ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಾದ್ಯಂತ ಅಬ್ಬರದ ಮಳೆ (Rain) ಮುಂದುವರೆದಿದ್ದು, ಭಟ್ಕಳದಲ್ಲಿ (Bhatkal) ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 (NH 66) ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆ ಸುರಿದ ಪರಿಣಾಮ ಭಟ್ಕಳದ ರಂಗಿನಕಟ್ಟೆ, ಸಂಶುದ್ದೀನ್ ವೃತ್ತ, ಶಿರಾಲಿಯಲ್ಲಿ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಭಟ್ಕಳದಲ್ಲಿ ಮಂಗಳವಾರ 112.1 ಮಿಲಿ ಮೀಟರ್ ದಾಖಲೆ ಮಳೆ ಸುರಿದಿದ್ದು, ರಾತ್ರಿಯ ವೇಳೆ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಗಾಳಿ, ಮಳೆಯ ಅಬ್ಬರಕ್ಕೆ ಹೊನ್ನಾವರದ ಪ್ರಭಾತ್ ನಗರದ ಪ್ರಕಾಶ್ ಮೇಸ್ತಾ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಮೋಳ್ಕೊಡು ಗ್ರಾಮದ ಮಣಿಕಂಠ ನಾಯ್ಕರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯಲ್ಲಿ ಧಾರಕಾರ ಮಳೆ ಮುಂದುವರೆಯುತಿದ್ದು, ಇನ್ನೂ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ…
Author: Prajatv Kannada
ಮಂಗಳೂರು: ಪರ ಸ್ತ್ರೀ ಜೊತೆ ತಂದೆಯ ದೈಹಿಕ ಸಂಪರ್ಕದ (Physical Relation) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆದ ಹಿನ್ನೆಲೆ ಮನನೊಂದು ಪುತ್ರ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡಬಿದ್ರೆ (Moodbidri) ತಾಲೂಕಿನಲ್ಲಿ ನಡೆದಿದೆ. ಸುಮಂತ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ತನ್ನ ತಂದೆ ಪರ ಸ್ತ್ರೀ ಜೊತೆ ದೈಹಿಕ ಸಂಪರ್ಕ ಮಾಡುವಾಗ ಸಿಕ್ಕಿಬಿದ್ದಿದ್ದರು. ಸ್ಥಳೀಯ ಯುವಕನೊಬ್ಬ ಇವರಿಬ್ಬರ ದೈಹಿಕ ಸಂಪರ್ಕದ ವಿಡಿಯೋ ರೆಕಾರ್ಡ್ ಮಾಡಿದ್ದು, ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಇಳಿ ವಯಸ್ಸಿನ ಮಹಿಳೆ ಮತ್ತು ಯುವಕನ ತಂದೆ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ಸುಮಂತ್ ತಂದೆಯ ಜೊತೆ ಜಗಳ ಮಾಡಿದ್ದು, ತಂದೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆ ತೀವ್ರ ಮುಜುಗರ ಅನುಭವಿಸಿದ್ದ. ಇದರಿಂದ ತೀವ್ರ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ವಿಡಿಯೋ ವೈರಲ್ ಮಾಡಿದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು…
