Author: Prajatv Kannada

ಸೂರ್ಯೋದಯ: 05.58 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ತದಿಗೆ 06:30 AM ತನಕ ನಂತರ ಚೌತಿ ನಕ್ಷತ್ರ: ಇವತ್ತು ಶ್ರವಣ  02:56 AM ತನಕ ನಂತರ ಧನಿಷ್ಠ ಯೋಗ: ಇವತ್ತು ವಿಷ್ಕುಂಭ03:49 AM ತನಕ ನಂತರ ಪ್ರೀತಿ ಕರಣ: ಇವತ್ತು ವಿಷ್ಟಿ 06:30 AM ತನಕ ನಂತರ ಬವ 04:49 PM ತನಕ ನಂತರ ಬಾಲವ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 03.06 PM to 04.32 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:46 ವರೆಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ…

Read More

ಬೆಂಗಳೂರು ;- ತಾಜ್‌ ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ವಾಸ್ತವ್ಯ ಕುರಿತು ಲಘುವಾಗಿ ಮಾತನಾಡಿದ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುವ ಅವರು, ಕೆಎಸ್‌ಟಿ’ ತೆರಿಗೆಯನ್ನು ನಾನು ಇಟ್ಟುಕೊಂಡಿಲ್ಲ. ಹಿಂದೆ ನಾನು ಕಾಂಗ್ರೆಸ್‌ ಪಕ್ಷದ ಜತೆ ಮೈತ್ರಿ ಸರ್ಕಾರ ರಚನೆ ಮಾಡಿದ್ದೆ. ವೆಸ್ಟೆಂಡ್‌ ಬಾಕಿ ಬಿಲ್‌ ಕಾಂಗ್ರೆಸ್‌ಗೆ ಕಳಿಸಿದರಾ? ತಿಂಗಳಿಗೆ 2-3 ಲಕ್ಷ ರು. ವೆಚ್ಚ ಮಾಡುವ ಯೋಗ್ಯತೆ ಇಲ್ಲವೇ? ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಈಗಲೂ ರೂಂ ಇದೆ ಎಂದರು. ಬೇಕಿದ್ದರೆ ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ನನ್ನ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ ಎಂಬುದನ್ನು ತನಿಖೆ ಮಾಡಬಹುದು. ನಾನು ಬೇಸಾಯ, ಸಿನಿಮಾ ಮಾಡಿದ್ದೇನೆ. ಕೆಲವರಂತೆ ಟೆಂಟಿನಲ್ಲಿ ನೀಲಿಚಿತ್ರ ತೋರಿಸಿ ದುಡ್ಡು ಮಾಡಿದವನಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದಿದ್ದೀನಾ? ನನ್ನ ಬಗ್ಗೆ ಮಾತನಾಡಲು ಹಿತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More

ಬೆಂಗಳೂರು:  ಅನ್ನಭಾಗ್ಯ ಯೋಜನೆ‌ಗೆ ಬಿಜೆಪಿ ಅಕ್ಕಿ ನೀಡದ ಹಿನ್ನೆಲೆ ಯೂತ್ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಮಲ್ಲೇಶ್ವರಂನ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ನೂರಾರು ಕೈ ಕಾರ್ಯಕರ್ತರು ಸಂಸದರ ಮುಕವಾಡ ಧರಿಸಿ, ಅಕ್ಕಿ ಮೂಟೆ ಹೊತ್ತು ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದ್ರು ಈ ವೇಳೆ ಪೊಲೀಸರು ಬಿಜೆಪಿ ಕಛೇರಿಯ ಮುಂಭಾಗದಲ್ಲೇ ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ್ರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ಮಧ್ಯೆ ವಾಗ್ವಾದ ನಡೆದು ಬ್ಯಾರಿಕೇಡ್ ಹತ್ತಿ ಬಿಜೆಪಿ ಕಛೇರಿ ಮುತ್ತಿಗೆ ಹಾಕಲು ನಲ್ಪಾಡ್ ಯತ್ನಿಸಿದಾಗ ಎಲ್ಲರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು. ಈ ವೇಳೆ ಮಾತನಾಡಿದ ನಲಪಾಡ್ 25 ಜನ ನಾಲಾಯಕ್ ಎಂಪಿಗಳ ವಿರುದ್ಧ ಇವತ್ತು ಪ್ರತಿಭಟನೆ ಮಾಡ್ತಿದ್ದೀವಿ. ಕರ್ನಾಟಕದಿಂದ 25 ಸಂಸದರನ್ನು ದೆಹಲಿಗೆ ಕಳುಹಿಸಿದ್ದೇವೆ ಏನ್ ಕೆಲ್ಸ ಮಾಡ್ತಿದ್ದಾರೆ ಅವ್ರು. ನಾವು 10 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಅಷ್ಟೇ ಕೊಡ್ತಿಲ್ಲ ರಾಜ್ಯದ ಎಲ್ಲಾ…

