ಬೆಂಗಳೂರು: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಗುಸುಗುಸು ಬಹಳ ದಿನದಿಂದ ಕೇಳಿಬರುತ್ತಿದೆ. ಅದಕ್ಕೆ ಬಿಎಸ್ ಯಡಿಯೂರಪ್ಪನವರ ಹೇಳಿಕೆಯಿಂದ ಸುಳಿವು ಸಿಕ್ಕಿದಂತಾಗಿದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೋ ಅದು ಅಕ್ಷರಶಃ ಸತ್ಯ. ನಾನು ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿನ ವರ್ಗಾವಣೆ ದಂಧೆ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದರು. ಕೆಲಸ ಆಗಬೇಕೆಂದರೆ ಸಿಎಂ ಕಚೇರಿಗೆ 30 ಲಕ್ಷ ರೂ. ನೀಡಬೇಕು ಎಂಬ ಆರೋಪವನ್ನು ಮಾಜಿ ಸಿಎಂ ಮಾಡಿದ್ದರು. ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿಯವರಿಗಿಂತ ಹೆಚ್ಚು ಎಚ್‌ಡಿ ಕುಮಾರಸ್ವಾಮಿ ಅವರೇ ವಾಗ್ದಾಳಿ ನಡೆಸುತ್ತಿರುವುದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹತ್ತಿರವಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಒಕ್ಕಲಿಗರ ಪ್ರಾಬಲ್ಯ ಇರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಪ್ಲಸ್ ಆಗುವ ಸಾಧ್ಯತೆ ಇದೆ.
Author: Prajatv Kannada
ಬೆಂಗಳೂರು: ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಹಾಗೂ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು ಎಂದು ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಮಾತನಾಡಿದ ಅವರು, ಕುಟುಂಬದ ಮಹಿಳೆಯರಿಗೆ 2000 ರೂಪಾಯಿ ಅಂದ್ರು. ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು. ಇವಾಗ ಪೋರ್ಟಲ್ ಹ್ಯಾಕ್ ಮಾಡ್ಬಿಟ್ಟಿದ್ದೀರಂತೆ. ಮೋದಿ ಮೇಲೆ ಜವಬ್ದಾರಿಯುತ ಸಚಿವರು ಈ ರೀತಿ ಆರೋಪ ಮಾಡ್ತಾರಲ್ಲ..? ಎಂದು ಪ್ರಶ್ನಿಸಿದರು. ಇದರಿಂದ ಜನರಿಗೆ ಏನು ಸಂದೇಶ ಹೋಗುತ್ತೆ? ಜನರೇ ಈ ಗ್ಯಾರಂಟಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಬಸ್ಸು ಯೋಜನೆ ನಿಂತು ಹೋಗುತ್ತದೆ ಎಂದು ಜನರು ಹೆಚ್ಚೆಚ್ಚು ಓಡಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು. ಐದು ಗ್ಯಾರಂಟಿ ಕೊಟ್ಟರೂ ಷರತ್ತು ಹಾಕಿ ಜನರಿಗೆ ಮೋಸ ಮಾಡುತ್ತಿದೆ ಸರ್ಕಾರ. ಎಲ್ಲ ಗ್ಯಾರಂಟಿಗಳಿಗೂ ನೀವು ಚೆಕ್ ಪೋಸ್ಟ್ ಗಳನ್ನು ಇಟ್ಟಿದ್ದೀರಿ. ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಗ್ಯಾರಂಟಿ ಜಾರಿ ಮಾಡಿಲ್ಲ,ಹೀಗಾಗಿ ಈ ಸರ್ಕಾರಕ್ಕೆ…
