ವಯಾಗ್ರದ ಹೆಸರನ್ನು ನೀವೆಲ್ಲ ಕೇಳಿರ್ತೀರಿ. ಕೆಲವರು ವಯಾಗ್ರ ಬಳಕೆ ಮಾಡ್ತಿರುತ್ತಾರೆ. ವಯಾಗ್ರ ಎಂಬುದು ಟ್ಯಾಬ್ಲೆಟ್ ಹೆಸರು. ಇದನ್ನು ಪ್ರಪಂಚದಾದ್ಯಂತದ ಅನೇಕ ಕಂಪನಿಗಳು ತಯಾರಿಸುತ್ತವೆ. ಜನರು ಇದನ್ನು ಸೆಕ್ಸ್ ಟ್ಯಾಬ್ಲೆಟ್ ಎಂಬ ಕರೆಯುತ್ತಾರೆ. ವಯಾಗ್ರ ನೀಲಿ ಬಣ್ಣದ ಡೈಮಂಡ್ ಆಕಾರದ ಔಷಧ ವಾಗಿದೆ. ಇದನ್ನು ಆರಂಭದಲ್ಲಿ ಅಧಿಕ ರಕ್ತದೊತ್ತಡ ಮತ್ತು ಆಂಜಿನಾ ಪೆಕ್ಟೋರಿಸ್ ಚಿಕಿತ್ಸೆಗೆ ಬಳಸಲಾಗ್ತಿತ್ತು. ಮಾತ್ರೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಜನನಾಂಗದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ವಯಾಗ್ರ ಸಿಲ್ಡೆನಾಫಿಲ್ ಎಂಬ ಔಷಧಿಯನ್ನು ಹೊಂದಿದೆ. ನಾವಿಂದು ವಯಾಗ್ರವನ್ನು ಯಾರು ಸೇವನೆ ಮಾಡಬಾರದು ಹಾಗೆ ಅದನ್ನು ಹೇಗೆ ಮತ್ತು ಯಾವಾಗ ಸೇವನೆ ಮಾಡಬೇಕು ಎಂಬೆಲ್ಲ ಮಾಹಿತಿಯನ್ನು ನಮಗೆ ನೀಡ್ತೆವೆ. ವಯಾಗ್ರ ಬಳಕೆ ಹೇಗೆ? : ವಯಾಗ್ರವನ್ನು ಊಟಕ್ಕೆ ಅರ್ಧ ಗಂಟೆ ಮೊದಲು ಅಥವಾ 2 ಗಂಟೆಗಳ ನಂತರ ತೆಗೆದುಕೊಳ್ಳುವುದು ಉತ್ತಮ. ಇದನ್ನು ವೈದ್ಯರ ಸಲಹೆಯೊಂದಿಗೆ ಮಾತ್ರ ಬಳಸಬೇಕು. ವಯಾಗ್ರದ ಪರಿಣಾಮ ಸುಮಾರು 4-5 ಗಂಟೆಗಳ ಕಾಲ ಇರುತ್ತದೆ. ವಯಾಗ್ರವನ್ನು ಪುರುಷರು ಮಾತ್ರ ಬಳಸಬೇಕು. ಮಹಿಳೆಯರಿಗೆ ನಿಮಿರುವಿಕೆಯ…
Author: Prajatv Kannada
ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಪರಿಹಾರದ ಭಾಗವಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುರುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನ, ದಕ್ಷಿಣ ಆಫ್ರಿಕಾ)ನ ರಾಷ್ಟ್ರೀ ಯ ಭದ್ರತಾ ಸಲಹೆಗಾರರ ಸಮಾವೇಶದ ವೇಳೆ ಈ ಮಾತುಕತೆ ನಡೆಸಲಾಗಿದೆ.ಈ ವೇಳೆ, ದೋವಲ್ ಜತೆಗಿನ ಮಾತುಕತೆಯಲ್ಲಿ ರಷ್ಯಾದ ಕಝನ್‌ನಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಕ್ಕೆ ಪ್ರಧಾನಿ ಮೋದಿ ಅವರನ್ನು ಪುಟಿನ್ ಆಹ್ವಾನಿಸಿದ್ದು ಮೋದಿ ಭೇಟಿಗೆ ಕಾಯುತ್ತಿದ್ದೇನೆ ಎಂದು ಪುಟಿನ್ ತಿಳಿಸಿದ್ದಾರೆ. ಇದಕ್ಕೂ ಮೊದಲು ದೋವಲ್, ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸೆರ್ಗೆಯ್ ಶೋಯಿಗು ಜತೆಗೂ ಮಾತುಕತೆ ನಡೆಸಿದರು. ಈ ವೇಳೆ, ಪ್ರಧಾನಿ ಮೋದಿ ಇತ್ತೀಚೆಗೆ ಉಕ್ರೇನ್ ಭೇಟಿ ನೀಡಿದ್ದು, ಮಾತುಕತೆ ನಡೆಸಿದ್ದರ ಮಾಹಿತಿಯನ್ನು ಹಂಚಿಕೊಂಡಿ ದ್ದಾರೆ. ಈ ಮಧ್ಯೆ, ಉಕ್ರೇನ್-ರಷ್ಯಾ ಸಂಘರ್ಷ ನಿವಾರಣೆಯಲ್ಲಿ ಭಾರತ, ಚೀನ ಮಹತ್ವದ ಪಾತ್ರವನ್ನು ನಿರ್ವಹಣೆ ಮಾಡಬಹುದು ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ…
ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು. ಕೇಜ್ರಿವಾಲ್ ಅವರು ಸಿಬಿಐ ಬಂಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮಂಜೂರು ಮಾಡುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಕೇಜ್ರಿವಾಲ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.ಈ ಹಿಂದೆ ಇದೇ ಪ್ರಕರಣದಲ್ಲಿ ಇಡಿ ಬಂಧಿಸಿದ್ದಾಗಲೂ ಸಹ ಸುಪ್ರೀಂ ಕೋರ್ಟ್ ಕೇಜ್ರಿವಾಲ್‌ಗೆ ಜಾಮೀನು ನೀಡಿತ್ತು
ಕೋಲ್ಕತ್ತಾ:- ಜನರಿಗಾಗಿ ನಾನು ರಾಜೀನಾಮೆ ಕೊಡಲು ಸಿದ್ಧ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೋಲ್ಕತ್ತಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ಕೊಟ್ಟು ಮಾತನಾಡಿದ ಅವರು, ಕೊಲೆಯಾದ ವೈದ್ಯರಿಗೆ ನ್ಯಾಯ ಕೊಡಿಸಲು ನಾನು ಸಿಎಂ ಪದವಿಯನ್ನು ತ್ಯಜಿಸಲು ಕೂಡ ಸಿದ್ಧಳಿದ್ದೇನೆ ಎಂದು ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನನ್ನ ರಾಜೀನಾಮೆಯಿಂದ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತದೆ ಎಂದರೆ ನಾನು ಅದಕ್ಕೂ ಸಿದ್ಧಳಿದ್ದೇನೆ. ಆದರೆ, ಪ್ರತಿಭಟನಾನಿರತರಿಗೆ ನ್ಯಾಯ ಬೇಕಾಗಿಲ್ಲ, ಬದಲಾಗಿ ನನ್ನ ಕುರ್ಚಿಯಷ್ಟೇ ಬೇಕಾಗಿದೆ ಎಂದಿದ್ದಾರೆ. ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಲು ರಾಜ್ಯ ಸಚಿವಾಲಯದಲ್ಲಿ 2 ಗಂಟೆಗಳ ಕಾಲ ಕಾದಿದ್ದೇನೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರ್‌ಜಿ ಕರ್ ಆಸ್ಪತ್ರೆ ವೈದ್ಯರ ಕೊಲೆ ಪ್ರಕರಣದಲ್ಲಿ ಜನರಿಗೆ ಅನುಕೂಲವಾಗುವುದಾದರೆ ಮತ್ತು ನ್ಯಾಯ…
ಇತ್ತೀಚೆಗೆ ಮೋದಿ ಹಾಗೂ ಪುಟಿನ್ ಭೇಟಿಯಾಗಿದ್ದು ಆ ಬಳಿಕ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 45 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ 50 ಮಂದಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚೆ ನಡೆಸಿದ್ದು ಆ ಬಳಿಕ 35 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಷ್ಯಾದ ಸೇನೆಯಲ್ಲಿ ಭಾರತೀಯರ ನೇಮಕಾತಿ ವಿಚಾರವು ಭಾರತ ಹಾಗೂ ರಷ್ಯಾದ ಬಾಂಧವ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ರಷ್ಯಾ-ಉಕ್ರೇನ್ ಸಂಘರ್ಷದ ಬೆನ್ನಲ್ಲೇ ಈ ವಿಷಯ ಹೆಚ್ಚು ವಿವಾದಕ್ಕೀಡಾಗಿತ್ತು. ಜುಲೈ ತಿಂಗಳಲ್ಲಿ ರಷ್ಯಾದ ಪ್ರವಾಸ ಕೈಗೊಂಡಿದ್ದ ಮೋದಿ, ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರನ್ನು ತ್ವರಿತವಾಗಿ ಬಿಡುಗಡೆ ಮಾಡಲು ಕ್ರಮ ಕೈಕೊಳ್ಳುವಂತೆ ಪುಟಿನ್ ಅವರನ್ನು ಒತ್ತಾಯಿಸಿದ್ದರು. ‘ರಷ್ಯಾ ಪ್ರವಾಸದ ವೇಳೆ ಪುಟಿನ್ ಜೊತೆ ಈ ವಿಷಯವನ್ನು…