Read More

ಬೆಂಗಳೂರು ;– ವಿಧಾನಮಂಡಲದ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಕಂದಾಯ ಇಲಾಖೆಯ ಭೂಕಬಳಿಕೆಯ ವಿಷಯದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ. ಟಿ. ಎ. ಶರವಣ ಅವರು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಸರ್ಕಾರಿ ಜಾಗವನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಅಥವಾ ವೈಯಕ್ತಿಕ ವಿವಿಧ ಉದ್ದೇಶಗಳಿಗೆ ಕಬಳಿಕೆ ಮಾಡುತ್ತಿದ್ದರು ಕೂಡ ಅಧಿಕಾರ ವಹಿಸಿಕೊಂಡ ಯಾವ ಸರ್ಕಾರವೂ ಇದರ ಕುರಿತಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಹೇಳಿದರು. ಈ ಒಂದು ಅಕ್ರಮದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳ ಕೈವಾಡವಿದೆ ಅದರ ಕುರಿತಂತೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಬೇಕು ಎಂದು ಈ ವೇಳೆ ಅವರು ಒತ್ತಾಯಿಸಿದರು. ರಾಜ್ಯದ ಗೋಮಾಳ ಭೂಮಿ, ಬೆಟ್ಟ ಪ್ರದೇಶಗಳನ್ನು ಉದ್ಯಮಿಗಳು ಮತ್ತು ಸಂಘ–ಸಂಸ್ಥೆಗಳಿಗೆ ಪರಭಾರೆ ಮಾಡಬಾರದು, ಗ್ರಾಮೀಣ ಭಾಗದ ಜನರ ಬದುಕನ್ನು ಕಾಯುವ ಮೂಲೆಸೆಲೆಗಳಲ್ಲೊಂದಾದ ಈ ಗೋಮಾಳ, ಬೆಟ್ಟ ಭೂಮಿಯನ್ನು ಸರ್ಕಾರ ರಕ್ಷಿಸಬೇಕೆಂದು ಅವರು ಮಂಡಿಸಿದ ವಿಷಯಕ್ಕೆ ಮಾನ್ಯ ಕಂದಾಯ ಸಚಿವರಾದ ಶ್ರೀ. ಕೃಷ್ಣ ಬೈರೇಗೌಡ ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.…