ಬೆಂಗಳೂರು: ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದೀಗ ವಂದೇ ಭಾರತ್ ರೈಲಿನ ಪ್ರಯೋಜನಗಳನ್ನು ಬೆಳಗಾವಿಯ ಜನರಿಗೆ ವಿಸ್ತರಿಸಲು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಮತ್ತು ಧಾರವಾಡದಿಂದ ಐಷಾರಾಮಿ ಬಸ್‌ಗಳನ್ನು ಪ್ರಾರಂಭಿಸಿದೆ. ರೈಲಿನ ಆಗಮನ ಮತ್ತು ನಿರ್ಗಮನದ ಸಮಯಕ್ಕೆ ತಕ್ಕಂತೆ ಐಷಾರಾಮಿ ಎಸಿ ಬಸ್‌ಗಳನ್ನು ಬಿಡಲಾಗಿದೆ. ಜೂನ್ 27 ರಂದು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ಆನ್ ಲೈನ್ ಮೂಲಕ ಉದ್ಘಾಟಿಸಿದರು. 8 ಬೋಗಿಗಳಿರುವ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ಪ್ರತಿ ದಿನ ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತದೆ. ಈಗ, ಧಾರವಾಡದ ಹೊರಗಿನ ಜನರಿಗೆ ಸಹಾಯ ಮಾಡಲು, NWKRTC ಹುಬ್ಬಳ್ಳಿಯಿಂದ ಬೆಳಗಾವಿಗೆ ಮತ್ತು ಬೆಳಗಾವಿಯಿಂದ ಹುಬ್ಬಳ್ಳಿಗೆ ಮಲ್ಟಿ-ಆಕ್ಸಲ್ ವೋಲ್ವೋ ಬಸ್‌ಗಳನ್ನು ರಸ್ತೆಗಿಳಿಸಿದೆ.
ವಿವಾದಗಳಿಂದ ಸದಾ ದೂರವಿರುವ ನಟ ಕಿಚ್ಚ ಸುದೀಪ್ ಗೆ ಆಗಾಗ ಅನಗತ್ಯವಾದ ಕಿರಿಕ್ ಗಳು ಎದುರಾಗುತ್ತಿರುತ್ತವೆ. ಸೋಶಿಯಲ್ ಮೀಡಿಯಾದಲ್ಲೂ ಅನವಶ್ಯಕವಾಗಿ ಯಾರ ಬಗ್ಗೆಯೂ ಕಮೆಂಟ್ ಮಾಡದ ಸುದೀಪ್ ಇದೀಗ ತನ್ನ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ಸುದೀಪ್ ಮಾಡಿರುವ ಎಚ್ಚರಿಕೆಯ ಟ್ವೀಟ್ ಯಾರಿಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸುದೀಪ್ ಬರೆದಿರುವ ಸಾಲುಗಳಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ಈ ಸಾಲನ್ನು ಓದಿ. ಇದು ತುಂಬ ಚೆನ್ನಾಗಿದೆ’ ಎಂಬ ಕ್ಯಾಪ್ಷನ್ ಜೊತೆಯಲ್ಲಿ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ‘ಇದು ತಿಳಿದಿರಲಿ: ದುರುಪಯೋಗಕ್ಕೆ ಅಥವಾ ವಂಚನೆಗೆ ನನ್ನ ಒಳ್ಳೆಯತನ ಒಂದು ಸಾಧನ ಅಲ್ಲ. ಸತ್ಯವಾಗಿದ್ದಾಗ ಅದು ಪ್ರಜ್ವಲಿಸುತ್ತದೆ. ದುರಹಂಕಾರದಿಂದ ಅದರ ಕಾಂತಿ ಕಳೆಗುಂದಲು ನಾನು ಬಿಡುವುದಿಲ್ಲ. ವಿನಯದಿಂದಿರಿ, ಸತ್ಯವಂತರಾಗಿರಿ’ ಎಂಬ ಸಾಲನ್ನು ಸುದೀಪ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ‘ರಾಜಿಯಾಗದ ಒಳ್ಳೆಯತನ’ ಎಂದು ಸುದೀಪ್ ಅವರು ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಅದರ ಜೊತೆ #k46 ಹ್ಯಾಶ್ ಟ್ಯಾಗ್ ಕೂಡ ಇದೆ. ಹಾಗಾಗಿ ಇದು…
