ಬಾಲಿವುಡ್ ನಟಿ ಶ್ರುತಿ ಹಾಸನ್ ಹಾಗೂ ಶಾಂತನು ಹಜಾರಿಕಾ ಪರಸ್ಪರ ಪ್ರೀತಿಸುತ್ತಿದ್ದು ಇಬ್ಬರು ಲೀವಿಂಗ್ ಟುಗೇದರ್ ನಲ್ಲಿದ್ದಾರೆ. ಇಬ್ಬರ ಪ್ರೀತಿಗೆ ಎರಡು ಮನೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈ ಮಧ್ಯೆ ಬಾಯ್ ಫ್ರೆಂಡ್ ಕುರಿತು ನಟಿ ಶ್ರುತಿ ಹಾಸನ್ ದೂರಿದ್ದಾರೆ. ಸದ್ಯ ನಟಿ ಶ್ರುತಿ ಹಾಸನ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಾಯ್ಫ್ರೆಂಡ್ ಬಗ್ಗೆ ಶ್ರುತಿ ಹಾಸನ್ ಕೆಲ ವಿಚಾರಗಳಲ್ಲಿ ದೂರಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್ ಗೆ ಹೇಳಿಕೊಳ್ಳುವಂತ ಬ್ರೇಕ್ ಸಿಕ್ಕಿಲ್ಲ. ಸಿನಿಮಾಗಳ ಜೊತೆಗೆ ಶ್ರುತಿ ಹಾಸನ್ ಬಾಯ್ಫ್ರೆಂಡ್ ವಿಚಾರಕ್ಕೂ ಆಗಾಗ ಸುದ್ದಿ ಆಗುತ್ತಾರೆ. ಈ ವಿಚಾರದಲ್ಲಿ ಅವರು ಯಾವುದೇ ಮುಚ್ಚುಮರೆ ಮಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಶಾಂತನು ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರು ಶಾಂತನು ಅವರನ್ನು ‘ಮೋಸ್ಟ್ ಅನ್ರೊಮ್ಯಾಂಟಿಕ್’ ವ್ಯಕ್ತಿ ಎಂದು ಶ್ರುತಿ ಹಾಸನ್ ದೂರಿದ್ದಾರೆ. ಶ್ರುತಿ ಹಾಸನ್ ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು…
Author: Prajatv Kannada
ಬೆಂಗಳೂರು: ಹಗಲು ದರೋಡೆಗೆ ಕಾಂಗ್ರೆಸ್ ನವರು ಇಳಿದಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ತಾಕತ್ತು ಇರೋದ್ರಿಂದ ದಾಖಲೆ ಬಿಡುಗಡೆ ಮಾಡುತ್ತೇನೆ. ನಾನು ದಾಖಲೆ ಕೊಟ್ಟರೆ ಆ ಮಂತ್ರಿಯನ್ನು ವಜಾ ಮಾಡ್ತೀರಾ ಎಂದು ಸವಾಲ್ ಹಾಕಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ದ ವರ್ಗಾವಣೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ನವರು ಕೂಡ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಹೌದು ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಹಣವನ್ನ ನಿಗದಿ ಮಾಡಿದ್ದು, ಇಂಧನ ಇಲಾಖೆಯಲ್ಲಿ ಬರೊಬ್ಬರಿ 10 ಕೋಟಿಗೆ ಅಧಿಕಾರಿಗಳ ವರ್ಗಾವಣೆಗೆಯಾಗಿದೆ ಎಂದಿದ್ದಾರೆ.