Read More

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತಿದೆ. ಬಿಜೆಪಿ ನಾಯಕರಿಗೆ ರಾಜ್ಯದ ಜನ ವಿಶ್ರಾಂತಿ ಪಡೆಯಲು ಮನೆಗೆ ಕಳುಹಿಸಿದ್ದು, ಅವರಿಗೆ ಮಾಡಲು ಕೆಲಸವಿಲ್ಲದೆ ಅನಗತ್ಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಬಿಜೆಪಿಯವರು ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿರುವ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರ್ಕಾರ ಹಾಗೂ ಭಾರತ ಆಹಾರ ಪ್ರಾಧಿಕಾರವು ಅಕ್ಕಿ ದಾಸ್ತನು ಇದ್ದರೂ ರಾಜ್ಯಕ್ಕೆ ನೀಡಲು ನಿರಾಕರಿಸಿದೆ. ಬಿಜೆಪಿ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮೊದಲು ಧರಣಿ ನಡೆಸಬೇಕು. ಕೇಂದ್ರದ ಬಡವರ ವಿರೋಧಿ ನಿಲುವಿನ ವಿರುದ್ಧ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ತಂಡ ಹೋರಾಟ ಮಾಡಲಿ ಎಂದು ಕರೆ ನೀಡಿದರು. ಎಚ್‌ಡಿಕೆ ಬೇಸರದ ಹೇಳಿಕೆ: ವರ್ಗಾವಣೆಗೆ ಮುಖ್ಯಮಂತ್ರಿ ಕಚೇರಿಯಲ್ಲಿ 30 ಲಕ್ಷ ರು. ನೀಡಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ, ‘ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಿದೆ ಎಂಬ ಬೇಸರದಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ…

Read More

ಮೈಸೂರು ;- ಬೆಂ-ಮೈ ಹೆದ್ದಾರಿ ಅಪಘಾತ ಹಿನ್ನಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಗೆ ಸಂಸದ ಪ್ರತಾಪ್ ಸಿಂಹ ಸಮರ್ಥನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈ ಮೇಲೆ ಏನೋ ಬಂದವರಂತೆ ವಾಹನ ಚಾಲನೆ ಮಾಡುತ್ತಾರೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಎಂದು ದೂರುತ್ತಾರೆ. ಮೈಸೂರು-ಬೆಂಗಳೂರು ಹೆದ್ದಾರಿಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು. ಹೆದ್ದಾರಿಯಲ್ಲಿ ಮನಬಂದಂತೆ ವಾಹನ ಚಲಾಯಿಸುವ ಬದಲು, ವೇಗದ ಮಿತಿಗೆ ತಕ್ಕಂತೆ ವಾಹನ ಚಲಾಯಿಸಿದ್ರೆ ಅಪಘಾತ ಉಂಟಾಗೊಲ್ಲ. ಇದರ ನಡುವೆಯೂ ಹೈವೇಯಲ್ಲಿ ಏನಾದ್ರೂ ಸಣ್ಣ-ಪುಟ್ಟ ದೋಷಗಳಿದ್ದರೆ, ಆ ಸಮಸ್ಯೆಗಳನ್ನು ಮುಂದಿನ 15 ದಿನಗಳಲ್ಲಿ ಸರಿಪಡಿಸುತ್ತೇವೆ. 6 ತಿಂಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಹೈವೇಯನ್ನು ಸಜ್ಜಿತಗೊಳಿಸ್ತೇವೆ ಎಂದು ತಿಳಿಸಿದರು.

Read More

ಬೆಂಗಳೂರು ;- ಮಹಾರಾಷ್ಟ್ರದಲ್ಲಿ ಆದ ಸ್ಥಿತಿಯೇ ಕರ್ನಾಟಕದಲ್ಲಿಯೂ ಆಗಲಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಆದ ಸ್ಥಿತಿಯೇ ಕರ್ನಾಟಕದಲ್ಲಿಯೂ ಆಗಲಿದೆ, ಇನ್ನು ಮೂರು ತಿಂಗಳು ಕಾದು ನೋಡಿ. ಮಹಾರಾಷ್ಟ್ರದ ರಾಜಕೀಯದ ರೀತಿ ಅಜಿತ್ ಪವಾರ್ ತರದ ನಾಯಕನೊಬ್ಬ ಕಾಂಗ್ರೆಸ್ ನಲ್ಲಿಯೇ ಹುಟ್ಟುತ್ತಾನೆ ಎಂದರು. ನಾವು ಸುಳ್ಳು ಗ್ಯಾರೆಂಟ್ ಕೊಟ್ಟು ಜನರಿಗೆ ಮೋಸ ಮಾಡಿದ್ದೇವೆ ಎಂದು ಕಾಂಗ್ರೆಸ್ ಶಾಸಕರಿಗೆ ಬೇಸರ ಇದೆ ಎಂದು ಹೇಳಿದರು. ಇನ್ನು ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ವಿಚಾರವಾಗಿ ಮಾತನಾಡಿ, ಅವರು ನಾವು ಮಾಡಿದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂದೆ ಪಡೆಯುವ ಬಗ್ಗೆ ಕಾಂಗ್ರೆಸ್ ಸರ್ಕಾರ ಹೇಳಿದೆ. ಹಿಂಪಡೆಯುವ ಪ್ರಯತ್ನ ಮಾಡಿದ್ರೇ ಹಿಂದೂ ಸಮಾಜದ ಎಲ್ಲಾ ಸ್ವಾಮೀಜಿಗಳು‌ ಹೋರಾಟಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಮತಾಂತರ ನಿಷೇಧ…