ಮೈಸೂರು: ವರುಣ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಸಮಯ ನೀಡದ ಹಿನ್ನೆಲೆ ಕ್ಷೇತ್ರದಲ್ಲಿ ತಂದೆಯ ಜವಾಬ್ದಾರಿ ನಿಭಾಯಿಸಲು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಒಲವು ತೋರಿದ್ದಾರೆ. ಕಳೆದ ಬಾರಿಯಂತೆ ಸಣ್ಣ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ. ತಂದೆ ಸಿಎಂ ಆಗಿರುವುದರಿಂದ ಕ್ಷೇತ್ರದ ಜನರಿಗೆ ಸಮಯ ನೀಡಲಾಗುತ್ತಿಲ್ಲ. ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಅಗತ್ಯ. ಹೀಗಾಗಿ ಚಿಕ್ಕ ಸ್ಥಾನಮಾನ ನೀಡಿದರೂ ಸಹಕಾರಿ ಆಗಲಿದೆ. ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದೆಯಲ್ಲ ಆದರೂ ಅಂತಹದ್ದೇ ಸಣ್ಣ ಹುದ್ದೆ ನೀಡಿದರೇ ಜನರ ಸೇವೆ ಮಾಡಲು ನಾನು ಸಿದ್ಧನಿದ್ದೇನೆ ಎಂದರು.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಕುಟುಂಬದಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ಪವನ್ ಪತ್ನಿ ಅಪೇಕ್ಷಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಮುದ್ದು ಮಗಳ ಆಗಮನವಾಗಿದ್ದು, ಈ ಖುಷಿಯ ಸುದ್ದಿಯನ್ನು ಪವನ್ ಒಡೆಯತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಜೋಡಿಗೆ ಶೌರ್ಯ ಎಂಬ ಮುದ್ದಾದ ಗಂಡು ಮಗನಿದ್ದು, ಇದೀಗ ಅಪೇಕ್ಷಾ ಹೆಣ್ಣು ಮಗುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ತಾಯಿ- ಮಗು ಕ್ಷೇಮವಾಗಿದ್ದಾರೆ ಎಂದು ಪವನ್ ಬರೆದುಕೊಂಡಿದ್ದಾರೆ. ಇತ್ತೀಚಿಗೆ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮೂಲಕ ತಾವು ಪ್ರಗ್ನೆಂಟ್ ಎಂಬ ಸಿಹಿ ಸುದ್ದಿ ನೀಡಿದ್ದರು. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಸದ್ಯ ಹೊಸ ಅತಿಥಿಯ ಆಗಮನದ ಖುಷಿಯಲ್ಲಿರುವ ಜೋಡಿಗೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಸಿನಿಮಾ ರಂಗದವರು ಶುಭ ಹಾರೈಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರೀಲ್ ನಲ್ಲಿ ಮಾತ್ರವಲ್ಲ, ರಿಯಲ್ ಹೀರೋ ಕೂಡ ಹೌದು. ಕಷ್ಟ ಎಂದು ಬಂದ ಯಾರನ್ನು ಕೂಡ ಸುದೀಪ್ ಬರಿಗೈಯಲ್ಲಿ ಕಳಿಸಿದ್ದೇ ಇಲ್ಲ. ಇದೀಗ ಸುದೀಪ್ ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಎಂದು ಕಾದು ಕೂತಿದ್ದ ಕ್ಯಾನ್ಸರ್ ಪೀಡಿತ ಪುಟ್ಟ ಅಭಿಮಾನಿಯನ್ನು ಸುದೀಪ್ ಭೇಟಿ ಮಾಡುವ ಮೂಲಕ ಬಾಲಕಿಯ ಆಸೆಯನ್ನು ಈಡೇರಿಸಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ. ಜೀವನದಲ್ಲಿ ಒಮ್ಮೆಯಾದ್ರೂ ಸುದೀಪ್ ಅವರನ್ನು ಭೇಟಿಯಾಗಬೇಕು ಎಂಬುದು ಸಾಕ್ಷಿ ಆಸೆಯಾಗಿತ್ತು. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ‘ಆಟೋಗ್ರಾಫ್’ ನೀಡಿ ಪ್ರೀತಿಯಿಂದ ಅಭಿಮಾನಿಗೆ ಅಪ್ಪುಗೆ ನೀಡಿದ್ದಾರೆ. ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ…
ಟಾಲಿವುಡ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಮೂರನೇ ಮದುವೆಯೂ ಮುರಿದುಬಿತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಈಗಾಗಲೇ ಇಬ್ಬರು ಪತ್ನಿಯರಿಂದ ದೂರವಾಗಿರುವ ನಟ ಪವನ್ ಕಲ್ಯಾಣ್ ಇದೀಗ ಮೂರನೇ ಪತ್ನಿಯಿಂದಲೂ ದೂರವಾದ್ರ ಎಂಬ ಅನುಮಾನ ಶುರುವಾಗಿದೆ. ಅತಿ ಹೆಚ್ಚು ಫ್ಯಾನ್ ಫಾಲೊಯಿಂಗ್ ಹೊಂದಿರುವ ನಟ ಪವನ್ ಕಲ್ಯಾಣ್ ಸಿನಿಮಾಗಳ ಜೊತೆಗೆ ರಾಜಕೀಯ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳು ಸೋಲಲಿ, ಗೆಲ್ಲಲ್ಲಿ ಪವನ್ ಗಿರೋ ಫ್ಯಾನ್ ಫಾಲೋವಿಂಗ್ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಸಿನಿಮಾಗಳ ಜೊತೆಗೆ ಪವನ್ ಕಲ್ಯಾಣ್ ಹೆಸರು ಸದಾ ವಿವಾದದಲ್ಲಿಯೂ ಕೇಳಿ ಬರುತ್ತಿದೆ. ಈಗಾಗಲೇ ಇಬ್ಬರು ಪತ್ನಿಯರಿಂದ ದೂರವಾಗಿರುವ ನಟ ಮೂರನೇ ಪತ್ನಿ ಅನ್ನಾ ಲೇಜ್ನೇವಾರಿಂದಲೂ ದೂರವಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಪವನ್ ಕಲ್ಯಾನ್ ಮೊದಲು ನಂದಿನಿ ಎಂಬುವವರನ್ನು ಮದುವೆಯಾಗಿದ್ದರು. ಬಳಿಕ ಕೆಲವು ವರ್ಷಗಳ ನಂತರ ಡಿವೋರ್ಸ್ ನೀಡಿ, ನಟಿ ರೇಣು ದೇಸಾಯಿ ಜೊತೆ ಸಪ್ತಪದಿ ತುಳಿದರು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿ ಏಕಾಏಕಿ ದೂರವಾದರು. ಬಳಿಕ ಎರಡೆ…
ಬೆಂಗಳೂರು: ಜುಲೈ 4 ( ಮಂಗಳವಾರ) ರಂದು ಶ್ರೀ ಕಂಠೀರವಾ ಕ್ರೀಡಾಂಗಣದಲ್ಲಿ ನಡೆದ 2023ನೇ ಸಾಲಿನ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ 5-4 ರಿಂದ ಪೆನಾಲ್ಟಿ ಶೂಟೌಟ್ ಜಯಿಸಿದ ಭಾರತ ತಂಡ ಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡು ಸಂಭ್ರಮಿಸಿದ್ದಲ್ಲದೆ ಇತಿಹಾಸದಲ್ಲಿ 9ನೇ ಬಾರಿ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ. ಪಂದ್ಯ ಮೊದಲ ಕ್ಷಣದಿಂದಲೂ ರೋಚಕತೆಯಿಂದ ಕೂಡಿದ ಪರಿಣಾಮವಾಗಿ ಪೂರ್ಣ ಅವಧಿ ಅಂತ್ಯಕ್ಕೆ 1-1 ರಿಂದ ಸಮಬಲಗೊಂಡಿತು. ಪೆನಾಲ್ಟಿ ಶೂಟೌಟ್ ನಲ್ಲಿ ಫಲಿತಾಂಶ ನಿರ್ಧಾರಗೊಂಡ ಪಂದ್ಯದಲ್ಲಿ ಗೋಲ್ ಕೀಪರ್ ಗುರುಪ್ರೀತ್ ಸಂಧು ಅವರ ಚಮತ್ಕಾರದ ಪ್ರದರ್ಶನದಿಂದ ಸುನೀಲ್ ಛೇಟ್ರಿ ಬಳಗ 5-4 ರಿಂದ ಜಯಿಸಿ ಟ್ರೋಫಿ ಗೆದ್ದು ಸಂಭ್ರಮಿಸಿದರೆ, ಚೊಚ್ಚಲ ಚಾಂಪಿಯನ್ ಮುಕುಟ ಗೆಲ್ಲಬೇಕೆಂಬ ಕುವೈತ್ ಕನಸು ಕನಸಾಗಿಯೇ ಉಳಿಯಿತು. ಪಂದ್ಯ ಆರಂಭಗೊಂಡ 14 ನಿಮಿಷಗಳಲ್ಲೇ ಕುವೈತ್ ನ ಫಾರ್ವರ್ಡ್ ಆಟಗಾರ ಅಬಿಬ್ ಅಲ್ ಖಲೈದಿ ತಮ್ಮ ಕಾಲ್ಚಳಕದಿಂದ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಕಣ್ತಪ್ಪಿಸಿ ಚೆಂಡನ್ನು…
ದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 2020ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ಅಂತ್ಯ ಹಾಡಿದ್ದರು.ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಅಂತ್ಯಗೊಳಿಸಿ ಮೂರು ವರ್ಷಗಳು ಕಳೆದಿದೆ. ಆದರೂ, ಅವರು ಬಿಸಿಸಿಐನ ಯಾವುದೇ ಹುದ್ದೆ ಅಲಂಕರಿಸುವಂತ್ತಿಲ್ಲ. 2021ರ ಟಿ20 ವಿಶ್ವಕಪ್ ವೇಳೆ ಧೋನಿ ಭಾರತ ತಂಡದಲ್ಲಿ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು. ಆದರೆ, ಬಿಸಿಸಿಐನ ಯಾವುದೇ ಹುದ್ದೆ ಅಲಂಕರಿಸಲು ಅನರ್ಹರಾಗಿದ್ದಾರೆ. ಇದಕ್ಕೆ ಬಿಸಿಸಿಐನ ಕೆಲ ನಿಯಮಗಳು ಕಾರಣ. ಸದ್ಯ ಬಿಸಿಸಿಐನಲ್ಲಿ ಭಾರತ ತಂಡದ ಚೀಫ್ ಸೆಲೆಕ್ಟರ್ ಹುದ್ದೆ ಖಾಲಿಯಿದೆ. ಪ್ರತಿಭೆಗಳನ್ನು ಗುರುತಿಸುವಲ್ಲಿ ಧೋನಿ ನಿಸ್ಸೀಮರಾದರೂ, ಈ ಹುದ್ದೆ ಅಲಂಕರಿಸಲು ನಿಯಮಗಳು ಅಡ್ಡಿ ಬರುತ್ತವೆ. ಆಯ್ಕೆ ಸಮಿತಿಯ ಮುಖ್ಯಸ್ಥನಿಗೆ ಬೇಕಾದ ಎಲ್ಲಾ ಅನುಭವಗಳು ಧೋನಿ ಅವರಲ್ಲಿದೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೇವೆಯಲ್ಲಿ ಮುಂದುವರಿದಿರುವುದು ಒಂದೇ ಅವರಿಂದ ಬಿಸಿಸಿಐ ಹುದ್ದೆಯನ್ನು ದೂರ ಮಾಡಿದೆ. ಬಿಸಿಸಿಐನ ನಿಯಮಗಳ ಪ್ರಕಾರ ಯಾವುದೇ ಹುದ್ದೆ ಅಲಂಕರಿಸಲು ಬಯಸುವ ಕ್ರಿಕೆಟಿಗ ತನ್ನ ಕ್ರಿಕೆಟ್ ವೃತ್ತಿಬದುಕಿಗೆ…
