗ್ಡೆ ಬಳಿಕ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಇದೀಗ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿರುವ ನಟಿ, ವೀಡಿಯೋವೊಂದನ್ನ ಹಂಚಿಕೊಂಡು ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ಹೇಳಿದ್ದಾರೆ. ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಎಂಟ್ರಿಕೊಟ್ಟವರು ನಟಿ ಸಂಯುಕ್ತಾ ಹೆಗ್ಡೆ. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ರು. ಜಯಂರವಿ, ಪ್ರಭುದೇವರಂತಹ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿ ಸದ್ದು ಮಾಡಿದ ಸಂಯುಕ್ತಾ ಸಾಮಾಜಿಕ ಜಾಲಾ ತಾಣದಲ್ಲಿ ತಮ್ಮ ದೇಹ ಸಿರಿಯಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಕಾಲಿಗೆ…
ಮಿಲ್ಕಿ ಬ್ಯೂಟಿ ನಟಿ ತಮನ್ನಾ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಹಾಡಿಗೆ ಮೈ ಚಳಿ ಬಿಟ್ಟು ಕುಡಿದಿದ್ದು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಎರಡು ದಿನಗಳ ಹಿಂದಷ್ಟೇ ಜೈಲರ್ ಸಿನಿಮಾ ಹಾಡೊಂದು ರಿಲೀಸ್ ಆಗಿದ್ದು ತಮನ್ನಾ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇದೀಗ ಚಿತ್ರತಂಡ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದೆ. ಸಿನಿಮಾದ ಪ್ರಚಾರಕ್ಕೂ ಮುನ್ನ, ಸಿನಿಮಾದ ಮೊದಲ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದ್ದು ಯುಟ್ಯೂಬ್ ನಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಜೈಲರ್ ಸಿನಿಮಾದ ಹಾಡು ಯಾವಾಗ ಎಂದು ರಜನಿಕಾಂತ್ ಅಭಿಮಾನಿಗಳು ಕೇಳುತ್ತಿದ್ದರು. ಬೇಗ ಹಾಡು ರಿಲೀಸ್ ಮಾಡಿ ಎನ್ನುವುದು ಅವರ ಆಗ್ರಹ ಕೂಡ ಆಗಿತ್ತು. ಕೊನೆಗೂ ಚಿತ್ರತಂಡ ಅಭಿಮಾನಿಗಳ ಧ್ವನಿಗೆ ಸ್ಪಂದಿಸಿದೆ. ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳನ್ನು ಕುಣಿಸಿದೆ. ಜೈಲರ್ ಸಿನಿಮಾವನ್ನು…
ಇತ್ತೀಚೆಗೆ ಹೃದಯ ಸಂಬಂಧ ಕಾಯಿಲೆಗಳು ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ ನಾವು ಎಷ್ಟು ಜಾಗೃತರಾಗಿದ್ದರೂ ಕಮ್ಮಿ ಎನಿಸುತ್ತದೆ ಅದೇ ರೀತಿ ಎಲ್ಲಾ ರೀತಿಯ ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಈ ಹಣ್ಣುಗಳು ಹೃದಯದ ಕಾಯಿಲೆ ಇರುವವರಿಗೆ ಉತ್ತಮ ಎನ್ನಲಾಗುತ್ತದೆ. ಅವು ಯಾವುವು ನೋಡೋಣ. ಏಪ್ರಿಕಾಟ್ ಏಪ್ರಿಕಾಟ್‌ಗಳು ಜೀರ್ಣಕ್ರಿಯೆ, ಚರ್ಮ ರೋಗಗಳು ಮತ್ತು ಕ್ಯಾನ್ಸರ್‌ಗಳನ್ನು ಸುಧಾರಿಸುವ ಅತ್ಯಂತ ಆರೋಗ್ಯಕರ ಹಣ್ಣು. ಏಪ್ರಿಕಾಟ್ ಹೃದಯಕ್ಕೆ ಆರೋಗ್ಯಕರ ಹಣ್ಣು ಎನ್ನಲಾಗುತ್ತದೆ. ಕಿತ್ತಳೆ ಹಣ್ಣು ಕಿತ್ತಳೆ ಹಣ್ಣನ್ನು ತಿನ್ನುವುದು ಹೃದ್ರೋಗದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆವಕಾಡೊ ಆವಕಾಡೊಗಳು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಜೊತೆಗೆ ನಿಮ್ಮ ಹೃದಯ ಮತ್ತು ನಿಮ್ಮ ದೇಹದ ಇತರ ಭಾಗಗಳನ್ನು ರಕ್ಷಿಸಲು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಬೆರ್ರಿ ಹಣ್ಣುಗಳು ಸ್ಟ್ರಾಬೆರಿಗಳು, ಬೆರಿಹಣ್ಣುಗಳು, ಬ್ಲ್ಯಾಕ್‌ಬೆರಿಗಳು ಮತ್ತು ರಸಬೆರ್ರಿ ಹೃದಯದ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪೋಷಕಾಂಶಗಳಿಂದ…