ಬೆಂಗಳೂರು: ಈ ಬಾರಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸೋಲುತ್ತೇನೆಂಬ ನಿರೀಕ್ಷೆ ನನಗಿರಲಿಲ್ಲ, ಅದರೆ ನಾನು ಸೋತರೂ ನನ್ನ ಕಾರ್ಯಕರ್ತರು ಸೋಲಬಾರದು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಹಾಗೂ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಮತ ಹಾಕುತ್ತಾರೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅವರ ನಿರ್ಣಯವೇ ಬೇರೆ ರೀತಿ ಪರಿವರ್ತನೆಯಾಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 5 ಕೆಜಿ ಅಕ್ಕಿ ಜತೆಗೆ ಖರೀದಿ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ಇನ್ನು 5 ಕೆಜಿ ಅಕ್ಕಿಯನ್ನು ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್ ಸರಕಾರವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಮಾತನ್ನು ನಂಬಿದ್ದೀರಾ. ಆದರೆ ಸತತ ಎರಡೂವರೆ ವರ್ಷ ನಮ್ಮ ಸರಕಾರ 10 ಕೆಜಿ ಅಕ್ಕಿಯನ್ನು ಕೊಟ್ಟಿದೆ. ಅದರೆ ನೀವು ಯಾಕೆ ನಮ್ಮ ಮೇಲೆ ನಂಬಿಕೆ ಇಡಲಿಲ್ಲ ಎಂದು ಪ್ರಶ್ನಿಸಿದರು. ಕೋವಿಡ್ ಸಮಯದಲ್ಲಿ ನನ್ನ ಕ್ಷೇತ್ರ ಜನತೆಗೆ ಯಾವುದೇ ರೀತಿ ತೊಂದರೆಯಾಗಬಾರದೆಂದು…
ಬೆಂಗಳೂರು: ಸೋದರ ಸಂಬಂಧಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಗೋಪಾಲಪುರದಲ್ಲಿ ನಡೆದಿದೆ. ಸೋನು (35) ಕೊಲೆಯಾದ ವ್ಯಕ್ತಿ. ಈ ಹಿಂದೆ ಮೃತನ ಸಹೋದರ ಅಕ್ರಮ್ ಜೊತೆ ಫಾರೂಕ್ ಜಗಳ ಮಾಡಿಕೊಂಡಿದ್ದ. ಈ ವೇಳೆ ಅಕ್ರಮ್, ಫಾರೂಕ್ ಪತ್ನಿ ವಿಚಾರವಾಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಬಳಿಕ ಜಗಳ ಹೆಚ್ಚಾಗಿದ್ದು, ಮಾವ ರಿಯಾಜ್ ಗಲಾಟೆ ತಡೆಯಲು ಎಂಟ್ರಿ ಕೊಟ್ಟಿದ್ದನು. ಈ ವೇಳೆ ಗೋಪಾಲಪುರದ ಗುಜುರಿ ಅಂಗಡಿಗೆ ಸಂಧಾನ ಮಾಡುಲು ಕರೆಸಿದ್ದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರು: ತಕ್ಕಡಿ ಮಾತ್ರ ಅಲ್ಲ ಸ್ಪೀಕರ್ ಪೀಠವೇ ನಿನ್ನೆ ವಾಲಿತ್ತು ಎಂದು ನಿಲುವಳಿ ಪ್ರಸ್ತಾವನೆ ವೇಳೆ ಶಾಸಕ ಆರ್. ಅಶೋಕ್ ಹೇಳಿದರು. ಆರ್. ಅಶೋಕ್ ಮಾತಿಗೆ ಸಭಾಪತಿ ಯು ಟಿ ಖಾದರ್ ತಕ್ಕಡಿಯೂ ಸರಿ ಇದೆ, ಪೀಠವೂ ಸರಿ ಇದೆ, ನೋಡುವವರ ಕಣ್ಣುಗಳು ಸರಿ ಇರಬೇಕು ಅಷ್ಟೇ ಎಂದು ತಿರುಗೇಟು ನೀಡಿದರು. ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಹೇಳಿದ್ರು. ನಮ್ಮ ಸರ್ಕಾರ ಬಂದ 24 ಗಂಟೆಯಲ್ಲಿ ಮನೆಬಾಗಿಲಿಗೆ ಗ್ಯಾರಂಟಿಗಳು ಅಂದ್ರು. ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಜನರಿಗೆ ಆಮಿಷ ಒಡ್ಡಿದ್ರು. ಪ್ರತಿ ಕುಟುಂಬದ ಮಹಿಳೆಗೆ ಉಚಿತ ಬಸ್ ಪಾಸ್ ಅಂದ್ರು. ಆಮೇಲೆ ಎಸಿ ಬಸ್ ಗಳಲ್ಲಿ ಇಲ್ಲ ಅಂತಾ ಹೇಳ್ತಿದ್ದಾರೆ ಎಂದರು. ಅವಾಗ ಸಿಎಂ ಸಿದ್ದರಾಮಯ್ಯ ಅವರು ರಾಮಲಿಂಗಾರೆಡ್ಡಿ ಅವರೇ ನಿಮಗೂ,ಹೆಂಡ್ತಿಗೂ ಫ್ರೀ ಅಂದ್ರು. ರಾಜಹಂಸದಲ್ಲೂ ಫ್ರೀ ಅಂದ್ರು ಆವೇಳೆ ರಾಮಲಿಂಗಾರೆಡ್ಡಿ ಅವರು ಹೇಳಿದ್ರು ಆ ಬಸ್ ಗಳಲ್ಲಿ ಇಲ್ಲಾ ಸರ್. ಆ ಬಸ್ ಗಳಲ್ಲಿ ಅವಕಾಶ ಕೊಟ್ರೆ ಎಲ್ಲಾರೂ ನುಗ್ಗುತ್ತಾರೆ ಅಂದ್ರು. ಆ…
