ಇಸ್ಲಾಮಾಬಾದ್: ಭಾರತದ ಬೌಲಿಂಗ್ ಯಾವಾಗ್ಲೂ ಕಳಪೆಯಾಗಿರುತ್ತೆ. ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಅಟ್ಯಾಕ್ ಮಾಡುತ್ತೆ ಅಂತಾ ನನಗೆ ಅನ್ನಿಸಲ್ಲ. ಹಾಗಾಗಿ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಸಾಯಿದ್ ಅಜ್ಮಲ್ (Saeed Ajmal) ವ್ಯಂಗ್ಯವಾಡಿದ್ದಾರೆ. ಇದೇ ಮೊದಲಬಾರಿಗೆ ಭಾರತ ಪೂರ್ಣ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ (ICC WorldCup) ಆಯೋಜಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ (Pakistan) ಸೆಣಸಲಿದೆ. ಈಗಾಗಲೇ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ನಿಗದಿಯಾಗಿದ್ದು, ಭಾರತದ 5 ಪ್ರಮುಖ ನಗರಗಳಲ್ಲಿ ಪಾಕ್ ತಂಡ 9 ಪಂದ್ಯಗಳನ್ನಾಡಲಿದೆ. ಈ ನಡುವೆ ಟೀಂ ಇಂಡಿಯಾ ಬೌಲಿಂಗ್ ಪ್ರದರ್ಶನದ ಬಗ್ಗೆ ಅಜ್ಮಲ್ ಮಾತನಾಡಿದ್ದಾರೆ. ಪಾಕ್‌ನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಅಜ್ಮಲ್, ಉನ್ನತ ಮಟ್ಟದ ಪಂದ್ಯಗಳಲ್ಲಿ ಪಾಕಿಸ್ತಾನಿ ಬ್ಯಾಟರ್‌ಗಳಿಗೆ ಸವಾಲು ಹಾಕುವ ಬೌಲಿಂಗ್ ದಾಳಿಯನ್ನು ಭಾರತ ಹೊಂದಿದೆ ಎಂದು ನಿಮಗನ್ನಿಸುತ್ತಾ? ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಯಾವಾಗಲೂ…
Author: Prajatv Kannada
ಲಂಡನ್: ಭಾನುವಾರ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಮುಗಿದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 43 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಆಷಸ್ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. ಅಂದ ಹಾಗೆ ಐದನೇ ದಿನ ಕ್ಯಾಮೆರಾನ್ ಗ್ರೀನ್ ಎಸೆದ ಬೌನ್ಸ್ ಅನ್ನು ಜಾನಿ ಬೈರ್‌ಸ್ಟೋವ್ ಆಡದೆ ಹಿಂದಕ್ಕೆ ಬಿಟ್ಟಿದ್ದರು. ನಂತರ ಬೈರ್‌ಸ್ಟೋವ್ ಕ್ರೀಸ್ ಬಿಟ್ಟು ಮುಂದಕ್ಕೆ ನಡೆದು ಹೋಗುವ ವೇಳೆ ಅಲೆಕ್ಸ್ ಕೇರಿ ಸ್ಪಂಪ್ ಔಟ್ ಮಾಡಿದ್ದರು. ಇದನ್ನು ಜಾನಿ ಬೈರ್‌ಸ್ಟೋವ್ ನಿರೀಕ್ಷಿಸಿರಲಿಲ್ಲ. ಅಂಪೈರ್ ಕೂಡ ಇಂಗ್ಲೆಂಡ್ ಆಟಗಾರ ಔಟ್ ಎಂದು ತೀರ್ಪು ನೀಡಿದ್ದರು. ಅಂದ ಹಾಗೆ 5ನೇ ದಿನ ಭೋಜನ ವಿರಾಮದ ವೇಳೆ ಡ್ರೆಸ್ಸಿಂಗ್ ಕೊಠಡಿಗೆ ತೆರಳುವ ವೇಳೆ ಆಸ್ಟ್ರೇಲಿಯಾ ಆಟಗಾರರ ಜತೆ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್‌ನ ಕೆಲ ಸದಸ್ಯರು ಕಿರಿಕ್ ಮಾಡಿಕೊಂಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜ ಅವರ ಜತೆ ಎಂಸಿಸಿಯ ಕೆಲ ಸದಸ್ಯರು ಮಾತಿನ ಚಕಮಕಿ ನಡೆಸಿದ್ದರು. ಈ ವಿಡಿಯೋ ಸೋಶಿಯಲ್…
