ಬೆಂಗಳೂರು: ಮೊದಲ ಗಂಡನ ಬಿಟ್ಟು ಎರಡನೇ ಮದುವೆ ಆಗಿದ್ದ ಗೃಹಿಣಿ ಪತಿ ಹಾಗೂ ಆತನ ಗರ್ಲ್’ಫ್ರೆಂಡ್ ವಿರುದ್ದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ ನೋಟ್ ಬರೆದಿಟ್ಟು ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಪವಿತ್ರಾ ನೇಣಿಗೆ ಶರಣಾಗಿದ್ದಾಳೆ. ಗಂಡನ ಜೊತೆಗಿನ ಕಿರಿಕ್ ವಿಡಿಯೋ ವನ್ನೂ ಸ್ಟೇಟಸ್ ನಲ್ಲಿ ಹಾಕಿರೋ ಪವಿತ್ರಾ ಚೇತನ್ ಮದುವೆಯಾಗಿದ್ಳು. ಪವಿತ್ರಾ ಮತ್ತು ಚೇತನ್ ವಿಶ್ವೇಶ್ವರಯ್ಯ ಬಡವಾಣೆಯಲ್ಲಿ ವಾಸವಿದ್ದು, ಗಂಡ ಬೇರೆ ಹೆಣ್ಣಿನ ಸಹವಾಸ ಮಾಡಿರೋದು ಗೊತ್ತಾದಾಗ ಈ ಬಗ್ಗೆ ಪ್ರಶ್ನಿಸಿದ್ದ ಪವಿತ್ರಾಗೆ ನಾನು ಗಂಡಸು ಏನ್ ಬೇಕಾದ್ರು ಮಾಡ್ತಿನಿ ಅಂತ ಉತ್ತರ ಕೊಟ್ಟು ಹಲ್ಲೆ ನಡೆಸಿದ್ದ. ಇದ್ರಿಂದ ಬೇಸತ್ತಿದ್ದ ಪವಿತ್ರ ಜುಲೈ 02 ರ ಬೆಳಗಿನ ಜಾವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸುಮುಖ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕನಾಗಿರೋ ಚೇತನ್ ಗೌಡ ಕಂಪನಿಯಲ್ಲಿ ಮೃತ ಪವಿತ್ರ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ಳು. ಇತ್ತೀಚೆಗೆ ಮತ್ತೊರ್ವ…
Author: Prajatv Kannada
ಬೆಂಗಳೂರು: ನಿನ್ನೆಯಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಿದ್ದು, ಇಂದು ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಘೋಷಣೆಗಳ ಬಗ್ಗೆ ಪ್ರಸ್ತಾಪ ಆಗಲಿದೆ. ಈ ವೇಳೆ ಸದನದಲ್ಲಿ ಗ್ಯಾರಂಟಿ ಘೋಷಣೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟಿಸುವ ಸಾಧ್ಯತೆಯಿದೆ. ಸದನದ ಒಳಗೆ ಮತ್ತು ಹೊರಗೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದ್ದು, ಏಕಕಾಲದಲ್ಲಿ 2 ಕಡೆ ಪ್ರತಿಭಟನೆ ಮೂಲಕ ಒತ್ತಡ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.
ಬೆಂಗಳೂರು: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿರೋಧ ಪಕ್ಷ ನಾಯಕನಿಲ್ದೇ ಜಂಟಿ ಅಧಿವೇಶನ ಆರಂಭವಾಗಿದೆ.ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡುವಲ್ಲಿ ಬಿಜೆಪಿ ಸೋತಿದೆ.ಬಿಜೆಪಿಯಲ್ಲಿರುವ ಗುಂಪುಗಾರಿಕೆ ಇರೋದು ಇದ್ರಿಂದ ಗೊತ್ತಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಇಂದು ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಆರಂಭಗೊಂಡಿದೆ.. ಮೊದಲ ದಿನ ರಾಜ್ಯಪಾಲರು ಎರಡು ಸದನ ಉದ್ದೇಶಿಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಭಾಷಣ ಮಾಡಿದ್ರು..ಆದ್ರೆ ಅದಕ್ಕೂ ವಿಶೇಷ ಅಂದರೆ ಬಿಜೆಪಿ ಪಕ್ಷದ್ದು. ಯಾವುದೇ ಅಧಿಕೃತ ವಿಪಕ್ಷನಾಯಕನಿಲ್ಲದೆ ಬಿಜೆಪಿ ಶಾಸಕರು ಅಧಿವೇಶನಕ್ಕೆ ಆಗಮಿಸಿ ರಾಜ್ಯಪಾಲರ ಭಾಷಣ ಕೇಳಿದ್ರು.ಅಧಿವೇಶನಕ್ಕೂ ಮುನ್ನ ವಿಪಕ್ಷ ನಾಯಕನನ್ನ ಆಯ್ಕೆ ಮಾಡೋದು ವಾಡಿಕೆ.ಆದ್ರೆ,ಅಧಿವೇಶನ ಆರಂಭವಾದ್ರೂ ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಲು ಬಿಜೆಪಿ ಆಸಕ್ತಿ ತೋರಿಸಿಲ್ಲ.ಇದ್ರಿಂದ ಬಿಜೆಪಿಯಲ್ಲಿರುವ ಆಂತರಿಕ ಕಚ್ಚಾಟ ಮತ್ತೆ ಬಯಲಾಗಿದೆ. ಇನ್ನು ವೀಕ್ಷಕರ ಸಮ್ಮುಖದಲ್ಲಿ ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕ ಆಯ್ಕೆ ಮಾಡಲು ಬಿಜೆಪಿ ಮುಂದಾಗಿದೆ.ನಾಳೆ ಬೆಳಿಗ್ಗೆ ಶಾಸಕರ ಅಭಿಪ್ರಾಯ ಪಡೆದ ಬಳಿಕ,ವಿಪಕ್ಷ ನಾಯಕನನ್ನ ಆಯ್ಕೆ ಮಾಡಲು ಬಿಜೆಪಿ…
ಬೆಂಗಳೂರು: ಕಳೆದ ಒಂದು ವಾರದಿಂದ ವರ್ಗಾವಣೆ ದಂಧೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿಸಿದ ಬಾಂಬ್ ಸಾಕಷ್ಟು ಸದ್ದು ಮಾಡ್ತಿದೆ. ಇದೇ ವಿಚಾರವಾಗಿ ಹೆಚ್ ಡಿಕೆ ಮತ್ತಷ್ಟು ಸ್ಪೋಟಕ ಮಾಹಿತಿ ಹೊರಹಾಕಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೇ ಬಿಜೆಪಿ ನಾಯಕರು ಈ ಆರೋಪಕ್ಕೆ ಮತ್ತಷ್ಟು ತುಪ್ಪಸುರಿದಿದ್ದು ಸದನದಲ್ಲೂ ಈ ವಿಚಾರ ಪ್ರತಿಧ್ವನಿಸುವ ಸಾಧ್ಯತೆಯಿದೆ. ಹೌದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವರ್ಗಾವಣೆ ದಂದೆ ಆರೋಪವನ್ನು ಕಳೆದೊಂದು ವಾರದಿಂದ ಮಾಡ್ತಾ ಬಂದಿದ್ದಾರೆ. ನಿನ್ನೆ ವೈಎಸ್ ಟಿ ಕೆಲೆಕ್ಷನೆ ಆಗುತ್ತಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ ಇಂದು ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಯ ಸಿಂಡಿಕೇಟ್ ಇದೆ. ಸಬ್‌ರಿಜಿಸ್ಟ್ರಾರ್ ಸಿಂಡಿಕೇಟ್ ಇದೆ,ಈಗ ಕಮರ್ಷಿಯಲ್ ಟ್ಯಾಕ್ಸ್ ಸಿಂಡಿಕೇಟ್ ಶುರುವಾಗಿದೆ, ವರ್ಗಾವಣೆ ಸಿಂಡಿಕೇಟ್ ಶುರುವಾಗಿದೆ, ಆಯಾ ಇಲಾಖೆಯಲ್ಲಿ ಕೆಲವು ಸಿಂಡಿಕೇಟ್ ಗಳು ಕೆಲಸ ಮಾಡ್ತಾ ಇವೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ .ಈ ಸಿಂಡಿಕೇಟ್ ಗಳು ಯಾರು ಯಾರು ವರ್ಗಾವಣೆ ಆಗಬೇಕು ಅಂತಾ ಲಿಸ್ಟ್ ಕೊಡ್ತಾರೆ…
