Author: Prajatv Kannada

ವಿಜಯನಗರ : ಮಿನಿ ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ಪಪಂ ವ್ಯಾಪ್ತಿಯ ಅಮರದೇವರಗುಡ್ಡ ಗೊಲ್ಲರ ಹಟ್ಟಿಯ ಬಳಿ ನಡೆದಿದೆ. .ಎಸ್. ಸೃಷ್ಟಿ(8) ಸಾವನ್ನಪ್ಪಿದ ದುರ್ಧೈವಿಯಾಗಿದ್ದು, ಗೊಲ್ಲರಹಟ್ಟಿಯ ನಿವಾಸಿಯಾಘಿರುವ ಸೃಷ್ಟಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿದ್ದಳು. ಬೆಳಿಗ್ಗೆ 9.30ರ ಸುಮಾರಿಗೆ ಶಾಲೆಗೆ ಹೋಗಲು ರಸ್ತೆ ದಾಟುತ್ತಿದ್ದಳು. ಈ ಸಂದರ್ಭದಲ್ಲಿ ಗುಡೇಕೋಟೆ ಕಡೆಯಿಂದ ಬರುತ್ತಿದ್ದ ಮಿನಿ ಲಾರಿ ವಿದ್ಯಾರ್ಥಿನಿಗೆ ಡಿಕ್ಕಿಯಾಗಿದ್ದು, ಸೃಷ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವಸಂತ ಅಸೋದೆ ಸ್ಥಳಕ್ಕೆ ಭೇಟಿ ನೀಡಿ ಪರಿಸಶೀಲಿಸಿದ್ದಾರೆ. ಇನ್ನೂ ಘಟನೆ ಸಂಭಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯನಗರ: ರಸ್ತೆಗೆ ಕಾಮಗಾರಿ ವೇಳೆ ಸಿಲಿಂಡರ್ ಸ್ಪೋಟಗೊಂಡು ವಾಹನ ಧಗ- ಧಗನೇ ಹೊತ್ತಿ ಉರಿದ ಘಟನೆ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಹೊರವಲಯದಲ್ಲಿ ನಡೆದಿದೆ. ರಸ್ತೆ ಕಾಮಗಾರಿ ಮಾಡೋ ವೇಳೆ ವೈಟ್  ಪಟ್ಟಿ ಹಾಕಲು ಬಳಸೋ ಪೆಂಟ್ ನ ಸಿಲಿಂಡರ್ ಸ್ಪೋಟಗೊಂಡಿದ್ದು, ಯಾವುದೇ ಪ್ರಾಣಹಾನಿ, ಜೀವಹಾನಿ ಸಂಭವಿಸಿಲ್ಲ. ಇನ್ನೂ ಸ್ಥಳಕ್ಕೆ ಹಂಪಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ಮಾಡಿದರು. ಈ ವೇಳೆ ಸಿಲಿಂಡರ್ ಸ್ಪೋಟದ ಶಬ್ದಕ್ಕೆ ಗುಂಪು ಸೇರಿದ ಜನರು.

Read More

ಹುಬ್ಬಳ್ಳಿ; ನಗರದಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಘಟಕದ ವತಿಯಿಂದ ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರ ಗುಡಿಯ ಹಿಂಭಾಗದಲ್ಲಿರುವ ಭಾವಸಾರ ಹಾಸ್ಟೇಲ್ ನಲ್ಲಿ ದಿನಾಂಕ 16 ಜುಲೈ 2023 ರ ಭಾನುವಾರ ರಂದು ಸಂಜೆ 5 ಘಂಟೆಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ. 2022-23ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹುಬ್ಬಳ್ಳಿಯ ಭಾವಸಾರ ಕ್ಷತ್ರಿಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತಿದೆ. ಸಮಾಜದ ಆಸಕ್ತ ವಿದ್ಯಾರ್ಥಿಗಳು ಜುಲೈ 10 ರ ಒಳಗೆ ಸಂಬಂಧ ಪಟ್ಟ ಧಾಖಲೆಗಳನ್ನು ಹುಬ್ಬಳ್ಳಿಯ ನೆಹರೂ ಮೈದಾನದ ಬಳಿ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ರಾಶಿನಕರ ಟೈಪಿಂಗ್ ಸೆಂಟರ್ ನಲ್ಲಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮಕ್ಕಳ ಕಲ್ಯಾಣ ನಿರ್ದೇಶಕಿ ಸ್ನೇಹಾ ಬೇದರೆ, ಮೊಬೈಲ್ ಸಂಖ್ಯೆ 96115 70248, ಇವರನ್ನು ಸಂಪರ್ಕಿಸಬಹುದು.