ಸೂರ್ಯೋದಯ: 06:07, ಸೂರ್ಯಾಸ್ತ 06:16 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ದಸಮಿ ನಕ್ಷತ್ರ: ಪುರ್ವಾಷಢ ರಾಹು ಕಾಲ: 10:30ನಿಂದ 12:00ತನಕ ಯಮಗಂಡ: 03:00ನಿಂದ 04:30 ತನಕ ಗುಳಿಕ ಕಾಲ: 07:30ನಿಂದ 09:00 ತನಕ ಅಮೃತಕಾಲ: ಸಂ.4:51 ನಿಂದ ಸಂ.6:25 ತನಕ ಅಭಿಜಿತ್ ಮುಹುರ್ತ: ಬೆ.11:47 ನಿಂದ ಮ.12:36 ತನಕ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ ಸಂಗಾತಿಯ ವರ್ತನೆಯಲ್ಲಿ ಅತಿ ಅಹಂಕಾರ ಕಾಣಲಿದೆ, ಆಡಳಿತಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವಿರಿ, ವೃತ್ತಿ ಕ್ಷೇತ್ರದಲ್ಲಿ ಕಿರಿಕಿರಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗಲಾಟೆಗಳು ಹೆಚ್ಚಾಗಿ ಆಸ್ತಿ ಪಡೆಯುವುದರಲ್ಲಿ ವಿಫಲ, ದೇಶಿ ಉತ್ಪನ್ನ ಮಾರಾಟಗಾರರಿಗೆ ಲಾಭ,…
ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ ಅನೇಕ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ನಮೃತಾ ಖ್ಯಾತಿ ಮತ್ತಷ್ಟು ಹೆಚ್ಚಾಗಿದ್ದು ಅಭಿಮಾನಿಗಳ ಬಳಗವು ದುಪ್ಪಟಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಟಿ ನಮ್ರತಾಗೆ ಡಿಮ್ಯಾಂಡ್ ಹೆಚ್ಚಿದೆ. ಹಲವು ಜಾಹೀರಾತುಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟಿ ಆಗಾಗ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ಅಂತೆಯೇ ಈ ಬಾರಿ ಸಂಪೂರ್ಣವಾಗಿ ಬಿಳಿ ಬಣ್ಣದ ಸೀರೆಯಲ್ಲಿ ನಟಿ ನಮೃತಾ ಫೋಟೋ ಶೂಟ್ ಮಾಡಿಸಿದ್ದಾರೆ. ನಮ್ರತಾ ಗೌಡ ಗ್ಲಾಮರಸ್ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಬಿಳಿ ಸೀರೆ ಉಟ್ಟು, ತಲೆಗೆ ಕೆಂಗುಲಾಬಿ ಮುಡಿದು ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ನಟಿಯ ಸೌಂದರ್ಯವನ್ನು ಅಭಿಮಾನಿಗಳು ಹೊಗಳಿದ್ದಾರೆ. ನಮ್ರತಾ ಗೌಡ ‘ಬಿಗ್ ಬಾಸ್’ನಿಂದ ಸಾಕಷ್ಟು ಫೇಮ್ ಪಡೆದರು. ಆದರೆ, ಅವರು ಯಾವುದೇ ಸಿನಿಮಾ ಆಫರ್ ಒಪ್ಪಿಕೊಂಡಿಲ್ಲ. ಅವರ ಕಡೆಯಿಂದ ಯಾವುದೇ ಹೊಸ ಪ್ರಾಜೆಕ್ಟ್…
ಚಿಕ್ಕಬಳ್ಳಾಪುರ: ನಿನಲ್ಲ, ನಿಮ್ಮಪ್ಪನ ಕೈಲೂ ನನ್ನ ಟಚ್ ಮಾಡಕ್ಕಾಗಲ್ಲ ಎಂದು ಸುಧಾಕರ್ ಮಾತಿಗೆ ಪ್ರತಿಕ್ರಿಯಿಸಿ ಶಾಸಕ ಪ್ರದೀಪ್ https://youtu.be/wpqcuEbLgs0?si=Z2F_kLmen1XELxl4 ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ನಗರಸಭೆ ಚುನಾವೆಣೆ ಬಳಿಕ ಮಾತನಾಡಿದ ಅವರು, ಕೆ. ಸುಧಾಕರ್ ಒಬ್ಬ ಕೋವಿಡ್ ಕಳ್ಳ. ಸುಧಾಕರ್ʼನನ್ನು ಜೈಲಿಗೆ ಹಾಕುವವರೆಗೂ ಬಿಡಲ್ಲ. ತಾಕತ್ತು, ದಮ್ಮು ಇದ್ರೆ ಬಚಾವ್ ಆಗು ನೋಡೋಣ ಎಂದು ಕೆ. ಸುಧಾಕರ್ ಅವರ ಮಾತಿಗೆ ಸವಾಲ್ ಹಾಕುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ 7-8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸಂಸದರು ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ನನ್ನ ಒಂದು ಕೂದಲನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಯಲ್ಲಿ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ. ನಿನ್ನ ಅಖಾಡದಲ್ಲಿ ಬಂದು ನಾನು ನಿನ್ನನ್ನು ಹೊಡಿದಿದ್ದೇನೆ. ನಾನು ಒಬ್ಬ ಗಂಡಸು. ಮುಂದಿನ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾರತದ ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಅದಾನಿ ಗ್ರೂಪ್ಗೆ ಸೇರಿದ 6 ಸ್ವಿಸ್ ಬ್ಯಾಂಕ್ ಅಕೌಂಟ್ಗಳನ್ನು ಸೀಜ್ ಮಾಡಲಾಗಿದೆ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದ್ದು ಈ ಆರೋಪಕ್ಕೆ ಪ್ರತಿಕ್ರಿಯಿಸಿರೋ ಅದಾನಿ ಗ್ರೂಪ್ ಇದೆಲ್ಲ ಸುಳ್ಳು ಎಂದಿದೆ. ಅದಾನಿ ಗ್ರೂಪ್ಗೆ ಸಂಬಂಧಿಸಿದ ಸ್ವಿಸ್ ಬ್ಯಾಂಕ್ನಲ್ಲಿನ 6 ಅಕೌಂಟ್ಗಳಲ್ಲಿ 310 ಮಿಲಿಯನ್ ಡಾಲರ್ ಅಂದರೆ 26,017,353,260 ರೂಪಾಯಿ ಹಣವನ್ನು ಸೀಜ್ ಮಾಡಲಾಗಿದೆ ಎಂದು ಮಾಹಿತಿ ಇದೆ. 2021ರ ಮನಿ ಲಾಂಡರಿಂಗ್ ಹಾಗೂ ಸೆಕ್ಯುರಿಟೀಸ್ ಫೋರ್ಜರಿ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಅಕೌಂಟ್ಗಳನ್ನು ಸ್ವಿಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದೆ. ಇದರಿಂದ ಅದಾನಿ ಗ್ರೂಪ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದಾನಿ ಅವರ ಕೇಸ್ ಅನ್ನು ಜಿನೀವಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇದರ ಆಧಾರದ ಮೇಲೆ ಹಾಗೂ ಸ್ವಿಸ್ ಕ್ರಿಮಿನಲ್ ನ್ಯಾಯಾಲಯದ ದಾಖಲೆಗಳನ್ನ ಉಲ್ಲೇಖಿಸಿ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪಿಸಿದೆ. ಇನ್ನು…
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ನಡೆದಿತ್ತು. ಅನ್ಯಕೋಮಿನವರು ಮೆರವಣಿಗೆ ವೇಳೆ ಕಲ್ಲುತೂರಿದ್ದರು. ಅಲ್ಲದೇ, ಕೆಲ ಅಂಗಡಿಗಳಿಗೂ ಬೆಂಕಿ ಹಾಕಲಾಗಿತ್ತು. ಇದರ ಬೆನ್ನಲ್ಲೇ ಕೋಮುಗಲಭೆ ನಡೆದ ಸ್ಥಳಕ್ಕೆ ಇಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾರೆ. https://youtu.be/x6D2vVsH6yg?si=JZVYDAX3yFXJ6UuP ಬೆಂಕಿ ಬಿದಿದ್ದ ಬೈಕ್ ಶೋರೂಂ, ಅಂಗಡಿಗಳಿಗೆ ಹೆಚ್ಡಿ ಕುಮಾರಸ್ವಾಮಿ ಅವರು ಭೇಟಿ, ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದರು.ಭೇಟಿ ವೇಳೆ ಗಲಭೆಯಿಂದ ಹಾನಿಗೊಳಗಾದ ಅಂಗಡಿಗಳ ಮಾಲೀಕರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಅವರ ಅಳಲು ಆಲಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಗೆ ಮಾಜಿ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಸಾಥ್ ನೀಡಿದರು.