Author: Prajatv Kannada

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ವೇಳೆ ಸದನದ ಒಳಗಡೆ ಕುಳಿತಿದ್ದ ವ್ಯಕ್ತಿಯನ್ನು ಕರಿಯಪ್ಪ ಯಾನೇ ತಿಪ್ಪೇರುದ್ರ ಎಂದು ಗುರುತಿಸಲಾಗಿದೆ.ಈ ವ್ಯಕ್ತಿ ಹೇಗೆ ಬಂದಿದ್ದು ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ಇದರ ಬಗ್ಗೆ ವರದಿ ಕೇಳಿದ ಗೃಹ ಸಚಿವ ಪರಮೇಶ್ವರ್ ಹಾಗೆ ಕೂಡಲೇ ಸಂಪೂರ್ಣ ರಿಪೋರ್ಟ್ ಕೊಡುವಂತೆ ಸೂಚನೆ ನೀಡಲಾಗಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ಕರಿಯಪ್ಪ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. 70 ವರ್ಷದ ಈ ವ್ಯಕ್ತಿಯನ್ನು ಪೊಲೀಸ್ ಕಮಿಷನರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವ ಶಾಸಕರ ಹೆಸರನ್ನು ಬಳಸಿ ಒಳಹೋಗಿದ್ದ?, ಆಸನದಲ್ಲಿ ಕುಳಿತುಕೊಂಡಿದ್ದು ಯಾಕೆ? ಹಾಗೂ ಯಾವ ದಾಖಲೆಗಳು ತನ್ನ ಬಳಿಯಿದ್ದವು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ (Karnataka Budget 2023) ಮಂಡನೆಯ ವೇಳೆ ಸದನದ ಒಳಗಡೆ ಕುಳಿತಿದ್ದ ವ್ಯಕ್ತಿಯನ್ನು ಕರಿಯಪ್ಪ ಯಾನೇ ತಿಪ್ಪೇರುದ್ರ ಎಂದು ಗುರುತಿಸಲಾಗಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ಕರಿಯಪ್ಪ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. 70 ವರ್ಷದ ಈ ವ್ಯಕ್ತಿಯನ್ನು ಪೊಲೀಸ್ ಕಮಿಷನರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವ ಶಾಸಕರ ಹೆಸರನ್ನು ಬಳಸಿ ಒಳಹೋಗಿದ್ದ?, ಆಸನದಲ್ಲಿ ಕುಳಿತುಕೊಂಡಿದ್ದು ಯಾಕೆ? ಹಾಗೂ ಯಾವ ದಾಖಲೆಗಳು ತನ್ನ ಬಳಿಯಿದ್ದವು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಳ ಹೋದ ಬಳಿಕ ನೇರವಾಗಿ ಸದನದ ಸದಸ್ಯರ ಜಾಗದಲ್ಲಿ ಕುಳಿತಿದ್ದಾರೆ. ಈ ವೇಳೆ ಅನುಮಾನಗೊಂಡ ಶಾಸಕ ಶರಣ ಗೌಡ ಅವರು ಅಕ್ಕ-ಪಕ್ಕದಲ್ಲಿದ್ದ ಬೇರೆ ಶಾಸಕರ ಬಳಿಯೂ ವಿಚಾರಿಸಿದ್ದಾರೆ. ಎಲ್ಲರೂ ನಮಗೆ ಪರಿಚಯ ಇಲ್ಲ ಅಂತಾ ಉತ್ತರಿಸಿದ್ದಾರೆ. ಹೀಗಾಗಿ ಶಾಸಕರು ನೇರವಾಗಿ ವ್ಯಕ್ತಿಯನ್ನೇ ಕೃಳಿದ್ದಾರೆ. ಆಗ ಅವರು ನಾನು ಮೊಳಕಾಲ್ಮೂರು ಶಾಸಕ ಎಂದಿದ್ದಾರೆ. ತಕ್ಷಣ ಅನುಮಾನಗೊಂಡ ಶಾಸಕರು ಕಾರ್ಯದರ್ಶಿ ಗಮನಕ್ಕೆ ತಂದು ಸ್ಪೀಕರ್‍ಗೆ ದೂರು ನೀಡಿದ್ದಾರೆ. ಅದಾದ ಬಳಿಕ…

Read More

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ್ದ ಎಪಿಎಂಸಿ ಕಾಯ್ದೆ ವಾಪಸ್​ಗೆ ನಿರ್ಧಾರ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲಾಗಿದ್ದು, ‘ಕಾಯದ ನಿಧಿ’ ಯೋಜನೆಯ ಅನುದಾನವನ್ನು 10,000 ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 1696 ಕೋಟಿ ವೆಚ್ಚದಲ್ಲಿ ರಾಯಚೂರಿನಲ್ಲಿ ಹೈಬ್ರಿಡ್ ಆನ್ಯೂಟಿ ಮಾದರಿ ರಸ್ತೆ ನಿರ್ಮಾಣಕಲ್ಯಾಣ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಅನುದಾನ ನೀಡಲಾಗಿದ್ದು, ರಾಯಚೂರಿನ ಕಲ್ಮಲಾ ಜಂಕ್ಷನ್​ನಿಂದ ಸಿಂಧನೂರಿನವರೆಗೆ ಹೈಬ್ರಿಡ್ ಆನ್ಯೂಟಿ ಮಾದರಿಯ ರಸ್ತೆ ನಿರ್ಮಾಣಕ್ಕೆ 1696 ಕೋಟಿ ವೆಚ್ಚದಲ್ಲಿ 78 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಜೊತೆಗೆ 4,083 ಕೋಟಿ ವೆಚ್ಚದಲ್ಲಿ ಅಂತರ್ ಜಿಲ್ಲಾ ಸಂಪರ್ಕ ಕಲ್ಪಿಸಲು 2400 ಕಿ.ಮೀ ಜಿಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ ನಿರ್ಧರಿಸಲಾಗಿದೆ. ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದ್ದು, ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.

Read More

ಬೆಂಗಳೂರು: ರಾಜ್ಯ  ಸರ್ಕಾರ ಮಂಡನೆ ಮಾಡಿದ ಬಜೆಟ್ ಅತ್ಯಂತ ಬೋಗಸ್ ಬಜೆಟ್ ಆಗಿದೆ ಎಂದು ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಗುಡುಗಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಇರುವುದರಿಂದ  ಇದೊಂದು ಬೋಗಸ್ ಬಜೆಟ್ ಆಗಿದ್ದು ಯಾವುದೇ ಅಭಿವೃದ್ಧಿ ಯೋಜನೆ ಬಗ್ಗೆ ಈ ಬಜೆಟ್ ನಲ್ಲಿ ಒತ್ತು ಕೊಟ್ಟಿಲ್ಲ. ಕಳೆದ ಚುನಾವಣೆ ವೇಳೆ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಸರಕಾರಿ ಹಣವನ್ನು ಅವೈಜ್ಞಾನಿಕವಾಗಿ ಬಳಸಿಕೊಂಡು , ಬರುವ ಲೋಕಸಭೆಯಲ್ಲಿ ಮತ ಪಡೆಯಲು ಯತ್ನಿಸಿರುವ ತಂತ್ರಗಾರಿಕೆಯ ಬಜೆಟ್ ಆಗಿದ್ದು ಈವರೆಗೆ ಘೋಷಿಸಿರುವಂತೆ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಿಕೊಳ್ಳಲು ಪರದಾಟ ನಡೆಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ.

Read More

ಬೆಂಗಳೂರು : ಜಲಸಂಪನ್ಮೂಲ ಇಲಾಖೆಗೆ 1 ಲಕ್ಷ ಕೋಟಿ ಹಣ ಮೀಸಲಿಡಲಾಗಿದ್ದು, 10 ನೀರಾವರಿ ಯೋಜನೆ ಪೂರ್ಣಗೊಳಿಸಲು 940 ಕೋಟಿ ಮೀಸಲಿಡಲಾಗಿದೆ. ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅನುದಾನ ಘೋಷಿಸಲಾಗಿದ್ದು, 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. 19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲಿಡಲಾಗಿದೆ. ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ನಿರ್ಧಾರ ಮಾಡಲಾಗಿದೆ. ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ-ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.  770 ಕೋಟಿ ರೂ. ವೆಚ್ಚದಲ್ಲಿ 899  ಕೆರೆ ತುಂಬಿಸುವ 19 ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದ್ದು, 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. 19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಶುಕ್ರವಾರ 14ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಘೋಷಣೆ ಮಾಡುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸರ್ಕಾರದ ಮೊದಲ ಬಜೆಟ್‌ ಮಂಡಿಸಿದರು. ವಿಧಾನಸಭೆ ಚುನಾವಣೆ ವೇಳೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ದೊಡ್ಡ ಪಾಲನ್ನು ಮೀಸಲಿಟ್ಟಿದ್ದಾರೆ. ಇನ್ನು ಯಾವೆಲ್ಲ ಇಲಾಖೆಗಳಿಗೆ ಎಷ್ಟೆಷ್ಟು ಅನುದಾನ ಮೀಸಲಿದ್ದಾರೆ ಎನ್ನುವ ವಿವರ ಇಲ್ಲಿದೆ. ಸಿದ್ದರಾಮಯ್ಯನವರ 14 ನೇ ಬಜೆಟ್​ನಲ್ಲಿ ಯಾವ ಯಾವ ಇಲಾಖೆಗೆ ಎಷ್ಷೇಷ್ಟು ಅನುದಾನ ನೋಡುವುದಾದರೆ ‘ಶಿಕ್ಷಣ ಇಲಾಖೆ 37,000 ಕೋಟಿ ಅನುದಾನ ಮೀಸಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 24,000 ಕೋಟಿ, ಇಂಧನ ಇಲಾಖೆ 22,000 ಕೋಟಿ, ನೀರಾವರಿ ಇಲಾಖೆ 19,000 ಕೋಟಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್​ರಾಜ್ ಇಲಾಖೆ 18,000 ಕೋಟಿ, ಒಳಾಡಳಿತ & ಸಾರಿಗೆ ಇಲಾಖೆ 16,000 ಕೋಟಿ, ಕಂದಾಯ ಇಲಾಖೆ 16,000 ಕೋಟಿ, ಆರೋಗ್ಯ…