ಕನ್ನಡ ಚಿತ್ರರಂಗದ ಖ್ಯಾತ ಕಳನಟ, ಅಪ್ರತಿಮ ಕಲಾವಿದ ನಟ ವಜ್ರಮುನಿ ವಿಲನ್ ಪಾತ್ರಗಳಲ್ಲಿಯೇ ತಮ್ಮ ಛಾಪು ಮೂಡಿಸಿದ್ದರು. ವಜ್ರಮುನಿ ಅವರಿಗೆ ಸರಿಸಾಟಿ ಆಗುವಂತಹ ಕಲಾವಿದ ಮತ್ತೊಬ್ಬರಿಲ್ಲ. ಅದರಲ್ಲೂ ವಜ್ರಮುನಿ ಅವರ ‘ಎಲಾ ಕುನ್ನಿ’ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಇದೀಗ ಈ ಡೈಲಾಗ್ ಅನ್ನು ಶೀರ್ಷಿಕೆಯನ್ನಾಗಿ ಮಾಡಿ ಯಲಾ ಕುನ್ನಿ ಸಿನಿಮಾ ತೆರೆಗೆ ಬರಲು ಸಿದ್ದತೆ ನಡೆಯುತ್ತಿದ್ದು ಚಿತ್ರದಲ್ಲಿ ಹಾಸ್ಯ ನಟ ಕೋಮಲ್ ನಟಿಸುತ್ತಿದ್ದಾರೆ. ಯಲಾ ಕುನ್ನಿ ಹೆಸರಿನಲ್ಲಿ ಸಿನಿಮಾ ರೆಡಿಯಾಗುತ್ತಿದ್ದು ಸದ್ಯ ಕೋಮಲ್ ಬರ್ತಡೇ ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.‘ ಯಲಾ ಕುನ್ನಿ’ ಸಿನಿಮಾವನ್ನು ‘ಸೌಭಾಗ್ಯ ಸಿನಿಮಾಸ್’ ಬ್ಯಾನರ್ ಮೂಲಕ ಮಹೇಶ್ ಗೌಡ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಎನ್.ಆರ್. ಪ್ರದೀಪ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಯಲಾ ಕುನ್ನಿ ಸಿನಿಮಾದ ಹೊಸ ಪೋಸ್ಟರ್ ನಲ್ಲಿ ನಟ ಕೋಮಲ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ವಜ್ರಮುನಿ ಗೆಟಪ್ನಲ್ಲಿರುವ ಈ ಫಸ್ಟ್ ಲುಕ್…
ಬಾಲಿವುಡ್ ನಟ ಅಜಯ್ ದೇವಗನ್ ಬಿಟೌನ ಸ್ಟಾರ್ ನಟರಲ್ಲೊಬ್ಬರು. ಅಜಯ್ ದೇವಗನ್ ಪತ್ನಿ ಕಾಜೋಲ್ ಕೂಡ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದು ನಟನೆಯ ಜೊತೆಗೆ ಇಬ್ಬರು ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದಾರೆ. ಈ ಮಧ್ಯೆ ನಟ ಅಜಯ್ ದೇವಗನ್ ನೂರಾರು ಕೋಟಿ ನೀಡಿ ಮೂರು ಕಚೇರಿಗಳನ್ನು ಮುಂಬೈನಲ್ಲಿ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. 2000 ನೇ ಇಸವಿಯಲ್ಲಿ ಅಜಯ್ ದೇವಗನ್ ತಮ್ಮದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯೊಂದನ್ನು ಆರಂಭಿಸಿದ್ದರು. ನಿರ್ಮಾಣ ಸಂಸ್ಥೆಯ ಮೂಲಕ ನಿಯಮಿತವಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಾದರೂ ವಿತರಣೆ ಬಗ್ಗೆ ಹೆಚ್ಚಾಗಿ ಗಮನ ವಹಿಸಿರಲಿಲ್ಲ. ಇದರ ಜೊತೆಗೆ ಎನ್ವೈ ವಿಎಫ್ಎಕ್ಸ್ ವಾಲಾ ಹೆಸರಿನ ವಿಎಫ್ಎಕ್ಸ್ ಸಂಸ್ಥೆಯನ್ನೂ ದೇವಗನ್ ಸ್ಥಾಪಿಸಿದ್ದಾರೆ. ಇದೀಗ ತಮ್ಮ ಸಿನಿಮಾ ನಿರ್ಮಾಣ, ವಿತರಣೆ ಹಾಗೂ ವಿಎಫ್ಎಕ್ಸ್ ಸಂಸ್ಥೆಗಳ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಇತರೆ ನಟರ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯೆಡೆಗೂ ಗಮನ ಹರಿಸುವ ಯೋಜನೆ ಹಾಕಿಕೊಂಡಿದ್ದು ಇದೇ ಕಾರಣಕ್ಕಾಗಿ ದೊಡ್ಡ ಕಚೇರಿಯನ್ನು ದೇವಗನ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಭಾರಿ…