Author: Prajatv Kannada

ಬೆಂಗಳೂರು: KSRTC ಬಸ್​ ಚಾಲಕ ಜಗದೀಶ್​​ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಪ್ರಸ್ತಾಪ ಮಾಡಿದ ವಿಚಾರವಾಗಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಇಷ್ಟೊಂದು ಹತಾಶರಾಗಬೇಡಿ ಎಂದ ಕುಮಾರಸ್ವಾಮಿಗೆ ಹೇಳಿದರು. ಇದರಿಂದ ಗರಂ ಆದ ಕುಮಾರಸ್ವಾಮಿ, ಯಾರು ಹತಾಶರಾಗಿರುವುದು ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ನಿಮಗೆ ನಾಚಿಕೆಯಾಗಬೇಕು ಎಂದು ಚಲುವಾರಯಸ್ವಾಮಿ ಹೇಳಿದಾಗ ಸಿಟ್ಟಿಗೆದ್ದ ಕುಮಾರಸ್ವಾಮಿ, ನಿಮ್ಮದು ಗೊತ್ತಿದೆ ಕುಳಿತುಕೊಳ್ಳಿ, ಕಡತದಿಂದ ಪದ ತೆಗೆಸಿ ಎಂದರು. ಅಲ್ಲದೆ, ಪಂಚಾಯಿತಿ ಲೆವೆಲ್​​ನಲ್ಲಿ ರಾಜಕೀಯ ಮಾಡುತ್ತಿರುವವರು ನೀವು. ನಾಚಿಕೆ ಆಗಬೇಕು ನಿಮಗೆ ಎಂದು ಚಲುವರಾಯಸ್ವಾಮಿ ಹೇಳಿದಾಗ, ನಾಚಿಕೆ ಆಗಬೇಕಿರುವುದು ನನಗಲ್ಲ ನಿಮಗೆ,‌ ಕೂರಯ್ಯ ಸಾಕು, ನಾಚಿಕೆ ಆಗುವಂಥದ್ದು ನಾನೇನು ಮಾಡಿಲ್ಲ, ಮಾಡಿಕೊಂಡಿದ್ದು ನೀವು ಎಂದರು. ಆಕ್ರೋಶದ ನುಡಿಗಳ ವೇಳೆ ಬಾಡಿ ಎಂಬ ಶಬ್ದವನ್ನು ಕುಮಾರಸ್ವಾಮಿ ಬಳಸಿದ ಬಗ್ಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಆಯ್ತು ಪದ ಬಳಕೆಯಲ್ಲಿ ತಪ್ಪಾಗಿದೆ, ಜೀವ ಇರುವ ಬಾಡಿ ಎಂದು ಹೇಳಿ ಕೈ ಶಾಸಕರನ್ನು ಸುಮ್ಮನಿರುವಂತೆ ಮಾಡಿದರು.

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಾ ಸುಳ್ಳುಗಾರ. ದೇಶದಲ್ಲಿ ಹಿಟ್ ಅಂಡ್ ರನ್ ಹೇಳಿಕೆ ನೀಡುವ ಮುಖಂಡರಲ್ಲಿ ಕುಮಾರಸ್ವಾಮಿ ಮೊದಲಿಗರು. ಇದು ರಾಜ್ಯದ ದುರಂತ. ಕಳೆದ ಹತ್ತು ವರ್ಷಗಳಿಂದ ಕುಮಾರಸ್ವಾಮಿ ಅವರು ಕೇವಲ ಆರೋಪ ಮಾಡುತ್ತಿದ್ದಾರೆ ಹೊರತು ಒಂದು ಆರೋಪವನ್ನು ಸಾಬೀತು ಮಾಡಿಲ್ಲ. ವರ್ಗಾವಣೆ ಕುರಿತು ಒಂದು ಪೆನ್ ಡ್ರೈವ್ ತೋರಿಸಿದ್ದಾರೆ. ಚೆಸ್ಕಾಂ ಹಾಗೂ ಮೆಸ್ಕಾಂ ಹುದ್ದೆಗಳಿಗೆ ಹತ್ತು ಕೋಟಿ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ಚೆಸ್ಕಾಂ ಹಾಗೂ ಮೆಸ್ಕಾಂ ನಾಲ್ಕೈದು ಜಿಲ್ಲೆಗಳನ್ನು ಒಳಗೊಂಡಂತಹ ಕಂಪನಿಯಾಗಿದೆ. ಇದರಲ್ಲಿ 10 ಕೋಟಿ ಕೊಟ್ಟು ಹುದ್ದೆ ತರೀತಿಯಾಗುವ ಪರಿಸ್ಥಿತಿ ಇದೆಯಾ? ಅದು ಯಾವ ಹುದ್ದೆ? ಯಾರಿಗೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಆ ಬಗ್ಗೆ ದಾಖಲೆ ನೀಡಲಿ. ಒಂದು ದಿನಕ್ಕೆ 50 ಲಕ್ಷ ಸಂಪಾದನೆ ಆಗುವಂತಹ ಹುದ್ದೆ ಎಂದು ಹೇಳುತ್ತಾರೆ. ಅಂತಹ ಹುದ್ದೆ ಯಾವುದಾದರೂ ಇದೆಯಾ? ಇಡೀ ಮೆಸ್ಕಾಂ ಸಂಸ್ಥೆಯ ಒಂದು ದಿನಕ್ಕೆ 50 ಲಕ್ಷ ವಹಿವಾಟು ಆಗುವುದಿಲ್ಲ. ಕುಮಾರಸ್ವಾಮಿಯವರ ಗುರಿ ಬೇರೆ ಇತ್ತು. ಅವರು…