ಬೆಂಗಳೂರು ;- ಪತಿಯ ಕತ್ತು ಸೀಳಿ ಕೊಲೆಗೈದ ಮಹಿಳೆಗೆ ಜಾಮೀನು ನೀಡಲು ಬೆಂಗಳೂರಿನ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ ಮಹಿಳೆ ಎಂಬ ಕಾರಣಕ್ಕಾಗಿ ಜಾಮೀನು ಮಂಜೂರಾತಿಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆರೋಪಿ ಡಿಲ್ಲಿ ರಾಣಿ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂಬ ಆಕೆಯ ಪರ ವಕೀಲರ ವಾದ ತಿರಸ್ಕರಿಸಿದ ಹೈಕೋರ್ಟ್, ಡಿಲ್ಲಿ ರಾಣಿ ಸಹ ಘಟನೆಯಲ್ಲಿ ಗಾಯಗೊಂಡಿರುವ ಕಾರಣ ಆಕೆ ಅಮಾಯಕಳಾಗಿದ್ದಾರೆ ಎಂಬ ವಕೀಲರು ವಾದ ಒಪ್ಪಲಾಗದು. ಅರ್ಜಿದಾರೆ ಹಾಗೂ ಆಕೆಯ ಅಪ್ರಾಪ್ತ ಮಕ್ಕಳಿಬ್ಬರು ನೆಲೆಸಿದ್ದ ಮನೆಯಲ್ಲಿ ಪತಿ ಶಂಕರರೆಡ್ಡಿ ಕೊಲೆಯಾಗಿದ್ದಾರೆ. ಪ್ರಕರಣದ ಎರಡನೇ ಆರೋಪಿನೊಂದಿಗೆ ಡಿಲ್ಲಿ ರಾಣಿ ಅಕ್ರಮ ಸಂಬಂಧ ಹೊಂದಿರುವುದನ್ನು ಘಟನೆಯ ಮೂವರ ಸಾಕ್ಷಿಗಳ ಹೇಳಿಕೆ ಸ್ಪಷ್ಟಪಡಿಸುತ್ತದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತಿ ಶಂಕರರೆಡ್ಡಿಯನ್ನು ಕೊಲೆ ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ. ಡಿಲ್ಲಿ ರಾಣಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಬೆಂಗಳೂರು ;– ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ ಎಂದು ಹೇಳುವ ಮೂಲಕ ಜೆಡಿಎಸ್ ಘಟಕವು ಬಿಜೆಪಿ ವಿರುದ್ಧ ಕಿಡಿಕಾರಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ! ಹಂಗಿದೆ ನೋಡಿ ʼಕಮೀಷನ್ ಕಾಂಗ್ರೆಸ್ʼನ ‘ ಹೊಸ ವರಸೆ ಮತ್ತು ಹೊಸ ಕಸವರಿಕೆ!! ಎಂದು ಜೆಡಿಎಸ್ ಕುಟುಕಿದೆ. ವೆಸ್ಟ್ ಎಂಡ್ ಲೆಕ್ಕ ಇರಲಿ, ‘ ಸಿಎಂ ಟಿಪ್ಪಣಿ ಬಿಕರಿ’ಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, 3 ಟಿಪ್ಪಣಿ!! ಇದ್ಯಾವ ಸೀಮೆ ಅರ್ಥಶಾಸ್ತ್ರ?? ಕೌಟಿಲ್ಯನೂ ಬೆಚ್ಚಿಬೀಳುವ ಆಡಳಿತ ಹಾಗೂ ರಾಜನೀತಿ!! ಈ ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ ವೈ ಎಸ್ ಟಿ ಟ್ಯಾಗ್ಸ್ ಹುಂಡಿಗೋ? ಇಲ್ಲೇ ಸಾಕ್ಷ್ಯ ಇದೆ.ಪಾಪ.. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ!! ಎಂದು ಕಿಡಿಕಾರಿದೆ.
