ಬೆಂಗಳೂರು: ಕಳೆದ ಕೆಲ ದಿನಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ತರಕಾರಿ ಬೆಲೆ, ಬೇಳೆಕಾಳಿನ ಬೆಲೆ ನಂತರ ಇದೀಗ ಹೂವುಗಳ (Flower) ಸರದಿ ಶುರುವಾಗಿದೆ. ಹೂಗಳ ಬೆಲೆ ದುಬಾರಿಯಾಗಿದ್ದು (Flower Price Hike), ಹೂಗಳನ್ನು ಕೊಳ್ಳಂಗಿಲ್ಲ.. ಮುಡಿಯೋ ಹಾಗಿಲ್ಲ.. ಅನ್ನುವಂತಾಗಿದೆ. ಈ ಬಾರಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಮುಂಗಾರು ಕೈಕೊಟ್ಟಿದ್ದು, ಮಳೆಯಿಂದಾಗಿ ತರಕಾರಿಗಳ ಬೆಲೆಗಳು ದುಬಾರಿಯಾಗಿವೆ. ಈ ಬೆನ್ನಲ್ಲೇ ಹೂಗಳ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆ (Rain) ಕೊರತೆಯಿಂದ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ಹೂಗಳ ದರವೂ ಏರಿಕೆಯಾಗಿದ್ದು. ಮಾರ್ಕೆಟ್‌ನಲ್ಲಿಯೂ ಹೂವುಗಳು ಸಿಗುತ್ತಿಲ್ಲ. ಸಾಮಾನ್ಯವಾಗಿ ಆಷಾಢದಲ್ಲಿ ಶುಭ ಸಮಾರಂಭಗಳು ಕಡಿಮೆ ಇರೋದ್ರಿಂದ ಹೂಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು. ಆದ್ರೆ ಈ ಬಾರಿ ಮಳೆಯಿಂದಾಗಿ ಹೂಗಳ ಬೆಲೆ ಡಬಲ್ ಆಗಿದೆ. ಯಾವ ಹೂವಿನ ದರ ಎಷ್ಟು..? (ಪ್ರತಿ ಕೆಜಿಗಳಿಗೆ) ಸದ್ಯ ಮಾರುಕಟ್ಟೆಯಲ್ಲಿ ಮಲ್ಲಿಗೆ ಕೆ.ಜಿ 1,200 ರೂ., ಕನಕಾಂಬರಿ 2,000 ರೂ., ಸೇವಂತಿಗೆ 400 ರೂ., ಚೆಂಡು ಹೂವು, 200 ರೂ., ಸುಗಂಧರಾಜ 200 ರೂ., ಮಲ್ಲಿಗೆ ಹಾರ…
Author: Prajatv Kannada
ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಚಾಲಕನ ಅಜಾಗರೂಕತೆ, ಅತಿಯಾದ ವೇಗ ಹೀಗೆ ನಾನ ಕಾರಣಗಳಿಂದ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ಬ್ರೇಕ್ ಹಾಕಲು ಫೈನ್ ಸ್ಪೀಡ್ ಲಿಮಿಟ್ ಜಾರಿಗೆ ತರಲಾಗುತ್ತಿದೆ. ಅತಿ ವೇಗವಾಗಿ ಹೋಗುವ ವಾಹನ ಸವಾರರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಮೈಸೂರು ಹೈವೇಲಿ ಯಾರು ಅತಿ ಸ್ಪೀಡ್ ಆಗಿ ವಾಹನ ಚಲಾಯಿಸುತ್ತಾರೋ ಅಂತಹವರನ್ನು ತಡೆದು ಇನ್ಮುಂದೆ ಫೈನ್ ಹಾಕಲಾಗುತ್ತದೆ. ಹೀಗಾಗಿ ಹೈ ವೇಲಿ ಬ್ಯಾರಿಕೇಡ್ ಹಾಕಿ ವಾಹನ ಸವಾರರ ವಿರುದ್ಧ ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಸ್ಪೀಡ್ ಲಿಮಿಟ್ ಕಮ್ಮಿ ಮಾಡುವಂತೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದು, ಹೈವೇಲೆ ವಾಹನಗಳು ಅತಿ ವೇಗವಾಗಿ ಹೋಗ್ತಿದ್ವು. ಇಷ್ಟು ದಿನ 122 ಕಿಲೋ ಮೀಟರ್ ವೇಗದಲ್ಲಿ ಹೋಗ್ತಿದ್ದ ವಾಹನಗಳು, ಈಗ ಸ್ಪೀಡ್ ಲಿಮಿಟ್ 100 ಕಿಲೋ ಮೀಟರ್ ಸ್ಪೀಡ್ ಕಮ್ಮಿ ಮಾಡಿ ಆದೇಶ ಹೊರಡಿಸಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಮೈಸೂರ್-ಬೆಂಗಳೂರು ಎಕ್ಸ್ಪ್ರೆಸ್ ಅಪಘಾತ ವಿಚಾರ ಚರ್ಚೆ ಆಗಿತ್ತು.…
ಬೆಂಗಳೂರು ;- ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ ಮುಕ್ತಾಯವಾಗಿದ್ದು, ಹೆಸರು ಪ್ರಕಟಣೆಗೆ ಕೌಂಟ್ಡೌನ್ ಶುರುವಾಗಿದೆ. ವೀಕ್ಷಕರಾಗಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ನಿನ್ನೆ ಅಪರಾಹ್ನ 12 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೂ ಪ್ರಮುಖರ ಅಭಿಪ್ರಾಯ ಸಂಗ್ರಹ ಮಾಡಿದರು. ಆಯ್ದ ನಾಯಕರ ಅಭಿಪ್ರಾಯ ಸಂಗ್ರಹ ಮುಗಿಸಿದ ನಂತರ ಸಂಜೆ ಏಳು ಗಂಟೆಗೆ ಪಕ್ಷದ ಕಚೇರಿಯಿಂದ ನಿರ್ಗಮಿಸಿದ ಮನ್ಸುಖ್ ಮಾಂಡವೀಯ ಮತ್ತು ವಿನೋದ್ ತಾವಡೆ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಗೆ ತೆರಳಿದರು. ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು. ಪ್ರತಿಪಕ್ಷ ನಾಯಕರ ಆಯ್ಕೆ ಮತ್ತು ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಂತೆ ಪಕ್ಷದ ಹೈಕಮಾಂಡ್ ನಿರ್ದೇಶದನದಂತೆ ರಾಜ್ಯದ ಆಯ್ದ ನಾಯಕರ ಅಭಿಪ್ರಾಯ ಸಂಗ್ರಹ…
ಶಿವಮೊಗ್ಗ: ಬೆಂಗಳೂರು ಕ್ರೆಂ ಲೋಕವನ್ನು ಮೀರಿಸುತ್ತಿದೆ ಶಿವಮೊಗ್ಗದ ಅಪರಾಧ ಜಗತ್ತು. ಬೆಂಗಳೂರು ಹೊರತು ಪಡಿಸಿದರೆ ರಾಜ್ಯದಲ್ಲಿ ಅತೀ ಹೆಚ್ಚು ಪೊಲೀಸ್ ಪೈರಿಂಗ್ ಗಳು ಆಗಿರುವುದು ಶಿವಮೊಗ್ಗ ಜಿಲ್ಲೆಯಲ್ಲೇ ಎಂಬುದು ಗಮನಾರ್ಹ. ಅಲ್ಲದೆ ರೌಡಿಗಳ ಪಟ್ಟಿ ದೊಡ್ಡದಿರುವುದು ಕೂಡ ಶಿವಮೊಗ್ಗ. ಅತೀ ಹೆಚ್ಚು ಎಪ್.ಐ.ಆರ್ ಆಗುವ ಜಿಲ್ಲೆ ಕೂಡ ಶಿವಮೊಗ್ಗ. ಶಿವಮೊಗ್ಗದ ರೌಡಿಗಳಿಗೆ ಪೊಲೀಸರ ಭಯವಿಲ್ಲವೇ…ಹೀಗೊಂದು ಅನುಮಾನ ಮೂಡಲು ಕಾರಣವೂ ಇದೆ. ಶಿವಮೊಗ್ಗ ಜಿಲ್ಲೆಯ ಪಾತಕ ಲೋಕಕ್ಕೆ ತನ್ನದೇ ಆದ ಇತಿಹಾಸವಿದೆ. 80 ದಶಕದಲ್ಲಿ ಎದುರಾಳಿಗಳಾಗಿ ಬಡಿದಾಡಿಕೊಳ್ಳುತ್ತಿದ್ದ ರೌಡಿಗಳು ಈಗ ಅಂಡ್ಯಾಡ್ಯ್ಡ್ ವರ್ಷನ್ ಗೆ ಅಪ್ ಡೇಟ್ ಆಗಿದ್ದಾರೆ. ಹೈಟೆಕ್ ತಂತ್ರಜ್ಞಾನ ಬಳಸಿಕೊಂಡಿರುವ ರೌಡಿಗಳಿಗೆ ಹೆಡೆಮುರಿ ಕಟ್ಟಲು ಪೊಲೀಸರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ರೌಡಿಗಳ ಕಾಲಿಗೆ ಗುಂಡೇಟು ಬಿದ್ದರೂ ಅಪರಾಧ ಜಗತ್ತು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇತ್ತಿಚ್ಚಿನ ಎಲ್ಲಾ ಪೊಲೀಸ್ ಫೈರಿಂಗ್ ಕೇಸ್ ಗಳಲ್ಲಿ ಕೂಡ ಪೊಲೀಸ್ ಸಿಬ್ಬಂದಿಗಳು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಶಿವಮೊಗ್ಗದ ರೌಡಿಗಳಿಗೆ ಪೊಲೀಸರ ಭಯವಿಲ್ಲ ಎಂಬುದನ್ನು ಸಾಭೀತು ಪಡಿಸಿದಂತಾಗುವುದಿಲ್ಲವೆ. ಉತ್ತಮವಾಗಿ…
ಧರ್ಮಸ್ಥಳ : ಚಿತ್ರದುರ್ಗದ ಮುರುಘಾಶ್ರೀ ಪ್ರಕರಣ ಬಯಲು ಮಾಡಿದ್ದ ಮೈಸೂರಿನ ಒಡನಾಡಿ ಸಂಸ್ಥೆ ಇದೀಗ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಹೋರಾಟಕ್ಕೆ ಮುಂದಾಗಿದೆ. ಸೌಜನ್ಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯಕೊಡಿಸಲು ಒಡನಾಡಿ ಸಂಸ್ಥೆ ಹೋರಾಟಕ್ಕೆ ಇಳಿಯುತ್ತಿದ್ದಂತೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಸೌಜನ್ಯ ಪರ ಹೋರಾಟಗಾರರನ್ನ ಭೇಟಿಯಾದ ಒಡನಾಡಿಯ ಮುಖಂಡರು. ಸೌಜನ್ಯ ಪರವಾದ ನ್ಯಾಯದ ಹೋರಾಟಕ್ಕೆ ಒಡನಾಡಿ ಬೆಂಬಲಿಸುತ್ತದೆ. ನ್ಯಾಯ ಸಿಗುವವರೆಗೂ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದಿರುವ ಸಂಸ್ಥೆ. ಈ ಹಿಂದೆ ಮುರುಘಾಮಠ ಪ್ರಕರಣದಲ್ಲಿ ಹೋರಾಟಕ್ಕಿಳಿದಿದ್ದ ಒಡನಾಡಿ ಸಂಸ್ಥೆ. ಸಂತೋಷ್ ರಾವ್ ಆರೋಪಿಯಲ್ಲ ಎಂದು ಸಾಬೀತಾದ ಹಿನ್ನಲೆ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿರುವ ಪಡೆದುಕೊಂಡಿರುವ ಪ್ರಕರಣ. ಮತ್ತೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಸೌಜನ್ಯ ಪ್ರಕರಣ ಸೌಜನ್ಯ ಪರವಾಗಿ ರಾಜ್ಯಾದ್ಯಂತ ಹೋರಾಟ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ ಒಡನಾಡಿ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಸ್ಟಾನ್ಲಿ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣ ತಲೆ ತಗ್ಗಿಸುವಂತಹ ಘಟನೆ. ಅತ್ಯಾಚಾರ ಮಾಡಿದ ಪಾಪಿಗಳನ್ನ ಇನ್ನೂ ನ್ಯಾಯದ ಕಟಕಟೆಗೆ…
ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ರಾಜ್ಯ ರಾಜಕಾರಣದಲ್ಲಿ ಎರಡನೇ ಇನ್ನಿಂಗ್ಸ್ ಗಾಲಿ ಜನಾರ್ದನ ರೆಡ್ಡಿ ಆರಂಭಿಸಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಮತ್ತೆ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. ಆದ್ರೆ, ಈ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ. ಜನಾರ್ದನ ರಡ್ಡಿ ನಾಮಪತ್ರದಲ್ಲಿನ ದೋಷದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ರಾಜ್ಯ ಚುನಾವಣಾಧಿಕಾರಿ ಪತ್ರ ಬರೆದಿದ್ದಾರೆ. ಜನಾದರ್ನ ರೆಡ್ಡಿ ನಾಮಪತ್ರ ಸಲ್ಲಿಸುವಾಗ ಸರಿಯಾದ ಮಾಹಿತಿ ನೀಡಿಲ್ಲ. ವಾಹನಗಳು, ಆಸ್ತಿ ವಿವರ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿ ಅನಂತಪುರದ ಗಣಿ ಉದ್ಯಮಿ ಟಪಾಲು ಶ್ಯಾಮ್ ಪ್ರಸಾದ್ ಎನ್ನುವರು ಚುನಾವಣಾ ಆಯೋಕ್ಕೆ ದೂರು ನೀಡಿದ್ದರು. ಈ ದೂರನ್ನು ಚುನಾವಣಾ ಆಯೋಗ ಸಹ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದರಿಂದ ಜನಾದರ್ನ ರೆಡ್ಡಿಗೆ ಢವ ಢವ ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಒಟ್ಟು…
ನವದೆಹಲಿ: 2024ಕ್ಕೆ ಅಲ್ಲ 2047ರ ಸುವರ್ಣಯುಗದ ಮೇಲೆ ಕಣ್ಣಿಡಿ ಎಂದು ಮಂತ್ರಿ ಪರಿಷತ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕಿವಿ ಮಾತು ಹೇಳಿದರು. ಪ್ರಗತಿ ಮೈದಾನದ ಸಮಾವೇಶ ಕೇಂದ್ರದಲ್ಲಿ ಆಯೋಜಿಸಿದ್ದ ಕೇಂದ್ರ ಸಚಿವ ಸಂಪುಟ ಸಭೆಯ (Union Cabinet Meeting) ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2047ರ ಯುಗ ಭಾರತದ ಸುವರ್ಣಯುಗ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುತ್ತಿರುವಾಗ ಅದರ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡಬೇಕು. 2047ರ ಹೊತ್ತಿಗೆ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಿದೆ. ಭಾರತವು ಉನ್ನತ ಶಿಕ್ಷಣ ಪಡೆದ ಉದ್ಯೋಗಿಗಳಿಂದ ತುಂಬಲಿದೆ, ವಿವಿಧ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಸಾಕ್ಷಿಯಾಗಲಿದೆ ಎಂದು ಶ್ಲಾಘಿಸಿದರು. ನಮ್ಮ ಸರ್ಕಾರ ಕಳೆದ 9 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ, ನಾವು ಮಾಡಿರುವ ಕೆಲಸಗಳನ್ನ ಜನರಿಗೆ ತಿಳಿಸಿ, ತಮ್ಮ ಸಚಿವಾಲಯದ 12 ಸಾಧನೆಗಳನ್ನು ಪಟ್ಟಿ ಮಾಡಿ ಕೆಲಸಗಳನ್ನು ಜನರಿಗೆ ಪ್ರಚಾರ…
ನವದೆಹಲಿ ;- ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಸುರಕ್ಷಿತ ಪ್ರಯಾಣದ ವ್ಯವಸ್ಥೆ ಯನ್ನು ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದರು. ನವದೆಹಲಿಯಲ್ಲಿ ಮಾತನಾಡಿದ ಅವರು, ನಿರ್ಭಯ ಯೋಜನೆಯ ಅಡಿಯಲ್ಲಿ ನೂತನ ಯೋಜನೆಯನ್ನು ರೂಪಿಸಲಾಗಿದ್ದು, ಅಪ್ರಾಪ್ತ ಸಂತ್ರಸ್ತೆಯರಿಗೆ ನೀಡಲಾಗುವ ಈ ನೆರವನ್ನು ಅವರಿಗೆ ತಲುಪಿಸುವುದಕ್ಕಾಗಿ ರಾಜ್ಯ ಸರಕಾರಗಳು ಮತ್ತು ಮಕ್ಕಳ ಆರೈಕೆ ಸಂಸ್ಥೆಗಳೊಂದಿಗೆ ಕೈಜೋಡಿಸಿ ಮಿಶನ್ ವಾತ್ಯಲ್ಯದ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದ್ದೇವೆ ಎಂದು ಹೇಳಿದ್ದಾರೆ. ಕಾನೂನು ನೆರವಿನ ಜೊತೆಗೆ, ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯಾಲಯದ ವಿಚಾರಣೆಗಳಲ್ಲಿ ಭಾಗವಹಿಸುವುದಕ್ಕಾಗಿ ಸುರಕ್ಷಿತ ಪ್ರಯಾನದ ವ್ಯವಸ್ಥೆ ಯನ್ನು ಮಾಡಲಾಗುತ್ತದೆ ಎಂದು ನಿರಾನಿ ಹೇಳಿದ್ದಾರೆ. ಅತ್ಯಾಚಾರದಿಂದ ದೈಹಿಕ ಮತ್ತು ಭಾವನಾತ್ಮಕವಾಗಿ ಆಘಾತಕೊಳ್ಳಗಾದವರನ್ನ ಗುರುತಿಸಿ ಸಚಿವಾಲಯದಲ್ಲಿ ನಾವು ಅಂತಹ ಅಪ್ರಾಪ್ತ ಸಂತ್ರಸ್ತರಿಗೆ ಹಣಕಾಸಿನ ಬೆಂಬಲವನ್ನು ಹೊರತುಪಡಿಸಿ ವೈದ್ಯಕೀಯ ಮೂಲಸೌಕರ್ಯ ಬೆಂಬಲವನ್ನು ನೀಡಲು ನಿರ್ಧರಿಸಿದ್ದೇವೆ. ನಿರ್ಭಯಾ ನಿಧಿಯ ಆಶ್ರಯದಲ್ಲಿ ಅಗತ್ಯವಿದೆ ಎಂದು ಸಚಿವರು ಹೇಳಿದರು