ಬೆಂಗಳೂರು ಗ್ರಾಮಾಂತರ: ಪಿಎಸ್ಐ ಪತ್ನಿ ಶಿಲ್ಪಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಇಂದು ಬೇಗೂರು ಪೊಲೀಸ್ ಠಾಣೆ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು ಅಲ್ಲದೆ ಪೋಲಿಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವರಾಗಿದ್ದಾರೆ.. ಹೌದು ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಟೇಲ್ ಲೇಔಟ್ ನಲ್ಲಿ ಪಿಎಸ್ಐ ರಮೇಶ್ ಪತ್ನಿ ಶಿಲ್ಪ ಜೂನ್ 3ನೇ ತಾರೀಕಿನಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ಕುಟುಂಬಸ್ಥರು ಇದೊಂದು ಮರ್ಯಾದೆ ಅತ್ಯೆ ಅಂತ ಆರೋಪ ಸಹ ಮಾಡಿದ್ರು ಇನ್ನು ಬಾಗೇಪಲ್ಲಿ ಮೂಲದ ರಮೇಶ್ ಚಿಂತಾಮಣಿ ಮೂಲದ ಶಿಲ್ಪವನ್ನು ಕಾಲೇಜಿನಲ್ಲಿ ಓದುವಾಗ ಪ್ರೀತಿಸಿದ್ದು ಅದಾದ ಬಳಿಕ ಬೆಂಗಳೂರಿಗೆ ಶಿಲ್ಪಾ ಬಿ ಎಡ್ ಮಾಡುವಾಗ ರಮೇಶ್ ಪ್ರಬೋಷನರಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕೆಲಸ ನಿರ್ವಹಿಸುವಾಗ ಕುಟುಂಬದ ವಿರೋಧದ ನಡುವೆಯೂ ಪೊಲೀಸರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆ ಸಹ ಮಾಡಿಕೊಟ್ಟಿದ್ದರು ಅದೀಗ ಜೂನ್ 3 ನೇ ತಾರೀಕು ಅನುಮಾನ್ಪದ ರೀತಿಯಲ್ಲಿ ಸಾವನಪ್ಪಿದ್ದರು. ಯುವತಿಯ ಪೋಷಕರು…
ಬೆಂಗಳೂರು: ನಿನ್ನೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ.(Legislature Session) ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದು. ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ(Siddaramaiah) ಬಜೆಟ್ ಮಂಡಿಸಲಿದ್ದಾರೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದ್ದು ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ(Congress Guarantees) ಅನುಷ್ಠಾನ ವಿಚಾರ, ಬಿಜೆಪಿ ಅವಧಿಯ ವಿವಾದಿತ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸದನದಲ್ಲಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿದ್ದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ.
