ಬೆಂಗಳೂರು ;- ಸಿಎಂ ಸಿದ್ದರಾಮಯ್ಯ ತರ ಬಜೆಟ್ ಕೊಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಪರಿಷ್ಕರಣಾ ಬಜೆಟ್. ಯಾರೇ ಆ ಸ್ಥಾನದಲ್ಲಿದ್ರು ಸಿಎಂ ಸಿದ್ದರಾಮಯ್ಯ ತರ ಬಜೆಟ್ ಕೊಡಲು ಸಾಧ್ಯವಿಲ್ಲ. ಈ ಬಜೆಟ್ನ್ನು ಎಲ್ಲರೂ ಒಪ್ಪುತ್ತಾರೆ. ವಿರೋಧ ಪಕ್ಷ ಟೀಕಿಸಬಹುದು. ಐದು ಭರವಸೆ ಈಡೇರಿಸಲು ಸಮಸ್ಯೆ ಆಗದಂತೆ ಬಜೆಟ್ ಮಂಡಿಸಿದ್ದಾರೆ. ಎಲ್ಲ ರೀತಿಯಲ್ಲೂ ಉತ್ತಮದ ಬಜೆಟ್ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎರಡು ಬಾರಿ ಸಿಎಂ ಆದ ಕುಮಾರಸ್ವಾಮಿ ಅವರು ಬಜೆಟ್‌ಗೆ ಬಂದಿಲ್ಲ.ಅವರ ಬಗ್ಗೆ ನಗಬೇಕೋ, ಅಳಬೇಕೋ ಗೊತ್ತಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಅನೇಕ ಇಲಾಖೆಗಳಲ್ಲಿ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ನಂದಿನಿ ಬ್ರಾಂಡ್ ಮಾಡಲು ನಿರ್ಧರಿಸಿದ್ದೇವೆ. ನರೇಗಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಮುಂದುವರೆಸುವ ಬಗ್ಗೆಯೂ ಯೋಚಿಸಿದ್ದೇವೆ ಎಂದು ತಿಳಿಸಿದರು. ಇದು ಚೆಂಡು ಹೂ ಮುಡಿಸುವ ಬಜೆಟ್ ಅನ್ನೋ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷದ…
Author: Prajatv Kannada
ಬೆಂಗಳೂರು ;- ಮಾಜಿ ಸಚಿವ ಆರ್.ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅನ್ನು ಟೀಕಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಾಲಾಯಕ್ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸಿದ ಆಯವ್ಯಯ ಸುಳ್ಳು, ಮೋಸ, ಮೇಕೇದಾಟಿಗೆ 10 ಸಾವಿರ, ಮಹದಾಯಿಗೆ 10 ಸಾವಿರ ಕೋಟಿ ಇಡ್ತೀನಿ ಅಂದ್ರು. ಆದರೆ ಇಡೀ ಆಯವ್ಯಯ ಪುಸ್ತಕ ನೋಡಿದರೆ ಎಲ್ಲೂ ಹಣ ಇಟ್ಟಿಲ್ಲ ಎಂದು ಕಿಡಿಕಾರಿದರು. ಬೆಂಗಳೂರು ಅಭಿವೃದ್ಧಿಗೆ ಏನೂ ಇಟ್ಟಿಲ್ಲ. ಬೆಂಗಳೂರು ಅತಿ ಹೆಚ್ಚು ಟ್ಯಾಕ್ಸ್ ನೀಡುತ್ತೆ. ಈ ಸರ್ಕಾರ ಪೊಳ್ಳು ಭರವಸೆ ಜಾರಿಗೆ ತರಲು ಬಜೆಟ್ ಮಾಡಿದೆ ಬಿಟ್ರೆ ಏನೂ ಇಲ್ಲ. ನೀರಾವರಿ ಇಲಾಖೆಯಲ್ಲಿ ಬಿಜೆಪಿ ಮಾಡಿರೋ ಯೋಜನೆ ಜಾರಿಗೆ ತರಲು ಆರು ವರ್ಷ ಬೇಕು ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವಧಿಯಲ್ಲಿ ಇದ್ದ ಬಾಕಿ ಕಾಮಗಾರಿ ತೋರಿಸಿಲ್ಲ. ಅದೆಲ್ಲ ತೋರಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ;- ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕಾಗೆ ಹಾರಿಸುವ ಬಜೆಟ್ ಆಗಿದೆ ಎಂದು ಸಚಿವ ಸುನೀಲ್ ಕುಮಾರ್ ಟೀಕಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಕಾಗೆ ಹಾರಿಸುವ ಬಜೆಟ್ ಆಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಹೇಳುವ ಭಾಷಣವನ್ನು ಬಜೆಟ್ನಲ್ಲಿ ಹೇಳಿದ್ದಾರೆ. ಕನಸು ಇಲ್ಲ ದಾರಿಯೂ ಇಲ್ಲ ಎಂಬ ಬಜೆಟ್ ಇದಾಗಿದೆ. ಎನ್ಇಪಿಯನ್ನು ಕೈ ಬಿಡುತ್ತೇವೆ ಎಂದಿದ್ದಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಅಲುಗಾಡಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ಭಾಗಕ್ಕೂ ನ್ಯಾಯ ಒದಗಿಸದ ವಿಚಿತ್ರ ಬಜೆಟ್ ಇದಾಗಿದೆ. ಬಜೆಟ್ ಮೇಲಿನ ಚರ್ಚೆ ವೇಳೆ ಇದೆಲ್ಲವನ್ನೂ ಪ್ರಸ್ತಾಪಿಸುತ್ತೇವೆ. ಹಿಂದಿನ ಸರ್ಕಾರದ ಯೋಜನೆಗಳಿಗೆ ಮರು ನೇಮಕ ಮಾಡುವ ಕೆಲಸ ಆಗಿದೆ. ಕಾಂಗ್ರೆಸ್ ಯಾವತ್ತೂ ಅಲ್ಪಸಂಖ್ಯಾತರಿಗೆ ಒತ್ತು ನೀಡುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು. 128 ಪುಟದ ಈ ಬಜೆಟ್ನ್ನು ಒಂದು ಲೈನ್ ನಲ್ಲಿ ಹೇಳುವುದಾದರೆ. ಕೇಂದ್ರ ಸರ್ಕಾರವು ಏನೂ ಕೊಡಲಿಲ್ಲ. ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಮುಂದೆ ನಾನೂ ಏನೂ ಮಾಡಲು ಆಗುವುದಿಲ್ಲ ಎಂಬಂತಿದೆ. ಬಜೆಟ್ ಎಂದರೆ…
ಬೆಂಗಳೂರು ;-ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಿಂದ ಡಿಕೆಶಿಗೂ ನಿರಾಶೆ ಆಗಿದೆ ಎಂದು ಶಾಸಕ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಆಶಾ, ಅಂಗನವಾಡಿ ಕಾರಗಯಕರ್ತೆಯರಿಗೆ ಹಣ ಮೀಸಲಿಟ್ಟಿಲ್ಲ. ಇಡೀ ಬಜೆಟ್ ಪೊಲಿಟಿಕಲ್ ಸ್ಟೇಟ್ಮೆಂಟ್ ಅಂದ್ರೆ ತಪ್ಪಾಗಲ್ಲ. ನಿಜವಾಗಲು ಇದು ದುರಾದೃಷ್ಟ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ಬಿಜೆಪಿ ಆರ್ಥಿಕ ಶಿಸ್ತು ಕಾಪಾಡದಿದ್ರೆ ಇವತ್ತು ಕಷ್ಟ ಆಗ್ತಿತ್ತು. ಬಂಡವಾಳ ಹೂಡಿಕೆಯಲ್ಲೂ 9.8ಲಕ್ಷ ಕೋಟಿ MOU ಆಗಿದೆ. ಭ್ರಷ್ಟಾಚಾರ ಅಂತ ಆರೋಪಿಸಿ ಗೂಬೆ ಕೂರಿಸಿದ್ದಾರೆ. ಭ್ರಷ್ಟಾಚಾರ ನಡೆದಿದ್ರೆ GST ಹೆಚ್ಚಳವಾಗ್ತಿತ್ತಾ? ಎಂದು ಪ್ರಶ್ನಿಸಿದರು. ಬಜೆಟ್ ನಿಂದ ನಿರಾಶೆ ಆಗಿರೋದು ಕರ್ನಾಟಕ ಮಾತ್ರವಲ್ಲ ಡಿಕೆಶಿ ಅವರಿಗೂ ನಿರಾಶೆ ಆಗಿದೆ. ಡಿಕೆಶಿ ಅವರು ಚುನಾವಣೆ ಮೊದಲು ಪಾದಯಾತ್ರೆ ಮಾಡಿದ್ರು. ಮೇಕೇದಾಟಿಗೆ 3 ಸಾವಿರ, ಮಹದಾಯಿಗೆ 10 ಕೋಟಿ ಮೀಸಲು ಅಂತ ಹೇಳಿದ್ರು. ಆದರೆ ಹಣ ಮೀಸಲಿಟ್ಟಿಲ್ಲ. ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಟೀಕಿಸಿದರು.
ಮಂಗಳೂರು : ಕರಾವಳಿ ಪ್ರದೇಶಗಳಾದ ಮಂಗಳೂರಿನಲ್ಲಿ ಭಾರೀ ಮಳೆಯ ಕಾರಣದಿಂದಾಗಿ ದಿನದಿಂದ ದಿನಕ್ಕೆ ಅನಾಹುತಗಳು ಹೆಚ್ಚಾಗುತ್ತಿದ್ದು, ಮಳೆರಾಯನ ಆರ್ಭಟದಿಂದ ಮಂಗಳೂರು ಹೊರವಲಯದ ಹಳೆಯಂಗಡಿಯ ಕೆಲ ಮನೆಗೆ ನೀರು ನುಗ್ಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಭಾಗದ ಜನರಿಗೆ ಜಲದಿಗ್ಭಂದನವಾದಂತಾಗಿದೆ. ಅಲ್ಲದೇ ತೆಂಗು ತೋಟಕ್ಕೂ ಸಹ ಮಳೆ ನೀರು ನುಗ್ಗಿ ಬೆಳೆಯು ನಾಶವಾಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಶಾಲಾ – ಕಾಲೇಜುಗಳಿಗೂ ಸಹ ರಜೆಯನ್ನು ಘೋಷಣೆ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಕುರಿತು ವಿಪಕ್ಷ ಬಿಜೆಪಿ ಟ್ವೀಟ್( State BJP) ಮಾಡಿದ್ದು, ಇದು ಎಟಿಎಂ ಸರ್ಕಾರದ ಕಲೆಕ್ಷನ್ ಬಜೆಟ್ ಎಂದು ಜರಿದಿದೆ. ಅಲ್ಲದೆ, ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ ಇದಾಗಿದ್ದು, ಕರ್ನಾಟಕ ಇತಿಹಾಸದಲ್ಲೇ ಈಗ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ ಅನುತ್ಪಾದಕ ವಲಯಕ್ಕೆ ಮೀಸಲು ಎಂದು ಹೇಳಿದೆ. ಆದಾಯ ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ ಕೇವಲ ಸಾಲದ ಹೊರೆಯನ್ನು ಹೇರಿಕೆ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ, ಎಟಿಎಂ ಸರ್ಕಾರದ ಸಾಲರಾಮಯ್ಯ ಎಂದೂ ಹೇಳಿದೆ.
ಬೆಂಗಳೂರು: ಗುಜರಾತ್ ಹೈಕೋರ್ಟ್ನಿಂದ ರಾಹುಲ್ ಅರ್ಜಿ ವಜಾ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್(DK Sivakumar), ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ದೊಡ್ಡ ಅವಮಾನ ಎಂದರು. ಲೋಕಸಭಾ ಚುನಾವಣೆಯಲ್ಲಿ 7 ಲಕ್ಷ ಲೀಡ್ನಲ್ಲಿ ಗೆದ್ದಿದ್ದಾರೆ. ಗಾಂಧಿ ಕುಟುಂಬ ದೇಶಕ್ಕೆ ತ್ಯಾಗ ಮಾಡಿದೆ. ನಮ್ಮ ರಾಜ್ಯದಲ್ಲಿ ಭಾಷಣ ಮಾಡಿದ್ದಕ್ಕೆ ರಾಹುಲ್ (Rahul gandhi)ವಿರುದ್ಧ ಕೇಸ್ ಹಾಕಲಾಗಿದೆ. ಇದು ಬಿಜೆಪಿಯ ಕುತಂತ್ರ ಎಂದರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಈ ಮೂಲಕ ರಾಹುಲ್ ದೇಶ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇದನ್ನು ಸಹಿಸದೇ ಲೋಕಸಭೆ ಸದಸ್ಯತ್ವದಿಂದ ವಜಾ ಮಾಡಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದರು.
ಮೈಸೂರು: ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಸತತ 14ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತವರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದಾರೆ. ಹೌದು ನಾಡದೇವತೆ ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಸ್ತು ಅಂದಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಮತ್ತು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ದೃಷ್ಟಿಯಿಂದ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ರಾಜ್ಯದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹೊರ ರಾಜ್ಯಗಳ ಶಿಲ್ಪಿಗಳ ಮೇಲೆ ಅವಲಂಬಿತರಾಗಿದ್ದು, ನಮ್ಮ ರಾಜ್ಯದಲ್ಲಿಯೂ ದೇವಾಲಯಗಳ ನಿರ್ಮಾಣಕ್ಕಾಗಿ ನುರಿತ ಶಿಲ್ಪಿಗಳನ್ನು ತಯಾರಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದರು.
ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗೆ(Karnataka Budget 2023) ಅನುಮೋದನೆ ನೀಡಲಾಗಿದೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದ್ದು, ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನೂ ಜಲಸಂಪನ್ಮೂಲ ಇಲಾಖೆಗೆ 1 ಲಕ್ಷ ಕೋಟಿ ಹಣ ಮೀಸಲಿಡಲಾಗಿದ್ದು, 10 ನೀರಾವರಿ ಯೋಜನೆ ಪೂರ್ಣಗೊಳಿಸಲು 940 ಕೋಟಿ ಮೀಸಲಿಡಲಾಗಿದೆ. ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅನುದಾನ ಘೋಷಿಸಲಾಗಿದ್ದು, 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. 19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲಿಡಲಾಗಿದೆ. ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ನಿರ್ಧಾರ ಮಾಡಲಾಗಿದೆ.
ಹುಬ್ಬಳ್ಳಿ: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯವಾಕ್ಯದೊಂದಿಗೆ(Karnataka Budget 2023) ರಾಜ್ಯದ ಜನರನ್ನು ಹಿತದೃಷ್ಟಿಯಲ್ಲಿಟ್ಟು ಕೊಂಡು ರೂ.3 ಲಕ್ಷ 28 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ. ಆ ಮೂಲಕ ರಾಜ್ಯದ ಎಲ್ಲ ವರ್ಗದ ಜನರ ಸರ್ವಾಂಗೀಣ ಏಳಿಗೆಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ್ (Jagadish Shetter)ಹೇಳಿದ್ದಾರೆ. ರಾಜ್ಯದ ಜನರಿಗೆ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಆ ಹಿನ್ನೆಲೆಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಗಳನ್ನು ಜಾರಿ ಮಾಡಲಾಗುವುದು. ಇವುಗಳ ಜಾರಿಗೆ ರೂ.52 ಸಾವಿರ ಕೋಟಿ ಅಗತ್ಯವಿದ್ದು, ರಾಜ್ಯದ 1 ಕೋಟಿಗೂ ಅಧಿಕ ಜನಸಾಮಾನ್ಯರಿಗೆ ಮಾಸಿಕ 4 ರಿಂದ 5 ಸಾವಿರ ನೀಡಲಾಗುವುದು. ಅಲ್ಲದೇ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸಹ ಕೈಬಿಡಲಾಗುವುದು. ರೈತರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ರೂ. 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಹಾಗೂ ದೀರ್ಘಾವಧಿ…