Read More

ಕೋಲಾರ: ಬೆಂಗಳೂರು ಉತ್ತರ ವಿಶ್ವವಿಧ್ಯಾಲಯದ ೩ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವ್ರು ಉದ್ಘಾಟಿಸಿದರು. ಕೋಲಾರ ನಗರದ ರಾಷ್ಟ್ರೀಯ ಹೆದ್ದಾರಿ ೭೫ ರ ನಂದಿನಿ ಪ್ಯಾಲೇಸನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದ್ದಾರೆ. ಕೋಲಾರದ ಸಂಚಿಕೆ ದಿನಪತ್ರಿಕೆ ಸಂಪಾದಕರಾದ ಮುನಿಯಪ್ಪ ಅವರಿಗೆ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನೀಡಿದರೆ, ಹರೀಶ್ ಹಂದೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರ, ಮುನಿವೆಂಕಟಪ್ಪ ತಮಟೆ ವಾದದ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪಿಜಿ ಮತ್ತು ಯುಜಿ ಪದವಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ೪೪ ವಿಧ್ಯಾರ್ಥಿಗಳಿಗೆ ರಾಜ್ಯಪಾಲರಿಂದ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ನಿರಂಜನ್ ವಾನವಹಳ್ಳಿ, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು

Read More

ಯಾದಗಿರಿ: ವೇಗವಾಗಿ ಸಲಿಸುತ್ತಿದ್ದ ಬಸ್ ನ ಮಧ್ಯೆ ಸಿಲುಕಿದ ಬೈಕ್ ಸವಾರರು, ಬೈಕ್ ಸವಾರರನ್ನು ರಕ್ಷಿಸಲು ಪ್ರಯಾಣಿಕರು ಬಸ್ ಪಲ್ಟಿ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಬಾಣತಿಹಾಳ್ ಬಳಿ ನಡೆದಿದೆ. ಬಸ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಬಸ್ ನ ಮಧ್ಯೆ ಸಿಲುಕಿದರು. ಪ್ರಯಾಣಿಕರನ್ನ ಕೆಳಗಿಳಿಸಿ ಬಸ್ ಪಲ್ಟಿ ಮಾಡಿ ಬೈಕ್ ಸವಾರರನ್ನ ಸ್ಥಳೀಯರು ಹೊರತೆಗೆದರು. ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಬಾಣತಿಹಾಳ್ ಬಳಿ ಘಟನೆ ನಡೆದಿದ್ದು, ಗಾಯಾಳು‌ ಇಬ್ಬರು ಬೈಕ್ ಸವಾರರನ್ನ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ ಶಹಾಪುರದಿಂದ ಸೊಲ್ಲಾಪುರಕ್ಕೆ ಹೋಗುತ್ತಿತ್ತು. ಈ ವೇಳೆ ಬಾಣತಿಹಾಳ್ ಗ್ರಾಮದ ರಸ್ತೆಯಿಂದ ಮುಖ್ಯ ರಸ್ತೆಗೆ ಬೈಕ್ ಸವಾರರು ಬರುತ್ತಿದ್ದರು. ಈ ವೇಳೆ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಬಸ್ ಮಧ್ಯೆ ಬೈಕ್ ಸವಾರರು ಸಿಲುಕಿದ್ದಾರೆ. ರಕ್ಷಣ ಎಚ್ಚೆತ್ತ ಸ್ಥಳೀಯರು ಕ್ರೇನ್ ತರಿಸಿ ಬಸ್ ಪಲ್ಟಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ  ಸಾರಿಗೆ ಬಸ್ ಆಗಿದ್ದು, ಗೋಗಿ ಪೋಲಿಸ್…