ಬೆಂಗಳೂರು ;- ಒಂದು ಕಡೆ ತನ್ನ ಪ್ರೀತಿಗೆ ತಂದೆ ತಾಯಿ ವಿರೋಧ, ಮತ್ತೊಂದು ಕಡೆ ಮದುವೆ ಆಗದೆ ಹೋದರೆ ಪ್ರಿಯತಮನ ಬ್ಲ್ಯಾಕ್ ಮೇಲ್. ಇದೆಲ್ಲದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 21 ವರ್ಷದ ಆಶಾ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಹೇಳಲಾಗಿದೆ. ಆಶಾ ಓದು ಮುಗಿಸಿ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಐದು ವರ್ಷಗಳಿಂದ ಅವಿನಾಶ್ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆಶಾ ತನ್ನ ಪ್ರಿಯಕರ ಅವಿನಾಶ್ ಜೊತೆಗೆ ಪಾರ್ಕ್, ಸಿನಿಮಾಗಳಿಗೆ ಸುತ್ತಾಡುತ್ತಿದ್ದಳು ಎನ್ನಲಾಗಿದೆ. ಪ್ರೀತಿಯ ವಿಷಯವನ್ನು ಮನೆಯವರಿಗೂ ತಿಳಿಸಿದ್ದಳು ಎಂದು ತಿಳಿದುಬಂದಿದೆ. ‘ಪ್ರೀತಿ ಎಲ್ಲ ನಮಗೆ ಬೇಡಮ್ಮ’ ಎಂದು ಪೋಷಕರು ಆಕೆಗೆ ಬುದ್ಧಿ ಹೇಳಿದ್ದರು. ಆಶಾ ತನ್ನ ಪ್ರಿಯಕರನಿಗೆ ಮನೆಯವರ ವಿರೋಧದ ವಿಷಯ ತಿಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ಅವಿನಾಶ್, ‘ನೀನು ನನಗೆ ಮೋಸ ಮಾಡ್ತಿದ್ದೀಯಾ. .. ಇದೆಲ್ಲ ಪ್ರೀತಿ ಮಾಡೋಕು ಮುಂಚೆನೇ ಯೋಚನೆ ಮಾಡಬೇಕಿತ್ತು. ನೀನು ನನ್ನನ್ನು ಬಿಟ್ಟು ಹೋಗಬೇಡ. ಒಂದು…
ಬೆಂಗಳೂರು: ಮಂಗಳವಾರ ನಡೆದ ಎರಡನೇ ದಿನದ ಅಧಿವೇಶನದಲ್ಲಿ ಗ್ಯಾರಂಟಿ ಕದನ ತಾರಕಕ್ಕೆ ಹೋಗಿದೆ. ಸದನದ ಒಳಗೆ ಮಾತ್ರವಲ್ಲ.. ಸದನದ ಹೊರಗೂ ಆಡಳಿತ – ವಿಪಕ್ಷ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ರು. ಧಮ್ಮು ತಾಕತ್ತು ಎಲ್ಲಾ ಪ್ರದರ್ಶನವಾಯ್ತು. ಯೆಸ್… ಎರಡನೇ ದಿನದ ಅಧಿವೇಶನ ಗ್ಯಾರಂಟಿ ಸಮರಕ್ಕೆ ಬಲಿಯಾಗಿದೆ. ಸದನದ ಹೊರಗೆ ವಿಪಕ್ಷ ನಾಯಕರು ಧರಣಿ ನಡೆಸಿದ್ರೆ, ಹೊರಗೆ ಮಾತಿನಂದಲೇ ಅಟ್ಯಾಕ್ ಮಾಡಿದ್ರು. ದಾಖಲೆ ಕೊಡೋ ಧಮ್ಮು, ತಾಕತ್ತು ನಮಗೆ ಇದೆ. ಸಚಿವರ ವಿರುದ್ಧ ಯಾವ ಕ್ರಮ ಕೈಗೊಳ್ತೀರಿ ಅಂತಾ ಮೊದಲು ಹೇಳಿ ಅಂತಾ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ರು. ಇದು ಹನಿಮೂರ್ ಪೀಡಿಯಡ್ ಸರ್ಕಾರ ಎಂದು ಕುಟುಕಿದ್ರು.. ಇನ್ನು ಹೆಚ್ ಡಿಕೆ ಹೇಳಿಕೆಗೆ ಬಿಜೆಪಿ ನಾಯಕರು ಕೂಡ ದನಿಗೂಡಿಸಿದ್ರು. ಗ್ಯಾರಂಟಿಗಳನ್ನ ಈಡೇರಿಸದೇ ಸಮಯ ದೂಡುತ್ತಿದ್ದಾರೆ. ತನಿಖೆ ತನಿಖೆ ಅಂತಾ ಗೊಡ್ಡು ಬೆದರಿಕೆ ಹಾಕ್ತಿದ್ದಾರೆ. ಅದಕ್ಕೆಲ್ಲಾ ಹೆದರಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿ ಕಾರಿದ್ರು.. ಬಿಜೆಪಿ…