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವರ್ಗಾವಣೆ ಆರೋಪಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಫುಲ್ ಶಾಕ್ ಹೊಡೆದ ಹಾಗೆ ಆಗಿ ಬಿಟ್ಟಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೆಚ್‍ಡಿಕೆ ಆರೋಪದ ಬೆನ್ನಲ್ಲೆ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು `ಬಿ ಕೇರ್ ಫುಲ್’ ಎಂದಿದ್ದಾರೆ. ವರ್ಗಾವಣೆ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ತನ್ನ ಆಸಪ್ತರಿಗೆ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರದ ವಿರುದ್ಧ ಸುಮ್ಮನೆ ಆರೋಪ ಮಾಡಿದ್ರೆ ಯಾರೂ ಸಹಿಸಿಕೊಳ್ಳಬಾರದು. ಸರ್ಕಾರದ ಇಮೇಜ್‍ಗೆ ಧಕ್ಕೆ ತರಲು ಕುಮಾರಸ್ವಾಮಿ ಯತ್ನ ಮಾಡ್ತಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ಪ್ರತಿ ಇಲಾಖೆಯಲ್ಲಿ ವರ್ಗಾವಣೆ (Transfer) ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು ಎಂದಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಪೆನ್ ಡ್ರ್ವೈವ್ ಹಿಡಿದು ದಾಖಲೆ ಸಮೇತ ಬಂದಿದ್ದೇನೆ ಎಂದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನನ್ನ ಬಳಿ ದಾಖಲೆ ಇದೆ ಅಂತಾ ಪೆನ್ ಡ್ರೈವ್ ಪ್ರದರ್ಶನ ಮಾಡಿದ್ದಾರೆ. ಶರ್ಟ್ ಪಾಕೆಟ್ ನಲ್ಲಿ ಪೆನ್ ಡ್ರೈವ್ ಹಿಡಿದುಕೊಂಡು ಬಂದಿರುವ ಕುಮಾರಸ್ವಾಮಿ, ವರ್ಗಾವಣೆ ದಂಧೆಯ ಆಡಿಯೋ ಇದೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಹಾಕಿದ್ದಾರೆ. KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ. ತಾಜ್ ವೆಸ್ಟೆಂಡ್‍ದ್ದು ಬಾಕಿ ಬಿಲ್ ಕಾಂಗ್ರೆಸ್‍ಗೆ (Congress) ಕಳಿಸಿದ್ರಾ?. ನಾನೇನು ಬೀದಿಲಿ ಹೋಗುವವನಾ?. 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಬ್ಲ್ಯೂಫಿಲ್ಮ್‍ಂ ಅನ್ನು ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ತೆಗೆದುಕೊಳ್ಳುತ್ತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದ್ದೇನೆ. ಈಗಲೂ ನಾನು ತಾಜ್ ವೆಸ್ಟೆಂಡ್‍ಗೆ ಹೋಗ್ತೀನಿ. ನಾನೇನ್ ಕಾಂಗ್ರೆಸ್ ನವರನ್ನು ಕೇಳ್ಕೊಂಡು ಹೋಗಬೇಕಾ?.…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದು ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರೆಂಟಿಗಳು. ಈಗ ಅದನ್ನ ಜಾರಿಗೆ ತರಲು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯನವರ (Siddaramaiah) ಬಹಳ ಮಹತ್ವದ ಘೋಷಣೆಯಾಗಿದ್ದು ಅನ್ನಭಾಗ್ಯ ಯೋಜನೆ ಕಾರ್ಡ್ ಹೊಂದಿದ ಕುಟುಂಬಕ್ಕೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಜುಲೈನಿಂದ ನೀಡುವುದಾಗಿ ಹೇಳಿದ್ರು. ರಾಜ್ಯ ಸರ್ಕಾರ ಅಕ್ಕಿ (Rice) ನೀಡಲು ನಾನಾ ಸರ್ಕಸ್ ಮಾಡಿದ್ರು 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಗೆ ಹಣವನ್ನ ಖಾತೆಗೆ ಹಾಕಲು ಸರ್ಕಾರ ನಿರ್ಧರಿಸಿದ್ದೆ ತಡ ನ್ಯಾಯಬೆಲೆ ವರ್ತಕರು ನಮಗೆ ಇದರಿಂದ ನಷ್ಟ ಆಗೋದು ಪಕ್ಕ, ನಾವೂ 10 ಕೆಜಿ ಅಕ್ಕಿ ನೀಡಿದ್ರೇ ನಮಗೆ ಕಮಿಷನ್ ಹೆಚ್ಚಾಗಿ ಸಿಗುತ್ತೆ ಅಂತಾ ವೋಟ್ ಹಾಕಿದ್ವಿ. ಈಗ 5 ಕೆಜಿ ಅಕ್ಕಿ ನೀಡಿದ್ರೇ ಕಮಿಷನ್ ಕಟ್ ಆಗುತ್ತೆ. ಇದನ್ನೇ ನಂಬಿಕೊಂಡಿರೋ ನಾವೂ ಹೇಗೆ ಜೀವನ ಮಾಡೋದು…
ಬೆಂಗಳೂರು : ಜೀವನ್ ಭೀಮಾನಗರದಲ್ಲಿ ಟಿಕ್ಕಿ ಆಕಾಂಕ್ಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಪ್ರಿಯಕರ ಅರ್ಪಿತ್ ಕೊನೆಗೂ ಬಂಧಿಸಲಾಗಿದೆ. ಆರೋಪಿಯನ್ನು ವಿಜಯವಾಡದಲ್ಲಿ ನಗರ ಜೀವನ್ ಭೀಮಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯು, ಕೊಲೆ ಮಾಡಿ ಯಾವುದೇ ಸುಳಿವು ನೀಡದೇ ತಲೆಮರೆಸಿಕೊಂಡಿದ್ದ. ಅರ್ಪಿತ್ ಬಂಧನಕ್ಕೆ ಸುಮಾರು ,200 ಸಿಸಿಟಿವಿ ಪೊಲೀಸರು ಚೆಕ್ ಮಾಡಿದ್ದು, ಅರ್ಪಿತ್ ಅಕೌಂಟ್ ಫ್ರೀಜ್ ಮಾಡಿದ ಕಾರಣ ಹಣಕ್ಕಾಗಿ ಸ್ನೇಹಿತನಿಗೆ ಕರೆ ಮಾಡಿದ್ದ. ಫೋನ್ ಕಾಲ್ ಸುಳಿವಿನ ಆಧಾರದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಕೊಲೆ ನಡೆದ ಸಂಪೂರ್ಣ ವಿವರ! ಆಂಧ್ರಪ್ರದೇಶ ಮೂಲದ ಅರ್ಪಿತ್ ಗುರಿಜಾಲ (28) ಜೂನ್ 5ರಂದು ಹೈದರಾಬಾದ್ ಮೂಲದ ಆಕಾಂಕ್ಷಾ (23) ಎಂಬಾಕೆಯನ್ನು ಆಕೆಯ ಫ್ಲ್ಯಾಟ್ನಲ್ಲೇ ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಆತ್ಮಹತ್ಯೆ ಕಥೆ ಕಟ್ಟಲು ಯತ್ನಿಸಿ ವಿಫಲಗೊಂಡು ಪರಾರಿಯಾಗಿದ್ದ. ಕಳೆದ ಒಂದು ತಿಂಗಳಿಂದ ಆರೋಪಿ ವಿಜಯವಾಡ, ಅಸ್ಸಾಂ ಭಾಗದಲ್ಲಿ ಸುತ್ತಾಡಿ, ಕೆಲ ದಿನಗಳ…
ಬೆಂಗಳೂರು: ಇಂದು ನಡೆಯಲಿರುವ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿರುವ ಶಾಸಕ ರುದ್ರಪ್ಪ ಲಮಾಣಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು ಹಾಗೆ ಮುಖ್ಯಮಂತ್ರಿಗಳು ಸಹ ಶುಭಾಶಯ ಕೋರಿದರು. ಈಗಾಗಲೇ ವಿಧಾನಸಭೆಯ ಸ್ಪೀಕರ್ ಆಗಿ ಯು.ಟಿ ಖಾದರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಡೆಪ್ಯೂಟಿ ಸ್ಪೀಕರ್ ಸ್ಥಾನದ ಆಯ್ಕೆ ಬಾಕಿ ಇತ್ತು. ಇದೀಗ ವಿಧಾನಸಭೆ ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಈ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶಾಸಕ ರುದ್ರಪ್ಪ ಲಮಾಣಿ ಅರ್ಜಿ ಸಲ್ಲಿಸಲಿದ್ದಾರೆ. ಅವರಿಗೆ ಸಿಎಂ ಸಿದ್ಧರಾಮಯ್ಯ ಶುಭಕೋರಿದ್ದಾರೆ.