Read More

ಬೆಂಗಳೂರು: ನಾನು ಯಾವುದಾದರೂ ವರ್ಗಾವಣೆ ವಿಷಯದಲ್ಲಿ ಭಾಗಿಯಾದ ದಾಖಲಾತಿ ನೀಡಿದರೆ ರಾಜಕೀಯ ನಿವೃತ್ತಿ ಆಗುವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು. ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಈ ಸರಕಾರ ದಿನದ 24 ಗಂಟೆಯೂ ವರ್ಗಾವಣೆ ದಂಧೆಯನ್ನೇ ನಡೆಸುತ್ತಿದೆ. ಅಭಿವೃದ್ಧಿ ಬದಲು ನಗದು ಅಭಿವೃದ್ಧಿಯಲ್ಲಿ ತೊಡಗಿದೆ. ಇದನ್ನು ಹೇಳಿದರೆ ನಮ್ಮ ಮೇಲೆಯೇ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನನ್ನಲ್ಲಿ ಈ ಸರಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗಳಿಗೆ ಸಂಬಂಧಿಸಿ ನನ್ನಲ್ಲಿ ದಾಖಲೆಗಳಿವೆ. ಅದರಲ್ಲಿ ಯಾರಿಗೂ ಅನುಮಾನ ಬೇಡ. ಅದನ್ನು ಬಿಡುಗಡೆ ಮಾಡಬೇಕಾದ ಸಂದರ್ಭದಲ್ಲಿ ಮಾಡುತ್ತೇನೆ. ಯಾವಾಗ, ಎಲ್ಲಿ ಬಿಡುಗಡೆ ಮಾಡುತ್ತೇನೆ ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಹಲವಾರು ವರ್ಷಗಳು ಕೆಲಸ ಮಾಡಿದ್ದಾರೆ, ಅವರು ಎಂದಾದರೂ ದಾಖಲೆ ಬಿಡುಗಡೆ ಮಾಡಿದ್ದರಾ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು. ಅವರು ಎಂದೂ ದಾಖಲೆ ಇಟ್ಟು ಮಾತನಾಡಿದನ್ನು ನಾನು ನೋಡಲೇ ಇಲ್ಲ. ಇದ್ದರೆ ತೋರಿಸಲಿ.…

Read More

ಬೆಂಗಳೂರು: ವಿಧಾನಮಂಡಲದ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬರುವ ವಿಷಯದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ. ಟಿ. ಎ. ಶರವಣ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಾದ ಸುಮಾರು 5000 ಕೋಟಿಗೂ ಹೆಚ್ಚುವರಿ ವಿಶೇಷ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಲು ನಿರಾಕರಿಸುತ್ತಿರುವ ಬಗ್ಗೆ  ಪರಿಷತ್ ನಲ್ಲಿ  ಟಿ.ಎ.ಶರವಣ ಅವರು ಎಲ್ಲರ ಮುಂದೆ  ಪ್ರಸ್ತಾಪ ಮಾಡಿದರು. ಇದೇ ವೇಳೆ ಇದು ಸತ್ಯ ಸಮಘತಿ ಇರಬಹುದು ಆದರೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿ ಮಾಡಲು ಅನುದಾನವನ್ನು ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎನ್ನುವುದರ ಬಗ್ಗೆ ಸಿಎಂ ಸಿದ್ದರಾಮಯ್ಯನವರು ನಮಗೆ ಉತ್ತರಿಸಬೇಕಾಗುತ್ತದೆ ಹಾಗೆ ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ ಅದರ ಬಗ್ಗೆನೂ ನಮಗೆ ನೀವು ತಿಳಿಸಬೇಕು ಎಂದು ಹೇಳಿದರು.