Read More

ತೆಲಂಗಾಣ: ಪಶ್ಚಿಮ ಬಂಗಾಳದ ಸಿಕಂದರಾಬಾದ್ ಮತ್ತು ಹೌರಾ ನಡುವೆ ಓಡುತ್ತಿರುವ ಫಲಕ್ನುಮಾ ಎಕ್ಸ್‌ಪ್ರೆಸ್ ನ(Falaknuma Express Train) 3 ಬೋಗಿಗಳಿಗೆ ಶುಕ್ರವಾರ ತೆಲಂಗಾಣದ ಯಾದಾದ್ರಿ-ಭುವನಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪಗಿಡಿಪಲ್ಲಿ ಮತ್ತು ಬೊಮ್ಮಾಯಿಪಲ್ಲಿ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಬ್ಯಾಟರಿಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಇದು ಸಂಭವಿಸಿದೆ ಎಂದು ವರದಿಯಾಗಿದೆ. ಒಂದು ಕೋಚ್‌ನಿಂದ ಹೊಗೆ ಮತ್ತು ಬೆಂಕಿ ಹೊರಹೊಮ್ಮಿತು ಈ ವೇಳೆ ಇನ್ನೊಂದಕ್ಕೆ ಹರಡಿತು. ಇದರಿಂದ ಅಕ್ಕಪಕ್ಕದ ಬೋಗಿಗಳಲ್ಲಿದ್ದ ಹಲವಾರು ಪ್ರಯಾಣಿಕರು ಭಯಭೀತರಾಗಿ ರೈಲಿನಿಂದ ಸುರಕ್ಷಿತವಾಗಿ ಹೊರಬಂದರು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ನಂತರ, ಬೋಗಿಗಳನ್ನು ಬೇರ್ಪಡಿಸಿ ಸುರಕ್ಷತಾ ತಪಾಸಣೆಯನ್ನು ಖಾತ್ರಿಪಡಿಸಿದ ನಂತರ, ಅಧಿಕಾರಿಗಳು ರೈಲನ್ನು ಚಲಾವಣೆಗೆ ಫ್ಲ್ಯಾಗ್ ಆಫ್ ಮಾಡಿದರು. ಚಾರ್ಜಿಂಗ್ ಪಾಯಿಂಟ್ ಬಳಿ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಲ್ವೆಯ DM ಗೆ ಒಂದು ಇಂಗ್ಲೀಷಿನಲ್ಲಿ ಪತ್ರ ಕಳುಹಿಸಲಾಗಿತ್ತು. ಆದ್ರೆ ಯಾರೋ ಉದ್ದೇಶಪೂರ್ವಕವಾಗಿ ಬರೆದಿರಬೇಕು ಎಂದು ಭಾವಿಸಿ ಅಧಿಕಾರಿಗಳು…

Read More

ಹುಬ್ಬಳ್ಳಿ: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯವಾಕ್ಯದೊಂದಿಗೆ(Karnataka Budget 2023)  ರಾಜ್ಯದ ಜನರನ್ನು ಹಿತದೃಷ್ಟಿಯಲ್ಲಿಟ್ಟು ಕೊಂಡು ರೂ.3 ಲಕ್ಷ 28 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ. ಆ ಮೂಲಕ ರಾಜ್ಯದ ಎಲ್ಲ ವರ್ಗದ ಜನರ ಸರ್ವಾಂಗೀಣ ಏಳಿಗೆಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ್ (Jagadish Shetter)ಹೇಳಿದ್ದಾರೆ. ರಾಜ್ಯದ ಜನರಿಗೆ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಆ ಹಿನ್ನೆಲೆಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಗಳನ್ನು ಜಾರಿ ಮಾಡಲಾಗುವುದು. ಇವುಗಳ ಜಾರಿಗೆ ರೂ.52 ಸಾವಿರ ಕೋಟಿ ಅಗತ್ಯವಿದ್ದು, ರಾಜ್ಯದ 1 ಕೋಟಿಗೂ ಅಧಿಕ ಜನಸಾಮಾನ್ಯರಿಗೆ ಮಾಸಿಕ 4 ರಿಂದ 5 ಸಾವಿರ ನೀಡಲಾಗುವುದು. ಅಲ್ಲದೇ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸಹ ಕೈಬಿಡಲಾಗುವುದು. ರೈತರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ರೂ. 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಹಾಗೂ ದೀರ್ಘಾವಧಿ…

Read More

ಅಹಮದಾಬಾದ್: ಮಾನನಷ್ಟ ಪ್ರಕರಣದಲ್ಲಿ (Defamation Case) ಸೂರತ್ ನ್ಯಾಯಾಲಯ (Surat Court) ನೀಡಿದ್ದ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಇದೀಗ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ರಾಗಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ (Gujarat High Court) ವಜಾ ಮಾಡಿದೆ. ಸುದೀರ್ಘ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ಶುಕ್ರವಾರ ತನ್ನ ಆದೇಶ ಪ್ರಕಟಿಸಿದೆ. ಸೂರತ್ ನ್ಯಾಯಾಲಯ ನೀಡಿದ ಆದೇಶ ಸರಿಯಾಗಿದೆ ಮತ್ತು ಕಾನೂನುಬದ್ಧವಾಗಿದೆ ಎನ್ನುವ ಮೂಲಕ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಶಿಕ್ಷೆಯ ತಡೆ ನಿರಾಕರಿಸುವುದರಿಂದ ರಾಹುಲ್ ಗಾಂಧಿ ಅವರಿಗೆ ಅನ್ಯಾಯವಾಗುವುದಿಲ್ಲ, ಶಿಕ್ಷೆಯನ್ನು ತಡೆಹಿಡಿಯಲು ಯಾವುದೇ ಸಮಂಜಸವಾದ ಕಾರಣವಿಲ್ಲ. ವಿಧಿಸಲಾದ ಆದೇಶವು ಸರಿ ಮತ್ತು ಕಾನೂನುಬದ್ಧವಾಗಿದೆ. ಅನರ್ಹತೆಯು ಕೇವಲ ಸಂಸದರು ಮತ್ತು ಶಾಸಕರಿಗೆ ಸೀಮಿತವಾಗಿಲ್ಲ. ಇದಲ್ಲದೆ ಅರ್ಜಿದಾರರ ವಿರುದ್ಧ ಹತ್ತು ಪ್ರಕರಣಗಳು ಬಾಕಿ ಉಳಿದಿವೆ. ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಅಥವಾ ಸಂಸದರಾಗಿ ತಮ್ಮ ಸ್ಥಾನಮಾನವನ್ನು…

Read More

ಮೈಸೂರು: ವೇಶ್ಯವಾಟಿಕೆ ಅಡ್ಡೆ(Prostitution) ಮೇಲೆ ದಾಳಿ ನಡೆಸಿರುವ ಪೊಲೀಸರು  7  ಮಂದಿ ಬಂಧಿಸಲಾಗಿದೆ. ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ನಗರದ ಬೋಗಾದಿಯಲ್ಲಿರುವ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಒಡನಾಡಿ ಸೇವಾ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಅವರು, ಖಚಿತ ಮಾಹಿತಿ ನೀಡಿದ ಮೇರೆಗೆ ಸರಸ್ವತಿಪುರಂ ಪೋಲಿಸರು ಹಾಗೂಒಡನಾಡಿ ಸೇವಾ ಸಂಸ್ಥೆ ಜಂಟಿ ಕಾರ್ಯಾಚರಣೆ‌ ನಡೆಸಿ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಮಾಡಿದ್ದಾರೆ. ಸರಸ್ವತಿ ಪುರಂ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More