ಸೂರ್ಯೋದಯ: 05.58 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಬಿದಿಗೆ 10:02 AM ತನಕ ನಂತರ ತದಿಗೆ ನಕ್ಷತ್ರ: ಇವತ್ತು ಉತ್ತರ ಆಷಾಢ 05:39 AM ತನಕ ನಂತರ ಶ್ರವಣ ಯೋಗ: ಇವತ್ತು ವೈಧೃತಿ 07:48 AM ತನಕ ನಂತರ ವಿಷ್ಕುಂಭ ಕರಣ: ಇವತ್ತು ಗರಜ 10:02 AM ತನಕ ನಂತರ ವಣಿಜ 08:15 PM ತನಕ ನಂತರ ವಿಷ್ಟಿ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 05.43 PM to 07.08 PM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ಮೇಷ ರಾಶಿ: ಸಣ್ಣ ಚಿಲ್ಲರೆ ವ್ಯಾಪಾರಸ್ಥರಿಗೆ ಧನಲಾಭ, ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗಲಿದೆ, ಪ್ಲಿವುಡ್ಸ, ಬಂಗಾರ ಆಭರಣ ತಯಾರಿ ಮಾಡುವವರಿಗೆ…
ಬೆಂಗಳೂರು ;– ಶೀಘ್ರವೇ ವಿಪಕ್ಷ ನಾಯಕರು ಹೆಸರು ಪ್ರಕಟವಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸಚಿವ ಮನ್ಸುಖ್ ಮಾಂಡವಿಯ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯರಾದ ವಿನೋದ್ ತಾವ್ಡೆ ಅವರು ಪ್ರಮುಖ ಪದಾಧಿಕಾರಿಗಳ ಅಭಿಪ್ರಾಯವನ್ನೂ ಸಂಗ್ರಹಿಸಿ ತೆರಳಿದ್ದಾರೆ. ಕೇಂದ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇನ್ನೂ ಕೆಲವರ ಜೊತೆ ಚರ್ಚಿಸಿ ರಾಜ್ಯ ಅಧ್ಯಕ್ಷರು ಯಾರು ಮತ್ತು ಯಾರು ವಿಪಕ್ಷ ನಾಯಕರೆಂದು ಪಕ್ಷ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ. ಕೇಂದ್ರದ ವೀಕ್ಷಕರು ರಾಜ್ಯಾಧ್ಯಕ್ಷರ ಮತ್ತು ವಿಪಕ್ಷ ನಾಯಕರ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿ, ಕರ್ನಾಟಕಕ್ಕೆ ಹೆಸರುಗಳನ್ನು ಸೂಚಿಸಲಿದ್ದಾರೆ. ರಾಜ್ಯ ವಿಧಾನಸಭೆ ಮತ್ತು ಮೇಲ್ಮನೆಯ ವಿಪಕ್ಷ ನಾಯಕರ ಹೆಸರನ್ನು ತಿಳಿಸುತ್ತಾರೆ. ಶೀಘ್ರವೇ ವಿಪಕ್ಷ ನಾಯಕರು ಮತ್ತು ರಾಜ್ಯ ಅಧ್ಯಕ್ಷರ ಕುರಿತ ಮಾಹಿತಿ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ;- ಕಾಂಗ್ರೆಸ್ ವಿರುದ್ಧದ ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸಿದ್ದರ ಹಿಂದೆ ಲೋಕಸಭೆ ಹೊಂದಾಣಿಕೆಯಿಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿ ವಿಚಾರದಲ್ಲಿ ಜೆಡಿಎಸ್ ನಿಲುವನ್ನು ಸ್ವಾಗತಿಸಿದ ಮಾತ್ರಕ್ಕೆ ಅದನ್ನು ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಕೋನದಿಂದ ನೋಡಬಾರದು, ಇದು ಮೈತ್ರಿಯ ಸುಳಿವಲ್ಲ, ನಾವು ಜನರ ಪರ ನಿಂತಿದ್ದೇವೆ, ಜೆಡಿಎಸ್ ಕೂಡ ಜನರ ಪರ ನಿಂತಿದೆ ಅಷ್ಟೆ ಇದು ಹೊಂದಾಣಿಕೆಯ ನಿಲುವಲ್ಲ ಎಂದರು. ಗ್ಯಾರಂಟಿಗಳಿಗೆ ಷರತ್ತನ್ನು ಹಾಕಿ ಬಡವರಿಗೆ ಮಹಿಳೆಯರಿಗೆ ರೈತರಿಗೆ ಪದವೀಧರರಿಗೆ ಮದ್ಯಮ ವರ್ಗದವರಿಗೆ ಕೂಲಿ ಕಾರ್ಮಿಕರಿಗೆ ಎಲ್ಲರಿಗೂ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಇದನ್ನ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಹಾಗೂ ಕಟೀಲ್ ನೇತೃತ್ವದಲ್ಲಿ ಯಶಸ್ವಿಯಾಗಿ ಒಂದು ದಿನದ ಪ್ರತಿಭಟನಾ ಧರಣಿಯನ್ನ ನಡೆಸಿದ್ದೇವೆ. ಆ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹೇಳಿದರು.
ಬೆಂಗಳೂರು ;- ಕಾಂಗ್ರೆಸ್ ನ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ಶಾಸಕ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಂತಲ್ಲಿ, ನಿಂತಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ತನಿಖೆ ಮಾಡುವುದಾಗಿ ಗೊಡ್ಡು ಬೆದರಿಕೆ ಹಾಕ್ತಿದ್ದಾರೆ. ಅವರ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಭರವಸೆಗಳನ್ನು ನೀವು ಈಡೇರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿನ ಹಗರಣಗಳನ್ನು ತನಿಖೆ ಮಾಡುತ್ತೇವೆ ಎಂದು ಹೇಳಿ ಗ್ಯಾರಂಟಿ ಜಾರಿಯ ವೈಫಲ್ಯವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು. ಯಡಿಯೂರಪ್ಪನವರು ಹೊರಗೆ ಹೋರಾಟ ಮಾಡುತ್ತಿದ್ದರೆ. ಬಿಜೆಪಿ ಶಾಸಕರು ಸದನದ ಒಳಗೆ ಪ್ರತಿಭಟನೆ ಮಾಡುತ್ತಾರೆ. ಕಾಂಗ್ರೆಸ್ ಮೊದಲ ದಿನವೇ ಗ್ಯಾರೆಂಟಿ ಅನುಷ್ಠಾನ ಮಾಡ್ತೀವಿ ಎಂದು ಭರವಸೆ ನೀಡಿದರು. ಸರ್ಕಾರ ಬಂದು 50 ದಿನಗಳಾಗಿದ್ರೂ ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಸಮಯ ದೂಡುತ್ತಿದೆ” ಎಂದು ಗರಂ ಆದರು.
ಬೆಂಗಳೂರು ;- ಹಿಂದುತ್ವವಾದಿ ವ್ಯಕ್ತಿ ಪ್ರತಿಪಕ್ಷ ನಾಯಕ ಆಗಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದುತ್ವವಾದಿ, ಯಾವುದೇ ಹೊಂದಾಣಿಕೆಗೂ ಬಗ್ಗದ ವ್ಯಕ್ತಿ ಪ್ರತಿಪಕ್ಷ ನಾಯಕನಾಗಬೇಕು. ಬಿಜೆಪಿಯಲ್ಲಿ ಈಗ ಟರ್ನಿಂಗ್ ಪಾಯಿಂಟ್ ಆಗುತ್ತಿದೆ. ನಾವು ಈ ಬಾರಿ ಅಂಕಿ-ಅಂಶಗಳಲ್ಲಿ ಸೋತಿದ್ದೇವೆಯೇ ವಿನಃ ಪರ್ಸೇಂಟೇಜ್ ನಲ್ಲಿ ಅಲ್ಲ, ಇಡೀ ಹಿಂದುತ್ವದ ಮೂಲಕ ಬಿಜೆಪಿ ಹಾಗೂ ಸಂಘಟನೆ ಬೆಳೆದಿದೆ. ಇದರ ಆಧಾರದ ಮೇಲೆಯೇ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತದೆ ಎಂದು ಹೇಳಿದರು. ರಾಜ್ಯಾಧ್ಯಕ್ಷರ ನೇಮಕ ಯಾವಾಗ ಆಗುತ್ತದೆಯೋ ಗೊತ್ತಿಲ್ಲ, ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೂ ಶೀಘ್ರವೇ ನೇಮಕ ಆಗುತ್ತದೆ. ಹೀಗಾಗಿ ನೇಮಕ ಆಗುವ ಇಬ್ಬರಿಗೂ ಚಾಲೆಂಜ್ ಇದೆ, ಇಬ್ಬರಿಗೂ ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬರುವ ಚುನಾವಣೆಯಲ್ಲಿ ಗೆಲ್ಲಿಸುವ ಹೊಣೆ ಇದೆ ಎಂದು ಅಭಿಪ್ರಾಯ ತಿಳಿಸಿದರು. ಇನ್ನೂ ಮಹಿಳೆಯರು ಯಾಕೆ ಬಿಜೆಪಿ ರಾಜ್ಯಾಧ್ಯಕ್ಷರು ಆಗಬಾರದು..? ಎಲ್ಲ ಕಡೆಯೂ ಮಹಿಳೆಯರು ಇರಬೇಕು ಹಾಗೆಯೇ ರಾಜ್ಯಾಧ್ಯಕ್ಷ…