Read More

ವಿಜಯಪುರ: ಶಾಲಾ ಕಾಲೇಜಗಳಿಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆಗಾಗಿ ಆಗ್ರಹಿಸಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ನಡೆಸಿದರು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಿರಸ್ಯಾಳ ಗ್ರಾಮದ ಬಳಿ ಬಸ್ ಗಳ ತಡೆದು ಪ್ರತಿಭಟಿಸಿದ ಕಿರಶ್ಯಾಳ ,ಹೆಬ್ಬಾಳ ,ಬಿದ್ನಾಳ, ಹಾಲ್ಯಾಳ ಗ್ರಾಮಗಳ ವಿದ್ಯಾರ್ಥಿಗಳು. ಬಸವನಬಾಗೇವಾಡಿ ಪಟ್ಟಣದಿಂದ ನಿಡಗುಂದಿ ಪಟ್ಟಣಕ್ಕೆ ತೆರಳೋ ಮಾರ್ಗದಲ್ಲಿ ಬಸ್ ಗಳ ಸಮಸ್ಯೆಯಿದ್ದು, ಇದರಿಂದ ವಿದ್ಯಾರ್ಥಿಗಳಿಂದ ಬಸ್ ತಡೆದು ಹೋರಾಟ ಮಾಡಬೇಕಾಯಿತು. ಆದ್ರೆ ವಿದ್ಯಾರ್ಥಿಗಳ ಬಸ್ ತಡೆದು ಪ್ರತಿಭಟಿಸಿದೂ ಕೇರ್ ಮಾಡದ ಬಸ್ ಗಳ ಚಾಲಕರು ಹಾಗೂ ನಿರ್ವಾಹಕರು ಬಸ್ ಗಳನ್ನು ಬಿಟ್ಟು ಜಮೀನಿನಲ್ಲಿ ಕುಳಿತ್ತಿದ್ದರು. ಇನ್ನೂ ಸ್ಥಳಕ್ಕೆ ಆಗಮಿಸಿದ 112 ಪೊಲೀಸರು, ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿ ಸೂಕ್ತ ಬಸ್ ಗಳನ್ನು ಬಿಡಿಸಲಾಗುತ್ತದೆ ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.

Read More

ಬೆಂಗಳೂರು: ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಪಟ್ಟು ಹಿಡಿದಿದೆ. ಇನ್ನೊಂದೆಡೆ, ಮೊದಲು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಪ್ರಾರಂಭಿಸೋಣ. ನಿಯಮ ಬಿಟ್ಟು ಚರ್ಚೆಗೆ ಕೊಟ್ಟರೆ ಸಂಪ್ರದಾಯ ಮುರಿದಂತಾಗುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್​ ಸಲಹೆ ನೀಡಿದರು. ರಾಜ್ಯಪಾಲರ ಭಾಷಣದಲ್ಲೇ ಎಲ್ಲಾ ಅಂಶಗಳು ಇವೆ. ಚರ್ಚೆಗೆ ಅವಕಾಶ ನೀಡದಿದ್ದರೆ ಸರಿಯಾದ ಸಂದೇಶ ರವಾನೆ ಆಗಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದರು. ಇದಕ್ಕೆ ಎದ್ದುನಿಂತು ಉತ್ತರಿಸಿದ ಬಸವರಾಜ ಬೊಮ್ಮಾಯಿ, ಅಜೆಂಡಾ ಪ್ರಕಾರವೇ ಎಲ್ಲವೂ ನಡೆದಿದೆ ಎಂದರು. ಇದಕ್ಕೆ ಉತ್ತರಿಸಿದ ಸ್ಪೀಕರ್, ನಾನು ವಿಪಕ್ಷ ಮಿತ್ರ, ಆದರೆ ನಿಯಮ ಮೀರಿ ಹೋಗುವುದು ಬೇಡ. ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಿದಂತಾಗುತ್ತೆ ಎಂದರು.

Read More

ಬೆಂಗಳೂರಿನ ಏಕೈಕ ಸಂಜೆ ಇಂಜಿನಿಯರಿಂಗ್ ಕಾಲೇಜು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಆದೇಶದ ಮೇರೆಗೆ ಬಂದ್ ಮಾಡಲಾಗುತ್ತಿದೆ. ಬಸವನಗುಡಿಯಲ್ಲಿರುವ ಬಿಎಂಎಸ್ ಈವ್ನಿಂಗ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮುಂಚ್ಚುವ ಹಂತಕ್ಕೆ ತಲುಪಿದೆ. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಎಸ್ ಮುರಳೀಧರ್ ಅವರು ಮಾತನಾಡಿ, ಸಂಜೆ ಇಂಜಿನಿಯರಿಂಗ್ ಕಾಲೇಜು ಮುಂದುವರಿಕೆಗೆ ಅನುಮತಿ ನೀಡುವಂತೆ ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಎಐಸಿಟಿಇ ಆದೇಶ ಆಧರಿಸಿ ಸರ್ಕಾರ ಅನುಮತಿ ನಿರಾಕರಿಸಿದೆ. ಹೀಗಾಗಿ ಈ ವರ್ಷದಿಂದ ಸಂಜೆ ಇಂಜಿನಿಯರಿಂಗ್ ಕಾಲೇಜನ್ನು ಶಾಶ್ವತವಾಗಿ ಮುಚ್ಚಿದ್ದೇವೆ ಎಂದರು. 1970 ರ ದಶಕದಲ್ಲಿ ಸಂಜೆ ಇಂಜಿನಿಯರಿಂಗ್ ಕಾಲೇಜುಗಳ ಪರಿಕಲ್ಪನೆಯನ್ನು ಕಾರ್ಮಿಕ ವರ್ಗಕ್ಕೆ ಉನ್ನತ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಪರಿಚಯಿಸಲಾಯಿತು. ಮತ್ತು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ) ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಉದ್ಯೋಗಕ್ಕೆ ಸೇರಿದ ಬಹಳಷ್ಟು ಡಿಪ್ಲೊಮಾ ಪದವೀಧರ ವಿದ್ಯಾರ್ಥಿಗಳು ತಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯಲು ಉನ್ನತ ಶಿಕ್ಷಣವನ್ನು ಈ ಈವ್ನಿಂಗ್ ಕಾಲೇಜ್​ಗಳಲ್ಲಿ ಪಡೆದಿದ್ದಾರೆ. ನಾವು ಸಹ…