Read More

ಬೆಂಗಳೂರು: ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ಕುರಿತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಯತೀಂದ್ರ ಭಾಗಿ ಎಂದು ಆರೋಪ ಮಾಡಿದ್ದರು ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಅವರು ನಮ್ಮ ಮನೆಯಲ್ಲಿ ಇದ್ದಾರೆ ಅಂತ ಆರೋಪ ಮಾಡೋದು‌ ಸರಿಯಲ್ಲ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ YST ಟ್ಯಾಕ್ಸ್ ಜಾರಿಗೆ ಬಂದಿದೆ ಎಂಬ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಎಂಎಲ್ಎ ಆಗಿರಲಿಲ್ವಾ? ಯತೀಂದ್ರ ನಮ್ಮ ಮನೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ ಅವರ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಮನೆಯಲ್ಲೂ ಅವರ ಮಗ ಇದ್ದರು ಅಲ್ಲವೇ? ಅದನ್ನ ಏನು‌ ಅಂತ ಕರೆಯೋದು? ಅವರ ಹೆಂಡತಿ MLA ಆಗಿದ್ರು. ಅವರ ಅಣ್ಣ ಮಂತ್ರಿ ಆಗಿದ್ರು, ಅವರ ತಂದೆ ಪ್ರಧಾನಿ ಆಗಿದ್ರು. ಅವರ ಅಣ್ಣನ ಮಕ್ಕಳು ಎಂಎಲ್ಎ ಆಗಿದ್ರು. ಅವರಿಗೆ ಏನಂತ ಕರಿಯಬೇಕು? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

Read More

ಬೆಂಗಳೂರು: ವರ್ಗಾವಣೆಗೆ ಬೇಸತ್ತು ನಾಗಮಂಗಲದ ಕೆಎಸ್​ಆರ್​ಟಿಸಿ ಚಾಲಕ ಜಗದೀಶ್​ ಆತ್ಮಹತ್ಯೆಗೆ ಯತ್ನಿಸಿದ್ದು ಆ ನಂತರ ಜಗದೀಶ್​ನನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು ವಿಧಾನಸಭಾ ಕಲಾಪದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಸದನದಲ್ಲಿ ಮಾಜಿ ಸಿಎಂಗಳಾದ ಹೆಚ್​ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರೂ ಈ ವಿಚಾರ ಪ್ರಸ್ತಾಪಿಸಿದ್ದು ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶೂನ್ಯವೇಳೆಯಲ್ಲಿ ಬಸವರಾಜ ಬೊಮ್ಮಾಯಿ ಇದೇ ವಿಚಾರವನ್ನು ಪ್ರಸ್ತಾಪಿಸಿದರು. ಸೂಕ್ತ ತನಿಖೆ ಆಗಬೇಕು, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕೆಎಸ್​ಆರ್​ಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಬರೆದ ಪತ್ರದಲ್ಲಿ ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಎಫ್​ಐಆರ್​ನಲ್ಲಿ ಸಚಿವರ ಹೆಸರು ಉಲ್ಲೇಖಿಸಬೇಕು. ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು. ಬೊಮ್ಮಾಯಿ ಹೇಳಿಕೆ ವೇಳೆ ಆಡಳಿತ ಪಕ್ಷದ ಶಾಸಕರಿಂದ ವಿರೋಧ ವ್ಯಕ್ತವಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಆರ್.ಪುರಂ ಠಾಣೆ ಇನ್ಸ್​ಪೆಕ್ಟರ್ ಆಗಿದ್ದ…

Read More

ಬೆಂಗಳೂರು: ಮಾಜಿ ಶಾಸಕ ಅಜ್ಜಂಪೀರ್​ ಖಾದ್ರಿ ಉಚ್ಛಾಟನೆಯನ್ನು ಕಾಂಗ್ರೆಸ್ ಹಿಂಪಡೆದಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದಕ್ಕೆ ಮಾಜಿ ಶಾಸಕ ಅಜ್ಜಂಪೀರ್​ ಖಾದ್ರಿಯನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಆದ್ರೆ ಈಗ ಕಾಂಗ್ರೆಸ್ ಶಿಸ್ತು ಸಮಿತಿ ಮತ್ತೆ ಖಾದ್ರಿ ಉಚ್ಚಾಟನೆ ಹಿಂಪಡೆದಿದೆ. ಸಿಎಂ ವಿರುದ್ಧ ನಾಲ್ಕು ಬಾರಿ ಸೋತಿದ್ದೇನೆ ಆದ್ದರಿಂದ ಹೈಕಮಾಂಡ್ ಸ್ಪರ್ಧೆ ಬೇಡ ಅಂತ ಹೇಳಿದೆ. ಹಾಗಾಗಿ ವಿನಯ್ ಕುಲಕರ್ಣಿಗೆ ಕ್ಷೇತ್ರ ಬಿಟ್ಟುಕೊಡುತ್ತಿದ್ದೇನೆ ಎಂದು ಇತ್ತೀಚೆಗೆ ಅಜ್ಜಂಪೀರ್‌ ಖಾದ್ರಿ ಹೇಳಿದ್ದರು

Read More

ಬೆಂಗಳೂರು:  ರಾಜ್ಯ ಸರ್ಕಾರವು ವಾಹನ ಸವಾರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದು, ಸಂಚಾರಿ ದಂಡ ಪಾವತಿಗೆ ಶೇ 50ರಷ್ಟು ರಿಯಾಯಿತಿ ನೀಡಿದೆ. ಸಂಚಾರಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಅವಕಾಶವನ್ನು ಮತ್ತೊಮ್ಮೆ ನೀಡಲಾಗಿದ್ದು, ಸೆಪ್ಟೆಂಬರ್ 9ರವರೆಗೂ ದಂಡ ಪಾವತಿಗೆ ಅವಕಾಶವಿರಲಿದೆ. ಆದರೆ, ಕೇವಲ ಫೆಬ್ರವರಿ 11ಕ್ಕೂ ಮೊದಲು ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರವೇ ಈ ರಿಯಾಯತಿ ಅವಕಾಶ ಅನ್ವಯವಾಗಲಿದೆ. ಇಂದಿನಿಂದ ದಂಡ ಪಾವತಿಸಲು ಅವಕಾಶ ಆರಂಭವಾಗಲಿದೆ ಎಂಬುದರ ಕುರಿತು ಸಂಚಾರಿ ಪೊಲೀಸ್ ಇಲಾಖೆಯಿಂದ ಮಾಹಿತಿ ಲಭ್ಯವಾಗಬೇಕಿದೆ. ಆ ಬಳಿಕ‌ ವಾಹನ ಸವಾರರು ಸಂಚಾರಿ ಪೊಲೀಸ್ ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ಒನ್, ಪೇಟಿಎಂ, ಬೆಂಗಳೂರು ಸಂಚಾರಿ ಪೊಲೀಸ್ ವೆಬ್‌ಸೈಟ್ ಮೂಲಕ ವಾಹನ ಸವಾರರು ದಂಡ ಪಾವತಿಸಬಹುದಾಗಿದೆ. ಸಂಚಾರಿ ದಂಡ ಪಾವತಿಸಲು ಈ ಹಿಂದೆ ನೀಡಲಾಗಿದ್ದ ಅರ್ಧದಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ಜಾರಿಗೆ ತರುವ ಮೂಲಕ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.

Read More

ಬೆಂಗಳೂರು: ಜುಲೈ 8 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯೊಂದಿಗೆ ಕರಾವಳಿ ಕರ್ನಾಟಕಕ್ಕೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂಗಾರು ಅಬ್ಬರ ಜುಲೈ 8 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ, ಇದರ ಪರಿಣಾಮವಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತದೆ. ಜು. 8ರ ನಂತರ ರಾಜ್ಯದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜುಲೈ 8 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

Read More

ಬೆಂಗಳೂರು: ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ಕೆಲವೆಡೆಗಳಲ್ಲಿ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರವೇ ಪರಿಹಾರವನ್ನು ನಿಡುವಂತೆ ಸೂಚಿಸಿದ್ದಾರೆ. ದಕ್ಷಿಣ ಕನ್ನಡ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಾಂಕಾಳ ವೈದ್ಯ ಅವರಿಗೆ ಸೂಚಿಸಲಾಗಿದೆ. ಮಳೆ ಹಾನಿ ಕುರಿತು ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆಯಲಾಗಿದ್ದು, ಪರಿಹಾರ ಕಾಮಗಾರಿಗಳಿಗೆ ಅಧಿಕಾರಿಗಳನ್ನು ತುರ್ತಾಗಿ ಸಜ್ಜುಗೊಳಿಸುವಂತೆ ಆದೇಶಿಸಲಾಗಿದೆ.

Read More