ಮೈಸೂರು ;- ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಹೊರ ಬಿದ್ದಿದ್ದು, ಮೈಸೂರು -ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್ಟಿಸಿ ಬಸ್ ಗಳ ಪ್ರಯಾಣ ದರವನ್ನು ಮಂಗಳವಾರದಿಂದ ಹೆಚ್ಚಳ ಮಾಡಲಾಗಿದೆ. ಗಣಂಗೂರು ಟೋಲ್ ಜುಲೈ 1ರಿಂದ ಶುರುವಾಗಿದ್ದು, ಬಸ್ ಗಳಿಗೆ 525 ರೂ. ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ಸರಿದೂಗಿಸಲು ಕೆಎಸ್‌ಆರ್ಟಿಸಿ ಈ ಮಾರ್ಗದಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿದೆ. ಸಾಮಾನ್ಯ ಸಾರಿಗೆ ಟಿಕೆಟ್ ದರ 15 ರೂಪಾಯಿ, ರಾಜಹಂಸ 20 ರೂಪಾಯಿ, ವೋಲ್ವೋ ಮತ್ತು ಎಲೆಕ್ಟ್ರಿಕ್ ಬಸ್ ಗಳಲ್ಲಿ 30 ರೂ. ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನ ಕಣಮಿಣಕಿ, ರಾಮನಗರದ ಶೇಷಗಿರಿಹಳ್ಳಿ ಟೋಲ್ ಸಂಗ್ರಹ ಶುರುವಾದ ಸಂದರ್ಭದಲ್ಲಿ 20ರಿಂದ 35 ರೂಪಾಯಿವರೆಗೆ ಪ್ರಯಾಣದರ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹೊಡೆಯುವವರು. ಯಾವುದನ್ನೂ ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ವಿಚಾರವಾಗಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಎಚ್ ಡಿ ಕುಮಾರಸ್ವಾಮಿ ಕೇವಲ ಆರೋಪ ಮಾಡ್ತಾರೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವವರು ಎಂದು ಆರೋಪಿಸಿದರು. ಕುಮಾರಸ್ವಾಮಿ ಅವರು ಆರೋಪ ಮಾಡುತ್ತಾರೆ. ಆದರೆ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗದುಕೊಂಡು ಹೋಗಲ್ಲ. ಅವರ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿ ಬಳಿಯಲ್ಲಿ ದಾಖಲೆ ಇದ್ದಲ್ಲಿ ಸದನದಲ್ಲಿ ದಾಖಲೆ ಬಿಡುಗಡೆ ಮಾಡಲಿ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರಲಿದೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಆದರೆ ಅದು ಆಗಿಲ್ಲ, ಹೀಗಾಗಿ ಬಹಳ ನೋವಿನಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು. ಭ್ರಷ್ಟಾಚಾರದ ಆರೋಪದ ಕುರಿತು ಕುಮಾರಸ್ವಾಮಿ ಅವರ ಸವಾಲನ್ನು ನಾವು ಸ್ವೀಕಾರ ಮಾಡ್ತೀವಿ ಎಂದು ಇದೇ ಸಂದರ್ಭದಲ್ಲಿ ಎಂ ಬಿ ಪಾಟೀಲ್…