ಬೀಟ್‌ರೂಟ್ ಅನ್ನು ನಮ್ಮ ನಿತ್ಯದ ಆಹಾರದಲ್ಲಿ ಬಳಸುವುದರಿಂದ ನಮ್ಮ ದೇಹದಲ್ಲಿ ರಕ್ತ ಹೆಚ್ಚುವುದಲ್ಲದೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀರಿನಂಶ ಹೊಂದಿರುವ ಪಾನೀಯ ಮತ್ತು ವಸ್ತುಗಳನ್ನು ತಿನ್ನುವುದರಿಂದ ಅಥವಾ ಕುಡಿಯುವುದರಿಂದ ನಮ್ಮ ದೇಹ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಬಹುದು. ಇವತ್ತಿನ ರೆಸಿಪಿಯಲ್ಲಿ ಬೀಟ್‌ರೂಟ್ ಜ್ಯೂಸ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಗ್ರಿಗಳು: ತುರಿದ ಬೀಟ್‌ರೂಟ್ – 1 ಕಪ್ ನಿಂಬೆ ಹಣ್ಣಿನ ರಸ – ಅರ್ಧ ನಿಂಬೆ ಜೇನುತುಪ್ಪ – ಒಂದೂವರೆ ಚಮಚ ಉಪ್ಪು – ಒಂದು ಚಿಟಿಕೆ ಕಾಳುಮೆಣಸಿನ ಪುಡಿ – ಅರ್ಧ ಚಮಚ ತುರಿದ ಶುಂಠಿ – ಸ್ವಲ್ಪ ಮಾಡುವ ವಿಧಾನ: *ಮೊದಲಿಗೆ ಒಂದು ಮಿಕ್ಸರ್ ಜಾರಿಗೆ ತುರಿದ ಬೀಟ್‌ರೂಟ್, ಶುಂಠಿ, ಕಾಳುಮೆಣಸಿನ ಪುಡಿ, ಉಪ್ಪು ಹಾಗೂ ನಿಂಬೆರಸವನ್ನು ಹಾಕಿಕೊಳ್ಳಿ. *ಈಗ ಇದಕ್ಕೆ ಅರ್ಧ ಗ್ಲಾಸ್ ನೀರನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. *ಬಳಿಕ ಇದನ್ನು ಸೋಸಬೇಕು. ನಂತರ ಒಂದು ಗ್ಲಾಸ್‌ಗೆ…
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕಾಲ್ ಶೀಟ್ ನೀಡುವುದಾಗಿ ಹೇಳಿ ಮುಂಗಡ ಹಣ ಪಡೆದು ಮೋಸ ಮಾಡಿದ್ದಾರೆ ಎಂಬ ನಿರ್ಮಾಪಕ ಎಂ. ಎನ್. ಕುಮಾರ್ ಹೇಳಿಕೆ ನೀಡಿದ್ದು ಈ ಬಗ್ಗೆ ಸುದೀಪ್ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ. ಇದೀಗ ನಿರ್ಮಾಪಕ ಕುಮಾರ್ ಹೇಳಿಕೆಗೆ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ನಟನೆಯ ಮುಂದಿನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸುದೀಪ್ ನಟನೆಯ 46ನೇ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿದ್ದು ಚಿತ್ರದ ಶೂಟಿಂಗ್ ಆರಂಭಕ್ಕೂ ಮುನ್ನವೇ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬೆನ್ನಲ್ಲೇ ನಿರ್ಮಾಪಕ ಕುಮಾರ್ ಹೇಳಿಕೆ ಸಾಕಷ್ಟು ಸುದ್ದಿಯಾಗಿದ್ದು ಈ ಕುರಿತು ನಿರ್ದೇಶಕ ನಂದ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ನಿರ್ಮಾಪಕ ಎನ್ ಕುಮಾರ್ 2016ರಲ್ಲಿ’ಮುಕುಂದ ಮುರಾರಿ’ ಸಿನಿಮಾ ನಂತರ ಸುದೀಪ್ ಜೊತೆ ಮತ್ತೊಂದು ಸಿನಿಮಾ ಒಪ್ಪಂದ ಮಾಡಿಕೊಂಡಿದ್ದರಂತೆ. ಅಲ್ಲದೆ ಸುಮಾರು 8 ವರ್ಷಗಳ ಹಿಂದೆ ಕಿಚ್ಚ ಸುದೀಪ್‌ಗೆ ಮುಂಗಡ ಹಣ ಪಾವತಿಸಿದ್ದರಂತೆ.…