Read More

ಮಂಗಳೂರು: ಕರ್ತವ್ಯವಾದರೂ ನಿಭಾಯಿಸಲು ಛಲ ಬೇಕು. ಮಳೆಗಾಲದ ಸಂದರ್ಭ ಮೆಸ್ಕಾಂ ಪವರ್‍ಮೆನ್‍ಗಳು ಜನರ ಬಾಯಿಂದ ಕೇಳುವುದೇ ಜಾಸ್ತಿ. ಆದರೆ ಮೆಸ್ಕಾಂನ ಉಳ್ಳಾಲ-2 ಘಟಕದ ಪವರ್‍ಮೆನ್ ವಸಂತ್ ಹಾಗೂ ಸುರೇಶ್  ಗದ್ದೆಯೊಂದರಲ್ಲಿ ಕೃತಕ ನೆರೆಯಾಗಿದ್ದರೂ ಅದನ್ನು ಕಷ್ಟಪಟ್ಟು ದಾಟಿ 40 ಮನೆಗಳಿಗೆ ವಿದ್ಯುತ್ ಪೂರೈಸಿದ್ದಾರೆ. ಈ ಕುರಿತ ವೀಡಿಯೋವನ್ನು ಮೆಸ್ಕಾಂ ಜೆ.ಇ ನಿತೇಶ್ ಹೊಸಗದ್ದೆ ಇವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಸಿಬ್ಬಂದಿ ಕಾರ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳ್ಮ ಗ್ರಾಮದ ಬೆರಿಕೆ ಎಂಬಲ್ಲಿ ಬಿರುಗಾಳಿ, ಮಳೆಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಸ್ಥಳೀಯ 40 ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಸ್ಥಳೀಯರು ಮೆಸ್ಕಾಂಗೆ ದೂರು ನೀಡಿದ್ದರು.ಸ್ಥಳಕ್ಕೆ ಮೆಸ್ಕಾಂನ ಪವರ್ ಮೆನ್ ವಸಂತ್ ಹಾಗೂ ಸುರೇಶ್  ಎಂಬವರು ಭೇಟಿ ನೀಡಿದ್ದಾರೆ.ಆದರೆ ಟ್ರಿಪ್ ಆಗಿದ್ದ ವಿದ್ಯುತ್ ಕಂಬವು ನೆರೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಗದ್ದೆಯಲ್ಲಿರುವ ನೆರೆ ನೀರನ್ನು ಲೆಕ್ಕಿಸದ  ಸಿಬ್ಬಂದಿ ಸ್ಥಳೀಯರೋರ್ವರ ಮಾರ್ಗದರ್ಶನದಿಂದ ನೀರಲ್ಲಿ ಮುಳುಗಿ ಒದ್ದೆಯಾಗಿಯೇ ಸಾಗಿ…