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಿಂದ ಸಿಂಡಿಕೇಟ್ ವರ್ಗಾವಣೆ (Syndicate Transfor) ದಂಧೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಮೇಲೆ ವೈಎಸ್‌ಟಿ ಟ್ಯಾಕ್ಸ್ (YST Tax) ಸರ್ಕಾರ ಅಂತ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ವಿಧಾನಸೌಧದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ನಾನು ಸಿಎಂ ಆಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ ಇಲಾಖೆ ಮತ್ತು ಸಬ್ ರಿಜಿಸ್ಟರ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ವ್ಯವಸ್ಥೆ ಇತ್ತು. ಆದರೆ ನಾನು ಇದನ್ನು ಮಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಇದನ್ನು ಮಾಡುತ್ತಿದ್ದರು. ನಾನು ಕಣ್ಣು, ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದರೆ ಕಾಂಗ್ರೆಸ್ ಸಚಿವರೇ ಇದೆಲ್ಲವನ್ನೂ ಮಾಡುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಅವಧಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ದಂಧೆ ನಡೆಯುತ್ತಿದೆ. ವರ್ಗಾವಣೆ ಮಾಡಲು ಸಿಂಡಿಕೇಟ್ ಮಾಡಿಕೊಂಡು ವರ್ಗಾವಣೆ ಮಾಡಿ ಹಣ ಮಾಡುತ್ತಿದ್ದಾರೆ ಅಂತ ಸರ್ಕಾರದ ವಿರುದ್ಧ…
ಬೆಂಗಳೂರು ;- ಜುಲೈ 03 ರಂದು ಬೆಂಗಳೂರಿಗೆ ಆಗಮಿಸಿ, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿಲಾಗಿದ್ದ ಬುಡಕಟ್ಟು ಸಮುದಾಯದ ಜನತೆಯೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಇಂದು ಬೆಳಿಗ್ಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೈದರಾಬಾದ್ ಗೆ ಪ್ರಯಾಣಿಸಿದರು. ಗೌರವಾನ್ವಿತ ರಾಷ್ಟ್ರಪತಿಗಳನ್ನು ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಬೀಳ್ಕೊಟ್ಟರು. ಈ ಸಮಯದಲ್ಲಿ ಇಂಧನ ಇಲಾಖೆಯ ಸಚಿವರಾದ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಆಮ್ಲನ್ ಆದಿತ್ಯ ಬಿಸ್ವಾಸ್, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ. ದಯಾನಂದ್, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ಹಿನಿತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್.ಡಿ.ಕುಮಾರಸ್ವಾಮಿ, ಉಪ ನಾಯಕಿಯಾಗಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಆಯ್ಕೆಯಾಗಿದ್ದಾರೆ. ಈ ಸಂಬಂಧ ಜೆಡಿಎಸ್ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರಿದ್ದಾರೆ.
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ನಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಜಾಪುರ ಬ್ಯಾರೇಜ್‌ನಿಂದ 4200 ಕ್ಯೂಸೆಕ್ ನೀರನ್ನು ಸೋಮವಾರ ಕೃಷ್ಣಾ ನದಿಗೆ ರಿಲೀಸ್ ಮಾಡಲಾಗಿದೆ. ಸದ್ಯ ಅಥಣಿ ತಾಲೂಕಿನ ದರೂರ ಸೇತುವೆವರೆಗೂ ನೀರು ತಲುಪಿದೆ. ಇಷ್ಟು ದಿನ ನೀರಿಲ್ಲದೇ ಕೃಷ್ಣಾ ನದಿ ಬರಡು ಭೂಮಿಯಂತಾಗಿತ್ತು. ನದಿಯಲ್ಲಿ ನೀರಿಲ್ಲದೆ ಜಾನುವಾರು, ಕೃಷಿಗೆ ಸಮಸ್ಯೆಯಾಗಿತ್ತು. ರಬಕವಿ ಬನಹಟ್ಟಿ ರಾಂಪುರ ಹೊಸೂರ್ ಹಾಗೂ ರೈತರಲ್ಲಿ ಈ ನೀರು ಹರಿದು ಬಂದಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. AIN ಪ್ರತಿನಿಧಿಯಿಂದ ಪ್ರತ್ಯಕ್ಷ ವರದಿ ಪ್ರಕಾಶ ಕುಂಬಾರ