ಬೆಂಗಳೂರು : ಬಿಜೆಪಿಯಲ್ಲಿ ಗುಂಪುಗಾರಿಕೆ, ಅಶಿಸ್ತು ಇರುವುದಕ್ಕೆ, ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಆಗುತ್ತಿರುವ ವಿಳಂಬವೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರ ಕುರಿತ ಪ್ರಶ್ನೆಗೆ, ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅನ್ನೋದು ವಿಪಕ್ಷ ನಾಯಕನ ಆಯ್ಕೆ ವಿಳಂಬದಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ. ಬಿಜೆಪಿ ನಾಯಕರು ತಮ್ಮ ಪಕ್ಷ ಶಿಸ್ತಿನ ಪಕ್ಷ ಅಂತ ಹೇಳ್ಕೊಳ್ತಾರೆ. ಅತೀ ಹೆಚ್ಚು ಅಶಿಸ್ತು ಇರೋ ಪಕ್ಷ ಬಿಜೆಪಿ ಎಂದು ಹೇಳಿದರು. ದೋಷ ಸರಿಪಡಿಸಿ ಜಾತಿ ಗಣತಿ ವರದಿ ಸ್ವೀಕಾರ: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿರುವ ಜಾತಿವಾರು ಸಾಮಾಜಿಕ ಹಾಗೂ ಶೈಕ್ಷಣಿಕ (ಜಾತಿ ಗಣತಿ) ವರದಿಯನ್ನು ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಿದ ನಂತರ ರಾಜ್ಯ ಸರ್ಕಾರ ಸ್ವೀಕರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇತೋಹಳ್ಳಿಯಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಬೆಂಗಳೂರು ಶಾಖಾ ಮಠದ ಭೂಮಿ ಪೂಜೆ ಮತ್ತು ನೂತನ ಸಚಿವ-ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಜಾತಿ…
ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಕ್ಕಾಗಿ ಸೂಕ್ತ ವ್ಯಕ್ತಿಯ ಹುಡುಕಾಟವನ್ನು ಬಿಜೆಪಿ ಹೈಕಮಾಂಡ್ ಮುಂದುವರಿಸಿರುವುದರ ನಡುವೆಯೇ ಮಾಜಿ ಸಿಎಂ ಯಡಿಯೂರಪ್ಪನವರು, ಶೋಭಾ ಕರಂದ್ಲಾಜೆಗೆ ರಾಜ್ಯ ಬಿಜೆಪಿ ಚುಕ್ಕಾಣಿ ಕೊಡುವಂತೆ ಸಲಹೆ ನೀಡಿರುವುದು ಬೆಳಕಿಗೆ ಬಂದಿದೆ. ಅತ್ತ, ಬಿಜೆಪಿ ಹೈಕಮಾಂಡ್ ಸಹ ಯಡಿಯೂರಪ್ಪನವರ ಸಲಹೆಯನ್ನು ತೆಗೆದುಹಾಕದ ಪರಿಸ್ಥಿತಿಯಲ್ಲಿದ್ದು, ಅವರ ಸಲಹೆಯನ್ನೇ ಒಪ್ಪಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ. ಹೈಕಮಾಂಡ್ ಜೊತೆಗೆ ಮಾತನಾಡಿರುವ ಯಡಿಯೂರಪ್ಪನವರು, ‘ರಾಜ್ಯ ಬಿಜೆಪಿ ಅಧ್ಯಕ್ಷರ ಗಾದಿಗೆ ಶೋಭಾ ಕರಂದ್ಲಾಜೆ ಅವರೇ ಸೂಕ್ತ ವ್ಯಕ್ತಿ. ಮಹಿಳೆಯರಿಗೆ ನಮ್ಮ ಪಕ್ಷದಲ್ಲಿ ಒಂದು ಮಹತ್ವದ ಪಟ್ಟ ಕೊಟ್ಟಹಾಗೆ ಆಗುತ್ತದೆ. ಜೊತೆಗೆ, ಶೋಭಾ ಅವರು ಹಿಂದೆ ರಾಜ್ಯದಲ್ಲಿ ಸಚಿವರಾಗಿ, ಕೇಂದ್ರದಲ್ಲಿ ಸಚಿವರಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಹಾಗಾಗಿ, ಅವರಿಗೆ ರಾಜ್ಯಾಧ್ಯಕ್ಷರ ಪಟ್ಟವನ್ನು ಕೊಡಬೇಕು’ ಎಂದು ಮನವಿ ಮಾಡಿದ್ದಾರೆನ್ನಲಾಗಿದೆ. ಯಡಿಯೂರಪ್ಪನವರ ಲಾಗಿಕ್ ಏನು? ರಾಜ್ಯ ಬಿಜೆಪಿಯಿಂದ ಇನ್ನೂ ವಿಪಕ್ಷ ನಾಯಕನನ್ನು ಆರಿಸಲಾಗಿಲ್ಲ. ಆ ಸ್ಥಾನದ ನೇಮಕಾತಿಯು ಬಾಕಿ ಇದ್ದು, ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿಯೂ ಬಾಕಿಯಿದೆ. ಇಲ್ಲಿ ಜಾತಿ ವಿಚಾರ…
ಆಗ್ನೇಯ ಬ್ರೆಜಿಲ್‌ನಲ್ಲಿ ತನ್ನ ಕರಾವಳಿ ಭವನವನ್ನು ನಿರ್ಮಿಸುವಾಗ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫುಟ್‌ಬಾಲ್ ತಾರೆ ನೇಮಾರ್‌ಗೆ 16 ಮಿಲಿಯನ್ ರಿಯಾಸ್ ($ 3.33 ಮಿಲಿಯನ್, ರೂ 28.6 ಕೋಟಿ) ದಂಡ ವಿಧಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಮೊದಲು ಕಳೆದ ತಿಂಗಳ ಕೊನೆಯಲ್ಲಿ ಆರೋಪಿಸಿದರು ಮತ್ತು ಐಷಾರಾಮಿ ಯೋಜನೆಯು ಸಿಹಿನೀರಿನ ಮೂಲಗಳು, ಕಲ್ಲು ಮತ್ತು ಮರಳಿನ ಬಳಕೆ ಮತ್ತು ಚಲನೆಯನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸೋಮವಾರ ದೃಢಪಡಿಸಿದರು. ಬ್ರೆಜಿಲ್‌ನ ರಿಯೊ ಡಿ ಜನೈರೊ ರಾಜ್ಯದ ದಕ್ಷಿಣ ಕರಾವಳಿಯಲ್ಲಿರುವ ಮಂಗರತಿಬಾ ಪಟ್ಟಣದಲ್ಲಿ ಅವರ ಮನೆ ಇದೆ. ಕಾರ್ಮಿಕರು ಕೃತಕ ಸರೋವರ ಮತ್ತು ಕಡಲತೀರವನ್ನು ನಿರ್ಮಿಸುತ್ತಿರುವ ಶ್ರೀಮಂತ ಎಸ್ಟೇಟ್‌ನಲ್ಲಿ ಹಲವಾರು ಪರಿಸರ ಉಲ್ಲಂಘನೆಗಳನ್ನು ಅಧಿಕಾರಿಗಳು ಪತ್ತೆ ಮಾಡಿದರು. ಇದು “ಅನುಮತಿ ಇಲ್ಲದೆ ಪರಿಸರ ನಿಯಂತ್ರಣಕ್ಕೆ ಒಳಪಟ್ಟಿರುವ ಕೆಲಸವನ್ನು ನಿರ್ವಹಿಸುವುದು,” “ಅನುಮತಿಯಿಲ್ಲದೆ ನದಿ ನೀರನ್ನು ವಶಪಡಿಸಿಕೊಳ್ಳುವುದು ಮತ್ತು ತಿರುಗಿಸುವುದು” ಮತ್ತು “ಅನುಮತಿ ಇಲ್ಲದೆ ಭೂಮಿಯನ್ನು ತೆಗೆಯುವುದು ಮತ್ತು ಸಸ್ಯವರ್ಗವನ್ನು ನಿಗ್ರಹಿಸುವುದು” ಒಳಗೊಂಡಿತ್ತು. ಅಧಿಕಾರಿಗಳು ಸೈಟ್ ಅನ್ನು ಸುತ್ತುವರೆದರು…