Read More

ಬೆಂಗಳೂರು: ವಿಪಕ್ಷ ನಾಯಕರ ಆಯ್ಕೆ ವಿಳಂಬ ಆಗಿರುವುದನ್ನು ಒಪ್ಪಿಕೊಳ್ಳುವೆ. ಬಹುಶಃ ಇವತ್ತು ವಿಪಕ್ಷ ನಾಯಕರ ಆಯ್ಕೆ ಆಗಬಹುದು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಹೈಕಮಾಂಡ್ ವೀಕ್ಷಕರಿಗೆ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಸಮರ್ಥ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿ ಎಂದಿದ್ದೇವೆ. ವೀಕ್ಷಕರ ವರದಿ ಆಧರಿಸಿ ವಿಪಕ್ಷ ನಾಯಕರ ಆಯ್ಕೆ ಆಗುತ್ತದೆ. ಪ್ರತ್ಯೇಕವಾಗಿ ಶಾಸಕರ ಅಭಿಪ್ರಾಯ ಕೇಳುವ ಅವಶ್ಯಕತೆ ಇಲ್ಲ. ಮೊನ್ನೆ ಅರುಣ್ ಸಿಂಗ್ ಶಾಸಕರ ಅಭಿಪ್ರಾಯ ಪಡೆದಿದ್ದಾರೆ ಎಂದರು.

Read More

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ತಾವು ಮಾಡಿದ್ದ ಲಂಚದ ಆರೋಪಕ್ಕೆ ಸೂಕ್ತವಾದ ದಾಖಲೆಯನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಮಾಡಿರುವ ಆರೋಪಗಳಿಗೆ ಪೂರಕವಾಗಿ ದಾಖಲೆಗಳು ನನ್ನ ಬಳಿ ಇವೆ. ಅವು ಸಚಿವರೊಬ್ಬರ ಲಂಚಗುಳಿತನಕ್ಕೆ ಸಂಬಂಧಿಸಿದ ದಾಖಲೆಗಳು. ನಾನು ಆ ದಾಖಲೆಗಳನ್ನು ಬಿಡುಗಡೆ ಮಾಡಲು ಸಿದ್ಧ. ಆದರೆ, ಆ ದಾಖಲೆಗಳನ್ನು ನೋಡಿದ ನಂತರ ಆ ಸಚಿವರನ್ನು ಸಂಪುಟದಿಂದ ವಜಾ ಮಾಡುವಿರಾ’’ ಎಂದು ಅವರು ಪ್ರತಿಸವಾಲು ಹಾಕಿದ್ದಾರೆ. ನನ್ನ ಬಳಿಯಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ನಿಮ್ಮ (ಕಾಂಗ್ರೆಸ್) ಸರ್ಕಾರ ಇರುತ್ತಾ ಎಂಬುದನ್ನು ಯೋಚನೆ ಮಾಡಿ. ಇನ್ನೂ ಹೊಸದಾಗಿ ಸರ್ಕಾರ ರಚಿಸಿದ್ದಾರೆ, ಸ್ವಲ್ಪ ದಿನ ಈ ಸರ್ಕಾರ ಕೆಲಸ ಮಾಡಲಿ ಎಂಬ ಉದ್ದೇಶದಿಂದ ನಾನು ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ’’ ಎಂದೂ ಸಹ ಅವರು ಗುಡುಗಿದ್ದಾರೆ

Read More