Read More

ರಾಜ್ಯ ಸರ್ಕಾರದ ಪ್ರತಿಷ್ಠೆಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು (Shakti Yojana) ಸರ್ಕಾರ ಜಾರಿಗೆ ಮಾಡಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರ ಗ್ಯಾಂಗ್ ಈಗ ಪುಲ್ ಆ್ಯಕ್ಟಿವ್ ಆಗಿದ್ದು, ಮಹಿಳೆಯರು ಓಡಾಟ ಮಾಡುವ ಬಸ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ತಮ್ಮ ಕಳ್ಳತನದ ಕಸಬು(The crime of theft) ಆರಂಭಿಸಿದ್ದಾರೆ. ಅರೇ ಯಾವ ಜಿಲ್ಲೆಯಲ್ಲಿ ಈ ಗ್ಯಾಂಗ್ ಆಕ್ಟಿವ್ ಆಗಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್. ಒಂದು ಕಡೆ ಕಣ್ಣು ಹಾಯಿಸದ್ಲೇಲ್ಲ ಕಣ್ಣಿಗೆ ಬಿಳುವ ಮಹಿಳಾ ಪ್ರಯಾಣಿಕರು. (Female passengers)ಮತ್ತೊಂದು ಕಂಡೆ ಶಕ್ತಿಯೋಜನೆಯಡಿ ಮಹಿಳಾ ಪ್ರಯಾಣಿಕರು ತುಂಬಿ ಹೋಗುತ್ತಿರುವ ಸರ್ಕಾರಿ ಸಾರಿಗೆ ಬಸ್‌ಗಳು. ಮಗದೊಂದು ಕಡೆ ಪ್ರಿ ಸಾರಿಗೆ ಬಸ್ ಯೋಜನೆಯಡಿ ಬಸ್ ಸೀಟ್‌ಗಾಗಿ ಬಸ್ಸಿನ ಒಳಗೆ ನುಗ್ಗುತ್ತಿರುವ ಮಹಿಳೆಯರು ಈ ಎಲ್ಲ ದೃಶ್ಯ ಕಂಡು ಬಂದಿರುವದು ವಿಜಯಪುರದ ಕೇಂದ್ರ ಬಸ ನಿಲ್ದಾಣದಲ್ಲಿ. ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ದಿಲ್‌ಶಾದ್ ಬಳ್ಳಾರಿಯವರು, ಹೊಸದೊಂದು ನ್ಕಲೇಸ್ ಖರೀದಿಸಿ ತಮ್ಮ ಬ್ಯಾಗನಲ್ಲಿ…

Read More

ಬೆಂಗಳೂರು ;- ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ವಿಧಾನ ಸಭೆಯಲ್ಲಿ ಪ್ರಶ್ನೋತರ ವೇಳೆ ಪ್ರತಿಕ್ರಿಯಿಸಿ, ಗೋಹತ್ಯೆ ನಿಷೇಧ’ ಕಾಯ್ದೆ ಹಿಂಪಡೆಯುತ್ತೇವೆ ಎಂದು ನಾವು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಗೋಹತ್ಯೆ ಕಾಯ್ದೆ ಬಗ್ಗೆ ಪಕ್ಷದ ಒಳಗಡೆ ಚರ್ಚೆ ನಡೆಯುತ್ತಿದೆ, ಗೋಹತ್ಯೆ ನಿಷೇಧ’ ಕಾಯ್ದೆ ಹಿಂಪಡೆಯುತ್ತೇವೆ ಎಂದು ನಾವು ಹೇಳಿಲ್ಲ ಎಂದು ಹೇಳಿದರು. ಈ ವೇಳೆ ಮಾತನಾಡಿದ ಸಭಾಪತಿ ಹೊರಟ್ಟಿ ಗೋಹತ್ಯೆ ಬಗ್ಗೆ ದಾಖಲೆ ಏನಾದ್ರೂ ಇದ್ರೆ ನೀಡಲಿ. ಪರಿಶೀಲಿಸಿ ಅವಕಾಶ ನೀಡುತ್ತೇವೆ ಎಂದರು. ನಂತರ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆದರು.

Read More