ಕೇಪ್ ಟೌನ್: ವಿಷಾನಿಲ ಸೋರಿಕೆಯಿಂದಾಗಿ ಕನಿಷ್ಠ 16 ಜನ ಮೃತಪಟ್ಟಿದ್ದು ಸಾಕಷ್ಟು ಮಂದಿಗೆ ಆರೋಗ್ಯ ಸಮಸ್ಯೆಯಾಗಿರುವ ಘಟನೆ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್‌ನ ಬೋಕ್ಸ್‌ಬರ್ಗ್ ಬಳಿ ಸಂಭವಿಸಿದೆ. ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿ ಈ ವಿಷಾನಿಲ ಸೋರಿಕೆಯಾಗಿರಬಹುದು ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ 1 ವರ್ಷದ ಮಗು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ. ಅನಿಲ ಸೋರಿಕೆಯಿಂದಾಗಿ ಮೃತದೇಹಗಳು ಪ್ರದೇಶದಾದ್ಯಂತ ಅಲ್ಲಲ್ಲಿ ಚದುರಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿವೆ. ಈ ಮೊದಲು ದುರಂತದಲ್ಲಿ 24 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ರಕ್ಷಣಾ ತಂಡ ಮೃತದೇಹಗಳನ್ನು ಮರುಎಣಿಕೆ ಮಾಡಿದ್ದು, ಮೃತರ ಸಂಖ್ಯೆಯನ್ನು 16 ಎಂದು ಖಚಿತಪಡಿಸಲಾಗಿದೆ. ಸದ್ಯ ಅನಿಲ ಸೋರಿಕೆ ಇದೀಗ ನಿಂತಿದ್ದು, 100 ಮೀ. ಆಸುಪಾಸಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋರಖ್ ಪುರ;- ಗಾಂಧಿ ಪ್ರಶಸ್ತಿ ವಿರೋಧಿಸಿದ್ದ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಟಾಂಗ್ ಕೊಟ್ಟಿದ್ದಾರೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಗೀತಾ ಮುದ್ರಣಾಲಯದ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ಕೆಲವೊಮ್ಮೆ ಸಂತರು ದಾರಿ ತೋರಿಸುತ್ತಾರೆ, ಕೆಲವೊಮ್ಮೆ ಗೀತಾ ಪ್ರೆಸ್‌ನಂತಹ ಸಂಸ್ಥೆಗಳು. ಪ್ರಕಾಶಕರು ತನ್ನ ಕೆಲಸದ ಮೂಲಕ ಮಾನವೀಯತೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಗೋರಖಪುರ ಅಭಿವೃದ್ಧಿ ಹಾಗೂ ಸಂಸ್ಕೃತಿಯ ಪ್ರತೀಕ’ ಎಂದು ಕೊಂಡಾಡಿದರು. ಇತ್ತೀಚೆಗೆ ಗಾಂಧಿ ಶಾಂತಿ ಪ್ರಶಸ್ತಿ ಪಡೆದ ಧಾರ್ಮಿಕ ಪುಸ್ತಕ ಪ್ರಕಾಶನ ‘ಗೀತಾ ಪ್ರೆಸ್’ ಯಾವ ದೇಗುಲಕ್ಕೂ ಕಡಿಮೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಮಹಾತ್ಮ ಗಾಂಧಿಯವರು ಗೀತಾ ಪತ್ರಿಕಾ ಮಾಧ್ಯಮದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರು ಮತ್ತು ಅವರು ಅದರ ಮಾಸಿಕ ನಿಯತಕಾಲಿಕೆ ‘ಕಲ್ಯಾಣ್’ ಗೆ ಕೊಡುಗೆ ನೀಡಿದ್ದರು’ ಎಂದರು. ಇನ್ನೂ ಇತ್ತೀಚೆಗೆ ಹಿಂದೂ ಧಾರ್ಮಿಕ ಸಾಹಿತ್ಯದ ಅತಿದೊಡ್ಡ ಪ್ರಕಾಶನ ಸಂಸ್ಥೆ ಎಂದು ಹೇಳಿಕೊಳ್ಳುವ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಇತ್ತೀಚೆಗೆ…